Tag: youth

  • ಟೇಕ್ವಾಂಡೋದಲ್ಲಿ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದ ಬೆಂಗ್ಳೂರಿನ ಗೌತಮ್

    ಟೇಕ್ವಾಂಡೋದಲ್ಲಿ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದ ಬೆಂಗ್ಳೂರಿನ ಗೌತಮ್

    ಬೆಂಗಳೂರು: ಭೂತಾನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಬೆಂಗಳೂರಿನ ಗೌತಮ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

    ಉತ್ತರಹಳ್ಳಿಯ ನಿವಾಸಿಯಾಗಿರುವ ಗೌತಮ್ ಜನವರಿಯಲ್ಲಿ ನಡೆದ ಟೇಕ್ವಾಂಡೋ ಚಾಂಪಿಯನ್‍ಶಿಪ್ ನಲ್ಲಿ 86 ಕೆಜಿ ವಿಭಾಗದಲ್ಲಿ ಬಾಂಗ್ಲಾದೇಶದ ಸ್ಪರ್ಧಿ ವಿರುದ್ಧ ಗೆದ್ದು ದೇಶಕ್ಕೆ ಚಿನ್ನದ ಪದಕ ಪಡೆದ್ದಾರೆ. ವಿಶೇಷ ಏನೆಂದರೆ ಭಾಗವಹಿಸಿದ ಮೊದಲ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಗೌತಮ್ ಚಿಕ್ಕ ವಯಸ್ಸಿನಿಂದಲೇ ಟೇಕ್ವಾಂಡೋ ಗೇಮ್‍ನಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು. ತಾಯಿ ತುಳಸಿ ಅವರ ಸಹಕಾರದಿಂದ ಬಾಲ್ಯದಿಂದಲೇ ಟೇಕ್ವಾಂಡೋ ಆಟವನ್ನು ಅಭ್ಯಾಸ ಮಾಡಿಕೊಂಡು ಬಂದ ಗೌತಮ್ ಈಗ ತಾವೇ ಮಾಸ್ಟರ್ ಆಗಿದ್ದಾರೆ.

    ಖಾಸಗಿ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಓದುತ್ತಿರುವ ಗೌತಮ್ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಟೇಕ್ವಾಂಡೋ ಟ್ರೈನಿಂಗ್ ನೀಡುತ್ತಿದ್ದಾರೆ. ಮಗನ ಸಾಧನೆ ಬಗ್ಗೆ ಸಂತಸಗೊಂಡಿರುವ ತಾಯಿ ತುಳಸಿ ಅವರು ಮಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಎಂದು ಹರಿಸಿದ್ದಾರೆ.

    ಟೇಕ್ವಾಂಡೋ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆಯಾಗಿದ್ದು, ಕೇವಲ ಕಾಲಿನ ಕಿಕ್‍ನಲ್ಲೇ ಈ ಆಟ ನಡೆಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಳತಿ ಜೊತೆ ಜಗಳವಾಡಿ ಆಟೋದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಗೆಳತಿ ಜೊತೆ ಜಗಳವಾಡಿ ಆಟೋದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

    ನವದೆಹಲಿ: ಯುವಕನೊಬ್ಬ ತನ್ನ ಗೆಳತಿ ಜೊತೆ ಜಗಳವಾಡಿ ಆಟೋದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನವದೆಹಲಿಯಲ್ಲಿ ನಡೆದಿದೆ.

    ಶಿವಂ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಆಟೋದಲ್ಲಿ ಶಿವಂ ಜೊತೆ ಆತನ ಸಹೋದರ ಅರ್ಜುನ್ ಹಾಗೂ ಸಹ ಪ್ರಯಾಣಿಕ ಕೂಡ ಇದ್ದರು. ಹಾಗಾಗಿ ಶಿವಂ ಆತ್ಮಹತ್ಯೆಗೆ ಯತ್ನಿಸಿದ್ದಾಗ ಮೂವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಂ ದೇಹ ಶೇ. 70ರಷ್ಟು ಸುಟ್ಟು ಹೋಗಿದ್ದು, ಆತನ ಸಹೋದರ ಅರ್ಜುನ್ ದೇಹ ಶೇ.20ರಷ್ಟು ಸುಟ್ಟು ಹೋಗಿದೆ. ಇವರ ಜೊತೆ ಇದ್ದ ಸಹ-ಪ್ರಯಾಣಿಕ ಭಾಗವಾನ್ ಸಿಂಗ್(60) ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

    ಶಿವಂ ಗಜೀಯಾಬಾದ್ ನಿವಾಸಿಯಾಗಿದ್ದು, ತನ್ನ ಸಹೋದರ ಅರ್ಜುನ್ ಜೊತೆ ಆಟೋದಲ್ಲಿ ಲೋನಿಗೆ ತೆರಳುತ್ತಿದ್ದನು. ಈ ವೇಳೆ ಶಿವಂ ಆಕೆಯ ಗೆಳತಿ ಜೊತೆ ಮೊಬೈಲಿನಲ್ಲಿ ಮಾತನಾಡುತ್ತಿದ್ದನು. ಬಳಿಕ ಅವರಿಬ್ಬರ ನಡುವೆ ಫೋನಿನಲ್ಲೇ ವಾದ ನಡೆದಿದೆ. ಇದರಿಂದ ಬೇಸರಗೊಂಡ ಶಿವಂ ತನ್ನ ಜಾಕೆಟ್‍ನಲ್ಲಿ ಪೆಟ್ರೋಲ್ ಬಾಟಲ್ ತೆಗೆದು ಮೈಮೇಲೆ ಸುರಿದುಕೊಂಡು ಲೈಟರ್ ನಿಂದ ಬೆಂಕಿ ಹಚ್ಚಿಕೊಂಡು ಆತ್ನಹತ್ಯೆಗೆ ಯತ್ನಿಸಿದ್ದಾನೆ.

    ಶಿವಂ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ತಕ್ಷಣ ಚಾಲಕ ಆಟೋ ನಿಲ್ಲಿಸಿ ಸ್ಥಳೀಯರ ಸಹಾಯ ಪಡೆದಿದ್ದಾರೆ. ಬಳಿಕ ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಿವಂ ವಿರುದ್ಧ ಆತ್ಮಹತ್ಯೆಗೆ ಯತ್ನ ದೂರು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಶಿವಂ ತನ್ನೊಂದಿಗೆ ಪೆಟ್ರೋಲ್ ಬಾಟಲ್ ಏಕೆ ಇಟ್ಟುಕೊಂಡಿದ್ದನೋ ಗೊತ್ತಿಲ್ಲ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ. ಶಿವಂ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು ಆತನ ಹೇಳಿಕೆ ಪಡೆಯಲು ಆಗಲಿಲ್ಲ ಎಂದು ಡಿಸಿಪಿ ಅತುಲ್ ಠಾಕೂರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್‍ಜಿ ಆಡಲು ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ಯುವಕ ಆತ್ಮಹತ್ಯೆ

    ಪಬ್‍ಜಿ ಆಡಲು ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ಯುವಕ ಆತ್ಮಹತ್ಯೆ

    ಮುಂಬೈ: ಯುವಕನೊಬ್ಬ ಪಬ್‍ಜಿ ಆಡಲು ಪೋಷಕರು ಹೊಸ ಮೊಬೈಲ್ ಖರೀದಿಸಿಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿರುವ ನೆಹರು ನಗರದಲ್ಲಿ ನಡೆದಿದೆ.

    ಯುವಕ ಪಬ್‍ಜಿ ಗೇಮ್ ಆಡಲು 37 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಕೊಡಿಸಿ ಎಂದು ಪೋಷಕರ ಬಳಿ ಕೇಳಿಕೊಂಡಿದ್ದನು. ಆದರೆ ಪೋಷಕರು ಇದಕ್ಕೆ ನಿರಾಕರಿಸಿ 20,000 ರೂ.ಕ್ಕಿಂತ ಹೆಚ್ಚು ವೆಚ್ಚದ ಮೊಬೈಲ್ ಕೊಡಿಸುವುದಿಲ್ಲ ಎಂದು ಹೇಳಿದ್ದಾರೆ.

    ಪೋಷಕರ ಮಾತನ್ನು ಕೇಳದೇ ಯುವಕ ಅವರ ಬಳಿ ವಾದ-ವಿವಾದ ಮಾಡಿದ್ದಾನೆ. ಆದರೆ ಪೋಷಕರು ಒಪ್ಪದೇ ಇರುವ ಕಾರಣ ಯುವಕ ಮನನೊಂದು ಹಗ್ಗ ತೆಗೆದುಕೊಂಡು ಹೋಗಿ ಅಡುಗೆ ಮನೆಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಘಟನೆಯನ್ನು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ಕೂಡ ನಡೆಸುತ್ತಿದ್ದಾರೆ.

    ಏನಿದು ಪಬ್ ಜಿ?
    ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂದು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿ ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯಿಂದ ಹುಚ್ಚು ಕೆಲಸ – ಪ್ರಾಣ ಕಳೆದುಕೊಂಡ ಯುವತಿಯ ತಂದೆ

    ಪ್ರೀತಿ ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯಿಂದ ಹುಚ್ಚು ಕೆಲಸ – ಪ್ರಾಣ ಕಳೆದುಕೊಂಡ ಯುವತಿಯ ತಂದೆ

    ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹಾಗೂ ಆಕೆಯ ಭಾವಿ ಪತಿಗೆ ಕಳುಹಿಸಿ ಮದುವೆಯನ್ನು ನಿಲ್ಲಿಸಿದ ಘಟನೆ ನಗರದಲ್ಲಿ ನಡೆದಿದೆ.

    ತಮೀಮ್ ಹಕ್(23) ಬಂಧಿತ ಆರೋಪಿ. ತಮೀಮ್ ಹಕ್ ಯುವತಿಯೊಬ್ಬಳನ್ನು ಪ್ರೀತಿಸು ಎಂದು ಪದೇ ಪದೇ ಪೀಡಿಸುತ್ತಿದ್ದನು. ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದರೂ ಕೂಡ ತಮೀಮ್ ಯುವತಿಗೆ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದನು.

    ಯುವತಿ ನನಗೆ ನಿಶ್ಚಿತಾರ್ಥ ಆಗಿದೆ. ನನ್ನಿಂದ ದೂರವಿರು ಎಂದು ಯುವಕನಿಗೆ ಎಚ್ಚರಿಕೆ ನೀಡಿದ್ದಳು. ಇದರಿಂದ ಕೋಪಗೊಂಡ ತಮೀಮ್ ಯುವತಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದಲ್ಲದೇ ಯುವತಿಯ ಭಾವಿ ಪತಿಗೂ ಆ ಫೋಟೋಗಳನ್ನು ಕಳುಹಿಸಿದ್ದಾನೆ. ಈ ಫೋಟೋ ನೋಡಿದ ಆಕೆಯ ಭಾವಿ ಪತಿ ಈ ಮದುವೆಯನ್ನೇ ಮುರಿದಿದ್ದಾನೆ. ಇದರಿಂದ ಯುವತಿಯ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಈ ಬಗ್ಗೆ ಯುವತಿಯ ಸಂಬಂಧಿ ಸೆಂಟ್ರಲ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಟೀಂ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 506, 507 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಸ್ಟೋರೆಂಟ್‍ನಲ್ಲಿ ಗೆಳೆಯನೊಂದಿಗೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅಣ್ಣ!

    ರೆಸ್ಟೋರೆಂಟ್‍ನಲ್ಲಿ ಗೆಳೆಯನೊಂದಿಗೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅಣ್ಣ!

    – ನೋಡ ನೋಡ್ತಿದ್ದಂತೆ ಹೈವೇವರೆಗೂ ಬಂತು ಹಂಗಾಮ
    – 10 ನಿಮಿಷದಲ್ಲಿ ಬಂದ ಪೊಲೀಸರಿಗೂ ಏನು ಸಿಗಲಿಲ್ಲ

    ಚಂಡೀಗಢ: ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ರೆಸ್ಟೋರೆಂಟ್‍ನಲ್ಲಿ ಆರಾಮವಾಗಿ ಫಾಸ್ಟ್ ಫುಡ್ ಸೇವಿಸುತ್ತಿದ್ದಳು. ಈ ವೇಳೆ ಬೈಕಿನಲ್ಲಿ ಬಂದ ಯುವಕರನ್ನು ನೋಡಿದ ಯುವತಿ ಒಂದು ಕ್ಷಣ ಆಶ್ಚರ್ಯಚಕಿತಳಾಗಿದ್ದಳು.

    ಯುವತಿಯ ಸೋದರನೇ ಬೈಕ್‍ನಲ್ಲಿ ಬಂದ ಯುವಕ. ಹುಡುಗನೊಂದಿಗೆ ತನ್ನ ಸೋದರಿಯನ್ನು ನೋಡಿದ ಸೋದರ, ಅಲ್ಲಿಯೇ ಆಕೆಯೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಹರಿಯಾಣದ ಫತ್ಹೇಬಾದ್ ನಗರದ ಮಾರ್ಲಾ ಕಾಲೋನಿಯ ಜಿಟಿ ರಸ್ತೆಯಲ್ಲಿರುವ ರೆಸ್ಟೋರೆಂಟ್ ನಲ್ಲಿ ನಡೆದಿದೆ. ಗೆಳತಿಯ ಪೋಷಕರನ್ನು ನೋಡುತ್ತಲೇ ಆಕೆಯ ಜೊತೆಗಿದ್ದ ಯುವಕ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.

    ಇತ್ತ ಸೋದರಿಯ ಮೇಲೆ ಹಲ್ಲೆ ನಡೆಸುತ್ತಾ ಬಂದ ಅಣ್ಣ ಆಕೆಯನ್ನು ರೆಸ್ಟೋರೆಂಟ್ ನಿಂದ ಹೊರ ಎಳೆದು ತಂದಿದ್ದಾನೆ. ಹಲ್ಲೆ ನಡೆಸುತ್ತಾ ರಾಷ್ಟ್ರೀಯ ಹೆದ್ದಾರಿವರೆಗೂ ಬಂದಿದ್ದು, ಸ್ಥಳದಲ್ಲಿ ಜನರು ಸೇರಿದ್ದರಿಂದ ಕೆಲ ಕಾಲ ಟ್ರಾಫಿಕ್ ಉಂಟಾಗಿತ್ತು. ತಾಯಿ ವಿರೋಧ ವ್ಯಕ್ತಪಡಿಸಿದರೂ, ಸೋದರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

    ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವಷ್ಟರಲ್ಲಿ ಯುವಕ ತನ್ನ ಸೋದರಿ ಮತ್ತು ತಾಯಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ಗಲಾಟೆಗೆ ನಡೆಯುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಗೆ ಹೋದಾಗ ಯಾರು ಇರಲಿಲ್ಲ. ಸ್ಥಳೀಯರಿಗೂ ಹಲ್ಲೆ ನಡೆಸಿದ, ಹಲ್ಲೆಗೊಳಗಾದ ಯುವತಿಯ ಪರಿಚಯ ಇಲ್ಲ ಅಂತಾ ಹೇಳಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಶಾನದಲ್ಲಿ 80 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ

    ಸ್ಮಶಾನದಲ್ಲಿ 80 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ

    – ಸೆಕ್ಸ್‌ಗೆ ನಿರಾಕರಿಸಿದಕ್ಕೆ ಕಾಮುಕರಿಂದ ಹಲ್ಲೆ, ರಕ್ತಸ್ರಾವದಿಂದ ವೃದ್ಧೆ ಸಾವು

    ಬೆಂಗಳೂರು: ಸ್ಮಶಾನದ ಗೇಟ್ ಕಾಯುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ ಯುವಕ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಎನ್‍ಜಿಆರ್ ಲೇಔಟ್‍ನಲ್ಲಿ ನಡೆದಿದೆ.

    ಬೊಮ್ಮನಹಳ್ಳಿಯ ಎನ್‍ಜಿಆರ್ ಲೇಔಟ್‍ನ ನಿವಾಸಿ ಯಲ್ಲಮ್ಮ (80) ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ. ಅತ್ಯಾಚಾರ ಎಸಗಿದ್ದ ಹರೀಶ್‍ನನ್ನು (19) ಬೊಮ್ಮನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ.

    ಆಗಿದ್ದೇನು?:
    ರೂಪೇನ ಅಗ್ರಹಾರದ ಎನ್‍ಜಿಆರ್ ಬಡಾವಣೆಯ ಸ್ಮಶಾನದ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಯಲ್ಲಮ್ಮ ಅಲ್ಲಿನ ರೂಮ್ ಒಂದರಲ್ಲಿ ವಾಸವಾಗಿದ್ದರು. ಹರೀಶ್ ಹಾಗೂ ಆತನ ಕೆಲ ಸ್ನೇಹಿತರು ಶನಿವಾರ ಸಂಜೆ ಯಲ್ಲಮ್ಮ ವಾಸವಿದ್ದ ರೂಮ್‍ಗೆ ಹೋಗಿದ್ದಾರೆ. ಈ ವೇಳೆ ವೃದ್ಧೆ ಯಲ್ಲಮ್ಮ ಮುಖಕ್ಕೆ ಕಟ್ಟಿಗೆಯಿಂದ ಹೊಡೆದು, ಎದೆ ಭಾಗವನ್ನು ಕಚ್ಚಿದ್ದಾರೆ. ಅಷ್ಟೇ ಅಲ್ಲದೆ ಗುಪ್ತಾಂಗಕ್ಕೂ ಗಾಯ ಮಾಡಿ ಅತ್ಯಾಚಾರ ಎಸಗಿದ್ದಾರೆ.

    ಸ್ಮಶಾನದಲ್ಲಿ ಕುರಿ ಕಟ್ಟಲು ಹೋಗಿದ್ದ ಮಹಿಳೆಯೊಬ್ಬರಿಗೆ ಯಲ್ಲಮ್ಮ ವಾಸವಿದ್ದ ರೂಮ್‍ನಿಂದ ಧ್ವನಿ ಕೇಳಿದೆ. ತಕ್ಷಣವೇ ಅಲ್ಲಗೆ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ವೃದ್ಧೆ ಯಲ್ಲಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಚೀರಿಕೊಂಡಿದ್ದಾರೆ. ರೂಮ್ ಒಳಗಿದ್ದ ಹರೀಶ್ ಹಾಗೂ ಕೆಲ ಯುವಕರು ಇರುವುದನ್ನು ನೋಡಿ ಗಾಬರಿಯಿಂದ ಓಡಿ ಹೋಗಿ ಸ್ಥಳೀಯರಿಗೆ ಹಾಗೂ ವೃದ್ಧೆಯ ಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಸ್ಥಳೀಯರು ಕರೆ ಮಾಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೊಮ್ಮನಹಳ್ಳಿ ಠಾಣಾ ಪೊಲೀಸರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.

    ಈ ಕುರಿತು ಮೃತ ವೃದ್ಧೆಯ ಸಂಬಂಧಿಕರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಹರೀಶ್‍ನನ್ನು ವಶಕ್ಕೆ ಪಡೆದು, ಇತರರಿಗಾಗಿ ಶೋಧ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಲ್ಲಳ್ಳಿ ಜಲಪಾತದಲ್ಲಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಾವು!

    ಮಲ್ಲಳ್ಳಿ ಜಲಪಾತದಲ್ಲಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಾವು!

    ಮಡಿಕೇರಿ: ಜಲಪಾತದ ಅಡಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ಮೈಸೂರು ಮೂಲದ ಸ್ಕಂದ(24) ಮೃತ ದುರ್ದೈವಿ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಘಟನೆ ನಡೆದಿದೆ. ಮೃತ ದೇಹವನ್ನು ಪ್ರವಾಸಿ ಮಿತ್ರ ಸಿಬ್ಬಂದಿ ಪತ್ತೆ ಹಚ್ಚಿ ಜಲಪಾತದಿಂದ ಮೇಲೆ ತೆಗೆದುಕೊಂಡು ಬಂದಿದ್ದಾರೆ.

    ಮೃತ ಯುವಕ ಸ್ಕಂದ ಬೆಂಗಳೂರಿನ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವೀಕೆಂಡ್ ಪ್ರವಾಸಕ್ಕಾಗಿ 11 ಮಂದಿ ಸಹೋದ್ಯೋಗಿಗಳ ಜೊತೆಗೆ ಇಂದು ಮಲ್ಲಳ್ಳಿ ಫಾಲ್ಸ್ ಗೆ ಬಂದಿದ್ದ. ಈ ವೇಳೆ ಜಲಪಾತದ ಅಡಿಯಲ್ಲಿ ನಿಂತಿದ್ದ ನೀರಿಗೆ ಇಳಿದು ಈಜಲು ಹೋದಾಗ ಅಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನು ಓದಿ: ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

    ಫಾಲ್ಸ್ ಅಡಿಯಲ್ಲಿ ಪಾಚಿ ಬೆಳೆದಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಬೇಲಿ ಹಾಕಿಲ್ಲ. ಇದರಿಂದಾಗಿ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ. ಬೆಂಗಳೂರಿನ ಯುವಕರ ತಂಡ ಇಂದು ಫಾಲ್ಸ್ ಗೆ ಬಂದಿತ್ತು. ಜಲಪಾತದ ಅಡಿಯಲ್ಲಿರುವ ನೀರಿನಲ್ಲಿ ಯುವಕರು ಈಜುತ್ತಿದ್ದನ್ನು ನೋಡಿದ ಸ್ಕಂದ ಕೂಡ ನೀರಿಗೆ ಇಳಿದಿದ್ದ. ಈಜಲು ಬಾರದೆ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.

    ಜಲಪಾತದ ಅಡಿಯಲ್ಲಿ ಗುಂಡಿಗಳಿವೆ. ಅದರಲ್ಲಿ ಬಿದ್ದು ಈ ಹಿಂದೆ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರವಾಸಿಗರಿಂದ ಹಣ ಪಡೆಯುತ್ತಾರೇ ಹೊರತು ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ ಎಂದು ದೂರಿದರು.

    ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಯುವಕ ಸ್ಕಂದ ಜೊತೆಗೆ ಬಂದಿದ್ದ ಸಹೋದ್ಯೋಗಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೀದರ್ ವಿವಿಯಲ್ಲಿ ಯುವಕ-ಯುವತಿ ಒಟ್ಟಿಗೆ ತಿರುಗಾಡುವುದಕ್ಕೆ ಬ್ರೇಕ್!

    ಬೀದರ್ ವಿವಿಯಲ್ಲಿ ಯುವಕ-ಯುವತಿ ಒಟ್ಟಿಗೆ ತಿರುಗಾಡುವುದಕ್ಕೆ ಬ್ರೇಕ್!

    ಬೀದರ್: ಕ್ಯಾಂಪಸ್ ನಲ್ಲಿ ಯುವಕ-ಯುವತಿ ಕಾರಣವಿಲ್ಲದೇ ಒಟ್ಟಿಗೆ ತಿರುಗಾಡುವುದಕ್ಕೆ ಬೀದರ್ ವಿವಿ ಬ್ರೇಕ್ ಹಾಕಿದೆ.

    ಬೀದರ್ ಹೊರವಲಯದ ನಂದಿ ನಗರದಲ್ಲಿರುವ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಹಾಸ್ಟೆಲ್ ವಾರ್ಡನ್ ಜಗನ್ನಾಥ್ ಅವರು ಈ ಆದೇಶ ಹೊರಡಿಸಿದ್ದಾರೆ.

    ಯುವಕ-ಯುವತಿ ಒಟ್ಟಿಗೆ ಸುತ್ತಾಡುತ್ತಿದ್ದರೆ ಅದು ಜನರಿಗೆ ತಪ್ಪು ಸಂದೇಶ ನೀಡುತ್ತೆ. ಹೀಗಾಗಿ ಕಾಲೇಜ್ ಕ್ಯಾಂಪಸ್‍ನಲ್ಲಿ ಹಾಗೂ ಬೀದರ್ ನಗರದಲ್ಲಿ ಯುವಕ-ಯುವತಿ ಒಟ್ಟಿಗೆ ತಿರುಗಾಡಿದರೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಆದೇಶದಲ್ಲಿ ಏನಿದೆ?
    ನಮ್ಮ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿನಿಯರು ಸಂಜೆ ವೇಳೆ ಯುವಕರ ಜೊತೆ ನಂದಿನಿ ಗೇಟ್ ಬಳಿ, ಕಾಲೇಜ್ ಕ್ಯಾಂಪಸ್ ಹಾಗೂ ನಗರದ ಹೊರವಲಯದಲ್ಲಿ ತಿರುಗಾಡುತ್ತಿರುವ ವಿಷಯ ಮುಖ್ಯ ವಾರ್ಡನ್, ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರ ಗಮನಕ್ಕೆ ಬಂದಿದೆ.

    ಕಾಲೇಜ್ ಕ್ಯಾಂಪಸ್ ಅಲ್ಲದೇ ನಗರದ ಹೊರವಲಯದಲ್ಲೂ ಯುವಕ- ಯುವತಿಯರು ಒಟ್ಟಿಗೆ ತಿರುಗಾಡುತ್ತಿದ್ದಾರೆ. ಈ ರೀತಿ ತಿರುಗಾಡುವುದರಿಂದ ಜನರಿಗೆ ತಪ್ಪು ಸಂದೇಶ ನೀಡುತ್ತದೆ. ಯಾವುದೇ ಕಾರಣ ಇಲ್ಲದೇ ಯುವಕ-ಯುವತಿಯರು ಒಟ್ಟಿಗೆ ತಿರುಗಾಡುತ್ತಿರುವುದು ಕಂಡು ಬಂದರೆ, ಅವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ. ದಿಢೀರ್ ಆಗಿ ಭೇಟಿ ನೀಡಿ ಈ ರೀತಿಯ ಬೆಳವಣಿಗೆಯನ್ನು ತಡೆಯಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಲ್ಲ ವಿದ್ಯಾರ್ಥಿಗಳು ಕ್ಯಾಂಪಸಿನಲ್ಲಿ ಶಿಸ್ತನ್ನು ಕಾಪಾಡಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈರಲ್ ವಿಡಿಯೋಗಾಗಿ ಕ್ರೂಸ್ ಶಿಪ್‍ನ 11ನೇ ಮಹಡಿಯಿಂದ ಜಿಗಿದ ಯುವಕ: ವಿಡಿಯೋ ನೋಡಿ

    ವೈರಲ್ ವಿಡಿಯೋಗಾಗಿ ಕ್ರೂಸ್ ಶಿಪ್‍ನ 11ನೇ ಮಹಡಿಯಿಂದ ಜಿಗಿದ ಯುವಕ: ವಿಡಿಯೋ ನೋಡಿ

    ವಾಷಿಂಗ್ಟನ್: ಯುವಕನೊಬ್ಬ ವಿಡಿಯೋಗಾಗಿ ಕ್ರೂಸ್ ಶಿಪ್‍ನ 11ನೇ ಮಹಡಿಯಿಂದ ಜಿಗಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಿಕೊಲಾಯ್ ನಯ್ದೇವ್(27) 11ನೇ ಮಹಡಿಯಿಂದ ಜಿಗಿದ ಯುವಕ. ಬಹಮಾಸ್‍ನ ನಸಾವು ಎಂಬಲ್ಲಿ ರಾಯಲ್ ಕೆರೆಬಿಯನ್ ಹಡಗಿನ 11ನೇ ಮಹಡಿಯಿಂದ ಯುವಕ ಜಿಗಿದಿದ್ದು, ಆತನ ಸ್ನೇಹಿತರು ಅದನ್ನು ವಿಡಿಯೋ ಮಾಡಿದ್ದಾರೆ.

    ನಿಕೊಲಾಯ್ ಹಡಗಿನಿಂದ ಜಿಗಿದ ಬಳಿಕ ಆತನಿಗೆ ಹಾಗೂ ಆತನ ಸ್ನೇಹಿತನಿಗೆ ಮತ್ತೆ ರಾಯಲ್ ಕೆರೆಬಿಯನ್ ಪ್ರವೇಶಿಸಲು ನಿಷೇಧಿಸಿದ್ದಾರೆ. ಅಲ್ಲದೇ ಮುಂದೆ ಕೂಡ ಹಡಗಿನಲ್ಲಿ ಪ್ರವೇಶಿಸಬಾರದು ಎಂದು ನಿಕೊಲಾಯ್ ಹಾಗೂ ಆತನ ಗೆಳಯರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.

    ಈ ಘಟನೆ ಬಗ್ಗೆ ನಿಕೊಲಾಯ್, “ನಾನು ಕಳೆದ ರಾತ್ರಿ ಮದ್ಯ ಸೇವಿಸಿದೆ. ಬೆಳಗ್ಗೆ ಎದ್ದಾಗ ನಾನು ಹಡಗಿನಿಂದ ಜಿಗಿಯಬೇಕು ಎಂದು ನಿರ್ಧರಿಸಿದೆ. ಅಲ್ಲದೇ ಇನ್‍ಸ್ಟಾಗ್ರಾಂನ ನನ್ನ ಒಂದು ವಿಡಿಯೋ ವೈರಲ್ ಆಗಬೇಕೆಂದು ಈ ರೀತಿ ಮಾಡಿದೆ” ಎಂದು ತನ್ನ ಪೋಸ್ಟಿನ ಕಮೆಂಟ್ ಸೆಕ್ಷನ್‍ನಲ್ಲಿ ಬರೆದುಕೊಂಡಿದ್ದಾನೆ.

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಈ ವಿಡಿಯೋ ನೋಡಿ 2 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ನಿಕೊಲಾಯ್ ಹಾಗೂ ಆತನ ಸ್ನೇಹಿತರ ವಿರುದ್ಧ ರಾಯಲ್ ಕೆರೆಬಿಯನ್ ಕ್ರಮ ಕೈಗೊಳ್ಳಲಿದೆ.

     

    View this post on Instagram

     

    Full send

    A post shared by Nick Naydev (@naydev91) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಗಾಗಿ ಮತಾಂತರಗೊಂಡು ಮದ್ವೆಯಾಗಿದ್ದ ಯುವಕ ನೇಣಿಗೆ ಶರಣು!

    ಪ್ರೇಯಸಿಗಾಗಿ ಮತಾಂತರಗೊಂಡು ಮದ್ವೆಯಾಗಿದ್ದ ಯುವಕ ನೇಣಿಗೆ ಶರಣು!

    ಗಾಂಧಿನಗರ: ಪ್ರೀತಿಸಿದ ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರನಾಗಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ರಾಜ್‍ಕೋಟ್ ಮೂಲದ ಪಿಯೂಶ್ ಸೋಲಂಕಿ (22) ಅಲಿಯಾಸ್ ಸಲೀಂ ಆತ್ಮಹತ್ಯೆ ಮಾಡಿಕೊಂಡ ಯುವಕ. ಪಿಯೂಶ್ ಸೋಲಂಕಿ 2017ರಲ್ಲಿ ಸಲೀನಾ ಎಂಬವಳ ಜೊತೆಗೆ ಮದುವೆಯಾಗಿದ್ದ. ಜಾಮ್‍ನಗರ ಜಿಲ್ಲೆಯ ಧ್ರೋಲ್‍ನ ಗಾಯತ್ರಿನಗರದಲ್ಲಿ ಜನವರಿ 14ರಂದು ಸಂಜೆ ಮನೆಯಲ್ಲಿ ಪಿಯೂಶ್ ಸೋಲಂಕಿ ನೇಣು ಹಾಕಿಕೊಂಡಿದ್ದಾನೆ.

    ಏನಿದು ಪ್ರಕರಣ?:
    ಪಿಯೂಶ್ ಸೋಲಂಕಿ ಮುಸ್ಲಿಂ ಮಹಿಳೆ ಸಲೀನಾಳನ್ನು ಪ್ರೀತಿಸಿದ್ದ. ಹೀಗಾಗಿ ಆಕೆಯನ್ನು ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರನಾಗಿದ್ದ. ಈ ಜೋಡಿ 2017ರಲ್ಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಸಲೀನಾ ಮಾಜಿ ಪ್ರೇಮಿ ಇದಿರಿಸ್ ಸಿಪಾಯಿ (22) ಮಧ್ಯ ಪ್ರವೇಶ ಮಾಡಿದ್ದು, ತಾನು ಹಾಗೂ ಸಲೀನಾ ಜೊತೆಗೆ ತೆಗೆದುಕೊಂಡ ಅಶ್ಲೀಲ ಫೋಟೋಗಳನ್ನು ಪಿಯೂಶ್‍ಗೆ ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಸಲೀನಾಳನ್ನು ಬಿಟ್ಟುಬಿಡುವಂತೆ ಎಚ್ಚರಿಕೆ ನೀಡಿದ್ದಾನೆ.

    ಮಾಜಿ ಗೆಳೆಯ ಇದಿರಿಸ್ ಪಿಯೂಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಎಂದು ಸಲೀನಾ ಬುಧವಾರ ದೂರು ನೀಡಿದ್ದಾಳೆ ಎಂದು ಧ್ರೋಲ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಎಸ್. ಡಲ್ಸಾನಿಯಾ ತಿಳಿಸಿದ್ದಾರೆ.

    ಸಲೀನಾ 3 ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಪುರುಷನೊಬ್ಬನ ಜೊತೆಗೆ ಮೊದಲ ಮದುವೆಯಾಗಿದ್ದಳು. ಆಗಲೂ ಇದಿರಿಸ್ ಇದೇ ರೀತಿ ಆಕೆಯ ಜೊತೆಗಿದ್ದ ಖಾಸಗಿ ಫೋಟೋಗಳನ್ನು ತೋರಿಸಿದ್ದ. ಇದರಿಂದಾಗಿ ಮದುವೆಯಾದ 15 ದಿನಕ್ಕೆ ಸಲೀನಾ ವಿಚ್ಛೇದನ ಪಡೆದಿದ್ದಳು ಎಂದು ಕೆ.ಎಸ್.ಡಲ್ಸಾನಿಯಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv