Tag: youth

  • ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

    ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

    ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬ ಕೊನೆಗೆ ತಾನೇ ಈಜಿ ದಡ ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಕಾಸರಗೋಡಿನ ಮಂಜೇಶ್ವರ ಬಳಿಯ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿದ್ದ ಯುವಕ. ಈತ ಮಂಗಳೂರು – ಉಳ್ಳಾಲ ಸಂಪರ್ಕಿಸುವ ನೇತ್ರಾವತಿ ಸೇತುವೆಯ ಮೇಲ್ಭಾಗದಿಂದ ಹಾರಿದ್ದು ಕೊನೆಯ ಕ್ಷಣದಲ್ಲಿ ಈಜುತ್ತಾ ಸೇತುವೆಯ ಪಿಲ್ಲರ್ ಹತ್ತಿ ಕುಳಿತಿದ್ದಾನೆ.

    ನೌಫಲ್ ತನ್ನ ಸ್ನೇಹಿತನ ಜೊತೆಗೆ ಟೆಂಪೊ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದನು. ಆದರೆ ನೇತ್ರಾವತಿ ಸೇತುವೆ ಮಧ್ಯೆ ತಲುಪಿದಾಗ ತನಗೆ ವಾಂತಿ ಬರುತ್ತಿದೆ ಎಂದು ಹೇಳಿ ಟೆಂಪೊ ನಿಲ್ಲಿಸಿದ್ದಾನೆ. ಬಳಿಕ ಸೇತುವೆಯ ಬದಿಗೆ ಹೋದ ನೌಫಾಲ್, ವಾಂತಿ ಮಾಡುವ ನೆಪದಲ್ಲಿ ನೇತ್ರಾವತಿ ನದಿಗೆ ಹಾರಿದ್ದಾನೆ. ನದಿಗೆ ಬಿದ್ದ ಯುವಕ ಕೊನೆಗೆ ನೀರಿನಿಂದ ಮೇಲಕ್ಕೆ ಬರುತ್ತಲೇ ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಈಜತೊಡಗಿದ್ದು, ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಸ್ಲ್ಯಾಬ್ ಹತ್ತಿ ಕುಳಿತಿದ್ದಾನೆ.

    ಇದನ್ನು ವೀಕ್ಷಿಸಲು ಸೇತುವೆಯ ಮೇಲೆ ಕುತೂಹಲಿಗರ ದಂಡೇ ಸೇರಿತ್ತು. ಮಂಗಳೂರು ನಗರ ಟ್ರಾಫಿಕ್ ಪೊಲೀಸರು, ಸಾರ್ವಜನಿಕರ ಸಹಕಾರದಿಂದ ನೌಫಲ್‍ನನ್ನು ಮೇಲ್ಗಡೆ ತಂದು ಬಳಿಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್‍ಜಿ ಆಡುವ ಭರದಲ್ಲಿ ನೀರೆಂದು ಆ್ಯಸಿಡ್ ಕುಡಿದ ಯುವಕ!

    ಪಬ್‍ಜಿ ಆಡುವ ಭರದಲ್ಲಿ ನೀರೆಂದು ಆ್ಯಸಿಡ್ ಕುಡಿದ ಯುವಕ!

    ಭೋಪಾಲ್: ಪಬ್‍ಜಿ ಆಡುವ ಭರದಲ್ಲಿ ನೀರು ಅಂತ ಭಾವಿಸಿ ಯುವಕನೊಬ್ಬ ಆ್ಯಸಿಡ್ ಕುಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಫೆಬ್ರವರಿ 19ರಂದು ಈ ಘಟನೆ ನಡೆದಿದೆ. ಚಿಂದ್ವಾರ ಮೂಲದ 25 ವರ್ಷದ ಯುವಕನೊಬ್ಬ ತನ್ನ ಮನೆ ಬಳಿ ಮೊಬೈಲ್‍ನಲ್ಲಿ ಪಬ್‍ಜಿ ಆಡುತ್ತಿದ್ದನು. ಈ ವೇಳೆ ಆತನಿಗೆ ಬಾಯಾರಿಕೆ ಆಗಿದ್ದು, ಆಟದಲ್ಲಿ ಮುಳುಗಿದ್ದ ಯುವಕ ನೀರೆಂದು ಭಾವಿಸಿ ಆ್ಯಸಿಡ್ ಕುಡಿದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಕ್ಕೆ, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯರು, ಯುವಕನಿಗೆ ಮದುವೆ ಆಗಿದೆ, ಒಂದು ಮಗು ಕೂಡ ಇದೆ. ಆದ್ರೆ ಆಟದ ಗುಂಗಿನಲ್ಲಿ ಈ ರೀತಿ ಮಾಡಿಕೊಂಡಿದ್ದಾನೆ. ಆ್ಯಸಿಡ್ ಕುಡಿದಿದ್ದರಿಂದ ಆತನಿಗೆ ಏನನ್ನು ಸೇವಿಸಲು ಆಗುತ್ತಿರಲಿಲ್ಲ. ಈಗ ಚೇತರಿಸಿಕೊಂಡಿದ್ದಾನೆ. ಆದರೇ ಚಿಕಿತ್ಸೆ ನೀಡುತ್ತಿದ್ದ ವೇಳೆ ಕೂಡ ಆತ ಮೊಬೈಲ್‍ನಲ್ಲಿಯೇ ವ್ಯಸ್ಥನಾಗಿದ್ದ. ಯಾವಾಗಲೂ ಗೇಮ್ಸ್ ಆಡುವುದು ಇಲ್ಲ ವಿಡಿಯೋಗಳನ್ನು ನೋಡುತ್ತ ಮೊಬೈಲ್‍ನಲ್ಲಿಯೇ ಮುಳುಗಿರುತ್ತಿದ್ದ ಎಂದು ತಿಳಿಸಿದ್ದಾರೆ.

    ಗೇಮ್ ಆಡುವ ಭರದಲ್ಲಿ ತನ್ನ ಜೀವಕ್ಕೆ ಯುವಕ ಆಪತ್ತು ತಂದುಕೊಂಡಿದ್ದ. ಸದ್ಯ ಸ್ವಲ್ಪ ಮಟ್ಟಿಗೆ ಆತ ಸುದಾರಿಸಿಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೆಯೇ ಮೊಬೈಲ್ ಬಳಸುವುದು ತಪ್ಪಲ್ಲ ಆದ್ರೆ, ಈ ಯುವಕನ ರೀತಿ ಅದರಲ್ಲೇ ಮುಳುಗಿ ನಿಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳಬೇಡಿ ಅಂತ ವೈದ್ಯರು ಯುವಕರಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 300 ಹೆಣ ಬೀಳಿಸಿದ್ದೀವಿ ಎಂದ್ರಿ, ಈಗ ನೋಡಿದ್ರೆ 1 ಪಾಕಿಸ್ತಾನಿ ಹೆಣವೂ ಇಲ್ಲ- ಯುವಕನ ಪೋಸ್ಟ್

    300 ಹೆಣ ಬೀಳಿಸಿದ್ದೀವಿ ಎಂದ್ರಿ, ಈಗ ನೋಡಿದ್ರೆ 1 ಪಾಕಿಸ್ತಾನಿ ಹೆಣವೂ ಇಲ್ಲ- ಯುವಕನ ಪೋಸ್ಟ್

    ಚಾಮರಾಜನಗರ: ಸೈನಿಕರ ದಾಳಿ ಬಗ್ಗೆ ಪ್ರಶ್ನೆ ಮಾಡಿದ ಯುವಕನಿಗೆ ಧರ್ಮದೇಟು ನೀಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಪ್ರಕಾಶ್ ಗೌಡ ಪೋಸ್ಟ್ ಹಾಕಿದ ವ್ಯಕ್ತಿ. ಪ್ರಕಾಶ್ ತನ್ನ ಫೇಸ್‍ಬುಕ್ ಖಾತೆಯಲ್ಲಿ, ಎಲ್ರೋ 300 ಹೆಣ ಬೀಳಿಸಿದ್ದೀವಿ ಎಂದು ಟಾಂಟಾಂ ಹೋಡ್ಕೋತಾ ಇದ್ರಲ್ಲ. ಈಗ ನೋಡಿದ್ರೆ ಒಂದು ಪಾಕಿಸ್ತಾನಿ ಹೆಣವೂ ಇಲ್ಲ. ಅಲ್ಲಿನ ಸಂತ್ರಸ್ತರು ಯಾರು ಚಚ್ಚಿಕೊಂಡು ಅಳುತ್ತನೂ ಇಲ್ವಲ್ರೋ ಎಂದು ಬರೆದುಕೊಂಡಿದ್ದಾನೆ.

    ಪ್ರಕಾಶ್ ಗೌಡನ ಪೋಸ್ಟ್ ನೋಡಿ ಯುವಕರು ರೊಚ್ಚಿಗೆದ್ದು ಆತನಿಗೆ ಧರ್ಮದೇಟು ನೀಡಿದ್ದಾರೆ. ನಂತರ ಯುವಕರು, ಪ್ರಕಾಶ್‍ನನ್ನು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪೊಲೀಸರು ಈ ಪೋಸ್ಟ್ ನಲ್ಲಿ ದೇಶದ್ರೋಹಿ ಹೇಳಿಕೆ ಕಾಣಿಸುತ್ತಿಲ್ಲ. ಹೀಗಾಗಿ ಎಫ್‍ಐಆರ್ ಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರೋರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮುಖ, ಕೈಗಳನ್ನು ಮಚ್ಚಿನಿಂದ ಕೊಚ್ಚಿದ..!

    ರಾತ್ರೋರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮುಖ, ಕೈಗಳನ್ನು ಮಚ್ಚಿನಿಂದ ಕೊಚ್ಚಿದ..!

    ಹಾಸನ: ರಾತ್ರೋ ರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

    ಮಮತಾ (23) ಹಲ್ಲೆಗೊಳಗಾದ ಮಹಿಳೆ. ಅಪರಿಚಿತ ವ್ಯಕ್ತಿಯೊಬ್ಬ ಸಕಲೇಶಪುರದ ವಿನೋಬಾ ರಸ್ತೆಯಲ್ಲಿರುವ ಮನೆಗೆ ಏಕಾಏಕಿ ನುಗ್ಗಿ ಮಮತಾ ಅವರ ಮುಖ ಮತ್ತು ಕೈಗಳನ್ನು ಮಚ್ಚಿನಿಂದ ಕೊಚ್ಚಿ ಬಳಿಕ ಪರಾರಿಯಾಗಿದ್ದಾನೆ.

    ಎರಡು ವರ್ಷಗಳ ಹಿಂದೆ ಮಮತಾ ಅವರು ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದರು. ಈ ವಿಚಾರ ಮಮತಾ ಮನೆಯವರಿಗೆ ತಿಳಿದಾಗ ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಅಂತರ್ಜಾತಿ ವಿವಾಹ ಬೇಡ ಎಂದು ಹೇಳಿದ್ದರು. ಆದ್ರೆ ಹೆತ್ತವರ ಮಾತನನು ಕೇಳದೆ ಮಮತಾ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದರು. ಇದೀಗ ಮುಸ್ಲಿಂ ಯುವಕನನ್ನು ಮದುವೆಯಾಗಿರುವುದಕ್ಕೆ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗುತ್ತದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ದುಷ್ಕರ್ಮಿ ಈ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದ್ದು, ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಮಮತಾ ಅವರನ್ನು ಕೂಡಲೇ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮತಾ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಿದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಬಾಲಕ!

    ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಿದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಬಾಲಕ!

    ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಕ್ಕೆ ಯುವಕನೊಬ್ಬನನ್ನು ಅಪ್ರಾಪ್ತ ಬಾಲಕನೊಬ್ಬ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ನವದೆಹಲಿಯ ಜಸೋಲಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಲೆಯಾದ ವ್ಯಕ್ತಿಯನ್ನು ಅಮಿತ್ (28) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಮಿತ್ ಪಾರ್ಕ್ ಒಂದರಲ್ಲಿ ತನ್ನ ಫೋನ್‍ನಲ್ಲಿ ಜೋರಾಗಿ ಮಾತನಾಡುತ್ತಿದ್ದ. ಈ ವೇಳೆ ಸ್ಥಳದಲ್ಲಿದ್ದ ಬಾಲಕ ನಿಧಾನವಾಗಿ ಮಾತನಾಡಿ ತೊಂದರೆಯಾಗುತ್ತಿದೆ ಎಂದಿದ್ದಾನೆ. ಆದರೂ ಯುವಕ ಬಾಲಕನ ಮಾತು ಕೇಳದೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಲೇ ಇದ್ದ. ಆಗ ಮತ್ತೆ ಬಾಲಕ ಯುವಕನಿಗೆ ನಿಧಾನವಾಗಿ ಮಾತನಾಡಿ ಎಂದಿದಕ್ಕೆ ಕೋಪಗೊಂಡ ಯುವಕ ರೇಗಿದ್ದಾನೆ. ಬಳಿಕ ಅವರಿಬ್ಬರ ನಡುವೆ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ಬಾಲಕ ಕೈಗೆ ಸಿಕ್ಕ ಕಲ್ಲಿನಿಂದ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

    ಈ ಹಲ್ಲೆಯಿಂದ ಯುವಕನ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸಾರ್ವಜನಿಕರು ಗಮನಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದ್ದಿದ್ದಾರೆ. ಆದರೇ ಅಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಯುವಕನ ಜೊತೆ ಜಗಳವಾದಾಗ ಕೋಪದಿಂದ ಕಲ್ಲಿನಿಂದ ಆತನನ್ನು ಜಜ್ಜಿ ಸಾಯಿಸಿದೆ. ಬಳಿಕ ಭಯವಾಗಿ ಸ್ಥಳದಿಂದ ಓಡಿಹೋದೆ ಎಂದು ಬಾಲಕ ಹೇಳಿದ್ದಾನೆ.

    ಇಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ದ್ವೇಷವಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಅಪ್ರಾಪ್ತ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಯುವಕನ ಪುಂಡಾಟ

    ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಯುವಕನ ಪುಂಡಾಟ

    ವಿಜಯಪುರ: ಭೀಮಾ ತೀರದಲ್ಲಿ ಯುವಕ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಪುಂಡಾಟಿಕೆ ಮೆರೆದಿದ್ದಾನೆ.

    ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಕಾತ್ರಾಳ ಗ್ರಾಮದ ಯುವಕ ಮಹೇಶ್ ಸಾರವಾಡ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಾನೆ. ಕಳೆದ ಎರಡು ದಿನದ ಹಿಂದೆ ಮಹೇಶ್ ಸಾರವಾಡ ಹುಟ್ಟುಹಬ್ಬ ಇತ್ತು. ಹುಟ್ಟುಹಬ್ಬಕ್ಕೆ ಚಾಕುವಿನಿಂದ ಕೇಕ್ ಕಟ್ ಮಾಡುವ ಬದಲು ತಲ್ವಾರ್‍ನಿಂದ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾನೆ.

    ಮಹೇಶ್ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಲ್ಲದೆ ಆ ಫೋಟೋಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾನೆ. ಈ ಮೂಲಕ ತನ್ನ ಪ್ರಭಾವ ತೋರಿಸಿದರೂ ಕಣ್ಣಿದ್ದು ಪೊಲಿಸ್ ಇಲಾಖೆ ಕುರುಡಾಗಿದೆ.

    ಸದ್ಯ ಮಹೇಶ್ ತಲ್ವಾರ್‌ನಿಂದ ಕೇಕ್ ಕಟ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್‍ನ ಈ ವರ್ತನೆಯಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಈ ಕೂಡಲೇ ಮಹೇಶ್ ಸಾರವಾಡನನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾಗಿ ಮೋಸ ಮಾಡಿದ್ದಾನೆ ಎಂದ ಯುವತಿ- ಮನನೊಂದು ಎಫ್‍ಬಿ ಲೈವ್ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ

    ಮದ್ವೆಯಾಗಿ ಮೋಸ ಮಾಡಿದ್ದಾನೆ ಎಂದ ಯುವತಿ- ಮನನೊಂದು ಎಫ್‍ಬಿ ಲೈವ್ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ

    ಚೆನ್ನೈ: ಫೇಸ್‍ಬುಕ್ ಲೈವ್ ಮಾಡಿ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಸಜಿನ್(25) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸಜಿನ್ ನಾಗೇರ್ ಕೊಯ್ಲಿಯ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಇಬ್ಬರ ಪೋಷಕರಿಗೆ ಮಾಹಿತಿ ನೀಡದೇ ಮದುವೆ ಆಗಿದ್ದರು. ಮದುವೆಯಾದ ಬಳಿಕ ಇಬ್ಬರು ತಮ್ಮ ತಮ್ಮ ಪೋಷಕರ ಜೊತೆಯಲ್ಲೇ ವಾಸಿಸುತ್ತಿದ್ದರು.

    ಒಂದು ದಿನ ಸಜಿನ್ ತನ್ನ ಪತ್ನಿಗೆ ಪ್ರೀತಿಯ ಮೆಸೇಜ್‍ಗಳನ್ನು ಮಾಡಿದ್ದಾನೆ. ಇದನ್ನು ನೋಡಿದ ಯುವತಿಯ ಪೋಷಕರು ಆಕೆಗೆ ಸಜಿನ್‍ರನ್ನು ಭೇಟಿ ಮಾಡಲು ಬಿಡದೇ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ಸಜಿನ್ ಮಧುರೈ ಹೈಕೋರ್ಟ್‍ಗೆ ತನ್ನ ಪತ್ನಿಯನ್ನು ಆಕೆಯ ಪೋಷಕರಿಂದ ರಕ್ಷಿಸುವಂತೆ ಅರ್ಜಿಯನ್ನು ಸಲ್ಲಿಸಿದ್ದನು.

    ನೋಟಿಸ್ ಬಂದ ಕಾರಣ ಯುವತಿ ತನ್ನ ಪೋಷಕರೊಂದಿಗೆ ಹೈಕೋರ್ಟ್‍ಗೆ ಬಂದಿದ್ದಳು. ಈ ವೇಳೆ ಆಕೆ ಸಜಿನ್ ನನ್ನನ್ನು ಮೋಸ ಮಾಡಿದ್ದಾನೆ. ನಾನು ನನ್ನ ಪೋಷಕರೊಂದಿಗೆ ವಾಸಿಸಲು ಇಷ್ಟಪಡುತ್ತೇನೆ ಎಂದು ಕೋರ್ಟ್‍ನಲ್ಲಿ ಯುವತಿ ಹೇಳಿದ್ದಾಳೆ. ಯುವತಿ ಮಾತುಗಳನ್ನು ಕೇಳಿದ ಕೋರ್ಟ್ ಆಕೆ ತನ್ನ ಪೋಷಕರ ಜೊತೆ ಹೋಗಲಿ ಎಂದು ಆದೇಶಿಸಿದೆ.

    ಈ ಬಗ್ಗೆ ಸಜಿನ್ ಹಾಗೂ ಆತನ ಪೋಷಕರು ಯುವತಿ ಬಳಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಅವರ ಜೊತೆ ಮಾತನಾಡಲು ನಿರಾಕರಿಸಿದ್ದಾಳೆ. ಕೋರ್ಟ್ ಆದೇಶದ ಬಳಿಕ ತನ್ನ ಮಗಳಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆತನ ವಿರುದ್ಧ ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ. ಈ ಕಾರಣದಿಂದ ಸಜಿನ್ ಫೇಸ್‍ಬುಕ್ ಲೈವ್‍ಗೆ ಬಂದು ವಿಷ ಕುಡಿದಿದ್ದಾನೆ. ಲೈವ್‍ನಲ್ಲಿ ವಿಷ ಕುಡಿಯುತ್ತಿರುವುದನ್ನು ಗಮನಿಸಿದ ಆತನ ಸ್ನೇಹಿತ ಸಜಿನ್‍ನನ್ನು ಕನ್ಯಾಕುಮಾರಿಯ ಆಸರಿಪಲ್ಲಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ವಿಡಿಯೋದಲ್ಲಿ ಹೇಳಿದ್ದೇನು?
    ನಾನು ಹಾಗೂ ಆಕೆ ಶಾಲೆ ದಿನಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದೇವೆ. ಆಕೆ ತನ್ನ ಪೋಷಕರ ಒತ್ತಾಯದಿಂದ ನನ್ನ ಮೇಲೆ ಸುಳ್ಳು ದೂರು ನೀಡಿದ್ದಾಳೆ. ನಾನು ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಮೃತಪಟ್ಟ ಬಳಿಕ ಆಕೆಗೆ ನನ್ನ ಮುಖವನ್ನು ತೋರಿಸಲು ಅವಕಾಶ ಕೊಡಬೇಕು ಎಂದು ಸಜಿನ್ ವಿಡಿಯೋದಲ್ಲಿ ಹೇಳಿದ್ದಾನೆ. ಈ ವಿಡಿಯೋದಲ್ಲಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಯುವಕನನ್ನು ಅಡ್ಡಗಟ್ಟಿ ಕೊಲೆಗೈದ ದುಷ್ಕರ್ಮಿಗಳು

    ಮಧ್ಯರಾತ್ರಿ ಯುವಕನನ್ನು ಅಡ್ಡಗಟ್ಟಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಪಾರ್ಟಿಗೆ ಎಂದು ಮನೆಯಿಂದ ಹೊರಗೆ ಹೋಗಿದ್ದ ಯುವಕನನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಹಮ್ಮದ್ ಯುಸೂಫ್ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೊಲೆಯಾದ ಯುವಕ. ಯುಸೂಫ್ ಮೂಲತಃ ಶಿವಮೊಗ್ಗದವ ನಿವಾಸಿಯಾಗಿದ್ದು, ಬಿಳಿಕಳ್ಳಿಯಲ್ಲಿ ವೆಲ್ಡಿಂಗ್ ಕೆಲಸ ಮಾಡ್ತಿದ್ದನು. ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

    ಯುಸೂಫ್ ಶಿವಮೊಗ್ಗದಲ್ಲಿ ಮನೆಕಳ್ಳತನ ಮಾಡುತ್ತಿದ್ದನು. ಒಂದು ಬಾರಿ ಜೈಲಿಗೂ ಹೋಗಿದ್ದ ಕಾರಣ ತಂದೆ-ತಾಯಿ ಬೆಂಗಳೂರಿಗೆ ಕರೆ ತಂದು ಕೆಲಸಕ್ಕೆ ಸೇರಿಸಿದ್ದರು. ಯುಸೂಫ್ ಕೆಲಸ ಮಾಡಿಕೊಂಡು ಪುಡಾರಿ ಬಿದ್ದಿದ್ದ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಕೇಸ್ ಕೂಡ ದಾಖಲಾಗಿದೆ. ಕೊಲೆಯಾದ ಯುಸೂಫ್ ಇತ್ತೀಚೆಗೆ ರಿಯಲ್ ಎಸ್ಟೇಟ್‍ಗೆ ಕೈ ಹಾಕಿ ಹಲವರ ವೈಷಮ್ಯ ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.

    ಯುಸೂಫ್ ಗುರುವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಬಿಳೆಕಳ್ಳಿ ಬಳಿ ಮನೆಗೆ ಹೋಗುತ್ತಿದ್ದ. ಪ್ರತ್ಯೇಕ ಎರಡು ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಕೊಲೆಯಾದ ಯುವಕ ಕೊಲೆ ಮಾಡಿದ ಯುವಕ ಇಬ್ಬರು ಒಂದೇ ಹುಡುಗಿಗೆ ಪ್ರೀತಿ ಮಾಡುತ್ತಿದ್ರು. ಈ ತ್ರಿಕೋನ ಪ್ರೇಮ ಕಥೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕೆವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೇರೊಬ್ಬಳ ಜೊತೆ ಓಡಿಹೋದ ಪ್ರಿಯಕರ – ಪ್ರೇಮಿಗಳ ದಿನವೇ ಜೀವಬಿಟ್ಟಳು ಪ್ರೇಯಸಿ!

    ಬೇರೊಬ್ಬಳ ಜೊತೆ ಓಡಿಹೋದ ಪ್ರಿಯಕರ – ಪ್ರೇಮಿಗಳ ದಿನವೇ ಜೀವಬಿಟ್ಟಳು ಪ್ರೇಯಸಿ!

    ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನವೇ ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ಮನನೊಂದ ಯುವತಿಯೊರ್ವಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಪೂಜಿನಗರದಲ್ಲಿ ನಡೆದಿದೆ.

    ದೀಪಾ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಪ್ಪ ಅಮ್ಮ ಇಲ್ಲದ ದೀಪಾ ಕಳೆದ ಐದಾರು ವರ್ಷಗಳಿಂದಲೂ ಬಾಪೂಜಿನಗರದಲ್ಲಿರೋ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದಳು. ಹಾಗೆಯೇ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆದ್ರೆ ಬಾಪೂಜಿನಗರದ ದೊಡ್ಡಮ್ಮನ ಮನೆಯ ಪಕ್ಕದಲ್ಲೇ ಇದ್ದ ಸುರೇಶ್ ಎಂಬಾತನೊಂದಿಗೆ ದೀಪಾಳಿಗೆ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳಿಂದ ಮನೆಯವರಿಗೂ ಗೊತ್ತಿಲ್ಲದೆ ದೀಪಾ ಹಾಗೂ ಸುರೇಶ್ ಪ್ರೀತಿಸುತ್ತಿದ್ದರು. ಆದರೆ ಕಳೆದ 4 ದಿನಗಳ ಹಿಂದೆ ಸುರೇಶ್ ಮತ್ತೊಂದು ಯುವತಿಯನ್ನು ಕರೆದುಕೊಂಡು ಮನೆ ಬಿಟ್ಟು ಓಡಿ ಹೋಗಿದ್ದಾನೆ.

     

    ಇದರಿಂದ ಸಾಕಷ್ಟು ಮನನೊಂದಿದ್ದ ದೀಪಾ ಬುಧವಾರ ತಡರಾತ್ರಿ ಸುರೇಶ್‍ಗೆ ಕರೆ ಮಾಡಿ ಸಾಕಷ್ಟು ವಾಗ್ವಾದ ನಡೆಸಿದ್ದಾಳೆ. ಆದ್ರೆ ಅತ್ತ ಸುರೇಶ್ ನಾನು ನಿನ್ನನ್ನ ಪ್ರೀತಿಸಿಲ್ಲ, ಮದುವೆಯೂ ಆಗಲ್ಲ. ನಾನು ಬೇರೆ ಹುಡುಗಿಯನ್ನ ಮದುವೆಯಾಗಿದ್ದೀನಿ ಅಂತ ಹೇಳಿದ್ದಾನೆ. ಈ ವಿಚಾರ ಕೇಳಿ ಇಡೀ ರಾತ್ರಿ ಸಾಕಷ್ಟು ನೊಂದಿದ್ದ ದೀಪ ಮನೆಯ ಮೇಲಿನ ಕೋಣೆಯೊಂದರಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಬೆಳಗ್ಗೆ ಯುವತಿ ನಿದ್ದೆಯಿಂದ ಎದ್ದಿಲ್ಲ ಅಂತ ಪರಿಭಾವಿಸಿದ್ದ ಮನೆಯವರು 10 ಗಂಟೆ ನಂತರ ಕೋಣೆಯ ಬಾಗಿಲು ಬಡಿದಾಗ ಪ್ರತ್ಯುತ್ತರ ಸಿಗಲಿಲ್ಲ. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮೃತ ದೀಪಾಳ ಕೆಲ ನೋಟ್‍ಬುಕ್‍ಗಳಲ್ಲಿ ಪ್ರೀತಿ ಪ್ರೇಮದ ಸಂದೇಶಗಳಿದ್ದು, ಮತ್ತೊಂದು ಡೈರಿಯಲ್ಲಿ ಡೆತ್‍ನೋಟ್ ಬರೆದಿದ್ದಾಳೆ. ಸದ್ಯ ಅವುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪಿಎಸ್‍ಐ ವರುಣ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆ ಕುರಿತು ಪ್ರಕರಣ ಕೂಡ ದಾಖಲಿಸಲಾಗಿದ್ದು, ಆರೋಪಿ ಸುರೇಶ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವಕರಿಬ್ಬರ ಬರ್ಬರ ಹತ್ಯೆ ಪ್ರಕರಣ: ಪ್ರಮುಖ  ಆರೋಪಿ ಅರೆಸ್ಟ್

    ಯುವಕರಿಬ್ಬರ ಬರ್ಬರ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್

    ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದ ಇಬ್ಬರು ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸದಸ್ಯನೋರ್ವನನ್ನು ಬಂಧಿಸಲಾಗಿದೆ.

    ರಾಘವೇಂದ್ರ ಕಾಂಚನ್ (38) ಬಂಧಿತ ಜಿ.ಪಂ ಸದಸ್ಯನಾಗಿದ್ದು, ಈತ ಬಿಜೆಪಿಯಿಂದ ಆಯ್ಕೆಯಾದವನಾಗಿದ್ದಾನೆ. ಈತನೇ ಭರತ್ ಮತ್ತು ಯತೀಶ್ ಕೊಲೆಗೆ ಪ್ರಮುಖ ಸೂತ್ರಧಾರಿಯಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

    ಈ ಹಿಂದೆ ರೌಡಿಶೀಟರ್ ಹರೀಶ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ ಈ ಮೂವರು ಆರೋಪಿಗಳನ್ನು ಶಿವಮೊಗ್ಗದ ಹೊಸನಗರದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು ರಾಜಶೇಖರ ರೆಡ್ಡಿ ಹಾಗೂ ರವಿಯನ್ನು ಕೊಡಗಿನಲ್ಲಿ ಬಂಧಿಸಲಾಗಿತ್ತು.

    ಜನವರಿ 27 ರಂದು ಗಲಾಟೆಯ ರಾಜಿಗೆ ಹೋಗಿದ್ದಾಗ ಆರೋಪಿಗಳು ಇಬ್ಬರು ಯುವಕರನ್ನು ಕೊಲೆ ಮಾಡಿದ್ದರು. ರಾಘವೇಂದ್ರ ಕಾಂಚನ್‍ಗೂ ಭರತ್‍ಗೂ ವೈಷಮ್ಯವಿತ್ತು. ಇದರಿಂದ ಭರತ್ ಬೆಳವಣಿಗೆಯನ್ನು ರಾಘವೇಂದ್ರ ಕಾಂಚನ್ ಸಹಿಸಿರಲಿಲ್ಲ. ಹೀಗಾಗಿ ಸಂಚು ನಡೆಸಿ ಕೊಲೆ ಮಾಡಿರುವ ಸಾಧ್ಯತೆ ಇದೆ.

    ಬಂಧಿತರಲ್ಲಿ ಮೂವರು ರೌಡಿಶೀಟರ್ ಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv