Tag: youth

  • ಸ್ನೇಹಿತರು ಹೊಡೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ

    ಸ್ನೇಹಿತರು ಹೊಡೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ

    ಬೆಂಗಳೂರು: ವಾಲಿಬಾಲ್ ಆಡುವಾಗ ಸ್ನೇಹಿತರ ಜೊತೆ ಗಲಾಟೆ ನಡೆದ ವೇಳೆ ಸ್ನೇಹಿತರು ಹೊಡೆದರು ಎಂಬ ಕಾರಣಕ್ಕೆ ಮನನೊಂದಿದ್ದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಮುರಳಿ (21) ನೇಣಿಗೆ ಶರಣಾದ ಯುವಕ. ಮುರಳಿ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದವನಾಗಿದ್ದು, ಕೆ. ಸತ್ಯವಾರ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಶನಿವಾರ ಸಂಜೆ ವಾಲಿಬಾಲ್ ಆಡುವ ವೇಳೆ ಸ್ನೇಹಿತರು ಬೈದಿದ್ದಾರೆ.

    ಇದರಿಂದ ಮನನೊಂದ ಮುರಳಿ ಗ್ರಾಮದ ಹೊರಭಾಗದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿ ದೊರೆತಿದ್ದು, ಇದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಈ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುಮಲತಾ ಗೆಲುವಿಗಾಗಿ ಯುವಕನಿಂದ ಉರುಳು ಸೇವೆ

    ಸುಮಲತಾ ಗೆಲುವಿಗಾಗಿ ಯುವಕನಿಂದ ಉರುಳು ಸೇವೆ

    ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಮಂಡ್ಯದ ಯುವಕನೊಬ್ಬ ಉರುಳು ಸೇವೆ ಮಾಡಿದ್ದಾರೆ.

    ಬೆನಕಪ್ರಸಾದ್ ಉರುಳು ಸೇವೆ ಮಾಡಿದ ಯುವಕ. ಬೆನಕಪ್ರಸಾದ್ ಪಕ್ಕಾ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯಾಗಿದ್ದು, ಈಗ ಅವರ ಪತ್ನಿ, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಮಂಡ್ಯ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಈ ಸೇವೆ ಮಾಡಿದ್ದಾರೆ.

    ಬೆನಕಪ್ರಸಾದ್ ಕೆ.ಆರ್ ನಗರ ಪಟ್ಟಣ ಆಂಜನೇಯ ಬ್ಲಾಕ್‍ನ ಆಂಜನೇಯಸ್ವಾಮಿ ದೇವಾಲಯದಿಂದ ಹಳೆ ಎಡತೊರೆ ಆಂಜನೇಯಸ್ವಾಮಿ ದೇವಾಲಯದವರೆಗೆ ಉರುಳು ಸೇವೆ ಮಾಡಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಗೆ ಎದ್ದು ಸುಮಾರು 5 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ್ದಾರೆ.

  • ಐಪಿಎಲ್ ಪಂದ್ಯಕ್ಕೂ ಎಂಟ್ರಿ ಕೊಟ್ಟಿತ್ತು ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್

    ಐಪಿಎಲ್ ಪಂದ್ಯಕ್ಕೂ ಎಂಟ್ರಿ ಕೊಟ್ಟಿತ್ತು ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್ ಈಗ ಐಪಿಎಲ್ ಮ್ಯಾಚ್ ಸ್ಟೇಡಿಯಂನಲ್ಲೂ ಎಂಟ್ರಿ ಕೊಟ್ಟಿದೆ.

    ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಿತು. ಈ ವೇಳೆ ಯುವಕನೊಬ್ಬ ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎನ್ನುವ ಫಲಕವನ್ನು ಪ್ರದರ್ಶಿಸಿದ್ದಾರೆ.

    ‘ಜಾಗ್ವಾರ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಈ ಡೈಲಾಗ್ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜಕೀಯವಾಗಿ ಇದನ್ನು ಸಿಕ್ಕ ಸಿಕ್ಕ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ಈ ಬಗ್ಗೆ ನಿಖಿಲ್ ಕೂಡ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದರು. “ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡೋರಿಗೆ, ಟ್ರೋಲ್ ಮಾಡೋರಿಗೆ ಒಂದು ಪದ ಬಳಸ್ತೀನಿ ತಪ್ಪು ತಿಳ್ಕೋಬೇಡಿ ಅಂದಿದ್ದರು. ಇಂಥವರೆಲ್ಲ ಸ್ಯಾಡಿಸ್ಟ್ ಗಳು, ಅವರು ವೋಟು ಹಾಕಲ್ಲ. ಅವರ ಬಗ್ಗೆ ನಾನು ತಲೆನೂ ಕೆಡಿಸಿಕೊಳ್ಳಲ್ಲ” ಎಂದು ಮಾತಿನ ಚಾಟಿ ಬೀಸಿದ್ದರು.

    ಇಷ್ಟೇ ಅಲ್ಲ ನಮ್ಮ ಕಾರ್ಯಕರ್ತರು ಸಹ ಬಿಜೆಪಿ ಅವರು ಎಲ್ಲಿದ್ದೀರಪ್ಪ. ಮಂಡ್ಯದಲ್ಲಿ ಹುಡುಕ್ತಿದ್ದೀನಿ ಎಂದು ಟ್ರೋಲ್ ಮಾಡಿ ನನಗೂ ಕಳುಹಿಸುತ್ತಿದ್ದಾರೆ. ಬಟ್ ಇಟ್ಸ್ ನಾಟ್ ಗುಡ್ ಎಂದು ಹೇಳಿದ್ದರು. ಬಳಿಕ ಇಂತಹ ಟ್ರೋಲ್ ಮಾಡೋರಿಗೆ ಅಂದು ಆತ್ಮಹತ್ಯೆ ಮಾಡಿಕೊಂಡ 75 ರೈತ ಕುಟುಂಬಗಳಿಗೆ ಚೆಕ್ ವಿತರಿಸಿದ್ದು ಯಾಕೆ ಕಣ್ಣಿಗೆ ಕಾಣಿಸಲಿಲ್ಲ ಎಂದು ಪ್ರಶ್ನೆ ಕೂಡ ಹಾಕಿದ್ದರು. ನಾವೆಲ್ಲ ಇರೋದು ಗಾಜಿನ ಮನೆಯಲ್ಲಿ, ಒಡೆದರೆ ನಮ್ಮ ಮನೆ ಗಾಜು ಒಡೆದೋಗುತ್ತೆ, ಅವರ ಮನೆಯ ಗಾಜು ಕೂಡ ಒಡೆದೋಗುತ್ತೆ ಎಂದು ಕಿವಿಮಾತು ಹೇಳಿದ್ದರು.

  • ನೀರು ಹಿಡಿಯೋ ವಿಚಾರಕ್ಕೆ ಯುವಕನ ಬರ್ಬರ ಕೊಲೆ!

    ನೀರು ಹಿಡಿಯೋ ವಿಚಾರಕ್ಕೆ ಯುವಕನ ಬರ್ಬರ ಕೊಲೆ!

    ಬೆಂಗಳೂರು: ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೋಷನ್ ನಗರದಲ್ಲಿ ನಡೆದಿದೆ.

    ಮಾಕ್ಸೂದ್ ಅಹ್ಮದ್(26) ಕೊಲೆಯಾದ ಯುವಕ. ಈ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ. ಮಧ್ಯಾಹ್ನ ಅಹ್ಮದ್ ನೀರು ತುಂಬಲು ಹೋಗಿದ್ದ ವೇಳೆ ಅಯೂಬ್ ಮತ್ತು ಪಾಷಾ ಎಂಬವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರಿಬ್ಬರು ಎಲ್ಲಾ ನೀರು ನೀವೇ ತುಂಬಿಕೊಂಡರೆ ನಮಗೆಲ್ಲಿ ನೀರು ಎಂದು ಜಗಳ ತೆಗೆದಿದ್ದಾರೆ. ಬಳಿಕ ಇಬ್ಬರೂ ಅಹ್ಮದ್ ಹಲ್ಲೆ ಮಾಡಿ ತೆರಳಿದ್ದಾರೆ.

    ಕೆಲ ಹೊತ್ತಿನ ಬಳಿಕ ಅಯೂಬ್ ಹಾಗೂ ಪಾಷಾ ಮತ್ತೆ ತಮ್ಮ ಸಹಚರರನ್ನು ಕರೆ ತಂದು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಇಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ತಕ್ಷಣ ಸ್ಥಳೀಯರು ಮಕ್ಸೂದ್ ಅಹ್ಮದ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಕ್ಸೂದ್ ಮೃತಪಟ್ಟಿದ್ದಾನೆ.

    ಈ ಹಿಂದೆ ಆರೋಪಿಗಳು ಹಣಕಾಸಿನ ವಿಚಾರವಾಗಿ ಮಾಕ್ಸೂದ್ ಜೊತೆ ಜಗಳ ಮಾಡಿಕೊಂಡಿದ್ದರು. ಆದರೆ ಭಾನುವಾರ ನೀರು ಹಿಡಿಯೋ ವಿಚಾರವಾಗಿ ಜಗಳವಾಡಿ ಕೊಲೆ ಮಾಡಿದ್ದಾರೆ.

    ಸದ್ಯ ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

    ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

    ಹೈದರಾಬಾದ್: ಪ್ರೀತಿ ನಿರಾಕರಿಸಿದಕ್ಕೆ ಯುವಕನೊಬ್ಬ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅತ್ಮಕುರ್ ಮಂದಲ್‍ನಲ್ಲಿ ನಡೆದಿದೆ.

    ಕಿರಣ್ ಕುಮಾರ್ ಗವಡ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಿರಣ್ ಕುಮಾರ್ ಮೂಲತಃ ಅರೇಪಲ್ಲಿ ಜಿಲ್ಲೆಯವನಾಗಿದ್ದು, ಹೈದರಾಬಾದ್‍ನ ಮೆದಿಪಟ್ನಂನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

    ಕಿರಣ್ ತನ್ನದೇ ಗ್ರಾಮದ ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಯುವತಿ ಕಿರಣ್ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಖಿನ್ನತೆಕ್ಕೊಳಗಾದ ಕಿರಣ್ ತನ್ನ ಸಾವಿಗೆ ಕಾರಣವನ್ನು ಡೆತ್‍ನೋಟ್‍ನಲ್ಲಿ ಬರೆದಿದ್ದ. ಅಲ್ಲದೆ ಆಡಿಯೋವನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಹಾಗೂ ವಾಟ್ಸಾಪ್ ಗ್ರೂಪಿನಲ್ಲಿ ಕಳುಹಿಸಿದ್ದನು.

    ಕಿರಣ್ ಬೆಳಗಿನ ಜಾವ ಸುಮಾರು 2.25ಕ್ಕೆ ಶ್ರೀರಾಮನಗರ ರೈಲ್ವೆ ಸ್ಟೇಷನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಆತನ ಮೃತದೇಹ ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಿರಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

    ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

    ಕಾರವಾರ: ಅತಿವೇಗದ ಚಾಲನೆಯಿಂದ ಕಾರು ಪಲ್ಟಿಯಾಗಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟು, ಮೂರು ವಿದ್ಯಾರ್ಥಿಗಳಿಗೆ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಶಮ್ಮಾಸ್(19) ಅಪಘಾತದಲ್ಲಿ ಮೃತ ವಿದ್ಯಾರ್ಥಿ. ಶಮ್ಮಾಸ್ ಭಟ್ಕಳ ಪಟ್ಟಣದ ಜಾಮೀಯಾ ಸ್ಟ್ರೀಟ್ ನಿವಾಸಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅಪಘಾತದ ನಂತರ ಪರೀಕ್ಷೆಯನ್ನು ಬರೆಯಲು ತೆರಳಿದ್ದಾರೆ.

    ಮದರಸಾದಲ್ಲಿ ಓದುತಿದ್ದ ವಿದ್ಯಾರ್ಥಿಗಳು ಭಟ್ಕಳದಿಂದ ಕಾರವಾರದ ಕಡೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯಲು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿ ಕಾರು ಚಲಾಯಿಸಿ ನಿಯಂತ್ರಿಸಲಾಗದೇ ಪಲ್ಟಿ ಹೊಡೆದಿದೆ. ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೂಡ್ಲಿಗಿಯಲ್ಲಿ ಜೀವಂತವಾಗಿದೆ ಅನಿಷ್ಠ ಪದ್ಧತಿ- ವಿಡಿಯೋ ಮಾಡಿದ್ದಕ್ಕೆ ಯುವಕನಿಗೆ ಥಳಿತ!

    ಕೂಡ್ಲಿಗಿಯಲ್ಲಿ ಜೀವಂತವಾಗಿದೆ ಅನಿಷ್ಠ ಪದ್ಧತಿ- ವಿಡಿಯೋ ಮಾಡಿದ್ದಕ್ಕೆ ಯುವಕನಿಗೆ ಥಳಿತ!

    ಬಳ್ಳಾರಿ: 21ನೇ ಶತಮಾನಕ್ಕೆ ಕಾಲಿಟ್ಟರೂ ಇಂದಿಗೂ ಅನಿಷ್ಠ ಪದ್ಧತಿಗಳು ನಿಂತಿಲ್ಲ. ಇದಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಜಾತ್ರೆಯ ಆಚರಣೆಯೇ ಸಾಕ್ಷಿಯಾಗಿದೆ. ಈ ವಿಶಿಷ್ಟ ಆಚರಣೆಯನ್ನು ಯುವಕನೊಬ್ಬ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಕ್ಕೆ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ.

    ಕೂಡ್ಲಿಗಿ ತಾಲೂಕಿನ ಓಬಳೇಶ ಶೆಟ್ಟಿಹಳ್ಳಿ ಗ್ರಾಮದಲ್ಲಿ ದೇವಿಯ ಜಾತ್ರೆಯಲ್ಲಿ ಜನರು ಜೀವಂತ ಮೇಕೆಯ ರಕ್ತಹೀರುವ ಪದ್ಧತಿ. ಈ ಆಚರಣೆ ಈಗಲೂ ಅಲ್ಲಿ ಕಂಡುಬರುತ್ತಿದೆ. ಗಾವು ಜಿಗಿಯುವ ಮೂಢಪದ್ಧತಿ ಇನ್ನೂ ಜೀವಂತವಾಗಿರುವುದಕ್ಕೆ ಇದೇ ಸಾಕ್ಷಿಯಾಗಿದೆ.

    ಊರು ಮಾರಮ್ಮ ಜಾತ್ರೆಯಲ್ಲಿ ಈ ರೀತಿಯಾಗಿ ಜೀವಂತ ಮೇಕೆಯ ರಕ್ತ ಹೀರುವ ನರಮಾನವರ ಅನಿಷ್ಠ ಪದ್ಧತಿ ಬಗ್ಗೆ ಗ್ರಾಮದ ಯುವಕ ವಿಡಿಯೋ ತಗೆದಿದ್ದಕ್ಕೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಡ್ಡರ ಹನುಮಂತಪ್ಪ ಎನ್ನುವ ಯುವಕ ಅನಿಷ್ಠ ಪದ್ಧತಿ ಬಗ್ಗೆ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಯುವಕ ತ್ರೀವವಾಗಿ ಅಸ್ವಸ್ಥಗೊಂಡಿದ್ದಾನೆ.

    ಸದ್ಯ ಗಾಯಾಳು ಯುವಕನನ್ನು ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಖಾನಾ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿದ್ಯಾರ್ಥಿಗಳ ಬಂಧನ

    ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿದ್ಯಾರ್ಥಿಗಳ ಬಂಧನ

    ಅಹಮದಾಬಾದ್: ವಿಶ್ವದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಗುಜರಾತ್‍ನ ಸೂರತ್ ಮತ್ತು ರಾಜ್‍ಕೋಟ್‍ನಲ್ಲಿ ನಿಷೇಧಿತ ಪಬ್‍ಜಿ ಗೇಮ್ ಆಡುತ್ತಿದ್ದ ಕಾರಣ ಯುವಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಪಬ್‍ಜಿ ಗೇಮ್ ಯುವ ಜನಾಂಗದ ನಡವಳಿಕೆ, ಭಾಷೆ ಸೇರಿದಂತೆ ಹಲವು ಅಂಶಗಳ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿರುವ ಕಾರಣ ಗೇಮ್ ಆಡುವುದನ್ನು ಒಂದು ವಾರದ ಹಿಂದೆಯೇ ನಿಷೇಧ ಮಾಡಲಾಗಿತ್ತು.

    ಬಂಧಿತ ಯುವಕರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ಎಸ್‍ಪಿ ವಿಎಸ್ ವಾಂಜರ ತಿಳಿಸಿದ್ದಾರೆ. ಗೇಮ್ ಆಡುವುದಕ್ಕೆ ಅಡಿಕ್ಟ್ ಆಗಿದ್ದ ಯುವಕರು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದ ಅರಿವು ಕೂಡ ಅವರಿಗೆ ಇರಲಿಲ್ಲ ಎಂದು ತಿಳಿಸಿದ್ದಾರೆ.

    ಜಗತ್ತಿನಾದ್ಯಂತ ಸುಮಾರು 100 ಮಿಲಿಯನ್‍ಗೂ ಹೆಚ್ಚು ಡೌನ್‍ಲೋಡ್ ಆಗಿರುವ ಪಬ್‍ಜಿ ಆಟವನ್ನು ದೇಶದಲ್ಲಿ ಗುಜರಾತ್ ರಾಜ್ಯ ಮಾತ್ರ ನಿಷೇಧ ಮಾಡಿದೆ. ಇದೇ ವೇಳೆ ದೇಶದ ಇತರೇ ರಾಜ್ಯಗಳಲ್ಲೂ ಗೇಮ್‍ಗೆ ದಾಸರಾಗಿರುವ ಯುವ ಜನಾಂಗದ ಬಗ್ಗೆ ಹಲವರಿಂದ ಕಾಳಜಿ ವ್ಯಕ್ತವಾಗುತ್ತಿದೆ.

    ಗೇಮ್ ಆಡುವವರಲ್ಲಿ ಹಿಂಸಾಚಾರ ಪ್ರಚೋದನೆ ಹಾಗೂ ಶಿಕ್ಷಣದಿಂದ ದೂರವಾಗುವ ಪ್ರವೃತ್ತಿ ಹೆಚ್ಚಾಗುತ್ತದೆ ಎಂದು ಪೋಷಕರು ಹಾಗೂ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಗೋವಾ ಸಚಿವರೊಬ್ಬರು, ಪಬ್‍ಜಿ ಗೇಮ್ ಪ್ರತಿ ಮನೆಯಲ್ಲೂ ಭೂತವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತಾಯಿಯೊಬ್ಬರು ತಮ್ಮ ಮಗನ ಬಗ್ಗೆ ತಿಳಿಸಿ ಪಬ್‍ಜಿ ಗೇಮ್ ವಿಚಾರವನ್ನು ಹಂಚಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

    ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

    ವಾಷಿಂಗ್ಟನ್ : ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬನ ಸೆಲ್ಫಿ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.

    ಕೆಲವೊಂದು ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸಂಚರಿಸುತ್ತವೆ. ಇದೀಗ ಅಂತಹುದೇ ವಿಡಿಯೋ ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ. ಅಮೆರಿಕದ ಯುವಕನೊಬ್ಬ ಶೋ ರೂಮ್ ನಲ್ಲಿ ಮಾಡಿರುವ ಸೆಲ್ಫಿ ವಿಡಿಯೋ ನೋಡುಗರನ್ನು ಒಂದು ಕ್ಷಣ ಚಕಿತಗೊಳಿಸುತ್ತದೆ.

    ಶಾನ್ ಎಂಬ ಯುವಕ ತನ್ನ ಸೋದರನ ಜೊತೆಗೆ ಬಟ್ಟೆ ಖರೀದಿಗಾಗಿ ಶೋ ರೂಮಿಗೆ ತೆರಳಿದ್ದಾನೆ. ಡ್ರೆಸ್ ಟ್ರಯಲ್ ರೂಮ್ ನಲ್ಲಿ ಬಹಳಷ್ಟು ಕನ್ನಡಿಗಳನ್ನು ನೋಡಿದ ಕೂಡಲೇ ಈ ವಿಡಿಯೋ ಮಾಡಿದ್ದಾನೆ. ಕನ್ನಡಿಯಲ್ಲಿ ಆತನ ಪ್ರತಿಬಿಂಬ ಕಾಣುತ್ತಿರುತ್ತದೆ. ವಿಡಿಯೋ ಜೂಮ್ ಮಾಡುತ್ತಾ ಹೋದಂತೆ ಮತ್ತೊಮ್ಮೆ ಶಾನ್ ಕಾಣಿಸಿಕೊಳ್ಳುತ್ತಾನೆ. ಹೀಗೆ ವಿಡಿಯೋ ಜೂಮ್ ಆಗುತ್ತಾ ಹೋದಂತೆ ಕ್ಷಣಾರ್ಧದಲ್ಲಿ ಶಾನ್ ಅಂಗಡಿ ಮಧ್ಯೆ ಕಾಣಿಸಿಕೊಂಡು ನಗುತ್ತಾನೆ.

    ನೆಟ್ಟಿಗರು ಇದೊಂದು ಎಡಿಟ್ ವಿಡಿಯೋ ಎಂದ್ರೆ, ಕೆಲವರು ಈ ರೀತಿ ಮಾಡಲು ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಬ್ಬರು ಅವಳಿ ಸೋದರರು ಸೇರಿ ಸೆಲ್ಫಿ ವಿಡಿಯೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪತ್ರಿಕೆ ಜೊತೆ ಮಾತನಾಡಿರುವ ಶಾನ್, ಯಾವುದೇ ಎಡಿಟಿಂಗ್ ವಿಡಿಯೋ ಅಲ್ಲ. ಅಲ್ಲಿಯ ಕನ್ನಡಿಗಳಿಂದ ಈ ರೀತಿ ಮಾಡಲು ಸಾಧ್ಯವಾಯ್ತು ಎಂದು ಸ್ಪಷ್ಟಪಡಿಸಿದ್ದಾನೆ.

    https://www.instagram.com/p/BscEVsbhm-j/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇವಣ್ಣ ವಿರುದ್ಧ ಹಾಡಿನ ಮೂಲಕ ಆಕ್ರೋಶ ಹೊರಹಾಕಿದ ಯುವಕ

    ರೇವಣ್ಣ ವಿರುದ್ಧ ಹಾಡಿನ ಮೂಲಕ ಆಕ್ರೋಶ ಹೊರಹಾಕಿದ ಯುವಕ

    ಮಂಡ್ಯ: ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶಿಸುವ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿಕೆಗೆ ಹಾಡಿನ ಮೂಲಕ ಮಂಡ್ಯದ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದು, ಈ ವಿಡಿಯೋ ಸದ್ಯ ಎಲ್ಲಡೆ ವೈರಲ್ ಆಗಿದೆ.

    ಉಮೇಶ್‍ಗೌಡ  ಎಂಬವರ ಫೇಸ್ ಬುಕ್ ಪೇಜ್‍ನಿಂದ ರೇವಣ್ಣ ಅವರ ಕುರಿತು ಹಾಡಿದ ಹಾಡು ವೈರಲ್ ಆಗುತ್ತಿದೆ. ಕನ್ನಡ ಸಿನಿಮಾವೊಂದರ ಹಾಡೊಂದನ್ನು ರಿಮಿಕ್ಸ್ ಮಾಡಿ ಸಚಿವ ರೇವಣ್ಣನ ವಿರುದ್ಧ ವ್ಯಂಗ್ಯ ಮಾಡಲಾಗಿದೆ. ಬಿಸ್ಕಟ್ ರೇವಣ್ಣನಿಗೆ ಹಾಡಿನ ಮಂಗಳಾರತಿ, ಶೇರ್ ಮಾಡಲು ಮರೆಯದಿರಿ ಅಂತ ಬರೆದು ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಪೋಸ್ಟ್ ಮಾಡಿದ್ದಾನೆ. ಈಗ ಎಲ್ಲೆಡೆ ಹಾಡಿನ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ:ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ರೇವಣ್ಣ ರೇವಣ್ಣ ಏನಣ್ಣ ಏನಣ್ಣ, ಏನಂತ ಮಾತಾಡ್ತೀಯ ಎಂದು ಹಾಡು ಶುರುವಾಗುತ್ತೆ. ಬಳಿಕ ವಿಧವಿಧವಾಗಿ ರೇವಣ್ಣ ಅವರನ್ನು ಈ ಹಾಡಿನಲ್ಲಿ ಯುವಕ ಟೀಕಿಸಿದ್ದಾನೆ. ಅಲ್ಲದೆ ಸುಮಕ್ಕನ ಸ್ಥಿತಿಯನ್ನು ಲೇವಡಿ ಮಾಡಿದ್ಯಣ್ಣ, ನಿಖಿಲ್ ಗೆಲ್ಲೋದಿಕ್ಕೆ ಅಡ್ಡಗಾಲು ನೀನೆಯಣ್ಣ ಎಂದು ಹಾಡಿನ ಮೂಲಕವೇ ಟಾಂಗ್ ನೀಡಿದ್ದಾನೆ. ಸುಮಾರು 1 ನಿಮಿಷ 40 ಸೆಕೆಂಡ್ ಇರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv