Tag: youth

  • ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರು!

    ಯುವಕನ ಮರ್ಮಾಂಗ ಕತ್ತರಿಸಿದ ಮಂಗಳಮುಖಿಯರು!

    ಲಕ್ನೋ: ಮೂವರು ಮಂಗಳಮುಖಿಯರು ಸೇರಿ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಶಾಹಜಹಾನ್‍ಪುರದಲ್ಲಿ ನಡೆದಿದೆ.

    20 ವರ್ಷದ ಯುವಕ ಮದುವೆ ಮನೆಗೆ ಹೋಗಿ ಅಲ್ಲಿ ಡ್ಯಾನ್ಸ್ ಮಾಡಿದ್ದನು. ಇದು ಮಂಗಳಮುಖಿಯರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಈ ಹಿಂದೆ ಯುವಕನನ್ನು ಮಂಗಳಮುಖಿಯಂತೆ ಮಾಡಲು ಮೂವರು ಪ್ರಯತ್ನಿಸಿದ್ದರು. ಆ ಬಳಿಕ ಯುವಕ ಮಂಗಳಮುಖಿಯರಿಂದ ದೂರವಾಗಿದ್ದನು.

    ಈ ಘಟನೆ ನಡೆಯುವ ಹಿಂದಿನ ದಿನ ಮಂಗಳಮುಖಿಯರು ಫರೂಕಬಾದ್‍ನಲ್ಲಿ ಇದ್ದ ಯುವಕನ ಮನೆಗೆ ಹೋಗಿದ್ದಾರೆ. ಮದುವೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಂಗಳಮುಖಿಯರು ಯುವಕನನ್ನು ಕೊಠಡಿವೊಂದರಲ್ಲಿ ಕೂಡಿ ಹಾಕಿದ್ದಾರೆ. ಕೂಡಿ ಹಾಕಿದಲ್ಲದೇ ಯುವಕನ ಮೇಲೆ ಹಲ್ಲೆ ನಡೆಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ.

    ಮಂಗಳಮುಖಿಯರು ಯುವಕನನ್ನು 10 ದಿನ ಕೊಠಡಿಯಲ್ಲಿ ಕೂಡಿ ಹಾಕಿ, ರೂಮಿನ ಹೊರಗೆ ಮಂಗಳಮುಖಿಯರು ಕಾದು ನಿಂತಿದ್ದರು. ಸಮಯ ಸಿಕ್ಕಿದ ತಕ್ಷಣ ಯುವಕ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಯುವಕ ರಾತ್ರಿ ತನ್ನ ಮನೆಗೆ ತಲುಪಿ ಪೋಷಕರ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.

    ಯುವಕ ದೂರು ನೀಡಿದ ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಿದ್ದರು. ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಹುಟ್ಟುಹಬ್ಬ ಆಚರಿಸಲು ಬಂದ ನಾಲ್ವರೂ ಅಪಘಾತಕ್ಕೀಡಾದ್ರು!

    ಹುಟ್ಟುಹಬ್ಬ ಆಚರಿಸಲು ಬಂದ ನಾಲ್ವರೂ ಅಪಘಾತಕ್ಕೀಡಾದ್ರು!

    ಬೀದರ್: ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮಂಗಲಗಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.

    ಸಚಿನ್ ಹಣಮಂತ, ಅರುಣ್ ಕುಮಾರ್ ಕಾಶಿನಾಥ, ಗುರುನಾಥ ವಿಠಲ, ರಘುವೀರ ಭೀಮಶ್ಯಾ ಮೃತಪಟ್ಟವರಾಗಿದ್ದು, ಎಲ್ಲರೂ 18-19 ವರ್ಷದ ಯುವಕರಾಗಿದ್ದಾರೆ ಎನ್ನಲಾಗಿದೆ.

    ತಡ ರಾತ್ರಿ ರಸ್ತೆಯಲ್ಲಿ ಸಚಿನ್ ಹುಟ್ಟುಹಬ್ಬ ಆಚರಿಸಲು ಹೆದ್ದಾರಿ ಪಕ್ಕ ಬಂದಿದ್ದಾರೆ. ಈ ವೇಳೆ ವೇಗವಾಗಿ ಬಂದ ವಾಹನ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಟ್ಟುಹಬ್ಬ ಆಚರಿಸಲು ಬಂದವರು ಹೆಣವಾದರು.

    ಈ ಕುರಿತು ಮನ್ನಾಖೇಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಪ್ರೇಯಸಿ ಜೊತೆ ಓಡಿ ಹೋಗಲು ಸಹಾಯ- ಯುವಕನಿಗೆ ಮಾಜಿ ಮೇಯರ್‌ನಿಂದ ಬಸ್ಕಿ!

    ಪ್ರೇಯಸಿ ಜೊತೆ ಓಡಿ ಹೋಗಲು ಸಹಾಯ- ಯುವಕನಿಗೆ ಮಾಜಿ ಮೇಯರ್‌ನಿಂದ ಬಸ್ಕಿ!

    ನವದೆಹಲಿ: ಪ್ರೇಯಸಿ ಜೊತೆ ಓಡಿ ಹೋಗಲು ಯುವಕನಿಗೆ ಮತ್ತೊಬ್ಬ ಯುವಕ ಸಹಾಯ ಮಾಡಿದಕ್ಕೆ ಮಾಜಿ ಮೇಯರ್ ಯುವಕನಿಗೆ ಸಾರ್ವಜನಿಕವಾಗಿ ಬಸ್ಕಿ ಹೊಡೆಸಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಮೊಹಮದ್ ಹನೀಶ್ ಸಹಾಯ ಮಾಡಿದ ಯುವಕ. ಯುವಕನೊಬ್ಬನಿಗೆ ಯುವತಿ ಜೊತೆ ಪರಾರಿ ಆಗಲು ಸಹಾಯ ಮಾಡಿದಕ್ಕೆ ಮಾಜಿ ಮೇಯರ್ ಶಕುಂತಲಾ ಭರ್ತಿ ಹನೀಶ್‍ನನ್ನು ಸಾರ್ವಜನಿಕ ಸ್ಥಳದಲ್ಲಿ ಬಸ್ಕಿ ಹೊಡೆಸಿದ್ದಾರೆ. ಬಸ್ಕಿ ಹೊಡೆಸುವ ಮೊದಲು ಹನೀಶ್ ಕೈಗೆ ಕಟ್ಟಿಕೊಂಡಿದ್ದ ದಾರವನ್ನು ತೆಗೆಸಿದ್ದಾರೆ.

    ಈ ಘಟನೆ ಮೇ 12ರಂದು ನಡೆದಿದ್ದು, ಗುರುವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋ ನೋಡಿದ ಜನರು ಮಾಜಿ ಮೇಯರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಯುವತಿ ಅನ್ಯ ಧರ್ಮದ ಯುವಕನ ಜೊತೆ ಓಡಿ ಹೋಗಲು ಹನೀಶ್ ಸಹಾಯ ಮಾಡಿದ್ದನು. ಹೀಗಾಗಿ ಆತನಿಗೆ ಬಸ್ಕಿ ಹೊಡೆಸಿದ್ದಾರೆ. ಸದ್ಯ ಯುವತಿಯನ್ನು ಕವರ್ಸಿ ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಯುವಕರು ಭಾಗಿಯಾಗಿದ್ದರು. ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಹನೀಶ್‍ನನ್ನು ಹಿಡಿದಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

  • ಕುಡಿದ ಮತ್ತಲ್ಲಿ ಮಹಿಳಾ ಭಕ್ತರನ್ನು ಚುಡಾಯಿಸಿದ ಬೆಂಗ್ಳೂರು ಯುವಕರಿಗೆ ಧರ್ಮದೇಟು

    ಕುಡಿದ ಮತ್ತಲ್ಲಿ ಮಹಿಳಾ ಭಕ್ತರನ್ನು ಚುಡಾಯಿಸಿದ ಬೆಂಗ್ಳೂರು ಯುವಕರಿಗೆ ಧರ್ಮದೇಟು

    ಮೈಸೂರು: ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.

    ಚಿಕ್ಕಮ್ಮ ಚಿಕ್ಕದೇವಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಯುವಕರು ಬೆಟ್ಟದ ಸಮೀಪವೇ ಕಾರು ನಿಲ್ಲಿಸಿ ಕಾರಿನೊಳಗೆ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ದೇವಸ್ಥಾನಕ್ಕೆ ಬರುತ್ತಿದ್ದ ಮಹಿಳಾ ಭಕ್ತರನ್ನು ಅವಾಚ್ಯ ಪದಗಳಿಂದ ಚುಡಾಯಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

    ಕಾರಿನಲ್ಲಿ ಸುಮಾರು ನಾಲ್ವರು ಯುವಕರಿದ್ದರು ಎಂದು ತಿಳಿದು ಬಂದಿದೆ. ಇದನ್ನು ನೋಡಿದ ಸ್ಥಳೀಯರು ರೊಚ್ಚಿಗೆದ್ದು ಏಕಾಏಕಿ ಕಾರಿನಿಂದ ಹೊರಗಡೆ ಎಳೆದು ಥಳಿಸಿದ್ದಾರೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕರು ಕಾರಿನ ಬಾಗಿಲು ಹಾಕಿಕೊಂಡಿದ್ದರಿಂದ ಸ್ಥಳೀಯರು ಕಾರನ್ನು ಜಖಂಗೊಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಯುವಕರು ಅವರಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಗೆಳತಿಯನ್ನು ಮೆಚ್ಚಿಸಲು ಸ್ಟಂಟ್ ಮಾಡಲು ಹೋಗಿ ಯುವಕ ನೇಣಿಗೆ ಶರಣು

    ಗೆಳತಿಯನ್ನು ಮೆಚ್ಚಿಸಲು ಸ್ಟಂಟ್ ಮಾಡಲು ಹೋಗಿ ಯುವಕ ನೇಣಿಗೆ ಶರಣು

    – ವಾಟ್ಸಪ್ ವಿಡಿಯೋ ಕಾಲ್‍ನಲ್ಲಿ ದೃಶ್ಯ ಸೆರೆ

    ಭೋಪಾಲ್: ಗೆಳತಿಯನ್ನು ಮೆಚ್ಚಿಸುವುದಕ್ಕಾಗಿ ಸ್ಟಂಟ್ ಮಾಡಲು ಹೋಗಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೇಣು ಹಾಕಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ದಾಟಿಯಾ ಜಿಲ್ಲೆಯ ಹಿತೇಶ್ ಕುಶ್ವಾಹ (21) ಆಕಸ್ಮಿಕವಾಗಿ ನೇಣು ಹಾಕಿಕೊಂಡ ಯುವಕ. ಮೃತ ಹಿತೇಶ್ ಪುರಸಭೆಯ ಕೌನ್ಸಿಲರ್ ಮಾನ್ಸಿಂಗ್ ಕುಶ್ವಾಹ ಅವರ ಸೋದರಳಿಯನಾಗಿದ್ದು ಈ ಘಟನೆಯು ಸೋಮವಾರ ನಡೆದಿದೆ.

    ಆಗಿದ್ದೇನು?:
    ಹಿತೇಶ್ ತನ್ನ ಗೆಳತಿಯನ್ನು ಮೆಚ್ಚಿಸಲು ನೇಣು ಹಾಕಿಕೊಳ್ಳುವುದು ಹೇಗೆ ಎಂದು ವಾಟ್ಸಪ್ ಮೂಲಕ ಸೋಮವಾರ ಹೇಳುತ್ತಿದ್ದ. ಒಂದಿಷ್ಟು ಬಟ್ಟೆಗಳನ್ನು ಕಟ್ಟಿದ್ದಾನೆ. ಬಳಿಕ ಬಟ್ಟೆಯನ್ನು ಮೇಲೆ ಕಟ್ಟಿ ಬಕೆಟ್ ಮೇಲೆ ನಿಂತು ಕೊರಳಿಗೆ ನೇಣು ಹಾಕಿಕೊಂಡಿದ್ದಾನೆ. ಈ ವೇಳೆ ಬಕೆಟ್ ಜಾರಿದ್ದು, ಹಿತೇಶ್ ಕೊರಳಿಗೆ ಹಾಕಿಕೊಂಡಿದ್ದ ಗಂಟು ಬಿಗಿದುಕೊಂಡಿದೆ. ಇದರಿಂದಾಗಿ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

    ಹಿತೇಶ್ ಬೆಳಗ್ಗೆ ರೂಮ್‍ನಿಂದ ಹೊರಗೆ ಬಾರದಿದ್ದಾಗ, ಕುಟುಂಬಸ್ಥರು ಬಾಗಿಲು ಬಡಿದಿದ್ದಾರೆ. ಹಿತೇಶ್ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಕಿಟಕಿಯ ಬಾಗಿಲು ತೆರೆ ನೋಡಿದ್ದಾರೆ. ಆಗ ಹಿತೇಶ್‍ನ ಮೃತದೇಹವನ್ನು ಕಾಣಿಸಿದ್ದು, ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮೊಬೈಲ್ ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್‍ನಲ್ಲಿ ಹಿತೇಶ್ ನೇಣು ಹಾಕಿಕೊಳ್ಳುವ ದೃಶ್ಯ ಸೆರೆಯಾಗಿದೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ – ಕಾಮುಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

    ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ – ಕಾಮುಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

    – ಬಿಡಿಸಲು ಬಂದ ತಂದೆಯ ಮೇಲೆ ಹಲ್ಲೆ

    ಗದಗ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನಿಸಿದ ಕಾಮುಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಸಿದ ಘಟನೆ ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 22 ವರ್ಷದ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಷಯ ತಿಳಿದ ಸಾರ್ವಜನಿಕರು ಕಾಮುಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಕಾಮುಕನ ತಂದೆ ಆತನನ್ನು ಬಿಡಿಸಲು ಬಂದಿದ್ದಾರೆ.

    ಸಾರ್ವಜನಿಕರು ಕಾಮುಕನನ್ನು ಬಿಡಿಸಲು ಬಂದ ತಂದೆಗೂ ಗೂಸಾ ಕೊಟ್ಟಿದ್ದಾರೆ. ಬಳಿಕ ಜನರು ಕಾಮುಕನ ತಂದೆಗೆ ರಸ್ತೆಯಲ್ಲಿ ಥಳಿಸುತ್ತ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜನರ ಥಳಿತಕ್ಕೆ ಆರೋಪಿ ತಂದೆಯ ಮುಖ, ತಲೆ ಭಾಗಕ್ಕೆ ಗಾಯವಾಗಿದ್ದು, ಗದಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಿಡಿಸಲು ಹೋದ ತಂದೆಯನ್ನು ಜನರು ಥಳಿಸುತ್ತಿದ್ದ ವೇಳೆ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಲು ಪೊಲೀಸರು ಮಧ್ಯ ಪ್ರವೇಶಿಸಿ ಲಘು ಲಾಠಿ ಪ್ರಹಾರ ಮಾಡಿದ್ದಾರೆ.

  • ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

    ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

    ಡೆಹ್ರಾಡೂನ್: 23 ವರ್ಷದ ದಲಿತ ಯುವಕನೊಬ್ಬ ಮೇಲ್ವರ್ಗದ ಜನರ ಮುಂದೆ ಊಟ ಮಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಮಾನವೀಯ ಘಟನೆಯೊಂದು ಉತ್ತರಾಖಂಡ್ ನ ಥೆರಿ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ಜಿತೇಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಏಪ್ರಿಲ್ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜೀತೆಂದ್ರ ಭಾನುವಾರ ಥೆರಿ ಜಿಲ್ಲೆಯ ಶ್ರಿಕೋಟ್ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೇಲ್ವರ್ಗದವರ ಮುಂದೆ ಕುರ್ಚಿಯಲ್ಲಿ ಕುಳಿತುಕೊಂಡು ತನ್ನ ಪಾಡಿಗೆ ತಾನು ಊಟ ಮಾಡಿಕೊಂಡಿದ್ದನು. ಈ ವೇಳೆ ಏಳು ಮಂದಿ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ 7 ಮಂದಿ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಜಿತೇಂದ್ರ ಮೇಲ್ವರ್ಗದ ಜನರ ಮುಂದೆ ಕುಳಿತು ಊಟ ಮಾಡುತ್ತಿದ್ದುದರಿಂದ ತಾಳ್ಮೆ ಕಳೆದುಕೊಂಡು ಅವರು ಆತನಿಗೆ ಥಳಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಹಿರಿಯ ಪೊಲೀಸ್ ಅಧಿಕಾರಿ ಉತ್ತಮ್ ಸಿಂಗ್ ಜಿಮ್ ವಾಲಾ ಹೇಳಿದ್ದಾರೆ.

    ಯುವಕನ ಮೇಲೆ ಹಲ್ಲೆ ನಡೆದ ಪರಿಣಾಮ ಗಂಭೀರ ಗಾಯಗೊಂಡು ಡೆಹ್ರಾಡೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ 9 ದಿನಗಳ ನಂತರ ಆತ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅವರು ವಿವರಿಸಿದ್ದಾರೆ.

    ಘಟನೆ ಸಂಬಂಧ ಮೃತನ ತಂಗಿ ನೀಡಿದ ದೂರಿನಂತೆ ಗಜೇಂದ್ರ ಸಿಂಗ್, ಸೊಬಾನ್ ಸಿಂಗ್, ಕುಶಲ್ ಸಿಂಗ್, ಗಬ್ಬರ್ ಸಿಂಗ್, ಗಂಭೀರ್ ಸಿಂಗ್, ಹರ್ಬಿರ್ ಸಿಂಗ್ ಹಾಗೂ ಹುಕುಮ್ ಸಿಂಗ್ ಎಂಬ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವು

    ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವು

    ಮಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಸಿದ್ಧವನ ಬಳಿ ನಡೆದಿದೆ.

    ಉಜಿರೆ ನಿನ್ನಿಕಲ್ಲು ನಿವಾಸಿ ವಿಘ್ನೇಶ್ (21) ಹಾಗೂ ಮಡಂತ್ಯಾರುನ ಕ್ಷಿತಿಜ್ ಜೈನ್ (24) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಸುಶಾಂತ್ ಮತ್ತು ಹರ್ಷಿತ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ವಿಘ್ನೇಶ್ ಹಾಗೂ ಸ್ನೇಹಿತರಾದ ಕ್ಷಿತಿಜ್ ಜೈನ್, ಸುಶಾಂತ್ ಹಾಗೂ ಹರ್ಷಿತ್ ಧರ್ಮಸ್ಥಳದಿಂದ ಉಜಿರೆ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಸಿದ್ಧವನದ ಬಳಿ ಮರವೊಂದು ಕಾರಿನ ಹಿಂಭಾಗದ ಮೇಲೆ ಬಿದ್ದಿದೆ. ಪರಿಣಾಮ ಹಿಂದಿನ ಸೀಟ್‍ನಲ್ಲಿ ಕುಳಿತಿದ್ದ ವಿಘ್ನೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ವಿಘ್ನೇಶ್ ಪಕ್ಕದಲ್ಲಿ ಕುಳಿತಿದ್ದ ಕ್ಷಿತಿಜ್  ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುತ್ತಿರುವಂತೆ ಆಂಬುಲೆನ್ಸ್ ನಲ್ಲಿ ಸಾವನ್ನಪ್ಪಿದ್ದಾರೆ.

    ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮುಂದೆ ಕುಳಿತಿದ್ದ ಸುಶಾಂತ್ ಹಾಗೂ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗಾಯಾಳುಗಳನ್ನು ಹಾಗೂ ಮೃತರನ್ನು ಆಸ್ಪತ್ರೆ ಸಾಗಿಸಲು ಸ್ಥಳೀಯರು, ಪ್ರಯಾಣಿಕರು ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಅವಘಡವು ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ್ದರಿಂದ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉಜಿರೆ ಕಾಲೇಜು ಹಾಗೂ ನೀರ ಚಿಲುಮೆಯವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಸಾರ್ವಜನಿಕರು ಸಹಕರಿಸಿದರು.

  • ಬೈಕಿನ ಟ್ಯಾಂಕ್ ಮೇಲೆ ಕುಳಿತು ಪ್ರಿಯಕರನನ್ನು ತಬ್ಬಿಕೊಂಡ ಯುವತಿ: ವಿಡಿಯೋ

    ಬೈಕಿನ ಟ್ಯಾಂಕ್ ಮೇಲೆ ಕುಳಿತು ಪ್ರಿಯಕರನನ್ನು ತಬ್ಬಿಕೊಂಡ ಯುವತಿ: ವಿಡಿಯೋ

    ನವದೆಹಲಿ: ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕಿನ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನನ್ನು ತಬ್ಬಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಈ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದೆಹಲಿಯ ಬ್ಯುಸಿ ರಸ್ತೆ ಆಗಿರುವ ರಜೌರಿ ಗಾರ್ಡನ್‍ನಲ್ಲಿ ಈ ಜೋಡಿ ಬೈಕಿನಲ್ಲಿ ತೆರಳುತಿತ್ತು. ಈ ವೇಳೆ ಯುವತಿ ಚಲಿಸುತ್ತಿದ್ದ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನನ್ನು ತಬ್ಬಿಕೊಂಡಿದ್ದಾಳೆ. ಈ ವಿಡಿಯೋವನ್ನು ಹಿಂದೆ ಬರುತ್ತಿದ್ದ ವಾಹನದವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಎಚ್‍ಜಿಎಸ್ ದಾಲಿವಾಲ್ ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೋಟಾರ್ ವೆಹಿಕಲ್ ಕಾಯ್ದೆಯ ಉಲ್ಲಂಘನೆಗಾಗಿ ಹೊಸ ಕಾಯ್ದೆ(ಸೆಕ್ಷನ್) ಬರಬೇಕಾಗಿದೆ. ರಜೌರಿ ಗಾರ್ಡನ್ ಕ್ರಾಸಿಂಗ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಬೈಕ್ ಚಲಾಯಿಸುತ್ತಿದ್ದ ಯುವಕ ಬ್ಯಾಗ್‍ವೊಂದನ್ನು ಹಾಕಿಕೊಂಡಿದ್ದನು. ಯುವತಿ ಬೈಕಿ ಟ್ಯಾಂಕ್ ಮೇಲೆ ಕುಳಿತು ಯುವಕನನ್ನು ತಬ್ಬಿಕೊಂಡಿದ್ದರಿಂದ ಆತನಿಗೆ ಸರಿಯಾಗಿ ಬೈಕ್ ಚಲಾಯಿಸಲು ಆಗಲಿಲ್ಲ. ಅಲ್ಲದೆ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನದವರು ಜೋಡಿಯ ಈ ವರ್ತನೆ ನೋಡಿ ಆಕ್ರೋಶ ಹೊರ ಹಾಕಿದ್ದಾರೆ.

  • ಸಿನಿಮಾ ಸ್ಟೈಲ್‍ನಲ್ಲಿ ಗಜರಾಜನಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ!

    ಸಿನಿಮಾ ಸ್ಟೈಲ್‍ನಲ್ಲಿ ಗಜರಾಜನಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ!

    ಕೋಲಾರ: ರಾಕಿಂಗ್ ಸ್ಟಾರ್ ಯಶ್ ಗಜಕೇಸರಿ ಸಿನಿಮಾದಲ್ಲಿ ಆನೆಗೆ ಮುತ್ತುಕೊಟ್ಟ ಹಾಗೆ ಕಾಡಾನೆಯೊಂದಕ್ಕೆ ಯುವಕನೊಬ್ಬ ಮುತ್ತಿಡಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ಜಿಲ್ಲೆಯ ಮಾಲೂರಿನ ಅರಳೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಹಿಂಡನ್ನು ಹಿಂಬಾಲಿಸಿ ಸಿನಿಮಾ ಸ್ಟೈಲ್ ಆನೆಗೆ ಮುತ್ತು ಕೂಡಲು ಅರಳೇರಿ ಗ್ರಾಮದ ನಿವಾಸಿ ರಾಜು ಹೋಗಿದ್ದಾನೆ. ಹಾಗೆಯೇ ಆನೆಗೆ ಮುತ್ತು ಕೊಡುತ್ತೇನೆ ಎಂದು ಸಾರ್ವಜನಿಕರಿಗೆ ರಾಜು ಸವಾಲು ಕೂಡ ಹಾಕಿದ್ದ. ಆದ್ರೆ ಏನೋ ಮಾಡಲು ಹೋಗಿ ಅದೇನೋ ಆಯ್ತು ಎನ್ನುವ ರೀತಿ ಮುತ್ತು ಕೊಡಲು ಹೋಗಿದ್ದವನಿಗೆ ಆನೆ ದಂತದಿಂದ ತಿವಿದು ತೀವ್ರ ಗಾಯಗೊಳಿಸಿದೆ.

    ಇಂದು ಬೆಳಗ್ಗೆಯಿಂದ ಏಳು ಆನೆಗಳ ಹಿಂಡು ಗ್ರಾಮದ ಬಳಿ ಬೀಡು ಬಿಟ್ಟಿತ್ತು. ಗ್ರಾಮಸ್ಥರು ಈ ಆನೆಗಳ ಹಿಂಡು ಕಂಡು ಆತಂಕಕ್ಕಿಡಾಗಿದ್ದರು. ಆದ್ರೆ ಈ ವೇಳೆ ಆನೆಗೆ ಮುತ್ತು ಕೊಡುತ್ತೇನೆ ರಾಜು ಗ್ರಾಮಸ್ಥರಿಗೆ ಸವಾಲು ಹಾಕಿ ಹೋಗಿದ್ದಾನೆ. “ನೀವೆಲ್ಲ ನಿಂತುಕೊಂಡು ನೋಡ್ತಿದ್ದೀರಿ, ನೋಡಿ ನಾನು ಏನು ಮಾಡ್ತೀನಿ” ಅಂತ ಕಾಡಾನೆ ಹಿಂಡಿನ ಬಳಿ ರಾಜು ತೆರಳಿದ್ದಾನೆ. ಮುತ್ತು ಕೊಡಲು ಬಂದ ರಾಜುಗೆ ಆನೆ ತನ್ನ ವರಸೆಯನ್ನು ತೋರಿಸಿದ್ದು, ತನ್ನ ಬಳಿ ಬಂದಾಗ ದಂತದಿಂದ ಆತನ ತಲೆ ಭಾಗಕ್ಕೆ ತಿವಿದು ಹಲ್ಲೆ ನಡೆಸಿದೆ.

    ಆನೆ ತಿವಿದ ಹಿನ್ನಲೆ ರಾಜು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ರಾಜುನನ್ನು ಕೋಲಾರ ಅಸ್ಪತ್ರೆಗೆ ಗ್ರಾಮಸ್ಥರು ದಾಖಲಿಸಿದ್ದಾರೆ. ಇನ್ನೂ ಕೂಡ ಗ್ರಾಮದ ನೀಲಗಿರಿ ತೋಪಿನಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.