ಬೆಂಗಳೂರು: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ (Bengaluru) ಕೊತ್ತನೂರಿನ ಕೆ.ನಾರಾಯಣಪುರದಲ್ಲಿ (K Narayanapura) ನಡೆದಿದೆ.
ಸುನೀಲ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಾ.7ರಂದು ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಶವಂತಪುರ ನಿವಾಸಿಯಾಗಿದ್ದ ಸುನೀಲ್‌ಗೆ ಡ್ರಗ್ಸ್ ಜೊತೆಗೆ ಹುಡುಗಿಯರ ಶೋಕಿ ಕೂಡ ಇತ್ತು. ತನ್ನ ಚಟಕ್ಕಾಗಿ ಮನೆಯಲ್ಲಿಯೇ ಚಿನ್ನ, ಹಣ ಕಳ್ಳತನ ಮಾಡುತ್ತಿದ್ದ. ಇದನ್ನು ಮನೆಯವರು ಪ್ರಶ್ನಿಸಿದರೇ ಸಾಯೋದಾಗಿ ಹೇಳುತ್ತಿದ್ದ. ಇದನ್ನೂ ಓದಿ: Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ
ನಂತರ ಮನೆಬಿಟ್ಟು ಕೊತ್ತನೂರು ಪಿಜಿ ಸೇರಿದ್ದ ಸುನೀಲ್, ಗ್ಯಾರೇಜ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮಾ.7ರಂದು ರಾತ್ರಿ ಮಾಲೀಕನಿಗೆ ಸಾಯೋದಾಗಿ ಮೆಸೆಜ್ ಮಾಡಿದ್ದ. ಬಳಿಕ ಪಿಜಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರೇಯಸಿ, ಆಕೆಯ ಮಗನನ್ನ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್ (KSRTC Bus) ಚಕ್ರಕ್ಕೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರಿನ (Maddur) ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ತೂಬಿನಕೆರೆ ಗ್ರಾಮದ ಅರುಣ್ (23) ಆತ್ಮಹತ್ಯೆಗೆ ಶರಣಾದ ಯುವಕ. ಬಸ್ ಬೆಂಗಳೂರು -ಮೈಸೂರು ಹೆದ್ದಾರಿಗೆ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಅರುಣ್ ಏಕಾಏಕಿ ಬಸ್ಸಿನ ಹಿಂಬದಿ ಚಕ್ರಕ್ಕೆ ತಲೆಕೊಟ್ಟಿದ್ದಾನೆ. ಬಸ್ಸಿನ ಹಿಂಬದಿ ಚಕ್ರ ಯುವಕನ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಅರುಣ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆ – ಇಂದು ಕರಾವಳಿಗೆ ಬಿಸಿಗಾಳಿ ಎಚ್ಚರಿಕೆ
ಹಾಸನ: ಮದುವೆಯಾಗಲು ಪ್ರಿಯತಮೆ ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಬೈರಾಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದರ್ಶನ್ (22) ಆತ್ಮಹತ್ಯೆಗೆ ಶರಣಾದ ಯುವಕ. ದರ್ಶನ್ ಗಂಡಸಿ ಹೋಬಳಿ ಬೇವಿನಹಳ್ಳಿಯಲ್ಲಿರುವ ಅಜ್ಜಿ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಬೇವಿನಹಳ್ಳಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸಿ ಜೊತೆಯಲ್ಲಿ ಓಡಾಡಿದ್ದರು. ಬಿಎ ಮುಗಿಸಿ ವ್ಯವಸಾಯ ಮಾಡುತ್ತಿದ್ದ ದರ್ಶನ್ ಯುವತಿಗೆ ಮದುವೆಯಾಗೋಣ ಎಂದಿದ್ದ. ಆದರೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಕಾರು-ಇನ್ನೋವಾ ನಡುವೆ ಭೀಕರ ಅಪಘಾತ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಇದರಿಂದ ಮನನೊಂದ ದರ್ಶನ್ ಫೆ.5ರಂದು ಮನೆಯಲ್ಲಿಯೇ ವಿಷ ಸೇವಿಸಿದ್ದಾನೆ. ವಿಷ ಸೇವನೆ ಬಳಿಕ ದರ್ಶನ್ ವಾಂತಿ ಮಾಡುತ್ತಿದ್ದನ್ನು ಕಂಡು ಸ್ನೇಹಿತರಾದ ರವಿ ಮತ್ತು ಯಶ್ವಂತ್ ಪ್ರಶ್ನಿಸಿದಾಗ, ಯುವತಿ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ನನ್ನ ಮನಸ್ಸಿಗೆ ಬೇಜಾರಾಗಿದೆ. ಹಾಗಾಗಿ ವಿಷ ಸೇವನೆ ಮಾಡಿರುವುದಾಗಿ ಹೇಳಿ ದರ್ಶನ್ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ಚಾಮರಾಜನಗರ| ಚಾಲಕನಿಗೆ ಮೂರ್ಛೆ; ಮರಕ್ಕೆ ಡಿಕ್ಕಿಯಾದ ಬಸ್
ಮಂಗಳೂರು: ಇನ್ಸ್ಟಾಗ್ರಾಂನಲ್ಲಿ (Instagram) ಪರಿಚಯವಾಗಿದ್ದ ಹುಡುಗಿಗೆ ಲೈಕ್ ಕೊಟ್ಟಿದ್ದಕ್ಕೆ ಯುವಕನೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದು, ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದ (Bantwal) ಪೂಂಜಾಲಕಟ್ಟೆಯ ಕುಕ್ಕಿಪ್ಪಾಡಿ ಎಂಬಲ್ಲಿ ನಡೆದಿದೆ.
ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಚೇತನ್‌ಗೆ ಕುಂದಾಪುರದ ಚೈತನ್ಯ ಎಂಬ ಯುವತಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಳು. ಬಳಿಕ ಪ್ರೀತಿಸಿ 8 ತಿಂಗಳ ಹಿಂದೆ ಇವರಿಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಜ.21ರಂದು ಚೇತನ್ ತನ್ನ ಪರಿಚಯದ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಲೈಕ್ ನೀಡಿದ್ದ. ಇದನ್ನು ಪ್ರಶ್ನಿಸಲು ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಚೇತನ್ ಮನೆಗೆ ಬಂದಿದ್ದಳು. ಈ ವೇಳೆ ಚೇತನ್ ತಾಯಿ ಮನೆಯಲ್ಲಿ ಇರಲಿಲ್ಲ. ಚೇತನ್ ಓರ್ವನೇ ಇದ್ದ. ಲೈಕ್ ನೀಡಿದ್ದಕ್ಕೆ ಯುವತಿ ಚೇತನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಇದರಿಂದ ಮನನೊಂದ ಚೇತನ್ ಯುವತಿ ಮನೆಯಲ್ಲಿ ಇರುವ ಸಂದರ್ಭದಲ್ಲೇ ಮನೆಯೊಳಗೆ ತೆರಳಿ ಮನೆಯ ಮೇಲ್ಛಾವಣಿಗೆ ಬಟ್ಟೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂಓದಿ: ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖಿಲ್ ಕತ್ತಿ ರಾಜೀನಾಮೆ
ಬಳಿಕ ಚೇತನ್ ತಾಯಿಗೆ ಚೈತನ್ಯ ಕರೆ ಮಾಡಿ ಮಲಗಿದ್ದಾತ ಏಳುತ್ತಿಲ್ಲ ಎಂದು ಹೇಳಿ ಕರೆಸಿಕೊಂಡಿದ್ದಾಳೆ. ಬಳಿಕ ಮನೆಯ ಮೆಲ್ಛಾವಣಿಯಲ್ಲಿ ನೇಣು ಬಿಗಿದ ಕುಣಿಕೆ ಸಿಕ್ಕಿದೆ. ನೇಣು ಬಿಗಿದ ಬಳಿಕ ಚೇತನ್‌ನನ್ನು ಯುವತಿಯೇ ಕೆಳಗೆ ಇಳಿಸಿದ್ದಳು. ಘಟನೆ ಸಂಬಂಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂಓದಿ: ನಕಲಿ ಫೈನಾನ್ಸ್ ರಿಕವರಿ ಟೀಂನಿಂದ ವಸೂಲಿ ದಂಧೆ – ನಾಲ್ವರು ಆರೋಪಿಗಳ ಬಂಧನ
ವಾಷಿಂಗ್ಟನ್: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ಯುವಕನೋರ್ವ ಬಲಿಯಾದ ಘಟನೆ ಅಮೆರಿಕದ (America) ವಾಷಿಂಗ್ಟನ್ ಡಿಸಿಯ (Washington DC) ಗ್ಯಾಸ್ ಸ್ಟೇಷನ್‌ನಲ್ಲಿ ನಡೆದಿದೆ.
ರವಿತೇಜ (26) ಮೃತ ಯುವಕ. ರವಿತೇಜ ಹೈದರಾಬಾದ್‌ನ (Hyderabad) ಆರ್‌ಕೆ ಪುರಂ ಗ್ರೀನ್ ಹಿಲ್ಸ್ ಕಾಲೋನಿಯ ನಿವಾಸಿಯಾಗಿದ್ದು, ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ 2022ರಲ್ಲಿ ಅಮೆರಿಕಗೆ ತೆರಳಿದ್ದರು. ಶಿಕ್ಷಣ ಮುಗಿಸಿದ ಬಳಿಕ ಅಲ್ಲಿಯೇ ಉದ್ಯೋಗ ಅರಸುತ್ತಿದ್ದರು. ಇದನ್ನೂ ಓದಿ: ಹುಬ್ಬಳ್ಳಿ | ಬೀಗ ಮುರಿದು ರಾಷ್ಟ್ರೀಕೃತ ಬ್ಯಾಂಕ್ ದರೋಡೆಗೆ ಯತ್ನ
– ಚಿಕಿತ್ಸೆ ಫಲಿಸದೇ ಯುವಕ ಸಾವು – ನನ್ನ ಸಾವಿಗೆ ತಾನು ಪ್ರೀತಿಸಿದ ಹುಡುಗಿ ಕಾರಣ
ಹಾಸನ: ತಾನು ಪ್ರೀತಿಸಿದ ಯುವತಿಯಿಂದ ಮನನೊಂದು ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕ ಚಿಕಿತ್ಸೆ ಫಲಿಸದೇ ಮಂಗಳೂರು (Mangaluru) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾಯುವ ಮುನ್ನ ಆತ್ಮಹತ್ಯೆಗೆ ಕಾರಣ ತಿಳಿಸಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಕಲೇಶಪುರ (Sakleshpur) ತಾಲೂಕಿನ ಬಾಳೆಗದ್ದೆ ಗ್ರಾಮದ ಕವನ್ (30) ಆತ್ಮಹತ್ಯೆಗೆ ಶರಣಾದ ಯುವಕ. ಸಾಯುವ ಮುನ್ನ ಕವನ್ ಸಾವಿಗೆ ಕಾರಣ ತಿಳಿಸಿ ವೀಡಿಯೋ ಮಾಡಿಟ್ಟು ಒಂದು ವಾರದ ಹಿಂದೆ ವಿಷ ಸೇವಿಸಿದ್ದ. ನನ್ನ ಸಾವಿಗೆ ತಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್ ಎಂಬಾತ ಕಾರಣ ಎಂದು ವಿಡಿಯೋದಲ್ಲಿ ಎಳೆಎಳೆಯಾಗಿ ಯುವಕ ಕಾರಣ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ: ಒಂದೇ ಪಿಜಿಯಲ್ಲಿ ಹುಡ್ಗ-ಹುಡ್ಗಿಗೆ ರೂಂ ಶೇರಿಂಗ್ – ಕೋ ಲಿವಿಂಗ್ ಕಲ್ಚರ್‌ನಿಂದ ಇತರರ ಬ್ಯುಸಿನೆಸ್‌ಗೆ ಹೊಡೆತ!
ವೀಡಿಯೋದಲ್ಲಿ ಏನಿದೆ?
ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿ ಅಂಜಲಿಯೇ ಕಾರಣ. ಆಕೆ 2021ರಲ್ಲಿ ನನ್ನ ಮನೆ ಹಿಂದೆ ವಾಸವಿದ್ದಳು. ನನ್ನ ಜೀವನದಲ್ಲಿ ಅವಳು ಬಂದಳು. ಇಬ್ಬರೂ ಪ್ರೀತಿಸುತ್ತಿದ್ದೆವು. ನಮ್ಮ ನಡುವೆ ಎ ಟು ಜೆಡ್ ಎಲ್ಲಾ ಆಗಿದೆ. ನೀನು ನನಗೆ ಬೇಕೇಬೇಕು ಎಂದು ಹಠ ಹಿಡಿದಿದ್ದಳು. ಅನಂತರ ಅವಳ ನಡವಳಿಕೆ ಕಂಡು ದೂರವಾದೆ. ಇದನ್ನೂ ಓದಿ: ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು
2023-2024ರಲ್ಲಿ ನನ್ನ ಮೇಲೆ ಪೋಲಿಸ್ ಠಾಣೆಗೆ ಆಕೆ ದೂರು ನೀಡಿದ್ದಳು. ಹುಡುಗಿಯರು ಏನೇ ಮಾಡಿದರೂ ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಗಂಡುಮಕ್ಕಳು ಮಾತ್ರ ಕೆಟ್ಟವರು. ಆ ಹೆಣ್ಣು ಏನು ಎಂದು ಇಡೀ ಸಕಲೇಶಪುರ ಪೊಲೀಸರಿಗೆ ಗೊತ್ತು. ಆಕೆ ಏನು ಅಂತ ಗೊತ್ತಿದ್ದರೂ ಪೊಲೀಸರು ಅವಳ ಬೆಂಬಲಕ್ಕೆ ನಿಂತರು. ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಇವಳ ವಿಷಯದಿಂದ ತಮ್ಮ, ಅಪ್ಪ, ಅಮ್ಮ ಎಲ್ಲಾ ನನ್ನ ಬಿಟ್ಟಿದ್ದಾರೆ. ಬಳಿಕ ಕೇಸ್ ವಾಪಸ್ ತೆಗೆದುಕೊಂಡಳು. ನನ್ನ ಪಾಡಿಗೆ ನಾನು ಇದ್ದೆ, ಮತ್ತೆ ಬಂದು ನನ್ನ ಲೈಫ್ ಹಾಳು ಮಾಡಿದಳು. ಇವತ್ತು ಒಂದು ದಿನ ನನ್ನ ಜೊತೆ ಇರು ಎಂದು ಮೈಸೂರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋದಳು. ನನ್ನ ವೀಕ್ನೆಸ್ ಅವಳಿಗೆ ಗೊತ್ತಿತ್ತು. ನಾನು ಕುಡಿತೀನಿ, ಕುಡಿದ ಮೇಲೆ ಹೇಳಲ್ಲ ಎಂದು ಅವಳಿಗೆ ಗೊತ್ತು. ಮೊಬೈಲ್‌ಗೆ ಫಿಂಗರ್ ಪ್ರಿಂಟ್ ಇಟ್ಟಿದ್ದೆ. ಅದೇ ನಾನು ಮಾಡಿದ ತಪ್ಪು. ಪ್ಯಾಟರ್ನ್ ಪಾಸ್‌ವರ್ಡ್ ಇಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನನ್ನ ಲೈಫ್ ಹಾಳು ಮಾಡಿ 307 ಕೇಸ್ ಹಾಕಿದಳು. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 57,000 ಕಟ್ಟಡ, 1.66 ಲಕ್ಷ ಮಂದಿಗೆ ಕಾದಿದೆ ಆಪತ್ತು
ನನ್ನ ಮೊಬೈಲ್‌ನಲ್ಲಿ ಪರ್ಸನಲ್ ಫೋಟೋ ತೆಗೆದುಕೊಂಡು ಇನ್ನೊಬ್ಬರ ಹೆಂಡತಿಗೆ ಕಳುಹಿಸಿದ್ದಾಳೆ. ಅದು ಎಲ್ಲೆಲ್ಲೋ ಹೋಗಿ ಏನೇನೋ ಆಯಿತು, ಗಲಾಟೆ ಆಯಿತು. ನಾನು ಸಾಯಲು ಇಷ್ಟೇ ಕಾರಣ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಯಾವುದನ್ನೂ ಸರಿಯಾಗಿ ತನಿಖೆ ಮಾಡಲ್ಲ. ಅವಳು ಎಂಥವಳು ಅಂತ ಸ್ಟೇಷನ್‌ಗೆ ಗೊತ್ತಿರುತ್ತದೆ. ಅವಳು ಕಂಪ್ಲೆಂಟ್ ಕೊಡಲು ಬಂದಾಗ ತನಿಖೆ ಮಾಡಲ್ಲ. ಏಕೆಂದರೆ ಅವಳು ಹೆಣ್ಣು, ನಾನು ಗಂಡು. ಇದನ್ನೂ ಓದಿ: 80 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿದ ಪ್ರಾಂಶುಪಾಲ
ಡಿ.12 ರಂದು ವಿನಯ್ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟ. ಆಕೆ ಕಳುಹಿಸಿರುವ ಫೋಟೋ ಇಟ್ಟುಕೊಂಡು ನಮ್ಮ ಮನೆಯವರನ್ನು ವಿನಯ್ ದೂರ ಮಾಡಿದ. ನನ್ನದು ತಪ್ಪಿದೆ, ನನ್ನ ಪರ್ಸನಲ್ ಫೋಟೋ ಯಾರಿಗೂ ಕಳಿಸಬೇಡಿ, ನಾನು ಬಂದು ಕ್ಷಮೆ ಕೇಳುತ್ತೇನೆ ಎಂದು ವಿನಯ್‌ಗೆ ಹೇಳಿದೆ. ಆದರೆ ಗಲಾಟೆ ಮಾಡಿ ದೊಡ್ಡ ವಿಷಯ ಮಾಡಿದ. ಆಕೆ ಕಳುಹಿಸಿರುವ ಫೋಟೋ ಟಿವಿಯಲ್ಲಿ ಬರಬಹುದು. ನನ್ನ ಮೊಬೈಲ್‌ನಿಂದ ವಾಟ್ಸಪ್ ಮೂಲಕ ನನ್ನ ಫೋಟೋ ಕಳುಹಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಆದರೆ ಮಾತ್ರ ನ್ಯೂಸ್. ಕಾಮನ್ ಜನರಿಗೆ ಬೆಲೆ ಇಲ್ವಾ, ಮೊದಲು ನ್ಯಾಯ ಕೊಡಿಸಿ. ಇದನ್ನೂ ಓದಿ: ಟ್ರಕ್ ಗುದ್ದಿದ ರಭಸಕ್ಕೆ ಶಿರ ಛಿದ್ರ – ರಸ್ತೆ ಅಪಘಾತ, ಬಾಲಕ ಸ್ಥಳದಲ್ಲೇ ಸಾವು
ಆಕೆಯನ್ನು ಕರೆದುಕೊಂಡು ಬಂದು ಒಂದು ತಪ್ಪು ಮಾಡಿದೆ. ನನ್ನ ಸಂಸಾರ ರೋಡಿಗೆ ಬಂತು. ವಿನಯ್ ಅವನ ಹೆಂಡತಿ ಮೇಲೆ ಕಂಪ್ಲೆಂಟ್ ಕೊಟ್ಟ. ಕಂಪ್ಲೆಂಟ್ ಕೊಟ್ಟು ಅವರು ನೆಮ್ಮದಿಯಾಗಿದ್ದಾರೆ. ನಾನೇನು ತಪ್ಪು ಮಾಡಿದೆ, ವಿನಯ್ ಹೆಂಡತಿ ಏನು ತಪ್ಪು ಮಾಡಿದ್ಲು? ನಮ್ಮನ್ನು ರೋಡಿಗೆ ಏಕೆ ತಂದ್ರಿ? ಸ್ಟೇಷನ್‌ನಲ್ಲಿ ಸೆಟಲ್‌ಮೆಂಟ್ ಆಗಬೇಕಿತ್ತು. ಪೊಲೀಸರಿಗೆ ಕೇಸ್ ಬೇಕಿತ್ತು. ನಾನು ಏನು ತಪ್ಪು ಮಾಡಿದೆ ಅಂತ ಈ ಶಿಕ್ಷೆ? ನನ್ನ ಸಾವಿಗೆ ಕಾರಣ ನಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್. ವಿನಯ್ ಪತ್ನಿ ನನಗೆ ತೊಂದರೆ ಕೊಟ್ಟಿಲ್ಲ. ವಿನಯ್ ನನಗೆ ಏನೆಲ್ಲಾ ಬೆದರಿಕೆ ಹಾಕಿದ್ದ. ನನ್ನ ಸಾವಿಗೆ ನನ್ನ ಮನೆಯವರು, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು ಯಾರೂ ಕಾರಣ ಅಲ್ಲ. ವಿನಯ್ ಹೆಂಡತಿಯೂ ಅಲ್ಲ. ನನ್ನ ಸಾವಿಗೆ ಕಾರಣ ವಿನಯ್ ಹಾಗೂ ಆಕೆ. ಅವಳು ಫೋಟೋ ಕಳುಹಿಸಿ ಇಷ್ಟೆಲ್ಲಾ ಮಾಡಿದ್ದಾಳೆ ಎಂದು ಕವನ್ ತನ್ನ ನೋವನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಮಂಡ್ಯ ರೈತರ ಬೆನ್ನುಬಿದ್ದ ವಕ್ಫ್ ಭೂತ – ಪುರಾತತ್ವ ಇಲಾಖೆ ಆಸ್ತಿ ಮೇಲೂ ಕಣ್ಣು
ತುಮಕೂರು: ಯುವಕನೋರ್ವ ಚಿರತೆ (Leopard) ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ (Forest Department) ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಇದನ್ನೂ ಓದಿ: ತಿರುಪತಿಯಂತೆ ಧರ್ಮಸ್ಥಳದಲ್ಲೂ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್: ಏನಿದರ ವಿಶೇಷ? ಇಲ್ಲಿದೆ ಸಂಪೂರ್ಣ ವಿವರ
ಈ ವೇಳೆ ಗ್ರಾಮದ ಆನಂದ್ ಎಂಬವರು ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ. 5 ವರ್ಷದ ಚಿರತೆಯನ್ನು ಯುವಕ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಆನಂದ್ ಸಾಹಸಕ್ಕೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಖುಷಿಯಾಗಿದ್ದು, ಅವರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿದೆ HMPV- ಮಕ್ಕಳ ತಜ್ಞರು ಪೋಷಕರಿಗೆ ಕೊಟ್ಟ ಎಚ್ಚರಿಕೆ ಏನು?
ಅಮರಾವತಿ: ನ್ಯೂ ಇಯರ್ ಪಾರ್ಟಿಗೆಂದು (New Year Party) ಗೋವಾಗೆ (Goa) ತೆರಳಿದ್ದ ಆಂಧ್ರ (Andhra Pradesh) ಮೂಲದ ಯುವಕನಿಗೆ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.
ರವಿತೇಜ ಮೃತ ಯುವಕ. ರವಿತೇಜ ಸೇರಿದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಮ್‌ನ ಸ್ನೇಹಿತರ ಗುಂಪು ಹೊಸ ವರ್ಷದ ಸಂಭ್ರಮಾಚಾರಣೆಯ ಸಲುವಾಗಿ ಗೋವಾಗೆ ತೆರಳಿತ್ತು. ಸ್ನೇಹಿತರ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಜೊತೆ ರೆಸ್ಟೋರೆಂಟ್ ಮಾಲೀಕನ ಪುತ್ರ ಅನುಚಿತವಾಗಿ ವರ್ತಿಸಿದ್ದನ್ನು ರವಿತೇಜ ಪ್ರಶ್ನಿಸಿದ್ದಾನೆ. ಈ ವೇಳೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ರವಿತೇಜನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ರವಿತೇಜಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರವಿತೇಜ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ
ಘಟನೆಯ ಬಳಿಕ ತಾಡೆಪಲ್ಲಿಗುಡೆಂ ಶಾಸಕ ಬೋಳಿಸೆಟ್ಟಿ ಶ್ರೀನಿವಾಸ್ ಗೋವಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಳಿಕ ವಿಶೇಷ ವಿಮಾನದ ಮೂಲಕ ಮೃತದೇಹವನ್ನು ಹುಟ್ಟೂರಿಗೆ ಸಾಗಿಸಲು ಅನುಕೂಲ ಮಾಡಿಕೊಟ್ಟರು. ತಾಡೆಪಲ್ಲಿಗುಡೆಂನಲ್ಲಿ ರವಿತೇಜ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಇದನ್ನೂ ಓದಿ: ಡಿಕೆಶಿಗೂ ಶಾಕ್, ಪವರ್ ಶೇರ್ ಕುತೂಹಲಿಗಳಿಗೂ ಶಾಕ್ – ಸಿಎಂ ಡಿನ್ನರ್ ಸಭೆ ಇನ್‌ಸೈಡ್ ಸ್ಟೋರಿ
ಚಿತ್ರದುರ್ಗ: ಗೆಳೆಯನ ಮದುವೆ (Marriage) ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಪಗಡಲಬಂಡೆ ಗ್ರಾಮದಲ್ಲಿ ನಡೆದಿದೆ.
ಪಗಡಲಬಂಡೆ ಗ್ರಾಮದ ಆದರ್ಶ (25) ಮೃತ ಯುವಕ. ಈತ ಗೆಳೆಯನ ಮದುವೆ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ (DJ Sound) ಕುಣಿಯುತ್ತಿದ್ದ. ನೃತ್ಯದ ವೇಳೆ ಏಕಾಏಕಿ ಕುಸಿದು ಬಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇದನ್ನೂ ಓದಿ: Tumakuru| ಬಡ ವಿದ್ಯಾರ್ಥಿಗಳ ವಿಮಾನಯಾನ ಕನಸು ನನಸಾಗಿಸಿದ ಶಿಕ್ಷಕ
ನ.14ರಂದು ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪೊಲೀಸರ ಮೇಲೆ ದಾಳಿ – ಆರೋಪಿ ಕಾಲಿಗೆ ಗುಂಡೇಟು
ಹಾವೇರಿ: ನದಿಗೆ ಈಜಲು ತೆರಳಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ (Haveri) ತಾಲೂಕಿನ ಕರ್ಜಗಿ (Karjagi) ಗ್ರಾಮದ ಬಳಿಯ ವರದಾ ನದಿಯಲ್ಲಿ (Varada River) ನಡೆದಿದೆ.
ಮೃತ ಯುವಕನನ್ನು ಕಾರ್ತಿಕ್ (18) ಎಂದು ಗುರುತಿಸಲಾಗಿದೆ. ವರದಾ ನದಿಗೆ ಈಜಲು ತೆರಳಿದ್ದ ವೇಳೆ ನದಿಯಲ್ಲಿದ್ದ ಮುಳ್ಳುಕಂಟೆಗೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞ ಸಿದ್ದು ಚರಂತಿಮಠ ನಿರಂತರವಾಗಿ ಹನ್ನೆರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ಹೈಕೋರ್ಟ್
ಬುಧವಾರ ಮಧ್ಯಾಹ್ನ ನದಿಗೆ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಿರಂತರ ಕಾರ್ಯಾಚರಣೆ ನಡೆಸಿ ಗುರುವಾರ ಸಂಜೆ ಯುವಕನ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ