Tag: youth

  • ಪ್ರಾಣಕ್ಕೆ ಕಂಟಕವಾದ ಕೊಲೆ ಯತ್ನದ ಕೇಸ್- ಖಾಕಿ ಕಿರುಕುಳಕ್ಕೆ ಯುವಕ ಆತ್ಮಹತ್ಯೆ?

    ಪ್ರಾಣಕ್ಕೆ ಕಂಟಕವಾದ ಕೊಲೆ ಯತ್ನದ ಕೇಸ್- ಖಾಕಿ ಕಿರುಕುಳಕ್ಕೆ ಯುವಕ ಆತ್ಮಹತ್ಯೆ?

    ಬೆಂಗಳೂರು: ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಪೋಷಕರು ಪೊಲೀಸರ ವಿರುದ್ಧ ಆರೋಪ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಕಾರ್ತಿಕ್ (27) ಎಂಬ ಯುವಕ ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಣೆ. ಈ ವೇಳೆ ಪೋಷಕರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಿಸಿದ್ದಾರೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

    ಬೈಕ್ ಮ್ಯಾಕಾನಿಕ್ ಕೆಲಸ ಮಾಡುತ್ತಿದ್ದ ಮೃತ ಕಾರ್ತಿಕ್, ಕೊಲೆ ಯತ್ನದ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಆ ಬಳಿಕ ಪೊಲೀಸರು ಆತನ ಮನೆ ಬಳಿ ಬಂದು ತೊಂದರೆ ಕೊಡುತ್ತಿದ್ದರು. ಪೊಲೀಸರ ಕಿರುಕುಳಕ್ಕೆ ಬೇಸತ್ತು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಇದೀಗ ಆರೋಪ ಮಾಡುತ್ತಿದ್ದಾರೆ.

    ಭಾರತೀನಗರ ಪೊಲೀಸರ ವಿರುದ್ಧ ಮೃತ ಯುವಕನ ಪೋಷಕರು ಈ ಆರೋಪವನ್ನು ಮಾಡುತ್ತಿದ್ದಾರೆ.

    https://www.youtube.com/watch?v=i_CzCk_acbc

  • ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದ ತಾಯಿ!

    ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದ ತಾಯಿ!

    ಬೆಂಗಳೂರು: ತಾಯಿಯೇ ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಜೆಜೆ ನಗರದ ವಿಎಸ್ ಗಾರ್ಡನ್ ನಲ್ಲಿ ನಡೆದಿದೆ.

    ರಮೇಶ್ (22) ಸಾವನ್ನಪ್ಪಿರುವ ಯುವಕನಾಗಿದ್ದು, ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಮೇಶ್ ನಿನ್ನೆ ರಾತ್ರಿ ಚಾಕುವಿನೊಂದಿಗೆ ಮನೆಗೆ ಬಂದು ತಾಯಿ ಬಳಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ತಾಯಿ-ಮಗನ ನಡುವೆ ಗಲಾಟೆ ನಡೆದಿದೆ.

    ಗಲಾಟೆ ತಾರಕ್ಕೇರಿದಾಗ ತಾಯಿಯು ಮಗನ ಕೈಯಲ್ಲಿದ್ದ ಚಾಕುವನ್ನು ಎಳೆದುಕೊಂಡು ಆತನ ಎದೆಗೆ ಇರಿದಿದ್ದಾಳೆ. ಪರಿಣಾಮ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸದ್ಯ ಜೆಜೆ ನಗರ ಪೊಲೀಸರು ಮೃತನ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

     

     

  • ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

    ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

    ಬೆಂಗಳೂರು: ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ವ್ಯಕ್ತಿಯೋರ್ವ ಆನೆ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆಯಲ್ಲಿ ನಡೆದಿದೆ.

    ಮಂಗಳವಾರ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ರಜೆ ಇದ್ದು, ಸೂಕ್ತ ಭದ್ರತೆ ಇಲ್ಲದ ಕಾರಣ ಬೆಂಗಳೂರಿನ ಗಿರಿನಗರ ನಿವಾಸಿ ಅಭಿಲಾಷ್ ನಿನ್ನೆ ಸಂಜೆ ಸ್ನೇಹಿತರ ಜೊತೆ ಬನ್ನೇರುಘಟ್ಟಕ್ಕೆ ಹಕ್ಕಿಪಿಕ್ಕಿ ಕಾಲೋನಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಸಫಾರಿಯೊಳಕ್ಕೆ ಪ್ರವೇಶಿಸಿದ್ದಾರೆ.

    ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸವಿದೆ. ಈ ಹಿಂದೆ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಬಲಿಯಾಗಿದ್ದಾರೆ ಎನ್ನಲಾಗಿದೆ.

    ಹಕ್ಕಿಪಿಕ್ಕಿ ಕಾಲೋನಿಯಿಂದ ಆನೆಗಳಿದ್ದ ಸ್ಥಳಕ್ಕೆ 4 ಕಿಲೋ ಮೀಟರ್ ನಡೆದೇ ಬರಬೇಕು. ಇಷ್ಟು ದೂರದವರೆಗೆ ಭದ್ರತಾ ಸಿಬ್ಬಂದಿ ಇರಲಿಲ್ಲವೇ? ಇಲ್ಲವೇ ಭದ್ರತಾ ಸಿಬ್ಬಂದಿಯೇ ಒಳಗೆ ಬಿಟ್ಟರೇ? ಎಂಬ ಅನುಮಾನಗಳು ಮೂಡುತ್ತಿವೆ. ಅಭಿಲಾಷ್ ಜೊತೆ ಇನ್ನೂ ಮೂವರು ಸ್ನೇಹಿತರಿದ್ದರೆಂದು ಕೆಲವರು ಹೇಳುತ್ತಾರೆ. ಅವರೆಲ್ಲಾ ಎಲ್ಲಿಗೆ ಹೋದರು? ಯಾಕೆ ಈ ವಿಷಯ ಪೊಲೀಸರ ಗಮನಕ್ಕಾಗಲೀ ಅಥವಾ ಅಭಿಲಾಷ್ ಮನೆಯವರಿಗು ವಿಷಯ ತಿಳಿಸದೇ ಪರಾರಿಯಾಗಿದ್ದಾರೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

    ಘಟನೆಯ ವಿಷಯ ತಿಳಿದ ಪಾರ್ಕ್ ನ ಅಧಿಕಾರಿಗಳು ಸೀಗೆಕಟ್ಟೆ ಪೊಲೀಸರಿಗೆ ವಿಷಯ ತಿಳಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ವಿಷಯ ತಿಳಿದು ಬಂದ ಅಭಿಲಾಷ್ ನ ಸಂಬಂಧಿಕರು ಇಂದು ಬೆಳಗ್ಗೆ ಹಕ್ಕಿಪಿಕ್ಕಿ ಕಾಲೋನಿ ಬಳಿಯಿದ್ದ ಅಭಿಲಾಷ್ ನ ದ್ವಿಚಕ್ರ ವಾಹನ ಗುರುತಿಸಿದ್ದಾರೆ. ಬಳಿಕ ಪಾರ್ಕ್ ನ ಅಧಿಕಾರಿಗಳ ಭದ್ರತಾ ಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಲವು ಅನುಮಾನಗಳ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ತನ್ನ ರಕ್ತದಲ್ಲಿ ಪ್ರಧಾನಿಗೆ 2 ಪತ್ರ ಬರೆದ ಯುವಕ

    ತನ್ನ ರಕ್ತದಲ್ಲಿ ಪ್ರಧಾನಿಗೆ 2 ಪತ್ರ ಬರೆದ ಯುವಕ

    ರಾಯಚೂರು: ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನಿ ಮಂತ್ರಿ ಅವರಿಗೆ ಮನವರಿಕೆ ಮಾಡಲು ಜಿಲ್ಲೆಯ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

    ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ವೀರಭದ್ರಪ್ಪ ಅನ್ನೋ ರೈತನ ಮಗನಾದ ರವಿ ಗೌಡ ತುಂಗಭದ್ರ ಎಡದಂಡೆ ಕಾಲುವೆ ನೀರು ರೈತರಿಗೆ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಮೂರು ಪುಟದ ಒಂದು ಪತ್ರ ಬರೆದಿದ್ದಾರೆ. ಜೊತೆಗೆ ಪ್ರಾಥಮಿಕ ಪ್ರೌಢ ಶಾಲಾ ಪಠ್ಯಕ್ರಮದಲ್ಲಿ ಇತರೆ ವಿಷಯಗಳಂತೆ ವ್ಯವಸಾಯ ಶಾಸ್ತ್ರವನ್ನು ಅಳವಡಿಸಬೇಕು. ಇದರಿಂದ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲದೆ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ಅಂತ ಮೂರು ಪುಟಗಳ ಎರಡನೇ ಪತ್ರವನ್ನೂ ಬರೆದಿದ್ದಾರೆ.

    ಮಲ್ಲದಗುಡ್ಡ ಗ್ರಾಮದ ನಾನು ರೈತನ ಮಗನಾಗಿ ಇತರ ರೈತರ ಒಳಿತಿಗಾಗಿ ಪ್ರಧಾನಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಅಂತ ರವಿ ಗೌಡ ಹೇಳಿದ್ದಾರೆ.

     

  • ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಕಲಬುರಗಿ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದ ಇನಾಮದಾರ್ ಶಾಲೆ ಹಿಂಭಾಗದಲ್ಲಿ ನಡೆದಿದೆ.

    ಶೇಕ್ ನೂರುದ್ದೀನ್(22) ಹತ್ಯೆಗೆ ಯತ್ನಿಸಲಾದ ಯುವಕ. ಮನೆಯಿಂದ ಕೆಲಸಕ್ಕೆ ತೆರಳುವ ವೇಳೆ ಈ ಕೃತ್ಯ ನಡೆದಿದೆ.

    ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಸಾಮಿಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು. ಶೇಕ್ ನೂರುದ್ದೀನ್ ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಅಂತೆಯೇ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇಕ್ ನೂರುದ್ದೀನ್, ಮೈತುಂಬಾ ಸುಟ್ಟಗಾಯಗಳಿಂದ ನರಳಾಡುತ್ತಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10-12ನೇ ಕ್ಲಾಸ್ ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆಯಲಿದ್ದಾರೆ ಮೋದಿ

    10-12ನೇ ಕ್ಲಾಸ್ ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆಯಲಿದ್ದಾರೆ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯುವ ಜನತೆಗಾಗಿ ಒಂದು ಪುಸ್ತಕವನ್ನ ಬರೆಯಲಿದ್ದಾರೆ. ಈ ಪುಸ್ತಕದಲ್ಲಿ ಅವರು ಪರೀಕ್ಷೆಯ ಒತ್ತಡ, ಏಕಾಗ್ರತೆ ಕಾಯ್ದುಕೊಳ್ಳುವುದು ಹೇಗೆ, ಪರೀಕ್ಷೆ ಮುಗಿದ ಮೇಲೆ ಏನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಹೇಳಲಿದ್ದಾರೆ.

    ಈ ಪುಸ್ತಕ ವಿವಿಧ ಭಾಷೆಗಳಲ್ಲಿ ಮುದ್ರಣವಾಗಲಿದ್ದು, ಇದೇ ವರ್ಷ ಬಿಡುಗಡೆಯಾಗಲಿದೆ ಎಂದು ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿದೆ.

    ವಿದ್ಯಾರ್ಥಿಗಳಿಗೆ ಸಂಬಂಧಿಸಿದ, ಅದರಲ್ಲೂ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಅನ್ವಯಿಸುವ ಅನೇಕ ವಿಷಯಗಳನ್ನ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಪುಸ್ತಕದ ಮೂಲಕ ಪ್ರಧಾನಿ ಮೋದಿ ಮಕ್ಕಳಿಗೆ ಗೆಳೆಯನಾಗಿ ಅವರು ಪರೀಕ್ಷೆಗೆ ತಯಾರಾಗಲು ನೆರವಾಗಲಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.

    ಅಂಕಗಳಿಗಿಂತ ಜ್ಞಾನವನ್ನು ಯಾಕೆ ಮುಖ್ಯವಾಗಿಸಿಕೊಳ್ಳಬೇಕು, ಭವಿಷ್ಯಕ್ಕಾಗಿ ಹೇಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮೋದಿ ಸಂವಾದದಂತೆ ಮುಕ್ತವಾಗಿ ಮಾತನಾಡಲಿದ್ದಾರೆ. ಈ ಪುಸ್ತಕದ ಐಡಿಯಾ ಮೋದಿ ಅವರಿಂದಲೇ ಬಂದಿದ್ದಂತೆ. ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಅಂತಹದ್ದೇ ಆಲೋಚನೆಗಳನ್ನ ಒಟ್ಟುಗೂಡಿಸಿ ಕೆಲವು ಸತ್ಯ ಸಂಗತಿಗಳೊಂದಿಗೆ ಮತ್ತಷ್ಟು ಚೆನ್ನಾಗಿ ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ.

    ನನ್ನ ಮನಸ್ಸಿಗೆ ಹತ್ತಿರವಿರುವ ವಿಷಯದ ಬಗ್ಗೆ ನಾನೊಂದು ಪುಸ್ತಕ ಬರೆಯಬೇಕೆಂದಿದ್ದೇನೆ. ‘ಯುವಕರು ಮುನ್ನಡೆಸುವ ನಾಳೆ’ಯ ಬಗ್ಗೆ ನನ್ನ ದೂರದೃಷ್ಟಿಗೆ ಇದು ಮೂಲಭೂತವಾದುದು ಎಂದು ಮೋದಿ ಹೇಳಿರುವುದಾಗಿ ಪ್ರಕಾಶಕರು ಹೇಳಿಕೆ ನಿಡಿದ್ದಾರೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ ಎಂಬ ಸಂಸ್ಥೆ ಈ ಪುಸ್ತಕಕ್ಕಾಗಿ ತಂತ್ರಜ್ಞಾನ ಹಾಗೂ ನಾಲೆಜ್ಡ್ ಪಾಟ್ರ್ನರ್ ಆಗಿದೆ.

    ದೇಶದ ಯುವ ಜನತೆಗೆ ಮೋದಿ ಅವರ ಸಂದೇಶವನ್ನ ತಲುಪಿಸುವ ನಿಟ್ಟಿನಲ್ಲಿ ಅವರ ಪುಸ್ತಕ ಪ್ರಕಟಿಸಲು ನಮಗೆ ತುಂಬಾ ಸಂತೋಷವಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ನ ಸಿಇಓ ಗೌರವ್ ಸ್ರೀನಾಗೇಶ್ ಹೇಳಿದ್ದಾರೆ.

  • ಬೆಳ್ತಂಗಡಿ: ಮರಳು ವಿಚಾರದಲ್ಲಿ ಯುವಕರಿಬ್ಬರಿಗೆ ಚಾಕುವಿನಿಂದ ಇರಿತ

    ಬೆಳ್ತಂಗಡಿ: ಮರಳು ವಿಚಾರದಲ್ಲಿ ಯುವಕರಿಬ್ಬರಿಗೆ ಚಾಕುವಿನಿಂದ ಇರಿತ

    ಮಂಗಳೂರು: ಮರಳು ಹಾಕುವ ನೆಪದಲ್ಲಿ ಯುವಕರಿಬ್ಬರನ್ನು ಕರೆಸಿಕೊಂಡು ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾಗಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ನಡೆದಿದೆ.

    ಯುವಕರಾದ ನಿಸಾರ್ ಮತ್ತು ಇರ್ಷಾದ್ ಎಂಬುವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇವರಿಬ್ಬರೂ ಮಂಗಳೂರಿನ ಅಡ್ಡೂರು ನಿವಾಸಿಗಳು. ಗಾಯಾಳು ಯುವಕರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  • ನಾಯಿಗಳನ್ನು ತೊಳೆಯಲೆಂದು ಕೆರೆಗೆ ಇಳಿದಾಗ ಮೊಸಳೆ ದಾಳಿ- ಯುವಕನ ಕೈ ಕಟ್!

    ನಾಯಿಗಳನ್ನು ತೊಳೆಯಲೆಂದು ಕೆರೆಗೆ ಇಳಿದಾಗ ಮೊಸಳೆ ದಾಳಿ- ಯುವಕನ ಕೈ ಕಟ್!

    ರಾಮನಗರ: ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ಕೆರೆಯಲ್ಲಿ ತನ್ನ ನಾಯಿಗಳನ್ನು ತೊಳೆಯಲು ಹೋದ ಸಂದರ್ಭದಲ್ಲಿ ಮೊಸಳೆಯೊಂದು ಆತನ ಮೇಲೆ ದಾಳಿ ನಡೆಸಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

    ಬೆಂಗಳೂರಿನ ಇಂದಿರಾನಗರ ನಿವಾಸಿ ಮದೀತ್(27) ಮೊಸಳೆ ದಾಳಿಗೆ ಒಳಗಾದ ಯುವಕನಾಗಿದ್ದು, ಮೊಸಳೆ ದಾಳಿಯಿಂದ ಇದೀಗ ಯುವಕ ತನ್ನ ಕೈ ಕಳೆದುಕೊಂಡಿದ್ದಾನೆ.

    ತನ್ನ ಗೆಳತಿಯೊಂದಿಗೆ ಎರಡು ನಾಯಿಗಳನ್ನು ಕರೆದುಕೊಂಡು ಬಂದಿದ್ದ ಯುವಕ ತಟ್ಟೆಕೆರೆ ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ನಾಯಿಗಳನ್ನು ತೊಳೆಯಲೆಂದು ಕೆರೆಗೆ ಇಳಿದಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಈ ಕೆರೆಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಆಗಾಗ ಹಸುಗಳ ಮೇಲೆ ದಾಳಿ ನಡೆಸುತ್ತಿದ್ದವು. ಮೊಸಳೆಗಳು ಕೆರೆಯಲ್ಲಿರುವ ಬಗ್ಗೆ ಸೂಚನ ಫಲಕಗಳನ್ನು ಹಾಕಿದ್ರೂ ಇದನ್ನು ಅರಿಯದ ಮದೀತ್ ನೀರಿಗಿಳಿದ ವೇಳೆ ಆತನ ಕೈ ಮೊಸಳೆಗೆ ಆಹಾರವಾಗಿದೆ. ಘಟನೆಯ ಬಳಿಕ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

    ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

    ತುಮಕೂರು: ವಿಧವೆಯನ್ನು ಚುಡಾಯಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದಲ್ಲಿ ಮೊಬೈಲ್ ಶಾಪ್ ನಡೆಸುತಿದ್ದ ನರೇಶ್ ಎಂಬವನೇ ಗೂಸಾ ತಿಂದ ವ್ಯಕ್ತಿ. ನರೇಶ್ ಇಲ್ಲಿನ ಎಸ್‍ಎಫ್‍ಕೆ ಸಮುದಾಯ ಭವನದಲ್ಲಿ ಕೆಲಸ ಮಾಡಿಕೊಂಡಿದ್ದ ವಿಧವೆಗೆ ಚುಡಾಯಿಸುತಿದ್ದ. ಅಲ್ಲದೇ ಪದೇ ಪದೇ ಸಮುದಾಯ ಭವನಕ್ಕೆ ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ಕಿರುಕುಳದಿಂದ ಬೆಸತ್ತ ಮಹಿಳೆ ತಮ್ಮ ಸಂಬಂಧಿಕರಿಗೆ ಈ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ನರೇಶ್‍ನ ಮೊಬೈಲ್ ಶಾಪ್ ಬಳಿ ಬಂದ ಮಹಿಳೆಯ ಸಂಬಂಧಿಕರು ಆತನನ್ನು ಹೊರಕ್ಕೆ ಎಳೆದುಕೊಂಡು ಬಂದು ಸಖತ್ ಗೂಸಾ ನೀಡಿದ್ದಾರೆ. ಇವರ ಜೊತೆಗೆ ಸಾರ್ವಜನಿಕರೂ ಸೇರಿಕೊಂಡು ಧರ್ಮದೇಟು ನೀಡಿ ನರೇಶ್‍ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    https://www.youtube.com/watch?v=6WMAHAuDJf4&feature=youtu.be

  • ಬಜೆಟ್‍ನಲ್ಲಿ ಯುವಜನತೆಗೆ ಮತ್ತು ಕ್ರೀಡಾ ಇಲಾಖೆಗೆ ಸಿಕ್ಕಿದ್ದು ಏನು?

    ಬಜೆಟ್‍ನಲ್ಲಿ ಯುವಜನತೆಗೆ ಮತ್ತು ಕ್ರೀಡಾ ಇಲಾಖೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡೆಗೆ ಸಿಎಂ ಸಿದ್ದರಾಮಯ್ಯ 288 ಕೋಟಿ ರೂ. ಅನುದಾನ ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ

    – ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು 1 ಸಾವಿರ ಪ್ರತಿಭಾನವಿತ ಕ್ರೀಡಾಪಟುಗಳಿಗೆ ತಲಾ 1 ಲಕ್ಷ ನೆರವು, 10 ಕೋಟಿ ಮೀಸಲು
    – 1 ಕೋಟಿ ವೆಚ್ಚದಲ್ಲಿ 4 ಕ್ರಿಡಾ ಅಕಾಡೆಮಿ ಸ್ಥಾಪನೆ, ಬೆಂಗಳೂರಿನ ವಿದ್ಯಾನಗರದಲ್ಲಿ ಬ್ಯಾಸ್ಕೇಟ್ ಬಾಲ್, ಉಡುಪಿಯಲ್ಲಿ ಈಜು, ಮೈಸೂಇನಲ್ಲಿ ಟೆನಿಸ್, ಚಿತ್ರದುರ್ಗದಲ್ಲಿ ಆರೋಹಣ ಅಕಾಡೆಮಿ ಸ್ಥಾಪನೆ
    – ಖಾಸಗಿ ಸಹಭಾಗ್ವಿತ್ವದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಗಳ ಪ್ರಾರಂಭ

    – 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನಕೇಂದ್ರಗಳ ಸ್ಥಾಪನೆ
    – ಖಾಸಗಿ ಸಹಭಾಗಿತ್ವದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ವರುಣ ಕೆರೆಯಲ್ಲಿ ಜಲಕ್ರೀಡಾ ಕೇಂದ್ರ ಅಭಿವೃದ್ಧಿ
    – 8 ಕೋಟಿ ವೆಚ್ಚದಲ್ಲಿ ನಾಲ್ಕು ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಅತ್ಯಾಧುನಿಕ ವ್ಯಾಯಾಮ ಶಾಲೆ ಆರಂಭ
    – ಮಹಿಳಾ ಆಥ್ಲೀಟ್‍ಗಳಿಗಾಗಿ ತಲಾ 1 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೀಡಾ ವಿದ್ಯಾರ್ಥಿ ನಿಲಯ

    – ಬೆಳಗಾವಿ, ಮೈಸೂರಿನಲ್ಲಿ ಆಧುನಿಕ ಜಿಮ್ನಾಸ್ಟಿಕ್ ಸೌಲಭ್ಯ- 4 ಕೋಟಿ ಅನುದಾನ
    – ವಿಕಲಚೇತನ ಕ್ರೀಡಾ ವಿಭಾಗ- 4 ಕೋಟಿ ಅನುದಾನ
    – ಒಲಂಪಿಕ್ಸ್‍ನಲ್ಲಿ ಪದಕ ವಿಜೇತರರಿಗೆ ಬಂಪರ್- ಸ್ವರ್ಣ ಗದ್ದೆರೆ 5 ಕೋಟಿ, ರಜತ-3 ಕೋಟಿ, ಕಂಚು-2 ಕೋಟಿ
    – ಒಲಂಪಿಕ್ಸ್ ವಿಜೇತರಿಗೆ ಸರ್ಕಾರ ಇಲಾಖೆಗಳಲ್ಲಿ ಗ್ರೂಪ್ `ಎ, ದರ್ಜೆ ಹುದ್ದೆಗಳು
    – ಏಷ್ಯಾನ್, ಕಾಮನ್‍ವೆಲ್ತ್ ಕ್ರೀಡೆಗಳ ವಿಜೇತರಿಗೆ ಗ್ರೂಪ್ ಬಿ ದರ್ಜೆಯ ಹುದ್ದೆಗಳು
    – ಪ್ರತಿವರ್ಷ 10 ಜನ ಕ್ರೀಡಾ ಪ್ರವರ್ತಕರಿಗೆ – `ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ’

    – 20 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ಕಾಮಗಾರಿಗಳನ್ನ ಪೂರ್ಣ
    – ಗ್ರಾಮೀಣ ಯುವಕರಿಗಾಗಿ- ಯುವಚೈತನ್ಯ ಎಂಬ ಹೊಸ ಯೋಜನೆ ಪ್ರಾರಂಭ
    – ಪ್ರತಿ ಗ್ರಾ.ಪಂ. 1 ಲಕ್ಷ ರೂ ವೆಚ್ಚದಲ್ಲಿ ಕ್ರೀಡಾ ಸಾಮಾಗ್ರಿಗಳು, ಫಿಟ್‍ನೆಸ್ ಸಲಕರಣೆ ಒದಗಿಸುವುದು- 20 ಕೋಟಿ ಅನುದಾನ

    – 5 ಕೋಟಿ ಅನುದಾನದಲ್ಲಿ ಯೂತ್ ಕ್ಲಬ್‍ಗಳೀಗೆ ಆವರ್ಥ ನಿಧಿ
    – 1 ಕೋಟಿ ವೆಚ್ಚದಲ್ಲಿ ಕ್ರೀಡಾ ಐಟಿ ಕೋಶ ಸ್ಥಾಪನೆ
    – ರಾಜ್ಯ ರಾಷ್ಟ್ರೀಯ ಅಂತಾರಷ್ಟ್ರೀಯ ಮಾಜಿ ಕುಸ್ತಿ ಪೈಲ್ವಾನ್‍ಗಳಿಗೆ ಮಾಸಾಶನ ಹೆಚ್ಚಳ