Tag: youth

  • ಬ್ರಿಡ್ಜ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಬ್ರಿಡ್ಜ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಬೆಂಗಳೂರು: ಬ್ರಿಡ್ಜ್ ಮೇಲಿನಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ವಿಂಡ್ಸನ್ ಮ್ಯಾನರ್ ಹೋಟೆಲ್ ಬಳಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಿಹಾರ ಮೂಲದ ಅಜಯ್(26) ಎಂದು ಗುರುತಿಸಲಾಗಿದ್ದು, ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

    ಬ್ಲೂವೇಲ್ ಗೇಮ್ ಹೆಚ್ಚಾಗಿ ಅಡುತ್ತಿದ್ದ ಅಜಯ್ ಸೋಮವಾರವಷ್ಟೇ ನಗರಕ್ಕೆ ಆಗಮಿಸಿದ್ದ. ಇದೇ ಆಟ ಆತ್ಮಹತ್ಯೆಗೆ ಪ್ರೇರೆಪಿಸಿದೆ ಎನ್ನಲಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ ಅಜಯ್ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

    ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಅಜಯ್‍ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಲಾಗಿದೆ.

  • ಕಿಡ್ನಾಪ್ ಆಗಿ ಅಪ್ಪನಿಗೆ ವಾಟ್ಸಪ್ ವಿಡಿಯೋ ಕಳುಹಿಸಿದ್ದ ಯುವಕನ ಕೊಲೆ- ಆರೋಪಿಗಳು ಹೇಳಿದ್ದೇನು?

    ಕಿಡ್ನಾಪ್ ಆಗಿ ಅಪ್ಪನಿಗೆ ವಾಟ್ಸಪ್ ವಿಡಿಯೋ ಕಳುಹಿಸಿದ್ದ ಯುವಕನ ಕೊಲೆ- ಆರೋಪಿಗಳು ಹೇಳಿದ್ದೇನು?

    ಬೆಂಗಳೂರು: ನಗರದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಮಗ ಶರತ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವೊಂದು ಸಿಕ್ಕಿದೆ.

    ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಆಟೋ ಮೊಬೈಲ್ ಎಂಜಿನಿಯರಿಂಗ್ ಡಿಪೋಮಾ ಓದುತ್ತಿದ್ದ ಶರತ್ ಕಿಡ್ನಾಪ್ ಬಳಿಕ ಹಣ ನೀಡಬೇಕೆಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ ಎಂದು ವಾಟ್ಸಪ್ ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿದ್ದ. ಈ ವಿಡಿಯೋ ಪೊಲೀಸರಿಗೆ ತಿಳಿದಿದೆ ಎಂದು ಗೊತ್ತಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಸೆ.12ರಂದೇ ಕೊಲೆ ಮಾಡಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಜ್ಞಾನಭಾರತಿ ಪೊಲೀಸರು ಗುರುವಾರ ರಾತ್ರಿ ಅಪಹರಣ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಶರತ್‍ನನ್ನು ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳಾದ ವಿಶಾಲ್, ವಿಕ್ಕಿ, ವಿನಯ್ ಬಂಧಿತರು. ಇದರಲ್ಲಿ ವಿಶಾಲ್ ಎಂಬುವವನು ಶರತ್ ಅಕ್ಕನ ಕ್ಲಾಸ್ ಮೇಟ್ ಆಗಿದ್ದನು ಎನ್ನಲಾಗಿದೆ.

    ಶರತ್‍ನನ್ನು ಕೊಲೆ ಮಾಡಿ ಮಂಚನಬೆಲೆ ಬಳಿಯ ಅಜ್ಜನಹಳ್ಳಿ ಕೆರೆಯಲ್ಲಿ ಬಿಸಾಡಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಹೀಗಾಗಿ ಅಜ್ಜನಹಳ್ಳಿ ಕೆರೆಯಲ್ಲಿ ಶರತ್‍ನ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಕೆಎ- 541ಎಂಎ9636 ಸ್ವಿಫ್ಟ್ ಕಾರಿನಲ್ಲಿ ಶವವಿಟ್ಟುಕೊಂಡು ಸುತ್ತಾಡುತ್ತಿದ್ದರು. ಆರೋಪಿಗಳು ರಾಮೋಹಳ್ಳಿ ಕೆರೆಬಳಿ ಮಣ್ಣು ತೆಗೆದು ಶವವನ್ನು ಹೂತಿಟ್ಟಿದ್ದರು ಎನ್ನುವ ಮಾಹಿತಿ ಮೂಲಗಳು ತಿಳಿಸಿವೆ.

    ಹೂತಿಟ್ಟಿದ್ದು ಯಾಕೆ?
    ಆರೋಪಿ ವಿಶಾಲ್ ವಿಚಾರಣೆ ವೇಳೆ ಕೊಲೆಯ ಸತ್ಯ ಬಯಲಾಗಿತ್ತು. ತಡರಾತ್ರಿಯೇ ಸ್ಥಳಕ್ಕೆ ಆರೋಪಿಗಳಾದ ವಿಶಾಲ್ ಮತ್ತು ವಿನಯ್‍ನನ್ನು ಕರೆದ್ಯೊದ್ದು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಶರತ್ ಶವವನ್ನು ರಾಮೋಹಳ್ಳಿ ಕೆರೆಯಲ್ಲಿ ಎಸೆದಿರುವುದಾಗಿ ಆರೋಪಿಗಳು ಹೇಳಿದ್ದರು. ಕೆರೆಯಲ್ಲಿ ಶವ ತೇಲಿದರೆ ಪೊಲೀಸರಿಗೆ ಗೊತ್ತಾಗುತ್ತೆ ಅಂತ ಜೆಸಿಬಿಯಲ್ಲಿ ಗುಂಡಿ ತೆಗೆದು ಶವವನ್ನು ಹೂತಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಏನಿತ್ತು?
    ಸೆಪ್ಟೆಂಬರ್ 12ರಂದು ಕೆಂಗೇರಿಯ ಉಳ್ಳಾಲದ ನಿವಾಸಿಯಾದ ಐಟಿ ಅಧಿಕಾರಿ ನಿರಂಜನ್ ಕುಮಾರ್ ಪುತ್ರ ಶರತ್ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಸ್ನೇಹಿತರಿಗೆ ತೋರಿಸುವುದಾಗಿ ಹೋಗಿದ್ದನು. ಅಂದೇ ದುಷ್ಕರ್ಮಿಗಳಿಂದ ಕಿಡ್ನಾಪ್ ಆಗಿದ್ದನು. ಬಳಿಕ `ಶರತ್ ತನ್ನನ್ನು ಕಿಡ್ನಾಪ್ ಮಾಡಿದ್ದಾರೆ, 50 ಲಕ್ಷ ರೂಪಾಯಿ ಕೊಟ್ಟು ಬಿಡಿಸಿಕೊಳ್ಳುವಂತೆ ತಂದೆಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದ. `ನಿನ್ನ ಕಿರುಕುಳದಿಂದ ತೊಂದರೆ ಅನುಭವಿಸಿದವರು ನನ್ನನ್ನು ಕಿಡ್ನಾಪ್ ಮಾಡಿದ್ದಾರೆ ಹಾಗೂ ಕಿಡ್ನಾಪ್ ಮಾಡಿದವರಿಗೆ ನಮ್ಮ ಕುಟುಂಬದ ಬಗ್ಗೆ ಎಲ್ಲವೂ ಗೊತ್ತಿದೆ. ಅವರು ನನ್ನ ಸಹೋದರಿಯನ್ನು ಕೂಡಾ ಅಪಹರಣ ಮಾಡಬಹುದು’ ಎಂದು ವಿಡಿಯೋದಲ್ಲಿ ಹೇಳಿದ್ದನು. ವೀಡಿಯೋ ಕಳುಹಿಸಿದ್ದ ಬಳಿಕ ಶರತ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

    https://www.youtube.com/watch?v=u3Fk-_h04H0

  • ಸ್ನೇಹಿತರಿಗೆಲ್ಲಾ ವಾಟ್ಸಪ್ ಮಾಡಿ 18ನೇ ಮಹಡಿಯಿಂದ ಜಿಗಿದು 19 ವರ್ಷದ ಯುವಕ ಆತ್ಮಹತ್ಯೆ

    ಸ್ನೇಹಿತರಿಗೆಲ್ಲಾ ವಾಟ್ಸಪ್ ಮಾಡಿ 18ನೇ ಮಹಡಿಯಿಂದ ಜಿಗಿದು 19 ವರ್ಷದ ಯುವಕ ಆತ್ಮಹತ್ಯೆ

    ಬೆಂಗಳೂರು: 18ನೇ ಮಹಡಿಯಿಂದ ಜಿಗಿದು 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಐಟಿಪಿಎಲ್ ಸಮೀಪದ ಪ್ರೆಸ್ಟೀಜ್ ಶಾಂತಿನಿಕೇತನ್‍ನಲ್ಲಿ ನಡೆದಿದೆ.

    ಪೋಲ್ಲಾಸ್ ಚೌದರಿ(19) ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪ್ರವೀಣ್ ಚೌದರಿ ಎಂಬುವವರ ಪುತ್ರನಾಗಿದ್ದು, ಬೆಂಗಳೂರು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ. ಪೋಲ್ಲಾಸ್ ಚೌದರಿ ತನ್ನ ತಂದೆ ಜೊತೆ ರಾಮಗೊಂಡಹಳ್ಳಿಯ ಖಾಸಗಿ ವಿಲ್ಲಾದಲ್ಲಿ ವಾಸವಿದ್ದ.

    ಕಳೆದ ರಾತ್ರಿ ಪೋಲ್ಲಾಸ್ ಚೌದರಿ ತನ್ನ ಖಾಸಗಿ ವಿಲ್ಲಾದಿಂದ ಶಾಂತಿನಿಕೇತನ್ ಅಪಾಟ್ರ್ಮೆಂಟ್‍ನಲ್ಲಿ ಇರುವ ತನ್ನ ಸ್ನೇಹಿತೆ ಮನೆಗೆ ಹೋಗಿದ್ದ. ತನ್ನ ಸ್ನೇಹಿತೆಗೆ ಫೋನ್ ಮಾಡಿ ಅಪಾರ್ಟ್‍ಮೆಂಟ್ ಒಳಗೆ ಬಿಡುವಂತೆ ಸೆಕ್ಯುರಿಟಿಗೆ ಹೇಳು ಎಂದು ಹೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್ ಬಳಿ ಎಂಟ್ರಿ ಮಾಡಿದ ಪೋಲ್ಲಾಸ್ ನೇರವಾಗಿ 18ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಬೆಳಗಿನ ಜಾವ ಸುಮಾರು 6ಗಂಟೆಗೆ ಟೆರೇಸ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಪೊಲ್ಲಾಸ್ ತನ್ನೆಲ್ಲಾ ಸ್ನೇಹಿತರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದ.

    ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕುಟುಂಬ ವರ್ಗದವರು ಹಾಗೂ ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ. ಪೋಲ್ಲಾಸ್ ಚೌದರಿ ತನ್ನ ತಂದೆ ಜೊತೆ ವೈಟ್‍ಫೀಲ್ಡ್ ಫೊರಂ ಬಳಿ ಇರುವ ಆದರ್ಶ ಪಾಮ್‍ಮೇಡ್ಸ್ ವಿಲ್ಲಾದಲ್ಲಿ ವಾಸಿಸುತ್ತಿದ್ದ. ಪ್ರವೀಣ್ ಚೌದರಿ ವರ್ಷಕ್ಕೆ 10 ಲಕ್ಷ ರೂ. ಖರ್ಚು ಮಾಡಿ ತನ್ನ ಮಗ ಪೊಲ್ಲಾಸ್ ಚೌದರಿಯನ್ನು ಓದಿಸುತ್ತಿದ್ದರು. ಪೋಲಾಸ್ ಮಂಗಳವಾರ ಮಧ್ಯಾಹ್ನದಿಂದ ಸಾಯುವವರೆಗೂ ಸುಮಾರು 80 ಜನರಿಗೆ ಸಂದೇಶ ಕಳುಹಿಸಿದ್ದಾನೆ ಹಾಗೂ ಮಾತನಾಡಿದ್ದಾನೆ ಎಂದು ತಿಳಿದುಬಂದಿದೆ.

  • ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

    ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

    ಪುಣೆ: ಅಚಾನಕ್ಕಾಗಿ ವ್ಯಕ್ತಿ ಮೇಲೆ ಟೀ ಬಿದ್ದಿದ್ದಕ್ಕೆ 19 ವರ್ಷದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಪುಣೆ ವಿಶ್ವವಿದ್ಯಾಲಯದ ಸಮೀಪ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ಅಕ್ತರ್ ಖಾನ್ ಎಂಬುವುದಾಗಿ ಗುರುತಿಸಲಾಗಿದೆ. ಘಟನೆಯಿಂದ ಅಕ್ತರ್ ಗೆಳೆಯ 21 ವರ್ಷದ ಕರೀಂ ಸೈಯದ್ ಎಂಬಾತನ ಕೈ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇನ್ನು ಘಟನೆ ಸಂಬಂಧಿಸಿದಂತೆ ಮತ್ತೋರ್ವ ಗೆಳೆಯ ಅಮ್ಜಿತ್ ನಡಾಫ್ ದೂರು ದಾಖಲಿಸಿದ್ದು, ಚತುಶ್ರ್ರಿಂಗಿ ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 307(ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    `ಮನೆಗೆ ವಾಪಾಸ್ಸಾಗೋ ಮೊದಲು ನಾವು ಮೂವರು ಗೆಳೆಯರು ಟೀ ಕುಡಿಯಲೆಂದು ಹೋಗಿದ್ದೆವು. ಅಂತೆಯೇ ಟೀ ಸ್ಟಾಲ್ ನಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಆಟೋ-ರಿಕ್ಷಾದಿಂದಿಳಿದ ವ್ಯಕ್ತಿ ನೇರವಾಗಿ ಅದೇ ಟೀ ಸ್ಟಾಲ್ ಗೆ ಬಂದ್ರು. ಇದೇ ವೇಳೆ ಗೆಳೆಯ ಅಕ್ತರ್ ಕೈಲಿದ್ದ ಗ್ಲಾಸ್ ನಿಂದ ಅಚಾನಕ್ ಆಗಿ ಟೀ ಚೆಲ್ಲಿತ್ತು. ಇದು ಆ ವ್ಯಕ್ತಿಯ ಬಟ್ಟೆಯ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಆತ ಬೈಯಲು ಶುರು ಮಾಡಿದ. ಆದ್ರೆ ಅಕ್ತರ್ ಕ್ಷಮಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದ ವ್ಯಕ್ತಿ ಹರಿತವಾದ ಚೂರಿಯಿಂದ ಅಕ್ತರ್ ಗೆ ಇರಿದಿದ್ದಾನೆ. ಈ ವೇಳೆ ನಾನು ಅಲ್ಲಿಂದ ಓಡಿ ಪಾರಾಗಿದ್ದು, ಅಕ್ತರ್ ಹಾಗೂ ಗೆಳೆಯ ಕರೀಂಗೆ ಗಂಭೀರ ಗಾಯಗಳಾಗಿದೆ’ ಅಂತ ನಡಾಫ್ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.

    ಮೃತ ಯುವಕ ನಿರುದ್ಯೋಗಿಯಾಗಿದ್ದು, ಘಟನೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಆರೋಪಿಯನ್ನು ಕೂಡ ಈ ಮೂಲಕ ಶೀಘ್ರವೇ ಪತ್ತೆ ಹಚ್ಚಲಾಗುವುದು ಅಂತ ಚತುಶ್ರ್ರಿಂಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ದನ್ಯಾನಂದ್ ಧೋಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಬೆಂಗಳೂರು ಸಿಗ್ನಲ್‍ನಲ್ಲೇ ಜೋಡಿಯ ಅಶ್ಲೀಲ ವರ್ತನೆ – ಮದ್ಯದ ನಶೆಯಲ್ಲಿ ಮುತ್ತಿನ ಗಮ್ಮತ್ತು

    ಬೆಂಗಳೂರು ಸಿಗ್ನಲ್‍ನಲ್ಲೇ ಜೋಡಿಯ ಅಶ್ಲೀಲ ವರ್ತನೆ – ಮದ್ಯದ ನಶೆಯಲ್ಲಿ ಮುತ್ತಿನ ಗಮ್ಮತ್ತು

    ಬೆಂಗಳೂರು: ಸಿಲಿಕಾನ್ ಸಿಟಿಯ ಆಧುನಿಕತೆಯ ಭರಾಟೆಯಲ್ಲಿ ಅನಾಗರಿಕತೆ ವಿಜೃಂಭಿಸುತ್ತಿದೆ. ಇದಕ್ಕೆ ಸಾಕ್ಷಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆ ಸಮೀಪದ ಸಿಗ್ನಲ್‍ನಲ್ಲಿ ನಡೆದಿರುವ ಘಟನೆ.

    ಸಾರ್ವಜನಿಕ ಸ್ಥಳದಲ್ಲೇ ಅಸಭ್ಯ, ಅಶ್ಲೀಲ ವರ್ತನೆ ಮಾಡಿರುವ ಜೋಡಿ, ಸಿಗ್ನಲ್‍ನಲ್ಲಿ ನಿಂತ ಕಾರ್‍ನಲ್ಲಿ ಮತ್ತೇರಿಸಿ ಮುತ್ತು ನೀಡಿದ್ದಾರೆ. ಎಲ್ಲರೂ ನೋಡುತ್ತಿರುವಾಗ ಒಬ್ಬರಿಗೊಬ್ಬರು ಮುತ್ತು ಕೊಡುತ್ತಾ, ಮದ್ಯಪಾನ ಮಾಡುತ್ತಾ, ಸಿಗರೇಟು ಸೇದುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ.

    ಡ್ರಗ್ ನಶೆಯಲ್ಲಿದ್ದ ಯುವಕ ಪಕ್ಕದ ಕಾರ್‍ನಲ್ಲಿದ್ದ ಮಹಿಳೆಗೆ ಮದ್ಯದ ಬಾಟಲಿ ತೋರಿಸಿದ್ದಾನೆ. ಇಬ್ಬರ ವರ್ತನೆಯಿಂದ ನೊಂದ ಸುನಂದ ಎಂಬವರು ಹಲಸೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಕೃತ್ಯ) ಕೇಸ್ ದಾಖಲಿಸಿಕೊಂಡು ಸುಮ್ಮನಾಗಿದ್ದಾರೆ.

    ನನ್ನ ಮಕ್ಕಳನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ಈ ಹಲಸೂರು ಸಿಗ್ನಲ್ ನಲ್ಲಿ ನಿಂತಿದ್ದೆ. ಅಲ್ಲಿ ಕಾರಿನಲ್ಲಿ ಕುಡಿದು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಯಿತು. ಇದನೆಲ್ಲ ವಿಡಿಯೋ ಮಾಡಿ ಹಲಸೂರು ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಕೇಸ್ ದಾಖಲಿಸಿಕೊಂಡು ಎನ್‍ಸಿಆರ್ ಮಾಡಿ ಪೊಲೀಸರು ಹಾಗೆ ಸುಮ್ಮನಾಗಿದ್ದಾರೆ ಎಂದು ಸುನಂದ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    https://youtu.be/iNcHMsguZ6w

    https://youtu.be/zDdndMWPBtA

  • ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

    ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

    ಕಲಬುರಗಿ: ಮಾರಕಾಸ್ತ್ರಗಳಿಂದ ಯುವಕನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಎಸೆದಿರುವ ಘಟನೆ ಕಲಬುರಗಿ ತಾಲೂಕಿನ ನಂದೂರ(ಬಿ) ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಬುಧವಾರ ತಡರಾತ್ರಿ ನಡೆದಿದೆ.

    ಮೃತ ಯುವಕನನ್ನು ಮಂಜುನಾಥ್ ಮಾಶಾಳ ಎಂಬುವುದಾಗಿ ಗುರುತಿಸಲಾಗಿದ್ದು, ಅದೇ ಗ್ರಾಮದವನು ಎನ್ನಲಾಗಿದೆ.

    ಕೊಲೆಯಾದ ಯುವಕನ ಮೇಲೆ ಕೂಡ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣಗಳಿವೆ ಎಂಬುವುದಾಗಿ ಪೊಲಿಸರು ತಿಳಿಸಿದ್ದಾರೆ. ಆದ್ರೆ ಈ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಸದ್ಯ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

  • 2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಅರೆಸ್ಟ್

    2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಅರೆಸ್ಟ್

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲದಲ್ಲಿ ಕಾಮುಕ ಯುವಕನೊಬ್ಬ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

    ಯುವಕನನ್ನು ಸುಭಾಷ್ ನಾಯ್ಕ್(21) ಎಂದು ಗುರುತಿಸಲಾಗಿದ್ದು, ಈತ 2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಕಾಮುಕನಿಗೆ ಜನರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಮುಕನ ಕೃತ್ಯದಿಂದ ಮಗುವಿಗೆ ತೀವ್ರ ರಕ್ತಸ್ರಾವವಾಗಿದ್ದು, ಸದ್ಯ ಆಕೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    21 ವರ್ಷದ ಸುಭಾಷ್ ನಾಯ್ಕರ್‍ನನ್ನು ವಶಕ್ಕೆ ಪಡೆದ ನೇಸರ್ಗಿ ಪೊಲೀಸರು, ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.

     

  • ಮಹಾಮಳೆಗೆ ಬೆಂಗ್ಳೂರು ತತ್ತರ- ಮಿನರ್ವ ಸರ್ಕಲ್‍ನಲ್ಲಿ ಮರ ಬಿದ್ದು ಮೂವರ ಬಲಿ

    ಮಹಾಮಳೆಗೆ ಬೆಂಗ್ಳೂರು ತತ್ತರ- ಮಿನರ್ವ ಸರ್ಕಲ್‍ನಲ್ಲಿ ಮರ ಬಿದ್ದು ಮೂವರ ಬಲಿ

    – ಚರಂಡಿಯಲ್ಲಿ ಯುವಕನ ಶವ ಪತ್ತೆ

    ಬೆಂಗಳೂರು: ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೂ ಸುರಿದ ವರ್ಷಧಾರೆಗೆ ಬೆಂಗಳೂರು ಮಹಾನಗರಿ ತತ್ತರಿಸಿ ಹೋಗಿದೆ.

    ಎಡಬಿಡದೆ ಸುರಿದ ಮಳೆಗೆ ಬೆಂಗಳೂರಿನ ಬಹುತೇಕ ಭಾಗಗಳು ಸಂಪೂರ್ಣ ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ನದಿಗಳಾಗಿದ್ದವು. ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸವಾರರು ಪರದಾಡಿ ಹೋದ್ರು.

    ಮೆಜೆಸ್ಟಿಕ್, ಮಾರ್ಕೆಟ್, ಶಿವಾಜಿನಗರ, ಮಲ್ಲೇಶ್ವರಂ, ಮತ್ತಿಕೆರೆ, ಯಶವಂತಪುರ, ಆರ್‍ಟಿನಗರ, ಹೆಬ್ಬಾಳ, ಕೆ.ಆರ್.ಪುರ, ವೈಟ್‍ಫೀಲ್ಡ್, ಮಹದೇವಪುರ, ಕಾಡುಗೋಡಿ, ಜಯನಗರ, ರಾಜಾಜಿನಗರ, ಕೋರಮಂಗಲ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮೈಸೂರು ರಸ್ತೆ, ಕೆಂಗೇರಿ, ಕಮ್ಮನಹಳ್ಳಿ, ಪುಲಿಕೇಶಿನಗರ, ಬಸವನಗುಡಿ, ಆವಲಹಳ್ಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

    ಭಾರಿ ಗಾಳಿ ಮಳೆಯಿಂದಾಗಿ 20ಕ್ಕೂ ಮರಗಳು ಧರೆಗುರುಳಿವೆ. ಕಟ್ಟಡಗಳು ಕುಸಿದಿವೆ. ಬಿಬಿಎಂಪಿ ಕಂಟ್ರೋಲ್ ರೂಮ್‍ಗೆ ದೂರಿನ ಸುರಿಮಳೆಯೇ ಹರಿದಿದೆ. ಇನ್ನು ಇವತ್ತೂ ಸಹ ನಿನ್ನೆಗಿಂತಲೂ ಬೆಚ್ಚಿಬೀಳಿಸುವ ಮಳೆಯಾಗಲಿದೆ ಎಂದು ಹೇಳಲಾಗಿದೆ.

    ಮೂವರ ದುರ್ಮರಣ: ಮಹಾ ಮಳೆಗೆ ಬೆಂಗಳೂರಿನಲ್ಲಿ ಬೃಹತ್ ಮರ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಿನರ್ವ ಸರ್ಕಲ್ ಬಳಿ ಮಳೆ ಬರ್ತಿದ್ದ ಕಾರಣ ಮರದ ಕೆಳಗೆ ಕಾರ್ ನಿಲ್ಲಿಸಿದ್ರು. ಈ ವೇಳೆ ಮರ ಬಿದ್ದು ಸಾವನ್ನಪ್ಪಿದ್ದಾರೆ. ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದು, ಇಬ್ಬರಿಗೆ ಉದ್ಯೋಗ ನೀಡುವುದಾಗಿ ಸಚಿವ ಜಾರ್ಜ್ ಹೇಳಿದ್ದಾರೆ.

    ಕೊಚ್ಚಿ ಹೋದ ಯವಕ: ಶೇಷಾದ್ರಿಪುರಂ ರೈಲ್ವೇ ಸೇತುವೆ ಕೆಳಗೆ ಯುವಕನೋರ್ವ ಕೊಚ್ಚಿ ಹೋಗಿದ್ದಾನೆ. ಯುವಕ ವರುಣ್‍ಗಾಗಿ ರಾತ್ರಿಯೆಲ್ಲಾ ಎನ್‍ಡಿಆರ್‍ಎಫ್ ಶೋಧ ಕಾರ್ಯ ನಡೆಸ್ತು. ಸುಮಾರು ಐದು ತಾಸು ಕಾರ್ಯಾಚರಣೆ ಬಳಿಕ ಚರಂಡಿಯಲ್ಲಿ ವರುಣ್ ದೇಹ ಪತ್ತೆಯಾಯ್ತು.

    ಸುಬ್ಬಣ್ಣ ಗಾರ್ಡನ್ ಬಳಿ ಬಿದ್ದಿದ್ದ ಮರವನ್ನು ಹರಸಾಹಸಪಟ್ಟು ತೆರವು ಮಾಡಲಾಯ್ತು. ಶಿವಾಜಿನಗರದಲ್ಲಿ ಮಳೆಯಿಂದಾಗಿ ಮನೆಗೆ ಹೋಗಲಾಗದೆ ಜನ ಬಸ್ ಸ್ಟ್ಯಾಂಡ್‍ನಲ್ಲಿ ಕಾಲ ಕಳೆಯಬೇಕಾಯ್ತು. ಶಿವಾಜಿನಗರದ ಚರ್ಜ್ ನಲ್ಲಿ ನಡೆಯುತ್ತಿದ್ದ ಮೇರಿ ಫೆಸ್ಟ್‍ಗೆ ಮಳೆರಾಯ ಅಡ್ಡಿಪಡಿಸಿದ. ನಗರದ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

    ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ರಾತ್ರಿಯಿಡೀ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ನಗರದ ವಿವಿಧೆಡೆ ಮಳೆಯಿಂದ ಕೆಲ ಬಡಾವಣೆಗಳಿಗೆ ನೀರು ನುಗ್ಗಿದೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ 15 ವರ್ಷಗಳ ಇತಿಹಾಸನ್ನ ಮುರಿದ ಮಳೆ ದೊಡ್ಡಹಳ್ಳ ಹರಿಯುತ್ತಿರುವುದರಿಂದ ಮನೆಗಳಿಗೆ ನುಗ್ಗಿದ ನೀರು ಅಂಗನವಾಡಿ ಕೇಂದ್ರ, ತೋಟ, ಜಮೀನುಗಳಿಗೆ ನೀರು ನುಗ್ಗಿತ್ತು. ಗೋಪನಹಳ್ಳಿ ಯಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ವಾಹನಹಗಳ ಸಂಚಾರ ಬಂದ್ ಆಗಿತ್ತು.

  • ಚಿಕಿತ್ಸೆಗಾಗಿ ಪ್ರವಾಹದಲ್ಲಿ ಪ್ರಾಣ ಪಣಕ್ಕಿಟ್ಟು ಈಜಿ ದಡ ಸೇರಿದ

    ಚಿಕಿತ್ಸೆಗಾಗಿ ಪ್ರವಾಹದಲ್ಲಿ ಪ್ರಾಣ ಪಣಕ್ಕಿಟ್ಟು ಈಜಿ ದಡ ಸೇರಿದ

    ಯಾದಗಿರಿ: ತಂಗಿಯನ್ನು ನೋಡಲು ಬಂದವನಿಗೆ ಜ್ವರ ಬಂದು ಚಿಕಿತ್ಸೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಹೃದಯವಿದ್ರಾವಕ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಹೌದು. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 45 ಸಾವಿರ ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ನದಿಯಲ್ಲಿ ಹೆಚ್ಚಿನ ಪ್ರಮಾಣ ನೀರು ಬಂದಿರುವುದರಿಂದ ನೀಲಕಂಠರಾಯನಗಡ್ಡಿ ಈಗ ನಡುಗಡ್ಡೆಯಾಗಿದೆ.

    ನೀಲಕಂಠರಾಯನಗಡ್ಡಿ ಸುತ್ತಲು ಕೃಷ್ಣಾ ನದಿ ಒಡಲು ಮೈದುಂಬಿ ಹರಿಯುತ್ತಿದೆ. ಇಂದು ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವ ಕಾರಣ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಗಡ್ಡಿಯಲ್ಲಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಬಂದ ಯುವಕ ಜ್ವರದಿಂದ ಬಳಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜುಕಾಯಿ ಸಹಾಯದೊಂದಿಗೆ ಈಜಾಡಿ ಕೃಷ್ಣಾ ನದಿ ದಡ ಸೇರಲು ಹರಸಾಹಸ ಪಟ್ಟಿದ್ದಾರೆ.

    ರಾಯಚೂರು ಜಿಲ್ಲೆಯ ಬಗಿರಗುಂಡ ಗ್ರಾಮದ ನಿವಾಸಿ ಹಣಮಂತ ಎಂಬವರು ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲಿ ಗಡ್ಡಿ ಸುತ್ತಲು ಕೃಷ್ಣ ನದಿ ನೀರು ಹರಿಸುವುದರಿಂದ ಚಿಕಿತ್ಸೆಗೆ ಪರದಾಡಿದ್ದಾರೆ. ನಂತರ ಇಂದು ಗ್ರಾಮಸ್ಥರ ಸಹಾಯದೊಂದಿಗೆ ಈಜಾಡುತ್ತಾ ದಡ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಗ್ರಾಮದಲ್ಲಿರುವ ಶಾಲೆಗೆ ಬೀಗ ಜಡಿಯಲಾಗಿದೆ. ಕಳೆದ 2 ದಿನಗಳಿಂದ ಗಡ್ಡಿ ಗ್ರಾಮಕ್ಕೆ ಶಿಕ್ಷಕರು ಬಂದಿಲ್ಲ. ಅದೆ ರೀತಿ ಗಡ್ಡಿಯಲ್ಲಿ ನಾಲ್ವರು ಗರ್ಭಿಣಿಯರಿದ್ದು ಆಸ್ಪತ್ರೆಗೆ ತೆರಳಲು ಪ್ರಯಾಸ ಪಡುವಂತಾಗಿದೆ. ಅದೆ ರೀತಿ ಗ್ರಾಮದಲ್ಲಿ ಆಹಾರ ಪದಾರ್ಥಕ್ಕೂ ಕೂಡ ಕೊರತೆಯುಂಟಾಗಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ಎಚ್ಚೆತ್ತು ದೋಣಿ ಅನುಕೂಲ ಕಲ್ಪಿಸಿ ಜನರ ಹಸಿವನ್ನು ನೀಗಿಸಬೇಕು ಹಾಗೂ ಗರ್ಭಿಣಿಯರಿಗೆ ಸೂಕ್ತ ಚಿಕೀತ್ಸೆ ನೀಡುವ ಕೆಲಸ ಮಾಡಬೇಕಿದೆ.

    https://youtu.be/zRuiyxC3flQ

     

     

  • ಬಸ್‍ಗೆ ನುಗ್ಗಿ ಟೆಕ್ಕಿಗೆ ಚಾಕುವಿನಿಂದ ಇರಿದ

    ಬಸ್‍ಗೆ ನುಗ್ಗಿ ಟೆಕ್ಕಿಗೆ ಚಾಕುವಿನಿಂದ ಇರಿದ

    ಬೆಂಗಳೂರು: ಮಹಿಳಾ ಟೆಕ್ಕಿಯ ಕೈಗೆ ಪುಂಡ ಯುವಕನೋರ್ವ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕ್ಯಾಪ್ ಜೆಮಿನಿಯಲ್ಲಿ ಉದ್ಯೋಗಿಯಾಗಿರೋ ಸ್ನೇಹ ಇಂದು ಬಸ್‍ನಲ್ಲಿ ಆಫೀಸ್‍ಗೆ ಹೊರಡುವ ವೇಳೆ ಘಟನೆ ನಡೆದಿದೆ. ಕೂಡ್ಲು ಗೇಟ್ ಸಿಗ್ನಲ್‍ನಲ್ಲಿ ಬಸ್ ನಿಂತಿದ್ದ ವೇಳೆ ಬಸ್‍ಗೆ ಹತ್ತಿದ ಪುಂಡನೊಬ್ಬ ಸ್ನೇಹ ಎಡಗೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ನೇಹ ಡಿಸ್ಚಾರ್ಜ್ ಆಗಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರೋ ಬೇಗೂರು ಪೊಲೀಸ್ರು ಈ ಬಗ್ಗೆ ತನಿಖೆ ನಡೆಸುತ್ತಿದ್ರು. ಇದೇ ಯುವಕ ಆನೇಕಲ್‍ನಲ್ಲಿ ಮತ್ತೊಬ್ಬ ಯುವತಿಗೆ ಚಾಕುವಿನಿಂದ ಇರಿಯಲು ಮುಂದಾದ ವೇಳೆ ಸಾರ್ವಜನಿಕರು ಈತನನ್ನು ಹಿಡಿದು ಬಂಡೆಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಅರೋಪಿ ಒರಿಸ್ಸಾ ಮೂಲದ ಬಿರಾಂಚಿ ಎಂದು ತಿಳಿದುಬಂದಿದ್ದು ಈತ ಸೈಕೊ ಎನ್ನಲಾಗಿದೆ.