Tag: youth

  • ಪೋಷಕರು ಮದುವೆ ಮಾಡಿಕೋ ಎಂದು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

    ಪೋಷಕರು ಮದುವೆ ಮಾಡಿಕೋ ಎಂದು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

    ಬೆಂಗಳೂರು: ವಯಸ್ಸಾದ ಪೋಷಕರು ಮಗನನ್ನು ಮದುವೆ ಮಾಡಿಕೋ ಎಂದು ಗೋಗರಿಯುತ್ತಿದ್ದರಿಂದ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಧ್ಯಪ್ರದೇಶ ಮೂಲದ ಅಜಯ್ (23) ಆತ್ಮಹತ್ಯೆ ಶರಣಾದ ಯುವಕ. ಟೈಲ್ಸ್ ಕೆಲಸ ಮಾಡಿಕೊಂಡು ವರ್ತೂರು ಸಮೀಪದ ಮುಳ್ಳೂರು ಗ್ರಾಮದಲ್ಲಿ ನೆಲಸಿದ್ದ ಅಜಯ್ ಗೆ ಮಧ್ಯಪ್ರದೇಶದಲ್ಲಿ ನೆಲೆಸಿರುವ ವಯಸ್ಸಾದ ಪೋಷಕರು ಸೋಮವಾರ ಹುಡುಗಿಯ ಫೋಟೋ ಕಳುಹಿಸಿ ಮದುವೆ ಮಾಡಿಕೋ ಎಂದು ತಿಳಿಸಿದ್ದರಂತೆ.

    ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಅಜಯ್ ಇದೇ ವಿಷಯಕ್ಕೆ ಮನನೊಂದು ಕಳೆದ ರಾತ್ರಿ ಮುಳ್ಳೂರು ಗ್ರಾಮದ ಹೊರವಲಯದಲ್ಲಿನ ನೀಲಗಿರಿ ತೋಪಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

    ವಿಷಯ ತಿಳಿದ ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  • ಡ್ರಾಪ್ ನೆಪದಲ್ಲಿ ಯುವತಿಯ ಅಪಹರಣಗೈದು ಗ್ಯಾಂಗ್ ರೇಪ್ ಮಾಡಿದ್ರು

    ಡ್ರಾಪ್ ನೆಪದಲ್ಲಿ ಯುವತಿಯ ಅಪಹರಣಗೈದು ಗ್ಯಾಂಗ್ ರೇಪ್ ಮಾಡಿದ್ರು

    ಇಂದೋರ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕೆಲ ದಿನಗಳ ಹಿಂದೆ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ಇಂದೋರ್ ನಲ್ಲಿ ನಡೆದಿದೆ.

    ಮನೆಗೆ ಹಿಂದಿರುಗುತ್ತಿದ್ದ ಯವತಿಯನ್ನು ಡ್ರಾಪ್ ನೀಡುತ್ತೇವೆ ಎಂದು ಹೇಳಿ ಮೂವರು ಆರೋಪಿಗಳು ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.

    ಇದನ್ನೂ ಓದಿ: ತಂದೆ, ಸಹೋದರನಿಂದಲೇ 9 ವರ್ಷ ನಿರಂತರ ಅತ್ಯಾಚಾರ- ತಾಯಿಂದ್ಲೇ ಮಗಳಿಗೆ 8 ಬಾರಿ ಗರ್ಭಪಾತ..!

    ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಭೋಪಾಲ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಬಿಬ್ಗಂಜ್ ರೈಲು ನಿಲ್ದಾಣದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿತ್ತು. ಪೊಲೀಸರು ಇನ್ನು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಮನೆ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

     

     

  • ಮಂಗಳಮುಖಿ ವೇಷ ಧರಸಿ ಭಿಕ್ಷೆ ಬೇಡ್ತಿದ್ದ ಯುವಕನಿಗೆ ಅಸಲಿ ಮಂಗಳಮುಖಿಯರಿಂದ ಧರ್ಮದೇಟು

    ಮಂಗಳಮುಖಿ ವೇಷ ಧರಸಿ ಭಿಕ್ಷೆ ಬೇಡ್ತಿದ್ದ ಯುವಕನಿಗೆ ಅಸಲಿ ಮಂಗಳಮುಖಿಯರಿಂದ ಧರ್ಮದೇಟು

    ದಾವಣಗೆರೆ: ತಾನು ಮಂಗಳಮುಖಿ ಎಂದು ಜನರಿಗೆ ನಂಬಿಸುತ್ತಾ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಅಸಲಿ ಮಂಗಳಮುಖಿಯರು ಹಿಡಿದು ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಗಡಿಯಾರ ಕಂಬದ ಹತ್ತಿರ ಕಳೆದ ಹಲವು ದಿನಗಳಿಂದ ರಾಜಶೇಖರ್ ಅಲಿಯಾಸ್ ಕಾವ್ಯ ಎನ್ನುವ ಯುವಕ ಮಂಗಳಮುಖಿಯ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣವನ್ನು ವಸೂಲಿ ಮಾಡುತ್ತಿದ್ದ. ಹೀಗೆ ಹಣ ವಸೂಲಿ ಮಾಡುತ್ತಿರುವುದನ್ನ ಅಸಲಿ ಮಂಗಳಮುಖಿಯರಾದ ಆಲಿಯಾ ಹಾಗೂ ಜೋಯಾ ಎನ್ನುವವರು ನೋಡಿದ್ದಾರೆ. ಇಂದು ಯುವಕನನ್ನು ಹಿಡಿದು ಬಟ್ಟೆ ಬಿಚ್ಚಿಸಿ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

    ಯುವಕನಾಗಿ ದುಡಿದು ತಿನ್ನುವ ಬದಲು ಮಂಗಳಮುಖಿಯಾಗಿ ನಾಟಕವಾಡುತ್ತಿದ್ದಾನೆ. ಇಂತವರಿಂದ ನಮಗೆ ಬೆಲೆ ಇಲ್ಲದಂತಾಗಿದೆ ಎಂದು ಮಂಗಳಮುಖಿಯರು ಆಕ್ರೋಶ ವ್ಯಕ್ತಪಡಿಸಿ ನಕಲಿ ಮಂಗಳಮುಖಿಗೆ ಬಟ್ಟೆ ಬಿಚ್ಚಿಸಿ ಬಸವನಗರ  ಪೊಲೀಸರಿಗೆ ಒಪ್ಪಿಸಿದ್ದಾರೆ.

     

     

  • ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಥಾಣೆ: ಬಾರ್ ಗಲಾಟೆಯಲ್ಲಿ ತನ್ನ ಗೆಳೆಯನನ್ನು ರಕ್ಷಿಸಲು ಹೋಗಿ 26 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.

    ಥಾಣೆಯ ಮಿರಾ ರಸ್ತೆಯಲ್ಲಿರೋ ಬಾರ್ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು 26 ವರ್ಷದ ನೊವೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ದಾಹಿಸರ್ ಪೂರ್ವದ ಅನುಪಮ್ ಬಿಲ್ಡಿಂಗ್ ನಿವಾಸಿಯಾದ ನೊವೇಶ್ ಗುರುವಾರ ರಾತ್ರಿ ತನ್ನ ಗೆಳೆಯರಾದ ನಿಖಿಲ್ ಹಾಗೂ ನೀಲೆಶ್‍ರೊಂದಿಗೆ ಮೀರಾ ರೋಡ್‍ನ ಬಾರ್‍ಗೆ ಬಂದು ಮತ್ತೊಬ್ಬ ಗೆಳೆಯನಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಏನೋ ಜಗಳವಾಗ್ತಿರೋದು ಕೇಳಿಸಿತ್ತು. ಆಗ ಈ ಮೂವರು ಅಲ್ಲಿಗೆ ಹೋಗಿ ನೋಡಿದಾಗ ಅವರ ಗೆಳೆಯ ಕಾರ್ತಿಕ್, ಆರೋಪಿ ಸುಜಿತ್ ಮಿಶ್ರಾ ಹಾಗೂ ಮತ್ತಿಬ್ಬರೊಂದಿಗೆ ಜೋರಾಗಿ ವಾಗ್ವಾದ ನಡೆಸುತ್ತಿದ್ದ.

    ಈ ನಡುವೆ ನೊವೇಶ್ ಶೆಟ್ಟಿ ಗೆಳೆಯನ ಜಗಳ ಬಿಡಿಸಲೆಂದು ಮಧ್ಯೆ ಹೋಗಿದ್ದ. ಆಗ ಸುಜಿತ್ ನೊವೇಶ್‍ನನ್ನು ತಳ್ಳಿದ್ದಾನೆ. ಇದರಿಂದ ಸಿಟ್ಟುಗೊಂಡ ನೊವೇಶ್‍ನ ಗೆಳೆಯ ನಿಖಿಲ್ ಸುಜಿತ್ ಗೆ ಹೊಡೆದಿದ್ದಾನೆ.

    ನಂತರ ಜಗಳ ತಾರಕಕ್ಕೇರಿದ್ದು, ಕಾರ್ತಿಕ್‍ನನ್ನು ಸುಜಿತ್ ನಿಂದಿಸಿದ್ದಾನೆ. ಬಳಿಕ ಕಾರ್ತಿಕ್ ಹತ್ತಿರದ ಪೆಟ್ರೋಲ್ ಬಂಕ್‍ನ ಕಿಟಕಿ ಗಾಜಿನ ಮೇಲೆ ಬಿದ್ದಿದ್ದಾನೆ. ಈ ವೇಳೆ ಸುಜಿತ್ ಗಾಜಿನ ಪೀಸ್ ತೆಗೆದುಕೊಂಡು ನಿಖಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹಲ್ಲೆಯನ್ನು ತಡೆಯಲು ನೊವೇಶ್ ಅಡ್ಡ ಬಂದಿದ್ದು, ಗಾಜಿನ ಪೀಸ್ ಆತನ ಕುತ್ತಿಗೆಗೆ ಇರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನನಪ್ಪಿದ್ದಾನೆ.

    ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ನೊವೇಶ್ ಮೂರು ದಿನಗಳ ಹಿಂದೆಯಷ್ಟೇ ಮುಂಬೈಗೆ ತೆರಳಿದ್ದ ಅಂತ ಪೊಲೀಸ್ ಮೂಲಗಳು ತಿಳಿಸಿವೆ.

    ಸದ್ಯ ನೊವೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ ಅಂತ ಕಾಶಿಮಿರಾ ಪೊಲೀಸ್ ಠಾಣೆಯ ಎಸ್‍ಐ ಸುರೇಶ್ ಖೆಡೆಕರ್ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಿಖಿಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಕಟ್ಟಿಗೆ, ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ

    ಕಟ್ಟಿಗೆ, ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ

    ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಇಲ್ಲಿನ ಸೊಲ್ಲಾಪುರದಲ್ಲಿ ನಡೆದಿದೆ.

    ಕೊಲೆಯಾದ ದುರ್ದೈವಿ ಯುವಕನನ್ನು ಕಿರಣ ರಾಠೋಡ(26) ಎಂಬುದಾಗಿ ಗುರುತಿಸಲಾಗಿದ್ದು, ಇವರು ವಿಜಯಪುರದ ಅರಿಕೇರಿ ತಾಂಡಾ ನಿವಾಸಿಯಾಗಿದ್ದಾರೆ. ಈ ಘಟನೆ ಸೊಲ್ಲಾಪುರ ರಸ್ತೆಯ ಸಂಜು ಡಾಬಾದ ಬಳಿ ನಡೆದಿದೆ.

    ಕಿರಣನನ್ನು ದುಷ್ಕರ್ಮಿಗಳು ಕಟ್ಟಿಗೆ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯದಿಂದ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

    ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

    ವಿಜಯಪುರ: ಸೈನ್ಯ ಸೇರ್ಪಡೆಗೆ ಯುವಜನತೆಯನ್ನು ಪ್ರೇರೇಪಿಸಲು ಹಾಗೂ ದೇಶಸೇವೆಯಂತಹ ಪವಿತ್ರ ಕಾರ್ಯಕ್ಕೆ ಅಣಿಗೊಳಿಸುವ ಉದ್ದೇಶದಿಂದ ಸೈನಿಕ ಶಾಲೆಯ ಪ್ರಾಚಾರ್ಯರೊಬ್ಬರು ಸುದೀರ್ಘ 700 ಕಿಮೀ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

    ಉತ್ತರ ಕರ್ನಾಟಕದ ಮುಕುಟ ಪ್ರಾಯವಾಗಿರುವ ವಿಜಯಪುರದಲ್ಲಿರುವ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ ಅವರು ಇಂಥದ್ದೊಂದು ಪ್ರೇರಣಾತ್ಮಕ ಸಾಧನೆಗೆ ಮುನ್ನುಡಿ ಬರೆಯಲು ಹೊರಟಿದ್ದಾರೆ. ಇವರು ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಗೇಟಿನವರೆಗೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

    ವಿಜಯಪುರದಿಂದ ಆರಂಭವಾಗಿ ಕೊಡಗಿನವರೆಗೆ ತಮೋಜಿತ್ ಬಿಸ್ವಾಸ್ ಪ್ರಯಾಣಿಸಲಿದ್ದು, ನಿಗದಿತ ಅವಧಿಯೊಳಗೆ ಸುಮಾರು ಆರು ಜಿಲ್ಲೆಗಳ ಮೂಲಕ 700 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ಇವರು ದಿನಕ್ಕೆ 200 ಕಿಮೀ ಪೆಡಲ್ ತುಳಿಯುವ ದೃಢ ನಿರ್ಧಾರ ಮಾಡಿ, ಆಲಮಟ್ಟಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕನಾಯಕನಹಳ್ಳಿ, ಹೊಳೆನರಸೀಪುರ ಮಾರ್ಗವಾಗಿ ಪ್ರಯಾಣಿಸಿ ಅಕ್ಟೋಬರ್ 31 ರಂದು ಕೊಡಗಿನ ಸೈನಿಕ ಶಾಲೆಗೆ ತಲುಪಲಿದ್ದಾರೆ. ಇನ್ನು ಮಾರ್ಗಮಧ್ಯೆ ಸಿಗುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೆಲಕಾಲ ಸಮಯ ಕಳೆದು ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ದೇಶಸೇವೆಯ ಪವಿತ್ರ ಕಾರ್ಯ ನಿರ್ವಹಿಸಲು ಪ್ರೇರೇಪಿಸಲಿದ್ದಾರೆ.

    ದೇಶಸೇವೆ ಅತ್ಯಂತ ಪುಣ್ಯದ ಕಾರ್ಯ. ಇತ್ತೀಚಿನ ಶಿಕ್ಷಣ ಪದ್ಧತಿ ಎಂದರೆ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಗಳಿಸುವುದು ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನಿಜವಾದ ಶಿಕ್ಷಣ ಎಂದರೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸನವಾಗಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತೆಗೆದು ರಾಷ್ಟ್ರ ಪ್ರೇಮದ ಬಗ್ಗೆ ಆ ಶಕ್ತಿಯನ್ನು ಮೂಡಿಸಬೇಕು. ದೇಶದ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬರು ಇಂದಿನಿಂದಲೇ ಕನಸು ಕಾಣಿ, ದೇಶದ ಹೆಮ್ಮೆಯ ಪ್ರತೀಕವಾಗಿರುವ ಸೈನಿಕ ಶಾಲೆಗಳಿಗೆ ಸೇರ್ಪಡೆಯಾಗಬೇಕೆಂದು ತಮೋಜಿತ್ ಬಿಸ್ವಾಸ್ ಹೇಳಿದ್ದಾರೆ.


  • ಹೆಸರು ನೊಂದಾಯಿಸಿ 7 ವರ್ಷವಾದ್ರೂ ಯುವಕನಿಗೆ ಸಿಕ್ಕಿಲ್ಲ ಆಧಾರ್ ಕಾರ್ಡ್

    ಹೆಸರು ನೊಂದಾಯಿಸಿ 7 ವರ್ಷವಾದ್ರೂ ಯುವಕನಿಗೆ ಸಿಕ್ಕಿಲ್ಲ ಆಧಾರ್ ಕಾರ್ಡ್

    – ಪ್ರಧಾನಿಗೆ ಪತ್ರ ಬರೆದ್ರೂ ಪ್ರಯೋಜನವಾಗಿಲ್ಲ

    ಯಾದಗಿರಿ: ಕೇಂದ್ರ ಸರ್ಕಾರ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‍ಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಆಧಾರ್ ಕಾರ್ಡ್ ಪಡೆಯಲು ಹೆಸರು ನೋಂದಾಯಿಸಿ 7 ವರ್ಷ ಕಳೆದ್ರೂ ಇನ್ನೂ ಸಿಕ್ಕಿಲ್ಲ. ಪರಿಣಾಮ ಉದ್ಯೋಗದಿಂದ ವಂಚಿತರಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ್ರೂ ಪ್ರಯೋಜನವಾಗಿಲ್ಲ.

    ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ನಿವಾಸಿ ಮಲ್ಲಿಕಾರ್ಜುನ ಗುರಿಕಾರ, 2011ರಲ್ಲಿ ಕುಟುಂಬ ಸಮೇತರಾಗಿ ಆಧಾರ್ ಕಾರ್ಡ್‍ಗೆ ಹೆಸರು ನೋಂದಾಯಿಸಿದ್ರು. ಇವರ ಕುಟುಂಬ ಸದಸ್ಯರಿಗೆಲ್ಲಾ ಆಧಾರ್ ಕಾರ್ಡ್ ಬಂತು. ಆದ್ರೆ ಇವರಿಗೆ ಆಧಾರ್ ಸಿಕ್ಕಿಲ್ಲ. ಈ ಬಗ್ಗೆ ವಿಚಾರಿಸಿದ್ರೆ ಡಾಟಾ ಎರರ್ ಬಂದಿದೆ ಅಂತ ಕಚೇರಿಯಿಂದ ಕಚೇರಿಗಳಿಗೆ ಅಲೆದಾಡಿಸ್ತಿದ್ದಾರೆ.

    ಯಾದಗಿರಿಯಿಂದ ಬೆಂಗಳೂರಿನ ಹೆಡ್ ಆಫಿಸ್‍ಗೆ ಬಂದ್ರೂ, ದೆಹಲಿ ಅಧಿಕಾರಿಗಳಿಗೂ ಮೇಲ್ ಮಾಡಿದ್ರೂ ಆಧಾರ್ ಸಿಕ್ಕಿಲ್ಲ. ಕೊನೆಗೆ ಆಗಸ್ಟ್ 28 ರಂದು ಪ್ರಧಾನಮಂತ್ರಿ ಸಂಪರ್ಕದ ಮೇಲ್ ಐಡಿಗೆ ಪತ್ರ ಹಾಕಿದ್ರು. ಅಲ್ಲಿಂದ ಸೆಪ್ಟೆಂಬರ್ 1ರಂದು ಉತ್ತರ ಬಂತು. ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೀವಿ. ಆಧಾರ್ ಸಿಗುತ್ತೆ ಅಂದಿದ್ರು. ಆದ್ರೆ ಇನ್ನೂ ಆಧಾರ್ ಕಾರ್ಡ್ ಮಲ್ಲಿಕಾರ್ಜುನ್ ಕೈಸೇರಿಲ್ಲ.

     

    ಇಷ್ಟಾದ್ರೂ ಸುಮ್ಮನಾಗದ ಮಲ್ಲಿಕಾರ್ಜುನ್ ಮಾಹಿತಿ ಹಕ್ಕು ಅಡಿ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಅರ್ಜಿ ಹಾಕಿದ್ರು. ಇದಕ್ಕೆ ಆರ್‍ಟಿಐ ಅಡಿ ಉತ್ತರ ನೀಡಿದ ಅಧಿಕಾರಿಗಳು ನಿಮ್ಮ ಹೆಬ್ಬೆಟ್ಟು 7 ಜನರ ಜೊತೆ ಮಿಕ್ಸ್ ಆಗಿದೆ. ಅಪಡೇಟ್ ಆಗಬೇಕು ಎಂದಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಛಲಗಾರ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.

    ಕಡುಬಡತನದಲ್ಲೂ ಬಿ.ಎಸ್‍ಸಿ, ಬಿ.ಎಎಡ್ ಮಾಡಿ ಎಂ.ಎಸ್‍ಸಿ ವ್ಯಾಸಂಗ ಮಾಡ್ತಿರೋ ಇವರು ಯಾರದ್ದೋ ತಪ್ಪಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ರೂ ಛಲ ಬಿಡದೆ ರಾಷ್ಟ್ರಪತಿ ಅವರಿಗೂ ಪತ್ರ ಬರೀತೀನಿ ಅಂತಿದ್ದಾರೆ.

  • `ಗಾಯಿತ್ರಿ’ ಹಾರರ್ ಕನ್ನಡ ಸಿನಿಮಾ ನೋಡಿದ ಪ್ರೇಕ್ಷಕನಿಗೆ ನಿಜವಾಗಿ ಆಗಿದ್ದು ಏನು?

    `ಗಾಯಿತ್ರಿ’ ಹಾರರ್ ಕನ್ನಡ ಸಿನಿಮಾ ನೋಡಿದ ಪ್ರೇಕ್ಷಕನಿಗೆ ನಿಜವಾಗಿ ಆಗಿದ್ದು ಏನು?

    ಬೆಂಗಳೂರು: ಗಾಯಿತ್ರಿ ಚಿತ್ರ ನೋಡುತ್ತಿದ್ದ ವಿಜಿ ಎಂಬಾತ ಬಾಲ್ಕನಿಯಿಂದ ಬಿದ್ದಿಲ್ಲ. ಆತ ಕುಳಿತ ಸ್ಥಳದಿಂದಲೇ ಕುಸಿದು ಬಿದ್ದಿದ್ದಾನೆ ಎಂದು ಮೇನಕಾ ಚಿತ್ರ ಮಂದಿರ ಮಾಲೀಕರಾದ ವಿಶ್ವನಾಥ್ ತಿಳಿಸಿದ್ದಾರೆ.

    ಗಾಯಿತ್ರಿ ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಸಿನಿಮಾ ನೋಡಿ ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ತಂಡದಲ್ಲಿ ಕೆಲಸ ಮಾಡಿದ ವ್ಯಕ್ತಿ ಇವತ್ತು ಸೆಕೆಂಡ್ ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದ. ಬಾಲ್ಕನಿಯಿಂದ ಆತ ಬಿದ್ದಿಲ್ಲ. ಅಪಸ್ಮರ ಬಂದು ಕುಳಿತ ಸ್ಥಳದಿಂದಲೇ ಆತ ಕೆಳಗೆ ಬಿದ್ದಿದ್ದಾನೆ. ಈಗ ಆತನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.

    ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಬಂದಿದೆ ಎನ್ನುವ ಪ್ರಶ್ನೆಗೆ, ಬಾಲ್ಕನಿಯಿಂದ ಆತ ಬೀಳಲೇ ಇಲ್ಲ. ನಮ್ಮಲ್ಲಿ ಸಿಸಿಟಿವಿ ದೃಶ್ಯವಿದೆ. ಕುಳಿತಲ್ಲಿಂದ ಬಿದ್ದ ಕೂಡಲೇ ಆತನನ್ನು ಆಂಬುಲೆನ್ಸ್ ಮೂಲಕ ಕೆಸಿ ಜನರಲ್ ಆಸ್ಪತ್ರಗೆ ದಾಖಲಿಸಲಾಗಿದೆ. ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಸುಳ್ಳು ಅದು ಗಿಮಿಕ್ ಎಂದು ವಿಶ್ವನಾಥ್ ಹೇಳಿದರು.

    ಚಿತ್ರದ ನಿರ್ಮಾಪಕಿ ಭಾರತಿ ಅವರು ಪ್ರತಿಕ್ರಿಯಿಸಿ, ಸಿನಿಮಾ ಶೂಟಿಂಗ್ ವೇಳೆ ಆತ ಭಯ ಆಗುತ್ತದೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ಆತ ಕ್ಲೈಮಾಕ್ಸ್ ಪಾತ್ರದಲ್ಲೂ ಅಭಿನಯಿಸಿದ್ದ. ಆತನಿಗೆ ಏನಾಯ್ತು ಎನ್ನುವ ಮಾಹಿತಿ ತಿಳಿದಿಲ್ಲ ಎಂದು ಅವರು ತಿಳಿಸಿದರು.

    ಸತ್ಯ ಸಾಮ್ರಾಟ್ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್, ಶೋಭಾರಾಣಿ, ನಯನಾ ಕೃಷ್ಣ, ಸ್ಮೈಲ್ ಶಿವು, ರೋಹಿತ್, ಪೂಜಾ, ರಂಜಿತಾ, ಲೋರ್ಡ್ ತೆಲಾಸ್, ಶೋಭರಾಜ್, ರಾಣಿ, ಥ್ರಿಲ್ಲರ್ ವೆಂಕಟೇಶ್, ಮೋಹನ್ ಜುನೇಜ, ದುಬೈ ರಫೀ ಅಭಿನಯಿಸಿದ್ದಾರೆ.

    ಮನೆಯೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಸುತ್ತ ಚಿತ್ರಕತೆ ಇದ್ದು, ಒಂದು ಬಂಗಲೆಯಲ್ಲಿ ಮೂರು ಜನ ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ಮೂವರು ಹೆಣ್ಣು ಮಕ್ಕಳು ವಾಸವಿರುತ್ತಾರೆ. ಬಂಗಲೆಯಲ್ಲಿ ನಡೆಯುವ ನಿಗೂಢ ಘಟನೆಗಳೇ ಈ ಚಿತ್ರದಲ್ಲಿ ತೋರಿಸಲಾಗಿದೆ.

    https://www.youtube.com/watch?v=WrXipJv38bo

  • ಹಿಂದೂ ಮಹಿಳೆಯೊಂದಿಗೆ ಹೋಟೆಲಿಗೆ ಬಂದ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಹಿಂದೂ ಮಹಿಳೆಯೊಂದಿಗೆ ಹೋಟೆಲಿಗೆ ಬಂದ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಬಾರ್ಮರ್: ಮುಸ್ಲಿಂ ಯುವಕನೊಬ್ಬನನ್ನು ಹೊಟೇಲ್ ನಿಂದ ಹೊರಗಡೆ ಎಳೆದುಕೊಂಡು ಬಂದು ಗುಂಪೊಂದು ಹಲ್ಲೆ ಮಾಡಿರುವ ಘಟನೆ ರಾಜಸ್ತಾನದ ಬಾರ್ಮರ್ ಜಿಲ್ಲೆಯ ಬಲೋತ್ರ ಪ್ರದೇಶದಲ್ಲಿ ನಡೆದಿದೆ.

    25 ವರ್ಷದ ಪದು ಖಾನ್ ಎಂಬ ಯುವಕ ಮಧ್ಯ ವಯಸ್ಸಿನ ಮಹಿಳೆಯೊಂದಿಗೆ ಸುಮಾರು 10 ಗಂಟೆಯ ವೇಳೆಗೆ ಹೊಟೇಲಿಗೆ ಬಂದಿದ್ದನು. ಮಹಿಳೆ ರಾಜಸ್ತಾನ ಸಂಪ್ರದಾಯದಂತೆ ಡ್ರೆಸ್ ಮಾಡಿದ್ದರು. ಅವರು ಬಂದು ಅರ್ಧ ಗಂಟೆಯಲ್ಲೇ ಮಹಿಳೆ ಬಂದಿರುವ ಮಾಹಿತಿ ಪಡೆದು ಆಕೆಯ 5 ಮಂದಿ ಸಂಬಂಧಿಕರು ಹೊಟೇಲಿಗೆ ನುಗ್ಗಿದ್ದಾರೆ ಅಂತ ಹೊಟೇಲ್ ಮಾಲೀಕ ಮುಲ್ತಾನ್ ಪರಿಹಾರ್ ತಿಳಿಸಿದ್ದಾರೆ.

    ದಿಢೀರ್ ಆಗಿ ಐವರು ಹೊಟೇಲ್ ಗೆ ಬಂದಿರುವುದನ್ನು ಸಿಬ್ಬಂದಿಗಳು ನನಗೆ ತಿಳಿಸಿದ್ದಾರೆ. ಅಲ್ಲದೇ ಶಿವಸೇನಾ ಕಾರ್ಯಕರ್ತರು ಕೂಡ ಹೊಟೇಲಿನ ಹೊರಗಡೆ ಸೇರಿರುವ ಕುರಿತು ಮಾಹಿತಿ ನೀಡಿದ್ದಾರೆ. ಖಾನ್ ನನ್ನು ಹೊಟೇಲ್ ನಿಂದ ಹೊರಗಡೆ ಎಳೆದು ಹಲ್ಲೆ ಮಾಡಿದ್ದಾರೆ ಅಂತ ಅವರು ಹೇಳಿದ್ರು.

    ಖಾನ್ ಮೇಲೆ ಹಲ್ಲೆ ಮಾಡುತ್ತಿದ್ದ ವೇಳೆ ಅವರೆಲ್ಲಾ `ಜೈ ಶ್ರೀ ರಾಮ್’ ಅಂತ ಪಠಿಸುತ್ತಿದ್ದರು. ಅಲ್ಲದೇ ಇದು ಲವ್-ಜಿಹಾದ್ ಕೇಸ್ ಅಂತಾನೂ ಹೇಳುತ್ತಿದ್ದರು ಅಂತ ಪರಿಹಾರ್ ನುಡಿದಿದ್ದಾರೆ.

    ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ರಜಪೂತ ಮಹಿಳೆ ಜೊತೆ ಬಲೋತ್ರಾದಲ್ಲಿರೋ ಹೊಟೇಲ್ ಗೆ ಬಂದಿದ್ದರು. ಇವರು ಬಂದ ಕೆಲವೇ ಕ್ಷಣಗಳಲ್ಲಿ ಮಹಿಳೆಯ ಸಂಬಂಧಿಕರ ಗುಂಪೊಂದು ನೇರವಾಗಿ ಹೊಟೇಲಿನೊಳಗೆ ನುಗ್ಗಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಬಾರ್ಮಾರ್ ನ ಎಡಿಎಸ್‍ಪಿ ಕೈಲಾಸ್ ಧನ್ ರಾಥ್ನೋ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಖಾನ್ ನನ್ನು ಬಾರ್ಮಾರ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಜೋಧಪುರ್ ದಲ್ಲಿರೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಅಂತ ಎಡಿಎಸ್‍ಪಿ ರಥ್ನೋ ತಿಳಿಸಿದ್ದಾರೆ.

  • ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಬೆಂಗ್ಳೂರಿನಲ್ಲಿ ಟೆಕ್ಕಿಯ ಬರ್ಬರ ಕೊಲೆ

    ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಬೆಂಗ್ಳೂರಿನಲ್ಲಿ ಟೆಕ್ಕಿಯ ಬರ್ಬರ ಕೊಲೆ

    ಬೆಂಗಳೂರು: ಉತ್ತರ ಭಾರತ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದಲ್ಲಿ ನಡೆದಿದೆ.

    ಅಸ್ಸಾಂ ಮೂಲದ ಪ್ರಣಯ್(24) ಕೊಲೆಯಾದ ವ್ಯಕ್ತಿ. ಈ ಘಟನೆ ಬೆಂಗಳೂರಿನ ತಾವರೆಕೆರೆ ಮುಖ್ಯರಸ್ತೆಯ ಚಾಕ್ಲೆಟ್ ಫ್ಯಾಕ್ಟರಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.

    ಖಾಸಗಿ ಕಂಪನಿಯಲ್ಲಿ ಸಾಪ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರಣಯ್ ಅವರನ್ನು ಭಾನುವಾರ ರಾತ್ರಿ ಸ್ನೇಹಿತನೊಬ್ಬ ಫೋನ್ ಮಾಡಿ ಕರೆದಿದ್ದ. ಗೆಳೆಯನ ಕರೆಗೆ ಓಗೊಟ್ಟು ಹೋದ ಪ್ರಣಯ್ ನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಚಾಕುನಿಂದ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಂಡ ರಚನೆ ಮಾಡಿರುವ ಪೊಲಿಸರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://www.youtube.com/watch?v=EI1fpzcn3wM