Tag: youth

  • ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಹೋದ ಅಂಬುಲೆನ್ಸ್ ಚಾಲಕ!

    ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಹೋದ ಅಂಬುಲೆನ್ಸ್ ಚಾಲಕ!

    ದಾವಣಗೆರೆ: ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಾವನ್ನಪ್ಪಿದ್ದಾನೆ ಎಂದು ಅಂಬುಲೆನ್ಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿಯೇ ಬಿಟ್ಟುಬಂದ ಘಟನೆ ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಳಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ವೇಳೆ ಕಾರ್ಮಿಕರ ಮೇಲೆ ಮಣ್ಣು ಕುಸಿದು ಬಿದ್ದು ಮೂರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ರು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್(32), ನಜೀರ್(30) ಹಾಗೂ ಸಿದ್ದಪ್ಪರ ನಾಗರಾಜ್(28) ರನ್ನು ರಕ್ಷಿಸಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

    ಈ ವೇಳೆ ಬಂದ ಅಂಬುಲೆನ್ಸ್ ಇಬ್ಬರನ್ನು ಕರೆತಂದು ನಾಗರಾಜ್ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಬಂದಿದ್ದಾರೆ. ಬಳಿಕ ಗ್ರಾಮಸ್ಥರು ನಾಗರಾಜ್ ರನ್ನು ಖಾಸಗಿ ಕಾರ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಬರುವಷ್ಟರಲ್ಲಿ ನಾಗರಾಜ್ ಸಾವನ್ನಪ್ಪಿದ್ದಾರೆ.

    ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾಸ್ಪತ್ರೆಯ ಮುಂದೆ ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ರು.

  • ಅಪಹರಿಸಿ ಸ್ಕಾರ್ಪಿಯೋ ಕಾರಿನಲ್ಲಿ ಹೊತ್ತೊಯ್ದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಅಪಹರಿಸಿ ಸ್ಕಾರ್ಪಿಯೋ ಕಾರಿನಲ್ಲಿ ಹೊತ್ತೊಯ್ದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಯುವಕನೊರ್ವನನ್ನು ನಾಲ್ವರು ಕಿಡಿಗೇಡಿಗಳು ಅಪಹರಿಸಿ ಕಾರಿನಲ್ಲಿ ಹೊತ್ತೊಯ್ದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.

    ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಬೇಗೂರು ಗ್ರಾಮ ಸಮೀಪದ ಆನಂದನಗರ ನಿವಾಸಿ ರಾಜು (26) ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಬೇಗೂರು ಗ್ರಾಮದಲ್ಲಿರುವ ಕೋಳಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಏಕಾಏಕಿ ಬಂದ ನಾಲ್ವರು ಕಿಡಿಗೇಡಿಗಳು, ರಾಜು ಅವರನ್ನು ಅಪಹರಿಸಿ ರಾಮನಗರ ಜಿಲ್ಲೆಯ ಕಡೆ ಹೊತ್ತೊಯ್ದು ದಾರಿಯುದ್ದಕ್ಕೂ ರಾಡಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

    ಹಲ್ಲೆ ನಡೆಸಿದ ಬಳಿಕ ರಾಜುವನ್ನು ಕಿಡಿಗೇಡಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಂಡೆಕೊಪ್ಪದ ಕೆರೆಯ ರಸ್ತೆಯ ಬದಿಯಲ್ಲಿ ಕಸದ ರೀತಿಯಲ್ಲಿ ಬಿಸಾಡಿ ಸ್ಥಳದಿಂದ ತಲೆ ಮರೆಸಿಕೊಂಡಿದ್ದಾರೆ.

    ತೀವ್ರವಾಗಿ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ರಸ್ತೆ ಬದಿಯಲ್ಲಿ ಒದ್ದಾಡುತ್ತಾ ಬಿದ್ದಿದ್ದ ರಾಜು ಸ್ಥಳೀಯರ ಸಹಾಯದಿಂದ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರಾಜು ಮುಖದ ಕೆಲ ಭಾಗದ ಮೂಳೆ ಮುರಿದಿದ್ದು, ಸ್ಥಳೀಯರು ಮತ್ತು ಸ್ನೇಹಿತರು ನೆಲಮಂಗಲ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • 4ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    4ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಶಿವಮೊಗ್ಗ: ನಾಲ್ಕನೇ ತರಗತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನ ಸ್ಥಳೀಯರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

    ಮೂಲತಃ ಉಡುಪಿ ಜಿಲ್ಲೆಯವನಾದ ಜಾಕೀರ್ ಅತ್ಯಾಚಾರಕ್ಕೆ ಯತ್ನಿಸಿ, ಥಳಿತಕ್ಕೆ ಒಳಗಾದ ಯುವಕ. ಬಾಲಕಿಯ ತಂದೆ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದರು. ತಾಯಿ ತಿಂಡಿ ಅಂಗಡಿ ನಡೆಸುತ್ತಿದ್ದರು. ತಾಯಿ-ಮಗಳು ಮಾತ್ರ ಇರುವುದನ್ನು ಗಮನಿಸಿದ್ದ ಈತ ಕಳೆದ ಮೂರು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.

    ಸೋಮವಾರ ರಾತ್ರಿ ಬಾಲಕಿಯನ್ನು ಹಿಡಿದು ಎಳೆದೊಯ್ಯಲು ಯತ್ನಿಸಿದಾಗ ಬಾಲಕಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಜಾಕೀರ್ ಗೆ ತೀವ್ರವಾಗಿ ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೋಕ್ಸೋ ಕಾಯ್ದೆಯಡಿ ಜಾಕೀರ್ ನನ್ನು ಬಂಧಿಸಿರುವ ಪೊಲೀಸರು ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಗೆ ಒಳಪಡಿಸಿದ್ದಾರೆ.

  • ಕಾಣೆಯಾಗಿದ್ದ ಯುವಕ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಯುವಕ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆ

    ಬೆಂಗಳೂರು: ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುವ ಯುವಕ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಮುತ್ಯಾಲಮಡುವಿನಲ್ಲಿ ನಡೆದಿದೆ.

    ಮೃತ ದೇಹವನ್ನು ಆನೇಕಲ್ ತಾಲೂಕಿನ ಮುತ್ತುಗಟ್ಟಿ ನಿವಾಸಿ ವಿಶ್ವನಾಥ(28) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಕಳೆದ ಶನಿವಾರ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ತೆರಳಿದವರು ಸಂಜೆಯಾದರು ಮನೆಗೆ ವಾಪಸ್ಸಾಗದನ್ನು ಕಂಡು ಕುಟುಂಬಸ್ಥರು ಎಲ್ಲಡೆ ಹುಡುಕಾಟ ನಡೆಸಿದ್ದರು.

    ಭಾನುವಾರ ಸಂಜೆ ಆನೇಕಲ್ ಪೊಲೀಸರಿಗೆ ಮುತ್ಯಾಲಮಡುವು ನಲ್ಲಿ ಅಪರಿಚಿತ ವ್ಯಕ್ತಿಯ ಶವ ದೊರೆತ ಮಾಹಿತಿ ದೊರೆತಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ವ್ಯಕ್ತಿಯ ಶವವನ್ನು ಪರಿಶೀಲನೆ ನಡೆಸಿದ್ದಾರೆ. ನಂತರದಲ್ಲಿ ಮೃತ ವಿಶ್ವನಾಥ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮೃತದೇಹ ವಿಶ್ವನಾಥ ಶವವೆಂದು ತಿಳಿದು ಬಂದಿದೆ. ಶವದ ಮುಖದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು ಪರಿಚಯಸ್ಥರು ಇಲ್ಲಿಗೆ ಕರೆತಂದು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

  • ಬದುಕಿದ್ದ ಯುವಕನನ್ನು ಮೃತಪಟ್ಟಿದ್ದಾನೆಂದು ಶವಾಗಾರದಲ್ಲಿಟ್ರು- ಹುಬ್ಬಳ್ಳಿ ಕಿಮ್ಸ್ ವೈದ್ಯರ ಎಡವಟ್ಟಿಗೆ ತೀವ್ರ ಆಕ್ರೋಶ

    ಬದುಕಿದ್ದ ಯುವಕನನ್ನು ಮೃತಪಟ್ಟಿದ್ದಾನೆಂದು ಶವಾಗಾರದಲ್ಲಿಟ್ರು- ಹುಬ್ಬಳ್ಳಿ ಕಿಮ್ಸ್ ವೈದ್ಯರ ಎಡವಟ್ಟಿಗೆ ತೀವ್ರ ಆಕ್ರೋಶ

    ಹುಬ್ಬಳ್ಳಿ: ಬದುಕಿದ್ದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಕಿಮ್ಸ್ ವೈದ್ಯರು ಶವಾಗಾರದಲ್ಲಿಡುವ ಮೂಲಕ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

    ಭಾನುವಾರ ಸಂಜೆ 7 ಗಂಟೆಗೆ ಕಾರ್ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಅನಿಲ್ ಎಂಬಾತ ಮೃತಪಟ್ಟರೆ, ಹುಬ್ಬಳ್ಳಿ ಆನಂದ ನಗರದ ಪ್ರವೀಣ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸಂಬಂಧಿಗಳು ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

    ಅಂತೆಯೇ ಗಂಭೀರ ಸ್ಥಿತಿಯಲ್ಲಿದ್ದ ಪ್ರವೀಣ್ ಅವರನ್ನು ವೈದ್ಯರು ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿಕೊಂಡಿದ್ದಾರೆ. ಆದ್ರೆ ಇಂದು ನಸುಕಿನ ಜಾವ 3 ಘಂಟೆ ಸುಮಾರಿಗೆ 20 ನಿಮಿಷದ ಹಿಂದೆ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿ ಶವಾಗಾರಕ್ಕೆ ಸಾಗಿಸಿದ್ದಾರೆ.

    ಬಳಿಕ ಬೆಳಗ್ಗೆ 10 ಘಂಟೆಯ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸಲೆಂದು ಪ್ರವೀಣ್ ದೇಹ ಶವಾಗಾರದಿಂದ ಹೊರತೆಗೆಯುವಾಗ ಅಲ್ಲೇ ಇದ್ದ ಗೆಳೆಯರು ಮತ್ತು ಸಂಬಂಧಿಕರಿಗೆ ಪ್ರವೀಣ್ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ವೈದ್ಯರಿಗೆ ತಿಳಿಸುತ್ತಾರೆ. ಈ ವೇಳೆ ವೈದ್ಯರು ಮತ್ತು ಕುಟುಂಬಸ್ಥರಿಗೆ ಮಾತುಕತೆ ನಡೆಯುತ್ತದೆ. ಬಳಿಕ ಪ್ರವೀಣ್ ಅವರನ್ನು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಆದ್ರೆ ಖಾಸಗಿ ಆಸ್ಪತ್ರೆ ವೈದ್ಯರು 10 ನಿಮಿಷದ ಹಿಂದೆಯಷ್ಟೇ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಪ್ರವೀಣ್ ಕುಟುಂಬಸ್ಥರು, ಸಂಬಂಧಿಕರು ಕಿಮ್ಸ್ ಆಸ್ಪತ್ರೆಯ ವೈದ್ಯರು ಮಹಾ ಎಡವಟ್ಟಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ

    ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ

    ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮುಸ್ಲಿಂ ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಮಂಡಕ್ಕಿ ಭಟ್ಟಿ ಹಿಂಭಾಗದ ಕೊರಚರಹಟ್ಟಿಯಲ್ಲಿ ಘಟನೆ ನಡೆದಿದೆ. ಜೀಲಾನಿ(22) ಹಾಗೂ ಇಮ್ರಾನ್(18) ಇರಿತಕ್ಕೊಳಗಾದ ಯುವಕರು ಎಂದು ಗುರುತಿಸಲಾಗಿದೆ.

    ಅದೇ ಏರಿಯಾದ ದುಗ್ಗೇಶ್ ಹಾಗೂ ಆತನ ಸ್ನೇಹಿತರು ಹಲ್ಲೆಗೊಳಗಾದ ಯುವಕರ ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದರು. ಸ್ಥಳದಲ್ಲಿದ್ದ ಈ ಇಬ್ಬರು ಯುವಕರು ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಅಕ್ರೋಶಗೊಂಡ ದುಗ್ಗೇಶ್ ಆತನ ಸ್ನೇಹಿತರು ಜಿಲಾನಿ ಹಾಗೂ ಇಮ್ರಾನ್ ಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಹಲ್ಲೆ ಮಾಡಿದ ದುಗ್ಗೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಲ್ಲೆಯಾದ ಸ್ಥಳದಲ್ಲಿ ಬಿಗುವಿನ ವಾತವರಣವಿದೆ. ಘಟನಾ ಸ್ಥಳದಲ್ಲಿ ಜಿಲ್ಲಾಧಿಕಾರಿ ಡಿಎಸ್ ರಮೇಶ್ ಹಾಗೂ ಎಸ್‍ಪಿ ಭೀಮಾಶಂಕರ್ ಗುಳೇದ್ ಬೀಡು ಬಿಟ್ಟಿದ್ದು, ಪೊಲೀಸರು ನಗರದಾದ್ಯಂತ ಹೈ ಹಲರ್ಟ್ ಘೋಷಣೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಯುವಕರಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಸಲ್ಲದ ಊಹಾ ಪೋಹಗಳಿಗೆ ಕಿವಿಗೊಡಬಾರದೆಂದು ಎಸ್‍ಪಿ ಭೀಮಾಶಂಕರ್ ಗುಳೇದ್ ಮನವಿ ಮಾಡಿದ್ದಾರೆ.

  • ಮಂಗ್ಳೂರು: ಸುರತ್ಕಲ್ ಬಳಿ ಮಾರಕಾಸ್ತ್ರದಿಂದ ಕಡಿದು ಯುವಕನ ಬರ್ಬರ ಕೊಲೆ

    ಮಂಗ್ಳೂರು: ಸುರತ್ಕಲ್ ಬಳಿ ಮಾರಕಾಸ್ತ್ರದಿಂದ ಕಡಿದು ಯುವಕನ ಬರ್ಬರ ಕೊಲೆ

    ಮಂಗಳೂರು: ನಗರದಲ್ಲಿ ಮತ್ತೆ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ನಗರದ ಹೊರವಲಯದಲ್ಲಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಈ ಘಟನೆ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಡೆದಿದೆ. ಮೃತ ದುರ್ದೈವಿ ಯುವಕನನ್ನು ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ (32) ಎಂದು ಗುರುತಿಸಲಾಗಿದೆ. ಮೃತ ದೀಪಕ್ ಮೊಬೈಲ್ ಕಂಪನಿಯೊಂದರಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಸ್ಥಳೀಯ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದನು ಎನ್ನಲಾಗಿದೆ.

    ದೀಪಕ್ ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಕಾರಿನಿಂದ ಇಳಿದು ನೇರವಾಗಿ ದೀಪಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಮುಸ್ಲಿಮರು ಕಲ್ಲೆಸೆದು ದುಷ್ಕರ್ಮಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ ತೀವ್ರ ಗಾಯಗೊಂಡ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

  • ವರ್ಷದ ಕೊನೆ ದಿನ ಸ್ನೇಹಿತರ ಜೊತೆ ಹೋದ ಯುವಕ ಹೊಸ ವರ್ಷದ ದಿನ ಶವವಾಗಿ ಬಂದ!

    ವರ್ಷದ ಕೊನೆ ದಿನ ಸ್ನೇಹಿತರ ಜೊತೆ ಹೋದ ಯುವಕ ಹೊಸ ವರ್ಷದ ದಿನ ಶವವಾಗಿ ಬಂದ!

    ಚಿಕ್ಕಬಳ್ಳಾಪುರ: ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋದ ಯುವಕನೊರ್ವ ನೀರುಪಾಲಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಎನ್ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನರೇಶ್(18) ಮೃತ ದುರ್ದೈವಿ. ವರ್ಷದ ಕೊನೆ ದಿನ ಎಂದು ನರೇಶ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಈಜಲು ತೆರಳಿದ್ದ. ಆದರೆ ಕೆರೆಯಲ್ಲಿ ಈಜಾಡುತ್ತಿದ್ದ ವೇಳೆ ನರೇಶ್ ನೀರಿನಲ್ಲಿ ಮುಳುಗಿ ಮರೆಯಾಗಿದ್ದಾನೆ. ಈ ವೇಳೆ ಗ್ರಾಮಕ್ಕೆ ಬಂದ ಉಳಿದ ಮೂವರು ಸ್ನೇಹಿತರು ನರೇಶ್ ಕೆರೆಯಲ್ಲಿ ಮುಳುಗಿ ಕಾಣೆಯಾದ ಬಗ್ಗೆ ಆತಂಕಗೊಂಡು ವಿಷಯವನ್ನು ಯಾರಿಗೂ ತಿಳಿಸಿಲ್ಲ.

    ಕೊನೆಗೆ ನರೇಶ್ ನಾಪತ್ತೆಯಾಗಿದ್ದಾನೆ ಎಂದು ಫೋಷಕರು ಹುಡುಕಾಟ ನಡೆಸುತ್ತಿದ್ದಾಗ ನರೇಶ್ ಕೆರೆಯಲ್ಲಿ ಮುಳುಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇಂದು ಬೆಳಿಗ್ಗೆ ಗ್ರಾಮಸ್ಥರು ತೆಪ್ಪಗಳ ಮೂಲಕ ಕೆರೆಯಲ್ಲಿ ಶೋಧ ನಡೆಸಿ ನರೇಶ್ ಮೃತದೇಹವನ್ನು ಹೊರತೆಗೆದಿದ್ದಾರೆ.

    ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷದ ಪಾರ್ಟಿ ವೇಳೆ ಯುವಕರ ಮಧ್ಯೆ ಘರ್ಷಣೆ- ಓರ್ವ ಸಾವು

    ಹೊಸ ವರ್ಷದ ಪಾರ್ಟಿ ವೇಳೆ ಯುವಕರ ಮಧ್ಯೆ ಘರ್ಷಣೆ- ಓರ್ವ ಸಾವು

    ಮಂಡ್ಯ: ಹೊಸ ವರ್ಷದ ಪಾರ್ಟಿ ಮಾಡುವ ವೇಳೆ ಯುವಕರ ಮಧ್ಯೆ ಘರ್ಷಣೆ ನಡೆದು ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಹೊರವಲಯದ ಕೆರೆಯ ಬಳಿ ನಡೆದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದ 26 ವರ್ಷದ ಯುವಕ ಶಿವಕುಮಾರ್ ಮೃತ ದುರ್ದೈವಿ. ಶಶಿ ಎಂಬ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಕುಮಾರ್ ಮತ್ತು ಶಶಿ ಹೊನಗಾನಹಳ್ಳಿ ಗ್ರಾಮದ ಹೊರವಲಯದ ಕೆರೆಯ ಬಳಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕೆಲ ಯುವಕರು ಹಳೇ ದ್ವೇಷದ ಕಾರಣಕ್ಕೆ ಗಲಾಟೆ ಮಾಡಿದ್ದಾರೆ.

    ಈ ವೇಳೆ ಶಿವಕುಮಾರ್ ಹಾಗೂ ಶಶಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವಗೊಂಡ ಶಿವಕುಮಾರ ಹಾಗೂ ಶಶಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಾರ್ಗ ಮಧ್ಯೆ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಶಶಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹೊಸ ವರ್ಷದ ಕೇಕ್ ಕಟ್ ಮಾಡುವಾಗ ಜಗಳ- ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಯುವಕನ ಕೊಲೆ?

    ಹೊಸ ವರ್ಷದ ಕೇಕ್ ಕಟ್ ಮಾಡುವಾಗ ಜಗಳ- ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಯುವಕನ ಕೊಲೆ?

    ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೇಕ್ ಕತ್ತರಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶಿವರಾಮ್(25) ಕೊಲೆಯಾದ ಯುವಕ. ಕಳೆದ ರಾತ್ರಿ ಸ್ನೇಹಿತರ ಜೊತೆ ಹೊಸ ವರ್ಷ ಆಚರಣೆ ಮಾಡಿಕೊಂಡು ಕೇಕ್ ಕಟ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಕೊಲೆ ಮಾಡಿದ ದುಷ್ಕರ್ಮಿಗಳು ತಮಿಳು ಭಾಷೆಯಲ್ಲಿ ಶುಭಾಶಯ ವಿನಮಯ ಮಾಡಿಕೊಳ್ಳುತ್ತಿದ್ದುದನ್ನು ಶಿವರಾಮ್ ಪ್ರಶ್ನಿಸಿ, ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು, 7 ಜನರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.