Tag: youth

  • ಅಪಘಾತದಲ್ಲಿ ಕಾಲು ತುಂಡಾಗಿ ನಡುರಸ್ತೆಯಲ್ಲೇ ನರಳಾಡಿದ ಯುವಕ

    ಅಪಘಾತದಲ್ಲಿ ಕಾಲು ತುಂಡಾಗಿ ನಡುರಸ್ತೆಯಲ್ಲೇ ನರಳಾಡಿದ ಯುವಕ

    ಬೆಂಗಳೂರು: ಹೆದ್ದಾರಿ ಅಪಘಾತದಲ್ಲಿ ತುಮಕೂರು ಮೂಲದ ಹರೀಶ್ ದೇಹ ಎರಡು ತುಂಡಾಗಿ ನರಳಾಡಿ ಮೃತ ಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ. ಈ ಘಟನೆ ಕೂಡ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಬಳಿ ನಡೆದಿದೆ.

    ವಸಂತ್(28), ರಾಹುಲ್(24)ಗಾಯಗೊಂಡ ಯುವಕರಾಗಿದ್ದು, ಬೈಕ್ ನಲ್ಲಿ ನೆಲಮಂಗಲದ ಮಾದವಾರದ ಬಳಿ ತೆರಳುತ್ತಿದ್ದ ವೇಳೆ ಬೈಕ್ ಗೆ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಅಪಘಾತದ ನಡೆದಿದೆ.

    ಈ ವೇಳೆ ಕ್ಯಾಂಟರ್ ವಾಹನದಡಿ ಸಿಲುಕಿದ ಇಬ್ಬರು ಬೈಕ್ ಸವಾರು, ನಾಲ್ಕೈದು ಮೀಟರ್ ದೂರ ಎಳೆದು ಕೊಂಡು ಹೋಗಿದ ಪರಿಣಾಮ ಯುವಕನ ಬಲಗಾಲು ತುಂಡಾಗಿದೆ. ಈ ವೇಳೆ ಆಂಬ್ಯುಲೆನ್ಸ್ ಸಿಗದೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರಿಬ್ಬರು ನರಳಾಡಿದ್ದಾರೆ.

    ಗಂಭೀರ ಗಾಯವಾಗಿದ್ದ ಇಬ್ಬರು ಬೈಕ್ ಸವಾರರನ್ನ ಕಂಡ ಸಾರ್ವಜನಿಕರು ನವಯುಗ ಟೋಲ್ ಕಂಪನಿಗೆ ಸೇರಿದ ವಾಹನದೊಂದಿಗೆ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಘಟನೆಯ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ವಾಹನವನ್ನ ವಶಕ್ಕೆ ಪಡೆದಿದ್ದಾರೆ.

  • ಆ ಒಂದು ಮಾತಿಗೆ ಮಗಳ ಪ್ರಿಯಕರನನ್ನು ನಡುಬೀದಿಯಲ್ಲೇ ಕತ್ತು ಸೀಳಿ ಕೊಂದ ತಂದೆ!

    ಆ ಒಂದು ಮಾತಿಗೆ ಮಗಳ ಪ್ರಿಯಕರನನ್ನು ನಡುಬೀದಿಯಲ್ಲೇ ಕತ್ತು ಸೀಳಿ ಕೊಂದ ತಂದೆ!

    ಪಾಟ್ನಾ: ಯುವಕನೊಬ್ಬ ತನ್ನ ಮಗಳನ್ನು ಪ್ರೀತಿಸಿ ಸವಾಲು ಹಾಕಿದ್ದನೆಂದು ಆತನ ಕತ್ತು ಸೀಳಿ ಕೊಂದು, ನಂತರ ತಾನಾಗಿಯೇ ಪೊಲೀಸರಿಗೆ ಶರಣಾದ ಘಟನೆ ಬಿಹಾರದ ನೆವೇದಾ ಜಿಲ್ಲೆಯ ಪಕ್ರಿಬ್ರಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

    ಪಿಂಟು ಕುಮಾರ್ (18) ಹತ್ಯೆಯಾದ ಯುವಕ. ಪಿಂಟು ಕುಮಾರ್ ಬೆಳಗ್ಗೆ ಮಾರ್ಕೆಟ್‍ಗೆಂದು ಹೋಗಿದ್ದ ವೇಳೆ ಯುವತಿಯ ತಂದೆ ಕಪಿಲ್ ಯಾದವ್ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಪಕ್ರಿಭ್ರಾವ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

    ನನಗೆ ನಿನ್ನ ಮಗಳ ಜೊತೆ ಸಂಬಂಧ ಇದೆ. ಏನು ಮಾಡುತ್ತಿಯಾ ಎಂದು ನನಗೆ ಸವಾಲನ್ನು ಹಾಕಿದ್ದನು. ಇದರಿಂದ ನಾನು ಕೋಪಗೊಂಡು ಆತನನ್ನು ಕೊಲೆ ಮಾಡಿದೆ ಎಂದು ಯುವತಿಯ ತಂದೆ ಕಪಿಲ್ ಪೊಲೀಸರಿಗೆ ತಿಳಿಸಿದ್ದಾನೆ.

    ಕಪಿಲ್ ಯಾದವ್ ಮಗಳು ಶೃತಿ ಯಾದವ್ ಹಾಗೂ ಪಿಂಟು ನಡುವೆ ಅಕ್ರಮ ಸಂಬಂಧವಿತ್ತು. ಅಷ್ಟೇ ಅಲ್ಲದೇ 2 ತಿಂಗಳ ಹಿಂದೆ ಇಬ್ಬರೂ ಮಾತನಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದರು. ಪಿಂಟು ಹಾಗೂ ಕಪಿಲ್ ನಡುವೆ ವಾಗ್ವಾದ ನಡೆದು ಈ ಪ್ರಕರಣದ ಪೊಲೀಸ್ ಠಾಣೆ ಮೆಟ್ಟೀಲೆರಿತ್ತು. ನಂತರ ಅವರನ್ನು ಸಂಧಾನ ಮಾಡಿ ಕಳುಹಿಸಲಾಗಿತ್ತು. ಆದರೆ ಯಾವುದೇ ಲಿಖಿತ ದೂರನ್ನು ದಾಖಲಿಸಿಕೊಂಡಿರಲಿಲ್ಲ ಎಂದು ಎಸ್‍ಎಚ್‍ಓ ಸಂಜಯ್ ಕುಮಾರ್ ತಿಳಿಸಿದ್ದಾರೆ.

    ಈ ವಿವಾದ ಆದ ಬಳಿಕ ಕಪಿಲ್ ಗ್ರಾಮವನ್ನು ಬಿಟ್ಟು ಹೋಗಿದ್ದನು. ನಂತರ ಮತ್ತೆ ಗ್ರಾಮಕ್ಕೆ ವಾಪಸ್ಸಾಗಿದ್ದನು. ಇದು ಪ್ರೀತಿಗೆ ಸಂಬಂಧಪಟ್ಟ ವಿಷಯವಾಗಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್‍ಡಿಪಿಒ ಶ್ರೀ ಪ್ರಕಾಶ್ ಸಿಂಗ್ ಹೇಳಿದ್ದಾರೆ.

    ಈ ಹಿಂದೆ ಯುವಕನಿಗೆ ಯುವತಿಯ ತಂದೆ ಕಪಿಲ್ ಎಚ್ಚರಿಕೆ ನೀಡಿದ್ದರು. ಆದರೆ ಅವನು ಮಾತನ್ನು ಕೇಳದೆ ತನ್ನ ಸಾವನ್ನು ತಾನೇ ಬರಮಾಡಿಕೊಂಡ ಎಂದು ಎಸ್‍ಪಿ ವಿಕ್ರಮ್ ವರ್ಮನ್ ಕೂಡ ಹೇಳಿದ್ದಾರೆ.

    ಆರೋಪಿ ಕಪಿಲ್ ಹತ್ಯೆ ಮಾಡಿದ ಶಸ್ತ್ರ ಹಿಡಿದುಕೊಂಡು ಪೊಲೀಸರಿಗೆ ಶರಣಾಗಿದ್ದ. ನಂತರ ಕೆಲವು ಸ್ಥಳೀಯರ ಸಹಾಯ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಿ, ಪಿಂಟು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಅಷ್ಟೇ ಅಲ್ಲದೇ ಪಿಂಟು ಕುಟುಂಬಕ್ಕೆ ಸಹಾಯಧನ ನೀಡಲಾಗಿತ್ತು ಎಂದು ಹೇಳಲಾಗಿದೆ.

    ಘಟನಾ ಸ್ಥಳಕ್ಕೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ವಾಹನವನ್ನು ಹಾನಿಗೊಳಿಸಿದ್ದರು.

  • ಹದ್ದು ರಕ್ಷಿಸಲು ಹೋಗಿ 25 ಅಡಿ ಎತ್ತರದಿಂದ ಬಿದ್ದು ಯುವಕ ಅಸ್ವಸ್ಥ!

    ಹದ್ದು ರಕ್ಷಿಸಲು ಹೋಗಿ 25 ಅಡಿ ಎತ್ತರದಿಂದ ಬಿದ್ದು ಯುವಕ ಅಸ್ವಸ್ಥ!

    ಬೆಂಗಳೂರು: ಪಕ್ಷಿಯೊಂದನ್ನು ರಕ್ಷಿಸಲು ಹೋಗಿ ಯುವಕ ಮರದಿಂದ ಕೆಳಗೆ ಬಿದ್ದು ಅಸ್ವಸ್ಥಗೊಂಡ ಘಟನೆ ನಗರದ ಲಾಲ್ ಬಾಗ್ ಬಳಿ ನಡೆದಿದೆ.

    ಸದ್ಯ ಘಟನೆಯಲ್ಲಿ ಗಾಯಗೊಂಡ ಯುವಕನನ್ನು ಅಗ್ನಿಶಾಮಕ ದಳದ ವಾಹನದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಏನಿದು ಘಟನೆ?: ಲಾಲ್ ಬಾಗ್ ಸಮೀಪದ ಮರವೊಂದರಲ್ಲಿ ಗಾಳಿಪಟದ ದಾರಕ್ಕೆ ಹದ್ದೊಂದು ಸಿಲುಕಿ ಒದ್ದಾಡುತ್ತಿತ್ತು. ಈ ಪಕ್ಷಿಯನ್ನ ಉಳಿಸಲು ಪಕ್ಷಿ ಪ್ರೇಮಿಗಳು ಶತಪ್ರಯತ್ನ ಮಾಡಿದ್ದರು. ಅಂತೆಯೇ ಇದನ್ನು ಗಮನಿಸಿದ ಯುವಕ ಆ ಹದ್ದನ್ನು ರಕ್ಷಿಸಲೆಂದು ಮರ ಏರಿದ್ದಾನೆ. ಆದ್ರೆ ಸುಮಾರು 25 ಅಡಿ ಎತ್ತರದಿಂದ ಆಯತಪ್ಪಿ ಕೆಳಗೆಬಿದ್ದು ಅಸ್ವಸ್ಥಗೊಂಡಿದ್ದಾನೆ.

    ಸದ್ಯ ಹದ್ದನ್ನು ರಕ್ಷಿಸಲಾಗಿದ್ದು, ಯುವಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಹೈದರಾಬಾದ್: ಸಖತ್ತಾಗಿ ಸೆಲ್ಫಿ ತೆಗೆಯಬೇಕು ಅಂತ ಹುಚ್ಚು ಸಾಹಸಗಳನ್ನ ಮಾಡಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿರೋ ಬಗ್ಗೆ ವರದಿಯಾಗ್ತಾನೆ ಇದ್ದರೂ ಅಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಸೆಲ್ಫಿ ವಿಡಿಯೋ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

     

    ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗಲೇ ರೈಲು ಡಿಕ್ಕಿಯಾಗಿ ಶಿವ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್‍ನ ಭರತ್‍ನಗರ ರೈಲ್ವೆ ನಿಲ್ದಾಣದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಬುಧವಾರದಂದು ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

    ಯುವಕ ಶಿವಾ ರೈಲ್ವೆ ಹಳಿಯ ಬಳಿ ತನ್ನ ಸ್ಮಾರ್ಟ್‍ಫೋನ್ ಹಿಡಿದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಅದೇ ಹಳಿಯಲ್ಲಿ ಎಮ್‍ಎಮ್‍ಟಿಎಸ್(ಮಲ್ಟಿ ಮೋಡಲ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್) ರೈಲು ಬಂದಿದೆ. ರೈಲು ಬರುತ್ತಿರೋದನ್ನ ನೋಡಿ ಹಿಂದಿನಿಂದ ಒಬ್ಬರು ಏಯ್ ಏಯ್ ಎಂದು ಯುವಕನನ್ನು ಕೂಗಿದ್ದಾರೆ. ಆದ್ರೆ ಆತ ಅದಕ್ಕೆ ಸೊಪ್ಪು ಹಾಕದೆ, ಒಂದು ನಿಮಿಷ ಎಂದು ಹೇಳಿ, ರೈಲು ಸಮೀಪ ಬರುತ್ತಿದ್ದಂತೆ ಸ್ಮೈಲ್ ಕೊಟ್ಟು ನಿಂತಿದ್ದಾನೆ.

    ಜೊತೆಗೆ ತನ್ನ ಕೈ ರೈಲಿನ ಕಡೆ ತೋರಿಸುತ್ತಾ ವಿಡಿಯೋ ಮಾಡುವುದನ್ನ ಮುಂದುವರೆಸಿದ್ದಾನೆ. ರೈಲು ವೇಗವಾಗಿ ಬಂದಿದ್ದು, ಯುವಕನ ಸಮೀಪ ಬಂದಾಗ ಆತನ ಕೈಗೆ ಎಂಜಿನ್ ತಾಗಿ ಆತ ಕೆಳಗೆ ಬಿದ್ದಿದ್ದಾನೆ. ಇವೆಲ್ಲವೂ ಯುವಕನ ಸೆಲ್ಫಿ ವಿಡಿಯೋದಲ್ಲೇ ಸೆರೆಯಾಗಿದೆ. ರೈಲು ಯುವಕನಿಗೆ ಡಿಕ್ಕಿಯಾಗಿ ಆತ ಕೆಳಗೆ ಬೀಳೋದನ್ನ ನೋಡಿದ್ರೆ ಎದೆ ಜಲ್ಲೆನಿಸುವಂತಿದೆ.

    ಈ ಬಗ್ಗೆ ವಿಷಯ ತಿಳಿದ ಕೂಡಲೇ ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಸ್ಥಿತಿ ಸುಧಾರಿಸಿದೆ ಎಂದು ಪೊಲಿಸರು ಹೇಳಿದ್ದಾರೆ. ರೈಲ್ವೆ ಪೊಲೀಸರು ಯುವಕನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆದರೂ ಯುವ ಜನಾಂಗ ಈ ರೀತಿಯ ಹುಚ್ಚು ಸಾಹಸ ಮಾಡೋ ಮುನ್ನ ಎಚ್ಚರಿಕೆ ವಹಿಸಬೇಕು ಅನ್ನೋದಕ್ಕೆ ಇದೊಂದು ಸೂಕ್ತ ಉದಾಹರಣೆಯಾಗಿದೆ. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

    https://www.youtube.com/watch?v=9cEbK3v-0EE

  • ಬೆಂಗ್ಳೂರು ಆಸ್ಪತ್ರೆಯಲ್ಲಿಯೇ ನರ್ಸ್ ನೇಣಿಗೆ ಶರಣು

    ಬೆಂಗ್ಳೂರು ಆಸ್ಪತ್ರೆಯಲ್ಲಿಯೇ ನರ್ಸ್ ನೇಣಿಗೆ ಶರಣು

    ಬೆಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ನರ್ಸ್ ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಗರದ ನಾಗರಭಾವಿಯಲ್ಲಿರುವ ಶ್ರೀದೇವಿ ಆಸ್ಪತ್ರೆಯಲ್ಲಿ ನಡೆದಿದೆ.

    ನಿಷ್ಕಲಾ(25) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಶ್ರೀದೇವಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಕಾರ್ಯನಿರ್ವಹಿಸುತ್ತಿದ್ದ ನಿಷ್ಕಲಾ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ವಾರದ ಹಿಂದೆ ನಿಷ್ಕಲಾಳ ಪ್ರೀತಿ ತಿರಸ್ಕರಿಸಿ ಗಂಗಾಧರ್ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಹೋಗಿದ್ದ.

    ಇಬ್ಬರು ಪ್ರೀತಿಸುತ್ತಿರುವ ಮನೆ ವಿಚಾರ ನಿಷ್ಕಲಾ ಪೋಷಕರಿಗೂ ತಿಳಿದಿತ್ತು. ಆದರೆ ಕೆಲ ದಿನಗಳಿಂದ ಗಂಗಾಧರ್ ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದ. ಈ ಕುರಿತು ನಿಷ್ಕಲಾ ಸಹೋದರನಿಗೂ ಗಂಗಾಧರ್ ನಡುವೆ ಜಗಳ ಸಂಭವಿಸಿತ್ತು. ಈ ಘಟನೆಯ ನಂತರ ತೀವ್ರವಾಗಿ ಮನನೊಂದಿದ್ದ ನಿಷ್ಕಲಾ ಇಂದು ಕೆಲಸಕ್ಕೆ ತೆರಳಿ ಆಸ್ಪತ್ರೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಿಷ್ಕಲಾ ಪೋಷಕರು ಗಂಗಾಧರ್ ತಮ್ಮ ಮಗಳಿಗೆ ಪ್ರೀತಿಯ ಹೆಸರು ಹೇಳಿ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಘಟನೆಯ ಕುರಿತು ನಿಷ್ಕಲಾ ಸಹೋದರ ಚಂದ್ರಾಲೇಔಟ್ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

    ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

    ಬೆಂಗಳೂರು: ಚಳಿ ಕಾಯಿಸಲು ಹೋದ ಯುವಕನೋರ್ವ ಬೆಂಕಿಗಾಹುತಿಯಾದ ಘಟನೆಯೊಂದು ನಡೆದಿದೆ.

    ಆನೇಕಲ್ ತಾಲೂಕಿನ ಅತ್ತಿಬೆಲೆಯ ಟಿವಿಎಸ್ ರಸ್ತೆ ಬಳಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೃತ ಯುವಕನನ್ನು 5 ವರ್ಷಗಳಿಂದ ಅತ್ತಿಬೆಲೆಯಲ್ಲಿ ಅಲೆದಾಡುತ್ತಿದ್ದ ಸುಮಾರು 29 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಎನ್ನಲಾಗಿದೆ.

    ಇಂದು ಬೆಳಿಗ್ಗೆ ಚಳಿ ಹೆಚ್ಚಿದ್ದ ಕಾರಣ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚುತ್ತಿದ್ದಾಗ ಯುವಕನ ಬಟ್ಟೆಗೆ ಹತ್ತಿಕೊಂಡಿದೆ. ಪರಿಣಾಮ ಒಂದರ ಮೇಲೆ ಒಂದರಂತೆ ಐದಾರು ಬಟ್ಟೆ ಧರಿಸಿದ್ದ ಯುವಕನ ಬಟ್ಟೆಗೆ ಬೆಂಕಿ ಹತ್ತಿಕೊಂಡಿದೆ. ಹೀಗಾಗಿ ಬೆಂಕಿ ಆರಿಸಲಾಗದೇ ಯುವಕ ಅಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

    ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

    ಮುಂಬೈ: ಬೈಕ್ ಸಮೇತ ಮ್ಯಾನ್ ಹೋಲ್ ಗೆ ಬಿದ್ದು ಬಳಿಕ ಟಯರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

    ಈ ಘಟನೆ ಮುಂಬೈನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಮೃತ ದುರ್ದೈವಿ ಯುವಕನನ್ನು ಮೋಹನ್ ರಾಥೋಡ್(27) ಎಂದು ಗುರುತಿಸಲಾಗಿದೆ. ಇವರು ಉಲ್ವೆ ನಿವಾಸಿ ಎನ್ನಲಾಗಿದೆ.

    ಏನಿದು ಘಟನೆ?: ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ತನ್ನ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಮೋಹನ್ ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ. ಬೈಕ್ ಮ್ಯಾನ್ ಹೋಲ್ ಗೆ ಬಿದ್ದ ಬಳಿಕ ಮ್ಯಾನ್ ಹೋಲ್ ಒಳಗಡೆಯೇ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಅವರ ದೇಹ ಭಾಗಶಃ ಸುಟ್ಟು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಸ್ಮಿತಾ ಜಾಧವ್ ತಿಳಿಸಿದ್ದಾರೆ.

    ಪೈಪ್ ಲೈನ್ ಗೋಸ್ಕರ ಈ ಮ್ಯಾನ್ ಹೋಲ್ ತೆರೆದಿದ್ದು, ಇದರ ಮೇಲೆ ಕವರ್ ಮಾಡದಿರುವುದು ಘಟನೆಗೆ ಕಾರಣವಾಗಿದ್ದು, ಅಲ್ಲದೇ ಮೃತ ಮೋಹನ್ ಮದ್ಯಪಾನ ಮಾಡಿದ್ದರಿಂದ ಬೈಕನ್ನು ನಿಯಂತ್ರಿಸಲು ಸಾಧ್ಯವಾಗದೇ ಈ ದುರಂತ ಸಂಭವಿಸಿದೆ ಅಂತ ಅವರು ಹೇಳಿದ್ದಾರೆ.

    ಘಟನೆಯ ಬಳಿಕ ಕೆಲ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಮೋಹನ್ ಅವರನ್ನು ಮ್ಯಾನ್ ಹೋಲ್ ನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೋಹನ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಸಿವಿಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೋಹನ್ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಅಂತ ಪೊಲೀಸರು ವಿವರಿಸಿದ್ದಾರೆ.

  • ತ್ರಿಬಲ್ ರೈಡಿಂಗ್ ಹೋಗಿದ್ದಕ್ಕೆ ಪೇದೆಯಿಂದ ಕಿರುಕುಳ ಆರೋಪ- ಯುವಕ ನೇಣಿಗೆ ಶರಣು

    ತ್ರಿಬಲ್ ರೈಡಿಂಗ್ ಹೋಗಿದ್ದಕ್ಕೆ ಪೇದೆಯಿಂದ ಕಿರುಕುಳ ಆರೋಪ- ಯುವಕ ನೇಣಿಗೆ ಶರಣು

    ಕಲಬುರಗಿ: ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದ್ದು, ಪೊಲೀಸ್ ಕಿರುಕುಳವೇ ಯುವಕನ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

    ರಮೇಶ್ ತಳವಾರ್(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜೇವರ್ಗಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು.

    ಜೇವರ್ಗಿ ಠಾಣೆಯ ಪೇದೆ ಕಿರುಕುಳ ನೀಡುತ್ತಿದ್ದರು ಎಂದು ರಮೇಶ್ ಸಂಬಂಧಿಕರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ರಮೇಶ್ ತ್ರಿಬಲ್ ರೈಡಿಂಗ್ ಹೋಗಿದ್ದಕ್ಕಾಗಿ ಮಲ್ಲು ಬಾಸಗಿ ಎಂಬ ಪೇದೆ ಪ್ರತಿನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.

    ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಲ್ಲಿನಿಂದ ತಲೆಗೆ ಹೊಡೆದು 500 ಅಡಿ ಆಳದ ಕಂದಕಕ್ಕೆ ನೂಕಿದ್ರು- 5 ದಿನಗಳ ನಂತರ ಜೀವಂತವಾಗಿ ಸಿಕ್ಕ ಯುವಕ

    ಕಲ್ಲಿನಿಂದ ತಲೆಗೆ ಹೊಡೆದು 500 ಅಡಿ ಆಳದ ಕಂದಕಕ್ಕೆ ನೂಕಿದ್ರು- 5 ದಿನಗಳ ನಂತರ ಜೀವಂತವಾಗಿ ಸಿಕ್ಕ ಯುವಕ

    ಇಂದೋರ್: ಅಪಹರಣಕ್ಕೊಳಗಾಗಿ, ತಲೆಗೆ ಕಲ್ಲಿನಿಂದ ಹೊಡೆದು 500 ಅಡಿ ಆಳದ ಕಂದಕಕ್ಕೆ ತಳ್ಳಿದರೂ 5 ದಿನಗಳ ನಂತರ ಪವಾಡಸದೃಶವಾಗಿ ಯುವಕ ಜೀವಂತವಾಗಿ ಸಿಕ್ಕಿರುವ ಘಟನೆ ಇಂದೋರ್‍ನಲ್ಲಿ ನಡೆದಿದೆ.

    ಸಾಗರ್ ಜಿಲ್ಲೆಯ ಶಾಹ್‍ಘರ್‍ನವನಾದ ಮೃದುಲ್ ಅಲಿಯಾಸ್ ಮನು ಭಲ್ಲಾ(20) ಅಪಹರಣಕ್ಕೊಳಗಾದ ಯುವಕ. ಸದ್ಯ ಇಂದೋರ್‍ನ ಬಾಂಬೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

    ಪೊಲೀಸರ ಪ್ರಕಾರ ಮೃದುಲ್ ಇಂದೋರ್‍ನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಇಲ್ಲಿನ ಪರ್ದೇಶಿಪುರದ ಕ್ಲರ್ಕ್ ಕಾಲೋನಿಯಲ್ಲಿ ತನ್ನ ಸ್ನೇಹಿತ ಸೌರಭ್ ಸೇನ್‍ನೊಂದಿಗೆ ಬಾಡಿಗೆ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಿದ್ದ. ಜನವರಿ 7 ರಂದು ಮೃದುಲ್ ಕಾಣೆಯಾಗಿದ್ದ. ಸೋಮವಾರದಂದು ಸೌರಭ್ ಹಾಗೂ ಆತನ ಸ್ನೇಹಿತರು ಮೃದುಲ್ ಕಾಣೆಯಾಗಿರುವ ಬಗ್ಗೆ ತಿಳಿಸಲು ಪೊಲೀಸರ ಬಳಿ ಹೋದಾಗ ಅವರು ಈ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಮೃದುಲ್ ತಂದೆ ಮೋಹಿತ್ ಭಲ್ಲಾ ಮರುದಿನ ಸಾಗರ್‍ನಿಂದ ಬಂದ ಬಳಿಕ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ರು.

    ಸಿಸಿಟಿವಿ ದೃಶ್ಯವಾಳಿ, ಕಾಲ್ ಡೀಟೇಲ್ಸ್ ಹಾಗೂ ಕೆಲವು ಸಾಕ್ಷ್ಯಾಧಾರದ ಮೇಲೆ ಪೊಲೀಸರು ಆಕಾಶ್ ರತ್ನಾಕರ್ ಹಾಗೂ ಆತನ ಇಬ್ಬರು ಸಹಚರರಾದ ರೋಹಿತ್ ಅಲಿಯಾಸ್ ಪಿಯೂಶ್ ಹಾಗೂ ವಿಜಯ್‍ನನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದು ಇಂದೋರ್‍ನವರಾಗಿದ್ದಾರೆ. ಆರೋಪಿ ಆಕಾಶ್ ವೈದ್ಯರೊಬ್ಬರ ಚಾಲಕನಾಗಿ ಕೆಲಸ ಮಾಡುತ್ತಿದ್ದು, ರೋಹಿಲ್ ಕಬ್ಬಿಣ ಫ್ಯಾಬ್ರಿಕೇಟರ್ ಆಗಿ ಹಾಗೂ ವಿಜಯ್ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

    ಕಿಡ್ನಾಪ್ ಮಾಡಿದ್ದು ಯಾಕೆ?: ಮೃದುಲ್ ಮನೆ ಬಳಿ ವಾಸಿಸುತ್ತಿದ್ದ ಯುವತಿಯೊಬ್ಬಳನ್ನ ಆಕಾಶ್ ಪ್ರೀತಿಸುತ್ತಿದ್ದು. ಆಕೆಯನ್ನ ಸೆಳೆಯಲು ಮೃದುಲ್ ಪ್ರಯತ್ನಿಸುತ್ತಿದ್ದಾನೆ ಎಂದು ಆಕಾಶ್ ಅನುಮಾನಿಸಿದ್ದ. ಅಲ್ಲದೆ ಮೃದುಲ್ ಮತ್ತು ಯುವತಿ ತಡರಾತ್ರಿಯ ವೇಳೆ ಚಟ್ ಮಾಡುತ್ತಿದ್ದರೆಂದು ಮೃದುಲ್‍ನನ್ನು ಕೊಲ್ಲಲು ಆಕಾಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಪಿತೂರಿ ಮಾಡಿದ್ದ. ಭಾನುವಾರದಂದು ಆಕಾಶ್ ತನ್ನ ಅಣ್ಣನ ಕಾರ್ ತೆಗೆದುಕೊಂಡು ಹೋಗಿ ಯುವತಿಯ ಅಂಕಲ್ ನಿನ್ನ ಜೊತೆ ಮತಾಡಬೇಕೆಂತೆ ಎಂದು ಹೇಳಿ ಮೃದುಲ್‍ನನ್ನು ಕರೆದುಕೊಂಡು ಹೋಗಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

    ಮೃದುಲ್‍ನನ್ನು ಕಾರಿನಲ್ಲಿ ಕೂರಿಸಿಕೊಂಡ ತಂಡ ಇಂದೋರ್‍ನಿಂದ 35 ಕಿ.ಮೀ ದೂರದ ಪೆದ್ಮಿ- ಉದಯ್‍ನಗರ್ ರಸ್ತೆಯಲ್ಲಿನ ಮೌರಾ ಘಾಟ್ ಹತ್ತಿರದ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೃದುಲ್‍ಗೆ ಥಳಿಸಿ, ಆತನ ತಲೆಗೆ ಕಲ್ಲಿನಿಂದ ಹೊಡೆದು ನಂತರ ಆತನ್ನನ್ನು ಕಟ್ಟಿದ್ದಾರೆ. ಈ ವೇಳೆ ಮೃದುಲ್ ಸತ್ತಿದ್ದಾನೆ ಎಂದು ತಿಳಿದಿದ್ದ ಅವರು, ಆಳವಾದ ಕಂದಕಕ್ಕೆ ಮೃದುಲ್‍ನನ್ನು ಎಸೆದಿದ್ದಾರೆ.

    ಪೊಲೀಸರು ಮೃದುಲ್‍ಗಾಗಿ ಶೋಧ ಕಾರ್ಯ ನಡೆಸಿದಾಗ 5 ದಿನಗಳ ನಂತರವೂ ಕಾಡಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಕಿಡ್ನಾಪರ್‍ಗಳು ತಾವು ಮೃದುಲ್‍ನನ್ನು ಕೊಲೆ ಮಾಡಿದ್ದಾಗಿ ಹೇಳಿದ್ರು ಎಂದು ಎಎಸ್‍ಪಿ ಪ್ರಶಾಂತ್ ಚೌಬೆ ಹೇಳಿದ್ದಾರೆ.

    ಮೃದುಲ್‍ನನ್ನು ಪರೀಕ್ಷೆ ಮಾಡಿದ ವೈದ್ಯರು ಆತನ ನಾಡಿಬಡಿತ 46ಕ್ಕೆ ಕುಸಿದಿದ್ದು, ಹೈಪೋಥರ್ಮಿಯಾದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದರು. ಆತನ ದೇಹದಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾಗಿದ್ದು, ಆತ ಬದುಕಿರೋದೇ ಒಂದು ಪವಾಡ ಎಂದು ವೈದ್ಯರಾದ ರವಿ ಬಗೇಲ್ ಹೇಳಿದ್ದಾರೆ.

    ನನ್ನ ಮಗ ಸತ್ತಿದ್ದಾನೆಂದು ತಿಳಿದು ಎಲ್ಲಾ ನಂಬಿಕೆ ಕಳೆದುಕೊಂಡಿದ್ದೆ. ಇಂದೋರ್‍ನ ಮನೆಗೆ ಬಂದ ಸಂಬಂಧಿಕರಿಗೂ ಹೀಗೆ ಹೇಳಿದ್ದೆ. ಈಗ ಆತ ಬದುಕಿರೋದು ದೇವರ ದಯೆ ಎಂದು ಮೃದುಲ್ ತಂದೆ ಹೇಳಿದ್ದಾರೆ.

  • ಆತ್ಮಹತ್ಯೆ ಮಾಡಿಕೊಂಡನೆಂದು ಮಗನ ಅಂತ್ಯಸಂಸ್ಕಾರ ಮಾಡಿದ ಪೋಷಕರಿಗೆ ಈಗ ಕೊಲೆ ಶಂಕೆ

    ಆತ್ಮಹತ್ಯೆ ಮಾಡಿಕೊಂಡನೆಂದು ಮಗನ ಅಂತ್ಯಸಂಸ್ಕಾರ ಮಾಡಿದ ಪೋಷಕರಿಗೆ ಈಗ ಕೊಲೆ ಶಂಕೆ

    ಯಾದಗಿರಿ: ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಘಟನೆ ವಡಗೇರಾ ಗ್ರಾಮದಲ್ಲಿ ನಡೆದಿದೆ. ಮಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದ ಪೋಷಕರು ಇದೀಗ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

    ವಡಗೇರಾ ನಿವಾಸಿ ದೇವಪ್ಪ ಮೃತ ವ್ಯಕ್ತಿ. ದೇವಪ್ಪ ಹಾಗೂ ಇದೇ ಗ್ರಾಮದ ನಿವಾಸಿ ಬಸಮ್ಮ ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಪ್ರೇಯಸಿ ಪೋಷಕರು ಮದುವೆ ನಿರಾಕರಿಸಿದಕ್ಕೆ ಡಿಸೆಂಬರ್ 10 ರಂದು ದೇವಪ್ಪ ಗ್ರಾಮದ ಹೊರಭಾಗದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ದೇವಪ್ಪನ ಪೋಷಕರು ಮೃತನ ಅಂತ್ಯಸಂಸ್ಕಾರ ಮಾಡಿದ್ದರು.

    ಆದರೆ ಈ ಪ್ರಕರಣದಲ್ಲಿ ದೇವಪ್ಪ ವಿಷ ಸೇವಿಸಿ ಸಾವನ್ನಪ್ಪಿಲ್ಲ ಎನ್ನುವುದಕ್ಕೆ ಈಗ ಪೋಷಕರಿಗೆ ದೇವಪ್ಪನ ಮೊಬೈಲ್ ನಲ್ಲಿರುವ ಕೆಲವು ಸಾಕ್ಷಿಗಳು ಸಿಕ್ಕಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಪ್ಪನನ್ನು ಪ್ರೇಯಸಿ ಬಸಮ್ಮಳ ಕಡೆಯವರು ಗ್ರಾಮದ ಹೊರಭಾಗಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

    ಕೊಲೆ ದೂರಿನ ಹಿನ್ನಲೆಯಲ್ಲಿ ಮಂಗಳವಾರದಂದು ಸಹಾಯಕ ಆಯುಕ್ತ ಡಾ. ಜಗದೀಶ್, ವಡಗೇರಾ ಪೊಲೀಸರು ಹಾಗೂ ವೈದ್ಯರ ಸಮ್ಮುಖದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

    ದೇವಪ್ಪ ವಿಷ ಸೇವಿಸಿ ಸಾವನ್ನಪ್ಪಿದ್ದಾನಾ ಅಥವಾ ಕೊಲೆ ನಡೆದಿದ್ಯಾ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟವಾಗಬೇಕಿದೆ.