Tag: youth

  • ಚುನಾವಣೆಗೂ ಮುನ್ನ ಯುವಕರಿಗೆ ಸಂದೇಶ ಸಾರಿದ ಕಿಚ್ಚ

    ಚುನಾವಣೆಗೂ ಮುನ್ನ ಯುವಕರಿಗೆ ಸಂದೇಶ ಸಾರಿದ ಕಿಚ್ಚ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೆ ತಿಂಗಳು ಮಾತ್ರ ಬಾಕಿಯಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಅಂತಿಮಗೊಳಿಸಿ, ಪ್ರಚಾರಕ್ಕಾಗಿ ಸ್ಟಾರ್ ಕಲಾವಿದರನ್ನ ಕರೆತರುವ ಪ್ರಯತ್ನ ಮಾಡುತ್ತಿದೆ.

    ಕಿಚ್ಚ ಸುದೀಪ್ ಈ ಬಾರಿ ಚುನಾವಣ ಅಖಾಡಕ್ಕೆ ಧುಮುಕುತ್ತಾರೆ, ರಾಜಕೀಯ ಪಕ್ಷದ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗಿದೆ. ಈ ಮಧ್ಯೆ ಸುದೀಪ್ ಅವರು ಮತದಾನದ ಬಗ್ಗೆ ಅರಿವು ಮೂಡಿಸಲು ಜನರಲ್ಲಿ ಮನವಿ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯುವಕರು ಹೆಚ್ಚು ಭಾಗವಹಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸುದೀಪ್ ಯುವಕರಿಗೆ ಸಂದೇಶ ನೀಡಿದ್ದಾರೆ.

    ಒಂದು ಉತ್ತಮ ಸಮಾಜ ಮತ್ತು ಉತ್ತಮ ದೇಶವನ್ನ ಕಟ್ಟಲು ಮತದಾನ ತುಂಬ ಅವಶ್ಯಕ. ಭ್ರಷ್ಟಚಾರವನ್ನು ತಡೆಗಟ್ಟಲು ಮತ್ತು ಒಬ್ಬ ಉತ್ತಮ ನಾಯಕನನ್ನ ಉಳಿಸಿಕೊಳ್ಳಲು ನಿಮ್ಮ ಮತ ಅತ್ಯಾಮೂಲ್ಯ. ಆದ್ದರಿಂದ ಮತದಾನ ಮಾಡಿ, ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳಿ. 18 ವರ್ಷ ಆಗುತ್ತಿದ್ದಂತೆ ನೀವು ಮತದಾನ ಮಾಡಲು ಅರ್ಹರು. ಯಾರ ಬಳಿ ವೋಟ್ ಐಡಿ ಕಾರ್ಡ್ ಇಲ್ಲವೋ, ಅವರ ಬೇಗ ವೋಟ್ ಐಡಿ ಕಾರ್ಡ್ ಮಾಡಿಸಿಕೊಳ್ಳಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರನೇ ನಿರ್ಣಾಯಕ. ಈಗಾಗಲೇ ಮತದಾರರಾಗಿ ನೊಂದಾಯಿಸಿಕೊಳ್ಳಿ ಎಂದು ಬಿ-ಪ್ಯಾಕ್ ಎಂಬ ಸಂಸ್ಥೆ ಅಭಿಯಾನ ಆರಂಭಿಸಿದೆ. ಇದಕ್ಕೆ ಕಿಚ್ಚ ಸುದೀಪ್ ಸಹಕರಿಸಿದ್ದು, ಯುವಕರಿಗೆ ಸಂದೇಶ ನೀಡಿದ್ದಾರೆ.

     

  • ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

    ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

    ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ಬಗ್ಗೆ ಅವಹೇಳನಕಾರಿಯಾಗಿ ಬರೆದು ಭಾವಚಿತ್ರ ಸಮೇತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಯುವಕನೋರ್ವನನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಡ್ಯಾನಿಯಲ್ ನ್ಯೂಟನ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಕ್ ಡ್ಯಾನಿಯಲ್ ಎಂದೇ ಹೆಸರುವಾಸಿಯಾಗಿರುವ ಡ್ಯಾನಿಯಲ್ ಮೂಲತಃ ಬಾಗಲಕೋಟೆಯ ಯುವಕ. ಹವ್ಯಾಸಿ ಹಾವು ಹಿಡಿಯುವ ವ್ಯಕ್ತಿಯಾಗಿದ್ದು, ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಮೇಟಿ ಅವರ ಬಗ್ಗೆ ಅವಹೇಳನಕಾರಿ ಭಾವಚಿತ್ರ ಹಾಕಿದ್ದಾನೆ. ಇಂತವರನ್ನು ಮಂದಿರ, ಮಸೀದಿ ಚರ್ಚ್‍ಗಳ ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸೋದು ಸರಿಯಲ್ಲ. ಹಾಗಂತ ನನಗೆ ಅವರ ಬಗ್ಗೆ ವ್ಯಯಕ್ತಿಕ ದ್ವೇಷವಿಲ್ಲ. ಸಮಾಜ ತಲೆತಗ್ಗಿಸುವಂತ ಕೃತ್ಯವೆಸಗಿದ ಇಂತವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ ಎಂಬ ಕಳಕಳಿ ಎಂದು ಪೋಸ್ಟ್ ಮಾಡಿದ್ದಾನೆ.

    ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಹೋದರರೆ ಎಷ್ಟು ಜನ ಚಿತ್ರದಲ್ಲಿರುವ ವ್ಯಕ್ತಿಯನ್ನು ಪವಿತ್ರ ಸ್ಥಳಕ್ಕೆ ಆಹ್ವಾನಿಸುತ್ತೀರಿ? ಈ ಬಗ್ಗೆ ಪ್ರಾಮಾಣಿಕವಾಗಿ ಕಮೆಂಟ್ ಮಾಡಿ ಎಂದು ಉಲ್ಲೇಖ ಮಾಡಿದ್ದಾನೆ. ಇಂತವರನ್ನು ಆಹ್ವಾನಿಸಿದರೆ ಸಮಾಜಕ್ಕೆ ಅದರಲ್ಲೂ ಯುವಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶಭಕ್ತ ನಾಗರಿಕರು ಇದನ್ನು ಅರ್ಥೈಸಿಕೊಂಡಿದ್ದೀರಿ ಎಂಬ ಭರವಸೆ ಇದೆ. ಇನ್‍ಕಿಲಾಬ್ ಜಿಂದಾಬಾದ್ ಎಂದು ಬರೆದಿದ್ದಾನೆ.

    ಹೆಚ್ ವೈ ಮೇಟಿಯವರನ್ನು ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿನ ಚರ್ಚ್ ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ಬರೆದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೇಟಿ ಬೆಂಬಲಿಗರು ಪೊಲೀಸರಿಗೆ ತಿಳಿಸಿದ್ದಾರೆ. ಅಹಿತಕರ ಘಟನೆ ತಡೆಯುವ ಹಿನ್ನೆಲೆಯಲ್ಲಿ ಸ್ನೇಕ್ ಡ್ಯಾನಿಯಲ್ ನನ್ನು ನವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸ್ನೇಕ್ ಡ್ಯಾನಿಯಲ್ ಹಾವು ಹಿಡಿಯೋದಕ್ಕೆ ಹೆಸರುವಾಸಿಯಾಗಿದ್ದಾನೆ. ಹಾವಿನ ಬಗ್ಗೆ ಮಕ್ಕಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸೋದರ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ಈತನ ಸದ್ಯದ ಪೋಸ್ಟ್ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

  • ಹಾಡಹಗಲೇ ಎಲ್ಲರೆದುರು ಮಾರಕಾಸ್ತ್ರ ಝಳಪಿಸಿ ಯುವಕನನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು

    ಹಾಡಹಗಲೇ ಎಲ್ಲರೆದುರು ಮಾರಕಾಸ್ತ್ರ ಝಳಪಿಸಿ ಯುವಕನನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು

    ಮೈಸೂರು: ಹಾಡಹಗಲೇ ದುಷ್ಕರ್ಮಿಗಳ ತಂಡ ಯುವಕನೊಬ್ಬನನ್ನು ಅಪಹರಣ ಮಾಡಿರುವ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.

    ಸಾರ್ವಜನಿಕರ ಎದುರೇ ಮಾರಕಾಸ್ತ್ರ ಝಳಪಿಸಿದ ಗ್ಯಾಂಗ್ ಇನ್ನೋವಾ ಕಾರಲ್ಲಿ ಯುವಕನನ್ನು ಕಿಡ್ನಾಪ್ ಮಾಡಿದೆ. ರಾಜೀವ ನಗರದಲ್ಲಿ ಕೆಎ02, ಡಿ 233 ನಂಬರ್‍ನ ಕಾರಲ್ಲಿ ಬಂದ ಖದೀಮರು ಟೀ ಅಂಗಡಿ ಮುಂದೆ ನಿಂತಿದ್ದ ಯುವಕನನ್ನು ಅಪಹರಿಸಿದ್ದಾರೆ.

    ಈ ವೇಳೆ ಗುಂಪಿನಿಂದ ತಪ್ಪಿಸಿಕೊಳ್ಳಲು ಯುವಕ ಯತ್ನಿಸಿದ್ದು, ಬೆನ್ನು ಹತ್ತಿ ಆತನ್ನನು ಹಿಡಿದು ಕಾರಿಗೆ ಹಾಕಿಕೊಂಡು ತಂಡ ಅಲ್ಲಿಂದ ಪರಾರಿಯಾಗಿದೆ. ಹಣಕಾಸು ವಿಷಯಕ್ಕೆ ಕಿಡ್ನಾಪ್ ಆಗಿರಬಹುದೆಂದು ಶಂಕಿಸಲಾಗಿದೆ. ಆದ್ರೆ ಯುವಕ ಯಾರು ಅನ್ನೋದು ಇನ್ನೂ ಖಚಿತವಾಗಿಲ್ಲ.

    ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರು ಮಾಹಿತಿ ನೀಡಲು ಹೆದರುತ್ತಿದ್ದಾರೆ. ಪೊಲೀಸರು ಯುವಕನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಫೇಸ್‍ಬುಕ್ ಬಳಸೋ ಮಹಿಳೆಯರೇ ಈ ಸ್ಟೋರಿ ಓದಿ- ಯಾರಿಗೋ ನೀವು ಈ ವರ್ಷದ ಲವ್ವರ್ ಆಗ್ಬಹುದು ಎಚ್ಚರ

    ಫೇಸ್‍ಬುಕ್ ಬಳಸೋ ಮಹಿಳೆಯರೇ ಈ ಸ್ಟೋರಿ ಓದಿ- ಯಾರಿಗೋ ನೀವು ಈ ವರ್ಷದ ಲವ್ವರ್ ಆಗ್ಬಹುದು ಎಚ್ಚರ

    ಬೆಂಗಳೂರು: ಫೇಸ್ ಬುಕ್ ಬಳಸೋ ಮಹಿಳೆಯರೇ, ಯುವತಿಯರೇ ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದೆ ಎಚ್ಚರ. ಫೇಸ್ ಬುಕ್‍ನಲ್ಲಿ ಡ್ಯಾಡೀಸ್ ಗೇಮ್ಸ್ ಲಿಂಕ್‍ನಿಂದಾಗಿ ಇಲ್ಲೊಬ್ಬರು ಮದುವೆಯಾಗಿರೋ ಗೃಹಿಣಿ ಮತ್ತೊಬ್ಬರ ಲವ್ವರ್ ಆಗಿ ಮುಜುಗರ ಅನುಭವಿಸಿದ್ದಾರೆ.

    ಕಾಮಾಕ್ಷಿಪಾಳ್ಯದ ನಿವಾಸಿ ಪ್ರಶಾಂತ್ ಗೌಡ ಫೇಸ್ ಬುಕ್‍ನಲ್ಲಿ ಬರುವ ಲಿಂಕ್ ಬಳಸಿ ಅಶ್ವಿನಿ ನನ್ನ ಈ ವರ್ಷದ ಲವ್ವರ್ ಎಂದು ಸ್ಟೇಟಸ್ ಹಾಕಿಕೊಂಡಿದ್ದಾನೆ. ಜನಸ್ಮೃತಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆಯಾಗಿರುವ ಅಶ್ವಿನಿಯವರಿಗೆ ಸ್ನೇಹಿತರು ಈ ಬಗ್ಗೆ ಕರೆ ಮಾಡಿ ಮಾಹಿತಿ ತಿಳಿಸಿ, ಸ್ಕ್ರೀನ್ ಶಾಟ್ಸ್ ತೆಗೆದು ಕಳಿಸಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಅಶ್ವಿನಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

    ಮಹಿಳಾ ಸಂಘಟನೆಯ ಅಧ್ಯಕ್ಷರಿಗೆ ಈ ರೀತಿ ಮಾಡಿದರೆ ಸಾಮಾನ್ಯ ಹೆಣ್ಣುಮಕ್ಕಳ ಸ್ಥಿತಿ ಏನು ಎನ್ನುವುದು ಅಶ್ವಿನಿಯವರ ಪ್ರಶ್ನೆ. ಇಂತಹ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದಾರೆ.

     

     

  • ಹೌದು, ನನ್ನ ಮಗನ ಕೊಲೆಯಾಗಿದೆ, ಅದನ್ನ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ: ಅಂಕಿತ್ ತಂದೆ

    ಹೌದು, ನನ್ನ ಮಗನ ಕೊಲೆಯಾಗಿದೆ, ಅದನ್ನ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ: ಅಂಕಿತ್ ತಂದೆ

    ನವದೆಹಲಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಯುವತಿಯ ಕುಟುಂಬದ ಸದಸ್ಯರು ನಡುರಸ್ತೆಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಕೊಲೆಯಾದ ಅಂಕಿತ್ ತಂದೆ ಯಶ್‍ ಪಾಲ್ ನನ್ನ ಮಗನ ಕೊಲೆಯನ್ನು ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ ಎಂದು ಮನವಿ ಮಾಡಿದ್ದಾರೆ.

    ಅಂಕಿತ್(23) ಸಲೀಮಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಆಕೆಯ ಕುಟುಂಬದವರು ಆತನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರೋ ಅಂಕಿತ್ ತಂದೆ ಯಶ್‍ ಪಾಲ್ ಸಕ್ಸೇನಾ, ಯಾವುದೇ ರೀತಿಯ ಕೆರಳಿಸುವ ಹೇಳಿಕೆಗಳು ನನಗೆ ಬೇಕಾಗಿಲ್ಲ. ಈ ಘಟನೆಯಿಂದ ನನಗೆ ಬಹಳ ಬೇಸರವಾಗಿದೆ. ಮುಸ್ಲಿಂ ವಿರುದ್ಧ ಯಾರೂ ಹಗೆ ಸಾಧಿಸಬೇಡಿ. ನಾನು ಯಾವ ಧರ್ಮ ವಿರೋಧಿಯೂ ಅಲ್ಲ. ಹೌದು, ನನ್ನ ಮಗನ ಕೊಲೆಯಾಗಿದೆ. ಮುಸ್ಲಿಮರೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಹಾಗಂತ ಎಲ್ಲಾ ಮುಸ್ಲಿಮರು ಒಂದೇ ರೀತಿ ಎಂದಲ್ಲ. ಕೋಮು ದ್ವೇಷ ಹರಡಲು ನನ್ನನ್ನು ಬಳಸಿಕೊಳ್ಳಬೇಡಿ ಹಾಗೂ ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ. ನನ್ನ ಮಗನ ಕೊಲೆ ಧರ್ಮಕ್ಕೆ ಲಿಂಕ್ ಮಾಡಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ನನ್ನ ಮಗನ ಕತ್ತು ಸೀಳಿ ಕೊಲೆ ಮಾಡಿದ 2-3 ಸೆಕೆಂಡ್‍ಗಳಲ್ಲೇ ನನ್ನ ಮಗ ಸತ್ತು ಹೋಗಿದ್ದನು. ಘಟನೆ ನಡೆದ ಸ್ಥಳದಲ್ಲಿ ಸಾವಿರಾರು ಮಂದಿ ಇದ್ದರು. ಆದರೆ ಯಾರೂ ನನ್ನ ಮಗನನ್ನು ಉಳಿಸಲಿಲ್ಲ ಹಾಗೂ ಆಸ್ಪತ್ರೆಗೂ ಕರೆದುಕೊಂಡು ಹೋಗಲಿಲ್ಲ ಎಂದು ಅಂಕಿತ್ ತಂದೆ ಯಶ್‍ ಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ನಾನು ಎನೂ ಮಾಡಿಲ್ಲ. ನಿಮ್ಮ ಮಗಳನ್ನು ನಾನು ಎಲ್ಲೂ ಕರೆದುಕೊಂಡು ಹೋಗಿಲ್ಲ. ನಿಮಗೆ ಏನೇ ಮಾಡಬೇಕಾದರೂ ನನಗೆ ಮಾಡಿ. ನಾನು ಇಲ್ಲಿಯೇ ಇದ್ದೇನೆ ಎಂದು ಅಂಕಿತ್ ಸಲೀಮಾ ಅವರ ತಾಯಿಯ ಮುಂದೆ ಕಿರುಚಾಡಿದ್ದ. ಆದ್ರೆ ಕೆಲವೇ ಸೆಕೆಂಡ್‍ಗಳಲ್ಲಿ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಹೋದ ಮೇಲೆ ನನ್ನ ಮಗನ ರಕ್ತಸಿಕ್ತ ದೇಹವನ್ನು ನೋಡಿ ನಾನು ಶಾಕ್ ಆದೆ. ಅಳುತ್ತಾ, ಕಿರುಚುತ್ತಾ ನನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ನನ್ನ ಮಗ ಪ್ರಜ್ಞೆ ತಪ್ಪಿ ಬಿದ್ದಿರಬಹುದು, ವೈದ್ಯರು ಏನಾದರೂ ಮಾಡಿ ನನ್ನ ಮಗನನ್ನು ಉಳಿಸಿಕೊಳ್ಳಬಹುದು. ಅವನು ಬದುಕುಳಿಯಬಹುದು ಎಂಬ ಸಣ್ಣ ಆಸೆ ನನಗಿತ್ತು. ಆದರೆ ಆ ರೀತಿ ಏನೂ ಆಗಲಿಲ್ಲ ಎಂದು ಯಶ್‍ಪಾಲ್ ಕಣ್ಣೀರಿಟ್ಟರು.

    ನನ್ನ ಮಗ ಆ ಯುವತಿಯನ್ನು ಪ್ರೀತಿಸುತ್ತಿದ್ದನು ಎಂಬ ವಿಷಯ ನನಗೆ ತಿಳಿದಿರಲಿಲ್ಲ. ಅವರಿಬ್ಬರೂ ಸ್ನೇಹಿತರು ಎಂಬುದು ಮಾತ್ರ ಗೊತ್ತಿತ್ತು ಎಂದು ಅಂಕಿತ್ ತಂದೆ ತಿಳಿಸಿದ್ದಾರೆ. ಮಗನನ್ನು ಕೊಂದ ಆರೋಪಿಗಳನ್ನ ಗಲ್ಲಿಗೇರಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವತಿಯನ್ನು ಪ್ರೀತ್ಸಿದ್ದಕ್ಕೆ ನಡುರಸ್ತೆಯಲ್ಲಿ ಬಿತ್ತು ಹೆಣ

     

  • ಮುಸ್ಲಿಂ ಯುವತಿಯನ್ನು ಪ್ರೀತ್ಸಿದ್ದಕ್ಕೆ ನಡುರಸ್ತೆಯಲ್ಲಿ ಬಿತ್ತು ಹೆಣ

    ಮುಸ್ಲಿಂ ಯುವತಿಯನ್ನು ಪ್ರೀತ್ಸಿದ್ದಕ್ಕೆ ನಡುರಸ್ತೆಯಲ್ಲಿ ಬಿತ್ತು ಹೆಣ

    ನವದೆಹಲಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಯುವತಿಯ ಕುಟುಂಬದ ಸದಸ್ಯರು ನಡುರಸ್ತೆಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    ಅಂಕಿತ್(23) ಕೊಲೆಯಾದ ಯುವಕ. ಅಂಕಿತ್, ಸಲೀಮಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಆಕೆಯ ಕುಟುಂಬದವರು ಆತನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ಘಟನೆಯಿಂದ ಸಲೀಮಾ ಗಾಬರಿಗೊಂಡು ತನ್ನ ಮನೆಗೆ ಹೋಗಲು ಭಯಗೊಂಡು ನಾರಿನೀಕೆತನ್‍ನಲ್ಲಿ ವಾಸಿಸುತ್ತಿದ್ದಾರೆ.

    ಮದುವೆ ಆಗಲು ನಿರ್ಧರಿಸಿದ್ವಿ: ನಾವಿಬ್ಬರು ಮದುವೆ ಆಗಲು ನಿರ್ಧರಿಸಿದ್ದೇವು. ಅಂಕಿತ್‍ನನ್ನು ಭೇಟಿಯಾಗಲು ನಾನು ನನ್ನ ಮನೆಯಿಂದ ಹೊರಟಿದ್ದೆ. ಆಗ ಅಂಕಿತ್ ನ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ತಿಳಿಯಿತು. ಈ ಕೃತ್ಯದಲ್ಲಿ ನನ್ನ ಕುಟುಂಬದವರು ಭಾಗಿಯಾಗಿದ್ದು, ನನ್ನ ಮಾವನೇ ಈ ಎಲ್ಲ ಕೃತ್ಯಕ್ಕೆ ಕಾರಣ ಎಂಬುದು ತಿಳಿದು ಬಂತು. ನಾನು ಅಂಕಿತ್‍ನನ್ನು ಭೇಟಿಯಾಗಲು ಹೊರಟಾಗ ದಾರಿ ಮಧ್ಯೆ ನನಗೆ ಅಂಕಿತ್ ಕೊಲೆ ಆಗಿರುವ ಬಗ್ಗೆ ತಿಳಿಯಿತು ಎಂದು ಸಲೀಮಾ ಹೇಳಿದ್ದಾರೆ.

    ಮನೆಗೆ ಹೋಗಲ್ಲ: ಸದ್ಯ ಸಲೀಮಾ ದೆಹಲಿಯ ಹರಿನಗರದಲ್ಲಿರುವ ನಾರಿನಿಕೇತನ್ ನಲ್ಲಿ ವಾಸವಾಗಿದ್ದಾರೆ. ಮತ್ತೆ ಪೊಲೀಸರು ಸಲೀಮಾಗೆ ತನ್ನ ಮನೆಗೆ ಹಿಂತಿರುಗುವೆಯಾ ಎಂದು ಕೇಳಿದ್ದಕ್ಕೆ ಆಕೆ ನಿರಾಕರಿಸಿದ್ದಾರೆ. ಸಲೀಮಾ ತನ್ನ ಸಂಬಂಧಿಕರ ಜೊತೆಗೂ ಮಾತನಾಡುತ್ತಿಲ್ಲ ಹಾಗೂ ತುಂಬಾ ಮೌನವಾಗಿ ಒಂದು ಕಡೆ ಇರುತ್ತಾರೆ ಎಂದು ವರದಿಯಾಗಿದೆ.

    ಕುಟುಂಬದವರು ನಾಪತ್ತೆ: ಈ ಘಟನೆ ನಂತರ ಸಲೀಮಾ ಕುಟುಂಬದವರು ತಲೆಮರೆಸಿಕೊಂಡಿದ್ದು, ಅವರ ಮನೆಗೂ ಕೂಡ ಬೀಗ ಹಾಕಿದ್ದಾರೆ. ಅಕ್ಕಪಕ್ಕದ ಮನೆಯವರನ್ನು ಕೇಳಿದ್ದಾಗ ಅವರು ಯಾರೊಂದಿಗೂ ಸಲುಗೆಯಿಂದ ಇರುತ್ತಿರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಂಕಿತ್ ಹಾಗೂ ಸಲೀಮಾ ಪ್ರೀತಿ ಅವರಿಗೆ ಮೊದಲಿನಿಂದಲ್ಲೂ ತಿಳಿದಿತ್ತು. ಈ ವಿಚಾರಕ್ಕಾಗಿ ಸಲೀಮಾನನ್ನು ಸಾಕಷ್ಟು ಬಾರಿ ದೈಹಿಕವಾಗಿ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲದೇ ಸಲೀಮಾ 17 ವರ್ಷವಿರುವಾಗಲೇ ಆಕೆಯನ್ನು ಬೇರೆಯವರ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಆದರೆ ಅಂಕಿತ್ ಜೊತೆಗೆ ಪ್ರೀತಿಯನ್ನು ತಿಳಿದು ಆ ಹುಡುಗನ ಮನೆಯವರು ಮದುವೆಯಾಗಲು ನಿರಾಕರಿಸಿದರು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

  • ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

    ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

    ಬೀಜಿಂಗ್: ಚೀನಾದ ಯುವಕನೊಬ್ಬ ಸೈಬರ್ ಕೆಫೆಯಲ್ಲಿ ನಿರಂತರವಾಗಿ 20 ಗಂಟೆ ಕಾಲ ವಿಡಿಯೋ ಗೇಮ್ ಆಡಿದ ಪರಿಣಾಮ ಆತನ ಸೊಂಟದಿಂದ ಕೆಳಭಾಗ ಸಂಪೂರ್ಣ ಸ್ವಾಧೀನವೇ ಕಳೆದುಕೊಂಡಿದ್ದಾನೆ.

    ಯುವಕ ವಿಡಿಯೋ ಗೇಮ್ ಆಡಲು ಜನವರಿ 27ರಂದು ಸಂಜೆ ಸೈಬರ್ ಕೆಫೆಗೆ ಹೋಗಿದ್ದು, ಜನವರಿ 28 ರ ಮಧ್ಯಾಹ್ನದ ವರೆಗೂ ಗೇಮ್ ಆಡಿದ್ದಾನೆ. ನಂತರ ಆತ ಶೌಚಾಲಯಕ್ಕೆ ಹೋಗಬೇಕೆಂದು ಮೇಲೇಳಲು ಪ್ರಯತ್ನಿಸಿದ್ದಾನೆ. ಆದರೆ ಅವನಿಗೆ ಏಳಲು ಸಾಧ್ಯವಾಗಲಿಲ್ಲ. ಆಗ ಅವನಿಗೆ ತಾನು ಯಾವ ಕಡೆಯೂ ಅಲುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ. ಅದೇ ಕೆಫೆಯಲ್ಲಿ ಇದ್ದ ಆತನ ಸ್ನೇಹಿತನಲ್ಲಿ ತನ್ನ ಸೊಂಟದಿಂದ ಕೆಳಭಾಗದ ಅಂಗಗಳು ಸ್ವಾಧೀನ ಇಲ್ಲದಂತೆ ಆಗಿದೆ ಎಂಬುದನ್ನ ಹೇಳಿದ್ದು, ಅವರು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಯುವಕನನ್ನು ಸ್ಟ್ರೆಚ್ಚರ್ ನಲ್ಲಿ ಇರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಗೇಮ್ ಕಂಪ್ಲೀಟ್ ಮಾಡಲು ಗೆಳೆಯನಿಗೆ ಹೇಳ್ದ: ಆಶ್ಚರ್ಯವೆಂದರೆ ಆ ರೀತಿಯ ಪರಿಸ್ಥಿತಿ ಇದ್ದರೂ ಯುವಕ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದ. ತನ್ನ ಬದಲಿಗೆ ತನ್ನ ಆಟವನ್ನು ಪೂರ್ಣಗೊಳಿಸಲು ಸ್ನೇಹಿತನಿಗೆ ಮನವಿ ಮಾಡಿಕೊಂಡಿದ್ದ.

    ಯುವಕ ಯಾವ ಆಟವನ್ನು ಆಡುತ್ತಿದ್ದನು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಸದ್ಯಕ್ಕೆ ಆ ಯುವಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನಾ ಇಲ್ಲವಾ ಎಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ.

    ಗೇಮ್‍ಗೆ ಅಡಿಕ್ಷನ್ ಯುವಕ ಜನಾಂಗಕ್ಕೆ ಮಾರಕವಾದ ಅನೇಕ ಉದಾಹರಣೆಗಳಿವೆ. ಈ ಹಿಂದೆ ಚೀನಾದಲ್ಲಿ ನಿರಂತರ 24 ಗಂಟೆಗಳ ಕಾಲ ತನ್ನ ಮೊಬೈಲ್ ಫೋನ್‍ನಲ್ಲಿ ಗೇಮ್ ಆಡಿ ಮಹಿಳೆಯೊಬ್ಬಳು ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಳು ಎಂದು ವರದಿಯಾಗಿತ್ತು. ಇದನ್ನೂ ಓದಿ: ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

  • 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

    25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

    ಢಾಕಾ: ವರ್ಷದ ಹಿಂದೆ ಬಾಂಗ್ಲಾದೇಶದ ವ್ಯಕ್ತಿಯೊಬ್ಬರ ಮೈತುಂಬಾ ತೊಗಟೆ ರೀತಿಯಲ್ಲಿ ಬೆಳೆದು ಶಸ್ತ್ರಚಿಕಿತ್ಸೆ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ರು. ಆದ್ರೆ 25 ಬಾರಿ ಶಸ್ತ್ರಚಿಕಿತ್ಸೆಯ ನಂತರವೂ ಆ ವ್ಯಕ್ತಿಯ ಕೈಯಲ್ಲಿ ಮತ್ತೆ ತೊಗಟೆ ಬೆಳೆಯಲು ಶುರುವಾಗಿದೆ.

    ರಿಕ್ಷಾ ತಳ್ಳುವ ಕೆಲಸ ಮಾಡಿಕೊಂಡಿದ್ದ ಅಬುಲ್ ಬಜಂದರ್ ಈ ರೀತಿಯ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು `ಟ್ರಿ ಮ್ಯಾನ್’ ಅಂತಾನೇ ಕರೆಯಲಾಗುತ್ತಿದೆ.

    24ನೇ ಬಾರಿಯ ಶಸ್ತ್ರಚಿಕಿತ್ಸೆಯ ಬಳಿಕ ಇವರ ಕೈ ಹಾಗೂ ಕಾಲುಗಳಲ್ಲಿ ಬೆಳೆದಿದ್ದ ತೊಗಟೆ ರೀತಿಯ ಅಂಶವನ್ನು ತೆಗೆದ ನಂತರ ಕಾಯಿಲೆ ವಾಸಿಯಾಗಿರುವುದಾಗಿ ವೈದ್ಯರು ಹೇಳಿದ್ದರು. ಅದಾಗಿ ವರ್ಷ ಕಳೆಯುವಷ್ಟರಲ್ಲಿ ಬಜಂದರ್ ಕೈಯಲ್ಲಿ ಮತ್ತೆ ತೊಗಟೆಯ ಬೆಳವಣಿಗೆ ಶುರುವಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಖಾಯಿಲೆಯನ್ನ ಗುಣಪಡಿಸಿದ್ದು ವೈದ್ಯಕೀಯ ಇತಿಹಾಸದಲ್ಲೇ ಮೇಲುಗಲ್ಲು ಎಂದು ವೈದ್ಯರು ಹೇಳಿಕೊಂಡಿದ್ದರು. ಆದ್ರೆ ಇದೀಗ ಅದೇ ಕಾಯಿಲೆಯಿಂದ ಅವರು ಬಳಲುತ್ತಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲನೇ ಬಾರಿಗಿಂತಲೂ ಈ ಬಾರಿ ಈ ಪ್ರಕರಣ ನಮಗೆ ಅತ್ಯಂತ ದೊಡ್ಡ ಸವಾಲಾಗಿದೆ ಅಂತ ಸರ್ಜನ್ ಸಮಂತ್ ಲಾಲ್ ಸೇನ್ ಹೇಳಿದ್ದಾರೆ.

    ಈ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಬಜಂದರ್ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇವರ ಜೊತೆ ಕುಟುಂಬವೂ ಆಸ್ಪತ್ರೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಮತ್ತೆ ನನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರಾ ಎಂಬ ಆತಂಕ ಶುರುವಾಗಿದೆ. ಇದರಿಂದ ನನ್ನ ಕೈ ಹಾಗೂ ಪಾದಗಳು ಸರಿಯಾಗುತ್ತದೆ ಎಂಬ ಭರವಸೆ ನನಗಿಲ್ಲ ಎಂದು ಢಾಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 27 ವರ್ಷದ ಬಜಂದರ್ ಹೇಳಿದ್ದಾರೆ. ಬಜಂದರ್ ಅವರು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಿ ಕೈ ಮತ್ತು ಕಾಲಿನಿಂದ ಸುಮಾರು 5 ಕೆಜಿ ತೂಕದ ಮರದಂತೆ ಬೆಳೆದ ಭಾಗವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಮತ್ತೆ ಶಸ್ತ್ರ ಚಿಕಿತ್ಸೆ ಪಡೆಯಲು ಅವರು ಭಯಪಡುತ್ತಿದ್ದಾರೆ.

    ಇದೇ ಆಸ್ಪತ್ರೆಯ ಒಂದು ಪುಟ್ಟ ಕೋಣೆಯಲ್ಲಿ ಬಜಂದರ್ ಪತ್ನಿ ಹಾಗೂ 4 ವರ್ಷದ ಮಗಳು ಕೂಡ ವಾಸವಾಗಿದ್ದಾರೆ. ಇದೇ ವಾರ ಬಜಂದರ್ 25ನೇ ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 4 ವರ್ಷದ ಮಗಳನ್ನ ನೋಡಿಕೊಳ್ಳುತ್ತಿರೋ ಬಜಂದರ್ ಪತ್ನಿ ಗಂಡನ ಆರೋಗ್ಯ ಸುಧಾರಿಸಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಬಜಂದರ್ ಅವರ ವಿಚಿತ್ರ ಕಾಯಿಲೆಗೆ ಈವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಬಜಂದರ್ ತನ್ನ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತಿಯಲ್ಲಿದ್ದಾರೆ. ನನ್ನ ಮಗಳು ಡಾಕ್ಟರ್ ಆಗಬೇಕೆಂದು ಯಾವಾಗ್ಲೂ ಬಯದಿದ್ದೆ. ಆದ್ರೆ ನನ್ನ ಸ್ಥಿತಿ ಮತ್ತಷ್ಟು ಹದಗೆಟ್ಟರೆ ಆಕೆಯನ್ನು ಶಾಲಾಗೆ ತಾನೇ ಹೇಗೆ ಕಳಿಸಲಿ ಎಂದು ಬಂಜಂದರ್ ಚಿಂತೆಯಲ್ಲಿದ್ದಾರೆ.

    ಬಜಂದರ್ ಬಳಲುತ್ತಿರುವ ಕಾಯಿಲೆಗೆ ಎಪಿಡರ್ಮೊ ಡಿಸ್ಪ್ಲೇಸಿಯಾ ವೆರುಸಿಫಾರ್ಮಿಸ್ ಎಂದು ಕರೆಯಲಾಗುತ್ತದೆ. ಅಪರೂಪದಲ್ಲಿ ಅಪರೂಪವೆಂಬಂತೆ ಜಗತ್ತಿನಾದ್ಯಂತ ಅರ್ಧ ಡಜನ್ ನಷ್ಟು ಮಂದಿ ಈ ಕಾಯಿಲೆ ಹೊಂದಿದ್ದಾರೆ. ಮರದ ತೊಗಟೆಯಂತೆ ಬೆಳೆಯುವ ಕಾರಣ ಇದಕ್ಕೆ ಟ್ರಿ ಮ್ಯಾನ್ ಡಿಸೀಸ್ ಅಂತಲೂ ಕರೆಯಲಾಗುತ್ತದೆ.

    ಈ ಬಗ್ಗೆ ಮತ್ತಷ್ಟು ತನಿಖೆ ಮಾಡಿ ಅವರ ಕಾಯಿಲೆ ಗುಣಪಡಿಸಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದೇವೆ. ಆದ್ರೆ ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

  • ಹಣ ವಾಪಸ್ ನೀಡಿಲ್ಲವೆಂದು ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ನೇಹಿತರು!

    ಹಣ ವಾಪಸ್ ನೀಡಿಲ್ಲವೆಂದು ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ನೇಹಿತರು!

    ಹುಬ್ಬಳ್ಳಿ: ನಗರದ ಗಿರಣಿಚಾಳನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ.

    ಜನವರಿ 26ರಂದು ಹುಬ್ಬಳ್ಳಿಯ ಗಿರಣಿಚಾಳ ಬಡಾವಣೆಯಲ್ಲಿ ಮನೆ ಮುಂದೆ ರಾತ್ರಿ ಮಲಗಿದ್ದಾಗ ವಿಜಯ್ ಕಿರೇಸೂರು ಎಂಬ ಯುವಕನಿಗೆ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದ. ಇತ್ತ ಯುವಕನ ತಾಯಿ ಕೂಡ ರಾತ್ರಿ ಮನೆಯ ಮುಂದೆ ಮಲಗಿದ್ದು ಸೊಳ್ಳೆ ಹೆಚ್ಚಾಗಿದ್ದರಿಂದ ಬೆಂಕಿ ಹಚ್ಚಿಕೊಂಡು ಮಲಗಿದ್ದ. ಬೆಂಕಿ ಹಾಸಿಗೆಗೆ ತಗುಲಿ ಹೊತ್ತಿ ಉರಿದಿದೆ ಎಂದು ಪೊಲೀಸರಿಗೆ ಹೇಳಿಕೆಯೊಂದಿಗೆ ದೂರನ್ನು ನೀಡಿದ್ದರು.

    ಈ ಕುರಿತಂತೆ ಉಪನಗರ ಪೊಲೀಸರು ಕೂಡ ಯುವಕನ ಸಾವಿನ ಕುರಿತಂತೆ ತನಿಖೆ ನಡೆಸುತ್ತಿದ್ದರು. ಇವೆಲ್ಲದರ ನಡುವೆ ಪೊಲೀಸರು ತನಿಖೆ ಮಾಡುತ್ತಿರುವಾಗಲೇ ಈ ಕೇಸ್ ಹೊಸದೊಂದು ತಿರುವು ಪಡೆದುಕೊಂಡಿದೆ.

    ಇದೊಂದು ಸಹಜ ಸಾವಲ್ಲ, ಬೆಂಕಿ ಹಚ್ಚಿ ವಿಜಯ್ ನನ್ನು ಸಾಯಿಸಿದ್ದಾರೆ ಎಂಬ ಸತ್ಯ ಹೊರಬಂದಿದೆ. ವಿಜಯ್ ತನ್ನ ಸ್ನೇಹಿತರ ಬಳಿ 45,000ರೂ. ಹಣವನ್ನು ಪಡೆದಿದ್ದ. ಅದನ್ನು ಹಿಂದಿರುಗಿಸಲಿಲ್ಲ ಎಂದು ಆತನ ನಾಲ್ಕು ಜನ ಸ್ನೇಹಿತರು ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ವಿಜಯ್ ಅವರ ದೊಡಪ್ಪ ಹೇಳಿಕೆ ನೀಡಿದ್ದಾರೆ.

  • ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕ್ದ!

    ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕ್ದ!

    ರಾಯಚೂರು: ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಸಿಬ್ಬಂದಿಯೊರ್ವ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿನ ಎಸಿಬಿ ಕಚೇರಿ ಎದುರುಗಡೆಯ ಮೊಬೈಲ್ ಟವರ್ ಏರಿ ಯುವಕ ಮೊಯಿನ್ ಸಾಬ್ ಬೆದರಿಸಿದ್ದಾನೆ. ಎಟಿಸಿ ಟವರ್ ಕಂಪನಿಯಲ್ಲಿ 9 ವರ್ಷದಿಂದ ಟೆಕ್ನಿಷನ್ ಆಗಿ ಕೆಲಸ ಮಾಡುತ್ತಿದ್ದ ಯಾದಗಿರಿ ಮೂಲದ ಮೊಯಿನ್ ಸಾಬ್ ನನ್ನ ಏಕಾಏಕಿ ಕಾರಣವಿಲ್ಲದೆ ಕೆಲಸದಿಂದ ತಗೆದು ಹಾಕಲಾಗಿತ್ತು.

    ಅಧಿಕಾರಿಗಳ ಕ್ರಮ ಖಂಡಿಸಿ ಮೋಯಿನ್ ಟವರ್ ಹತ್ತಿ ಕುಳಿತಿದ್ದ. ಜೊತೆಗೆ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ಮಾಡಿ ಕೆಲಸಕ್ಕೆ ಅಡ್ಡಿಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಎಷ್ಟೇ ಮನವೊಲಿಸಿದರು ಕೆಳಗಿಳಿಯದ ಮೋದಿನ್ ಕೊನೆಗೆ ಮಾಜಿ ಶಾಸಕ ಡಾ. ಶಿವರಾಜ್ ಪಾಟೀಲ್ ಕೆಲಸ ಕೊಡಿಸುವ ಭರವಸೆ ನೀಡಿದ ಮೇಲೆ ಕೆಳಗಿಳಿದಿದ್ದಾನೆ.

    ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.