Tag: youth

  • ಶರ್ಟ್, ಪ್ಯಾಂಟ್ ಬಿಚ್ಚಿ ಕಾರಿನ ಮೇಲೆ ಕುಳಿತು ಪ್ರಯಾಣಿಸಿದ ಯುವಕ – ಸ್ನೇಹಿತ ವಿಡಿಯೋ ಮಾಡ್ದ

    ಶರ್ಟ್, ಪ್ಯಾಂಟ್ ಬಿಚ್ಚಿ ಕಾರಿನ ಮೇಲೆ ಕುಳಿತು ಪ್ರಯಾಣಿಸಿದ ಯುವಕ – ಸ್ನೇಹಿತ ವಿಡಿಯೋ ಮಾಡ್ದ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೋಲಿಗಳ ಹಾವಳಿ ಶುರುವಾಗಿದ್ದು, ರಸ್ತೆಯಲ್ಲಿಯೇ ಕಾರಿನಲ್ಲಿ ಹೋಗುತ್ತಿದ್ದಾಗ ಯುವಕನೊಬ್ಬ ಬೆತ್ತಲಾಗಿರುವ ಘಟನೆ ನಡೆದಿದೆ.

    ಶುಕ್ರವಾರ ರಾತ್ರಿ ಸುಮಾರು 12.30ರ ವೇಳೆಗೆ ಟಾಟಾ ಇಂಡಿಕಾ ಕಾರಿನಲ್ಲಿ ಮೂವರು ಯುವಕರು ರಸ್ತೆಯಲ್ಲಿಯೇ ಜನರಿಗೆ ಅಸಹ್ಯ ಆಗುವ ರೀತಿಯಲ್ಲಿ ವರ್ತಿಸಿದ್ದಾರೆ. ಯಶವಂತಪುರ ಬಳಿ ಇರುವ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ.

    ಟಾಟಾ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದಾಗ ಯುವಕರಲ್ಲಿ ಒಬ್ಬ ತನ್ನ ಶರ್ಟ್ ಹಾಗು ಪ್ಯಾಂಟ್ ಬಿಚ್ಚಿ ಕಾರಿನ ಮೇಲೆ ಕುಳಿತು ಪ್ರಾಯಾಣಿಸಿದ್ದಾನೆ. ಇತರೆ ಪ್ರಯಾಣಿಕರು ಹಾಗೂ ವಾಹನ ಸವಾರರು ಮುಜುಗರಪಡುವಂತೆ ವರ್ತಿಸಿದ್ದಾನೆ. ಇನ್ನೊಬ್ಬ ಯುವಕ ತನ್ನ ಸೇಹಿತ ಮಾಡುವ ಎಲ್ಲಾ ಆಟಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.

  • ಯಾವಾಗ್ಲೂ ಇಂಗ್ಲಿಷ್ ನಲ್ಲೇ ಮಾತಾಡ್ತಾನೆ ಅಂತ ಕತ್ತು ಸೀಳಿ, 54 ಬಾರಿ ಇರಿದು ಕೊಂದೇ ಬಿಟ್ಟ!

    ಯಾವಾಗ್ಲೂ ಇಂಗ್ಲಿಷ್ ನಲ್ಲೇ ಮಾತಾಡ್ತಾನೆ ಅಂತ ಕತ್ತು ಸೀಳಿ, 54 ಬಾರಿ ಇರಿದು ಕೊಂದೇ ಬಿಟ್ಟ!

    ಮುಂಬೈ: 21 ವರ್ಷದ ಯುವಕನೊಬ್ಬ 18 ವರ್ಷದ ತನ್ನ ಗೆಳೆಯನನ್ನೇ ಕತ್ತು ಸೀಳಿ ಬಳಿಕ 54 ಬಾರಿ ಇರಿದು ಕೊಲೆಗೈದ ಆಘಾತಕಾರಿ ಘಟನೆಯೊಂದು ನಗರದಲ್ಲಿ ನಡೆದಿದೆ.

    ಮೊಹಮ್ಮದ್ ಆಫ್ರೋಜ್ ಆಲಂ ಶೇಖ್ ಎಂಬ ಯುವಕನನ್ನು ಮೊಹಮ್ಮದ್ ಅಮೀರ್ ಅಬ್ದುಲ್ ವಹೀದ್ ರಹೀನ್ ಎಂಬಾತ ಕೊಲೆಗೈದಿದ್ದಾನೆ.

    ಮೃತ ಯುವಕ ತನ್ನೊಂದಿಗೆ ಇಂಗ್ಲಿಷ್ ನಲ್ಲಿ ಮಾತ್ರ ವ್ಯವಹರಿಸುತ್ತಾನೆ. ಅಲ್ಲದೇ  ನನಗೆ ಇಂಗ್ಲಿಷ್ ಬರಲ್ಲ ಅಂತ ತಮಾಷೆ ಮಾಡಿರುವುದರಿಂದ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಸಾಹು ನಗರ ಪೊಲೀಸರಲ್ಲಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

    ಸುಮಾರು ಮಧ್ಯರಾತ್ರಿ 1 ಗಂಟೆ ವೇಳೆಗೆ ಆರೋಪಿ ರಹೀನ್ ಮಾಹಿಮ್‍ನ ನಿರ್ಜನ ಪ್ರದೇಶದಲ್ಲಿ ತಿರುಗಾಡುತ್ತಿದ್ದನು. ಈ ವೇಳೆ ಅನುಮಾನಗೊಂಡ ಪೊಲೀಸರು ರಹೀನ್ ನ್ನು ಬಂಧಿಸಿದ್ದಾರೆ. ಇದೇ ಸ್ಥಳದಲ್ಲಿಯೇ ಶೇಖ್ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶೇಖ್ ಯಾವತ್ತೂ ನನಗೆ ತಮಾಷೆ ಮಾಡುತ್ತಿದ್ದನು. ಇದರಿಂದ ಸಿಟ್ಟುಗೊಂಡು ಆತನನನ್ನು ಕೊಲೆ ಮಾಡಲು ಸುಮಾರು ಒಂದು ವಾರಗಳ ಹಿಂದೆಯೇ ಪ್ಲಾನ್ ಮಾಡಿದ್ದೆ. ಆದ್ರೆ ಸಮಯ ಮತ್ತು ಜಾಗಕ್ಕೆ ಕಾಯುತ್ತಿದ್ದೆ ಅಂತ ಆರೋಪಿ ಬಾಯ್ಬಿಟ್ಟಿರುವುದಾಗಿ ಸಾಹು ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬುಧವಾರ ರಾತ್ರಿ ಆರೋಪಿ ರಹೀನ್ ತನ್ನ ಗೆಳೆಯ ಶೇಖ್ ನನ್ನು ಕುಡಿಯುವ ಪಾರ್ಟಿ ಮಾಡುವುದಾಗಿ ಹೇಳಿ ನಗರದ ಬಾಂದ್ರಾಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಂತೆಯೇ ಇವರಿಬ್ಬರೂ ಬಿಯರ್ ಕೂಡ ತೆಗೆದುಕೊಂಡಿದ್ದರು. ಇಬ್ಬರೂ ಜೊತೆಜೊತೆಯಾಗಿ ಕುಡಿದು, ಸ್ವಲ್ಪ ಸಮಯದ ಬಳಿಕ ಶೌಚಾಲಯಕ್ಕೆ ತೆರಳಿದ ಶೇಖ್ ನ ಹಿಂದೆ ರಹೀನ್ ಕೂಡ ಹೋಗಿದ್ದಾನೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ರಹೀನ್ ತನ್ನ ಕೈಯಲಿದ್ದ ಚೂರಿಯಿಂದ ರಹೀನ್ ಕತ್ತು ಸೀಳಿದ್ದಾನೆ. ಪರಿಣಾಮ ಶೇಖ್ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆ ರಹೀನ್ ಆತನಿಗೆ 54 ಬಾರಿ ಇರಿದಿದ್ದಾನೆ. ಹೀಗಾಗಿ ಕತ್ತು ಮತ್ತು ಹೊಟ್ಟೆಗೆ ಗಂಭೀರ ಗಾಯಗಳಾಗಿರುವುದರಿಂದ ಶೇಖ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಅಂತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

  • ಪ್ರೀತಿಸಿದ ಯುವತಿ ಜೊತೆ ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣು!

    ಪ್ರೀತಿಸಿದ ಯುವತಿ ಜೊತೆ ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣು!

    ಮೈಸೂರು: ಪ್ರೀತಿಸಿದ ಯುವತಿ ಜೊತೆ ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣಾಗಿರೋ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

    ದೀಪಕ್(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕ್ಯಾತಮಾರನಹಳ್ಳಿಯ ಅನಿತಾ ಎಂಬ ಯುವತಿಯನ್ನು ಪ್ರೀತಿಸಿದ್ದ. ಮದುವೆ ಆಗುವಂತೆ ಅನಿತಾ ಹಾಗೂ ಪೋಷಕರು ದೀಪಕ್ ಮೇಲೆ ಒತ್ತಡ ಹೇರಿದ್ದರು. ಆಗ ದೀಪಕ್ ಸದ್ಯಕ್ಕೆ ಮದುವೆ ಬೇಡ ಎಂದು ಹೇಳಿದ್ದ.

    ಇನ್ನೂ ಎರಡು-ಮೂರು ವರ್ಷ ಮದುವೆ ಆಗುವುದಕ್ಕೆ ಆಗುವುದಿಲ್ಲ ಎಂದು ದೀಪಕ್ ಹೇಳಿದ್ದ. ಆದರೂ ಅನಿತಾ ಪೋಷಕರು ಉದಯಗಿರಿ ಪೊಲೀಸ್ ಠಾಣೆಗೆ ದೀಪಕ್‍ನನ್ನು ಕರೆಸಿ ಮದುವೆ ನಿಗದಿ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದರು ಎನ್ನಲಾಗುತ್ತಿದೆ.

    ಮದುವೆ ದಿನಾಂಕ ನಿಶ್ಚಯಿಸುವಂತೆ ಅನಿತಾ ಮನೆಯವರಿಂದ ಯಾವಾಗ ವಿಪರೀತ ಒತ್ತಡ ಉಂಟಾಯಿತೋ ಇದರಿಂದ ಬೇಸತ್ತ ದೀಪಕ್ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ದೀಪಕ್ ಪೋಷಕರು, ಅನಿತಾ ಹಾಗೂ ಆಕೆಯ ಪೋಷಕರ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ನಡುರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಚಾಕು ಇರಿತ!

    ನಡುರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಚಾಕು ಇರಿತ!

    ತುಮಕೂರು: ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಪುಂಡರ ಗುಂಪೊಂದು ಯುವಕನೋರ್ವನಿಗೆ ಚಾಕು ಇರಿದ ಘಟನೆ ನಡೆದಿದೆ.

    ಜಿಲ್ಲೆಯ ಪಾವಗಡ ಪಟ್ಟಣದ ಪೊಲೀಸ್ ಠಾಣೆ ಸಮೀಪ ಈ ಘಟನೆ ಸಂಭವಿಸಿದೆ. ದವಡಬೆಟ್ಟ ತಾಂಡಾದ ಯುವಕರು ಒಂದೇ ಸಮನೆ ಬೈಕ್ ವೀಲಿಂಗ್ ಮಾಡುತ್ತಿದ್ದರು. ಅದನ್ನು ಕಂಡ ಪಾದಾಚಾರಿ ಯುವಕ ತೇಜು ಪ್ರಶ್ನಿಸಿದ್ದಾನೆ.

    ತೇಜು ಪ್ರಶ್ನೆಯಿಂದ ಕೋಪಗೊಂಡ ಪುಂಡರ ತಂಡ ಯುವಕ ತೇಜು ಮೇಲೆ ಹಿಗ್ಗಾಮುಗ್ಗವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಚಾಕುವಿನಿಂದ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಇರಿದಿದ್ದಾರೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳಾದ ಶ್ರೀನಿವಾಸದ ನಾಯ್ಕ್, ಧನಸಿಂಗ್ ನಾಯ್ಕ್, ರಾಜೇಶ್ ನಾಯ್ಕ್, ಹಾಗೂ ಶೇಖರ್ ನಾಯಕರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.

  • ಪ್ರೀತ್ಸೆ.. ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕ- ಮನನೊಂದು ಯುವತಿ ಆತ್ಮಹತ್ಯೆ ಶರಣು

    ಪ್ರೀತ್ಸೆ.. ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕ- ಮನನೊಂದು ಯುವತಿ ಆತ್ಮಹತ್ಯೆ ಶರಣು

    ಶಿವಮೊಗ್ಗ: ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಯುವಕನ ಕಾಟಕ್ಕೆ ಬೇಸತ್ತು ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ವೆಂಕಟೇಶ್ ನಗರದಲ್ಲಿ ನಡೆದಿದೆ.

    ಮಲವಗೊಪ್ಪ ಮೂಲದ ಮಂಜಾನಾಯ್ಕ ಎಂಬವರ ಮಗಳು ಚೇತನಾ(19) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಹೊಸಮನೆಯ ಶ್ರೀನಿವಾಸ ಎಂಬಾತ ಚೇತನಾಗೆ ಪ್ರೀತಿ ಮಾಡು ಎಂದು ಬೆನ್ನು ಬಿದ್ದಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

    ಶ್ರೀನಿವಾಸನ ಕಾಟಕ್ಕೆ ಮನನೊಂದು ಚೇತನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ. ಚೇತನಾ ಮಾಚೇನಹಳ್ಳಿಯ ಬಿಪಿಒದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಶ್ರೀನಿವಾಸ್ ಲಕ್ಷ್ಮೀ ಚಲನಚಿತ್ರದ ಬಳಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದನು.

    ಶ್ರೀನಿವಾಸ್ ಮೂರ್ನಾಲ್ಕು ತಿಂಗಳಿಂದ ಚೇತನಾಳ ಬೆನ್ನುಬಿದ್ದು ಕಿರುಕುಳ ನೀಡುತ್ತಿದ್ದನು. ಆಗ ಚೇತನಾ ಪೋಷಕರು ಆತನನ್ನು ಕರೆಸಿ ಬುದ್ದಿವಾದ ಹೇಳಿದ್ದರು. ಆದರೆ ಶ್ರೀನಿವಾಸ್ ನಿತ್ಯವೂ ಕಿರುಕುಳ ನೀಡುತ್ತಿದ್ದರಿಂದ ಚೇತನಾ ಬೇಸತ್ತು ಶನಿವಾರ ಮಧ್ಯಾಹ್ನ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿಂತೆ ಆರೋಪಿ ಶ್ರೀನಿವಾಸನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಲೈವ್ ವಿಡಿಯೋ ಕರೆ ಮಾಡಿ ಪ್ರೇಮಿ ಆತ್ಮಹತ್ಯೆ- ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರೂ ನಗುತ್ತಿದ್ದ ಯುವತಿ!

    ಲೈವ್ ವಿಡಿಯೋ ಕರೆ ಮಾಡಿ ಪ್ರೇಮಿ ಆತ್ಮಹತ್ಯೆ- ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರೂ ನಗುತ್ತಿದ್ದ ಯುವತಿ!

    ಹೈದರಾಬಾದ್: ಪ್ರೀತಿ ವಿಫಲವಾಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಹೈದರಾಬಾದ್ ನ ಮುಲ್ಕಾಜ್‍ಗಿರಿ ವಿನಾಯಕ್ ನಗರದಲ್ಲಿ ನಡೆದಿದೆ.

    ಸಾಗರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸಾಗರ್ ಕೆಲ ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ತನ್ನ ಪ್ರೀತಿಯ ವಿಚಾರವನ್ನು ಆಕೆಗೆ ತಿಳಿಸಿದ್ದ. ಆದರೆ ಆ ಯುವತಿ ಸಾಗರ್ ಪ್ರೀತಿಯನ್ನು ನಿರಾಕರಿಸಿದ್ದಳು. ಅಲ್ಲದೇ ಈ ವಿಷಯ ಯುವತಿ ಕುಟುಂಬಸ್ಥರಿಗೂ ತಿಳಿದು ಸಾಗರ್‍ಗೆ ಎಚ್ಚರಿಕೆ ನೀಡಿದ್ದರು.

    ಇತ್ತ ಮಗನ ಪ್ರೀತಿಯ ವಿಷಯವನ್ನು ತಿಳಿದ ಸಾಗರ್ ಪೋಷಕರು ಆತನಿಗೆ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದರಿಂದ ತೀವ್ರವಾಗಿ ಮನನೊಂದ ಸಾಗರ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

    ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಪ್ರೇಯಸಿಗೆ ಮೆಸೇಜ್ ಕಳುಹಿಸಿ, ಇದನ್ನು ನೋಡಬೇಕಾದರೆ ವಿಡಿಯೋ ಕಾಲ್ ಮಾಡಲು ತಿಳಿಸಿದ್ದ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಯುವತಿ ಸಾಗರ್ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದು ತನ್ನ ಇತರೇ ಸ್ನೇಹಿತರಿಗೆ ಮೇಸೆಜ್ ತೋರಿಸಿ ವಿಡಿಯೋ ಕಾಲ್ ಮಾಡಿದ್ದಾಳೆ.

    ಪ್ರೇಯಸಿ ವಿಡಿಯೋ ಕಾಲ್ ಮಾಡಿದ ಬಳಿಕ ಸಾಗರ್ ತನ್ನ ರೂಮಿನ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈ ವೇಳೆ ಸಾಗರ್ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದು ಬಿದ್ದು ಬಿದ್ದು ನಗಲು ಆರಂಭಿಸಿದ್ದಾಳೆ. ಆದರೆ ಸ್ವಲ್ಪ ಸಮಯದ ಬಳಿಕ ಸಾಗರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

  • ತಪ್ಪು ಮಾಡದಿದ್ದರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

    ತಪ್ಪು ಮಾಡದಿದ್ದರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

    ಬಾಗಲಕೋಟೆ: ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ರಾತ್ರಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇಕಾರಪರ್ವ ಕಾರ್ಯಕ್ರಮದ ವೇಳೆ ಹಲ್ಲೆ ನಡೆದಿದೆ.

    ಕುಮಾರಸ್ವಾಮಿ ನೇಕಾರಪರ್ವ ಕಾರ್ಯಕ್ರಮಕ್ಕೆ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಮುಂಜುನಾಥ್ ಎಂಬ ಯುವಕ ಹಾಜರಾಗಿದ್ದ. ಈ ವೇಳೆ ವೇದಿಕೆ ಮುಂದೆ ಕುಳಿತುಕೊಳ್ಳುವುದ್ದಕ್ಕೆ ಮಂಜುನಾಥ್ ಹೋಗುತ್ತಾರೆ. ಇದಕ್ಕೆ ಅವಕಾಶ ನೀಡದ ಪೊಲೀಸರು ಆತನನ್ನು ತಡೆಯುತ್ತಾರೆ.

    ಹಿಂದೆ ಖುರ್ಚಿಗಳಿಲ್ಲ ನಾನು ಮುಂದೆ ಕೂರುತ್ತೇನೆ ಬಿಡಿ ಎಂದು ಮಂಜುನಾಥ್ ಕೇಳಿಕೊಳ್ಳುತ್ತಾರೆ. ಆದರೆ ಪೊಲೀಸರು ಒಳಗೆ ಬಿಡೋದಿಲ್ಲ ಆಗ ಅಣ್ಣ ಅಣ್ಣ ಕುಮಾರಣ್ಣ ನಮ್ಮ ಅಣ್ಣ ಹನುಮಂತಣ್ಣ ಎಂದು ಕುಮಾರಸ್ವಾಮಿ ಮತ್ತು ಬಾದಾಮಿ ಜೆಡಿಎಸ್ ಅಭ್ಯರ್ಥಿ ಹೆಸರನ್ನು ಮಂಜುನಾಥ ಘೋಷಣೆ ಕೂಗೋಕೆ ಶುರು ಮಾಡಿದ್ದರು.

    ಈ ವೇಳೆ ಆತನನ್ನು ಹೊರ ಕರೆದ ನಾಲ್ವರು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕ ನಾನೇನು ತಪ್ಪು ಮಾಡಿದ್ದೇನೆ ಸರ್ ಯಾಕೆ ಹೊಡೆಯುತ್ತಿದ್ದೀರಿ ಎಂದು ಪದೇ ಪದೇ ಕೇಳಿಕೊಂಡರು ಬಿಡದೆ ಬಾರಿಸಿದ್ದಾರೆ. ಒಂದು ಕಡೆ ಕುಮಾರಸ್ವಾಮಿ ಕಾರ್ಯಕ್ರಮ ನಡೆಯುತ್ತಿದ್ದರೆ ವೇದಿಕೆ ಬಳಿ ಪೊಲೀಸರು ಈ ಯುವಕನ ಮೇಲೆ ದೌರ್ಜನ್ಯ ನಡೆಸಿದ್ದಾರೆ.

    ಪೊಲೀಸರು ಥಳಿಸಿದ್ದರಿಂದ ಯುವಕನ ಮೈಮೇಲೆ ಬಾಸುಂಡೆಗಳು ಕಾಣಿಸಿಕೊಂಡಿವೆ. ಯುವಕ ನಾನೇನು ತಪ್ಪು ಮಾಡಿಲ್ಲ ಪೊಲೀಸರೇ ನನಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಜುನಾಥ್ ಕುಡಿದಿದ್ದ ವೇದಿಕೆ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದ ಇದನ್ನು ತಡೆದಿದ್ದಕ್ಕೆ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ಧದಿಂದ ಬೈದಾಡಿದ ಎಂದು ಪೊಲೀಸರು ಸಮರ್ಥನೆ ಮಾಡಿಕೊಂಡಿದ್ದಾರೆ.

    ಅದೇನೆ ಇದ್ದರೂ ಜನರ ಮಧ್ಯದಲ್ಲೇ ಈ ಯುವಕನ ಮೇಲೆ ದಬ್ಬಾಳಿಕೆ ಮಾಡಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕ ನನ್ನ ತಪ್ಪಿದ್ದರೆ ಹೊಡೆಯಲಿ ಏನೂ ಮಾಡದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  • ಮಗನನ್ನು ಮದ್ವೆಯಾಗಲು ನಿರಾಕರಿಸಿದಕ್ಕೆ ಯುವತಿಯ ಮನೆಗೆ ನುಗ್ಗಿ ಯುವಕನ ಮನೆಯವರಿಂದ ದಾಂಧಲೆ!

    ಮಗನನ್ನು ಮದ್ವೆಯಾಗಲು ನಿರಾಕರಿಸಿದಕ್ಕೆ ಯುವತಿಯ ಮನೆಗೆ ನುಗ್ಗಿ ಯುವಕನ ಮನೆಯವರಿಂದ ದಾಂಧಲೆ!

    ಮೈಸೂರು: ಮದುವೆಗೆ ನಿರಾಕರಿಸಿದ ಯುವತಿಗೆ ಯುವಕ ಕಿರುಕುಳ ನೀಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ತನ್ನ ಮಗನನ್ನು ಮದುವೆ ಆಗಲು ನಿರಾಕರಿಸಿದ ಯುವತಿ ಮನೆಗೆ ಯುವಕನ ಇಡೀ ಕುಟುಂಬ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ನಿರಾಕರಿಸಿದ ಹಿನ್ನಲೆಯಲ್ಲಿ ಯುವಕ ಹಾಗೂ ಯುವಕನ ಹೆತ್ತವರು ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಕೆಯ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

    ತುರಗನೂರು ಗ್ರಾಮದ ಮಲ್ಲಿಕಾರ್ಜುನ, ಅದೇ ಗ್ರಾಮದ ಸುಕನ್ಯಾ(18)ಎಂಬ ಯುವತಿಯನ್ನು ಮದುವೆಯಾಗಲು ಇಚ್ಛಿಸಿದ್ದ. ಸುಕನ್ಯಾಳನ್ನು ತನಗೇ ಕೊಟ್ಟು ಮದುವೆ ಮಾಡುವಂತೆ ಸುಕನ್ಯಾ ಕುಟುಂಬವನ್ನು ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದ ಸುಕನ್ಯಾ ಹೆತ್ತವರು ಮಗಳಿಗೆ ಬೇರೆ ಕಡೆ ವರನ ಹುಡುಕಾಟ ನಡೆಸಿದ್ದರು.

    ಈ ಮಾಹಿತಿ ಅರಿತ ಮಲ್ಲಿಕಾರ್ಜುನ ಸೋಮವಾರ ತನ್ನ ತಂದೆ ಸಿದ್ದಯ್ಯ, ತಾಯಿ ಮಹದೇವಮ್ಮ ಹಾಗೂ ತನ್ನ ಅಕ್ಕಂದಿರಾದ ಭಾರತಿ, ಸುಮಿತ್ರ ಹಾಗು ಭಾವಂದಿರಾದ ಸಿದ್ಧರಾಜು ಮತ್ತು ಕುಮಾರ್ ಜೊತೆ ಸೇರಿ ಸುಕನ್ಯಾ ಮನೆಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿ ಮನೆಯಲ್ಲಿ ದಾಂಧಲೆ ಮಾಡಿದ್ದಾರೆ.

    ಹಲ್ಲೆಯಿಂದ ಗಾಯಗೊಂಡ ಸುಕನ್ಯಾಳಿಗೆ ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 17ರ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ಯುವಕನಿಗೆ 2 ವರ್ಷ ಜೈಲು!

    17ರ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ಯುವಕನಿಗೆ 2 ವರ್ಷ ಜೈಲು!

    ಚಂಡೀಗಢ: ಕಾಲೇಜಿನಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ 17 ವರ್ಷದ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಪ್ರಕರಣ ಸಂಬಂಧಿಸಿದಂತೆ ಆರೋಪಿ 23 ವರ್ಷದ ಪಂಕಜ್ ಸಿಂಗ್ ಗೆ ಇದೀಗ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಪೂನಮ್ ಆರ್ ಜೋಶಿ ಅವರು 21 ಸಾವಿರ ದಂಡ ಹಾಗೂ 2 ವರ್ಷ ಜೈಲು ವಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಘಟನೆ?: ಇಲ್ಲಿ ಡೇರಿಯಾ ಪ್ರದೇಶದ 23 ವರ್ಷದ ಪಂಕಜ್ ಸಿಂಗ್ ಎಂಬಾತ ಕಳೆದ 2017ರ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆಯುವ ಮೂಲಕ ಕಿರುಕುಳ ನೀಡಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿನಿ ಕೆನ್ನೆಗೆ ಪಂಕಜ್ ಕಪಾಳಮೋಕ್ಷ ಮಾಡಿದ್ದನು. ಕೂಡಲೇ ವಿದ್ಯಾರ್ಥಿನಿ ಆಕೆಯ ಸಹೋದರನನ್ನು ಸ್ಥಳಕ್ಕೆ ಕರೆದಿದ್ದಾರೆ. ಈ ವೇಳೆ ಆಕೆಯ ಸಹೋದರನಿಗೂ ಪಂಕಜ್ ಹೊಡೆದಿದ್ದಾನೆ ಎಂದು ವರದಿಯಾಗಿದೆ.

    ಈ ವೇಳೆ ಮೂವರ ಗಲಾಟೆ ತಾರಕಕ್ಕೇರಿದೆ. ಕೂಡಲೇ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ, ಪಂಕಜ್ ವಿರುದ್ಧ ಐಪಿಸಿ ಸೆಕ್ಷನ್ 354(ಕ್ರಿಮಿನಲ್), 323(ಮಾನ ಹಾನಿ) 294(ಅಶ್ಲೀಲ ಪದ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಕೂಡ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

  • ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

    ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

    ಶಿವಮೊಗ್ಗ: ಪ್ರೀತಿ ಮಾಡಿ ಯುವತಿಯೊಂದಿಗೆ ನಾಪತ್ತೆಯಾದ ಯುವಕನ ತಂದೆ-ತಾಯಿ ಪೊಲೀಸರ ಟಾರ್ಚರ್ ತಾಳಲಾಗದೆ ವಿಷ ಸೇವಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮದ ದಶರಥ ಎಂಬ ಯುವಕ ಅಡಕೆ ಬೇಯಿಸುವ ಕೆಲಸಕ್ಕೆ ಹೋಗುತ್ತಿದ್ದ. ಇದೇ ಜಾಗಕ್ಕೆ ಅಡಕೆ ಸುಲಿಯಲು ಬರುತ್ತಿದ್ದ ಸಿಂಧೂ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿ ನಂತರ ಅದು ಪ್ರೀತಿಗೆ ತಿರುಗಿದೆ. ಈ ಜೋಡಿ ಹದಿನೈದು ದಿನದ ಹಿಂದೆ ಊರು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಹುಡುಗಿ ಮನೆಯವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.

    ಹೊಳೆಹೊನ್ನೂರು ಠಾಣೆ ಪೊಲೀಸರು ಹುಡುಗ ದಶರಥನ ಅಪ್ಪ ಕುಮಾರಪ್ಪ ಹಾಗೂ ಅಮ್ಮ ನೀಲಾವತಿ ಅವರನ್ನು ಠಾಣೆಗೆ ಕರೆಸಿ ಹೊಡೆದಿದ್ದಾರೆ ಅಂತಾ ಹೇಳಲಾಗಿದೆ. ಅಲ್ಲದೇ ಮೂರು ದಿನದ ಒಳಗಾಗಿ ನಿಮ್ಮ ಮಗನನ್ನು ಕರೆದು ತನ್ನಿ ಎಂದು ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ. ಇತ್ತ ಮನೆಯ ಬಳಿಯೂ ಹುಡುಗಿ ಕಡೆಯವರು ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇದರಿಂದ ಬೇಸರಗೊಂಡ ಯುವಕನ ತಂದೆ-ತಾಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ತೀವ್ರವಾಗಿ ಅಸ್ವಸ್ಥಗೊಂಡಿರುವ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.