Tag: youth

  • ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರಡೆ, ಮೂಳೆ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರಡೆ, ಮೂಳೆ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಚಿಕ್ಕಬಳ್ಳಾಪುರ: ಪ್ರೀತಿ, ಪ್ರೇಮ, ಪ್ರಣಯ ಎಂದು ಯುವತಿ ಜೊತೆ ಹಾಸಿಗೆ ಹಂಚಿಕೊಂಡ ಯುವಕನೋರ್ವ ಕೊನೆಗೆ ಯುವತಿ ಮದುವೆಯಾಗು ಅಂತ ಒತ್ತಾಯಿಸಿದ್ದಕ್ಕೆ, ಪ್ರಿಯತಮೆಯ ಮೃತದೇಹವೇ ಸಿಗದ ಹಾಗೆ ಕೊಲೆ ಮಾಡಿರುವ ಭಯಂಕರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಮಾತು ಬಾರದ, ಕಿವಿ ಕೇಳದ ಯುವಕನೋರ್ವ ತನ್ನ ಪ್ರೇಯಸಿಯನ್ನೇ ಪ್ಲಾನ್ ಮಾಡಿ ಮರ್ಡರ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಗೌರಿಬಿದನೂರು ಹೊರವಲಯದ ರೇಮೆಂಡ್ಸ್ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿದ್ದ, ಗೌರಿಬಿದನೂರು ನಗರದ ಮುನೇಶ್ವರ ಬಡಾವಣೆಯ ನಿವಾಸಿ ಕಿಶೋರ್ ಎಂಬಾತ ತನ್ನ ಪ್ರಿಯತಮೆ ಕೋಡಿಗಾನಹಳ್ಳಿ ಗ್ರಾಮದ ಅನಿತಾ (22)ಳನ್ನು ಕೊಲೆ ಮಾಡಿದ್ದಾನೆ.

    ಗಾರ್ಮೆಂಟ್ಸ್ ನಲ್ಲೇ ಕೆಲಸ ಮಾಡುತ್ತಿದ್ದ ಅನಿತಾಳ ಜೊತೆ ಲವ್ವಿ ಡವ್ವಿ ಶುರು ಇಟ್ಟುಕೊಂಡಿದ್ದ ಕಿಶೋರ್ ದೈಹಿಕವಾಗಿ ಆಕೆಯನ್ನೇ ಬಳಸಿಕೊಂಡಿದ್ದಾನೆ. ಕೊನಗೆ ಆಕೆ ಮದುವೆಯಾಗು ಅಂದಾಗ ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಅಂತ ಕ್ಯಾತೆ ತೆಗೆದಿದ್ದಾನೆ.

    ಇದೆಲ್ಲದರ ನಡುವೆ ಆನಿತಾ ಹಣಕ್ಕಾಗಿ ಕಿಶೋರ್ ಬಳಿ ಪೀಡಿಸುತ್ತಿದ್ದಳಂತೆ. ಇದರಿಂದ ರೋಸಿ ಹೋದ ಕಿಶೋರ್ ಹಣ ಕೊಡುತ್ತೀನಿ ಬಾ ಅಂತ ಮಾರ್ಚ್ 4ರಂದು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ಗೌರಿಬಿದನೂರು ತಾಲೂಕಿನ ನಿರ್ಜನ ಪ್ರದೇಶದವಾದ ದೊಡ್ಡಹನುಮನೇಹಳ್ಳಿ ಅರಣ್ಯಪ್ರದೇಶದಲ್ಲಿ ಗುಂಡಿಗೆ ತಳ್ಳಿ, ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಕೊನೆಗೆ ವೇಲ್ ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿಬಂದಿದ್ದ.

    ಈ ಸಂಬಂಧ ಕೆಲಸಕ್ಕೆ ಹೋದ ಮಗಳು ಬಂದಿಲ್ಲ ಎಂದು ಅನಿತಾಳ ಸಂಬಂಧಿಕರು ಮಾರ್ಚ್ 10 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಇದೆಲ್ಲದರ ನಡುವೆ ಮಾರ್ಚ್ 30 ರಂದು ದೊಡ್ಡಹನುಮೇನಹಳ್ಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ತಲೆ ಬುರುಡೆ, ಮೂಳೆಗಳು ಹಾಗೂ ಅದರ ಜೊತೆಗೆ ಅಲ್ಲೆ ಸಿಕ್ಕ ಬ್ಯಾಗ್ ನಿಂದ ಅನಿತಾ ಕೊಲೆಯಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಅನಿತಾಳ ಕೊಲೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರು. ಅನಿತಾಳ ಮೊಬೈಲ್ ನಲ್ಲಿದ್ದ ಫೋಟೋಗಳು ಹಾಗೂ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿ, ಕಿಶೋರ್ ನನ್ನ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

    ಈ ಸಂಬಂಧ ಆರೋಪಿ ಕಿಶೋರ್ ನನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ, ಮೂಳೆಗಳು ಪತ್ತೆ!

  • ಪ್ರೀತಿಸಲ್ಲ ಎಂದಿದ್ದಕ್ಕೆ ಪ್ಯಾಂಟ್ ಜಿಪ್ ಬಿಚ್ಚಿ ಯುವಕನಿಂದ ಅಸಭ್ಯ ವರ್ತನೆ!

    ಪ್ರೀತಿಸಲ್ಲ ಎಂದಿದ್ದಕ್ಕೆ ಪ್ಯಾಂಟ್ ಜಿಪ್ ಬಿಚ್ಚಿ ಯುವಕನಿಂದ ಅಸಭ್ಯ ವರ್ತನೆ!

    ಬೆಂಗಳೂರು: ಪ್ರೀತಿಸುವುದಿಲ್ಲ ಎಂದಿದ್ದಕ್ಕೆ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ ತೋರಿದ್ದಲ್ಲದೇ ಕೊಲೆ ಮಾಡೋದಾಗಿ ಯುವಕನೊಬ್ಬ ಬೆದರಿಕೆ ಹಾಕಿದ ಘಟನೆ ನಗರದ ಸುಬ್ಬಣ್ಣಪಾಳ್ಯ ಪಾಪಯ್ಯ ಲೇಔಟ್ ನಲ್ಲಿ ನಡೆದಿದೆ.

    ಜಾನ್ ಅಸಭ್ಯವಾಗಿ ವರ್ತಿಸಿದ ಯುವಕ. ಏಳು ವರ್ಷದ ಹಿಂದೆ ಜಾನ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಕಾರಣಾಂತರಗಳಿಂದ ಇಬ್ಬರ ಪ್ರೀತಿ ಮುರಿದುಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಬಲವಂತವಾಗಿ ಪ್ರೀತಿಸಲು ಜಾನ್ ಯುವತಿಯನ್ನು ಒತ್ತಾಯಿಸುತ್ತಿದ್ದನು.

    ಯುವತಿ ಜಾನ್ ಪ್ರೀತಿಯನ್ನು ಒಪ್ಪದಕ್ಕೆ ಕೋಪಗೊಂಡ ಯುವಕ ಆಕೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ ತೋರಿದ್ದಾನೆ. ಅಷ್ಟೇ ಅಲ್ಲದೇ ನನ್ನ ಬಿಟ್ಟು ಬೇರೆಯವರನ್ನು ಪ್ರೀತಿಸುತ್ತೀಯಾ ಎಂದು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಲೆ ನೋವು ತಾಳಲಾರದೇ 20 ವರ್ಷದ ಯುವತಿ ಆತ್ಮಹತ್ಯೆಗೆ ಶರಣು!

    ತಲೆ ನೋವು ತಾಳಲಾರದೇ 20 ವರ್ಷದ ಯುವತಿ ಆತ್ಮಹತ್ಯೆಗೆ ಶರಣು!

    ಬೆಂಗಳೂರು: ತಲೆ ನೋವು ತಾಳಲಾರದೇ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಭೀಮಾ ನಗರದಲ್ಲಿ ನಡೆದಿದೆ.

    ಸೊನಾಲಿ ಸರ್ಕಾರ್(20) ಮೃತ ಯುವತಿ. ಸೋನಾಲಿ ಸೋಮವಾರ ರಾತ್ರಿ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದಳು. ತಲೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಸೋಮವಾರ ತಡ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಈ ಕುರಿತು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಷ್ಟು ದಿನ ಎಲ್ಲಿಗೆ ಹೋಗಿದ್ದೀರಿ ಎಂದು ಮಾಜಿ ಶಾಸಕರನ್ನ ತರಾಟೆಗೆ ತೆಗೆದುಕೊಂಡ ಯುವಕ

    ಇಷ್ಟು ದಿನ ಎಲ್ಲಿಗೆ ಹೋಗಿದ್ದೀರಿ ಎಂದು ಮಾಜಿ ಶಾಸಕರನ್ನ ತರಾಟೆಗೆ ತೆಗೆದುಕೊಂಡ ಯುವಕ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್‍ ಬಾಬು ಬಂಡಿಸಿದ್ದೇಗೌಡ ಅವರಿಗೆ ಯುವಕನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

    ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ರಮೇಶ್‍ ಬಾಬು ಬಂಡಿಸಿದ್ದೇಗೌಡ ಸೋಮವಾರ ಸಂಜೆ ಚುನಾವಣಾ ಪ್ರಚಾರಕ್ಕೆಂದು ಹುಲಿಕೆರೆ ಗ್ರಾಮಕ್ಕೆ ಹೋಗಿದ್ದರು. ಮತದಾರರನ್ನು ಮಾತನಾಡಿಸುತ್ತ ಪಕ್ಷದ ಪರ ಪ್ರಚಾರ ಮಾಡುತ್ತಿದ್ದರು.

    ಈ ವೇಳೆ ಸ್ಥಳದಲ್ಲಿದ್ದ ಯುವಕನೊಬ್ಬ ಐದು ವರ್ಷದಿಂದ ಎಲ್ಲಿಗೆ ಹೋಗಿದ್ರಿ ಈಗ ಬಂದಿದ್ದೀರಲ್ಲ ಎಂದು ಆಕ್ರೋಶ ಹೊರಹಾಕಿದ್ದಾನೆ. ಯುವಕ ಸಿಟ್ಟಿನಿಂದ ಮಾತನಾಡುತ್ತಿದ್ದರು, ಶಾಸಕರು ಮಾತ್ರ ಯಾವುದೇ ಪ್ರತಿಕ್ರಿಯೆಯನ್ನಾಗಲಿ, ಸಿಟ್ಟನ್ನಾಗಲಿ ತೋರಿಸಿಕೊಳ್ಳಲಿಲ್ಲ. ಬದಲಿಗೆ ಮತದಾರರನ್ನು ಮಾತನಾಡಿಸಿ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ.

    ಇಡೀ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಲಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  • ಪ್ರೀತಿಸಿ ಮನೆಬಿಟ್ಟು ಹೋಗಿದ್ದ ಅಪ್ರಾಪ್ತೆಯನ್ನು ಮದ್ವೆ ವೇಳೆ ರಕ್ಷಿಸಿದ್ರು!

    ಪ್ರೀತಿಸಿ ಮನೆಬಿಟ್ಟು ಹೋಗಿದ್ದ ಅಪ್ರಾಪ್ತೆಯನ್ನು ಮದ್ವೆ ವೇಳೆ ರಕ್ಷಿಸಿದ್ರು!

    ಕಾರವಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮದುವೆಯನ್ನು ನಿಲ್ಲಿಸಿ ಬಾಲಕಿಯನ್ನು ರಕ್ಷಣೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಕಾರವಾರದ ಹಬ್ಬುವಾಡದ 17 ವರ್ಷದ ಪಿಯು ವಿದ್ಯಾರ್ಥಿನಿ ಬಂಗಾರಪ್ಪ ನಗರದ ನಿವಾಸಿ ಇಂಬ್ರಾನ್ ಇಮಾಮ್ ಸಾಬ್ ಶೇಖ್ ಎಂಬುವವನನ್ನು ಪ್ರೀತಿಸುತಿದ್ದಳು. ಆದರೆ ಬಾಲಕಿಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮೂರು ದಿನಗಳ ಹಿಂದೆ ಬಾಲಕಿ ಮನೆ ಬಿಟ್ಟು ಪ್ರಿಯಕರನ ಮನೆಯಲ್ಲಿ ತಂಗಿದ್ದಳು.

    ನಂತರ ಯುವಕನ ಪೋಷಕರು ನಗರದ ಮದೀನಾ ಜಮಾಯಿತ್ ಮಸೀದಿಯಲ್ಲಿ ಧರ್ಮ ಗುರುಗಳ ಮುಂದೆ ವಿವಾಹ ನೆರವೇರಿಸಲು ಇಂದು ತೆರಳಿದ್ದರು. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಯುವಕನನ್ನು ಪೊಲೀಸರ ವಶಕ್ಕೆ ನೀಡಿ, ಬಾಲಕಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ನಂತರ ಬಾಲಕಿಯನ್ನು ಜಿಲ್ಲಾ ಬಾಲಮಂದಿರಲ್ಲಿ ಬಿಟ್ಟಿದ್ದಾರೆ.

  • ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

    ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

    ಅಹಮದಾಬಾದ್: ಕುದುರೆ ಏರಿ ಸವಾರಿ ಹೊರಟಿದ್ದ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಆಘತಕಾರಿ ಘಟನೆಯೊಂದು ಗುಜರಾತಿನ ಭಾವ್ ನಗರ್ ಜಿಲ್ಲೆಯಲ್ಲಿ ನಡೆದಿದೆ.

    21 ವರ್ಷದ ಪ್ರದೀಪ್ ರಾಥೋಡ್ ಮೃತ ದುರ್ದೈವಿ ಯುವಕ. ಘಟನೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಭಾವ್ ನಗರ್ ಜಿಲ್ಲೆಯ ಉಮ್ರಾಲ ತಾಲೂಕಿನ ಟಿಂಬಿ ಗ್ರಾಮದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಎಂ ಸೈಯದ್ ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೇ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಪ್ರದೀಪ್ ಶವಪತ್ತೆಯಾದ ಪ್ರದೇಶದಲ್ಲಿ ಸಾವಿಗೂ ಮುನ್ನ ಕುದುರೆ ಮೇಲೆ ಕುಳಿತು ಸವಾರಿ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಹಳೆ ದ್ವೇಷ ಹಾಗೂ ಪ್ರೀತಿ-ಪ್ರೇಮ ಹೀಗೆ ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುವುದು ಅಂತ ಅವರು ತಿಳಿಸಿದ್ದಾರೆ.

    ಮಗನನ್ನು ಕಳೆದುಕೊಂಡ ತಂದೆ ಕುಲ್ ಭಾಯ್ ರಾಥೋಡ್ ಉಮ್ರಾಲ್ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಇತ್ತೀಚೆಗೆ ಕುದುರೆಯೊಂದನ್ನು ಖರೀದಿಸಿದ್ದನು. ಆ ಬಳಿಕ ಕೆಲ ಮೇಲ್ವರ್ಗದ ಜನ ಮಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಅಲ್ಲದೇ ಕುದುರೆ ಮಾರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಗುರುವಾರ ಮಗ ತನ್ನ ಕುದುರೆಯೊಂದಿಗೆ ಫಾರ್ಮ್ ಹೌಸ್ ಹೋಗಿದ್ದನು. ಬಳಿಕ ಸಂಜೆ ಅಲ್ಲಿಂದ ಕರೆ ಮಾಡಿ ರಾತ್ರಿಯ ಊಟಕ್ಕೆ ಮನೆಗೆ ಬರುತ್ತೇನೆ ಅಂತ ಹೇಳಿದ್ದನು. ಆದ್ರೆ ರಾತ್ರಿಯಾದ್ರೂ ಆತ ಮನೆಗೆ ಬರಲಿಲ್ಲ. ಹೀಗಾಗಿ ನಾವು ಆತನ ಹುಡುಕಾಟ ಶುರುಮಾಡಿದೆವು. ಈ ವೇಳೆ ಆತ ಫಾರ್ಮ್ ಹೌಸ್ ಗೆ ಹೋಗೋ ಮಾರ್ಗದ ಬದಿಯಲ್ಲೆ ಕೊಲೆಯಾಗಿ ಹೋಗಿದ್ದನು. ಕುದುರೆಯೊಂದಿಗೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ರಜಪೂತ ವ್ಯಕ್ತಿಗಳು ಹರಿತವಾದ ಆಯುಧಗಳನ್ನು ಬಳಸಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಅಂತ ಪ್ರದೀಪ್ ತಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.

    ಘಟನೆಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವೆಂದಲ್ಲಿ ಮನಗ ಶವಸಂಸ್ಕಾರ ಮಾಡುವುದಿಲ್ಲ ಎಂದು ಪ್ರದೀಪ್ ಪೋಷಕರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

  • ಒಬ್ಬನಿಗಾಗಿ ಮೂವರು ಯುವತಿಯರ ಕಿತ್ತಾಟ-ಪೊಲೀಸ್ ಸ್ಟೇಷನ್‍ನಲ್ಲಿ ನಡೀತು ಹೈಡ್ರಾಮಾ!

    ಒಬ್ಬನಿಗಾಗಿ ಮೂವರು ಯುವತಿಯರ ಕಿತ್ತಾಟ-ಪೊಲೀಸ್ ಸ್ಟೇಷನ್‍ನಲ್ಲಿ ನಡೀತು ಹೈಡ್ರಾಮಾ!

    ಲಕ್ನೋ: ಯುವಕನೊಬ್ಬನನ್ನು ಮದುವೆಯಾಗಲೆಂದು ಮೂವರು ಯುವತಿಯರು ಪೊಲೀಸ್ ಠಾಣೆಯಲ್ಲೇ ಕಿತ್ತಾಡಿದ ಘಟನೆ ಉತ್ತರಪ್ರದೇಶದ ಗೌತಮ್‍ಬುದ್ ನಗರದಲ್ಲಿ ನಡೆದಿದೆ.

    ಯುವಕನ ಜೊತೆ ಮದುವೆಯಾಗುವುದಾಗಿ ಮೂವರು ಯುವತಿಯರು ನೊಯ್ಡಾದ ಠಾಣೆ ಸೆಕ್ಟರ್-24ರಲ್ಲಿ ಈ ಡ್ರಾಮಾ ನಡೆಸಿದ್ದಾರೆ. ಅಲ್ಲದೇ ಅದರಲ್ಲಿ ಯುವತಿಯೊಬ್ಬಳು ತನ್ನ ಕೈಯನ್ನು ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇತ್ತ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ ಯುವಕ ಮುಲ್‍ರೂಪದ ಬುಲಂದ್‍ನಗರದಲ್ಲಿರುವ ಹಳ್ಳಿಯೊಂದರ ನಿವಾಸಿಯಾಗಿದ್ದು, ಸೆಕ್ಟರ್-2ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಬುಲಂದ್‍ನಗರಕ್ಕೆ ಬರುವ ಮೊದಲು ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವಕ ಕೆಲಸಕ್ಕಾಗಿ ಬುಲಂದ್‍ನಗರಕ್ಕೆ ಬಂದ ಬಳಿಕ ಅಲ್ಲಿ ದೆಹಲಿಯ ತ್ರಿಲೋಕಪುರಿಯ ನಿವಾಸಿಯಾದ ತನ್ನ ಸಹೊದ್ಯೋಗಿಯನ್ನು ಪ್ರೀತಿಸಲು ಶುರು ಮಾಡಿದ್ದನು. ನಂತರ ಇಬ್ಬರು 7 ವರ್ಷ ಜೊತೆಯಲ್ಲಿ ಸುತ್ತಾಡಿ ಲಿವ್-ಇನ್ ರಿಲೇಶನ್‍ನಲ್ಲಿದ್ದರು ಎಂದು ತಿಳಿಸಿದ್ದಾರೆ.

    2017ರಲ್ಲಿ ಯುವಕನ ಮತ್ತೊಬ್ಬಳು ಪ್ರೇಯಸಿ ತನ್ನ ಸ್ನೇಹಿತೆಯನ್ನು ಆತನಿಗೆ ಪರಿಚಯ ಮಾಡಿಸುತ್ತಾಳೆ. ನಂತರ ಯುವಕ ಆ ಯುವತಿಯನ್ನು ಕೂಡ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾನೆ. ಯುವಕನ ಈ ಕಳ್ಳಾಟವನ್ನು ಗಮನಿಸಿದ ಆತನ ಸ್ನೇಹಿತ ಮೂರು ದಿನಗಳ ಹಿಂದೆ ಯುವತಿಯರಿಗೆ ತನ್ನ ಸ್ನೇಹಿತನ ನಿಜಬಣ್ಣ ಬಯಲು ಮಾಡಿದ್ದಾನೆ.

    ಈ ಹಿನ್ನೆಲೆಯಲ್ಲಿ ಮೂವರು ಯುವತಿಯರು ಸೆಕ್ಟರ್-24 ಪೊಲೀಸ್ ಠಾಣೆಗೆ ಹೋಗಿ ಯುವಕನ ವಿರುದ್ಧ ಕಿರುಕುಳದ ದೂರನ್ನು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಬುಧವಾರ ಯುವಕನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮೂವರು ಯುವತಿಯರು ಕೂಡ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

    ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ: ಠಾಣೆಯಲ್ಲಿ ಯುವತಿಯರು ಯುವಕನನ್ನು ತಾವು ಮದುವೆಯಾಗುವುದಾಗಿ ವಾದ-ವಿವಾದಕ್ಕೆ ಇಳಿದಿದ್ದರು. ಯುವಕ ಒಬ್ಬಳನ್ನು ಮದುವೆಯಾಗುವುದಕ್ಕೆ ನಿರಾಕರಿಸಿದ್ದನು. ಇದರಿಂದ ಬೇಸತ್ತ ಯುವತಿ ತನ್ನ ಕೈಯನ್ನು ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂಬುವುದಾಗಿ ವರದಿಯಾಗಿದೆ.

    ಇದಾದ ಬಳಿಕ ಪೊಲೀಸರು ಕೈ ಕಟ್ ಮಾಡಿಕೊಂಡ ಯುವತಿಯನ್ನು ವಶಕ್ಕೆ ಪಡೆದು, ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ. ಇನ್ನು ಯುವಕನ ವಿರುದ್ಧ ಶಾಂತಿ ಉಲ್ಲಂಘನೆ ಮಾಡಿದ್ದಾನೆಂದು ಆತನನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಯುವತಿಯರು ಯುವಕನ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಡಿಜೆ ಮ್ಯೂಸಿಕ್ ವಿಚಾರದಲ್ಲಿ 2 ಕೋಮುಗಳ ಮಧ್ಯೆ ಘರ್ಷಣೆ- ಬಿಡಿಸಲು ಹೋದ ಯುವಕ ದಾರುಣ ಸಾವು

    ಡಿಜೆ ಮ್ಯೂಸಿಕ್ ವಿಚಾರದಲ್ಲಿ 2 ಕೋಮುಗಳ ಮಧ್ಯೆ ಘರ್ಷಣೆ- ಬಿಡಿಸಲು ಹೋದ ಯುವಕ ದಾರುಣ ಸಾವು

    ಹುಬ್ಬಳ್ಳಿ: ಎರಡು ಕೋಮಿನ ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಚಿಕಿತ್ಸೆ ಫಲಿಸದೆ ಯುವಕನೊಬ್ಬ ಮೃತಪಟ್ಟ ಘಟನೆ ಹಳೆ ಹುಬ್ಬಳ್ಳಿಯ ಇಸ್ಲಾಂ ಪುರದ ಗೌಸಿಯಾ ಟೌನ್ ನಲ್ಲಿ ನಡೆದಿದೆ.

    ಗುರುಸಿದ್ದಪ್ಪ ಅಂಬಿಗೇರ(26) ಎಂಬಾತನೇ ಮೃತಪಟ್ಟ ಯುವಕ. ಗುಂಪು ಘರ್ಷಣೆ ಬಿಡಿಸಲು ಬಂದಾಗ ಈತನ ಮೇಲೆ ಚಾಕು ಹಾಗೂ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕೂಡಲೇ ಗಾಯಾಳುವನ್ನು ಕಿಮ್ಸ್ ಗೆ ದಾಖಲು ಮಾಡಲಾಗಿತ್ತು.

    ಆದ್ರೆ ಚಿಕಿತ್ಸೆ ಫಲಿಸದೇ ಗುರುಸಿದ್ದಪ್ಪ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಡಿಜೆ ಮ್ಯೂಸಿಕ್ ವಿಷಯಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಈ ಘಟನೆ ಸಂಭವಿಸಿದೆ.

    ಇಫ್ತಾಕ್ ಕಾಲವಾಡ, ಅಸ್ಲಂ ಕಾಲವಾಡ ಸಹೋದರರ ದಾಳಿ ಮಾಡಿದ ಆರೋಪಿಗಳು ಎನ್ನಲಾಗಿದೆ. ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=FnUAodyjHQE

  • ಪ್ರೀತ್ಸೆ..ಪ್ರೀತ್ಸೆ.. ಅಂತ ಬೆನ್ನು ಬಿದ್ದ ಯುವಕನಿಗೆ ಅಪ್ರಾಪ್ತೆಯ ತಂದೆಯಿಂದ ಬಿತ್ತು ಗೂಸಾ!

    ಪ್ರೀತ್ಸೆ..ಪ್ರೀತ್ಸೆ.. ಅಂತ ಬೆನ್ನು ಬಿದ್ದ ಯುವಕನಿಗೆ ಅಪ್ರಾಪ್ತೆಯ ತಂದೆಯಿಂದ ಬಿತ್ತು ಗೂಸಾ!

    ಹುಬ್ಬಳ್ಳಿ: ಪ್ರೀತಿಸುವಂತೆ ಯುವಕನೊಬ್ಬ ಅಪ್ರಾಪ್ತೆಯ ಬೆನ್ನು ಬಿದ್ದ ಪರಿಣಾಮ ಬಾಲಕಿಯ ತಂದೆಯಿಂದ ಧರ್ಮದೇಟು ತಿಂದಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಬಳಿ ನಡೆದಿದೆ.

    ಅಮರಗೋಳದ ನಿವಾಸಿಯಾಗಿರೋ ಸುನಿಲ್ ಹನಕನಹಳ್ಳಿ ಎಂಬಾತ ಧರ್ಮದೇಟು ತಿಂದವನಾಗಿದ್ದು, ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಸುನೀಲ್ ಈ ಪ್ರದೇಶದ ಸುಮಾಳನ್ನು(ಹೆಸರು ಬದಲಾಯಿಸಿಲಾಗಿದೆ) ಪ್ರೀತಿಸುತ್ತೇನೆಂದು ಹಲವು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.

    ಸುನಿಲ್ ಪ್ರೀತಿಗೆ ಸುಮಾ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ 17 ವರ್ಷದ ಅಪ್ರಾಪ್ತೆ ವಿದ್ಯಾನಗರದ ಮಹಿಳಾ ಕಾಲೇಜಿನಲ್ಲಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಸುನಿಲ್ ಆಕೆಯನ್ನು ಫಾಲೋ ಮಾಡಿದ್ದಾನೆ. ಇದೇ ವಿಷಯ ಸುಮಾಳ ತಂದೆ ಧರ್ಮಪ್ಪ ಅವರಿಗೆ ಗೊತ್ತಾಗುತ್ತಿದ್ದಂತೆ ಸ್ಥಳೀಯರ ಜೊತೆಗೂಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ತನ್ನ ಮಗಳ ಒಪ್ಪಿಗೆ ಇಲ್ಲದ ಒತ್ತಾಯದ ಮೇರೆಗೆ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಹಾಳು ಮಾಡುತ್ತಿದ್ದಾನೆಂದು ತಂದೆ ಧರ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಧರ್ಮದೇಟು ತಿಂದ ಸುನಿಲ್ ನನ್ನು ನವನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸುಮಾ ಅಲ್ಲದೇ ಈ ಹಿಂದೆ ಪ್ರೀತಿ-ಪ್ರೇಮ ಹೆಸರಿನಲ್ಲಿ ಅಪ್ರಾಪ್ತೆಯರನ್ನು ಪುಸಲಾಯಿಸಿ ಅವರ ಬದುಕಿನ ಜೊತೆ ಸುನಿಲ್ ಚೆಲ್ಲಾಟವಾಡುತ್ತಿದ್ದ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    https://www.youtube.com/watch?v=6beI6pS8zG4

  • ವೈಟಿಪಿಎಸ್‍ನಲ್ಲಿ ಅವಘಡ- 30 ಅಡಿ ಆಳದಲ್ಲಿ ಮಣ್ಣು ಕುಸಿದು ಬಿದ್ದು ಕಾರ್ಮಿಕ ಗಂಭೀರ

    ವೈಟಿಪಿಎಸ್‍ನಲ್ಲಿ ಅವಘಡ- 30 ಅಡಿ ಆಳದಲ್ಲಿ ಮಣ್ಣು ಕುಸಿದು ಬಿದ್ದು ಕಾರ್ಮಿಕ ಗಂಭೀರ

    ರಾಯಚೂರು: ನಗರದ ವೈಟಿಪಿಎಸ್‍ನಲ್ಲಿ ಭೀಕರ ಅವಘಡವೊಂದು ಸಂಭವಿಸಿದ ಪರಿಣಾಮ ಕಾರ್ಮಿಕ ಗಂಭೀರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ರೈಲ್ವೆ ಹಳಿಗಾಗಿ ಭೂಮಿ ಅಗೆಯುವಾಗ ಮಣ್ಣು ಕುಸಿದು ಬಿದ್ದುದರಿಂದ 30 ಅಡಿ ಆಳದಲ್ಲಿದ್ದ ಕಾರ್ಮಿಕ ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

     

    ಕೂಡಲೆ ಗಾಯಾಳು 25 ವರ್ಷದ ಕಾಂತರಾಜ್ ನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ರವಾನೆ ಮಾಡಲಾಗಿದೆ.

    ಘಟನೆ ಸಂಬಂಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.