Tag: youth

  • ಪ್ರೀತ್ಸೆ.. ಪ್ರೀತ್ಸೆ.. ಅಂತ ವಿದ್ಯಾರ್ಥಿನಿ ಬೆನ್ನು ಬಿದ್ದಿದ್ದ ಯುವಕನಿಗೆ ಬಿತ್ತು ಸಖತ್ ಗೂಸಾ!

    ಪ್ರೀತ್ಸೆ.. ಪ್ರೀತ್ಸೆ.. ಅಂತ ವಿದ್ಯಾರ್ಥಿನಿ ಬೆನ್ನು ಬಿದ್ದಿದ್ದ ಯುವಕನಿಗೆ ಬಿತ್ತು ಸಖತ್ ಗೂಸಾ!

    ತುಮಕೂರು: ಪ್ರೀತ್ಸೆ ಪ್ರೀತ್ಸೆ ಎಂದು ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದಿದ್ದ ಯುವಕನನ್ನು ಹಿಡಿದು ವಿದ್ಯಾರ್ಥಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತುಮಕೂರು ವಿಶ್ವವಿದ್ಯಾಲಯ ಬಳಿ ನಡೆದಿದೆ.

    ನವೀನ್, ಯುವತಿಯ ಹಿಂದೆ ಬಿದ್ದ ರೋಡ್ ರೋಮಿಯೋ. ಈತ ವಡ್ಡರಹಳ್ಳಿ ನಿವಾಸಿಯಾಗಿದ್ದು, ಪ್ರೀತಿಸು ಎಂದು ವಿದ್ಯಾರ್ಥಿನಿಯೊಬ್ಬಳ ಬೆನ್ನು ಬಿದ್ದಿದ್ದನು. ಯುವಕನ ಈ ವರ್ತನೆಯನ್ನು ನೋಡಿದ ಕೆಲ ವಿದ್ಯಾರ್ಥಿಯರು ರೊಚ್ಚಿಗೆದ್ದು ನವೀನ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಬಳಿಕ ನವೀನ್‍ನನ್ನು ಹೊಸ ಬಡಾವಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಇತ್ತೀಚೆಗೆ ರಸ್ತೆಯಲ್ಲಿ ಓಡಾಡುತ್ತಿದ್ದ ಅಂದ ಚೆಂದದ ಯುವತಿಯರ ಫೋಟೋ ಕ್ಲಿಕ್ಕಿಸಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಗೆ ಸಖತ್ ಗೂಸಾ ಬಿದ್ದಿತ್ತು. ತುಮಕೂರು ಜಿಲ್ಲೆ ತಿಪಟೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಈ ಘಟನೆ ನಡೆದಿತ್ತು. ಇಲ್ಲಿನ ಕಾಸ್ಮೋ ಕ್ಲಬ್ ನಲ್ಲಿ ಹುಟ್ಟುಹಬ್ಬ ಆಚರಣೆಗೆಂದು ಬಂದಿದ್ದ ಹಲವು ಯುವತಿಯರ ಫೋಟೋ ತನ್ನ ಮೊಬೈಲ್ ಫೋನಿನಿಂದ ಸೆರೆಹಿಡಿದಿದ್ದನು. ವಿಚಾರ ತಿಳಿದ ಯುವತಿಯರ ಸಂಬಂಧಿಕರು ವ್ಯಕ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ತಿಪಟೂರು ಪೊಲೀಸರಿಗೆ ಒಪ್ಪಿಸಿದ್ದರು.

  • ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದ ಯುವಕ- ಸಾರ್ವಜನಿಕರು ಕಕ್ಕಾಬಿಕ್ಕಿ!

    ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದ ಯುವಕ- ಸಾರ್ವಜನಿಕರು ಕಕ್ಕಾಬಿಕ್ಕಿ!

    ವಿಜಯಪುರ: ಯುವಕನೊಬ್ಬ ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದಿದ್ದು, ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ವಿಜಯಪುರ ನಗರದ ರಜಪೂತ ಗಲ್ಲಿ ಬಲಕಿಯಲ್ಲಿ ಶೇಖರ್ ಎಂಬ ಯುವಕ ಜೀವಂತ ಹಾವನ್ನು ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾರೆ. ಶೇಖರ್ ಕೈಯಲ್ಲಿ ಹಾವು ಕಂಡ ಟೀ ಅಂಗಡಿಯಲ್ಲಿ ನೆರೆದಿದ್ದ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಹಾವು ಹಿಡಿಯುತ್ತಿರುವ ಶೇಖರ್, ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕಾಣಿಸಿಕೊಂಡ ಕೇರೆ ಹಾವನ್ನು ಹಿಡಿದಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಹಾವನ್ನು ಹಿಡಿದುಕೊಂಡೇ ಟೀ ಕುಡಿಯಲು ಅಂಗಡಿಗೆ ಬಂದಿದ್ದಾರೆ. ಈ ಮೂಲಕ ನೆರೆದವರಲ್ಲಿ ಗಾಬರಿ ಮೂಡಿಸಿದ್ದಾರೆ.

    https://www.youtube.com/watch?v=5I_erPowe4I

  • ಐಪಿಎಲ್‍ನಿಂದಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ!

    ಐಪಿಎಲ್‍ನಿಂದಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ!

    ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ಕಟ್ಟಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಚ್.ಎಸ್.ಆರ್ ಲೇಔಟ್ ಬಳಿಯಿರುವ ಹೊಟೇಲ್ ಪ್ರಶಾಂತ್ ನಲ್ಲಿ ನಡೆದಿದೆ.

    ಯೋಗೀಶ್ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯೋಗೀಶ್ ರೂಪೇನ ಆಗ್ರಹಾರದ ನಿವಾಸಿಯಾಗಿದ್ದು, ಹೆಚ್.ಎಸ್.ಆರ್ ಲೇಔಟ್ ಬಳಿಯಿರುವ ಹೊಟೇಲ್ ಪ್ರಶಾಂತ್ ನಲ್ಲಿ ಒಂದು ರೂಮು ಬಾಡಿಗೆ ಪಡೆದು ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮಧ್ಯಾಹ್ನ ಸುಮಾರು 12.30ಕ್ಕೆ ನೇಣಿಗೆ ಶರಣಾಗಿದ್ದಾನೆ. ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಗಳನ್ನು ಕಳೆದುಕೊಂಡು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಈ ಬಗ್ಗೆ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಭಯಾನಕ ‘ಐರನ್ ಬೂಟ್’ ಬೈಕ್ ಗೇಮ್‍ಗೆ ಕೇರಳದ ಯುವಕ ಚಿತ್ರದುರ್ಗದಲ್ಲಿ ಬಲಿ

    ಭಯಾನಕ ‘ಐರನ್ ಬೂಟ್’ ಬೈಕ್ ಗೇಮ್‍ಗೆ ಕೇರಳದ ಯುವಕ ಚಿತ್ರದುರ್ಗದಲ್ಲಿ ಬಲಿ

    ಚಿತ್ರದುರ್ಗ: ಬೈಕ್ ಗೇಮ್ ಚಾಲೆಂಜ್ ನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಚಾಲನೆ ವೇಳೆ ಲಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಮೂಲತಃ ಕೇರಳದ ಒಟ್ಟಾಪಾಲಂ ನಿವಾಸಿಯಾಗಿರುವ ಮಿಥುನ್ ಘೋಷ್ ಸಾವನ್ನಪ್ಪಿದ ಯುವಕ. ಈತ ಕೇರಳದ ಕಾಲೇಜುವ ಪಂಬಡಿ ನೆಹರು ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ.

    ಮಿಥುನ್ ಅಮೆರಿಕದ ಸಂಸ್ಥೆ ನಡೆಸುವ ಆನ್ ಲೈನ್ `ಐರನ್ ಬೂಟ್’ ಭಾಗವಹಿಸಲು ಕೇರಳ ದಿಂದ ಪ್ರಯಾಣ ಬೆಳೆಸಿದ್ದ. ತನ್ನ ಸ್ವ-ಸ್ಥಳ ಒಟ್ಟಾಪಾಲಂ ನಿಂದ ಮಂಗಳವಾರ ಪ್ರಯಾಣ ಬೆಳೆಸಿದ್ದ ಮಿಥುನ್, ತನ್ನ ಪೋಷಕರಿಗೆ ಕೊಯಂಬತ್ತೂರ್ ಗೆ ತೆರಳುವುದಾಗಿ ಹೇಳಿದ್ದ. ಆದರೆ ಆತ ಐರನ್ ಗೇಮ್ ನಲ್ಲಿ ಭಾಗವಹಿಸಲು ತೆರಳಿದ್ದು, ಗೇಮ್ ನ ಭಾಗವಾಗಿ ಬೆಂಗಳೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುತ್ತಿದ್ದ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.

    ಏನಿದು ಐರನ್ ಬೂಟ್ ಗೇಮ್: ಇದು ಅಮೆರಿಕ ಸಂಸ್ಥೆಯೊಂದು ನಡೆಸುವ ಆನ್ ಲೈನ್ ಬೈಕ್ ಗೇಮ್ ಆಗಿದ್ದು, ಒಂದೇ ದಿನದಲ್ಲಿ (24 ಗಂಟೆ) ಒಳಗೆ 1,624 ಕಿಮೀ ದೂರ ಬೈಕ್ ಸವಾರಿ ನಡೆಸುವ ಚಾಲೆಂಜ್ ಹೊಂದಿದೆ.

    ಮೊದಲು ಬೈಕ್ ಮೀಟರ್ ಬೋರ್ಡ್ ಫೋಟೋ ತೆಗೆದು ಆದನ್ನು ಆನ್ ಲೈನ್ ವಿಳಾಸದಲ್ಲಿ ಪೋಸ್ಟ್ ಮಾಡಬೇಕಾಗುತ್ತದೆ. ಬಳಿಕ ಗೇಮ್ ನಲ್ಲಿ ಭಾಗವಹಿಸುವ ವ್ಯಕ್ತಿಯ ಜರ್ನಿ ಆರಂಭವಾಗುತ್ತದೆ. ಆತ 24 ಗಂಟೆಗಳಲ್ಲಿ ಗುರಿ ತಲುಪಬೇಕಿರುತ್ತದೆ. ಗುರಿ ತಲುಪಿದ ಬಳಿಕ ಆನ್ ಲೈನ್ ನಲ್ಲೇ ಬೈಕ್ ಮೀಟರ್ ಬೋರ್ಡ್ ಫೋಟೋ ಸಲ್ಲಿಸಿದರೆ ಆತನಿಗೆ ಆ ತಂಡದ ಸದಸ್ಯತ್ವ ಸಿಗುತ್ತದೆ.

    ಐರನ್ ಬೂಟ್ ಗೇಮ್ ಚಾಲೆಂಜ್ ಪಡೆದಿದ್ದ ಮಿಥುನ್ ಕೊಯಾಂಬತ್ತೂರ್ ಮಾರ್ಗವಾಗಿ ಬೆಂಗಳೂರು, ಹುಬ್ಬಳ್ಳಿಗೆ ತೆರಳುವ ಯೋಜನೆ ನಿರ್ಮಿಸಿದ್ದ. ಈ ವೇಳೆ ಚಿತ್ರದುರ್ಗದ ಬಳಿ ಬೈಕ್ ಅಪಘಾತದಲ್ಲಿ ಗೇಮ್ ಪೂರ್ಣಗೊಳಿಸದೆ ಸಾವನ್ನಪ್ಪಿದ್ದಾನೆ.

    ಬೆಳಕಿಗೆ ಬಂದಿದ್ದು ಹೇಗೆ: ಮಿಥುನ್ ಸಾವಿನ ಬಳಿಕ ಆತನ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ ಆತನ ಪೋಷಕರಿಗೆ ಕೇರಳ ಪೊಲೀಸರು ಮಾಹಿತಿ ನೀಡಿದ್ರು. ಆಗ ಮಿಥುನ್ ಕೊಠಡಿಯನ್ನು ಪರಿಶೀಲನೆ ನಡೆಸಿದ ವೇಳೆ ಆತ ಐರನ್ ಬೂಟ್ ಗೇಮ್ ನಲ್ಲಿ ಭಾಗವಹಿಸಿದ್ದ ಕುರಿತ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಈ ಗೇಮ್‍ಗೆ ಸಂಬಂಧಿಸಿದ್ದ ಪೂರ್ಣ ಮಾಹಿತಿಯನ್ನು ಮಿಥುನ್ ತಿಳಿದಿದ್ದ. ಈಗಾಗಲೇ ಜಗತ್ತಿನಾದ್ಯಂತ ಈ ಚಾಲೆಂಜ್ ಪಡೆದು ಸುಮಾರು 60 ಸಾವಿರ ಮಂದಿ ಐರನ್ ಬೂಟ್ ಅಸೋಸಿಯೆಷನ್ ನಲ್ಲಿ ಸದಸ್ಯರಾಗಿದ್ದಾರೆ.

  • ನಾನು ನಿನ್ನ ಇಷ್ಟಪಡ್ತೀನಿ, ನಿಮ್ಮ ನಂಬರ್ ಕೊಡಿ- ನಿರಾಕರಿಸಿದ್ದಕ್ಕೆ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟ ಪಾಗಲ್ ಪ್ರೇಮಿ!

    ನಾನು ನಿನ್ನ ಇಷ್ಟಪಡ್ತೀನಿ, ನಿಮ್ಮ ನಂಬರ್ ಕೊಡಿ- ನಿರಾಕರಿಸಿದ್ದಕ್ಕೆ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟ ಪಾಗಲ್ ಪ್ರೇಮಿ!

    ಬೆಂಗಳೂರು: ಪ್ರೀತ್ಸೆ ಪ್ರೀತ್ಸೆ ಎಂದು ಪಾಗಲ್ ಪ್ರೇಮಿಯೊಬ್ಬ ಗೃಹಿಣಿ ಹಿಂದೆ ಬಿದ್ದ ಘಟನೆ ಮಲ್ಲೇಶ್ವರಂನ ಬ್ರಿಗೇಡ್ ರೆಗೆನ್ಸಿ ಬಳಿ ನಡೆದಿದೆ.

    ಅಂಜಲಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ಹಿಂದೆ ಬಿದ್ದ ಪಾಗಲ್ ಪ್ರೇಮಿ. ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಹೋಗುವಾಗ ಈ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿ ಬಂದು ಪ್ರೀತ್ಸೆ ಪ್ರೀತ್ಸೆ ಎಂದು ಕಿರುಕುಳ ನೀಡಿದ್ದಾನೆ.

    ನಾನು ನಿನ್ನ ಇಷ್ಟ ಪಡುತ್ತಿದ್ದೇನೆ. ನಿಮ್ಮ ನಂಬರ್ ಕೊಡಿ ಎಂದು ಕಿರುಕುಳ ನೀಡುತ್ತಿದ್ದನು. ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ದುಷ್ಕರ್ಮಿ ನನ್ನ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟಿದ್ದಾನೆ. ಅಷ್ಟೇ ಅಲ್ಲದೇ ಪ್ರತಿ ದಿನ ನನಗೆ ಕಿರುಕುಳ ನೀಡುತ್ತಿದ್ದು, ಪ್ರೀತಿ ಮಾಡದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಂಜಲಿ ಆರೋಪಿಸಿದ್ದಾರೆ.

    ನಾನು ಮನೆ ಕೆಲಸ ಮಾಡಿ ಮತ್ತೆ ನಾಯಿಯನ್ನು ಹಿಡಿದುಕೊಂಡು ಪೆಟ್ರೋಲ್ ಬಂಕ್ ಬಳಿ ಹೋದಾಗ ಅದೇ ವ್ಯಕ್ತಿ ಬೈಕಿನಲ್ಲಿ ಬಂದು ನನ್ನನ್ನು ಗುರಾಯಿಸಿ ಹಿಂಬಾಲಿಸಿ ನನ್ನನ್ನು ತಡೆದು ನಿಲ್ಲಿಸಿ ನಿನ್ನ ಫೋನ್ ನಂಬರ್ ಕೊಡು ನಿನ್ನನ್ನು ಇಷ್ಟಪಡುತ್ತಿದ್ದೇನೆಂದು ಎಂದಿದ್ದಾನೆ ಎಂದು ಅವರು ತಿಳಿಸಿದ್ದಾರೆ.

    ನಾನು ನನ್ನ ನಂಬರ್ ಕೊಡದೇ ಇದ್ದಾಗ, ನನ್ನ ಗಂಡನಿಗೆ ತಿಳಿಸುತ್ತೇನೆಂದು ಹೇಳಿದಾಗ ಆತ ಏಕಾಏಕಿ ನನ್ನ ಕೈಯನ್ನು ಹಿಡಿದುಕೊಂಡು ಎಳೆದಾಡಿ ತನ್ನ ಕೈಯಿಂದ ನನ್ನ ಕೆನ್ನೆಗೆ ಹೊಡೆದು ನೋವುಂಟು ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಷ್ಟೇ ಅಲ್ಲದೇ ನೀನು ಫೋನ್ ನಂಬರ್ ನನಗೆ ಕೊಡದೇ ಹೋದರೆ ಹಾಗೂ ನಾನು ಹೇಳಿದಂತೆ ಕೇಳದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಅಕ್ಕಪಕ್ಕದ ಜನರು ಬರುತ್ತಿದ್ದಂತೆ ಆ ವ್ಯಕ್ತಿ ಅಲ್ಲಿಂದ ಹೊರಟು ಹೋದನು ಎಂದು ಅಂಜಲಿ ಹೇಳಿದ್ದಾರೆ.

    ಇನ್ನು ಈ ವಿಷಯದ ಬಗ್ಗೆ ನಾನು ನನ್ನ ಪತಿಗೆ ತಿಳಿಸಿದೆ. ಆತ ನನ್ನನ್ನು ಹಿಂಬಾಲಿಸಿ ತೊಂದರೆ ನೀಡಿ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾನೆ. ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈತನ ಕಿರುಕುಳದಿಂದ ನೊಂದಿರುವ ಅಂಜಲಿಯವರು ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ದಿನೇಶ್ ಗುಂಡೂರಾವ್‍ಗೆ ಚಪ್ಪಲಿ ಕೊರಿಯರ್ ಮಾಡಿದ ಮೈಸೂರು ಯುವಕ

    ದಿನೇಶ್ ಗುಂಡೂರಾವ್‍ಗೆ ಚಪ್ಪಲಿ ಕೊರಿಯರ್ ಮಾಡಿದ ಮೈಸೂರು ಯುವಕ

    ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವರಿಗೆ ಮೈಸೂರಿನ ಯುವಕನೊಬ್ಬ ಚಪ್ಪಲಿ ಗಿಫ್ಟ್ ಕೊಟ್ಟಿದ್ದಾನೆ.

    ನಮ್ಮ ಸಮುದಾಯದವರಿಗೆ ಗುಂಡುರಾವ್ ಅವರು ಅವಮಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೊರಿಯರ್ ಮೂಲಕ ಚಪ್ಪಲಿಯನ್ನು ಕಳುಹಿಸಿರುವೆ ಮತ್ತು ಅವರು ಬಹಿರಂಗಬಾಗಿ ಕ್ಷಮೆ ಕೇಳಬೇಕು ಎಂದು ಗಿಫ್ಟ್ ನೀಡಿದ ಯುವಕ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ

    ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ದಿನೇಶ್ ಗುಂಡುರಾವ್ ಅವರು ಮಾತನಾಡಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು. ಅವರು ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆ. ಈ ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಗುಂಡೂರಾವ್‍ಗೆ ಗಂಡಸ್ತನವಿದ್ರೆ, ತಾಯಿ ಎದೆ ಹಾಲು ಕುಡಿದಿದ್ರೆ ಮೊದ್ಲು ಕಲಬುರಗಿಗೆ ಬರಲಿ- ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸವಾಲ್

    ಗುಂಡೂರಾವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ ಅವರು, ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಂತಹ ಮೇಣದ ಬತ್ತಿ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರು ತುಚ್ಚಾ ಮಾತುಗಳನ್ನು ಆಡಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂದಿದ್ದೀರಲ್ಲಾ ಗುಂಡೂರಾವ್ ಅವರೇ. ಯೋಗಿ ಬದಲು ಒಬ್ಬ ಮುಲ್ಲಾ ಅಥವಾ ಮೌಲ್ವಿ ಬಗ್ಗೆನೋ ಇದೇ ಮಾತನ್ನು ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸವನ್ನು ನಿಮಗೆ ಮಾಡಿರುತ್ತಿದ್ದರು. ಮಾತನಾಡಬೇಕಾದರೆ ಸ್ವಲ್ಪ ಎಚ್ಚರಿಕೆ ಇರಬೇಕು. ನಾಲಿಗೆಯ ಮೇಲೆ ನಿಗಾ ಇರಬೇಕು. ಇಲ್ಲ ಅಂದರೆ ನಿಮಗೆ ತಕ್ಕ ಉತ್ತರ ಕೊಡಬೇಕಾಗುತ್ತದೆ’ ಎಂದು ವಿಡಿಯೋ ಮಾಡಿ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ಗುಂಡೂರಾವ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

  • ಬೆಂಗ್ಳೂರಲ್ಲಿ ದರೋಡೆಕೋರರ ಅಟ್ಟಹಾಸ – ಯುವಕನನ್ನು ಕೊಂದು ಮೊಬೈಲ್, ಪರ್ಸ್ ಕಳ್ಳತನ

    ಬೆಂಗ್ಳೂರಲ್ಲಿ ದರೋಡೆಕೋರರ ಅಟ್ಟಹಾಸ – ಯುವಕನನ್ನು ಕೊಂದು ಮೊಬೈಲ್, ಪರ್ಸ್ ಕಳ್ಳತನ

    ಬೆಂಗಳೂರು: ಮೊಬೈಲ್ ದೋಚುವ ನೆಪದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.

    ತಡರಾತ್ರಿ 11.40ರ ಸುಮಾರಿಗೆ ಮೆಟ್ರೋ ನಿಲ್ದಾಣ ಮುಂಬಾಗದಲ್ಲಿ ನಡೆದುಕೊಂಡು ಬರುತ್ತಿದ್ದ ಯುವಕನನ್ನು ಮೊಬೈಲ್ ರಾಬರಿ ಮಾಡುವ ದುಷ್ಕರ್ಮಿಗಳು ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಿ ಮೊಬೈಲ್ ಮತ್ತು ಪರ್ಸ್ ದೋಚಿದ್ದಾರೆ. ಯುವಕನ ಯಾರು? ಎಲ್ಲಿಯವರು? ಎಂಬುದರ ಬಗ್ಗೆ ತಿಳಿದುಬಂದಿಲ್ಲ.

    ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

  • ಹುಡುಗಿಯ ಫೋಟೋ ಹಾಕಿ ಅವರಂತೆ ಚಾಟ್ ಮಾಡ್ತಿದ್ದ ವ್ಯಕ್ತಿ ಬಂಧನ

    ಹುಡುಗಿಯ ಫೋಟೋ ಹಾಕಿ ಅವರಂತೆ ಚಾಟ್ ಮಾಡ್ತಿದ್ದ ವ್ಯಕ್ತಿ ಬಂಧನ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯ ಫೋಟೋ ಹಾಕಿಕೊಂಡು ವಂಚನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

    ಸಾಗರ್ ರಾವ್(22) ಬಂಧಿತ ಆರೋಪಿ. ಈತ ಫ್ರೀ ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಫೋಟೋ ಹಾಕಿಕೊಂಡು ಹುಡುಗರಿಗೆ ವಂಚಿಸುತ್ತಿದ್ದನು. ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಫೋಟೋ ಹಾಕಿ, ಹುಡುಗರೊಂದಿಗೆ ಹುಡುಗಿಯರ ರೀತಿ ಚಾಟ್ ಮಾಡಿ ಹಣ ದೋಚುತ್ತಿದ್ದನು.

    ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

  • ಟಾಯ್ಲೆಟ್ ಪಿಟ್ ಗೆ ಬಿದ್ದು ಯುವಕ ದುರ್ಮರಣ

    ಟಾಯ್ಲೆಟ್ ಪಿಟ್ ಗೆ ಬಿದ್ದು ಯುವಕ ದುರ್ಮರಣ

    ಉಡುಪಿ: ಟಾಯ್ಲೆಟ್ ಪಿಟ್ ಕ್ಲೀನ್ ಮಾಡಲು ಹೋದ ಯುವಕನೋರ್ವ ಪಿಟ್ ಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಎಂ ಕೋಡಿ ಎಂಬಲ್ಲಿ ಶನಿವಾರ ನಡೆದಿದೆ.

    ಮೂಲತಃ ಕುಂದಾಪುರದ ತೆಕ್ಕಟ್ಟೆ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂದೀಪ್ ಮೃತ ವ್ಯಕ್ತಿ.

    ಕೋಡಿಯ ಉಸ್ಮಾನ್ ಎಂಬವರ ಮನೆಯಲ್ಲಿ ಇಂದು ಶುಭ ಕಾರ್ಯವಿದ್ದು, ಈ ಹಿನ್ನೆಲೆ ಟಾಯ್ಲೆಟ್ ಪಿಟ್ ಶುಚಿಗೊಳಿಸಲು ಸ್ಥಳೀಯ ವ್ಯಕ್ತಿಯೋರ್ವನ ಸಹಾಯದಿಂದ ತೆಕ್ಕಟ್ಟೆಯ ಸಂದೀಪ್ ಎನ್ನುವವರನ್ನು ಕರೆಸಲಾಗಿತ್ತು. ಅವರು ಟಾಯ್ಲೆಟ್ ಪಿಟ್ ಶುಚಿ ಕೆಲಸಕ್ಕೆ ಅಣಿಯಾಗುವ ವೇಳೆ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದಾರೆ. ಕೂಡಲೇ ಸಂದೀಪರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಕೂಡ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ರನ್ನು ಕೆಲಸಕ್ಕೆ ಕರೆತಂದ ಉಸ್ಮಾನ್ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ.

    ಮಲಹೊರುವ ಪದ್ಧತಿ ನಿಷೇಧ ಹಾಗೂ ಮಾನವ ಶಕ್ತಿಯಿಂದ ಮಲ ತೆಗೆಯುವ ಪದ್ಧತಿ ಕಾನೂನು ಬಾಹಿರವಾದರೂ ಕೂಡ ಅದನ್ನು ಮಾಡಲು ಹೊರಟ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಪದ್ಧತಿ ಮಾಡಿದ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಎಲ್ಲಾ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮೃತ ವ್ಯಕ್ತಿಯ ಸಾವಿಗೆ ನ್ಯಾಯ ಒದಗಿಸುವ ಕಾರ್ಯವಾಗಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸುತ್ತಿವೆ.

  • ಲೈಂಗಿಕ ಕಿರುಕುಳ ನೀಡಿದ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಭಾರಿಸಿದ ಯುವತಿ

    ಲೈಂಗಿಕ ಕಿರುಕುಳ ನೀಡಿದ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಭಾರಿಸಿದ ಯುವತಿ

    ರೋಹ್ಟಕ್: ಟ್ರಾಫಿಕ್ ಪೊಲೀಸ್ ಒಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಆಕೆಯಿಂದ ಹೊಡೆತ ತಿಂದಿರುವ ಘಟನೆ ಹರಿಯಾಣದ ರೋಹ್ಟಕ್ ಪ್ರದೇಶದಲ್ಲಿ ನಡೆದಿದೆ.

    ಕರಾಟೆ ತರಬೇತಿ ತರಗತಿಯಿಂದ ಆಟೋದಲ್ಲಿ ಮನೆಗೆ ಹಿಂದಿರುವ ವೇಳೆ ಘಟನೆ ನಡೆದಿದ್ದು, ಪೊಲೀಸ್ ಆಕೆಯ ಫೋನ್ ನಂಬರ್ ಕೇಳಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಮಾಧ್ಯಮಮೊಂದು ವರದಿ ಮಾಡಿದೆ. ಅಂದಹಾಗೇ ಯುವತಿ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಆಗಿದ್ದು, ಹಲವು ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

    ಘಟನೆ ಬಳಿಕ ಆರೋಪಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೇ ಆತನನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ನೀಡಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2017 ರಲ್ಲಿ ದೆಹಲಿ ಹೈಕೋರ್ಟ್ ಶಾಲೆಗಳಲ್ಲಿ ಯುವತಿಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ಕಲೆ ತರಬೇತಿ ನೀಡುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಕುರಿತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ನ್ಯಾಯಾಲಯ ಸೂಚಿಸಿತ್ತು.