Tag: youth

  • ಸೆಲ್ಫೀ ಕ್ಲಿಕ್ಕಿಸಲು ಹೋಗಿ 40 ಮೀಟರ್ ಎತ್ತರದಿಂದ ಬಿದ್ದು ಭಾರತದ ವಿದ್ಯಾರ್ಥಿ ಸಾವು!

    ಸೆಲ್ಫೀ ಕ್ಲಿಕ್ಕಿಸಲು ಹೋಗಿ 40 ಮೀಟರ್ ಎತ್ತರದಿಂದ ಬಿದ್ದು ಭಾರತದ ವಿದ್ಯಾರ್ಥಿ ಸಾವು!

    ಮೆಲ್ಬರ್ನ್: ಸೆಲ್ಫೀ ತೆಗೆದುಕೊಳ್ಳಲು ಹೋಗಿ 40 ಮೀಟರ್ ಎತ್ತರದಿಂದ ಸಮುದ್ರಕ್ಕೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಅಂಕಿತ್(20) ಮೃತಪಟ್ಟ ಯುವಕ. ಅಂಕಿತ್ ತನ್ನ ಸ್ನೇಹಿತರ ಜೊತೆ ಅಲ್ಬಾನಿಯಲ್ಲಿರುವ ಐತಿಹಾಸಿಕ ಸ್ಥಳಕ್ಕೆ ಹೋಗಿದ್ದನು. ಈ ವೇಳೆ ಸೆಲ್ಫೀ ತೆಗೆದುಕೊಳ್ಳುವಾಗ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಅಂಕಿತ್ ಪರ್ತ್ ನಲ್ಲಿ ಓದುತ್ತಿದ್ದನು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ಫೋಟೋ ತೆಗೆದುಕೊಳ್ಳಲು ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ಜಿಗಿಯುತ್ತಿದ್ದನು. ಆಗ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಅಂಕಿತ್ ತುಂಬಾ ಜಾಗ್ರತೆಯಿಂದ ಬಂಡೆಯ ಮೇಲೆ ನಿಂತಿದ್ದ ಒಂದು ಫೋಟೋ ತೆಗೆದುಕೊಳ್ಳುವಾಗ ಆತ ಬಂಡೆಯ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ ಎಂದು ಅಂಕಿತ್ ಸ್ನೇಹಿತನೊಬ್ಬ ತಿಳಿಸಿದ್ದಾನೆ.

    ಅಂಕಿತ್ ಕೆಳಗೆ ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಹುಡುಕಲು ಹೆಲಿಕಾಪ್ಟರ್ ಬಳಸಲಾಗಿತ್ತು. ಇದು ಒಂದು ದೊಡ್ಡ ದುರಂತ ಎಂದು ಎಸ್‍ಐ ಡೋಮಿನಕ್ ವುಡ್ ತಿಳಿಸಿದ್ದಾರೆ.

  • ಮದ್ವೆ ಮನೆಯಲ್ಲಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆ ದಂಗಾದ ಸಂಬಂಧಿಕರು!

    ಮದ್ವೆ ಮನೆಯಲ್ಲಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆ ದಂಗಾದ ಸಂಬಂಧಿಕರು!

    ಲಕ್ನೋ: ಮದುವೆಗೆ ಬಂದ ಅತಿಥಿಯೊಬ್ಬರು ಮದುವೆಮನೆಯ ರೂಮಿನಲ್ಲೇ ದೈಹಿಕ ಸಂಬಂಧ ಬೆಳೆಸುತ್ತಿದ್ದ ಘಟನೆ ಉತ್ತರಪ್ರದೇಶದ ಸೋನ್‍ಬದ್ರ ಜಿಲ್ಲೆಯ ಕೋತ್ವಾಲ್ ಗ್ರಾಮದಲ್ಲಿ ನಡೆದಿದೆ.

    ಮದುವೆಮನೆಯಲ್ಲಿ ಸಂಭ್ರಮ ವಾತವರಣವಿದ್ದು, ಎಲ್ಲರೂ ಮದುವೆ ಕೆಲಸಗಳಲ್ಲಿ ತೊಡಗಿದ್ದರು. ಮದುವೆಗೆ ಬಂದ ಮಕ್ಕಳು ಕೂಡ ಆಟವಾಡುತ್ತಾ ರೂಂವೊಂದರ ಬಾಗಿಲನ್ನು ತಟ್ಟುತ್ತಿದ್ದರು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಆಗ ಹಿರಿಯರು ಬಂದು ಬಾಗಿಲನ್ನು ಜೋರಾಗಿ ಒಡೆದು ಒಳಗೆ ಹೋದಾಗ ಒಂದು ಕ್ಷಣ ದಂಗಾಗಿ ಹೋದರು.

    ರೂಮಿನಲ್ಲಿ ಒಬ್ಬ ಯುವಕ ಹಾಗೂ ಯುವತಿ ದೈಹಿಕ ಸಂಬಂಧ ಬೆಳೆಸುವ ರೀತಿಯಲ್ಲಿ ಕಂಡು ಬಂದಿದ್ದಾರೆ. ಅವರ ಈ ವರ್ತನೆಯನ್ನು ಕಂಡು ಕುಟುಂಬದವರು ಹಾಗೂ ಗ್ರಾಮದವರು ಅವರನ್ನು ಹಿಡಿದು ಥಳಿಸಿದ್ದಾರೆ.

    ಯುವಕ ಹಾಗೂ ಯುವತಿ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ನಡುವೆ ಸಂಬಂಧಿಕರಿಗೆಂದೇ ಇರಿಸಿದ್ದ ರೂಮಿನಲ್ಲಿ ಇವರಿಬ್ಬರು ಹೋಗಿದ್ದಾರೆ. ಈ ಇಬ್ಬರು ರೂಮಿನೊಳಗೆ ಹೋಗುವುದನ್ನು ಗ್ರಾಮದ ಒಬ್ಬ ವ್ಯಕ್ತಿ ನೋಡಿದ್ದನು.

    ಇವರಿಬ್ಬರು ರೂಮಿನೊಳಗೆ ಹೋಗುವುದನ್ನು ಕಂಡ ವ್ಯಕ್ತಿಯೊಬ್ಬ ತನ್ನ ಜೊತೆ ಕೆಲವರನ್ನು ರೂಮಿನ ಬಳಿ ಕರೆದುಕೊಂಡು ಹೋಗಿದ್ದಾನೆ. ಡೋರ್ ಒಡೆದು ಸಂಬಂಧಿಕರು ಹಾಗೂ ಗ್ರಾಮಸ್ಥರು ರೂಮಿನೊಳಗೆ ಹೋದಾಗ ಯುವಕ ಹಾಗೂ ಯುವತಿ ಅಶ್ಲೀಲವಾಗಿ ಇದ್ದರು. ಈ ನಡುವೆ ಅಲ್ಲಿಗೆ ಬಂದ ಇಬ್ಬರ ಕುಟುಂಬದವರು ಅವರನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.

    ಆತ ನನ್ನನ್ನು ಬಲವಂತವಾಗಿ ರೂಮಿಗೆ ಕರೆದನು ಎಂದು ಯುವತಿ ಯುವಕನ ಮೇಲೆ ಆರೋಪಿಸಿದ್ದಾಳೆ. ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರನ್ನು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಹಿಡಿದು ಆತನಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಿ ಗ್ರಾಮಸ್ಥರನ್ನು ಶಾಂತಗೊಳಿಸಿದರು.

    ನಂತರ ಪೊಲೀಸರು ಯುವತಿಯನ್ನು ತನ್ನ ಕುಟುಂಬದವರಿಗೆ ಒಪ್ಪಿಸಿ, ಯುವಕನನ್ನು ಕೋತ್ವಾಲ್‍ಗೆ ಕರೆದುಕೊಂಡು ಹೋದರು. ಸದ್ಯ ಈ ಘಟನೆ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಿನ್ನನ್ನು ಮದ್ವೆಯಾಗ್ತೀನಿ, ನಿನ್ನ ಮಗುವಿಗೆ ತಂದೆ ಆಗ್ತೀನಿ ಎಂದು ವಿಧವೆಗೆ ಮೋಸ!

    ನಿನ್ನನ್ನು ಮದ್ವೆಯಾಗ್ತೀನಿ, ನಿನ್ನ ಮಗುವಿಗೆ ತಂದೆ ಆಗ್ತೀನಿ ಎಂದು ವಿಧವೆಗೆ ಮೋಸ!

    ದಾವಣಗೆರೆ: ವಿಧವೆ ಮಹಿಳೆಯನ್ನು ಯುವಕನೊಬ್ಬ ನಂಬಿಸಿ ನಿನ್ನನ್ನು ಮದುವೆಯಾಗುತ್ತೇನೆ. ನಿನ್ನ ಮಗುವಿಗೆ ತಂದೆ ಆಗುತ್ತೇನೆ ಎಂದು ಹೇಳಿ ಮೋಸ ಮಾಡಿದ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನ ಸಾರಥಿ ಗ್ರಾಮದಲ್ಲಿ ನಡೆದಿದೆ.

    ಮಧು ವಿಧವೆ ಮಹಿಳೆಯನ್ನು ಮೋಸ ಮಾಡಿದ ಯುವಕ. ರಿಷಿಕಾ (ಹೆಸರು ಬದಲಾಯಿಸಲಾಗಿದೆ) ನಾಲ್ಕು ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದು, ಮಗುವನ್ನು ನೋಡಿಕೊಳ್ಳಲು ತನ್ನ ತಾಯಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು.

    ತಾಯಿ ಮನೆಯ ಪಕ್ಕದಲ್ಲಿದ್ದ ಮಧು, ರಿಷಿಕಾಗೆ ಪರಿಚಯವಾಗಿ ನಿನ್ನನ್ನು ಮದುವೆಯಾಗುತ್ತೇನೆ. ನಿನ್ನ ಮಗುವಿಗೆ ತಂದೆಯಾಗುತ್ತೇನೆ. ಇಬ್ಬರು ಒಟ್ಟಿಗೆ ಇರೋಣ ಎಂದು ರಿಷಿಕಾಗೆ ಹೇಳಿದ್ದನು. ಆದರೆ ರಿಷಿಕಾ ವಿರೋಧ ವ್ಯಕ್ತಪಡಿಸಿದ್ರೂ ಸಹ ಬಣ್ಣದ ಮಾತುಗಳಿಂದ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದನು. ಈಗ ಮದುವೆಯಾಗು ಎಂದರೆ ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಹೋಗು ಎಂದು ಹೇಳಿ ರಿಷಿಕಾಗೆ ಮೋಸ ಮಾಡಿದ್ದಾನೆ.

    ಮಧು ವಿರುದ್ಧ ದೂರು ನೀಡಿದ್ದರೂ ಪೊಲೀಸರು ರಿಷಿಕಾ ದೂರನ್ನು ಪರಿಗಣಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ. ಪೊಲೀಸ್ ಠಾಣೆಗೆ ಅಷ್ಟೇ ಅಲ್ಲ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಿಷಿಕಾ ತಿಳಿಸಿದ್ದಾರೆ.

    ರಿಷಿಕಾ ಬೆಂಬಲಕ್ಕೆ ಯಾರಾದರೂ ಬಂದರೆ ಅವರ ಜೊತೆ ಅನೈತಿಕ ಸಂಬಂಧದ ಕಥೆಯನ್ನು ಕಟ್ಟಿ ಆಕೆಯನ್ನು ಮನೆಯಿಂದ ಹೊರ ಬಾರದ ರೀತಿ ಚಿತ್ರಹಿಂಸೆಯನ್ನು ಮಧು ಸಂಬಂಧಿಕರು ನೀಡುತ್ತಿದ್ದರು. ಇದರಿಂದ ತನಗಾದ ಆನ್ಯಾಯಕ್ಕೆ ನ್ಯಾಯ ನೀಡಬೇಕು ಎಂದು ಪಬ್ಲಿಕ್ ಟಿವಿಯ ಬಳಿ ನೊಂದ ಮಹಿಳೆ ರಿಷಿಕಾ ತನ್ನ ನೋವನ್ನು ಹೇಳಿಕೊಂಡಿದ್ದಾರೆ.

  • ಮೋಜು ಮಾಡಲು ಫಾಲ್ಸ್ ಗೆ ತೆರಳಿ ಬಂಡೆ ಮೇಲಿಂದ ಬಿದ್ದು ಕೋಮಾಕ್ಕೆ ಜಾರಿದ ಯುವಕ!

    ಮೋಜು ಮಾಡಲು ಫಾಲ್ಸ್ ಗೆ ತೆರಳಿ ಬಂಡೆ ಮೇಲಿಂದ ಬಿದ್ದು ಕೋಮಾಕ್ಕೆ ಜಾರಿದ ಯುವಕ!

    ಬೆಂಗಳೂರು: ಮೋಜು ಮಾಡಲೆಂದು ಫಾಲ್ಸ್ ಗೆ ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಸಮೀಪ ನಡೆದಿದೆ.

    ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿನ ಟಿ.ಕೆ ಫಾಲ್ಸ್ ಪ್ರವಾಸಿ ತಾಣಯಾಗಿದ್ದು, ಪ್ರವಾಸಕ್ಕೆಂದು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಯುವಕ 50 ಅಡಿ ಬಂಡೆ ಮೇಲಿನಿಂದ ಕೆಳಗೆ ಬಿದ್ದಿದ್ದಾನೆ. ಯುವಕ ಯಾರೆಂದು ತಿಳಿದುಬಂದಿಲ್ಲ. ಸದ್ಯ ಗಾಯಾಳು ಯುವಕ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ

    ಮೋಜು ಮಾಡಲು ಹೋಗಿ ಫಾಲ್ಸ್ ತೆರಳಿದ್ದ ವೇಳೆ 50 ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಪರಿಣಾಮ ಸದ್ಯ ಕೋಮದಲ್ಲಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ಯುವಕ ಫಾಲ್ಸ್ ಬಂಡೆ ಮೇಲೆ ಹತ್ತುವಾಗ ಪಾಚಿ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು, ಕಾಲು ಜಾರಿ ಬೀಳುವ ದೃಶ್ಯವನ್ನು ಪಕ್ಕದಲ್ಲೇ ಇದ್ದ ವ್ಯಕ್ತಿಯೊಬ್ಬ ತಮ್ಮ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ.

  • ಮದುವೆಯಾಗುವಂತೆ ಯುವಕನಿಂದ ಕಾಟ- ಮನನೊಂದು ಸೀಮೆ ಎಣ್ಣೆ ಸುರಿದುಕೊಂಡು ಪ್ರತಿಭಾವಂತ ವಿದ್ಯಾರ್ಥಿನಿ ಆತ್ಮಹತ್ಯೆ!

    ಮದುವೆಯಾಗುವಂತೆ ಯುವಕನಿಂದ ಕಾಟ- ಮನನೊಂದು ಸೀಮೆ ಎಣ್ಣೆ ಸುರಿದುಕೊಂಡು ಪ್ರತಿಭಾವಂತ ವಿದ್ಯಾರ್ಥಿನಿ ಆತ್ಮಹತ್ಯೆ!

    ಮೈಸೂರು: ಮದುವೆಯಾಗು ಎಂದು ಯುವಕನೊಬ್ಬ ಕಾಟ ಕೊಡುತ್ತಿದ್ದನೆಂದು ಪ್ರತಿಭಾವಂತ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.

    ಪವಿತ್ರಾ(18) ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪವಿತ್ರಾ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಓದಿದ್ದು, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಳು.

    ಅದೇ ಗ್ರಾಮದ ಯುವಕ ಸುರೇಶ್ ಎಂಬಾತ ಪವಿತ್ರಾಳಿಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಪವಿತ್ರಾ ಮನನೊಂದು ಯಾರೂ ಇಲ್ಲದಾಗ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.

    ಸುಟ್ಟಗಾಯಗಳಾಗಿದ್ದ ಪವಿತ್ರಾಳನ್ನು ಆಕೆಯ ಪೋಷಕರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸಾವಿಗೂ ಮುನ್ನ ಪವಿತ್ರಾ ಸುರೇಶ್ ಕಿರುಕುಳ ನೀಡುತ್ತಿದ್ದ ವಿಚಾರವನ್ನು ಪೋಷಕರ ಜೊತೆ ತಿಳಿಸಿದ್ದಳು. ಈ ಕುರಿತು ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಗೆ ಬೆಂಕಿ ಹಚ್ಚಿದ!

    ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಗೆ ಬೆಂಕಿ ಹಚ್ಚಿದ!

    ಲಕ್ನೋ: ಫೋನ್ ನಂಬರ್ ನೀಡದ್ದಕ್ಕೆ ಯುವಕನೊಬ್ಬ ಬಾಲಕಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಫರಿಹಾ ಜಿಲ್ಲೆಯ ಅಜಮ್‍ಘರ್ ನಲ್ಲಿ ನಡೆದಿದೆ.

    ಮೊಹ್ಮದ್ ಶಾಯಿ ಬೆಂಕಿ ಹಚ್ಚಿದ ಆರೋಪಿ. ಶಾಯಿ ಕೂಡ ಬಾಲಕಿಯ ಗ್ರಾಮದವನಾಗಿದ್ದು, ಮಂಗಳವಾರ ಶಾಯಿ ಬಾಲಕಿ ಮನೆಗೆ ಹೋಗಿ ಫೋನ್ ನಂಬರ್ ಕೊಡು ಎಂದು ಒತ್ತಾಯಿಸಿದ್ದಾನೆ.

    ಬಾಲಕಿ ಯುವಕನಿಗೆ ಫೋನ್ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ಕೋಪಗೊಂಡ ಶಾಯಿ ಮೊದಲು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಸೀಮೆ ಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯ ಕಿರುಚಾಟದ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಜನ ಬರುವುದನ್ನು ನೋಡಿ ಶಾಯಿ ಓಡಿ ಹೋಗಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಅಲ್ಲಿದ್ದ ಜನ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ಸ್ಥಳದಲ್ಲಿ ಸೇರಿದ್ದ ಅಕ್ಕಪಕ್ಕದ ಮನೆಯವರು ಬಾಲಕಿಯನ್ನು ಸರ್ದಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆಕೆಯನ್ನು ವಾರಣಾಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ದೇಹ ಶೇ.80ರಷ್ಟು ಸುಟ್ಟು ಹೋಗಿದ್ದು, ಈಗ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಶಾಯಿಯನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಕೂಡ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಎಸ್‍ಸಿ, ಎಸ್‍ಟಿ ಕಾಯ್ದೆ ಹಾಗೂ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

    ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

    ಹಾವೇರಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಅಮೀರ್ ವೀರಾಪುರ(25) ಮೃತ ಯುವಕ. ಮಂಗಳವಾರ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿದ್ದ ಅಮೀರ್ ಚಿಕಿತ್ಸೆ ಫಲಿಸದೇ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಅಮೀರ್ ಗೆ ಚೂರಿಯಿಂದ ಇರಿದಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಅಮೀರ್ ವೀರಾಪುರ

    ವಿನಾಯಕ ನುಗ್ಗಿಹಳ್ಳಿ(21) ಬಂಧಿತ ಆರೋಪಿ. ವಿನಾಯಕನಿಗೆ ಅಮೀರ್ ಮೇಲೆ ಹಳೆ ವೈಷಮ್ಯವಿತ್ತು. ಹೀಗಾಗಿ ನೀರು ಕೇಳುವ ನೆಪದಲ್ಲಿ ಅಮೀರ್ ಮನೆಗೆ ಬಂದಿದ್ದ ವಿನಾಯಕ ಈ ಕೃತ್ಯವನ್ನ ಎಸಗಿದ್ದಾನೆ.

    ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿನಾಯಕ ನುಗ್ಗಿಹಳ್ಳಿ
  • ವಿಡಿಯೋ ರೆಕಾರ್ಡ್ ಆನ್ ಮಾಡಿ ನೇಣಿಗೆ ಶರಣಾದ ಯುವಕ!

    ವಿಡಿಯೋ ರೆಕಾರ್ಡ್ ಆನ್ ಮಾಡಿ ನೇಣಿಗೆ ಶರಣಾದ ಯುವಕ!

    ಬೆಂಗಳೂರು: ವಿಡಿಯೋ ರೆಕಾರ್ಡ್ ಆನ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಾರತ್‍ಹಳ್ಳಿ ಬಳಿ ನಡೆದಿದೆ.

    ಬಿಹಾರ ಮೂಲದ ಅಜಿತ್ ಕುಮಾರ್ (22) ಆತ್ಮಹತ್ಯೆಗೆ ಶರಣಾದ ಯುವಕ. ಮಾರತ್‍ಹಳ್ಳಿ ಬಳಿ ಇರುವ ಒಂದು ಶೆಡ್‍ನಲ್ಲಿ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಜಿತ್ ಕುಮಾರ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದನು. ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಅಜಿತ್ ವಿಡಿಯೋ ಆನ್ ಮಾಡಿ, ಶೆಡ್ ನಲ್ಲಿ ಬಟ್ಟೆ ತೆಗೆದುಕೊಂಡು ಕತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಅಜಿತ್ ಆತ್ಮಹತ್ಯೆ ಮಾಡಿಕೊಳ್ಳುವಾಗ ಏನು ಮಾತನಾಡದೆ ನೇಣಿಗೆ ಶರಣಾಗಿದ್ದಾನೆ.

    ಪೊಲೀಸರು ಬಿಹಾರದಲ್ಲಿರುವ ಅಜಿತ್ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಪೋಷಕರು ಮಗನ ಮೃತ ದೇಹವನ್ನು ಸ್ವೀಕರಿಸದೆ ನಮಗೆ ಮೃತದೇಹ ಬೇಕಾಗಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಬಳಿಕ ಬೆಂಗಳೂರಿನಲ್ಲಿರುವ ಅಜಿತ್ ಸಂಬಂಧಿ ಬಂದು ಶವ ಸ್ವೀಕಾರ ಮಾಡಿ ಮೃತದೇಹದ ಅಂತ್ಯಕ್ರಿಯೆಯನ್ನ ನೆರವೇರಿಸಿದ್ದಾರೆ.

    ಈ ಘಟನೆ ಬಗ್ಗೆ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅಜಿತ್ ಆತ್ಮಹತ್ಯೆಗೆ ಇನ್ನು ನಿಖರ ಕಾರಣ ತಿಳಿದು ಬಂದಿಲ್ಲ.

  • ಸೆಕ್ಸ್ ವಿಡಿಯೋ ವೈರಲ್ ಆಗಿದ್ದಕ್ಕೆ ಅಪ್ರಾಪ್ತೆ ಆತ್ಮಹತ್ಯೆ!

    ಸೆಕ್ಸ್ ವಿಡಿಯೋ ವೈರಲ್ ಆಗಿದ್ದಕ್ಕೆ ಅಪ್ರಾಪ್ತೆ ಆತ್ಮಹತ್ಯೆ!

    ಭುವನೇಶ್ವರ್: ತನ್ನ ಪ್ರಿಯಕರ ಜೊತೆಗಿನ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ನಾಬರಂಗ್‍ಪುರದಲ್ಲಿ ನಡೆದಿದೆ.

    ಬಾಲಕಿ ತನ್ನದೇ ಏರಿಯಾದ ಯುವಕನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಳು. ದೈಹಿಕ ಸಂಪರ್ಕ ಬೆಳೆಸಿದ ಆ ವಿಡಿಯೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಾನೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿ ಇಂದು ಬೆಳಗ್ಗೆ ಹತ್ತಿರದ ಕಾಡಿಗೆ ಹೋಗಿ ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಡಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ದೊರೆತ್ತಿದ್ದು, ನಂತರ ಆಕೆಯ ಮೃತದೇಹವನ್ನು ಮನೆಗೆ ಕರೆತರಲಾಗಿತ್ತು.

    ಗ್ರಾಮಸ್ಥರು ಆಕೆಯ ಮೃತದೇಹವನ್ನು ಕಾಡಿನಿಂದ ಆಕೆಯ ಮನೆಗೆ ತಂದರು. ನಂತರ ವೈರಲ್ ಆಗಿದ ಆಕೆಯ ವಿಡಿಯೋವನ್ನು ಗ್ರಾಮಸ್ಥರು ಬಾಲಕಿಯ ತಂದೆಗೆ ತೋರಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದಕ್ಕೆ ನಿನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರು ಬಾಲಕಿಯ ತಂದೆಗೆ ತಿಳಿಸಿದ್ದಾರೆ.

    ಈ ಬಗ್ಗೆ ಬಾಲಕಿಯ ತಂದೆ ಜರಿಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಪ್ರಕರಣದ ನಂತರ ಯುವಕ ಪರಾರಿಯಾಗಿದ್ದಾನೆ. ಇನ್ನೂ ಬಾಲಕಿಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  • ಫೋಟೋ ಕ್ಲಿಕ್ಕಿಸೋ ವೇಳೆ ಕಾಲು ಜಾರಿ ಜಲಪಾತದಲ್ಲಿ ಬಿದ್ದ ಯುವಕ: ವಿಡಿಯೋ

    ಫೋಟೋ ಕ್ಲಿಕ್ಕಿಸೋ ವೇಳೆ ಕಾಲು ಜಾರಿ ಜಲಪಾತದಲ್ಲಿ ಬಿದ್ದ ಯುವಕ: ವಿಡಿಯೋ

    ಭುವನೇಶ್ವರ್: ಫೋಟೋ ತೆಗೆಸಿಕೊಳ್ಳುವಾಗ ಯುವಕನೊಬ್ಬ ಕಾಲು ಜಾರಿ ಜಲಪಾತಕ್ಕೆ ಬಿದ್ದ ಘಟನೆ ಒಡಿಶಾದ ಕೋರಾಪುತ್‍ನ ಗಲಿಗಬಾದರ್ ಜಲಪಾತದಲ್ಲಿ ನಡೆದಿದೆ.

    ಸುಬ್ರತ್ ನಾಗ್(24) ಜಲಪಾತದಲ್ಲಿ ಬಿದ್ದು ಗಾಯಗೊಂಡ ಯುವಕ. ಸುಬ್ರತ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಜಲಪಾತಕ್ಕೆ ಹೋಗಿದ್ದನು. ಆಗ ತನ್ನ ಸ್ನೇಹಿತನಿಗೆ ಹೇಳಿ ಅಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಈ ಘಟನೆ ನಡೆದಿದೆ.

    ಜಲಪಾತದ ನೀರು ಸಾಮಾನ್ಯವಾಗಿ ಹರಿಯುತ್ತಿದ್ದು, ಸುಬ್ರತ್ ಅಲ್ಲಿ ಫೋಟೋ ತೆಗೆಸಿಕೊಳ್ಳಲೆಂದು ಹೋಗಿದ್ದನು. ಆದರೆ ಫೋಟೋಗೆ ಪೋಸ್ ಕೊಡಬೇಕಾದರೆ ಸುಬ್ರತ್ ಕಾಲು ಜಾರಿ ಕೆಳಗೆ ಬಿದಿದ್ದಾನೆ.

    ಸುಬ್ರತ್ ನಾಗ್‍ನನ್ನು ಪೋಟಂಗಿ ಕಮ್ಯೂನಿಟಿ ಹೆಲ್ತ್ ಕೇರ್ ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅಲ್ಲಿಂದ ಕೋರಾಪುತ್ ಆಸ್ಪತ್ರೆಯಲ್ಲಿ ಸುಬ್ರತ್‍ನನ್ನು ದಾಖಲಿಸಿದ್ದರು. ಸದ್ಯ ಸುಬ್ರತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.