Tag: youth

  • ನೀರು ತರಲು ಹೋಗಿದ್ದ ಯುವತಿಯನ್ನು ಕಬ್ಬಿನ ತೋಟಕ್ಕೆ ಹೊತ್ತೊಯ್ದು ಅತ್ಯಾಚಾರ!

    ನೀರು ತರಲು ಹೋಗಿದ್ದ ಯುವತಿಯನ್ನು ಕಬ್ಬಿನ ತೋಟಕ್ಕೆ ಹೊತ್ತೊಯ್ದು ಅತ್ಯಾಚಾರ!

    ಬೆಳಗಾವಿ: ಬೋರವೆಲ್ ಗೆ ನೀರು ತರಲು ಹೋಗಿದ್ದ ಯುವತಿಯನ್ನು ಕಬ್ಬಿನ ತೋಟಕ್ಕೆ ಹೊತ್ತೊಯ್ದು ಅತ್ಯಾಚಾರ ನಡೆಸಿರುವ ಘಟನೆ ಮೇ 25ರಂದು ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆನಂದ್ ಕಾಮಶೆಟ್ಟಿ(19) ಅತ್ಯಾಚಾರ ಎಸಗಿದ ಯುವಕ. ಆನಂದ್ ಬೋರವೆಲ್ ಗೆ ನೀರು ತರಲು ಹೋಗಿದ್ದ ಅದೇ ಗ್ರಾಮದ ಯುವತಿಯನ್ನು ಬಲಾತ್ಕಾರವಾಗಿ ಒಯ್ದು ಅತ್ಯಾಚಾರ ಮಾಡಿದ್ದಾನೆ.

    ಇನ್ನೂ ಆರೋಪಿ ಆನಂದ್‍ನನ್ನು ಹುಕ್ಕೇರಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವಕನ ಮೇಲೆ ಆ್ಯಸಿಡ್ ಎಸೆದ ಮಹಿಳೆ

    ಯುವಕನ ಮೇಲೆ ಆ್ಯಸಿಡ್ ಎಸೆದ ಮಹಿಳೆ

    ಬೆಳಗಾವಿ: ಮಹಿಳೆಯಿಂದ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಜಿಲ್ಲೆಯ ಕಪೀಲೇಶ್ವರ ಮಂದಿರದ ಬಳಿ ನಡೆದಿದೆ.

    ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ ಕೃತ್ಯ ನಡೆದಿದೆ. ರೊಚ್ಚಿಗೆದ್ದ ಸಾರ್ವಜನಿಕರಿಂದ ಅರ್ಚಕ ಗೋಪಾಲ್ ಪೂಜಾರಿಯನ್ನ ಅರೆಬೆತ್ತಲೆ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಪ್ರಥಮೇಶ್ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಅರ್ಚಕ ರಾಮಾ ಪೂಜಾರಿ ಹಾಗೂ ಆಸ್ಯಿಡ್ ದಾಳಿಗೆ ಒಳಗಾದ ಯುವಕ ನಡುವೆ ಘರ್ಷಣೆ ನಡೆದಿದ್ದು, ಭಕ್ತರ ಜೊತೆ ಅರ್ಚಕನ ಅನುಚಿತ ವರ್ತನೆಗೆ ಬಗ್ಗೆ ಹಲವು ಬಾರಿ ಪ್ರಥಮೇಶ್ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಪ್ರಥಮೇಶ್ ಮೇಲೆ ಅರ್ಚಕ ಸಹೋದರಿ ಆ್ಯಸಿಡ್ ದಾಳಿ ನಡೆಸಿದ್ದಾಳೆ.

    ಆ್ಯಸಿಡ್ ದಾಳಿಯಿಂದ ರೊಚ್ಚಿಗೆದ್ದ ಸಾರ್ವಜನಿಕರಿಂದ ಅರ್ಚಕ ಗೋಪಾಲ್ ಪೂಜಾರಿಯನ್ನ ಅರೆಬೆತ್ತಲೆ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಭಕ್ತರೊಂದಿಗೆ ಗೋಪಾಲ್ ಪೂಜಾರಿ ನಡುವಳಿಕೆ ಸರಿಯಾಗಿ ಇರಲಿಲ್ಲ. ಈ ಹಿಂದೆ ಕೂಡಾ ಅರ್ಚಕನ ಮಗ ದೇವಸ್ಥಾನದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಈ ಆ್ಯಸಿಡ್ ದಾಳಿಯಿಂದ ಯುವಕ ಪ್ರಥಮೇಶ್ ಕೈಗೆ ಗಾಯವಾಗಿದ್ದು, ಗಾಯಾಳು ಪ್ರಥಮೇಶ್ ನನ್ನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಘಟನೆ ಸಂಬಂಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಲ್ಕನೇ ಮಹಡಿಯಲ್ಲಿ ನೇತಾಡುತ್ತಿದ್ದ ಬಾಲಕನನ್ನು ರಕ್ಷಿಸಿ ರಿಯಲ್ ಸ್ಪೈಡರ್ ಮ್ಯಾನ್ ಆದ ಯುವಕ – ವಿಡಿಯೋ ನೋಡಿ

    ನಾಲ್ಕನೇ ಮಹಡಿಯಲ್ಲಿ ನೇತಾಡುತ್ತಿದ್ದ ಬಾಲಕನನ್ನು ರಕ್ಷಿಸಿ ರಿಯಲ್ ಸ್ಪೈಡರ್ ಮ್ಯಾನ್ ಆದ ಯುವಕ – ವಿಡಿಯೋ ನೋಡಿ

    ಪ್ಯಾರಿಸ್: ಸಿನಿಮಾಗಳಲ್ಲಿ ಸ್ಪೈಡರ್ ಮ್ಯಾನ್ ಕಷ್ಟದಲ್ಲಿರುವವರನ್ನು ರಕ್ಷಿಸುವ ಹಾಗೇ ಯುವಕನೊಬ್ಬ ನೋಡ ನೋಡುತ್ತಿದಂತೆ ನಾಲ್ಕನೇ ಮಹಡಿ ಹತ್ತಿ ಬಾಲಕನ್ನು ರಕ್ಷಿಸಿರುವ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.

    ಮಮೌದೌ ಗಸ್ಸಮ್ ಎಂಬ ಯುವಕ ಕಟ್ಟಡ ಹತ್ತಿ ಮಗುವಿನ ಪ್ರಾಣವನ್ನು ಉಳಿಸಿದ್ದು, ಆಕಸ್ಮಾತ್ ಆಗಿ ನಾಲ್ಕನೇ ಮಹಡಿಯಿಂದ ಮಗು ಜಾರಿ ನೇತಾಡುತ್ತಿತ್ತು. ಈ ವೇಳೆ ಜೀವದ ಹಂಗು ತೊರೆದ ಯುವಕ ಬರಿಗೈಯಲ್ಲಿ ಕಟ್ಟಡ ಹತ್ತಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ್ದಾನೆ.

    ಬಾಲಕನ ರಕ್ಷಣೆಗೆ ಮಗುವಿನ ತಂದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಆದರೆ ಅವರು ಬರುವಷ್ಟರಲ್ಲಿ ಬಾಲಕನನ್ನು ರಕ್ಷಿಸಿ ಯುವಕ ಕೆಳಗಿಳಿಸಿದ್ದಾನೆ. ಸದ್ಯ ಯುವಕ ಸಾಧನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳನ್ನು ಕಂಡ ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ ಯುವಕನ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಕಳೆದ ಐದು ತಿಂಗಳ ಹಿಂದೆಯಷ್ಟೇ ಇಟಲಿಯಿಂದ ಪ್ಯಾರಿಸ್ ಗೆ ಬಂದಿದ್ದ ಮಮೌದೌ ಸಾಧನೆಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುವಲ್ ಶ್ಲಾಘನೆ ಸೂಚಿಸಿ ತಮ್ಮ ದೇಶದ ಪೌರತ್ವ ನೀಡಿ ಗೌರವಿಸಿದ್ದಾರೆ. ಸದ್ಯ ಫ್ರೆಂಚ್ ಪೌರತ್ವ ಪಡೆದಿರುವ ಮಮೌದೌ ಸದ್ಯ ಉದ್ಯೋಗವನ್ನು ಪಡೆದಿದ್ದಾರೆ.

  • ಕೊಠಡಿಗೆ ನುಗ್ಗಿ ವೃದ್ಧನ ಮೇಲೆ ಚಿರತೆ ದಾಳಿ- ನೋಡಲು ಇಣುಕಿದ ಯುವಕನಿಗೆ ಗಾಯ

    ಕೊಠಡಿಗೆ ನುಗ್ಗಿ ವೃದ್ಧನ ಮೇಲೆ ಚಿರತೆ ದಾಳಿ- ನೋಡಲು ಇಣುಕಿದ ಯುವಕನಿಗೆ ಗಾಯ

    ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ರೇಷ್ಮೆ ಸಾಕಾಣಿಕೆ ಕೊಠಡಿಯಲ್ಲಿ ಬಂಧಿಸಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬೇಲಿಕೊತ್ತನೂರು ಗ್ರಾಮದಲ್ಲಿ ನಡೆದಿದೆ.

    ಜಗದೀಶ್ ಎಂಬವರಿಗೆ ರೇಷ್ಮೆ ಸಾಕಾಣಿಕೆ ಕೊಠಡಿ ಸೇರಿದೆ. ತಮ್ಮಯ್ಯ ಎಂಬವರು ಕೊಠಡಿಯಲ್ಲಿದ್ದ ಸಂದರ್ಭದಲ್ಲಿ ಚಿರತೆ ಬಂದು ನುಗ್ಗಿ ಎಕಾಏಕಿ ತಮ್ಮಯ್ಯರ ಮೇಲೆ ದಾಳಿ ಮಾಡಿದೆ. ಈ ವೇಳೆ ಅಲ್ಲೇ ಇದ್ದ ಜಗದೀಶ್ ತಿಮ್ಮಯ್ಯರನ್ನು ಚಿರತೆಯಿಂದ ಪಾರು ಮಾಡಿದ್ದಾರೆ. ಅಲ್ಲದೇ ಚಿರತೆ ಹೊರಬಾರದಂತೆ ಕೊಠಡಿ ಲಾಕ್ ಮಾಡಿದ್ದಾರೆ.

    ಹೀಗೆ ಕೂಡಿ ಹಾಕಿದ ಚಿರತೆಯನ್ನು ನೋಡಲು ಸಾಗರ್ ಎಂಬ ಯುವಕ ಕಿಟಕಿ ಮೂಲಕ ನೋಡಲು ಮುಂದಾದರು. ಈ ವೇಳೆ ಚಿರತೆ ಸಾಗರ್ ಮೇಲೂ ದಾಳಿ ನಡೆಸಿದೆ. ಸದ್ಯ ಗಾಯಾಳುಗಳನ್ನು ಕನಕಪುರ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸದ್ಯ ಚಿರತೆಯನ್ನು ಸೆರೆ ಹಿಡಿಯಲು ಸ್ಥಳಕ್ಕೆ ಬನ್ನೇರುಘಟ್ಟ ಅಧಿಕಾರಿಗಳು ಭೇಟಿ ನೀಡಿ, ಕಾರ್ಯಚರಣೆ ನಡೆಸಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನವನದ ವೈದ್ಯ ಉಮಾಶಂಕರ್ ತಂಡ ಭೇಟಿ ನೀಡಿ ವೈದ್ಯರು ಚಿರತೆಗೆ ಅರವಳಿಕೆ ನೀಡಿದ್ದಾರೆ.

  • ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಬೆಂಗಳೂರು: ನಾನು ಸಾಯುತ್ತೇನೆ ಎಂದು ಪ್ರೇಯಸಿಗೆ ಹೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ.

    ಕೆವಿನ್ ಫೆಡರಿಕ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆವಿನ್ ಫೆಡರಿಕ್ ಖಾಸಗಿ ಕಾಲೇಜ್ ನಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೆವಿನ್ ತನ್ನ ಮೊಬೈಲ್ ನಲ್ಲಿ ಯುವತಿ ಜೊತೆ ಚಾಟ್ ಮಾಡುತ್ತಿದ್ದ. ಈ ವೇಳೆ ಕೆವಿನ್ ತನ್ನ ಪ್ರೇಯಸಿಯೊಂದಿಗೆ ಚಾಟ್ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೇಸೆಜ್ ಮಾಡಿದ್ದಾನೆ. ನಂತರ ತನ್ನ ಪ್ರೇಯಸಿಯ ಪ್ರತಿಕ್ರಿಯೆ ನೋಡಿ ಕೆವಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೆವಿನ್ ನಾನು ಸಾಯುತ್ತೇನೆ ಎಂದಾಗ ಯುವತಿ ‘ಐ ಡೋಂಟ್ ಮೈಂಡ್’ ಎಂದು ಮೇಸಜ್‍ಗೆ ರಿಪ್ಲೇ ಮಾಡಿದ್ದಾಳೆ. ಇದ್ದರಿಂದ ಮನನೊಂದು ಕೆವಿನ್ ತನ್ನ ಪ್ರೇಯಸಿಗೆ ತಾನು ಸಾಯುವ ಮುನ್ನ ಹಗ್ಗವನ್ನು ಫ್ಯಾನ್ ಗೆ ಕಟ್ಟಿರುವ ಫೋಟೋವನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆವಿನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಬಾಲಕಿ ಕಿಡ್ನಾಪ್!

    ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಬಾಲಕಿ ಕಿಡ್ನಾಪ್!

    ಮೈಸೂರು: ಸಿನಿಮೀಯ ರೀತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಮೈಸೂರು ತಾಲುಕಿನ ಜೆಟ್ಟಿಹುಂಡಿಯಲ್ಲಿ ನಡೆದಿದೆ.

    ಪ್ರಕಾಶ್ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಯುವಕ. ಬಾಲಕಿ ಹತ್ತನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಅಪಹರಣ ನಡೆದಿದೆ. ನಾಲ್ವರು ಯುವಕರ ತಂಡ ಈ ಕೃತ್ಯ ಎಸಗಿದೆ.

    ಮೂರು ದಿನಗಳ ಹಿಂದೆ ಬಾಲಕಿಯ ಅಪಹರಣವಾಗಿದ್ದು, ಇನ್ನೂ ಬಾಲಕಿ ಪತ್ತೆಯಾಗಿಲ್ಲ. ಸದ್ಯ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಇಲವಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಶಿವಮೊಗ್ಗ: ಕೇರಳದಲ್ಲಿ ಹಲವರನ್ನು ಬಲಿ ಪಡೆದಿದ್ದ ನಿಪಾ ಸೋಂಕು ಸದ್ಯ ಕರಾವಳಿಯಿಂದ ಮಲೆನಾಡಿಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ನಿಪಾ ಸೋಕು ಶಂಕಿತ ವ್ಯಕ್ತಿಗೆ ಜಿಲ್ಲೆಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಯುವಕ ಮಿಥುನ್ ಗೆ ಸೋಂಕು ಹರಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಮೂಲತಃ ಸಾಗರದ ಮಿಥುನ್ ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೇರಳದಲ್ಲಿ ನಿಪಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಾಗರಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ದನ್ನು ಓದಿ:   ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಮೊದಲು ಮಿಥುನ್ ಸಾಗರ ತಾಲೂಕಿನ ಶಿರವಂತೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಸಾಗರ ಸರ್ಕಾರಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಥುನ್ ರಕ್ತ ಮಾದರಿ ಸಂಗ್ರಹಿಸಿ ಪುಣೆ ಆಸ್ಪತ್ರೆಗೆ ಕಳಿಸಲಾಗಿದೆ. ಇದನ್ನು ಓದಿ: ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಶಿವಮೊಗ್ಗ ಡಿಎಚ್‍ಓ ಡಾ ವೆಂಕಟೇಶ್, ಮಿಥುನ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣಿಸುತ್ತಿದೆ. ರಕ್ತದ ಪರೀಕ್ಷೆ ವರದಿ ಬಂದ ಬಳಿಕ ಈ ಕುರಿತು ಖಚಿತ ಮಾಡಲಾಗುತ್ತದೆ. ನಿಪಾ ಕುರಿತ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

  • ಹೊಟ್ಟೆಗೆ ಚಾಕು ಇರಿತ- ಚಿಕಿತ್ಸೆ ಫಲಕಾರಿಯಾಗದೇ ಯುವಕ ದುರ್ಮರಣ

    ಹೊಟ್ಟೆಗೆ ಚಾಕು ಇರಿತ- ಚಿಕಿತ್ಸೆ ಫಲಕಾರಿಯಾಗದೇ ಯುವಕ ದುರ್ಮರಣ

    ಕೋಲಾರ: ಚಾಕು ಇರಿತಕ್ಕೆ ಒಳಗಾದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕೋಲಾರದಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು 28 ವರ್ಷದ ಭರತ್ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಶಿವು, ಶಿವರಾಜ್ ಭರತ್ ಗೆ ಚೂರಿ ಇರಿದಿದ್ದರು.

    ಕೋಲಾರ ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ ಮೇ 21ರಂದು ಕ್ಷುಲ್ಲಕ ಕಾರಣಕ್ಕೆ ಶಿವು ಹಾಗೂ ಶಿವರಾಜ್ ಸೇರಿ ಭರತ್ ಗೆ ಚೂರಿ ಇರಿದಿದ್ದರು. ಹೊಟ್ಟೆ ಭಾಗಕ್ಕೆ ಚಾಕು ಇರಿದ ಪರಿಣಾಮ ಭರತ್ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಭರತ್ ಮೃತಪಟ್ಟಿದ್ದಾರೆ.

    ಭರತ್ ಫ್ಲಂಬಿಂಗ್ ಕೆಲಸ ಮಾಡುತ್ತಿದ್ದು, ರಾಜಶೇಖರ, ಶಿವು, ಶಿವರಾಜ್ ಜೊತೆ ಭರತ್ ನಡುವೆ ಮೊದಲಿನಿಂದಲೂ ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆಯುತಿತ್ತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮೂವರು ಅರೋಪಿಗಳನ್ನ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

  • ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಬೆಂಗಳೂರು: ಮಕ್ಕಳ ಕಳ್ಳ ಅಂತ ಭಾವಿಸಿ ವ್ಯಕ್ತಿಯೋರ್ವನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ, ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನಡುರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ಕಾಲುರಾಮ್ ಅಲಿಯಾಸ್ ಬಚ್ಚನ್‍ರಾಮ್ ರಾಜಸ್ಥಾನ ಮೂಲದವನು ಅಂತ ತಿಳಿದುಬಂದಿದೆ.

    ಕಾಟನ್ ಪೇಟೆ ಬಳಿಯ ಬಕ್ಷಿಗಾರ್ಡನ್‍ಗೆ ಈತ ಹೋಗಿದ್ದಾನೆ. ಈ ವೇಳೆ ಮಕ್ಕಳ ಕಳ್ಳ ಎಂದು ಶಂಕಿಸಿ ಈತನನ್ನು ಹಿಡಿದ ಸಾರ್ವಜನಿಕರು ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದ ಕಾಲುರಾಮ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ.

    ಇದಕ್ಕೆಲ್ಲಾ ಕಾರಣ ವಾಟ್ಸಾಪ್‍ಗಳಲ್ಲಿ ಹರಿದಾಡ್ತಿರುವ ಒಂದು ಆಡಿಯೋ ಕ್ಲಿಪ್ ಎನ್ನಲಾಗಿದೆ. ಮಕ್ಕಳ ಕಳ್ಳರ ಬಗ್ಗೆ ಎಚ್ಚರಿಕೆ ನೀಡುವ ಈ ಆಡಿಯೋ ಕ್ಲಿಪ್ ಸುಳ್ಳು ವದಂತಿಯಷ್ಟೇ ಅಂತ ಚಿಕ್ಕಬಳ್ಳಬಳ್ಳಾಪುರ ಎಸ್‍ಪಿ ಸ್ಪಷ್ಟನೆ ಕೂಡಾ ಕೊಟ್ಟಿದ್ರು.

  • ಮೆಟ್ರೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ, ಕ್ಷಣಾರ್ಧದಲ್ಲಿ ಪಾರಾದ ಯುವಕ – ವಿಡಿಯೋ ವೈರಲ್

    ಮೆಟ್ರೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ, ಕ್ಷಣಾರ್ಧದಲ್ಲಿ ಪಾರಾದ ಯುವಕ – ವಿಡಿಯೋ ವೈರಲ್

    ನವದೆಹಲಿ: ತುಂಬಾ ಜನರು ಅವಸರದಲ್ಲಿ ರೈಲ್ವೇ ಟ್ರ್ಯಾಕ್ ದಾಟಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ 21 ವರ್ಷದ ಯುವಕನೊಬ್ಬ ದೆಹಲಿಯ ಮೆಟ್ರೋ ಟ್ರ್ಯಾಕ್ ದಾಟುತ್ತಿದ್ದಾಗ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ದೆಹಲಿಯ ಶಾಸ್ತ್ರೀ ನಗರದಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ಸಂಭವಿಸಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳಿ ದಾಟಿದ ಯುವಕ ಮಯೂರ್ ಪಟೇಲ್ ಎಂದು ತಿಳಿದು ಬಂದಿದೆ. ಪಟೇಲ್ ಮೆಟ್ರೋ ನಿಲ್ದಾಣದಲ್ಲಿ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಲು ಬ್ರಿಡ್ಜ್ ಬದಲು ಮೆಟ್ರೋ ಟ್ರ್ಯಾಕ್ ಹಾದು ಹೋಗಲು ಮುಂದಾಗಿದ್ದಾನೆ.

    ಇದೇ ವೇಳೆ ಹೊರಡಲು ಸಿದ್ಧವಾಗಿ ಟ್ರ್ಯಾಕ್ ಮೇಲೆ ರೈಲು ನಿಂತಿದೆ. ಆದರೆ ಪಟೇಲ್ ನಿಲುಗಡೆ ಮಾಡಿದ ರೈಲಿನ ಬಗ್ಗೆ ಹೆಚ್ಚು ಗಮನ ಕೊಡದೇ ಒಂದು ಟ್ರ್ಯಾಕ್ ದಾಟಿ ಇನ್ನೊಂದು ಟ್ರ್ಯಾಕ್ ದಾಟಿ ಮೇಲೆ ಹತ್ತಲು ಯತ್ನಿಸಿದ್ದಾನೆ. ಆಗ ನಿಧಾನವಾಗಿ ರೈಲು ಚಲಿಸಿದೆ. ಆದರೆ ಪಟೇಲ್ ಕೈ ಜಾರಿ ಆಕಸ್ಮಿಕವಾಗಿ ಕೆಳಗೆ ಜಾರಿದ್ದಾನೆ. ಸದ್ಯ ಈ ವೇಳೆ ಅದೃಷ್ಟವಶಾತ್ ರೈಲು ನಿಂತಿದೆ. ತಕ್ಷಣ ಆತ ಮುಂದೆ ನಡೆದುಕೊಂಡು ಹೋಗಿ ಮೇಲೆ ಹತ್ತಿದ್ದಾನೆ.

    ಪಟೇಲ್ ಮಾಡಿದ್ದು ಅಪರಾಧವಾಗಿದ್ದು, ಆತನನ್ನು ಬಂಧಿಸಿ ದಂಡ ವಿಧಿಸಲಾಗಿದೆ. ತದನಂತರ ವಿಚಾರಣೆ ನಡೆಸಿದಾಗ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗುವ ಮಾರ್ಗ ತಿಳಿದಿಲ್ಲದ ಕಾರಣ ಈ ರೀತಿಯಾಗಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಅನುಮತಿ ಇಲ್ಲದಿದ್ದರೂ ಟ್ರ್ಯಾಕ್ ಹಾದು ಹೋಗಲು ಯತ್ನಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಆರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವಾ 500 ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ.