Tag: youth

  • ಬಹಿರ್ದೆಸೆಗೆ ತೆರಳಿದ್ದ ಯುವತಿಯನ್ನು ಸಿನಿಮಾ ಸ್ಟೈಲಲ್ಲಿ ಕಿಡ್ನಾಪ್ ಮಾಡ್ದ!

    ಬಹಿರ್ದೆಸೆಗೆ ತೆರಳಿದ್ದ ಯುವತಿಯನ್ನು ಸಿನಿಮಾ ಸ್ಟೈಲಲ್ಲಿ ಕಿಡ್ನಾಪ್ ಮಾಡ್ದ!

    ಯಾದಗಿರಿ: ಯುವತಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ಯಾದಗಿರಿ ನಗರದ ಗಂಜ್ ಬಳಿಯ ಬುಡ್ಗಜಂಗಮ ಕಾಲೋನಿಯಲ್ಲಿ ನಡೆದಿದೆ.

    ಬಾಬು(25) ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕ. ಕಳೆದ 10ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಯುವತಿ ಬಹಿರ್ದೆಸೆಗೆಂದು ತೆರೆಳಿದ್ದರು. ಈ ವೇಳೆ ಬಾಬು ಬೈಕಿನಲ್ಲಿ ಬಂದು ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ.

    ಬಾಬು ಯುವತಿಯನ್ನು ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಪರಾರಿಯಾಗಿದ್ದಾನೆ. ಈ ಹಿಂದೆ ಬಾಬು ತನ್ನ ಮಗಳನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಕೊಳ್ಳಲು ಯತ್ನಿಸಿದ. ಆ ವೇಳೆ ಪೊಲೀಸರಿಗೆ ದೂರು ನೀಡಿದ ಪರಿಣಾಮ ಯುವತಿಯನ್ನು ತಂದು ಬಿಟ್ಟಿದ್ದ. ಈಗ ಮತ್ತೊಮ್ಮೆ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ. ಕೂಡಲೇ ಪೊಲೀಸರು ಕಿಡ್ನಾಪ್ ಆರೋಪಿಗಳನ್ನು ಬಂಧಿಸಿ ತಮ್ಮ ಮಗಳನ್ನು ಒಪ್ಪಿಸಿ ಅಂತ ಯುವತಿಯ ತಂದೆ ಶಂಕರ ಶಾಸ್ತ್ರಿ ಒತ್ತಾಯಿಸಿದ್ದಾರೆ.

    ಈಗಾಗಲೇ ಕಿಡ್ನಾಪ್ ಮಾಡಿದ ಆರೋಪಿ ಬಾಬುಗೆ ಮದುವೆ ಆಗಿ ಎರಡು ಮಕ್ಕಳಿದ್ದಾರೆ. ಚಿಕ್ಕ ವಯಸ್ಸಿನ ಹುಡುಗಿಯ ಮೇಲೆ ಕಣ್ಣು ಹಾಕಿ ಕಿಡ್ನಾಪ್ ಮಾಡಿ ಪರಾರಿಯಾಗಿದ್ದಾನೆ. ಅಲ್ಲದೆ ಆರೋಪಿ ಮೇಲೆ ಪೊಲೀಸ್ ಠಾಣೆಯಲ್ಲಿ ಹಲವು ಕೇಸ್ ಗಳಿವೆ. ಹಳೆ ದ್ವೇಷಕ್ಕೆ ತನ್ನ ಮಗಳ ತಲೆ ಕೆಡಿಸಿ ಕಿಡ್ನಾಪ್ ಮಾಡಿದ್ದಾನೆ. ಮಗಳು ನಾಪತ್ತೆಯಾದಾಗಿನಿಂದ ಮನೆಯಲ್ಲಿ ಎಲ್ಲರೂ ಊಟ, ನೀರು ಬಿಟ್ಟು ದುಃಖತಪ್ತರಾಗಿದ್ದಾರೆ. ಈ ಘಟನೆ ದೊಡ್ಡ ಅಘಾತ ನೀಡಿದೆ. ಅಲ್ಲದೆ ಯುವತಿ ವಿಚಾರಕ್ಕೆ ಬಾರದಂತೆ ಆರೋಪಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಯುವತಿ ತಾಯಿ ನಾಗಮ್ಮ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರೀತಿ ಮಾಡುವ ನಾಟಕವಾಡಿ ಯುವತಿಯನ್ನು ನಂಬಿಸಿ ಕಿಡ್ನಾಪ್ ಮಾಡಿದ್ದಾನೆ. ಈ ಬಗ್ಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಕೊಂಡ ಪೊಲೀಸರು, ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

  • ಬಟ್ಟೆ ತೊಳೆಯುತ್ತಿದ್ದ ಯುವತಿಯನ್ನು ಕಂಡು ಮೈಮುಟ್ಟಿ ಅತ್ಯಾಚಾರಕ್ಕೆ ಯತ್ನ!

    ಬಟ್ಟೆ ತೊಳೆಯುತ್ತಿದ್ದ ಯುವತಿಯನ್ನು ಕಂಡು ಮೈಮುಟ್ಟಿ ಅತ್ಯಾಚಾರಕ್ಕೆ ಯತ್ನ!

    ತುಮಕೂರು: ನೀರಿನ ಕಟ್ಟೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಯುವತಿ ಮೇಲೆ ಅನ್ಯಕೋಮಿನ ಯುವಕನೋರ್ವ ಬಲತ್ಕಾರ ಮಾಡಲು ಪ್ರಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮೂಡಳಪಾಳ್ಯದಲ್ಲಿ ಈ ಪ್ರಕರಣ ನಡೆದಿದೆ. ಸಮೀರ್ ಎಂಬ ಯುವಕ ಮೂಡಳ ಪಾಳ್ಯದ ಕಟ್ಟೆಯಲ್ಲಿ ಏಕಾಂಗಿಯಾಗಿ ಬಟ್ಟೆ ತೊಳೆಯುತ್ತಿದ್ದ ಯುವತಿಯ ಕಂಡು ಚೇಷ್ಟೆ ಮಾಡಿದ್ದಾನೆ. ಅಲ್ಲದೆ ಯುವತಿಯ ಮೈಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ.

    ಸಂಕಷ್ಟದಲ್ಲಿದ್ದ ಯುವತಿ ಕೂಗಿ ಕೊಂಡಾಗ ಊರ ಜನರು ಸೇರಿದ್ದಾರೆ. ಯುವಕ ಸಮೀರ್ ಸೇರಿದಂತೆ ಆತನ ತಂದೆ ನಾಸೀರ್ ಹಾಗೂ ಸಹೋದರ ಉಸಾರತ್‍ಗೂ ಸಖತ್ ಗೂಸಾ ಕೊಟ್ಟಿದ್ದಾರೆ. ಟಿಂಬರ್ ವ್ಯಾಪಾರಿಯಾದ ನಾಸೀರ್ ಕುಟುಂಬ ತುರುವೇಕೆರೆ ತಾಲೂಕಿನಿಂದ ಮೂಡಳಪಾಳ್ಯಕ್ಕೆ ಬಂದಿದ್ದರು.

    ಸದ್ಯ ಆರೋಪಿ ಸಮೀರ್ ಸೇರಿಂದತೆ ಮೂವರನ್ನೂ ಚೇಳೂರು ಪೊಲೀಸರಿಗೆ ಒಪ್ಪಿಸಲಾಗಿದೆ.

  • ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

    ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

    ಪುಣೆ: ವ್ಯಕ್ತಿಯೊಬ್ಬ 18 ವರ್ಷದ ಯುವಕನನ್ನು ಚಲಿಸುತ್ತಿರುವ ಬಸ್ಸಿನಲ್ಲೇ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ಘಟನೆ ಖೇದ್ ತೆಹ್ ಸಿಲ್ ಜಿಲ್ಲೆಯ ದವಾಡಿ ಗ್ರಾಮದ ಸಮೀಪ ನಡೆದಿದೆ. ಮೃತ ಯುವಕ ತನ್ನ ಸಹೋದರಿಗೆ ಕಿರುಕುಳ ನೀಡುತ್ತಾನೆ ಎಂದು ಆರೋಪಿ ವಿರುದ್ಧ ದೂರು ದಾಖಲಿಸಿದ್ದನು. ಇದರಿಂದ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆರೋಪಿ ಹೊಂಚು ಹಾಕುತ್ತಿದ್ದನು. ಹೀಗಾಗಿ ಆರೋಪಿಯಿದ್ದ ಬಸ್ಸಿಗೆ ಹತ್ತಿದ್ದ ಯುವಕನನ್ನು ಕಂಡ ಆರೋಪಿ ಸಿಟ್ಟಿನಿಂದ ಚಲಿಸುತ್ತಿದ್ದಾಗಲೇ ಹರಿತವಾದ ಆಯುಧಗಳಿಂದ ಯುವಕ ಮೇಲೆ ದಾಳಿ ಮಾಡಿದ್ದಾನೆ.

    ಆರೋಪಿಯು ಮೃತ ಯುವಕನ ಸಹೋದರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂಬ ಆರೋಪವಿದೆ. ಈ ಕುರಿತು ಯುವತಿಯ ಕುಟುಂಬ ಇತ್ತೀಚೆಗೆ ಸಂಬಂಧಿಕನೊಬ್ಬನ ಮೇಲೆ ಶಂಕಿಸಿ ಆತನ ವಿರುದ್ಧ ಕೇಸ್ ದಾಖಲಿಸಿತ್ತು. ದೂರಿನಲ್ಲಿ ಯುವತಿಯ ಫೋಟೋದೊಂದಿಗೆ ಅಶ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆಂದು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಕ್ರೈಂ ಬ್ರಾಂಚ್ ಗೆ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇದೀಗ ಆರೋಪಿ ಸೇಡು ತೀರಿಸಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮೃತ ಯುವಕ ದಾವಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿದ್ದಾನೆ. ಈ ಬಸ್ಸಿನಲ್ಲಿ ಶಂಕಿತನು ಕೂಡ ಇದ್ದನು. ಆದ್ರೆ ಯುವಕ ಮಾತ್ರ ಇದನ್ನು ಗಮನಿಸಿರಲಿಲ್ಲ. ಬಸ್ ಚಲಿಸಲು ಆರಂಭಿಸಿತ್ತು. ಕೂಡಲೇ ಹಿಂದಿದ್ದ ಶಂಕಿತ ಸಂಬಂಧಿಕ ನೇರವಾಗಿ ಯುವಕನ ಬಳಿ ಬಂದು ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ.

    ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಕಿರುಚಿದ್ದಾರೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ನಿಲುಗಡೆಯಾಗುತ್ತಿದ್ದಂತೆಯೇ ಆರೋಪಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

    ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

    ಮೀರತ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದಾಗ ಆಕೆಯ ಕುಟುಂಬದವರು ಆತನ ಕೈ- ಕಾಲು ಕಟ್ಟಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮೀರತ್‍ ನಲ್ಲಿರುವ ಖಾರ್‍ಕೌದ ಕ್ಷೇತ್ರದಲ್ಲಿ ನಡೆದಿದೆ.

    ವಿಶಾಲ್ ಹಲ್ಲೆಗೊಳಗಾದ ಯುವಕ. ಪ್ರೇಯಸಿಯನ್ನು ಭೇಟಿ ಮಾಡಲು ವಿಶಾಲ್ ಹೋಗಿದ್ದನು. ಆಗ ಯುವತಿಯ ಕುಟುಂಬದವರು ಹಾಗೂ ಗ್ರಾಮಸ್ಥರು 1 ಗಂಟೆಕ್ಕೂ ಹೆಚ್ಚು ಕಾಲ ಥಳಿಸಿದ್ದಾರೆ. ವಿಶಾಲ್‍ನನ್ನು ಥಳಿಸುವಾಗ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಆ ವಿಡಿಯೋವನ್ನು ಮಾಡಿದ್ದಾರೆ.

    ಪ್ರೇಯಸಿಯ ಕುಟುಂಬದವರು ಹಾಗೂ ಗ್ರಾಮಸ್ಥರು ವಿಶಾಲ್‍ನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್ ವಿಡಿಯೋ ನೋಡಿದ ಪೊಲೀಸರು ಸ್ವತಃ ಕೇಸ್ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಅತರಾಡಾ ಗ್ರಾಮದ ನಾನಿಹಾಲ್‍ನಲ್ಲಿರುವ ಯುವತಿ ತನ್ನ ಮಾವನ ಮನೆಗೆ ಎಂದು ಬಂದಿದ್ದಳು. ಆಗ ವಿಶಾಲ್ ಹಾಗೂ ಯುವತಿ ನಡುವೆ ಮಾತುಕತೆ ನಡೆದು ವಾಟ್ಸಾಪ್‍ನಲ್ಲಿ ಚಾಟಿಂಗ್ ನಡೆಸುತ್ತಿದ್ದರು. ನಂತರ ವಿಶಾಲ್ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ನಿರ್ಧರಿಸಿದನು. ಆ ವಿಷಯ ಯುವತಿಯ ಕುಟುಂಬದವರಿಗೆ ತಿಳಿದು ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಥಳಿಸಿದ್ದಾರೆ.

    ಸದ್ಯ ವಿಶಾಲ್ ತಂದೆ ಯುವತಿಯ ಸಹೋದರ ಹಾಗೂ ಆಕೆಯ ತಂದೆಯ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 323, 342 ಹಾಗೂ 506 ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡು, ಆರೋಪಿಗಳನ್ನು ಹುಡುಕುತ್ತಿದ್ದಾರೆ.

  • ರಿಲಿವಿಂಗ್ ಲೆಟರ್ ಸಿಗದ್ದಕ್ಕೆ ಬೆಂಗ್ಳೂರಿನ ಯುವ ಎಂಜಿನಿಯರ್ ಆತ್ಮಹತ್ಯೆ

    ರಿಲಿವಿಂಗ್ ಲೆಟರ್ ಸಿಗದ್ದಕ್ಕೆ ಬೆಂಗ್ಳೂರಿನ ಯುವ ಎಂಜಿನಿಯರ್ ಆತ್ಮಹತ್ಯೆ

    ಬೆಂಗಳೂರು: ಖಾಸಗಿ ಕಂಪನಿಯ ಕಿರುಕುಳಕ್ಕೆ ಬೇಸತ್ತ ಯುವ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ತೇಜಸ್ ಕುಮಾರ್(23) ನೇಣಿಗೆ ಶರಣಾದ ಯುವಕ. ಚನ್ನಪಟ್ಟಣದ ಅಲ್ಲಾಳಸಂದ್ರ ಮೂಲದ ತೇಜಸ್ ಕುಮಾರ್ ಜಿಗಣಿಯ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡು ಇಲ್ಲಿಯೇ ನೆಲೆಸಿದ್ದರು.

    ಹದಿನೈದು ದಿನಗಳ ಹಿಂದೆ ತೇಜಸ್ ಕಂಪನಿಯನ್ನು ತೊರೆದು ಬೇರೆ ಕಂಪನಿಗೆ ಸೇರಿಕೊಂಡಿದ್ದರು. ಆ ಕಂಪನಿಯವರು ಹಿಂದಿನ ಕಂಪನಿಯ ರಿಲಿವಿಂಗ್ ಲೆಟರ್ ಕೇಳಿದ್ದರು. ಇದೇ ವಿಚಾರವಾಗಿ ಹಳೆಯ ಕಂಪೆನಿಯಲ್ಲಿ ಕೇಳಿದ್ದರು. ಆದರೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗ ರಿಲಿವಿಂಗ್ ಲೆಟರ್ ಕೊಡಲು ನಿರಾಕರಿಸಿತ್ತು.

    ಇದೇ ವಿಚಾರಕ್ಕೆ ಗಲಾಟೆ ಮಾಡಿ ಸ್ಥಳೀಯ ಮುಖಂಡರ ಜೊತೆಗೂಡಿ ಕಂಪನಿಗೆ ಹೋಗಿದ್ದರು. ಆದರೂ ತೇಜಸ್‍ಗೆ ರಿಲಿವಿಂಗ್ ಲೆಟರ್ ಕೊಡದ ಕಾರಣ ಮನನೊಂದು ಮನೆಯಲ್ಲಿ ಯಾರೂ ಇಲ್ಲದೇ ವೇಳೆ ನೇಣಿಗೆ ಶರಣಾಗಿದ್ದಾರೆ. ಇನ್ನು ಆತ್ಮಹತ್ಯೆ ಮಾಡುಕೊಳ್ಳವ ಮುನ್ನ ತಂದೆ-ತಾಯಿಗೆ ರಿಲಿವಿಂಗ್ ಲೆಟರ್ ನೀಡದ ಕಾರಣ ಸೂಸೈಡ್ ಮಾಡುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ.

    ಈ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

    ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

    ಬೆಂಗಳೂರು: ಹಾಡಹಗಲೇ ಯವಕನ ಮೇಲೆ ಗ್ಯಾಂಗ್ ಒಂದು ಲಾಂಗ್- ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

    ಆಡುಗೋಡಿ ನಿವಾಸಿ ಮನೋಜ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತನ ಮೇಲೆ ಕಾರ್ತಿಕ್ ಮತ್ತು ಪ್ರದೀಪ್ ಗ್ಯಾಂಗ್ ಹಲ್ಲೆ ನಡೆಸಿದೆ. ಪ್ರಕರಣ ಸಂಬಂಧ ಆಡುಗೋಡಿ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಕಾರ್ತಿಕ್ ಗೆಳೆಯ ಸೂರ್ಯ ಎಂಬಾತನ ತಂದೆ ಕಣ್ಣನ್ ಕೆಲದಿನಗಳ ಹಿಂದೆ ಸಾವನ್ನಪ್ಪಿದ್ರು. ತಂದೆ ಹೃದಯಾಘಾತಕ್ಕೆ ಮನೋಜ್ ಕಾರಣ ಎಂದು ಕಾರ್ತಿಕ್ ಬಳಿ ಸೂರ್ಯ ಹೇಳಿಕೊಂಡಿದ್ದನಂತೆ. ಹೀಗಾಗಿ ಸೂರ್ಯನ ಮಾತು ಕೇಳಿ ಗ್ಯಾಂಗ್, ಮನೋಜ್ ಮೇಲೆ ಹಲ್ಲೆ ಮಾಡಿದೆ.

    ಸದ್ಯ ಗಾಯಗೊಂಡಿರುವ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್

    ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಪುಂಡರ ಗುಂಪೊಂದು ಬೈಕ್ ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.

    ನಗರದ ಕನ್ನಿಂಗ್ ಹ್ಯಾಮ್ ರಸ್ತೆಗೆ ಐದಾರು ಬೈಕ್ ಗಳಲ್ಲಿ ಯುವಕ ಗುಂಪು ಬಂದಿದ್ದು, ಯಾವುದೇ ಭಯವಿಲ್ಲದೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮುಂಭಾಗವೇ ಬೈಕ್ ವ್ಹೀಲಿಂಗ್ ಮಾಡಿದ್ದಾರೆ.

    ಯುವಕರ ಗ್ಯಾಂಗ್ ಒಂದೇ ಬಾರಿ ಎಲ್ಲರೂ ವ್ಹೀಲಿಂಗ್ ಮಾಡಿದ್ದಾರೆ. ಇದರಿಂದ ವಾಹನ ಸವಾರರಿಗೆ ಗಾಬರಿ ಹುಟ್ಟಿಸಿದೆ. ಯುವಕರ ಗುಂಪು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮುಂಭಾಗದಲ್ಲೇ ಯಾವುದೇ ಭಯವಿಲ್ಲದೇ ವ್ಹೀಲಿಂಗ್ ಮಾಡಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

  • ಮಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ- ಪ್ರವಾಹಕ್ಕೆ ಸಿಲುಕಿದ್ದ ಬಸ್ ರಕ್ಷಣೆ

    ಮಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ- ಪ್ರವಾಹಕ್ಕೆ ಸಿಲುಕಿದ್ದ ಬಸ್ ರಕ್ಷಣೆ

    ಬೆಳಗಾವಿ: ಶನಿವಾರ ಭಾರೀ ಮಳೆಗೆ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ನಿವಾಸಿ ಇರ್ಮಾನ್ ನದಾಫ್ (25) ಮೃತ ಯುವಕ. ಜಿಲ್ಲೆಯ ಭೂತರಾಮನಹಟ್ಟಿ ಬಳಿ ಹಳ್ಳದಲ್ಲಿ ಕೊಚ್ಚಿಹೋಗಿ ಯುವಕ ಮೃತಪಟ್ಟಿದ್ದಾರೆ.

    ಇರ್ಮಾನ್ ತನ್ನ ಸಹೋದರ ಅಮೀರ್ ಜತೆಗೆ ಸಾಮಾನು ಖರೀದಿಸಲೆಂದು ಬೆಳಗಾವಿಗೆ ಆಗಮಿಸಿದ್ದರು. ಸಾಮಾನು ಖರೀದಿಸಿ ವಾಪಸ್ ಹೋಗುವ ವೇಳೆಯಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಿಡಗಳ ನಡುವೆ ನಿಂತಿದ್ದಾರೆ. ಏಕಾಏಕಿ ನೀರು ರಭಸದಿಂದ ಬಂದಿದ್ದು, ಅಮೀರ್ ಹೇಗೋ ಹಗ್ಗ ಹಿಡಿದು ಮೇಲೆ ಬಂದಿದ್ದಾರೆ.

    ಆದ್ರೆ ಇರ್ಮಾನ್ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇರ್ಮಾನ್ ಕೊಚ್ಚಿ ಹೋಗುತ್ತಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಆದರೆ ಅದು ಪ್ರಯೋಜನವಾಗಿಲ್ಲ. ಅಲ್ಲಿಂದ ಒಂದು ಕೀ,ಮೀ ದೂರದಲ್ಲಿ ಬಳಿಕ ಇರ್ಮಾನ್ ಶವ ಪತ್ತೆಯಾಗಿದೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕುಂಬಿ-ಚುಳಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಅದೃಷ್ಟವಶಾತ್ ಪ್ರವಾಹದಲ್ಲಿ ಕೊಚ್ಚಿಹೋಗದೇ ಪ್ರಯಾಣಿಕರು ಪಾರಾಗಿದ್ದಾರೆ. ನರಗುಂದದಿಂದ ಸವದತ್ತಿಗೆ ಹೋಗುತ್ತಿದ್ದ ಬಸ್ಸನ್ನು ಜೆಸಿಬಿ ಸಹಾಯದಿಂದ ಸ್ಥಳಾಂತರ ಮಾಡಲಾಗಿದೆ.

  • ಯುವಕನ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ!

    ಯುವಕನ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಆಟೋ ಚಾಲಕನೊಬ್ಬ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡುವಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಮೇ 23ರಂದು ನಡೆದಿದ್ದು, ಲಕ್ಷ್ಮಣ್(19) ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವಕ. ಲಕ್ಷ್ಮಣ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಟೋ ಚಾಲಕ ರಾಜೇಶ್ ಹುಲಿ(30) ಲೈಂಗಿಕ ದೌರ್ಜನ್ಯ ನೀಡಿದ್ದಾನೆ.

    ಲಕ್ಷ್ಮಣ ವಾಸಿಸುವ ಏರಿಯಾದಲ್ಲೇ ಆಟೋ ಚಾಲಕ ರಾಜೇಶ್ ಕೂಡ ವಾಸವಾಗಿದ್ದನು. ಬ್ಯಾಂಕ್ ಗೆ ಹೋಗಬೇಕೆಂದು ಲಕ್ಷ್ಮಣ್, ರಾಜೇಶ್ ನ ಆಟೋ ಹತ್ತಿದ್ದನು. ಈ ವೇಳೆ ರಾಜೇಶ್ ತನ್ನ ಆಟೋದಲ್ಲಿ ತಮ್ಮ ಮನೆಯ ಬಳಿ ತೆರಳಿದ್ದನು. ನನ್ನ ಮನೆ ಇಲ್ಲೇ ಇದೆ ಬಟ್ಟೆ ಬದಲಿಸಿ ಬರುತ್ತೀನಿ ಎಂದು ಲಕ್ಷ್ಮಣ್ ಹತ್ತಿರ ರಾಜೇಶ್ ಕೇಳಿಕೊಂಡಿದ್ದನು.

    ನಂತರ ರಾಜೇಶ್, ಲಕ್ಷ್ಮಣ್ ನನ್ನೂ ತನ್ನ ಮನೆಯ ಒಳಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ರಾಜೇಶ್ ಬಟ್ಟೆಯಿಂದ ಲಕ್ಷ್ಮಣ್ ಬಾಯಿ ಕಟ್ಟಿ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಕೃತ್ಯವೆಸಗುವಾಗ ರಾಜೇಶ್ ವಿಡಿಯೋ ಕೂಡ ಮಾಡಿದ್ದಾನೆ. ಅಲ್ಲದೇ ವಿಷಯ ಬಾಯಿ ಬಿಟ್ಟರೆ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು.

    ಈ ಸಂಬಂಧ ಚೆನ್ನಮ್ಮನ್ನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಸಿ.ಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

  • ಕುಡಿದ ನಶೆಯಲ್ಲಿ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಸಿಬ್ಬಂದಿಗೆ ಯುವಕನಿಂದ ಥಳಿತ!

    ಕುಡಿದ ನಶೆಯಲ್ಲಿ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಸಿಬ್ಬಂದಿಗೆ ಯುವಕನಿಂದ ಥಳಿತ!

    ಮೈಸೂರು: ಪಾನಮತ್ತ ಯುವಕನೊಬ್ಬ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಹೋಟೆಲ್ ಸಿಬ್ಬಂದಿಗಳಿಗೆ ಥಳಿಸಿರುವ ಘಟನೆ ಮೈಸೂರಿನ ಇಲವಾಲ ಬಳಿಯ ಬೇಕ್ ಅಂಡ್ ಜಾಯ್ ಹೋಟೆಲ್‍ನಲ್ಲಿ ನಡೆದಿದೆ.

    ಸಂತೋಷ್ ದಾಂಧಲೆ ನಡೆಸಿದ ಯುವಕ. ಸಂತೋಷ್ ಇಲವಾಲ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದೆ ಹೋಟೆಲ್ ಗೆ ಬಂದು ತಿಂಡಿ ತಿಂದು ಹಣ ಕೊಡದೆ ಹೋಗಿದ್ದ. ಮೊನ್ನೆ ಮತ್ತೆ ಸಂತೋಷ್ ಹೋಟೆಲ್ ಗೆ ಬಂದಿದ್ದಾನೆ.

    ಈ ವೇಳೆ ಸಂತೋಷ್‍ಗೆ ಹೋಟೆಲ್ ಸಿಬ್ಬಂದಿ ತರಾಟೆ ತೆಗೆದುಕೊಂಡಿದ್ದಾರೆ. ಆಗ ಸುಮ್ಮನೆ ಸಂತೋಷ್ ವಾಪಾಸ್ ಹೋಗಿದ್ದಾನೆ. ಆದರೆ ರಾತ್ರಿ ಮತ್ತೆ ಹೋಟೆಲ್‍ಗೆ ಬಂದು ಗಲಾಟೆ ಮಾಡಿದ್ದಾನೆ. ಸಂತೋಷ್ ನ ಈ ದಾಂಧಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಹೋಟೆಲ್ ಮಾಲೀಕ ಮುಶ್ರಫ್ ಇಲವಾಲ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.