Tag: youth

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದಾರೆ.

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡುತ್ತಿದ್ದು, ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದಾರೆ. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.

    ಬುಧವಾರ ಇದೇ ರೀತಿ ಕಪಿಲ ನದಿಯಲ್ಲಿ ಈಜಲು ತೆರಳಿದ್ದ ಓರ್ವ ಯುವಕ ಜಲಸಮಾಧಿಯಾಗಿದ್ದ. ಇಂತಹ ಅವಘಡಗಳು ಸಂಭವಿಸುತ್ತಿದ್ದರೂ, ಯುವ ಜನತೆ ಎಚ್ಚರಗೊಳ್ಳದೆ, ಕೇವಲ ಕ್ರೇಜ್ ಗಾಗಿ ತಮ್ಮ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ. ಇಂದು ಪುನಃ ಯುವಕರು ಈಜಲು ನೀರಿಗೆ ಧುಮುಕಿದ್ದಾರೆ.

  • ಮನೆ ಮೇಲೆ ಕಲ್ಲು, ಬಲ್ಬ್ ಎಸೀತಾನೆ- ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಒಂಟಿ ಕುಟುಂಬಕ್ಕೆ ಯುವಕನಿಂದ ಕಾಟ!

    ಮನೆ ಮೇಲೆ ಕಲ್ಲು, ಬಲ್ಬ್ ಎಸೀತಾನೆ- ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಒಂಟಿ ಕುಟುಂಬಕ್ಕೆ ಯುವಕನಿಂದ ಕಾಟ!

    ತುಮಕೂರು: ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಕ್ಷೇತ್ರ ಕೊರಟಗೆರೆಯಲ್ಲಿ ಒಂಟಿ ಕುಟುಂಬವೊಂದು ಯುವಕನೋರ್ವನ ಕಾಟದಿಂದ ಬೇಸತ್ತು ಹೋಗಿದೆ.

    ಯುವಕನ ಕಾಟದಿಂದಾಗಿ ಕುಟುಂಬ ಮನೆಯಿಂದ ಹೊರಕ್ಕೆ ಬಾರದೇ ಬೀಗ ಹಾಕಿಕೊಂಡು ಕೂರುವ ಅನಿವಾರ್ಯತೆ ಎದುರಾಗಿದೆ. ಮೋರಗಾನಹಳ್ಳಿಯ ವನಜಾಕ್ಷಿ ಕುಟುಂಬಕ್ಕೆ ಪಕ್ಕದ ಮನೆಯ ನಟೇಶ್ ಎಂಬ ಯುವಕ ಕಾಟ ಕೊಡುತ್ತಿದ್ದಾನೆ. ಇದ್ದಕಿದ್ದ ಹಾಗೆ ಮನೆ ಮೇಲೆ ಕಲ್ಲು ಎಸೀತಾನೆ. ಮನೆಯವರು ಹೊರಗಡೆ ಬಂದರೆ ವಿದ್ಯುತ್ ಬಲ್ಬ್ ಎಸೆದು ಹಲ್ಲೆ ಮಾಡಲು ಮುಂದಾಗ್ತಾನೆ.

    ಇದೀಗ ಈ ಯುವಕನ ಕಿರುಕುಳದಿಂದ ವನಜಾಕ್ಷಿ ಕುಟುಂಬ ನೊಂದುಹೋಗಿದೆ. ವನಜಾಕ್ಷಿ ಪತಿ ಬೆಂಗಳೂರಲ್ಲಿ ಕೆಲಸ ಮಾಡುತಿದ್ದು, ವಾರಕೊಮ್ಮೆ ಬಂದು ಹೋಗ್ತಾರೆ. ಪತಿ ಇಲ್ಲದೆ ಇದ್ದ ಸಂದರ್ಭ ನೋಡಿ ನಟೇಶ್, ವೃದ್ಧರು, ಮಕ್ಕಳು ಎನ್ನದೆ ಹಿಂಸೆ ನೀಡ್ತಾ ಇದ್ದಾನೆ. ಕಳೆದ ಎರಡು ತಿಂಗಳಿನಿಂದ ನಟೇಶ್ ಈ ವಿಚಿತ್ರ ವರ್ತನೆ ಮಾಡುತ್ತಿದ್ದಾನೆ. ಒಂದು ವಾರದ ಹಿಂದೆ ವನಜಾಕ್ಷಿ ಮನೆಯಿಂದ ಹೊರಕ್ಕೆ ಬಂದು ಮೊಬೈಲಲ್ಲಿ ಮಾತನಾಡುತ್ತಿದ್ದಾಗ ಮೈಮೇಲೆ ಬಲ್ಬ್ ಎಸೆದಿದ್ದಾನೆ. ಅದೃಷ್ಟವಶಾತ್ ಈ ವೇಳೆ ಬಚಾವ್ ಆಗಿದ್ದಾರೆ.

    ಅಷ್ಟಕ್ಕೂ ಈ ಯುವಕನ ವರ್ತನೆಗೆ ಹಳೆಯ ದ್ವೇಷ ಕಾರಣವಂತೆ. ವನಜಾಕ್ಷಿ ಅವರ ನೀರಿನ ಪೈಪ್ ಈತನೇ ಒಡೆದು ಹಾಕಿ ಪುನಃ ರಿಪೇರಿ ಮಾಡಿಕೊಟ್ಟಿದ್ದನಂತೆ. ಇದನ್ನೇ ನೆಪವಾಗಿಸಿಕೊಂಡು ದ್ವೇಷ ಸಾಧಿಸ್ತಾ ಇದ್ದಾನೆ. ಈ ಬಗ್ಗೆ ಕೋಳಾಲ ಪೊಲೀಸರಿಗೆ ದೂರು ನಿಡಿದ್ರೆ ಅವರು ಕೂಡಾ ದೂರು ಸ್ವೀಕರಿಸುತ್ತಿಲ್ಲ. ಅಲ್ಲದೇ ದೂರು ಕೊಟ್ಟರೆ ಊರಿನಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ದಿಕ್ಕು ಕಾಣದೇ ಊರು ತೊರೆಯುವ ನಿರ್ಧಾರ ಕೈಗೊಂಡಿರುವುದಾಗಿ ಕುಟುಂಬ ಪಬ್ಲಿಕ್ ಟಿವಿ ಜೊತೆ ತನ್ನ ಅಳಲು ತೋಡಿಕೊಂಡಿದೆ.

  • ಪ್ರೇಯಸಿಯ ತಂದೆಯ ಷರತ್ತು ಸ್ವೀಕರಿಸಿದ ಪ್ರಿಯಕರ – ಈಗ ಸಾವು ಬದುಕಿನ ಮಧ್ಯೆ ಹೋರಾಟ

    ಪ್ರೇಯಸಿಯ ತಂದೆಯ ಷರತ್ತು ಸ್ವೀಕರಿಸಿದ ಪ್ರಿಯಕರ – ಈಗ ಸಾವು ಬದುಕಿನ ಮಧ್ಯೆ ಹೋರಾಟ

    ಭೋಪಾಲ್: ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕನೊಬ್ಬ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಪ್ರೇಯಸಿಯ ಮನೆಯಲ್ಲೇ ಗುಂಡು ಹಾರಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಮಧ್ಯಪ್ರದೇಶ ಭೋಪಾಲ್‍ನಲ್ಲಿ ನಡೆದಿದೆ.

    ಅತುಲ್ ಲೋಖಂಡೆ(30) ಗುಂಡು ಹಾರಿಸಿಕೊಂಡ ಪ್ರೇಮಿ. ಅತುಲ್ ಭೋಪಾಲ್‍ನ ಶಿವಾಜಿನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಆ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದನು. ಆದರೆ ಯುವತಿಯ ತಂದೆ ಈ ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ.

    ನಡೆದಿದ್ದೇನು?
    ನನ್ನ ಮಗಳನ್ನು ಪ್ರೀತಿಸುತ್ತೀಯಾ ಎಂದರೆ ಸಂಜೆ ನನ್ನ ಮನೆಗೆ ಬಾ, ಮನೆಗೆ ಬಂದು ನೀನು ಸಾಯುವುದನ್ನು ತೋರಿಸು ಎಂದು ಯುವತಿಯ ತಂದೆ ಷರತ್ತು ಹಾಕಿದ್ದರು. ಇದ್ದನ್ನು ಕೇಳಿ ಅತುಲ್ ತನ್ನ ಮಾವನ ಕಾರು ತೆಗೆದುಕೊಂಡು ಯುವತಿಯ ಮನೆಗೆ ತನ್ನ ಮದುವೆಯ ಬಗ್ಗೆ ಮಾತನಾಡಲು ಹೋದನು. ಆಗ ಯುವತಿಯ ತಂದೆ ನನ್ನ ಮಗಳನ್ನು ನಿಜವಾಗಲ್ಲೂ ಪ್ರೀತಿಸುತ್ತಿದ್ದರೆ ನೀನು ಸಾಯುವುದನ್ನು ತೋರಿಸು. ಆಗ ನೀನು ಬದುಕುಳಿದರೆ ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಿಸುತ್ತೇನೆ. ಇಲ್ಲದಿದ್ದರೆ 7 ಜನ್ಮದಲ್ಲಿ ನೀನು ಹುಟ್ಟಿದ್ದರೆ ಆಗ ನನ್ನ ಮಗಳನ್ನು ಮದುವೆ ಮಾಡಿಕೋ ಎಂದು ಯುವತಿಯ ತಂದೆ ಸವಾಲು ಹಾಕಿದ್ದಾರೆ.

    ತನ್ನ ಪ್ರೀತಿಯನ್ನು ಸಾಬೀತು ಮಾಡಲು ಅತುಲ್ ದೇಶೀಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡಿದ್ದಾನೆ. ಕೂಡಲೇ ಮನೆಯ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಅತುಲ್ ಮಾವ ಹಾಗೂ ಯುವತಿ ಆತನನ್ನು ಶಿವಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡ ಪರಿಣಾಮ ಅತುಲ್ ಮೆದುಳು ನಿಷ್ಕ್ರೀಯಗೊಂಡಿದೆ. ಸದ್ಯ ಆತ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
    ಈ ಘಟನೆ ನಡೆಯುವ ಮುನ್ನ ಅತುಲ್ ತನ್ನ ಫೇಸ್‍ಬುಕ್‍ನಲ್ಲಿ ನನ್ನ ಪ್ರೇಯಸಿ ಜೊತೆಯಿರುವ ಸುಮಾರು 40 ಫೋಟೋಗಳನ್ನು ಹಾಕಿ ಅದಕ್ಕೆ ನನ್ನ ಪ್ರೇಯಸಿಯ ತಂದೆ, ಜೀವ ಪಣಕಿಟ್ಟು ನಿನ್ನ ಪ್ರೀತಿ ಸಾಬೀತು ಮಾಡು ಎಂದು ಹೇಳಿದ್ದಾರೆ. ನಾನು ಬದುಕುಳಿದರೆ ನಮ್ಮಿಬ್ಬರ ಮದುವೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ನಾನು ಮೃತಪಟ್ಟರೆ ಮುಂದಿನ ಜನ್ಮದಲ್ಲಿ ನಾವು ಒಂದಾಗುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ನಾನು ಪ್ರೀತಿಸಿರುವ ಹುಡುಗಿ ಸಿಗದಿದ್ದರೆ ನನ್ನ ಬದುಕಿಗೆ ಅರ್ಥವಿಲ್ಲ ಹಾಗೂ ನನ್ನ ನಿರ್ಧಾರಕ್ಕೆ ಯಾರು ಹೊಣೆಯಲ್ಲ. ಹಾಗೆಯೇ ಈ ಸಾವಿನಿಂದ ಮುಂದೆ ಹೆತ್ತವರು ಅವರ ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಅತುಲ್ 13 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಹಿಂದೆ ಕೂಡ ಹುಡುಗಿಯ ತಂದೆ ಅವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಆಗ ಹುಡುಗಿ ಅವನ ಕರೆಗೆ ಉತ್ತರಿಸುತ್ತಿರಲಿಲ್ಲ ಎಂದು ಅತುಲ್ ಸ್ನೇಹಿತ ತಿಳಿಸಿದ್ದಾನೆ. ಸದ್ಯ ಈ ಘಟನೆ ನಡೆದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಯುವತಿಯ ಕುಟುಂಬವನ್ನು ಎಂಪಿ ನಗರಕ್ಕೆ ವರ್ಗಾಯಿಸಲಾಗಿದೆ. ಯುವಕನ ಆತ್ಮಹತ್ಯೆ ಸುತ್ತ ಏನೆಲ್ಲ ನಡೆದಿದೆ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಉಪ ಇನ್ಸ್ ಪೆಕ್ಟರ್ ಜನರೆಲ್ ಧರ್ಮೇಂದ್ರ ಚೌಧರಿ ಹೇಳಿದ್ದಾರೆ.

    ಸದ್ಯ ಈ ಘಟನೆ ಕುರಿತು ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ದರ್ಶನ್ ಅಪ್ಪಟ ಅಭಿಮಾನಿ ಆತ್ಮಹತ್ಯೆ!

    ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ದರ್ಶನ್ ಅಪ್ಪಟ ಅಭಿಮಾನಿ ಆತ್ಮಹತ್ಯೆ!

    ಹಾಸನ: ಗೆಳತಿ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲೂಕು ಮಳಲಿ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಪ್ರಜ್ವಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಜ್ವಲ್ ಕಳೆದ 2 ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಆತನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

    ಪ್ರಜ್ವಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತನ್ನ ಎದೆ ಮೇಲೆ ದರ್ಶನ್ ಮುಖ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಇನ್ನೂ ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಸೋಮವಾರ ರಾತ್ರಿ ಹಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ನೇಹಿತೆ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯ ಬಂಧನ!

    ಸ್ನೇಹಿತೆ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯ ಬಂಧನ!

    ಬೆಂಗಳೂರು: ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಮಹೇಂದ್ರ ಕುಮಾರ್ ಬಂಧಿತ ಆರೋಪಿ. ಜೂನ್ 10ರಂದು ಮಹೇಂದ್ರ ಲಾಡ್ಜ್ ಗೆ ಹೋಗಿ ಯುವಕನನ್ನು ಬೆದರಿಸಿದ್ದನು.

    ಯುವಕನೊಬ್ಬ ತನ್ನ ಸ್ನೇಹಿತೆ ಜೊತೆಗೆ ಲಾಡ್ಜ್ ಗೆ ಹೋಗಿದ್ದ. ಆಗ ಮಹೇಂದ್ರ ಮಧ್ಯರಾತ್ರಿ ಲಾಡ್ಜ್ ರೂಮ್‍ಗೆ ಹೋಗಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ಲಾಡ್ಜ್ ರೂಮ್‍ನಲ್ಲಿ ಏನ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿ, ನಿಮ್ಮ ವಿಡಿಯೋಗಳು ಸಹ ನಮ್ಮ ಬಳಿ ಇದೆ ಎಂದು ಹೇಳಿ 50 ಸಾವಿರ ರೂ. ಹಣದ ಬೇಡಿಕೆ ಇಟ್ಟನು. ಹಣ ನೀಡಿಲ್ಲ ಎಂದರೆ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕುತ್ತೇನೆ ಎಂದು ಬೆದರಿಸಿದ್ದಾನೆ.

    ಕೊನೆಗೆ ದೂರುದಾರ ಯುವಕ ಹಣ ಕೊಡಲು ಒಪ್ಪಿಕೊಂಡನು. ಬಳಿಕ ಮಹೇಂದ್ರ ಯುವಕನನ್ನು ಕಾರಿನಲ್ಲಿ ಎಟಿಎಂಗೆ ಕರೆದುಕೊಂಡು ಹೋಗಿ 20 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದನು. ಹಣ ಪಡೆದ ಬಳಿಕ ಮಹೇಂದ್ರ ಯುವಕನನ್ನು ಕೆಆರ್ ಪುರಂ ಬಳಿ ಬಿಟ್ಟು ಹೋಗಿದ್ದಾನೆ.

    ಇದಾದ ಬಳಿಕ ಮಹೇಂದ್ರ ಮತ್ತೆ ಯುವಕನ ಮೊಬೈಲ್‍ಗೆ ಕರೆ ಮಾಡಿ ಉಳಿದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಂತಿಮವಾಗಿ ಯುವಕ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹೇಂದ್ರ ವಿರುದ್ಧ ದೂರು ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜೈ ಭಾರತ್ ಸಂಘ ಎನ್ನುವ ಸಂಘಟನೆ ಮಾಡಿಕೊಂಡಿದ್ದನೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ಆರೋಪಿ ಇದೇ ರೀತಿ ಕೃತ್ಯ ಎಸಗುತ್ತಿದ್ದನು. ಆದರೆ ನೊಂದವರು ಮಾನಕ್ಕೆ ಹೆದರಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಈಗ ಅಂತಿಮವಾಗಿ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.

  • ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಶವ 8 ದಿನಗಳ ಬಳಿಕ ಪತ್ತೆ

    ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಶವ 8 ದಿನಗಳ ಬಳಿಕ ಪತ್ತೆ

    ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆಯ ಫೋಟೋ ತಗೆಯಲು ಹೋಗಿ ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಮೃತ ದೇಹವು ಇಂದು ಪತ್ತೆಯಾಗಿದೆ.

    ಜೂನ್ 22 ಶುಕ್ರವಾರ ಸಂಜೆ ಮನೋಜ್(24) ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಲಪಾತಕ್ಕೆ ಬಿದ್ದಿದ್ದ. ಶನಿವಾರ ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಶವ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಮನೋಜ್ ಮೃತ ದೇಹವು 2 ಕಿ.ಮೀ. ದೂರದಲ್ಲಿ ಸಿಕ್ಕಿದೆ.

    ಮೃತ ಮನೋಜ್ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದವನಾಗಿದ್ದು, ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸೆಪ್ಷನ್‍ಗೆಂದು ಹೋಗಿ, ಮರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

  • ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನೆಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ!

    ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನೆಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ!

    ಚಾಮರಾಜನಗರ: ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನೆಂದು ಮನನೊಂದ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಅಮ್ಮನಪುರದಲ್ಲಿ ನಡೆದಿದೆ.

    ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. ಚಾಮರಾಜನಗರ ತಾಲೂಕಿನ ರೇಚಂಬಳ್ಳಿ ಗ್ರಾಮದ ಮನು ಎಂಬ ಯುವಕ ಅಮ್ಮನಪುರದ ಜ್ಯೋತಿ ಎಂಬ 10ನೇ ತರಗತಿ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿ ನಾನು ಪ್ರೀತಿಸಲ್ಲಾ ಎಂದು ಹೇಳಿದ್ರು ಕೂಡ ಪದೇ ಪದೇ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದನು.

    ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದರಿಂದ ಜ್ಯೋತಿಯ ಮುಖ ಸೇರಿದಂತೆ ದೇಹದ ಬಹುತೇಕ ಭಾಗ ಸುಟ್ಟು ಹೋಗಿದೆ. ಸದ್ಯ ಜ್ಯೋತಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗ್ರಾಮದಲ್ಲಿಲ್ಲ ಒಂದೇ ಒಂದು ಆಸ್ಪತ್ರೆ- ಪ್ರಧಾನಿಗೆ ಯುವಕ ಬರೆದ ಪತ್ರಕ್ಕೆ ಸ್ಪಂದನೆ

    ಗ್ರಾಮದಲ್ಲಿಲ್ಲ ಒಂದೇ ಒಂದು ಆಸ್ಪತ್ರೆ- ಪ್ರಧಾನಿಗೆ ಯುವಕ ಬರೆದ ಪತ್ರಕ್ಕೆ ಸ್ಪಂದನೆ

    ಧಾರವಾಡ: ಅದೊಂದು ಸಣ್ಣ ಹಳ್ಳಿ. ಅಲ್ಲಿಯ ಜನರು ಇಷ್ಟು ದಿನಗಳಿಂದ ತಮ್ಮ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲದೇ ಪರದಾಟ ನಡೆಸಿದ್ದರು. ಈಗ ಆ ಆಸ್ಪತ್ರೆ ಇಲ್ಲದ ಕೊರಗು ದೂರವಾಗಲಿದೆ. ಇದಕ್ಕೆ ಕಾರಣ ಅಂದರೆ ಪ್ರಧಾನಿ ಮೋದಿ. ಧಾರವಾಡದ ಹೊಸ ತೇಗೂರ ಗ್ರಾಮ. ಈ ಗ್ರಾಮ ಮತ್ತು ಅಕ್ಕಪಕ್ಕದ 12 ಹಳ್ಳಿಗಳಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಹೀಗಾಗಿ ಇಲ್ಲಿನ ಜನ್ರು ಏನಾದ್ರು ಆದ್ರೆ ಧಾರವಾಡ ಪಟ್ಟಣ ಅಥವಾ ಬೆಳಗಾವಿಯ ಕಿತ್ತೂರಿಗೇ ಹೋಗ್ಬೇಕಾದ ಪರಿಸ್ಥಿತಿ ಇದೆ.

    ಈ ಬಗ್ಗೆ ಗ್ರಾಮದ ರುದ್ರಪ್ಪ ಗಾಣಿಗೇರ ಎಂಬ ಯುವಕ ಪ್ರಧಾನಿ ಮೋದಿ ಕಚೇರಿಗೆ ಮೇಲ್ ಮಾಡಿ ಸಮಸ್ಯೆ ಗಮನಕ್ಕೆ ತಂದಿದ್ದರು. ಮೇಲ್ ಸಿಕ್ಕ ತಕ್ಷಣ ಪ್ರಧಾನಿ ಮೋದಿ ಕಚೇರಿಯಿಂದ ರೆಸ್ಪಾನ್ಸ್ ಬಂದಿದ್ದು, ಧಾರವಾಡ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

    ಹೊಸ ತೇಗೂರ ಗ್ರಾಮ ಪಂಚಾಯ್ತಿ ಕೂಡಾ ಆಸ್ಪತ್ರೆಗಾಗಿ ಜಮೀನು ನೀಡಲು ಮುಂದಾಗಿದ್ದು, ಗ್ರಾಮದ ಹೊರವಲಯದ ಗೋಮಾಳ ಜಮೀನನ್ನು ನೀಡಲು ಠರಾವ್ ಪಾಸ್ ಮಾಡಿದೆ. ಹಲವು ವರ್ಷಗಳಿಂದ ಆಸ್ಪತ್ರೆಯಿಲ್ಲದೆ ಪರದಾಡುತ್ತಿದ್ದ ಈ ಗ್ರಾಮದ ಜನರಿಗೆ ಹೊಸದೊಂದು ಆಸೆ ಚಿಗುರಿದೆ.

  • ಅಡ್ರೆಸ್ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿ ಯುವತಿಯರಿಂದ ಕೃತ್ಯ!

    ಅಡ್ರೆಸ್ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿ ಯುವತಿಯರಿಂದ ಕೃತ್ಯ!

    ಬೆಂಗಳೂರು: ಅಡ್ರೆಸ್ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿ ಯುವತಿಯರಿಬ್ಬರು ಸುಲಿಗೆ ಮಾಡಿದ ಘಟನೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ.

    ಗೌರವ್ ನೇಗಿ ಎಂಬಾತನನ್ನು ಪ್ರಜ್ಞೆ ತಪ್ಪಿಸಿ ಯುವತಿಯರು ಸುಲಿಗೆ ನಡೆಸಿದ್ದಾರೆ. ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮುಗಿಸಿ ಬರುವಾಗ ಈ ಘಟನೆ ನಡೆದಿದೆ. ಯುವತಿಯರು ಸ್ವಪ್ನ ಬುಕ್ ಸ್ಟಾಲ್ ಅಡ್ರೆಸ್ ಕೇಳುತ್ತಾ ಅಡ್ಡ ಬಂದರು. ನಂತರ ಕರ್ಚೀಫ್ ಮುಖಕ್ಕೆ ಒತ್ತಿ ಪ್ರಜ್ಞೆ ತಪ್ಪಿಸಿ ಚಿನ್ನದ ಸರ, ಪರ್ಸ್ ಎಗರಿಸಿ ಎಸ್ಕೇಪ್ ಆಗಿದ್ದಾರೆ.

    ಸದ್ಯ ಯುವತಿಯರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಯುವತಿಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ- ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ದಾಂಧಲೆ

    ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ- ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ದಾಂಧಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಯುವಕ ಕ್ಷುಲಕ ವಿಚಾರಕ್ಕೆ ಜಗಳ ಪ್ರಾರಂಭಿಸಿ ಮಚ್ಚು ಹಿಡಿದು ದಾಂಧಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ಕುಡಿದ ಮತ್ತಿನಲ್ಲಿ ಸುರೇಶ್ ಹಾಗೂ ಲಕ್ಷ್ಮಿ ನಾರಾಯಣ್ ಎಂಬವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಬೈದಾಡಿಕೊಂಡು ಸುರೇಶ್ ಮನೆಗೆ ಹೋಗಿದ್ದಾನೆ. ನಂತರ ಲಕ್ಷ್ಮಿನಾರಾಯಣ್ ಮಚ್ಚು ಹಿಡಿದು, ಸುರೇಶ್ ನ ಮನೆ ಬಾಗಿಲು ಮುರಿದಿದ್ದಾನೆ.

    ಈ ವೇಳೆ ಗ್ರಾಮದಲ್ಲಿ ಲಕ್ಷ್ಮಿನಾರಾಯಣನ ರಂಪಾಟಕ್ಕೆ, ಗ್ರಾಮಸ್ಥರು ಕೆಲಕಾಲ ಭಯಬೀತರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಂಧಲೆ ಮಾಡಿದ ಲಕ್ಷ್ಮಿನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.