Tag: young women

  • ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ ಕವರ್‌ಗೆ ತುಂಬಿ ಎಸೆದ್ರು

    ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ ಕವರ್‌ಗೆ ತುಂಬಿ ಎಸೆದ್ರು

    – ಸೂಟ್‍ಕೇಸ್‍ನಲ್ಲಿದ್ದ ಯುವತಿಯ ಮಾಂಸ ತುಂಬಿದ ಪಾಲಿಥಿನ್ ಕವರ್‌ಗಳು

    ಲಕ್ನೋ: ಯುವತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ಕತ್ತರಿಸಿ ಸೂಟ್‍ಕೇಸ್‍ನಲ್ಲಿ ತುಂಬಿ ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ನಗರದಲ್ಲಿ ನಡೆದಿದೆ.

    ಅಪರಿಚಿತ ಯುವತಿಯನ್ನು ಕೊಲೆ ಮಾಡಿರುವ ಪಾಪಿಗಳು ಆಕೆಯನ್ನು ಮೃತದೇಹವನ್ನು ಬಿಡಿ ಬಿಡಿಯಾಗಿ ಕತ್ತರಿಸಿದ್ದಾರೆ. ನಂತರ ಅದನ್ನು ಪಾಲಿಥಿನ್ ಕವರ್ ಒಳಗೆ ತುಂಬಿ ನಂತರ ಸೂಟ್‍ಕೇಸ್‍ಗೆ ಅದನ್ನು ಹಾಕಿ, ಸಫೆದಾಬಾದ್ ಪ್ರದೇಶದಲ್ಲಿರುವ ಮುಚ್ಚಿದ ಹಳೇ ಕಾರ್ಖಾನೆ ಮುಂಭಾಗದಲ್ಲಿ ಎಸೆದು ಹೋಗಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈ ಕಾರ್ಖಾನೆ ಮುಚ್ಚಿರುವ ಕಾರಣ ಈ ಜಾಗದಲ್ಲಿ ಯಾವ ಜನರು ಓಡಾಡುವುದಿಲ್ಲ. ಈ ಕಾರಣದಿಂದ ಈ ಸೂಟ್‍ಕೇಸ್ ಅನ್ನು ಯಾರೂ ಗಮನಿಸಿಲ್ಲ. ಆದರೆ ಎರಡು ಮೂರು ದಿನಗಳ ನಂತರ ಕೊಳೆತ ವಾಸನೆ ಬರಲಾರಂಭಿಸಿದೆ. ಆಗ ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಹೋದ ಪೊಲೀಸರು ಸೂಟ್‍ಕೇಸ್ ವಶಕ್ಕೆ ಪಡೆದು, ಮೃತದೇಹವನ್ನು ಲ್ಯಾಬ್‍ಗೆ ಕಳುಹಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಎಸ್‍ಪಿ ಅರವಿಂದ ಚತುರ್ವೇದಿ, ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಸೂಟ್‍ಕೇಸಿನೊಳಗೆ ಇರುವ ಮೃತದೇಹದ ಭಾಗಗಳನ್ನು ನೋಡಿ ಇದು ಮಹಿಳೆಯ ಶವ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಸುಮಾರು 20 ವಯಸ್ಸಿನ ಯುವತಿಯ ಮೃತದೇಹ ಎಂದು ತಿಳಿದುಬಂದಿದೆ. ಯಾರೋ ಬೇರ ಕಡೆ ಕೊಲೆ ಮಾಡಿ ನಂತರ ಅದನ್ನು ಕತ್ತರಿಸಿ ಇಲ್ಲಿಗೆ ತಂದು ಎಸೆದಿದ್ದಾರೆ ಎಂದು ಹೇಳಿದ್ದಾರೆ.

  • ಬಿಯರ್‌ಗಾಗಿ ಬಿಸಿಲಲ್ಲಿ ಬಸವಳಿದ ಮಣಿಪಾಲದ ಮಾನಿನಿಯರು

    ಬಿಯರ್‌ಗಾಗಿ ಬಿಸಿಲಲ್ಲಿ ಬಸವಳಿದ ಮಣಿಪಾಲದ ಮಾನಿನಿಯರು

    – ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ

    ಉಡುಪಿ: ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಎಣ್ಣೆಗೆ ಮಣಿಪಾಲದ ಮಾನಿನಿಯರು ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ. ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ ಅಂತ ಎದ್ದು ಬಿದ್ದು ಮದ್ಯ ಖರೀದಿ ಮಾಡಿದರು.

    ರೂಲ್ಸ್ & ರೆಗ್ಯುಲೇಶನ್ ಅನ್ನು ಉಡುಪಿಯ ಮಣಿಪಾಲದಲ್ಲಿ ಗಾಳಿಗೆ ತೂರಿ, ಬಿಸಿಲ ದಾಹ ತೀರಿಸಲು ಬಿಯರ್ ಗಾಗಿ ಬಿಸಿಲಿನಲ್ಲೇ ಯುವತಿಯರು ಒಣಗಿದರು. ಮಣಿಪಾಲದಲ್ಲಿ ಮದ್ಯಕ್ಕಾಗಿ ಯುವತಿಯರು ಸರತಿ ಸಾಲು ಕಟ್ಟಿದ್ದರು. ಬಿಸಿಲ ಝಳದಲ್ಲಿ ಛತ್ರಿ ಹಿಡಿದುಕೊಂಡು ಸಾಲಲ್ಲಿ ನಿಂತು ಎಣ್ಣೆ ಪಡೆದುಕೊಂಡರು.

    ಯುವತಿಯರು ಒಂದೂವರೆ ತಿಂಗಳ ಬಳಿಕ ಎಣ್ಣೆಯನ್ನು ಕಂಡು ಫುಲ್ ಖುಷ್ ಆಗಿದ್ದರು. ಹೊರರಾಜ್ಯದ ಯುವತಿಯರು ಹಾಗೂ ವಿದೇಶಿ ಮಹಿಳೆ ಕೂಡ ಲೈನ್‍ನಲ್ಲಿ ಬಂದು ಮಾದಕ ಪೇಯ ಖರೀದಿ ಮಾಡಿದರು. ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಲಾಕ್‍ಡೌನ್ ಮೊದಲು ಮಣಿಪಾಲದಲ್ಲಿ ನೈಟ್ ಲೈಫ್ ಎಂಜಾಯ್ ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ನಂತರ ಹಾಸ್ಟೆಲ್ ಮತ್ತು ಪಿಜಿಯಲ್ಲಿ ಬಂಧನದಲ್ಲಿದ್ದರು.

    ಇದೀಗ ಸ್ವಾತಂತ್ರ್ಯ ಸಿಕ್ಕವರಂತೆ ಮುಗಿಬಿದ್ದು ಮದ್ಯ ಖರೀದಿ ಮಾಡಿದ್ದಾರೆ. ಊರಿಗೆ ಹೋಗಲಾಗದೆ ಇಲ್ಲೇ ಸಿಕ್ಕಿಬಿದ್ದಿರುವ ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು, ಪ್ರತಿದಿನ ಪಾನ-ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ನಂತರ ಇಷ್ಟು ದಿನ ವಿದ್ಯಾರ್ಥಿಗಳಿಗೆ ಎಣ್ಣೆ ಸಿಗದೆ ಸಾಕಷ್ಟು ಸಮಸ್ಯೆಯಾಗಿತ್ತು. ಈಗ ಮದ್ಯದಂಗಡಿಗಳು ಓಪನ್ ಆದ ಕಾರಣ ಬೆಳ್ಳಂಬೆಳಗ್ಗೆ ಸಾರ್ವಜನಿಕವಾಗಿ ಸಾಲಿನಲ್ಲಿ ನಿಂತು ವಿದ್ಯಾರ್ಥಿಗಳು ಮದ್ಯ ಖರೀದಿ ಮಾಡುವಷ್ಟರಲ್ಲಿ ಮಧ್ಯಾಹ್ನ ಆಗಿತ್ತು. ಸಾಲಿನಲ್ಲಿ ಕಂಡುಬಂದ ಓರ್ವ ವಿದೇಶಿ ಮಹಿಳೆ ಕೂಡ ತನ್ನ ಇಷ್ಟದ ಮದ್ಯ ಖರೀದಿಸಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಮಣಿಪಾಲದ ಕೆಲ ಮದ್ಯದಂಗಡಿಗಳಲ್ಲಿ ಸಾಮಾಜಿಕ ಅಂತರವೇ ಇಲ್ಲದಿರುವುದು ಕಂಡು ಬಂತು.

  • ಉಡುಪಿಯಲ್ಲಿ ಹೆಚ್ಚುತ್ತಿದೆ ಮತಾಂತರ ಹಾವಳಿ – ಯುವತಿಯರನ್ನು ಬಳಸಿ ಕೃತ್ಯ

    ಉಡುಪಿಯಲ್ಲಿ ಹೆಚ್ಚುತ್ತಿದೆ ಮತಾಂತರ ಹಾವಳಿ – ಯುವತಿಯರನ್ನು ಬಳಸಿ ಕೃತ್ಯ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತಾಂತರದ ಹಾವಳಿ ಹೆಚ್ಚಾಗಿದ್ದು, ಕಳೆದ ತಿಂಗಳಿಂದೀಚೆಗೆ ಉಡುಪಿ, ಕಾಪು, ಕಾರ್ಕಳ ತಾಲೂಕಿನಲ್ಲಿ ಮತಾಂತರ ಮಾಡುವ ಸದಸ್ಯರಿಗೂ ಹಿಂದು ಸಂಘಟನೆಯ ಸದಸ್ಯರ ನಡುವೆ ತಿಕ್ಕಾಟ ಜೋರಾಗಿದೆ.

    ಗ್ರಾಮೀಣ ಪ್ರದೇಶದ ಕುಟುಂಬಗಳೇ ಇವರ ಟಾರ್ಗೆಟ್ ಆಗಿದ್ದು, ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಇಬ್ಬರು ಯುವತಿಯರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳದ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.

    ಆರ್ಥಿಕವಾಗಿ ಹಿಂದುಳಿದ ಬಡವರ್ಗಗಳನ್ನು ಟಾರ್ಗೆಟ್ ಮಾಡಿಕೊಂಡು ಇಬ್ಬರು ಯುವತಿಯರು ಆಮಿಷಗಳನ್ನು ಒಡ್ಡಿ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸುತ್ತಿದ್ದರು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರಿದ್ದಾರೆ. ವಿಷಯ ತಿಳಿದ ಹಿಂದೂ ಸಂಘಟನೆಯ ಸದಸ್ಯರು ಇಬ್ಬರು ಮಹಿಳೆಯರನ್ನು ತರಾಟೆಗೆ ತೆದುಕೊಂಡಿದ್ದು, ಈ ವೇಳೆ ಅವರ ಬಳಿ ಮತಾಂತರಕ್ಕೆ ಬಳಸುವ ಪ್ರಚೋದನಕಾರಿ ಕರಪತ್ರಗಳು ಪತ್ತೆಯಾಗಿವೆ.

    ಹಿಂದೂ ಸಂಘಟನೆಯ ಸದಸ್ಯರನ್ನು ಮತಾಂತರ ಮಾಡಿಸಿ, ನಮ್ಮೆಲ್ಲ ಸಾಲ ತೀರಿಸಿ, ತಲಾ ಮೂರು ಲಕ್ಷ ರೂ. ಕೊಡಿ ಎಂದು ಮಹಿಳೆಯರನ್ನು ಹಿಂದೂ ಸಂಘಟನೆಯ ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಯಾಗದ ಹಲವು ಯುವಕರಿದ್ದಾರೆ ಅವರಿಗೆ ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಪರಸ್ಪರ ವಾಗ್ದಾಳಿ ನಡೆದಿದೆ. ಇಷ್ಟಾಗುತ್ತಿದ್ದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂತಹ ಪ್ರಕರಣಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಕಳೆದ ಒಂದೆರಡು ತಿಂಗಳಿಂದ ಮತಾಂತರ ಪ್ರಕ್ರಿಯೆ ಜಾಸ್ತಿಯಾಗಿದೆ ಎಂದು ಕಾರ್ಕಳದ ಭಜರಂಗದಳದ ಕಾರ್ಯಕರ್ತರು ದೂರಿದ್ದಾರೆ.

  • ಲವ್ ಜಿಹಾದ್ ಹೆಸರಲ್ಲಿ 46 ಯುವತಿಯರ ಮಾರಾಟ-ವೈರಲ್ ಫೋಟೋ ಸತ್ಯ

    ಲವ್ ಜಿಹಾದ್ ಹೆಸರಲ್ಲಿ 46 ಯುವತಿಯರ ಮಾರಾಟ-ವೈರಲ್ ಫೋಟೋ ಸತ್ಯ

    ಬೆಂಗಳೂರು: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಫೋಟೋ ವೈರಲ್ ಆಗುತ್ತಿದೆ. ಈ ಎಲ್ಲ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗಿದ್ದು, ಸದ್ಯ ಪೊಲೀಸರು ಎಲ್ಲರನ್ನು ರಕ್ಷಣೆ ಮಾಡಿದ್ದಾರೆ ಎಂಬ ಬರಹಗಳೊಂದಿಗೆ ಫೋಟೋ ಹರಿದಾಡುತ್ತಿದೆ.

    ಪುಷ್ಪೇಂದ್ರ ಕುಲಶ್ರೇಷ್ಠ ಎಂಬ ವ್ಯಕ್ತಿ ತಮ್ಮ ಟ್ವಿಟ್ಟರ್ ನಲ್ಲಿ ಯುವತಿಯರ ಫೋಟೋ ಹಂಚಿಕೊಂಡಿದ್ದು, 2 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಮತ್ತು 3.7 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಕಳೆದ 7 ತಿಂಗಳಿನಿಂದ ಕಾಣೆಯಾಗಿದ್ದ 46 ಯುವತಿಯರನ್ನು ಬೇರೆ ಬೇರೆ ಸ್ಥಳಗಳಲ್ಲಿ ಛತ್ತೀಸಗಢ ರಾಜ್ಯದ ಕವಾರ್ದಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ಯುವತಿಯರು ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗಿದ್ದರು. ಇವರನ್ನು ಜಿಹಾದ್ ಹೆಸರಿನಲ್ಲಿ ಮಾರಾಟ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ವೈರಲ್ ಫೋಟೋ ಸತ್ಯ:
    ಒಂದು ವರ್ಷದ ಹಿಂದೆ ಛತ್ತೀಸಗಢ ಪೊಲೀಸರು ಮಸಾಜ್ ಪಾರ್ಲರ್ ಹೆಸರಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ 10 ಯುವತಿಯರನ್ನು ಬಂಧಿಸಿದ್ದರು. ಅಂದು ತೆಗೆದ ಫೋಟೋವನ್ನು ಇಂದು ಬೇರೆ ಶೀರ್ಷಿಕೆ ನೀಡಿ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗುತ್ತಿದೆ.

    ಆನ್‍ಲೈನ್ ”ಸೆಕ್ಸ್ ರಾಕೇಟ್- ವಾಟ್ಸಪ್ ಮೂಲಕ ಮಾಂಸ ದಂಧೆ” ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಈ ಸುದ್ದಿಯಲ್ಲಿನ ಫೋಟೋ ಬಳಸಿಕೊಂಡು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಛತ್ತೀಸಗಢದ ರಾಯ್ಪುರನ ರಾಜೇಂದ್ರ ನಗರದಲ್ಲಿ ಸೆಕ್ಸ್ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿ, ಸಿಕ್ಕಿಂ ಮೂಲದ 10 ಯುವತಿಯರನ್ನು ಬಂಧಿಸಿದ್ದರು.

  • ಮದ್ಯದ ಅಮಲಿನಲ್ಲಿ ಯುವತಿಯರಿಂದ ಆಟೋ ಚಾಲಕನಿಗೆ ಕಪಾಳ ಮೋಕ್ಷ

    ಮದ್ಯದ ಅಮಲಿನಲ್ಲಿ ಯುವತಿಯರಿಂದ ಆಟೋ ಚಾಲಕನಿಗೆ ಕಪಾಳ ಮೋಕ್ಷ

    ಬೆಂಗಳೂರು: ಮೂರು ಜನ ಯುವತಿಯರು ಮದ್ಯದ ಅಮಲಿನಲ್ಲಿ ಆಟೋ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

    ಸುರೇಂದ್ರ ಬಾಬು ಯುವತಿಯರಿಂದ ಕಾಪಾಳಮೋಕ್ಷಕ್ಕೆ ಒಳಗಾದ ಆಟೋ ಚಾಲಕ. ಶಿವಾನಂದ ಸರ್ಕಲ್ ಬಳಿ ಶುಕ್ರವಾರ ಘಟನೆ ನಡೆದಿದ್ದು, ಆಟೋ ಚಾಲಕ ಸುರೇಂದ್ರ ಬಾಬು ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಕಂಠಪೂರ್ತಿ ಕುಡಿದಿದ್ದ ಮೂವರು ಅಪರಿಚಿತ ಯುವತಿಯರು ಎಂಜಿ ರೋಡ್‍ನಲ್ಲಿ ಆಟೋ ಹತ್ತಿದ್ದರು. ವಿಜಯನಗರಕ್ಕೆ ತಮ್ಮನ್ನು ಬಿಡುವಂತೆ ತಿಳಿದ್ದರು. ಆದರೆ ಮದ್ಯದ ಗುಂಗಿನಲ್ಲಿದ್ದ ಅವರು ಆಟೋದಲ್ಲಿ ಕಿರುಚಾಡಲು ಆರಂಭಿಸಿದರು. ಇದರಿಂದ ಸ್ವಲ್ಪ ಕೋಪಗೊಂಡು, ಯಾಕೆ ಕೂಗಾಡುತ್ತೀರಾ? ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳಿದ್ದೆ. ಈ ವೇಳೆ ನನ್ನ ಜೊತೆಗೆ ಜಗಳ ಆರಂಭಿಸಿದರು. ಬಳಿಕ ಆಟೋದಿಂದ ಇಳಿದು ಅವಾಚ್ಯ ಪದಗಳಿಂದ ನಿಂದಸಿದರು. ಅಷ್ಟೇ ಅಲ್ಲದೆ ಯುವತಿಯೊಬ್ಬಳು ನನಗೆ ಕಪಾಳ ಮೋಕ್ಷ ಮಾಡಿದ್ದಾಳೆ ಎಂದು ಸುರೇಂದ್ರ ಬಾಬು ದೂರಿದ್ದಾರೆ.

    ಈ ಸಂಬಂಧ ಸುರೇಂದ್ರ ಬಾಬು ಅವರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಯುವತಿಯರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

  • ಹನಿಟ್ರ್ಯಾಪ್ ಮಾಡಿ ಉದ್ಯಮಿಯಿಂದ ಲಕ್ಷ ಲಕ್ಷ ಪೀಕಿದ್ದ ಯುವತಿ ಅರೆಸ್ಟ್

    ಹನಿಟ್ರ್ಯಾಪ್ ಮಾಡಿ ಉದ್ಯಮಿಯಿಂದ ಲಕ್ಷ ಲಕ್ಷ ಪೀಕಿದ್ದ ಯುವತಿ ಅರೆಸ್ಟ್

    ಬೆಂಗಳೂರು: ಶ್ರೀಮಂತ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮೂಲಕ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಯುವತಿಯನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

    ವಿನುತಾ ವಿಜಯಲಕ್ಷ್ಮಿ ಬಂಧಿತ ಆರೋಪಿ. ಪ್ರಕರಣದ ಮತ್ತೊಬ್ಬರು ಆರೋಪಿ ಯತೀಶ್ ಮತ್ತು ಸೀನಾ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಹಾನಿಟ್ರ್ಯಾಪ್ ಹೇಗೆ?
    ಶ್ರೀಮಂತ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಬಳಿಕ ಆರೋಪಿ ವಿನುತಾ ಉದ್ಯಮಿಗಳೊಂದಿಗೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಬಳಿಕ ತಮ್ಮ ಬಳಿ ಫೋಟೋ ಹಾಗೂ ವಿಡಿಯೋ ಇದೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೇ ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋವನ್ನ ಕುಟುಂಬದವರಿಗೆ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.

    ಇದೇ ದಂಧೆ ಮಾಡಿಕೊಂಡಿದ್ದ ಆರೋಪಿಗಳು ಉದ್ಯಮಿಗಳಿಂದ ಲಕ್ಷ ಲಕ್ಷ ರೂ. ಹಣ ಪಡೆಯುತ್ತಿದ್ದರು. ಅಂದಹಾಗೇ ಸದ್ಯ ತಲೆ ಮರೆಸಿಕೊಂಡಿರುವ ಆರೋಪಿ ಯತೀಶ್ ಹಾಗೂ ವಿನುತಾ ಪ್ರೇಮಿಗಳಾಗಿದ್ದು, ಯತೀಶ್ ಆಕೆಯನ್ನ ಮುಂದಿಟ್ಟುಕೊಂಡೆ ಹನಿಟ್ರ್ಯಾಪ್ ಮಾಡುತ್ತಿದ್ದ. ಆರೋಪಿಗಳಿಂದ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕುಪೇಂದ್ರ ಎಂಬವರು ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿನುತಾಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಯತೀಶ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    – ಈ ಜಲಪ್ರಳಯದಲ್ಲಿ ಬದುಕಿ ಬಂದಿರುವುದೇ ಹೆಚ್ಚು

    ಮಡಿಕೇರಿ: ಕೊಡಗಿನ 2 ಮನೆಗಳಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಬೇಕಿತ್ತು. ಆದರೆ ಜಲ ಪ್ರವಾಹದ ಎಫೆಕ್ಟ್ ನಿಂದಾಗಿ ಆ ಮನೆಯವರೆಲ್ಲ ಇದೀಗ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.

    ಮಕ್ಕಂದೂರು ಗ್ರಾಮದ ಇಬ್ಬರು ಯುವತಿಯರ ಮದುವೆ ಆಗಸ್ಟ್ 26 ಹಾಗೂ ಸೆಪ್ಟೆಂಬರ್ 12 ಕ್ಕೆ ನಿಗದಿಯಾಗಿತ್ತು. ಮಂಜುಳಾ ಮದುವೆ ಇದೇ 26ಕ್ಕೆ ಕೇರಳದ ಹುಡುಗನ ನಿಶ್ಚಯವಾಗಿತ್ತು. ಮಕ್ಕಂದೂರಿನ ಕಲ್ಯಾಣ ಮಂಟಪದಲ್ಲಿ ಬುಕ್ ಆಗಿತ್ತು. ಮದುವೆ ಸಂಭ್ರಮಕ್ಕೆ ಚಿನ್ನಾಭರಣ, ಬಟ್ಟೆಗಳನ್ನು ಖರೀದಿಸಲಾಗಿತ್ತು.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಂಜುಳ, ಮದುವೆಗಾಗಿ ಎಲ್ಲ ಸಿದ್ಧತೆಗಳು ನಡೆದಿತ್ತು. ಜಲಪ್ರಳಯದಿಂದ ಅವುಗಳೆಲ್ಲವೂ ಇದೆಯೇ ಅಥವಾ ನಾಶವಾಗಿದೆಯೇ ಎನ್ನುವುದು ಗೊತ್ತಿಲ್ಲ. ನಾವು ಬದುಕಿ ಬಂದಿರುವುದೇ ಹೆಚ್ಚು ಎಂದು ಕಣ್ಣೀರು ಹಾಕಿದರು.

    ಇದೇ ರೀತಿ ಸೆಪ್ಟೆಂಬರ್ 12ಕ್ಕೆ ಕೇರಳ ಯುವಕನ ಜೊತೆ ಮದುವೆ ರಂಜಿತಾ ಎಂಬವರ ಮದುವೆ ನಿಗದಿಯಾಗಿದೆ. ಮದುವೆ ಬೇಕಾದ ತಯಾರಿಗಳೆಲ್ಲವೂ ನಡೆದಿರುವ ಕಾರಣ ವರನ ಕಡೆಯವರು ಯಾವುದೇ ಅಭ್ಯಂತರವಿಲ್ಲ. ಸರಳವಾಗಿ ಮದುವೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ನಿಗದಿಯಾಗಿದ್ದ ದಿನಾಂಕದಂದೇ ದೇವಾಲಯದಲ್ಲಿ ಸರಳವಾಗಿ ಇಬ್ಬರ ಮದುವೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಿನಲ್ಲಿದ್ದಾರೆ ಹೈ-ಫೈ ಭಿಕ್ಷುಕಿಯರು

    ಮಂಗ್ಳೂರಿನಲ್ಲಿದ್ದಾರೆ ಹೈ-ಫೈ ಭಿಕ್ಷುಕಿಯರು

    ಮಂಗಳೂರು: ಅತ್ತ ದುಡಿಯಲೂ ಆಗದೆ, ತಿನ್ನೋಕೂ ಗತಿಯಿಲ್ಲದವರುವ ಕೊನೆಗೆ ಭಿಕ್ಷೆಗೆ ಇಳಿಯುತ್ತಾರೆ. ಆದರೆ ನಗರದಲ್ಲೊಂದು ಯುವತಿಯರ ತಂಡ ಹೈ- ಫೈ ಆಗಿದ್ದುಕೊಂಡು ಭಿಕ್ಷಾಟನೆಗಿಳಿದಿದೆ.

    ನಗರದ ಹಲವು ಕಡೆ ಯುವತಿಯರು ಹೈ-ಫೈ ರೀತಿಯಲ್ಲಿ ಪ್ಯಾಂಟ್, ಶರ್ಟ್ ಹಾಕಿಕೊಂಡು ಹಿಂದಿ ಮಾತನಾಡುತ್ತಾ ಭಿಕ್ಷೆ ಬೇಡುತ್ತಿದ್ದಾರೆ. ಸಿಗ್ನಲ್ ಗಳ ಬಳಿ ವಾಹನ ಸವಾರರಿಗೆ ನಾವು ರಾಜಸ್ಥಾನದ ರಾಣಿಪುರ್ ಜಿಲ್ಲೆಯವರು, ಪ್ರವಾಹದಿಂದಾಗಿ ಎಲ್ಲವನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಗತಿಯಿಲ್ಲದೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪ್ರವಾಹ ಪರಿಸ್ಥಿತಿಯ ಬಗ್ಗೆ ಬರೆದುಕೊಂಡಿರುವ ಪತ್ರವನ್ನು ಮುಂದಿಟ್ಟು ಭಿಕ್ಷೆ ಬೇಡುತ್ತಿದ್ದಾರೆ.

    ಯುವತಿಯರನ್ನು ನೋಡಿದರೆ ಯಾವ ಉದ್ಯೋಗಿಗಳಿಗೂ ಕಮ್ಮಿಯಿಲ್ಲದಂತಿದ್ದು, ರಸ್ತೆಯಲ್ಲಿ ಬೈಕಿನಲ್ಲಿ ಬರುವ ಯುವಕರನ್ನು ಯಾಮಾರಿಸಿಕೊಂಡು ನೂರು, ಇನ್ನೂರು ರೂಪಾಯಿಗಳನ್ನು ಕೀಳುತ್ತಿದ್ದಾರೆ. ಇವರ ಈ ವರ್ತನೆಯನ್ನು ಗಮನಿಸಿದ ಕೆಲವು ಯುವಕರು ಆಕ್ಷೇಪಿಸಿ, ಕದ್ರಿ ಪೊಲೀಸ್ ಠಾಣೆಯ ಗಮನಕ್ಕೆ ತಂದಿದ್ದರು.

    ಘಟನೆ ಕುರಿತು ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಈ ರೀತಿ ಇನ್ನೊಮ್ಮೆ ಮಾಡದ ಹಾಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಹಣಗಳಿಸಲು ಯುವತಿಯು ಹೈ-ಫೈ ಭಿಕ್ಷಾಟನೆಗಿಳಿದಿರುವುದು ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೆಲಸವಿಲ್ಲದಾಗ ಬಡ ಹುಡುಗಿಯ ಪ್ರೀತಿ ಬೇಕಿತ್ತು- ಸರ್ಕಾರಿ ಕೆಲ್ಸ ಸಿಕ್ಕಿದ್ಮೇಲೆ ಬೇರೆ ಹುಡ್ಗಿಯನ್ನ ಮದ್ವೆಯಾಗಿ ಪರಾರಿ

    ಕೆಲಸವಿಲ್ಲದಾಗ ಬಡ ಹುಡುಗಿಯ ಪ್ರೀತಿ ಬೇಕಿತ್ತು- ಸರ್ಕಾರಿ ಕೆಲ್ಸ ಸಿಕ್ಕಿದ್ಮೇಲೆ ಬೇರೆ ಹುಡ್ಗಿಯನ್ನ ಮದ್ವೆಯಾಗಿ ಪರಾರಿ

    ತುಮಕೂರು: ಈ ಭೂಪನಿಗೆ ಸರ್ಕಾರಿ ನೌಕರಿ ಸಿಗೋವರೆಗೂ ಬಡ ಹೆಣ್ಣುಮಗಳ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿತ್ತು. ಸಿನಿಮಾ, ಪಾರ್ಕ್ ಎಂದು ಸುತ್ತಿ ಆ ಹುಡುಗಿ ಜೊತೆ ರಸ ನಿಮಿಷಗಳನ್ನು ಕಳೆದಿದ್ದ. ಆದ್ರೆ ಸರ್ಕಾರಿ ನೌಕರಿ ಸಿಕ್ಕಿದ್ದೇ ತಡ 9 ವರ್ಷ ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟು ಶ್ರೀಮಂತ ಹುಡುಗಿ ಜೊತೆ ಪರಾರಿಯಾಗಿದ್ದಾನೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪಂಚಾಯ್ತಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥನ ಮೇಲೆ ಈ ಆರೋಪ ಕೇಳಿಬಂದಿದೆ. ಅದೇ ಜಿಲ್ಲೆಯ ಅರೆಗುಜ್ಜನಳ್ಳಿ ಗ್ರಾಮದ ಯುವತಿ ಗೌರಮ್ಮಳನ್ನು 9 ವರ್ಷಗಳ ಕಾಲ ಪ್ರೀತಿಸಿ, ಲೈಂಗಿಕವಾಗಿ ಬಳಸಿಕೊಂಡು ಈಗ ಬೇರೆ ಹುಡುಗಿ ಜೊತೆ ಮದುವೆಯಾಗಿದ್ದಾನೆ.

    ಮೂರು ವರ್ಷದ ಹಿಂದೆ ಮಂಜುನಾಥನಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಅಲ್ಲಿಂದ ಗೌರಮ್ಮಳ ಜೊತೆ ನಿಧಾನವಾಗಿ ದೂರವಾಗುತ್ತಾ ಬಂದಿದ್ದಾನೆ. ಇದನ್ನು ಗಮನಿಸಿದ ಯುವತಿ ಹಾಗೂ ಗೌರಮ್ಮ ಪೋಷಕರು ಪೊಲೀಸರಿಗೆ ದೂರು ಕೊಟ್ಟು ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಮದುವೆ ಮಾಡಿದ್ದರು.

    ಈ ಮದುವೆ ಒಪ್ಪದ ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದ. ನಂತರ ಫೆಬ್ರವರಿ 24 ಹಾಗೂ 25ರಂದು ಮದುವೆ ಡೇಟ್ ತಾನೇ ಫಿಕ್ಸ್ ಮಾಡಿದ್ದ.

    ಕಳೆದ ಭಾನುವಾರ ಕಲ್ಯಾಣ ಮಂಟಪ ಬುಕ್ ಮಾಡುವ ಸಲುವಾಗಿ ಯುವತಿ ಪೋಷಕರು ಮಂಜುನಾಥ್ ಮನೆಗೆ ಹೋದಾಗ ಆತ ಮನೆಗೆ ಬೀಗ ಹಾಕಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅಕ್ಕ ಪಕ್ಕ ಮನೆಯವರನ್ನು ವಿಚಾರಿಸಿದಾಗ ಮಂಜುನಾಥ್ ಬೇರೆ ಹುಡುಗಿ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

    ಮಂಜುನಾಥನ ಮೋಸದಿಂದ ಪ್ರೀತಿಸಿದ ಯುವತಿ ಗೌರಮ್ಮ ನೊಂದಿದ್ದಾರೆ. ಮಂಜುನಾಥ್ ಇಲ್ಲದೆ ನಾನು ಬದುಕಲ್ಲ ಎಂದು ಹೇಳುತ್ತಿದ್ದಾರೆ.

  • ಮ್ಯಾಟ್ರಿಮೋನಿಯಲ್ಲಿ ಪರಿಚಯ- ಸಂಬಳವಾಗಿಲ್ಲವೆಂದು ಯುವತಿಯಿಂದ ಹಣ ಪಡೆದು ಖಾತೆಯನ್ನೇ ಡಿಲೀಟ್ ಮಾಡ್ದ

    ಮ್ಯಾಟ್ರಿಮೋನಿಯಲ್ಲಿ ಪರಿಚಯ- ಸಂಬಳವಾಗಿಲ್ಲವೆಂದು ಯುವತಿಯಿಂದ ಹಣ ಪಡೆದು ಖಾತೆಯನ್ನೇ ಡಿಲೀಟ್ ಮಾಡ್ದ

    ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಯುವತಿಗೆ ವಂಚನೆ ಮಾಡಿರುವ ಘಟನೆ ನಾಗರಬಾವಿಯಲ್ಲಿ ನಡೆದಿದೆ.

    ನಾಗರಬಾವಿಯ ನಿವಾಸಿಯಾದ ಆರೋಪಿ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿ ವಿಜಯ್ ಶ್ರೀವಾಸ್ತವ್ ಹೆಸರಿನಲ್ಲಿ ಖಾತೆ ತೆರೆದಿದ್ದು, ದಕ್ಷಿಣ ಆಫ್ರಿಕಾದಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ 26 ವರ್ಷದ ಯುವತಿಗೆ ವಂಚನೆ ಮಾಡಿ 9 ಲಕ್ಷ ಹಣ ಪಡೆದಿದ್ದಾನೆ.

    2000 ಇಸವಿಯಲ್ಲಿ ದಿವ್ಯಾ ಎಂಬಾಕೆ ಜೊತೆ ಮದುವೆಯಾಗಿತ್ತು. ನಮಗೆ ಒಬ್ಬ ಗಂಡು ಮಗನಿದ್ದಾನೆ. ಪತ್ನಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದಳು ಹಾಗೂ 2010ರಲ್ಲಿ ಮೃತಪಟ್ಟಿದ್ದಾಳೆ. ಮಗುವಿನ ಭವಿಷ್ಯದ ದೃಷ್ಟಿಯಿಂದ 2ನೇ ಮದುವೆಯಾಗಲು ನಿರ್ಧಾರ ಮಾಡಿದ್ದೇನೆ. ಹೀಗಾಗಿ ವಧುವಿನ ಅನ್ವೇಷಣೆಯಲ್ಲಿದ್ದೇನೆ ಎಂದು ಆರೋಪಿ ಬರೆದುಕೊಂಡಿದ್ದ.

    ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬರ ಪರಿಚಯವಾಗಿದ್ದು, ಬಳಿಕ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಸಂಭಾಷಣೆ ನಡೆಸಲು ಆರಂಭಿಸಿದ್ದರು. ಎರಡು ತಿಂಗಳ ಮಾತುಕತೆ ನಂತರ ಯುವತಿ ಮದುವೆಯಾಗಲು ಒಪ್ಪಿಕೊಂಡಿದ್ದರು.

    ಕಂಪೆನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಆರು ತಿಂಗಳಿನಿಂದ ವೇತನ ನೀಡಿಲ್ಲ. ಹೀಗಾಗಿ ಜೀವನ ನಡೆಸುವುದಕ್ಕೂ ಕಷ್ಟವಾಗುತ್ತಿದೆ. ತುರ್ತಾಗಿ ಹಣ ಬೇಕಿದೆ. ಭಾರತಕ್ಕೆ ಬಂದ ನಂತರ ಹಿಂದಿರುಗಿಸುತ್ತೇನೆ ಎಂದು ಆರೋಪಿ ಸುಳ್ಳು ಹೇಳಿದ್ದ. ಮಾತನ್ನು ನಂಬಿದ್ದ ಯುವತಿ ಆತನ ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ಐದು ಬಾರಿ 7.70 ಲಕ್ಷ ಹಣ ಹಾಕಿದ್ದರು. ಸುಮಿತ್ ರಾಯ್ ಎಂಬಾತನ ಬ್ಯಾಂಕ್ ಖಾತೆಗೆ ಹಣ ಹಾಕಿದ್ದರು. ಆರೋಪಿ ಹಣ ಸಿಕ್ಕ ನಂತರ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿದ್ದ ಖಾತೆಯನ್ನ ತೆಗೆದು ಹಾಕಿದ್ದಾನೆ. ಹಣ ಜಮೆ ಮಾಡಿ ಎರಡು ತಿಂಗಳು ಕಳೆದರೂ ಅವನ ಸುಳಿವಿರಲಿಲ್ಲ. ಆ ನಂತರ ಆರೋಪಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.

    ಯುವತಿ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.