Tag: young women

  • ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿಯರಿಗೆ ಬಂಪರ್‌ ಬಹುಮಾನ!

    ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿಯರಿಗೆ ಬಂಪರ್‌ ಬಹುಮಾನ!

    ಮಾಸ್ಕೋ: ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸಲು ಚೀನಾ, ಜಪಾನ್‌ ಮಾದರಿಯಲ್ಲೇ ರಷ್ಯಾ (Russia) ಸಹ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಈಗಾಗಲೇ ‌ಜನಸಂಖ್ಯಾ ಹೆಚ್ಚಳಕ್ಕೆ ʻಸೆಕ್ಸ್‌ ಸಚಿವಾಲಯʼ ಸ್ಥಾಪಿಸಲು ಮುಂದಾಗಿರುವ ಪುಟಿನ್‌ ನೇತೃತ್ವದ ಸರ್ಕಾರ (Russian Government) ಈಗ ಹೊಸದೊಂದು ಆಫರ್‌ ಘೋಷಣೆ ಮಾಡಿದೆ.

    ಹೌದು.. ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ (Female Students) 1 ಲಕ್ಷ ರುಬೆಲ್ಸ್‌ (ಸುಮಾರು 81,000 ರೂ.) ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಪರಿಚಯಿಸಿದೆ. ಸದ್ಯಕ್ಕೆ ಇಡೀ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲಾಗಿಲ್ಲ, ರಷ್ಯಾದ ಕರೇಲಿಯಾ ಎಂಬ ಪ್ರದೇಶದಲ್ಲಿ ಮಾತ್ರ ಜಾರಿಗೆ ತರಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಥಳೀಯ ವಿಶ್ವವಿದ್ಯಾಲಯ ಅಥವಾ ಖಾಸಗಿ ಕಾಲೇಜುಗಳಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಗಳಾಗಿರಬೇಕು. 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಹಾಗೂ ಕರೇಲಿಯಾ ಪ್ರದೇಶದ ನಿವಾಸಿಗಳೇ ಆಗಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

    ಕಳೆದ ವರ್ಷ ರಷ್ಯಾದಲ್ಲಿ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದೆ. 2024ರ ಮೊದಲಾರ್ಧದಲ್ಲಿ 5,99,600 ಮಕ್ಕಳ ಜನನವಾಗಿದ್ದು, 2023ರ ಅವಧಿಗಿಂತಲೂ 16,000 ಮಕ್ಕಳ ಜನನ ಕಡಿಮೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

    ಕೆಲ ದಿನಗಳ ಹಿಂದೆಯಷ್ಟೇ ಭಾರತದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಜನರಲ್ಲಿ ಮನವಿ ಮಾಡಿದ್ದರು, 2 ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡುವಂತಹ ಹೊಸ ಕಾನೂನು ರೂಪಿಸುವುದಾಗಿಯೂ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌, ನಮ್ಮ ಪೂರ್ವಜರು 16 ಬಗೆಯ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುವ ಬದಲಾಗಿ ʻ16 ಮಕ್ಕಳನ್ನು ಹೊಂದುವಂತೆ ಆಶೀರ್ವದಿಸಬೇಕಾದ ಅನಿವಾರ್ಯತೆ ಇದೆʼ ಎಂದು ಜನಸಂಖ್ಯೆ ಹೆಚ್ಚಳದ ಬಗ್ಗೆ ಹೇಳಿದ್ದರು.

    ಇನ್ನೂ ಜನಸಂಖ್ಯೆ ನಿಯಂತ್ರಿಸಲು ಚೀನಾ, 80ರ ದಶಕದಲ್ಲಿ ‘ಒಂದು ಮಗುವಿನ ನೀತಿ’ಯನ್ನು ಜಾರಿಗೆ ತಂದಿತ್ತು. ಆದ್ರೆ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿ, ʻಎರಡು ಮಗು’ ಮತ್ತು ನಂತರ ‘ಮೂರು ಮಗು’ ನೀತಿಯನ್ನು ಜಾರಿಗೆ ತರಲಾಯಿತು. ಇದೀಗ ಹೆಚ್ಚುಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿರುವ ಚೀನಾ, ಹೆಚ್ಚು ಮದುವೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಯುವಕ-ಯುವತಿಯರು ಪ್ರೀತಿಯಲ್ಲಿ ತೊಡಗುವಂತೆ ಮಾಡಲು ಕಾಲೇಜುಗಳಲ್ಲಿ ವಿಶೇಷ ಕೋರ್ಸ್‌ ಸಹ ಆರಂಭಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

  • ಬೆತ್ತಲೆ ಮೆರವಣಿಗೆ ದಿನವೇ ಮತ್ತಿಬ್ಬರು ಯುವತಿಯರ ಮೇಲೆ ರೇಪ್, ಮರ್ಡರ್ ಆರೋಪ – ಮಣಿಪುರ ಧಗ ಧಗ

    ಬೆತ್ತಲೆ ಮೆರವಣಿಗೆ ದಿನವೇ ಮತ್ತಿಬ್ಬರು ಯುವತಿಯರ ಮೇಲೆ ರೇಪ್, ಮರ್ಡರ್ ಆರೋಪ – ಮಣಿಪುರ ಧಗ ಧಗ

    ಇಂಫಾಲ್: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ (Manipur Women Paraded) ಪ್ರಕರಣದಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಅಮಾನವೀಯ ಘಟನೆ ನಡೆದ ದಿನವೇ ಮತ್ತಿಬ್ಬರು ಯುವತಿಯರ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಮಕ್ಕಳು ಪತ್ತೆಯಾಗದಿರುವ ಬಗ್ಗೆ ದೂರು ನೀಡಿರುವ ಪೋಷಕರು, ಅತ್ಯಾಚಾರ ಮತ್ತು ಕೊಲೆ ಆರೋಪ ಮಾಡಿದ್ದಾರೆ. ಇದು ಮಣಿಪುರದ (Manipur) ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.

    ರಾಜ್ಯದ ಕಾಂಗ್‌ಪೋಕ್ಪಿ ಜಿಲ್ಲೆಯ ಇಬ್ಬರು ಬುಡಕಟ್ಟು ಯುವತಿಯರ (Young Women) ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಯುವತಿಯರು 21 ಮತ್ತು 24 ವರ್ಷ ವಯಸ್ಸಿನವರಾಗಿದ್ದು, ಕಾರ್ ವಾಶ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೇ 4 ರಂದು ಹತ್ಯೆಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ- ಜಾಮೀನು ನೀಡಿದ್ದಕ್ಕೆ ಹೈಕೋರ್ಟ್ ಕಿಡಿ

    ಅಂದು ಕಾರ್ ವಾಶ್ ಗ್ಯಾರೆಜ್‌ನಲ್ಲಿ ಯುವತಿಯರು ಕೆಲಸ ಮಾಡುತ್ತಿದ್ದ ವೇಳೆ ಪುರುಷರ ದೊಡ್ಡ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ನಂತರ ಗ್ಯಾರೇಜ್ ಕೊಠಡಿಯೊಳಗೆ ಎಳೆದೊಯ್ದು ಬಾಯಿಗೆ ಬಟ್ಟೆ ತುರಕಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ನಂತರ ಇಬ್ಬರನ್ನೂ ಹತ್ಯೆಗೈದು ಸಮೀಪದ ಕಾರ್ಖಾನೆಯೊಂದರ ಪಕ್ಕದಲ್ಲಿ ಶವಗಳನ್ನ ಎಸೆದುಹೋಗಿದ್ದಾರೆ ಎಂದು ವ್ಯಕ್ತಿಯೊಬ್ಬ ದೂರಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ತಲೆ ಕತ್ತರಿಸಿ ಬಿದಿರಿನ ಬೇಲಿಗೆ ನೇತುಹಾಕಿದ್ದ ದುಷ್ಕರ್ಮಿಗಳು – ಮಣಿಪುರದ ಮತ್ತೊಂದು ವೀಡಿಯೋ ವೈರಲ್‌

    ಆರಂಭದಲ್ಲಿ ಯುವತಿಯರ ಗುರುತು ಪತ್ತೆ ಮಾಡುವುದು ಕಷ್ಟವಾಗಿತ್ತು. ಕೊನೆಗೆ ಸಂತ್ರಸ್ತರ ತಾಯಿಯೊಬ್ಬರು ಮೇ 16ರಂದು ಸಾಯಿಕುಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿತ್ತು. ಆಕೆ ತನ್ನ ಮಗಳೊಂದಿಗೆ ಮತ್ತೊಬ್ಬಳು ಯುವತಿಯನ್ನ ಅತ್ಯಾಚಾರಗೈದು ಕ್ರೂರವಾಗಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ನಂತರ ಎಫ್‌ಐಆರ್ ಅನ್ನು ಇಂಫಾಲ್ ಪೂರ್ವ ಜಿಲ್ಲೆಯ ಪೊರೊಂಪತ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

    ಸದ್ಯ ಸಂತ್ರಸ್ತರ ಮೃತದೇಹಗಳು ಪತ್ತೆಯಾಗಿಲ್ಲ. ಆದ್ರೆ ಸುಮಾರು 100 ರಿಂದ 200 ಪುರುಷರ ಗುಂಪು ಯುವತಿಯರ ಮೇಲೆ ದಾಳಿ ನಡೆಸಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಬೆಳಕಿಗೆ ಬರುತ್ತಿದ್ದಂತೆ ಮಣಿಪುರದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. 

    ಸುಮಾರು ಎರಡೂವರೆ ತಿಂಗಳಿನಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಶಾಂತಿ ಎಂಬುದಿಲ್ಲಿ ಮರೀಚಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಮನುಕುಲ ತಲೆತಗ್ಗಿಸುವಂತಹ ವೀಡಿಯೋ ಒಂದು ಹೊರಬಂದಿತ್ತು. ಆದಿವಾಸಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲೆ ಮಾಡಿದ ರಾಕ್ಷಸಿ ಗುಂಪೊಂದು, ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿತ್ತು. ಈ ದೃಶ್ಯಾವಳಿ ಇದು ಇಡೀ ದೇಶದ ಮನಕಲಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು

    ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು

    ಬೆಂಗಳೂರು: ದೂರು ಕೊಡಲು ಬಂದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಬೆಂಗಳೂರಿನ (Bengaluru) ಕೊಡಿಗೆಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ.

    ಕೊಡಿಗೆಹಳ್ಳಿ ಠಾಣೆ ರಾಜಣ್ಣ ಅಮಾನತುಗೊಂಡು ಇನ್‌ಸ್ಪೆಕ್ಟರ್‌. ಯುವತಿಯೊಬ್ಬರು ಪೊಲೀಸ್‌ ಠಾಣೆಗೆ ದೂರು ಕೊಡಲು ಬಂದಿದ್ದರು. ಈ ವೇಳೆ ಇನ್‌ಸ್ಪೆಕ್ಟರ್‌ ಆಕೆಯ ನಂಬರ್‌ ಪಡೆದು ನಂತರ ಅಸಭ್ಯವಾಗಿ ಚಾಟಿಂಗ್‌ ಮಾಡಿದ್ದ. ಇದನ್ನೂ ಓದಿ: ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು

    ಒಮ್ಮೆ ಯುವತಿಯನ್ನು ಠಾಣೆಗೆ ಕರೆಸಿ ಆಕೆಯ ಕೈಗೆ ಡ್ರೈಫ್ರೂಟ್ಸ್‌ ಇದ್ದ ಬಾಕ್ಸ್‌ ಕೊಟ್ಟು ರೂಮಿಗೆ ಕರೆದಿದ್ದ. ಇದರಿಂದ ಬೇಸರಗೊಂಡ ಯುವತಿ ಸಾಕ್ಷಿ ಸಮೇತ ಡಿಸಿಪಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಪ್ರಾಥಮಿಕ ತನಿಖೆಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಆದೇಶಿಸಿದ್ದರು. ಯಲಹಂಕ ಎಸಿಪಿಗೆ ತನಿಖೆಗೆ ಸೂಚಿಸಿದ್ದರು. ನಂತರ ಎಸಿಪಿ ವರದಿಯನ್ನ ಪಡೆದು ಪೊಲೀಸ್ ಕಮಿಷನರ್‌ಗೆ ರವಾನಿಸಿದ್ದರು. ಇದನ್ನೂ ಓದಿ: 18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್‌!

    ವರದಿಯನ್ನು ಆಧರಿಸಿ ಇನ್‌ಸ್ಪೆಕ್ಟರ್‌ ರಾಜಣ್ಣನನ್ನು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.

  • ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ

    ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ

    ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಯುವಕನೊಬ್ಬ ಕೈಕೊಟ್ಟಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಸಾಗರ್‌ ಎಂಬಾತ ಯುವತಿಯೊಬ್ಬಳಿಗೆ ವಂಚಿಸಿ ಪರಾರಿಯಾಗಿದ್ದಾನೆ. ಸಂತ್ರಸ್ತೆ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಅದೇ ಲ್ಯಾಬ್‌ನಲ್ಲಿ ಸಾಗರ್‌ ಸಿಸ್ಟಮ್‌ ವರ್ಕ್‌ ಮಾಡಿಕೊಂಡಿದ್ದ. ಈ ವೇಳೆ ಯುವತಿಯನ್ನು ಪ್ರೀತಿ ಹೆಸರಿನಲ್ಲಿ ಪುಸಲಾಯಿಸಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದನ್ನೂ ಓದಿ: ತಾಯಿ, ಇಬ್ಬರು ಮಕ್ಕಳು ಮನೆಯಲ್ಲೇ ಸಜೀವ ದಹನ – ಎಸಿ ಸ್ಫೋಟ ಶಂಕೆ

    ಯುವತಿ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ಕೂಡ ನಡೆಸಿದ್ದ. ಇದರಿಂದಾಗಿ ಯುವತಿ 7 ತಿಂಗಳ ಗರ್ಭಿಣಿಯಾಗಿದ್ದಳು. ವಿಚಾರ ತಿಳಿದು ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನುಂಗಿಸಿದ್ದ. ಪರಿಣಾಮವಾಗಿ ಯುವತಿಗೆ ತೀವ್ರ ರಕ್ತಸ್ರಾವವಾಗಿ 7 ತಿಂಗಳ ಮಗು ಹೊರಬಂದಿತ್ತು. ನಂತರ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿತು.

    ವಿಚಾರ ತಿಳಿದ ಯುವತಿ ಪೋಷಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಯುವತಿ ಪೋಷಕರ ಜೊತೆ ರಾಜಿಗಿಳಿದು ಯುವತಿಗೆ ತಾಳಿ ಕಟ್ಟಿ ಮದುವೆಯಾಗಿದ್ದ. ನಂತರ ರಿಜಿಸ್ಟರ್ ಕಚೇರಿಯಲ್ಲಿ ಅಧಿಕೃತವಾಗಿ ಮದುವೆಯಾಗುವಂತೆ ಯುವತಿ ಕೇಳಿದ್ದಳು. ಈ ವೇಳೆ ಪೋನ್ ಸ್ವಿಚ್ ಆಫ್ ಮಾಡಿ ಆರೋಪಿ ಸಾಗರ್‌ ಎಸ್ಕೇಪ್‌ ಆಗಿದ್ದಾನೆ. ಇದನ್ನೂ ಓದಿ: ಈ ಬಾರಿ ಕಿಚಡಿ ಸರ್ಕಾರ ಬರಲ್ಲ, ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ: ಸುಧಾಕರ್

    ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ ಸಾಗರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಹುಡುಗಿಯರೇ.. ಮದುವೆಗೂ ಮುನ್ನ ಭಾವಿ ಪತಿಗೆ ಈ ಪ್ರಶ್ನೆ ಕೇಳೋದನ್ನ ಮರಿಬೇಡಿ

    ಹುಡುಗಿಯರೇ.. ಮದುವೆಗೂ ಮುನ್ನ ಭಾವಿ ಪತಿಗೆ ಈ ಪ್ರಶ್ನೆ ಕೇಳೋದನ್ನ ಮರಿಬೇಡಿ

    ದಾಂಪತ್ಯ ಜೀವನ ಅನ್ನೋದು ಒಂದು ಸುಂದರವಾದ ಬಂಧ. ಲವ್‌ ಮಾಡುವವರು ಮದುವೆಗೂ ಮುನ್ನ ಒಬ್ಬರನ್ನೊಬ್ಬರು ಅರಿತುಕೊಂಡಿರುತ್ತಾರೆ. ಆದರೆ ಮನೆಯವರ ಮಾತು ಕೇಳುವವರು ಅರೆಂಜ್‌ ಮ್ಯಾರೇಜ್‌ ಆದ ಮೇಲೆ ತನ್ನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ. ಅರೆಂಜ್‌ ಮ್ಯಾರೇಜ್‌ ಆಗಲು ಇಷ್ಟ ಪಡುವ ಹೆಣ್ಣು ಮಕ್ಕಳಿಗೆ ಒಂದಷ್ಟು ಟಿಪ್ಸ್‌ ಇದೆ.

    ಮದುವೆಯಾಗುವ ಮೊದಲು ತಮ್ಮ ಭಾವಿ ಪತಿಯೊಂದಿಗೆ ಹುಡುಗಿಯರು ಈ ವಿಷಯಗಳು ಬಗ್ಗೆ ಚರ್ಚಿಸಲೇಬೇಕು. ಮದುವೆ ನಂತರ, ಎಷ್ಟೋ ಹೆಣ್ಣುಮಕ್ಕಳು ತಮ್ಮ ಜೀವನ ಸಂಗಾತಿಯಾಗಿ ತಪ್ಪು ವ್ಯಕ್ತಿಯನ್ನು ಆರಿಸಿಕೊಂಡಿದ್ದೇವೆ ಎಂದು ಅರಿತುಕೊಳ್ಳುತ್ತಾರೆ. ಹೀಗಾಗಿ ಮದುವೆಗೂ ಮುನ್ನವೇ ಸಂಗಾತಿ ಆಗುವವರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಮುಖ್ಯ. ಮದುವೆಗೂ ಮುನ್ನ ಬಾಳ ಸಂಗಾತಿ ಆಗುವವರೊಂದಿಗೆ ಈ ಪ್ರಶ್ನೆಗಳನ್ನು ಮುಂದಿಟ್ಟು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..

    ಈ ಸಂಬಂಧಕ್ಕೆ ಬದ್ಧರಾಗಲು ನೀವು ಸಿದ್ಧರೇ?
    ದಾಂಪತ್ಯ ಜೀವನ ಅನ್ನೋದು ಸುಲಭದ ಮಾತಲ್ಲ. ನಿಮ್ಮ ಭಾವಿ ಪತಿ ಮದುವೆ ನಂತರ ಸಂಬಂಧವನ್ನು ಉಳಿಸಿಕೊಳ್ಳಲು ಸಮರ್ಥರೇ ಎಂಬುದನ್ನು ಹುಡುಗಿಯರು ತಿಳಿದುಕೊಳ್ಳಬೇಕು. ವಿವಾಹದ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅದನ್ನು ನಿಭಾಯಿಸಬಲ್ಲನೇ? ನನ್ನನ್ನು ಸಂತೋಷವಾಗಿ ಇಡಬಲ್ಲನೇ ಎಂಬುದನ್ನು ಯೋಚಿಸಬೇಕು. ಹೀಗಾಗಿ ಜೀವನದ ಬಗ್ಗೆ ನಿಮ್ಮ ಮುಂದಿನ ನಡೆ ಏನು ಎಂದು ಕೇಳಿ. ಅವರಿಂದ ಸಕಾರಾತ್ಮಕ ಉತ್ತರ ಸಿಕ್ಕರೆ, ಜೀವನದ ಕಡೆಗೆ ಅವರ ವಿಧಾನ ತುಂಬಾ ಸರಳವಾಗಿದೆ ಎಂದು ಅರ್ಥ ಮಾಡಿಕೊಳ್ಳಿ.

    ಕೆಲಸ ಮಾಡಲು ಬಿಡುತ್ತಾರೆಯೇ?
    ಭಾವಿ ಪತಿ ನಿಮ್ಮ ಕೆಲಸದ ಜೀವನದೊಂದಿಗೆ ಹೊಂದಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ವಿವಾಹಕ್ಕೂ ಮುನ್ನವೇ ಕೇಳಿ ಸ್ಪಷ್ಟನೆ ಪಡೆದುಕೊಳ್ಳಿ. ಏಕೆಂದರೆ ಮದುವೆ ನಂತರ ನಿಮ್ಮ ಜೀವನ ಸಂಪೂರ್ಣ ಬದಲಾಗಬಹುದು. ಅಂತಹ ಸನ್ನಿವೇಶದಲ್ಲಿ ಪತಿಯ ಸಪೋರ್ಟ್‌ ಸಿಗದಿದ್ದರೆ ನೀವು ಸಂಬಂಧದಲ್ಲಿ ಕಿರಿಕಿರಿ ಅನುಭವಿಸಬಹುದು. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಮಕ್ಕಳನ್ನು ಇಷ್ಟಪಡ್ತೀರಾ?
    ಸಾಮಾನ್ಯವಾಗಿ ಮದುವೆಯಾದ ನಂತರ ಎಲ್ಲರೂ ಕುಟುಂಬ ಯೋಜನೆ ಬಗ್ಗೆ ಚರ್ಚಿಸುತ್ತಾರೆ. ಮದುವೆಗೂ ಮುನ್ನ ಈ ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಬೇಕೆನಿಸಿದರೆ ಕೇಳಬಹುದು. ನೀವು ಮದುವೆಯಾಗುವ ಹುಡುಗನೊಂದಿಗೆ ಮಕ್ಕಳ ಬಗ್ಗೆ ನೇರವಾಗಿಯೇ ಪ್ರಶ್ನಿಸಬಹುದು. ಮದುವೆಯ ನಂತರ ಕುಟುಂಬ ಯೋಜನೆಯ ಬಗ್ಗೆ ಅವರು ಯಾವಾಗ ಯೋಚಿಸುತ್ತಾರೆ ಎಂಬುದನ್ನು ಕೇಳಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಪ್ರಿಯಕರ – ಮನನೊಂದು ಯುವತಿ ಆತ್ಮಹತ್ಯೆ

    ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಪ್ರಿಯಕರ – ಮನನೊಂದು ಯುವತಿ ಆತ್ಮಹತ್ಯೆ

    ಚಿಕ್ಕೋಡಿ: ಮದುವೆಯಾಗುತ್ತೇನೆಂದು ನಂಬಿಸಿ ಪ್ರಿಯಕರ ಕೈಕೊಟ್ಟ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಂವಶಿ ಗ್ರಾಮದ ಯುವತಿಯೊಬ್ಬಳು ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ತೇಜಸ್ವಿನಿ ಗಂಗಪ್ಪ ಗುಜ್ಜರ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಥಣಿ ಪಟ್ಟಣದ ಆಸೀಫ್ ದೇಸಾಯಿ ಪ್ರೀತಿಸಿ ಕೈಕೊಟ್ಟಿದ್ದಾನೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೂರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದು, ಮಹಿಳೆ ಆತ್ಮಹತ್ಯೆ

    ಆರೋಪಿ ಆಸೀಫ್‌, ತೇಜಸ್ವಿನಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಜ.26ರಂದು ಮದುವೆ ಆಗುವುದಿಲ್ಲ ಎಂದು ಆಶೀಫ್ ನಿರಾಕರಿಸಿದಾಗ ಮನನೊಂದ ತೇಜಸ್ವಿನಿ ಕೀಟನಾಶಕ ಸೇವಿಸಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

    ಮೃತಳ ತಾಯಿ ಶೋಭಾ ಗುಜ್ಜರ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ

    ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ

    ಮುಂಬೈ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪಿಎಚ್‍ಡಿ ವಿದ್ಯಾರ್ಥಿಯೊಬ್ಬ ತನಗೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿ ಹತ್ಯೆಗೈಯ್ಯಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಔರಂಗಾಬಾದ್‍ನಲ್ಲಿ (Aurangabad) ನಡೆದಿದೆ. ಇದೀಗ ಇಬ್ಬರಿಗೂ ಸುಟ್ಟ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಬ್ಬರೂ ಪ್ರಾಣಿಶಾಸ್ತ್ರದ (Zoology) ಪಿಎಚ್‍ಡಿ ವಿದ್ಯಾರ್ಥಿಗಳಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ (Dr Babasaheb Ambedkar Marathwada University) ಅಧ್ಯಯನ ಮಾಡುತ್ತಿದ್ದರು. ಇದನ್ನೂ ಓದಿ: ನೋವಿನಿಂದ ಚೀರಾಡಿದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ – ಅಪರಿಚಿತನ ಸಹಾಯದಿಂದ ರಸ್ತೆಯಲ್ಲೇ ಮಹಿಳೆಗೆ ಹೆರಿಗೆ

    ಹನುಮಾನ್ ತೆಕಡಿಯಲ್ಲಿರುವ ಸರ್ಕಾರಿ ಫೋರೆನ್ಸಿಕ್ ಕಾಲೇಜಿನ ಬಯೋಫಿಸಿಕ್ಸ್ ವಿಭಾಗದ ಕ್ಯಾಬಿನ್‍ನಲ್ಲಿ ಯುವತಿ ತನ್ನ ಪ್ರಾಜೆಕ್ಟ್ ಮಾಡುತ್ತಿದ್ದಾಗ ಆರೋಪಿ ಒಳಗೆ ನುಗ್ಗಿದ್ದಾನೆ. ನಂತರ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದೇಕೆ ಎಂದು ಪ್ರಶ್ನಿಸಲು ಆರಂಭಿಸಿದ್ದಾನೆ. ನಂತರ ತನ್ನ ಮೇಲೆ ಹಾಗೂ ಯುವತಿಯ ಮೇಲೆ ಪೆಟ್ರೋಲ್ ಸುರಿದು ಲೈಟರ್‍ನಿಂದ ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರ ಯುವತಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ ಎಂದು ಬೇಗಂಪುರ ಠಾಣೆಯ ಪಿಐ ಪ್ರಶಾಂತ್ ಪೋತದಾರ ತಿಳಿಸಿದ್ದಾರೆ.

    ಇದೀಗ ಇಬ್ಬರನ್ನು ಚಿಕಿತ್ಸೆಗಾಗಿ ಔರಂಗಾಬಾದ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿಗೆ 90% ಸುಟ್ಟ ಗಾಯಗಳಾಗಿದ್ದರೆ, ಯುವತಿಗೆ 55% ಸುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 307, 326A, 354D, 506,34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ – ಜಾಗೃತಿ ಮೂಡಿಸಲು ತಹಶಿಲ್ದಾರ್‌ಗೆ ಗ್ರಾಮಸ್ಥರ ಮನವಿ

    Live Tv
    [brid partner=56869869 player=32851 video=960834 autoplay=true]

  • ಪಂಜುರ್ಲಿ ದೈವದ ದೃಶ್ಯ ರೀಲ್ಸ್ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಯುವತಿ ತಪ್ಪು ಕಾಣಿಕೆ

    ಪಂಜುರ್ಲಿ ದೈವದ ದೃಶ್ಯ ರೀಲ್ಸ್ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಯುವತಿ ತಪ್ಪು ಕಾಣಿಕೆ

    ಮಂಗಳೂರು: ಕಾಂತಾರ (Kantara) ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ಯುವತಿಗೆ ಕೊನೆಗೂ ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿನ ಅರಿವಾದ ಬಳಿಕ ಯುವತಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿ ಬೇಡಿಕೊಂಡಿದ್ದಾಳೆ.

    ಹೌದು, ಬೆಂಗಳೂರು (Bengaluru) ಮೂಲದ ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿ (Shwetha Reddy), ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ಕಾಂತಾರಾ ಸಿನಿಮಾದ ವರಹಾ ರೂಪಂ ಹಾಡಿಗೆ (Varaha Rupam Song) ರೀಲ್ಸ್ ಮಾಡಿದ್ದರು. ಈಕೆಯ ರೀಲ್ಸ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾದ ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿದ್ದಾಳೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೇ ಶ್ವೇತಾ ರೆಡ್ಡಿಯನ್ನು ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ, ದೈವಗಳು ನೋಡಿಕೊಳ್ಳಲಿ ಎಂದು ಹಲವರು ಎಚ್ಚರಿಕೆ ಸಂದೇಶ ಹಾಕಿದ್ದರು. ಇದನ್ನೂ ಓದಿ: ಸ್ಟಾರ್ ನಟನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್

    ಈ ಬಳಿಕ ವೀಡಿಯೋ ಡಿಲೀಟ್ ಮಾಡಿ, ದಯವಿಟ್ಟು ಹರಕೆ ಇಡಬೇಡಿ ಎಂದು ಕ್ಷಮೆ ಕೋರಿದ್ದರು. ಇದೀಗ ಶ್ವೇತಾ ರೆಡ್ಡಿ ತೀರ್ಥ ಸ್ನಾನ ಮಾಡಿ ಮುಂದೇ ಏನು ತೊಂದರೆ ಆಗದಿರಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ. ಜೊತೆಗೆ ಯಕ್ಷಗಾನ ಇದೆಲ್ಲವೂ ಒಂದೇ ಎಂದು ಅಂದುಕೊಂಡಿದ್ದೆ. ದೈವದ ಕೋಲ ನೋಡುವ ಅವಕಾಶ ಸಿಕ್ಕರೆ ನೋಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಬಿಡಿ ಜೊತೆ ʼಕಾಂತಾರʼದ ರಿಷಬ್‌ ಶೆಟ್ಟಿ

    ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ಶ್ವೇತಾ ರೆಡ್ಡಿ, ದಯವಿಟ್ಟು ಕ್ಷಮಿಸಿ, ನಮಗೆ ತುಂಬಾ ಭಕ್ತಿ, ಇಷ್ಟಪಟ್ಟು ಮಾಡಿದೆವು, ಯಾರನ್ನೂ ನೋಯಿಸುವ ಉದ್ದೇಶವಿಲ್ಲ, ದಯವಿಟ್ಟು ಹರಕೆ ಎಲ್ಲ ಇಡಬೇಡಿ, ನಾವು ಮಂಜುನಾಥ ಸ್ವಾಮಿಗೆ ಕ್ಷಮೆ ಕೋರುತ್ತೇವೆ. ನಿಮ್ಮ ದೈವಕ್ಕೆ, ನಿಮಗೆ, ನಿಮ್ಮ ಸಂಸ್ಕೃತಿಗೆ, ನಿಮ್ಮ ಮನಸ್ಸಿಗೆ ನಮ್ಮಿಂದ ನೋವಾಗಿದ್ದಲ್ಲಿ, ಅವಮಾನ ಎನಿಸಿದ್ದಲ್ಲಿ, ನಾನು ಮನಸಾರೆ ಕ್ಷಮೆ ಬೇಡುತ್ತೇನೆ. ಇನ್ನೂ ಎಂದು ಯಾರ ಮನಸ್ಸಿಗೂ, ಸಂಸ್ಕೃತಿಗೂ ಧಕ್ಕೆ ಯಾಗದಂತೆ ನಡೆಯುತ್ತೇನೆ. ತುಂಬಾ ಇಷ್ಟವಾಗಿ ನಮ್ಮ ಸಂಸ್ಕೃತಿ ಬಿಂಬಿಸಲು ಪ್ರಯತ್ನಿಸಿದೆ ಅಷ್ಟೇ. ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    ಭೋಪಾಲ್: ಉಜ್ಜಯಿನಿಯ ದೇವಸ್ಥಾನದ ಆವರಣದಲ್ಲಿ ಇನ್‍ಸ್ಟಾಗ್ರಾಮ್ ರೀಲ್ ( Instagram reel) ಮಾಡಿದ್ದ ಯುವತಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶದ (Madhya Pradesh) ಗೃಹ ಸಚಿವ ನರೋತ್ತಮ್ ಮಿಶ್ರಾ (Home Minister Narottam Mishra) ಸೂಚಿಸಿದ್ದಾರೆ.

    ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದ ಗರ್ಭಗುಡಿ ಮತ್ತು ದೇವಸ್ಥಾನದ ಆವರಣದಲ್ಲಿ ಬಾಲಿವುಡ್ ಹಾಡಿಗೆ ಯುವತಿಯೊಬ್ಬಳು ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಳು. ನಂತರ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಳು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನರೋತ್ತಮ್ ಮಿಶ್ರಾ ಅವರ ಗಮನಕ್ಕೆ ಬಂದಿದೆ.

    ಈ ಸಂಬಂಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್‍ಪಿಗೆ ಸೂಚಿಸಿದ್ದೇನೆ. ಅಲ್ಲದೇ ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    ಯುವತಿ ಮಹಾಕಾಲ್ ದೇವಸ್ಥಾನದ ಗರ್ಭಗುಡಿಯಲ್ಲಿ ಜಲಾಭಿಷೇಕ ಮಾಡುವುದನ್ನು ರೀಲ್ಸ್ ಮಾಡಿದ್ದಳು. ಅಲ್ಲದೇ ದೇವಸ್ಥಾನದ ಆವರಣದಲ್ಲಿ ಸುತ್ತುತ್ತಾ ರೀಲ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಈ ಎರಡು ವೀಡಿಯೋಗಳನ್ನು ಮತ್ತೋರ್ವ ಯುವತಿ ಚಿತ್ರೀಕರಿಸಿದ್ದಾಳೆ. ಇದನ್ನೂ ಓದಿ: ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವತಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾಕಾಲ್ ದೇವಸ್ಥಾನದ ಅರ್ಚಕ ಮಹೇಶ್ ಗುರು ಒತ್ತಾಯಿಸಿದ್ದಾರೆ. ಈ ವೀಡಿಯೋ ಅವಹೇಳನಕಾರಿ ಮತ್ತು ಸನಾತನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ರೀತಿಯ ವೀಡಿಯೊವು ದೇವಾಲಯದ ಪಾವಿತ್ರ್ಯತೆಯನ್ನು ಹಾಳುಮಾಡಿದೆ. ಮಹಾಕಾಲ್ ದೇವಾಲಯದ ನೌಕರರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಚಂಡೀಗಢ: ಪ್ರೀತಿಸಿದ ಯುವತಿ ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲೂಧಿಯಾನದಲ್ಲಿ (Ludhiana) ನಡೆದಿದೆ.

    ಗುರುದೀಪ್ ಸಿಂಗ್ (30) ಮೃತ ಪ್ರಿಯಕರನಾಗಿದ್ದು, ಆರೋಪಿಯನ್ನು ರಣವಾನ್ ಗ್ರಾಮದ ರಾಜ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ (Dubbai) ಕೆಲಸಮಾಡುತ್ತಿದ್ದ ನನ್ನ ಮಗ ಸುಮಾರು ಎರಡೂವರೆ ವರ್ಷಗಳ ಹಿಂದೆ ಮನೆಗೆ ಮರಳಿದ್ದನು. ಗುರ್ದೀಪ್ ಸಿಂಗ್ ವಿದೇಶದಲ್ಲಿದ್ದಾಗ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಜ್ವಿಂದರ್ ಕೌರ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದನು (Relationship). ಅಲ್ಲದೇ ಆಕೆಗೆ ಹಣವನ್ನು ಕಳುಹಿಸುತ್ತಿದ್ದನು.  ಇದನ್ನೂ ಓದಿ: 68ನೇ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್‌ಗಳು ಇವರೇ

    ಯುವತಿ ತನ್ನ ಮಗನ ಕತ್ತು ಹಿಡಿದು ಮುಖಕ್ಕೆ ಕಪಾಳಮೋಕ್ಷ ಮಾಡುತ್ತಾ, ನನಗೆ ಯಾವುದೇ ಸಾಲವನ್ನು ನೀಡಿಲ್ಲ ಎಂದು ನಿಂದಿಸಿದ್ದಾಳೆ. ಘಟನೆ ಬಳಿಕ ನನ್ನ ಮಗ ಅಳುತ್ತಿದ್ದನು ಮತ್ತು ನನಗೆ ತುಂಬಾ ಅವಮಾನವಾಗಿದೆ, ನಾನು ಸಾಯುತ್ತೇನೆ ಎಂದು ಹೇಳಿದ್ದನು. ಅದೇ ರೀತಿ ಸಂಜೆ ವೇಳೆಗೆ ನನ್ನ ಮಗ ವಿಷ ಸೇವಿಸಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಲುಧಿಯಾನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುರುದೀಪ್ ಸಿಂಗ್ ಅವರ ತಂದೆ ನಛತಾರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.

    ಇದೀಗ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಈ ಸಂಬಂಧ ತನಿಖೆ ನಡೆಸಲು ಆರಂಭಿಸಿದ್ದಾರೆ. ಇದನ್ನೂ ಓದಿ: ಹಿಂದೂ ಕುಟುಂಬಕ್ಕೋಸ್ಕರ ಏರಿಯಾದಲ್ಲಿ ಮುಸ್ಲಿಮರಿಂದ ದುರ್ಗಾ ಪೂಜೆ ಆಯೋಜನೆ

    Live Tv
    [brid partner=56869869 player=32851 video=960834 autoplay=true]