Tag: young man

  • ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು

    ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು

    ದಾವಣಗೆರೆ: ಪ್ರೀತಿ ನಿರಾಕರಿಸಿದ್ದ ಯುವತಿಯನ್ನು (Young Woman) ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ (Murder) ಮಾಡಿದ್ದ ಯುವಕ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದ ಘಟನೆ ಗುರುವಾರ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕನೂ ಮೃತಪಟ್ಟಿದ್ದಾನೆ.

    ಯುವತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಸಾದತ್ ಅಲಿಯಾಸ್ ಚಂದ್ ಪೀರ್ (29) ಎಂದು ಗುರುತಿಸಲಾಗಿದೆ. ಗುರುವಾರ ದಾವಣಗೆರೆ ನಗರದ ಪಿಜೆ ಬಡಾವಣೆ ಚರ್ಚ್ ಬಳಿ ಆತ ಯುವತಿ ಚಾಂದ್ ಸುಲ್ತಾನಳನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.

    ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾದತ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿ – ನಡು ರಸ್ತೆಯಲ್ಲೇ ಕೊಂದ ಪಾಗಲ್ ಪ್ರೇಮಿ

    ವರದಿಗಳ ಪ್ರಕಾರ ಸಾದತ್ ಚಾಂದ್ ಸುಲ್ತಾನಾಳನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದು ಮಾತ್ರವಲ್ಲದೇ ಆಕೆಯ ಕುಟುಂಬದ ಸದಸ್ಯರು ಆಕೆಗೆ ಮತ್ತೊಂದು ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಸಾದತ್ ಕೋಪಗೊಂಡಿದ್ದ.

    ನಿನ್ನೆ ಸುಲ್ತಾನಾ ತನ್ನ ಪಾಡಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸಾದತ್ ಆಕೆಯನ್ನು ಮಾತನಾಡಬೇಕು ಎಂದು ನಡು ರಸ್ತೆಯಲ್ಲಿ ನಿಲ್ಲಿಸಿದ್ದ. ಈ ವೇಳೆ ಆಕೆಗೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಕೊಲೆಯ ಭೀಕರ ದೃಶ್ಯಗಳನ್ನು ಕಂಡು ದಾವಣಗೆರೆ ಜನರು ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ

    ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ

    ರಾಮನಗರ: ನಗರಸಭಾ ಕಾಂಗ್ರೆಸ್ (Congress) ಸದಸ್ಯರ ನಂಗನಾಚ್ ಕಾರ್ಯಕ್ರಮದ ವೇಳೆ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ರಾಮನಗರದಲ್ಲಿ  (Ramanagara) ತಡವಾಗಿ ಬೆಳಕಿಗೆ ಬಂದಿದೆ.

    ಪಟ್ಟಣದ ಯಾರಬ್ ನಗರದ ಕಲ್ಯಾಣ ಮಂಟಪದಲ್ಲಿ ನವೆಂಬರ್ 24ರ ರಾತ್ರಿ ಘಟನೆ ನಗರಸಭೆ ಕಾಂಗ್ರೆಸ್ ಸದಸ್ಯ ದೌಲತ್ ಷರೀಫ್ ಹುಟ್ಟುಹಬ್ಬದ ಅಂಗವಾಗಿ ನಂಗಾನಾಚ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಡ್ಯಾನ್ಸರ್‌ಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮೆಹಬೂಬ್ ನಗರದ ನಿವಾಸಿ ಮುಫಾ ಮೇಲೆ ಅದೇ ನಗರದ ನಿವಾಸಿ ರುಮಾನ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುತ್ತೆ.. ಧೈರ್ಯವಿದ್ರೆ ನಿಲ್ಲಿಸಿ – ದೀದಿಗೆ ಬಿಜೆಪಿ ಸವಾಲು

    ಗಾಯಾಳು ಮುಫಾಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ರುಮಾನ್‍ನ್ನು ರಾಮನಗರ ಟೌನ್ ಪೊಲೀಸರು ಬಂಧಿಸಿದ್ದಾರೆ. ನಗರಸಭೆ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತ್‍ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್‌ಗಳನ್ನು ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ ನೋಟುಗಳ ಸುರಿಮಳೆ ಗೈದು ಮೋಜುಮಸ್ತಿ ಮಾಡಿದ್ದು ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಸ್ನೇಹಿತರ ಜೊತೆ ಹೊರಗಡೆ ಹೋದ ಯುವಕ ಶವವಾಗಿ ಪತ್ತೆ

    ಸ್ನೇಹಿತರ ಜೊತೆ ಹೊರಗಡೆ ಹೋದ ಯುವಕ ಶವವಾಗಿ ಪತ್ತೆ

    ರಾಯಚೂರು: ಯುವಕನನ್ನು (Young Man) ಕೊಲೆ ಮಾಡಿ ನಡುರಸ್ತೆಯಲ್ಲಿ ಬೀಸಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ರಾಯಚೂರು (Raichur) ತಾಲೂಕಿನ ಮಲಿಯಾಬಾದ್ ಬಳಿ ನಡೆದಿದೆ.

    ಹೊಸಮಲಿಯಾಬಾದ್ ಗ್ರಾಮದ ತಿಮ್ಮಪ್ಪ (32) ಕೊಲೆಯಾದ ವ್ಯಕ್ತಿ. ಹಮಾಲಿ ಕೆಲಸ ಮಾಡಿಕೊಂಡಿದ್ದ ತಿಮ್ಮಪ್ಪ ರಾಯಚೂರಿನಿಂದ ಮಲಿಯಾಬಾದ್‌ಗೆ ತೆರಳುವ ರಸ್ತೆ ಮಧ್ಯೆದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರಾತ್ರಿ ಸ್ನೇಹಿತರ (Friends) ಜೊತೆ ಹೊರಗಡೆ ಹೋದವನು ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾನೆ. ಕೊಲೆ ಮಾಡಿದವರೇ ಮೃತ ದೇಹವನ್ನು ರಸ್ತೆಯಲ್ಲಿ ಬೀಸಾಡಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಮೃತನ ಮೈಮೇಲೆ ಯಾವುದೇ ಹಲ್ಲೆ, ಗಾಯದ ಗುರುತುಗಳು ಕಂಡುಬಂದಿಲ್ಲ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಸಿಎಂ ಆದ್ರೆ ಹಿಂದೂಗಳ ಹತ್ಯೆ ಆಗುತ್ತೆ: ಸಿ.ಟಿ ರವಿ

    ಘಟನೆಗೆ ಸಂಬಂಧಿಸಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆದಿದೆ. ಇದನ್ನೂ ಓದಿ: 2023ಕ್ಕೆ 15 ವರ್ಷ ಪೂರೈಸಿದ ವಾಹನಗಳು ಗುಜರಿಗೆ: ನಿತಿನ್ ಗಡ್ಕರಿ

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಎಸ್‌ಪಿಗೆ ಪತ್ರ ಬರೆದ ಯುವಕ

    ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಎಸ್‌ಪಿಗೆ ಪತ್ರ ಬರೆದ ಯುವಕ

    ಶಿವಮೊಗ್ಗ: ತಾನು ವಿವಾಹವಾಗಲು (Marriage) ಹುಡುಗಿ (Girl) ಹುಡುಕಿಕೊಡಿ ಎಂದು ಯುವಕನೊಬ್ಬ (Man) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರಿಗೆ ಪತ್ರ (Letter) ಬರೆದಿರುವ ವಿಚಿತ್ರ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

    ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ಪ್ರವೀಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮದುವೆಯಾಗಲು ವಧು (Bride) ಹುಡುಕಿಕೊಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಯುವಕ.

    ಪ್ರವೀಣ್ ಈ ಹಿಂದೆ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಇದೀಗ ತನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾನೆ. ಮದುವೆ ಆಗಲು ಸಾಕಷ್ಟು ಹುಡುಗಿಯರ ಅನ್ವೇಷಣೆ ನಡೆಸಿದ್ದ ಈತ ತನಗೆ ಸೂಕ್ತ ವಧು ಸಿಗದ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿಗೆ ಆಗಮಿಸಿ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ವಧು ಸಿಕ್ಕಿದರೆ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬಿಜೆಪಿ 140 ಸ್ಥಾನ ಗೆದ್ದರೆ ಕಾಂಗ್ರೆಸ್ ಧೂಳಿಪಟ – ಯಡಿಯೂರಪ್ಪ

    ಪತ್ರವನ್ನು ಸ್ವೀಕರಿಸಿರುವ ಪೊಲೀಸರು ಇದೀಗ ಏನು ಮಾಡೋದು ಎಂಬ ಪೇಚಿಗೆ ಸಿಲುಕಿದ್ದಾರೆ. ಅಲ್ಲದೇ ಇದೀಗ ಯುವಕ ಎಸ್‌ಪಿ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬಣ ಸಂಘರ್ಷ – ಡಿಕೆಶಿ ನಡೆಗೆ ಸಿದ್ದರಾಮಯ್ಯ ಕೊತಕೊತ!

    Live Tv
    [brid partner=56869869 player=32851 video=960834 autoplay=true]

  • ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ

    ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ

    ಮುಂಬೈ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪಿಎಚ್‍ಡಿ ವಿದ್ಯಾರ್ಥಿಯೊಬ್ಬ ತನಗೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿ ಹತ್ಯೆಗೈಯ್ಯಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಔರಂಗಾಬಾದ್‍ನಲ್ಲಿ (Aurangabad) ನಡೆದಿದೆ. ಇದೀಗ ಇಬ್ಬರಿಗೂ ಸುಟ್ಟ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಬ್ಬರೂ ಪ್ರಾಣಿಶಾಸ್ತ್ರದ (Zoology) ಪಿಎಚ್‍ಡಿ ವಿದ್ಯಾರ್ಥಿಗಳಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ (Dr Babasaheb Ambedkar Marathwada University) ಅಧ್ಯಯನ ಮಾಡುತ್ತಿದ್ದರು. ಇದನ್ನೂ ಓದಿ: ನೋವಿನಿಂದ ಚೀರಾಡಿದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ – ಅಪರಿಚಿತನ ಸಹಾಯದಿಂದ ರಸ್ತೆಯಲ್ಲೇ ಮಹಿಳೆಗೆ ಹೆರಿಗೆ

    ಹನುಮಾನ್ ತೆಕಡಿಯಲ್ಲಿರುವ ಸರ್ಕಾರಿ ಫೋರೆನ್ಸಿಕ್ ಕಾಲೇಜಿನ ಬಯೋಫಿಸಿಕ್ಸ್ ವಿಭಾಗದ ಕ್ಯಾಬಿನ್‍ನಲ್ಲಿ ಯುವತಿ ತನ್ನ ಪ್ರಾಜೆಕ್ಟ್ ಮಾಡುತ್ತಿದ್ದಾಗ ಆರೋಪಿ ಒಳಗೆ ನುಗ್ಗಿದ್ದಾನೆ. ನಂತರ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದೇಕೆ ಎಂದು ಪ್ರಶ್ನಿಸಲು ಆರಂಭಿಸಿದ್ದಾನೆ. ನಂತರ ತನ್ನ ಮೇಲೆ ಹಾಗೂ ಯುವತಿಯ ಮೇಲೆ ಪೆಟ್ರೋಲ್ ಸುರಿದು ಲೈಟರ್‍ನಿಂದ ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರ ಯುವತಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ ಎಂದು ಬೇಗಂಪುರ ಠಾಣೆಯ ಪಿಐ ಪ್ರಶಾಂತ್ ಪೋತದಾರ ತಿಳಿಸಿದ್ದಾರೆ.

    ಇದೀಗ ಇಬ್ಬರನ್ನು ಚಿಕಿತ್ಸೆಗಾಗಿ ಔರಂಗಾಬಾದ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿಗೆ 90% ಸುಟ್ಟ ಗಾಯಗಳಾಗಿದ್ದರೆ, ಯುವತಿಗೆ 55% ಸುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 307, 326A, 354D, 506,34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ – ಜಾಗೃತಿ ಮೂಡಿಸಲು ತಹಶಿಲ್ದಾರ್‌ಗೆ ಗ್ರಾಮಸ್ಥರ ಮನವಿ

    Live Tv
    [brid partner=56869869 player=32851 video=960834 autoplay=true]

  • ಕಾಫಿನಾಡಿನ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವಕನ ವಿರುದ್ಧ ಯುವತಿ ದೂರು

    ಕಾಫಿನಾಡಿನ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವಕನ ವಿರುದ್ಧ ಯುವತಿ ದೂರು

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ (Koppa) ತಾಲೂಕಿನಲ್ಲಿ ಕೇಳಿಬಂದಿದ್ದ ಲವ್ ಜಿಹಾದ್ (Love Jihad)  ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನೊಂದ ಯುವತಿ ಮೊಹಮದ್ ರೌಫ್ ಸೇರಿದಂತೆ ಮೂವರ ವಿರುದ್ಧ ಹರಿಹರಪುರ (Hariharapura) ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ನಾನು ಕಾರ್ಕಳದ ಮೀನಾಕ್ಷಿ ಕಾಲೇಜಿನಲ್ಲಿ ಓದುತ್ತಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಮಹಮದ್ ರೌಫ್ ಸ್ನೇಹಿತನಾಗಿದ್ದ. ತದನಂತರ ಭೇಟಿಯಾಗಿ ಮಾತನಾಡಿದ್ದೇವು. ಊಟಕ್ಕೆ ಹೋಗೋಣ ಎಂದು ಊಟ ಮಾಡಿದ ಬಳಿಕ ಕುಡಿಯಲು ಜ್ಯೂಸ್ ಕೊಟ್ಟಿದ್ದನು. ಜ್ಯೂಸ್ ಕುಡಿದ ಬಳಿಕ ಏನು ನಡೆಯಿತು ಎಂದು ನನಗೆ ಗೊತ್ತಿಲ್ಲ. ಸ್ವಲ್ಪ ಹೊತ್ತಿನ ಬಳಿಕ ನನ್ನನ್ನು ಕರೆತಂದು ಹಾಸ್ಟೆಲ್ ಬಳಿ ಬಿಟ್ಟು ಹೋಗಿದ್ದರು. ಮರುದಿನ ಮತ್ತೆ ಕರೆದಾಗ ನಾನು ಬರುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ಖಾಸಗಿ ಫೋಟೋಗಳನ್ನು ನನಗೆ ಕಳುಹಿಸಿ, ಬರದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

    Love

    ಹೀಗೆ, ಕಳೆದ ಮೂರು ವರ್ಷಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ತಂಪು ಪಾನೀಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಬಲವಂತವಾಗಿ ಕುಡಿಸಿ ನನ್ನ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು ಬ್ಲಾಕ್ ಮಿಲ್ ಮಾಡುತ್ತಿದ್ದಾರೆ. ತಾಳಿ ಕಟ್ಟುವ ರೀತಿಯ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ದೂರಿದ್ದಾಳೆ. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್

    ಈಗ ಮೊಹಮದ್ ರೌಫ್ ವಿದೇಶದಲ್ಲಿ ಕೂತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುತ್ತಿದ್ದಾನೆ. ಇದರಿಂದ ನನ್ನ ಹಾಗೂ ಮನೆಯವರ ಮಾನಸಿಕ ನೆಮ್ಮದಿ ಹಾಳಾಗಿದೆ. ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳನ್ನ ಡಿಲೀಟ್ ಮಾಡಿಸಿ ಮೊಹಮದ್ ರೌಫ್, ಇರ್ಫಾನ್ ಹಾಗೂ ಸೈಫ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ಮನವಿ ಮಾಡಿದ್ದಾಳೆ. ಇದನ್ನೂ ಓದಿ: ಮದುವೆಯಾದ್ಮೇಲೂ ಅಕ್ರಮ ಸಂಬಂಧ – ಮಾಜಿ ಪ್ರೇಯಸಿಯನ್ನ ಕತ್ತರಿಸಿ, ಅರೆಬೆತ್ತಲಾಗಿ ಬಿಸಾಡಿ ವಿಕೃತಿ

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಶಿಕ್ಷಕಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣಾದ

    ಮಹಿಳಾ ಶಿಕ್ಷಕಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣಾದ

    ಲಕ್ನೋ: ಯುವಕನೊಬ್ಬ (Young Man) ಮಹಿಳಾ ಶಿಕ್ಷಕಿಯ (Teacher) ಮೇಲೆ 6 ಗುಂಡುಗಳನ್ನು ಹಾರಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ (Uttar Pradesh) ಇಟಾವಾ ಜಿಲ್ಲೆಯ ಇಕ್ದಿಲ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದೆ.

    ಮಹಿಳೆಯು ಗಾಯಗೊಂಡಿರುವ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದಳು. ಇದನ್ನು ನೋಡಿದ್ದ ಸ್ಥಳೀಯರು ಮಹಿಳೆಯನ್ನು (Woman) ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: Dating App ಬಳಸೋ ಮುನ್ನ ಎಚ್ಚರ- ಒಂಟಿ ಜೀವಗಳನ್ನೇ ಟಾರ್ಗೆಟ್ ಮಾಡಿ ಮೋಸ

    POLICE JEEP

    ಘಟನೆಗೆ ಸಂಬಂಧಿಸಿ ಇಟಾವಾಹ್ ಎಸ್‍ಪಿ ಮಾಹಿತಿ ನೀಡಿದ್ದು, ಮೊದಲು ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ನಂತರ ಯುವಕನ ಮೃತ ದೇಹವನ್ನು ಪತ್ತೆಯಾದಾಗಿದೆ ಎಂದರು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಮಹಿಳೆ ಹಾಗೂ ಯುವಕ ಇಬ್ಬರು ಪರಿಚಿತರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

    Live Tv
    [brid partner=56869869 player=32851 video=960834 autoplay=true]

  • ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಯುವನೋರ್ವನನ್ನು ಕಂಬಕ್ಕೆ ಕಟ್ಟಿ ನೂರಾರು ಜನರು ಹಲ್ಲೆ ನಡೆಸಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಜಿಲ್ಲೆಯ ವಿಜಯಪುರ ತಾಲೂಕಿನ ಡೊಮ್ಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ಯುವಕ ಹಾಡು ಹಾಕಿ ಅಂದಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ. ಶುಕ್ರವಾರ ಗ್ರಾಮದಲ್ಲಿ ಉರುಸು ನಡೆಯುತ್ತಿತ್ತು. ಕೆಲ ಯುವಕರು ಟ್ರ್ಯಾಕ್ಟರ್‌ನಲ್ಲಿ ಹಾಡುಗಳನ್ನು ಹಾಕಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಅದೇ ಗ್ರಾಮದ ದಲಿತ ಯುವಕ ಸಾಗರ್ ಕೂಡ ಹೋಗಿ ನೃತ್ಯ ಮಾಡಿದ್ದಾನೆ. ಆಗ ಟ್ರ್ಯಾಕ್ಟರ್‌ನಲ್ಲಿದ್ದ ಸಂಜು ಬಿರಾದಾರ ಹಾಡನ್ನು ಬಂದ್ ಮಾಡಿದ್ದಾನೆ. ನಂತರ ಸಾಗರ್ ಹಾಡು ಹಾಕಿ ನಾನು ನೃತ್ಯ ಮಾಡಬೇಕು ಎಂದು ಕೇಳಿದ್ದಕ್ಕೆ ಸಂಜು ಒಪ್ಪಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸಾಗರ್ ಮೇಲೆ ಹಲ್ಲೆ ಮಾಡಿ ಕಳುಹಿಸಿದ್ದಾರೆ.

    ಮನೆಗೆ ಬಂದ ಸಾಗರ್ ಈ ವಿಷಯವನ್ನು ತನ್ನ ತಮ್ಮನೊಂದಿಗೆ ಹಂಚಿಕೊಂಡಿದ್ದಾನೆ. ಬಳಿಕ ಸಾಗರ್ ತಮ್ಮ ಸಂಜು ಆ್ಯಂಡ್ ಗ್ಯಾಂಗ್ ಜೊತೆಗೆ ಜಗಳವಾಡಿದ್ದಾನೆ. ಇವನೊಂದಿಗೂ ಜಗಳವಾಡಿ, ನಂತರ ಮನೆಯಲ್ಲಿದ್ದ ಸಾಗರ್‌ ಅನ್ನು ಗ್ರಾಮದ ಕೆಲವರು ಹೊರಗೆ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಾಸರಗೋಡಿನ ದಂತ ವೈದ್ಯನ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ಸದ್ದು!

    ಮನೆಯಲ್ಲಿದ್ದ ಸಾಗರ್‌ನನ್ನು ಕರೆದುಕೊಂಡು ಹೋಗಲು ಗ್ರಾಮಸ್ಥರು ಬಂದಾಗ ತಾಯಿ ಸಂಗೀತಾ ತಡೆದಿದ್ದಾರೆ. ಅಲ್ಲದೇ ತಪ್ಪಾಗಿದೆ ಬಿಟ್ಟುಬಿಡಿ, ಇನ್ನೊಂದು ಬಾರಿ ಈ ರೀತಿ ಮಾಡಲ್ಲ ಅಂತಾ ಕೈ, ಕಾಲು ಮುಗಿದರು ಬಿಟ್ಟಿಲ್ಲ. ಅಲ್ಲದೇ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವಾಗಲೂ ಕೂಡ ಕುಟುಂಬಸ್ಥರು ಮತ್ತು ಸಾಗರ್ ಕೂಡ ತಪ್ಪಾಗಿದೆ ಬಿಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಜಗ್ಗದ ಗ್ರಾಮಸ್ಥರು ಸಾಗರ್ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಬದಲಾಯಿಸುತ್ತೇವೆ – ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

    ಒಂದು ವೇಳೆ ಸಾಗರ್ ತಪ್ಪು ಮಾಡಿದ್ದರೆ ಪೋಲಿಸರಿಗೆ ವಿಷಯ ತಿಳಿಸಿ ದೂರು ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಕುಟುಂಸ್ಥರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಇದರ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಾಗರ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು 14 ಜನರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಾಗರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟಾರೆ ಒಂದು ಹಾಡಿನ ವಿಷಯಕ್ಕೆ ಇಷ್ಟೊಂದು ರಾದ್ಧಾಂತ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಸಾಗರ್ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಸಹೋದರ ಮೊಬೈಲ್ ಪಾಸ್‌ವರ್ಡ್ ಬದಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಆಳಂದದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ- 70ರ ವೃದ್ಧೆ ಮೇಲೆ 28ರ ಯುವಕನ ಅಟ್ಟಹಾಸ

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನಲ್ಲಿ ಇತ್ತೀಚಿಗೆ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಘಟನೆ ಜನರನ್ನು ಬೆಚ್ಚಿಬಿಳಿಸಿದೆ.

    ತಾಲೂಕಿನ ಅಣ್ಣೂರು ಗ್ರಾಮದಲ್ಲಿ 70 ವರ್ವದ ವೃದ್ಧೆಯ (Old Woman) ಮೇಲೆ 28 ವರ್ಷದ ಯುವಕನಿಂದ (Young Man) ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಕಳೆದ ಕೆಲ ವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ವೃದ್ಧೆ ತನ್ನ ಮೊಮ್ಮಗಳ ಮನೆಯಲ್ಲಿ ವಾಸವಾಗಿದ್ದಾಗ, ಆಳಂದ ತಾಲೂಕಿನ ಗ್ರಾಮವೊಂದರ ಸಂತೋಷ್ ಎಂಬ ಯುವಕ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಭಾನುವಾರ ಮಧ್ಯಾಹ್ನ ವೃದ್ಧೆಯ ಮೊಮ್ಮೊಗಳು ಬಾಗಿಲು ಮುಚ್ಚಿಕೊಂಡು ಹೊರಹೋಗಿದ್ದಳು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಸಂತೋಷ್‌ ಮನೆಗೆ ಬಂದು ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ: ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ – ಇಬ್ಬರು ಗಂಭೀರ

    ಘಟನೆಯಲ್ಲಿ ತೀವ್ರ ಅಸ್ತವ್ಯಸ್ತವಾಗಿದ್ದ ವೃದ್ಧೆಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ್‌ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ, ರಾಜ್ಯದಲ್ಲಿ ಎಲ್ಲಿಯೇ ಸ್ಪರ್ಧಿಸಿದರೂ ಸೋಲುತ್ತಾರೆ : ಈಶ್ವರಪ್ಪ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ

    ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸುವ ನೆಪದಲ್ಲಿ ಯುವತಿ ಹೆಣೆದಿದ್ದ ಹನಿಟ್ರ್ಯಾಪ್ (HoneyTrap) ಖೆಡ್ಡಕ್ಕೆ ಯುವಕನೊಬ್ಬ ಬಿದ್ದು, ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾನೆ.

    Love

    ಹೌದು, ಬೆಂಗಳೂರಿನ ಸುದ್ದಗುಂಟೆಪಾಳ್ಯ (Suddagunte Palya) ನಿವಾಸಿಯಾಗಿರುವ ದಿಲೀಪ್ ಕುಮಾರ್ ಎಂಬ ವ್ಯಕ್ತಿ ಮೊಬೈಲ್‍ಗೆ ಒಂದು ದಿನ ಹಾಯ್ ಎಂಬ ಮೆಸೇಜ್ ಬಂದಿತ್ತು. ಆ ಮೆಸೇಜ್ ನೋಡಿದ ದಿಲೀಪ್ ಕುಮಾರ್, ಡಿಪಿ ನೋಡಿ ಫುಲ್ ಖುಷ್ ಆಗಿದ್ದನು. ಯಾಕೆಂದರೆ ಅಲ್ಲಿ ಸುಂದರವಾದ ಯುವತಿಯ ಡಿಪಿ ಕಾಣಿಸಿತ್ತು. ಆ ಮಸೇಜ್‍ಗಳು ಮುಂದುವರೆದು, ಎಲೆಕ್ಟ್ರಾನಿಕ್ ಸಿಟಿ ಬಳಿಯ ಖಾಸಗಿ ಹೋಟೆಲ್‍ವೊಂದರಲ್ಲಿ ಮೀಟ್ ಮಾಡಲು ಇಬ್ಬರು ನಿರ್ಧರಿಸಿದರು. ಫಸ್ಟ್ ಟೈಂ ಹುಡುಗಿಯನ್ನು ಮೀಟ್ ಮಾಡುವ ಖುಷಿಯಲ್ಲಿ ಯುವಕ ಕೂಡ, ಸ್ನೇಹಿತನ ಕಾರು ತೆಗೆದುಕೊಂಡು ಟಿಪ್ ಟಾಪ್ ಆಗಿ ರೆಡಿಯಾಗಿ ಹೋಟೆಲ್‍ಗೆ ಹೋಗಿದ್ದನು. ರೂಮ್ ಒಳಗೆ ಹೋದ ಯುವಕ ಹುಡುಗಿಯ ಜೊತೆಗೆ ಕೂತು, ಮಾತು ಶುರುಮಾಡಿದನು. ಆದರೆ ಅಷ್ಟರಲ್ಲಿ ಮೂವರು ಯುವಕರ ತಂಡ ಏಕಾಏಕಿ ರೂಮ್ ಒಳಗೆ ನುಗ್ಗಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ

     

    ಹೀಗೆ ರೂಮ್ ಒಳಗೆ ಬಂದ ಮೂವರು, ಇಬ್ಬರನ್ನು ಒಟ್ಟಿಗೆ ಕೂರಿಸಿ, ಒಂದಷ್ಟು ವೀಡಿಯೋಗಳನ್ನು ಮಾಡಿಕೊಂಡರು. ನಂತರ ಪ್ರದೀಪ್ ಕುಮಾರ್ ಮೇಲೆ ಹಲ್ಲೆ ಮಾಡಿ, ಜೇಬಿನಲ್ಲಿದ್ದ 20 ಸಾವಿರ ಹಣ, ಐಫೋನ್, ಕಾರಿನ ಕೀ ಕಿತ್ತುಕೊಂಡು, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯದಲ್ಲಿದ್ದ ಪ್ರದೀಪ್ ಕುಮಾರ್, ಸ್ನೇಹಿತನಿಂದ ಮತ್ತೆ 25 ಸಾವಿರ ಹಣ ಗೂಗಲ್ ಪೇ ಮಾಡಿಸಿಕೊಂಡು ಆರೋಪಿಗಳ ಕೈಗೆ ಕೊಟ್ಟು ಸೈಲೆಂಟ್ ಆಗಿ ಮನೆ ಸೇರಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು, ಮತ್ತಷ್ಟು ಹಣ ನೀಡದೇ ಇದ್ದರೆ ಅಶ್ಲೀಲ ವೀಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸುವುದಕ್ಕೆ ಶುರುಮಾಡಿದ್ದಾರೆ. ಬೇರೆ ವಿಧಿ ಇಲ್ಲದೇ, ಹಲ್ಲೆಗೊಳಗಾದ ಪ್ರದೀಪ್ ಸುದ್ದಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಪ್ರೀತಿಯ ನಾಟಕವಾಡಿದ್ದ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

    ನಮ್ಮ ಹುಡುಗಿಯದ್ದೇನು ತಪ್ಪಿಲ್ಲ ಎಂದು ಹೇಳುತ್ತಿದ್ದ ಲವರ್ ಬಾಯ್, ಪ್ರದೀಪ್‍ಗೆ ಇದೀಗ ಯುವತಿಯೇ ತನಗೆ ಖೆಡ್ಡ ತೋಡಿದ್ದು ಅಂತಾ ತಿಳಿದು ಶಾಕ್ ಆಗಿದ್ದಾನೆ. ಅತ್ತ ಕಡೆ ಹನಿಟ್ರ್ಯಾಪ್ ಗ್ಯಾಂಗ್‌ನ ಬಂಧಿಸಿರುವ ಪೊಲೀಸರಿಗೆ ಮತ್ತಷ್ಟು ಹನಿಟ್ರ್ಯಾಪ್‍ಗಳು ಮಾಡಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿದ್ದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡ್ತೀವಿ: ಪ್ರಮೋದ್ ಮುತಾಲಿಕ್

    Live Tv
    [brid partner=56869869 player=32851 video=960834 autoplay=true]