Tag: young man

  • ಮಹಿಳೆಯನ್ನು ಕೊಂದು ಆಕೆಯ ಮಾಂಸ ತಿಂದು ತೇಗಿದ 24 ವರ್ಷದ ಯುವಕ!

    ಮಹಿಳೆಯನ್ನು ಕೊಂದು ಆಕೆಯ ಮಾಂಸ ತಿಂದು ತೇಗಿದ 24 ವರ್ಷದ ಯುವಕ!

    ಜೈಪುರ: ಮಹಿಳೆಯೊಬ್ಬಳನ್ನು ಕೊಂದು ಬಳಿಕ ಆಕೆಯನ್ನು ಮಾಂಸವನ್ನು ತಿಂದ ಪ್ರಕರಣ ಸಂಬಂಧ 24 ವರ್ಷದ ಯುವಕನೊಬ್ಬನನ್ನು ರಾಜಸ್ಥಾನ (Rajasthan) ದ ಪೊಲೀಸರು ಬಂಧಿಸಿದ್ದಾರೆ.

    ಈ ಅಚ್ಚರಿಯ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಯುವಕನನ್ನು ಸುರೇಂದ್ರ ಠಾಕೂರ್ (Surendra Thakur) ಎಂದು ಗುರುತಿಸಲಾಗಿದ್ದು, ಈತ ಹೈಡ್ರೋಫೋಬಿಯಾದಿಂದ ಬಳಲುತ್ತಿರುವುದಾಗಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ವಿಚಾರಣೆಯ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸುರೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಸುರೇಂದ್ರ ಆರೋಗ್ಯದ ಬಗ್ಗೆ ಬಂಗಾರ್ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯಿಸಿ, ಸುರೇಂದ್ರ ಹೈಡ್ರೋಫೋಬಿಯಾದಿಂದ ಬಳಲುತ್ತಿದ್ದಾನೆ. ಆತನಿಗೆ ಈ ಹಿಂದೆ ನಾಯಿಯೊಂದು ಕಚ್ಚಿರಬೇಕು. ಬಳಿಕ ಸರಿಯಾದ ಚಿಕಿತ್ಸೆ ಪಡೆದಿಲ್ಲ ಅನಿಸ್ತದೆ. ಹೀಗಾಗಿ ಸದ್ಯ ಆತ ಕೊನೆಯ ಹಂತದ ರೇಬಿಸ್‍ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು

    ಮಹಿಳೆಯ ಕೊಲೆಗೈಯುವ ದೃಶ್ಯವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಮಾತನಾಡಿ, 65 ವರ್ಷದ ಶಾಂತಿ ದೇವಿಯವರು ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸುರೇಂದ್ರ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ನಂತರ ಕಲ್ಲಿನಿಂದ ಜಜ್ಜಿ ಶಾಂತಿದೇವಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಆರೋಪಿ ಮಾನಸಿಕವಾಗಿ ಡಿಸ್ಟರ್ಬ್ ಆಗಿರುವುದು ಆತನ ವರ್ತನೆಯಿಂದ ಗೊತ್ತಾಯಿತು. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯಲ್ಲಿಯೂ ಆತ ತನ್ನ ವರ್ತನೆ ಮುಂದುವರಿಸಿದನು. ಹೀಗಾಗಿ ಆಸ್ಪತ್ರೆ ನರ್ಸ್‍ಗಳು ಆತನ ಕೈ-ಕಾಲುಗಳನ್ನು ಬೆಡ್‍ಗೆ ಕಟ್ಟಿಹಾಕಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಸುಖ್ರಾಂ ಬಿಸ್ನೋಯಿ ತಿಳಿಸಿದ್ದಾರೆ.

  • ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ

    ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ

    ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಯುವಕನೊಬ್ಬ ಕೈಕೊಟ್ಟಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಸಾಗರ್‌ ಎಂಬಾತ ಯುವತಿಯೊಬ್ಬಳಿಗೆ ವಂಚಿಸಿ ಪರಾರಿಯಾಗಿದ್ದಾನೆ. ಸಂತ್ರಸ್ತೆ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಅದೇ ಲ್ಯಾಬ್‌ನಲ್ಲಿ ಸಾಗರ್‌ ಸಿಸ್ಟಮ್‌ ವರ್ಕ್‌ ಮಾಡಿಕೊಂಡಿದ್ದ. ಈ ವೇಳೆ ಯುವತಿಯನ್ನು ಪ್ರೀತಿ ಹೆಸರಿನಲ್ಲಿ ಪುಸಲಾಯಿಸಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದನ್ನೂ ಓದಿ: ತಾಯಿ, ಇಬ್ಬರು ಮಕ್ಕಳು ಮನೆಯಲ್ಲೇ ಸಜೀವ ದಹನ – ಎಸಿ ಸ್ಫೋಟ ಶಂಕೆ

    ಯುವತಿ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ಕೂಡ ನಡೆಸಿದ್ದ. ಇದರಿಂದಾಗಿ ಯುವತಿ 7 ತಿಂಗಳ ಗರ್ಭಿಣಿಯಾಗಿದ್ದಳು. ವಿಚಾರ ತಿಳಿದು ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನುಂಗಿಸಿದ್ದ. ಪರಿಣಾಮವಾಗಿ ಯುವತಿಗೆ ತೀವ್ರ ರಕ್ತಸ್ರಾವವಾಗಿ 7 ತಿಂಗಳ ಮಗು ಹೊರಬಂದಿತ್ತು. ನಂತರ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿತು.

    ವಿಚಾರ ತಿಳಿದ ಯುವತಿ ಪೋಷಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಯುವತಿ ಪೋಷಕರ ಜೊತೆ ರಾಜಿಗಿಳಿದು ಯುವತಿಗೆ ತಾಳಿ ಕಟ್ಟಿ ಮದುವೆಯಾಗಿದ್ದ. ನಂತರ ರಿಜಿಸ್ಟರ್ ಕಚೇರಿಯಲ್ಲಿ ಅಧಿಕೃತವಾಗಿ ಮದುವೆಯಾಗುವಂತೆ ಯುವತಿ ಕೇಳಿದ್ದಳು. ಈ ವೇಳೆ ಪೋನ್ ಸ್ವಿಚ್ ಆಫ್ ಮಾಡಿ ಆರೋಪಿ ಸಾಗರ್‌ ಎಸ್ಕೇಪ್‌ ಆಗಿದ್ದಾನೆ. ಇದನ್ನೂ ಓದಿ: ಈ ಬಾರಿ ಕಿಚಡಿ ಸರ್ಕಾರ ಬರಲ್ಲ, ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ: ಸುಧಾಕರ್

    ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ ಸಾಗರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಹಳೆಯ ದ್ವೇಷಕ್ಕೆ ಕತ್ತಿಯಿಂದ ಕಡಿದು ಯುವಕನ ಭೀಕರ ಹತ್ಯೆ

    ಹಳೆಯ ದ್ವೇಷಕ್ಕೆ ಕತ್ತಿಯಿಂದ ಕಡಿದು ಯುವಕನ ಭೀಕರ ಹತ್ಯೆ

    ಬೀದರ್: ಹಳೆಯ ದ್ವೇಷಕ್ಕೆ ಯುವಕನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ (Murder) ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಬಳಿ ನಡೆದಿದೆ.

    ಆನಂದ್‌ ಪುಲೆ (26) ಭೀಕರವಾಗಿ ಕೊಲೆಯಾದ ದುರ್ದೈವಿ. ಇಬ್ಬರು ಯುವಕರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಉದಯ್ ಹಾಗೂ ಆತನ ಗುಂಪು ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬರುತ್ತಿದೆ.

    ಗುಂಪೊಂದು ನಡು ರಸ್ತೆಯಲ್ಲೇ ಆನಂದ್‌ ಪುಲೆ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದೆ. ಹಲ್ಲೆ ಬಳಿಕ ಗಂಭೀರವಾಗಿ ಗಾಯಗೊಂಡ ಆನಂದ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಮರ್ಗಾ ಆಸ್ಪತ್ರೆಗೆ ರವಾನೆ‌ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಆನಂದ್‌ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸದ್ಯಕ್ಕೆ ಟೋಲ್‌ ಸಂಗ್ರಹ ಇಲ್ಲ

    ಘಟನೆ ವೇಳೆ ಆನಂದ್‌ ಜೊತೆಯಿದ್ದ ಇನ್ನೊಬ್ಬನ ಸ್ಥಿತಿಯು ಗಂಭೀರವಾಗಿದೆ. ಬೀದರ್‌ನ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬಸವಕಲ್ಯಾಣ ಪೊಲೀಸರು ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ. ಇದನ್ನೂ ಓದಿ:  ಮುಳ್ಳುಹಂದಿ ಬೇಟೆಯಾಡಲು ಗುಹೆಗೆ ನುಗ್ಗಿದ್ದ ಇಬ್ಬರು ಉಸಿರುಗಟ್ಟಿ ಸಾವು

  • ಹುಲಿ ದಾಳಿಗೆ ಕಾರ್ಮಿಕ ಯುವಕ ಬಲಿ

    ಹುಲಿ ದಾಳಿಗೆ ಕಾರ್ಮಿಕ ಯುವಕ ಬಲಿ

    ಮಡಿಕೇರಿ: ನರಭಕ್ಷಕ ಹುಲಿಯ (Tiger) ಬಾಯಿಗೆ ಸಿಲುಕಿ ಕಾರ್ಮಿಕ ಯುವಕನೋರ್ವ ಮೃತಪಟ್ಟ ಘಟನೆ ಕೊಡಗು-ಕೇರಳ ಗಡಿಭಾಗವಾದ ಚೂರಿಕಾಡು (Churikadau) ಬಳಿ ನಡೆದಿದೆ.

    ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (18) ಹುಲಿ ದಾಳಿಗೆ ಬಲಿಯಾದ ಯುವಕ. ಭಾನುವಾರ ಮಧ್ಯಾಹ್ನದ ವೇಳೆ ತನ್ನ ದೈನಂದಿನ ಕಾಫಿ ಕೆಲಸದಲ್ಲಿ ತೊಡಗಿದ್ದ ಸಂದರ್ಭ ತೋಟದಲ್ಲಿದ್ದ ನರಭಕ್ಷಕ ಹುಲಿ ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

    ಚೇತನ್ ತಂದೆ ಕಾರ್ಮಿಕ ಮಧು ತನ್ನ ಮಗನನ್ನು ಹುಡುಕಿಕೊಂಡು ಬರುತ್ತಿದ್ದ ವೇಳೆ ತೋಟದ ಮಾರ್ಗದಲ್ಲಿ ಹುಲಿಯು ಮತ್ತೆ ಪ್ರತ್ಯಕ್ಷಗೊಂಡಿದೆ. ಹುಲಿ ಮಧು ಮೇಲೂ ದಾಳಿ ಮಾಡಿ ಹೊಟ್ಟೆಯ ಭಾಗಕ್ಕೆ ಗಾಯಗೊಳಿಸಿದೆ. ಈ ವೇಳೆ ಮಧು ಜೋರಾಗಿ ಕಿರುಚಿಕೊಂಡಿದ್ದು, ಹುಲಿಯು ಮತ್ತೆ ಕಾಫಿ ತೋಟದಲ್ಲಿ ಮರೆಯಾಗಿದೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಬೆನ್ನಲ್ಲೇ ಭಾರತದಲ್ಲೂ ಭೂಕಂಪನ

    ಈ ವಿಷಯ ತಿಳಿದ ಕಾಫಿ ತೋಟದ ಮಾಲೀಕರು ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಪ್ರದೇಶದ ಅಂಚಿನಲ್ಲಿ ಈ ಘಟನೆ ನಡೆದಿದ್ದು ಸುದ್ದಿ ತಿಳಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತಪಟ್ಟ ಯುವಕ ಚೇತನ್ ತಂದೆ ಮಧುವಿಗೆ ಆರಂಭಿಕವಾಗಿ 2.50 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಒಟ್ಟು 15 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಅದ್ಧೂರಿ Aero India 2023 ಏರ್ ಶೋ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಬೆಂಗಳೂರು: ಗೆಳೆಯನ ಜೊತೆ ಪಾರ್ಕ್ ನಲ್ಲಿ ಕುಳಿತಿದ್ದಕ್ಕೆ 1 ಸಾವಿರ ರೂ. ದಂಡ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೋಂ ಗಾರ್ಡ್‍ನನ್ನು ಬಂಧಿಸಲಾಗಿದೆ.

    ಬಂಧತ ಹೋಂ ಗಾರ್ಡ್ ನನ್ನು ಮಂಜುನಾಥ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ಬಿಬಿಎಂಪಿ ಕಡೆಯಿಂದ ಪಾರ್ಕ್ ಭದ್ರತೆಗೆ ನೇಮಕವಾಗಿದ್ದ. ಪಾರ್ಕ್ ನಲ್ಲಿ ಕುಳಿತಿದ್ದ ಯುವಕ- ಯುವತಿಯನ್ನು ಬೆದರಿಸಿದ ಹೊಮ್ ಗಾರ್ಡ್, ನಾನು ಪೊಲೀಸ್ ಅಂತಾ ಬೆದರಿಸಿ ಒಂದು ಸಾವಿರ ಲಂಚದ ಹಣ ಪೇಟಿಎಂ ಮಾಡಿಸಿಕೊಂಡಿದ್ದಾನೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಏನಿದು ಘಟನೆ..?: ಬೆಂಗಳೂರಿನ ಎಚ್ ಎಎಲ್ (HAL Police Station) ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ (Kundalahalli Park) ಕೆರೆಗೆ ವಾಯುವಿಹಾರಕ್ಕೆ ಯುವಕ- ಯುವತಿ ಕಳೆದ ಶನಿವಾರ ಮಧ್ಯಾಹ್ನದ ವೇಳೆ ಹೋಗಿದ್ರು. ಮಧ್ಯಾಹ್ನದ ವೇಳೆ ಆಗಿದ್ದರಿಂದ, ಮರದ ಕೆಳಗೆ ಕುಳಿತಿದ್ರು. ಈ ವೇಳೆ ಅಲ್ಲಿಗೆ ಬಂದ ಹೋಮ್ ಗಾರ್ಡ್ (Home Guard Arrest), ಏಕಾಏಕಿ ಯುವಕ- ಯುವತಿಯ ಫೋಟೋ ತೆಗೆಯೋಕೆ ಶುರುಮಾಡಿದ್ದಾನೆ.

    ಗಾಬರಿಗೊಂಡ ಯುವತಿ, ಯಾಕೆ ಫೋಟೋ ತೆಗೀತಿದ್ದೀರಿ. ನಾವು ಏನ್ ತಪ್ಪು ಮಾಡಿದೆವು ಅಂತಾ ಪ್ರಶ್ನೆ ಮಾಡಿದ್ರು. ಈ ವೇಳೆ ಮಾತಿಗಿಳಿದ ಹೋಮ್ ಗಾರ್ಡ್, ನಾನು ಪೊಲೀಸ್, ಪಾರ್ಕ್ ಒಳಗೆ ಒಟ್ಟಿಗೆ ಕುಳಿತುಕೊಂಡು ಏನ್ ಮಾಡ್ತಾ ಇದ್ದೀರಾ..? ಯಾರು ಒಳಗೆ ಬರೋಕೆ ಅನುಮತಿ ಕೊಟ್ಟಿದ್ದು ಅಂತಾ ಬೆದರಿಸಿದ್ರು. ನಿಮ್ ಮೇಲೆ ಕೇಸ್ ಹಾಕ್ತಿವಿ ನಡೀರಿ ಅಂತಾ ಬೆದರಿಸಿ, ಒಂದು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೋಮ್ ಗಾರ್ಡ್. ಮಾಡದ ತಪ್ಪಿಗೆ ಯುವತಿ ಅನಿವಾರ್ಯವಾಗಿ ಒಂದು ಸಾವಿರ ಕೊಟ್ಟು, ಅಲ್ಲಿಂದ ಹೊರ ಬಂದಿದ್ದರು. ಈ ಘಟನೆ ಬಗ್ಗೆ ಯುವತಿ ಬೈಕ್ ನಲ್ಲಿ ಬಂದಿದ್ದ ಹೊಮ್ ಗಾರ್ಡ್ ನ ಫೋಟೋ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು.

    ಈ ಸಂಬಂಧ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ಹಾವೇರಿ : ವರದಾ ನದಿಯಲ್ಲಿ ತಾಡಪತ್ರೆಗಳನ್ನು ತೊಳೆಯಲು ಹೋದ ಯುವಕ ಈಜು ಬಾರದೆ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರ ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ (River) ನಡೆದಿದೆ.

    ಮೃತ ಯುವಕನನ್ನು ಹಾವೇರಿ (Haveri) ತಾಲೂಕಿನ ದೇವಗಿರಿ ಗ್ರಾಮದ ಟಿಪ್ಪುಸುಲ್ತಾನ್‌ ಮೇಡ್ಲೇರಿ (23) ಎಂದು ಗುರುತಿಸಲಾಗಿದೆ. ಯುವಕ ಟಿಪ್ಪುಸುಲ್ತಾನ್ ತಾಡಪತ್ರೆಗಳನ್ನು ತೊಳೆಯಲು ವರದಾ ನದಿಯ ಕಳಸೂರ ಗ್ರಾಮದ ಬಳಿ ಇರುಬ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ತೆರಳಿದ್ದ. ನದಿಯ ನೀರಿನಲ್ಲಿ ತಾಡಪತ್ರೆ ತೊಳೆಯುತ್ತಿದ್ದ ವೇಳೆ ಪಕ್ಕದಲ್ಲಿದ್ದ ಬಕೆಟ್ ನದಿಯಲ್ಲಿ ತೇಲಿ ಹೋಗುತ್ತಿದ್ದನ್ನು ಕಂಡು, ಅದನ್ನು ಹಿಡಿಯಲು ಹೋಗಿದ್ದಾನೆ. ಆದರೆ ಈಜು ಬಾರದೆ ನದಿಯ‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬಾಂಬ್ ಬೆದರಿಕೆ – ಮಾಸ್ಕೋದಿಂದ ಗೋವಾ ಬರಬೇಕಿದ್ದ ವಿಮಾನ ಉಜ್ಬೇಕಿಸ್ತಾನದಲ್ಲಿ ಲ್ಯಾಂಡ್

    ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ನದಿಯಲ್ಲಿ ಕಾರ್ಯಾಚರಣೆ ನಡೆಸಿ, ಮೃತ ಟಿಪ್ಪುಸುಲ್ತಾನನ ಮೃತದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದ ಜನರ ವಿಶ್ವಾಸ ಸಂಪಾದನೆ ಮಾಡುವಲ್ಲಿ ಪಕ್ಷ ಯಶಸ್ಸು ಕಂಡಿದೆ: ಅಶ್ವಥ್ ನಾರಾಯಣ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 6 ವರ್ಷದ ಪ್ರೀತಿಗೆ ಬಿತ್ತು ಬ್ರೇಕ್- ನೇಣಿಗೆ ಶರಣಾದ ಯುವಕ

    6 ವರ್ಷದ ಪ್ರೀತಿಗೆ ಬಿತ್ತು ಬ್ರೇಕ್- ನೇಣಿಗೆ ಶರಣಾದ ಯುವಕ

    ಬೆಂಗಳೂರು: ಪ್ರೀತಿ (Love) ಕುರುಡು ಅಂತಾರೆ. ಅಂತಹ ಅಮೂಲ್ಯವಾದ ಪ್ರೀತಿಗೆ ಬಲಿಯಾದವರು ಅದೆಷ್ಟೋ ಮಂದಿ. ಅಂತೆಯೇ ಸಿಲಿಕಾನ್ ಸಿಟಿಯಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದು ಹೋಗಿದೆ. ಅವರಿಬ್ಬರೂ ಆರು ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಬ್ರೆಕಪ್ ಆಗಿದ್ದಕ್ಕೆ ಯುವಕ ಸಾವಿನ ದಾರಿ ಹಿಡಿದಿದ್ದಾನೆ.

    ಈ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ (25) ಮೃತ ಯುವಕ. ರೋಹಿತ್ ಕೊರಿಯರ್ ಕಂಪನಿ (Courier Company) ಒಂದರಲ್ಲಿ ಕೆಲಸ ಮಾಡ್ತಿದ್ದ. ಈತ ಕಳೆದ ಆರು ವರ್ಷಗಳಿಂದ ಯುವತಿಯೊಬ್ಬಳನ್ನು ಲವ್ ಮಾಡ್ತಿದ್ದ. ಆದರೆ ಕೊನೆ ಬಾರಿ ಭೇಟಿಯಾದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ.

    ಮಾತಿಗೆ ಮಾತು ಬೆಳೆದು ಇನ್ನು ಪ್ರೀತಿ ಬೇಡ ನಾವು ಬ್ರೇಕಪ್ (Love Breakup) ಮಾಡಿಕೊಳ್ಳುವ ಎಂಬ ನಿರ್ಣಯಕ್ಕೆ ಯುವತಿ ಬಂದಿದ್ದಾಳೆ. ಇದರಿಂದ ನೊಂದ ಯುವಕ ನೇರವಾಗಿ ಮನೆಗೆ ಬಂದವನೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆ (Jnanabharathi Police Station) ಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕ ಸಮುದ್ರಪಾಲು

    ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕ ಸಮುದ್ರಪಾಲು

    ಮಡಿಕೇರಿ: ಶಬರಿಮಲೆಯ (Sabarimala) ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕನೋರ್ವ (Young Man) ಸಮುದ್ರಪಾಲಾಗಿ‌ ಮೃತಪಟ್ಟ ಘಟನೆ ಕೇರಳ ರಾಜ್ಯದ ಕಣ್ಣೂರು ಬೀಚ್‌ನಲ್ಲಿ ನಡೆದಿದೆ.

    ಮಡಿಕೇರಿ (Madikeri) ನಗರದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಮೃತ ದುರ್ದೈವಿ. ಶನಿವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಇಂದು‌ ಮಕರ‌ ಜ್ಯೋತಿ ಇರುವ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಹೆಚ್ಚಿನ ಜನ ಸೇರುತ್ತಾರೆ ಎಂದು ಶಶಾಂಕ್‌ನಿದ್ದ ತಂಡವೊಂದು ನಿನ್ನೆ ಸಂಜೆಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿತ್ತು. ಅಲ್ಲಿಂದ ಮರಳುತ್ತಿದ್ದ ಸಂದರ್ಭದಲ್ಲಿ ಕಣ್ಣೂರು ಬೀಚ್‌ಗೆ ತೆರಳಿದ್ದರು.

    ಕಣ್ಣೂರು ಸಮುದ್ರಕ್ಕೆ ಬಂದು ಸಮುದ್ರದಲ್ಲಿ ಕೆಲ ಸಮಯ ಕಾಲ ಕಳೆದು ಹೋಗುವಾಗ ಮೂವರು ಯುವಕರು ಸಮುದ್ರಕ್ಕೆ ಇಳಿದಿದ್ದಾರೆ. ಬೆಳಗ್ಗೆ ಸಮಯದಲ್ಲಿ ಸಮುದ್ರ ಅಲೆಗಳು ಹೆಚ್ಚಾಗಿ ಇರುವುದರಿಂದ ಮೂವರು ಯುವಕರು ಅಲೆಗಳಿಗೆ ಸಿಲುಕಿದ್ದಾರೆ. ಈ ವೇಳೆ ಮೂವರು ಯುವಕರಲ್ಲಿ ಇಬ್ಬರು ಯುವಕರನ್ನು ಸ್ಥಳೀಯರ ನೆರವಿನಿಂದ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಭಾವುಕರಾದ ಸಚಿವ ಮುರುಗೇಶ್ ನಿರಾಣಿ

    ಆದರೆ ಶಶಾಂಕ್ ಸಮುದ್ರ ಅಲೆಗೆ ಸಿಲುಕಿ ತುಂಬಾ ದೂರ ಹೋಗಿರುವುದರಿಂದ ಆತನ ರಕ್ಷಣೆ ‌ಮಾಡಲು ಅಸಾಧ್ಯವಾಗಿತ್ತು. ಕೆಲ ಸಮಯದ ನಂತರ ಆತನ ರಕ್ಷಣೆ ಮಾಡಲು ಸ್ಥಳೀಯರು ಮುಂದಾದ ವೇಳೆ ಶಶಾಂಕ್ ಮೃತಪಟ್ಟಿದ್ದಾನೆ‌. ಕಣ್ಣೂರಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಡಿಕೇರಿಗೆ ಮೃತದೇಹ ತಲುಪಲಿದೆ. ಇದನ್ನೂ ಓದಿ: ಮೋದಿ, ಶಾ ಸಭೆ – ಜನವರಿ ಅಂತ್ಯಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೈಗೆ ಗಾಜು ಚುಚ್ಚಿ ನರ ಕಟ್- ಸರ್ಜರಿ ಬಳಿಕ ಯುವಕ ಸಾವು, ಆರೋಪ

    ಕೈಗೆ ಗಾಜು ಚುಚ್ಚಿ ನರ ಕಟ್- ಸರ್ಜರಿ ಬಳಿಕ ಯುವಕ ಸಾವು, ಆರೋಪ

    ಬೆಂಗಳೂರು: ಕೈಗೆ ಗಾಜು ಚುಚ್ಚಿ ನರ ಕಟ್ ಆಗಿದ್ದ ಯುವಕ (Young Man) ಸರ್ಜರಿ ಬಳಿಕ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಮೃತ ಯುವಕನನ್ನು ಸತೀಶ್ (24) ಎಂದು ಗುರುತಿಸಲಾಗಿದೆ. ದಾಸರಹಳ್ಳಿಯ ಮಧು ಆಸ್ಪತ್ರೆ (Madhu Hospital Dasarahalli) ವೈದ್ಯರ ಮೇಲೆ ಸತೀಶ್ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ಘಟನೆಯೇನು..?: ಕಳೆದ ಭಾನುವಾರ ಸತೀಶ್ ಕುಡಿದು (Drinks) ಬಿದ್ದಿದ್ದ. ಈ ವೇಳೆ ಸತೀಶ್ ಕೈಗೆ ಗಾಜು ಚುಚ್ಚಿ ನರ ಕಟ್ ಆಗಿತ್ತು. ರಕ್ತಸ್ರಾವ ಕೂಡ ಆಗಿ ಹೆಚ್ಚಿನ ರಕ್ತ ಹೋಗಿತ್ತು. ಹೀಗಾಗಿ ಸತೀಶ್‍ನನ್ನು ಭಾನುವಾರ ರಾತ್ರಿಯೇ ಮಾಗಡಿ ರಸ್ತೆ ದಾಸರಹಳ್ಳಿಯ ಮಧು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ: ವೈದ್ಯಕೀಯ ಕಾಲೇಜಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನೇಣಿಗೆ ಶರಣು

    ಈ ವೇಳೆ ಸರ್ಜರಿ (Surgery) ಮಾಡಬೇಕು ಎಂದು ವೈದ್ಯರು ಹೇಳಿದ್ದರು. ಸೋಮವಾರ ಸರ್ಜರಿ ಸಹ ಮಾಡಿದ್ದು, ಸತೀಶ್ ಕುಟುಂಬಸ್ಥರೊಂದಿಗೆ ಮಾತನಾಡಿದ್ದ. ಆದರೆ ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಸತೀಶ್ ಕೊನೆಯುಸಿರೆಳೆದಿದ್ದಾನೆ. ಇದೀಗ ಕುಟುಂಬಸ್ಥರು, ಕೈಗೆ ಪೆಟ್ಟಾಗಿದೆ ಅಂತ ಆಸ್ಪತ್ರೆ ಕರೆದೊಯ್ದರೆ ಪ್ರಾಣವನ್ನೇ ತೆಗೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

    ಘಟನೆ ಸಂಬಂಧ ಕುಟುಂಬಸ್ಥರಿಂದ ಕೆಪಿ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದ್ವೆಯಾಗು ಎಂದ ಯುವತಿಯನ್ನು ಮನಬಂದಂತೆ ಥಳಿಸಿದ ಯುವಕನ ಮನೆಗೆ ನುಗ್ಗಿತು ಬುಲ್ಡೋಜರ್

    ಮದ್ವೆಯಾಗು ಎಂದ ಯುವತಿಯನ್ನು ಮನಬಂದಂತೆ ಥಳಿಸಿದ ಯುವಕನ ಮನೆಗೆ ನುಗ್ಗಿತು ಬುಲ್ಡೋಜರ್

    ಭೋಪಾಲ್: ಮದುವೆಯಾಗು ಎಂದು ಕೇಳಿದ ಯುವತಿಯನ್ನು (Young Woman) ಮನಬಂದಂತೆ ಥಳಿಸಿದ ಯುವಕನ (Young Man) ಮನೆಯನ್ನು ಬುಲ್ಡೋಜರ್‌ನಿಂದ (Bulldozer) ಧ್ವಂಸಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    19 ವರ್ಷದ ಯುವತಿಯನ್ನು ಆರೋಪಿ ಯುವಕ ಪಂಕಜ್ ತ್ರಿಪಾಠಿ (24) ಅಮಾನುಷವಾಗಿ ಥಳಿಸಿದ್ದ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಶನಿವಾರ ತ್ರಿಪಾಠಿಯನ್ನು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬಂಧಿಸಲಾಗಿದೆ. ಇಂದು ಆರೋಪಿಯ ಮನೆಯನ್ನು ಕೆಡವಲು ಜಿಲ್ಲಾಡಳಿತ ಬುಲ್ಡೋಜರ್ ಅನ್ನು ಕಳುಹಿಸಿದೆ. ಪೊಲೀಸರ ಬೆಂಬಲದೊಂದಿಗೆ ಬುಲ್ಡೋಜರ್ ಮನೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ.

    ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವೀಡಿಯೋದಲ್ಲಿ ತ್ರಿಪಾಠಿ ಯುವತಿಗೆ ಮೊದಲು ಕಪಾಳಮೋಕ್ಷ ಮಾಡಿರುವುದು ಕಂಡುಬಂದಿದೆ. ಬಳಿಕ ಆಕೆಯ ತಲೆಕೂದಲನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ನಂತರ ಆಕೆಯ ಮುಖ ಹಾಗೂ ದೇಹದ ಇತರ ಭಾಗಗಳಿಗೆ ಕಾಲಿನಿಂದ ನಿರ್ದಾಕ್ಷಿಣ್ಯವಾಗಿ ಒದ್ದಿದ್ದಾನೆ. ಈ ವೇಳೆ ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ಇದನ್ನೂ ಓದಿ: ಕ್ರಿಕೆಟ್ ಆಡುವಾಗಲೇ ಚಾಕು ಇರಿತ – ಕುಂದಾನಗರಿಯಲ್ಲಿ ಡಬಲ್ ಮರ್ಡರ್

    ಈ ಎಲ್ಲಾ ಕೃತ್ಯವನ್ನು ತ್ರಿಪಾಠಿಯ ಸ್ನೇಹಿತ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ವೀಡಿಯೋವನ್ನು ಅಳಿಸುವಂತೆ ತ್ರಿಪಾಠಿ ಕೇಳಿದ್ದು, ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದಲ್ಲಿ ಬಿದ್ದಿದ್ದ ಯುವತಿಯನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ.

    ಯುವತಿ ಬಳಿಕ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ರೇವಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಯಾರಿಗೂ ಹೇಳ್ಬೇಡ ಎಂದ ಶಿಕ್ಷಕನ ವಿರುದ್ಧ ಕೇಸ್

    Live Tv
    [brid partner=56869869 player=32851 video=960834 autoplay=true]