Tag: young man

  • ಉಕ್ಕಿಹರಿಯುತ್ತಿರೋ ಕಪಿಲಾ ನದಿಯಲ್ಲಿ ಯುವಕರ ಸ್ವಿಮ್ಮಿಂಗ್ – ಇತ್ತ ಇಳಿವಯಸ್ಸಲ್ಲೂ ನೀರಿಗೆ ಧುಮುಕಿದ ವೃದ್ಧ

    ಉಕ್ಕಿಹರಿಯುತ್ತಿರೋ ಕಪಿಲಾ ನದಿಯಲ್ಲಿ ಯುವಕರ ಸ್ವಿಮ್ಮಿಂಗ್ – ಇತ್ತ ಇಳಿವಯಸ್ಸಲ್ಲೂ ನೀರಿಗೆ ಧುಮುಕಿದ ವೃದ್ಧ

    -ಮೈಸೂರಲ್ಲಿ ಪ್ರವಾಹ ಪರಿಸ್ಥಿತಿ

    ಮೈಸೂರು: ಭಾರೀ ಮಳೆಗೆ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ನದಿಗೆ ಇಳಿಯದಂತೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ಬಳಿಕವೂ ನೀರಿನಲ್ಲಿ ಈಜಾಡುವ ಮೂಲಕ ಯುವಕನೊಬ್ಬ ದುಸ್ಸಾಹಸ ಮಾಡಿದ್ದಾನೆ.

    ಉಕ್ಕಿ ಹರಿಯುತ್ತಿರುವ ನಂಜನಗೂಡಿನ ಸೇತುವೆ ಬಳಿ ಕಪಿಲಾ ನದಿಗೆ ಜಿಗಿದು ಯುವಕನೊಬ್ಬ ಈಜಾಡಿದ್ದು, ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ವೃದ್ಧರೊಬ್ಬರು ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ನದಿಗೆ ಧುಮುಕಿ ಈಜಾಡಿದ್ದಾರೆ.

    ಈಗಾಗಲೇ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಪೊಲೀಸರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ವೃದ್ಧ ಯಾವುದೇ ಎಚ್ಚರಿಕೆಗೂ ಮುಲಾಜು ನೀಡದೆ ಈಜಾಡಿದ್ದಾರೆ. ಬೆಳಗ್ಗೆ ಅಷ್ಟೇ ಇದೇ ಸ್ಥಳದಲ್ಲಿ ಇಬ್ಬರು ಯುವಕರು ಸೆಲ್ಫಿ ತೆಗೆದುಕೊಳ್ಳಲು ರೈಲ್ವೇ ಸೇತುವೆ ನಿಷೇಧಿತ ಪ್ರದೇಶಕ್ಕೆ ತೆರಳಿದ್ದರು. ಈ ಕುರಿತು ಸಹ ಮುನ್ನೇಚ್ಚರಿಕೆ ನೀಡಲಾಗಿತ್ತು.

    ಕಳೆದ ಕೆಲ ದಿನಗಳ ಹಿಂದೆ ನದಿಗೆ ನೀರು ಬಿಟ್ಟಿದ ವೇಳೆಯೂ ಕಪಿಲಾ ನದಿಯಲ್ಲಿ ಈಜಾಲು ತೆರಳಿದ್ದ ವೇಳೆ ಯುವನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಪಿಲಾ ನದಿಯಲ್ಲಿ 3 ಮೂವರು ಯುವಕು ನೀರು ಪಾಲಾಗಿದ್ದರು ಈ ಘಟನೆ ಮಾಸುವ ಮುನ್ನವೇ ಯುವಕರು ದುಸ್ಸಾಹಸ ತೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

    ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

    ಚಿಕ್ಕಮಗಳೂರು: ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದಿದ್ದ ಯುವಕನ ಮೃತದೇಹವು 15 ದಿನಗಳ ನಂತರ ಜಿಲ್ಲೆಯ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.

    ಜುಲೈ 26 ರಂದು ಮಂಗಳೂರಿನ ಟೆಕ್ಕಿ ಕಿರಣ್ ಕೋಟ್ಯಾನ್ ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಹೋಗಿದ್ದರು. ಕೊಚ್ಚಿಹೋಗಿದ್ದ ಕಿರಣ್ ಮೃತದೇಹ 15 ದಿನಗಳ ಬಳಿಕ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯ ನೀರಿನ ಹರಿಯು ಹೆಚ್ಚಾಗಿದ್ದರಿಂದ ಮೃತದೇಹ ತೇಲಿ ಬಂದಿದೆ.

    ಕಿರಣ್ ಕೋಟ್ಯಾನ್ ಮೂಲತಃ ಮಂಗಳೂರಿನ ತುಂಬೆ ಗ್ರಾಮದವರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕಳೆದ ಜುಲೈ 26ರಂದು ತಮ್ಮ 13 ಮಂದಿ ಸ್ನೇಹಿತರ ತಂಡದೊಂದಿಗೆ ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅಂಬುತೀರ್ಥದ ಬಳಿ ಬಂಡೆ ಮೇಲಿಂದ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದರು. ಕೂಡಲೇ ಸ್ನೇಹಿತರು ಹುಡುಕಾಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಎನ್.ಡಿ.ಆರ್.ಎಫ್ ರಕ್ಷಣಾ ತಂಡ ಕಿರಣ್ ಗಾಗಿ ವ್ಯಾಪಕ ಶೋಧ ಕೈಗೊಂಡಿತ್ತು. ಆದರೆ ಭದ್ರಾ ನದಿಯಲ್ಲಿ ನೀರಿನ ರಭಸ ಜಾಸ್ತಿಯಾಗಿದ್ದರಿಂದ ಇತ್ತೀಚೆಗೆ ರಕ್ಷಣಾ ಕಾರ್ಯಚರಣೆಯನ್ನು ಕೈಬಿಟ್ಟಿತ್ತು. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು

    ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು

    ಹುಬ್ಬಳ್ಳಿ: ಹಾಡಹಗಲೇ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ವೆಂಕಟೇಶ್ವರ ಕಾಲನಿಯಲ್ಲಿ ನಡೆದಿದೆ.

    ಸತೀಶ್ ದಲಬಂಜನ್ (32) ಎಂಬಾತನಿಗೆ ಯುವಕರ ಗುಂಪೊಂದು ಚಾಕುವಿನಿಂದ ಇರಿದ ಪರಿಣಾಮ ಆತನ ಹೊಟ್ಟೆ ಹಾಗೂ ಕೈಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಖೇಶ ಕುಮಾರ್ ಚೌದ್ರಿ ಹಾಗೂ ಆತನ ಸಹಚರರು ಚಾಕು ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣದ ಹಿಂದೆ ಲವ್ ಕಹಾನಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

     

  • ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

    ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

    ಚಿಕ್ಕಮಗಳೂರು: ನೀರಿನ ಮಧ್ಯೆ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದ ಯುವಕನ ಮೃತದೇಹ 11 ದಿನಗಳಾದರೂ ಪತ್ತೆಯಾಗಿಲ್ಲ.

    ಕಿರಣ್ ನದಿಯಲ್ಲಿ ಕೊಚ್ಚಿ ಹೋಗಿ 9 ದಿನಗಳ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ತಂಡ ಬಂದು ಯುವಕನಿಗಾಗಿ ಹುಡುಕಾಟ ನಡೆಸುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸಾ ಸಮೀಪದ ಅಂಬುತೀರ್ಥ ಜಲಪಾತಕ್ಕೆ ಜುಲೈ 26ರಂದು ಮಂಗಳೂರು ಸಮೀಪದ ತುಂಬೆ ನಿವಾಸಿ ಎಂಜಿನಿಯರ್ ಕಿರಣ್ ಕೊಟ್ಯಾನ್ ತನ್ನ 12 ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದನು. ಆಗ ಅಂಬುತೀರ್ಥದ ಜಲಪಾತದ ಬಳಿ ಬಂಡೆ ಮೇಲೆ ಸೆಲ್ಫಿ ತೆಗೆದು ಕೊಳ್ಳುವಾಗ ಕಾಲು ಜಾರಿಗೆ ನದಿಗೆ ಬಿದ್ದು ಕೊಚ್ಚಿ ಹೋಗಿದ್ದನು.

    ಪೊಲೀಸರು, ಸ್ಥಳೀಯರು ಹಾಗೂ ಸಂಬಂಧಿಕರು ಕಿರಣ್ ಮೃತದೇಹಕ್ಕಾಗಿ ಶೋಧ ನಡೆಸಿದ್ದರು ಸಿಕ್ಕಿರಲಿಲ್ಲ. ಕಳೆದ 11 ದಿನಗಳಿಂದಲೂ ಸ್ಥಳೀಯರು ಹಾಗೂ ಪೊಲೀಸರು ನದಿಯ ದಡದಲ್ಲಿ ಮೃತದೇಹ ಸಿಲುಕಿರಬಹುದೆಂದು ಶೋಧ ನಡೆಸುತ್ತಿದ್ದರು. ಆದರೆ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ನಂತರ ಕಿರಣ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಸಂಬಂಧಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಶನಿವಾರ ಎನ್‍ಡಿಆರ್ ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ನದಿಗೆ ಇಳಿದು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದೆ. ಆದರೆ ನೀರಿನ ರಭಸ ಕೂಡ ಅಷ್ಟೇ ವೇಗವಾಗಿದೆ. ಆದರೂ ಎನ್‍ಡಿಆರ್ ಎಫ್ ತಂಡ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಬಸ್ತಿಮಠ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಗಲೂ ಎನ್‍ಡಿಆರ್ ಎಫ್ ತಂಡ ನಾಲ್ಕು ದಿನ ಮೃತದೇಹಕ್ಕಾಗಿ ಶೋಧ ನಡೆಸಿ ನೀರಿನ ವೇಗ ಕಂಡು ವಾಪಸ್ಸಾಗಿತ್ತು.

  • ಕಾರು ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ಕಾರು ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ತುಮಕೂರು: ಹಳೆದ್ವೇಷದ ಹಿನ್ನೆಲೆಯಲ್ಲಿ ಕಾರು ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ತುರುವೆಕೆರೆ ತಾಲೂಕಿನ ಮಾಯಸಂದ್ರ ಬಳಿ ನಡೆದಿದೆ.

    ಮಾಯಸಂದ್ರ ನಿವಾಸಿ ಸಚಿನ್(30) ಹಲ್ಲೆಗೊಳಗಾದ ದಲಿತ ಯುವಕ. ಕಳೆದ ರಾತ್ರಿ ಸಚಿನ್ ತನ್ನ ಕಾರಿನಲ್ಲಿ ಮನೆಗೆ ಹಿಂದಿರುಗುವಾಗ ಎರಡು ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಸಚಿನ್ ಗಂಭೀರ ಗಾಯಗೊಂಡಿದ್ದಾರೆ.

    ಗಾಯಗೊಂಡಿದ್ದ ಸಚಿನ್‍ನನ್ನು ತುರುವೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

    ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

    ದಾವಣಗೆರೆ: ಗಾಂಧಿನಗರದ ಚೌಡೇಶ್ವರಿ ನಗರದಲ್ಲಿ ಪೋಷಕರು ತಮ್ಮ ಮಾನಸಿಕ ಅಸ್ವಸ್ಥ ಮಗನನ್ನು ಪ್ರಾಣಿಯಂತೆ ಕಟ್ಟಿ ಹಾಕಿದ ವಿಚಾರ ಬೆಳಕಿಗೆ ಬಂದಿದೆ.

    ಪೋಷಕರಾದ ಉಚ್ಚಂಗಪ್ಪ, ರೇಣುಕಮ್ಮ ತಮ್ಮ ಮಗನಾದ ರಘು(18)ವನ್ನು ಸರಪಳಿಯಿಂದ ಕಟ್ಟಿಹಾಕಿದ್ದಾರೆ. ರಘು ಮಾನಸಿಕ ಅಸ್ವಸ್ಥನಾಗಿದ್ದು, ಆತ ಸಾರ್ವಜನಿಕರಿಗೆ ಕಲ್ಲಿನಿಂದ ಹೊಡೆಯುತ್ತಿದ್ದ. ಅಷ್ಟೇ ಅಲ್ಲದೇ ಜನರ ಮೇಲೆ ಹಲ್ಲೆ ಮಾಡುತ್ತಿದ್ದ.

    ಈ ವರ್ತನೆಯಿಂದಾಗಿ ಬೇಸತ್ತ ಪೋಷಕರು ಸುಮಾರು 5 ತಿಂಗಳಿದಲ್ಲೂ ರಘುವಿನ ಕುತ್ತಿಗೆಗೆ ಸರಪಳಿಯನ್ನು ಸುತ್ತಿ ಕಟ್ಟಿಹಾಕಿದ್ದು, ಈಗ ಬೆಳಕಿಗೆ ಬಂದಿದೆ. ರಘುವಿನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈತನನ್ನು ಅವರ ಅಜ್ಜಿ ನೋಡಿಕೊಳ್ಳುತ್ತಿದ್ದರು.

  • ದೇಶ ಕಾಯೋ ಸೈನಿಕರ ಭೇಟಿಗಾಗಿ ಯುವಕನ ಏಕಾಂಗಿ ಪ್ರವಾಸ

    ದೇಶ ಕಾಯೋ ಸೈನಿಕರ ಭೇಟಿಗಾಗಿ ಯುವಕನ ಏಕಾಂಗಿ ಪ್ರವಾಸ

    ದಾವಣಗೆರೆ: ಹರಪ್ಪನಹಳ್ಳಿ ತಾಲೂಕಿನ ಯುವಕನೊಬ್ಬ ದೇಶ ಕಾಯೋ ಸೈನಿಕರನ್ನ ಭೇಟಿಯಾಗಬೇಕೆಂದು ಸಿಯಾಚಿನ್ ವರೆಗೂ ಏಕಾಂಗಿ ಪ್ರವಾಸ ಕೈಗೊಂಡಿದ್ದಾರೆ.

    ಬೈಕ್ ಗೆ ಭಾರತದ ಧ್ವಜ ಕಟ್ಟಿಕೊಂಡು ಪ್ರವಾಸಕ್ಕೆ ಹೊರಟಿರೋ ಯುವಕನ ಹೆಸರು ರಾಹುಲ್. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎಂ.ಟೆಕ್ ಪದವೀಧರರಾಗಿದ್ದಾರೆ. ದೇಶ ಕಾಯೋ ಸೈನಿಕರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬುವುದಕ್ಕೆ ಈ ಯುವಕ ಓದಿನ ಬಳಿಕ ದೇಶ ಸುತ್ತೋಕೆ ಶುರು ಮಾಡಿಕೊಂಡಿದ್ದಾರೆ.

    ಹರಪನಹಳ್ಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರವಾಸ ಕೈಗೊಂಡ ಯುವಕ ಹುಬ್ಬಳ್ಳಿ, ಮುಂಬೈ, ಅಹಮದಾಬಾದ್, ರಾಜಸ್ಥಾನ, ಗುಜರಾತ್, ಅಮೃತಸರ, ದೆಹಲಿ ಮೂಲಕ ಸಿಯಾಚಿನ್ ತಲುಪಲಿದ್ದಾರೆ. 8,200 ಕಿಲೋಮಿಟರ್ ಪ್ರವಾಸವನ್ನು 35-40 ದಿನಗಳಲ್ಲಿ ಪೂರೈಸಲಿದ್ದು, ರಾಹುಲ್ ಸೈನಿಕ ಜಾಗೃತಿ ಮೂಡಿಸಿದ್ದಾರೆ.

    ರಾಹುಲ್ 2017 ರಲ್ಲೂ ಆಲ್ ಇಂಡಿಯಾ ಪ್ರವಾಸ ಕೈಗೊಂಡು 1962 ರ ಯುದ್ಧಭೂಮಿಗೆ ತೆರಳಿದ್ದರು. ಚೀನಾ-ಭಾರತದ ಗಡಿ ಪ್ರಥಮ ಬಾರಿಗೆ ತೆರಳಿ ಅಲ್ಲಿನ ಭಾರತೀಯ ಯೋಧರಿಗೆ ಧನ್ಯವಾದಗಳನ್ನ ಅರ್ಪಿಸಿದ್ದರು. ಅಲ್ಲಿಂದ ಮೇಘಾಲಯಕ್ಕೆ ತೆರಳಿ ಬಾಂಗ್ಲಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಒಂದು ದಿನ ಕಾಲ ಕಳೆದಿದ್ದರು.

  • ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಬೀದರ್: ಯುವತಿಯನ್ನು ಚುಡಾಯಿಸಿದಕ್ಕೆ ಕಾಮುಕನಿಗೆ ಮಹಿಳೆ ಮತ್ತು ಯುವತಿಯಿಂದ ಸಖತ್ ಗೂಸ ನೀಡಿದ ಘಟನೆ ಜಿಲ್ಲೆಯ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಯುವಕನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ವೈರಲ್ ಫುಲ್ ವೈರಲ್ ಆಗಿದ್ದು, ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ. ಮಂಗಳವಾರ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ಯುವತಿಯರು ನಿಂತಿದ್ದರು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದ ಕಾಮುಕ ಯುವತಿಯರನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ.

    ಅದೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಯುವತಿಯನ್ನು ಚುಡಾಯಿಸುತ್ತಿದ್ದನ್ನು ನೋಡಿದ್ದು, ಕಾಮುಕನ ಅಂಗಿ ಹಿಡಿದು ಚಪ್ಪಲಿ ಸೇವೆ ಮಾಡಿದ್ದಾರೆ. ಮಹಿಳೆ ಯುವಕನಿಗೆ ಥಳಿಸುತ್ತಿರುವುನ್ನು ಬಸ್ ನಿಲ್ದಾಣದಲ್ಲಿದ್ದ ಮಹಿಳೆಯರು ಗಮನಿಸಿದ್ದು, ಅವರು ಸಹ ಬಂದು ಕಾಮುಕನಿಗೆ ಸಖತ್ ಆಗಿಯೇ ಥಳಿಸಿದ್ದಾರೆ.

  • ಕೆರೆಯಲ್ಲಿ ಯುವಕನ ಶವ ಪತ್ತೆ – ಕೊಲೆ ಶಂಕೆ!

    ಕೆರೆಯಲ್ಲಿ ಯುವಕನ ಶವ ಪತ್ತೆ – ಕೊಲೆ ಶಂಕೆ!

    ಹಾಸನ: ಕೆರೆಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹೊಸಹಳ್ಳಿ ಬಂಡೆ ಬಳಿ ನಡೆದಿದೆ.

    ದಿನೇಶ್(28) ಪತ್ತೆಯಾದ ಯುವಕ ಎಂದು ತಿಳಿದು ಬಂದಿದೆ. ಈತನು ಮೂಲತಃ ಆಲೂರು ತಾಲೂಕಿನ ಗೇಕರವಳ್ಳಿಯ ನಿವಾಸಿಯಾಗಿದ್ದಾನೆ. ಸೋಮವಾರ ಆಲೂರು ತಾಲೂಕಿನ ಹೊಸಹಳ್ಳಿ ಬಂಡೆ ಬಳಿಯಿರುವ ಕಲ್ಲುಕ್ವಾರಿಯ ಕೆರೆಯಲ್ಲಿ ದಿನೇಶ್‍ನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

    ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈತನ ವಿರುದ್ಧ ಚಿನ್ನ ಬೆಳ್ಳಿ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

    ದಿನೇಶ್‍ನ ಸಾವು ಆಕಸ್ಮಿಕವೋ ಅಥವಾ ಹಳೆಯ ವೈಷಮ್ಯಕ್ಕೆ ಯಾರಾದರೂ ಕೊಲೆ ಮಾಡಿ ಕೆರೆಯಲ್ಲಿ ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಆಲೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಪುಂಡ ಯುವಕನಿಗೆ ಮಹಿಳಾ ಸಿಬ್ಬಂದಿಯಿಂದ ಬಿತ್ತು ಸಖತ್ ಗೂಸಾ

    ಪುಂಡ ಯುವಕನಿಗೆ ಮಹಿಳಾ ಸಿಬ್ಬಂದಿಯಿಂದ ಬಿತ್ತು ಸಖತ್ ಗೂಸಾ

    ಮೈಸೂರು: ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪುಂಡ ಯುವಕನಿಗೆ ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿ ನೀಡಿದ ಸಖತ್ ಗೂಸಾದ ವಿಡಿಯೋ ಈಗ ವೈರಲ್ ಆಗಿದೆ.

    ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಜಲಪಾತದಲ್ಲಿ ಬಳಿ ಈ ಘಟನೆ ನಡೆದಿದೆ. ಜಲಪಾತದ ಬಳಿ ಅರಣ್ಯ ಇಲಾಖೆಯಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಸಿಬ್ಬಂದಿ ತನ್ನ ಜೊತೆ ಅನುಚಿತವಾಗಿ ವರ್ತಿಸಿದ ಸಾಲೇಕೊಪ್ಪಲು ಗ್ರಾಮದ ಸುನೀಲ್ ಗೆ ಸರಿಯಾಗಿ ಏಟು ನೀಡಿದ್ದಾರೆ.

    ಜಲಪಾತದ ಬಳಿ ಸುನೀಲ್ ತನ್ನ ಸ್ನೇಹಿತನ ಜೊತೆ ಗಾಂಜಾ ಹೊಡೆದು ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದನು. ಇದನ್ನು ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಆಗ ಸುನೀಲ್, ಮಹಿಳಾ ಸಿಬ್ಬಂದಿ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಮಹಿಳಾ ಸಿಬ್ಬಂದಿ ಸುನೀಲ್ ಕಪಾಳಕ್ಕೆ ಎರಡು ಬಿಗಿದು ಕೆ.ಆರ್ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.