Tag: young man

  • ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದ ಯುವಕನಿಗೆ ಸಿಇಓ ಫುಲ್ ಕ್ಲಾಸ್

    ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದ ಯುವಕನಿಗೆ ಸಿಇಓ ಫುಲ್ ಕ್ಲಾಸ್

    ಯಾದಗಿರಿ: ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ಅವರು ಮನೆ ಮುಂದೆ ಶೌಚಾಲಯ ಕಟ್ಟಿಸಿಕೊಳ್ಳದೆ ಬಯಲು ಶೌಚಾಲಯಕ್ಕೆ ತೆರಳುತ್ತಿದ್ದ ಯುವಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ಬೆಳಗ್ಗೆ ಸಿಇಓ ಕವಿತಾ ಮನ್ನಿಕೇರಿ ಸಭೆಯ ನಿಮಿತ್ತ ಯಾದಗಿರಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದರು. ಇದೇ ಮಾರ್ಗದ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಯುವಕನೊಬ್ಬ ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದನ್ನು ಕಂಡಿದ್ದಾರೆ. ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿ ಯುವಕನನ್ನು ನಿಲ್ಲಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿದ್ಯಾವಂತರಾದ ನೀವೇ ಹೀಗೆ ಬಯಲಲ್ಲಿ ಶೌಚಕ್ಕೆ ಹೋಗುವುದು ಎಷ್ಟು ಸರಿ? ಬೆಲೆ ಬಾಳುವ ಮೊಬೈಲ್‍ಗಳನ್ನು ಜೇಬಿನಲ್ಲಿರಿಸಿಕೊಳ್ಳುತ್ತೀರಿ. ನಿಮಗೆ ಶೌಚಾಲಯವನ್ನು ಕಟ್ಟಿಸಿಕೊಳ್ಳೋಕೆ ಆಗುವುದಿಲ್ಲವೇ ಎಂದು ಯುವಕನಿಗೆ ಪ್ರಶ್ನಿಸಿದರು. ಅಲ್ಲದೆ ಕೆಂಡಾಮಂಡಲರಾಗಿದ್ದ ಅವರು ಮೊದಲು ಶೌಚಾಲಯ ಕಟ್ಟಿ ಬಳಿಕ ಮನೆ ನಿರ್ಮಾಣ ಮಾಡೋದನ್ನು ಕಲಿಯಿರಿ ಎಂದು ಕಿಡಿಕಾರಿದ್ರು.

    ಸರ್ಕಾರ ಬಯಲು ಮುಕ್ತ ರಾಜ್ಯ ಮಾಡಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಜನರು ಮಾತ್ರ ಇನ್ನು ಜಾಗೃತಿಗೊಂಡು ಶೌಚಾಲಯ ಕಟ್ಟಿಸಿಕೊಳ್ಳದೇ ಬಯಲು ಪ್ರದೇಶಕ್ಕೆ ಹೋಗುವುದು ಎಷ್ಟು ಸರಿ. ಸಿಇಓ ಮನ್ನಿಕೇರಿ ಅವರು ಶೌಚಾಲಯದ ಬಗ್ಗೆ ಜನರಿಗೆ ಖಡಕ್ ವಾರ್ನಿಂಗ್ ಕೊಟ್ಟು ಎಚ್ಚರಿಸಿದ್ದಕ್ಕೆ ಇದೀಗ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 50 ಲಕ್ಷದ ವಿಮೆ ಆಸೆಗಾಗಿ ಅಮಾಯಕ ಯುವಕನನ್ನು ಕೊಲೆಗೈದು ಸೀನ್ ಕ್ರಿಯೆಟ್ ಮಾಡ್ದ!

    50 ಲಕ್ಷದ ವಿಮೆ ಆಸೆಗಾಗಿ ಅಮಾಯಕ ಯುವಕನನ್ನು ಕೊಲೆಗೈದು ಸೀನ್ ಕ್ರಿಯೆಟ್ ಮಾಡ್ದ!

    ಹುಬ್ಬಳ್ಳಿ: ಅಪಘಾತ ಪ್ರಕರಣವೊಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. 50 ಲಕ್ಷದ ಜೀವವಿಮೆ ಆಸೆಗಾಗಿ ಅಮಾಯಕ ಯುವಕನೊಬ್ಬನ ಕೊಲೆ ಮಾಡಿರುವ ಆಘಾತಕಾರಿ ಅಂಶ ಪೊಲೀಸ್ ತನಿಖೆ ವೇಳೆ ಹೊರಬಂದಿದೆ.

    ಬುಧವಾರ ರಾತ್ರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ರೇವಡಿ ಹಾಳ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದನೆನ್ನಲಾದ ಸಂಜೀವಕುಮಾರ್ ಬೆಂಗೇರಿ ತನ್ನ ಹೆಸರಿನಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್ ನಲ್ಲಿ ವಿಮೆ ಹೊಂದಿದ್ದನು. ಆದರೆ ಆ ಹಣವನ್ನು ಪಡೆಯಬೇಕು ಎನ್ನುವ ಆಸೆಯಿಂದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಶವದ ಪಕ್ಕದಲ್ಲಿ ತನ್ನ ಬೈಕ್, ಚಪ್ಪಲಿ ಬಿಟ್ಟು ತಾನೇ ಸತ್ತಿರುವುದಾಗೆ ಸೀನ್ ಕ್ರಿಯೇಟ್ ಮಾಡಿದ್ದ. ಈ ಅಪಘಾತದ ಸುದ್ದಿ ಮನೆಯವರಿಗೆ ತಲುಪಿತ್ತು ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು.

    ಪೊಲೀಸರು ಸಹ ಸತ್ತ ವ್ಯಕ್ತಿಯನ್ನು ಸಂಜೀವಕುಮಾರ್ ಬೆಂಗೇರಿ ಎಂದೆ ತಿಳಿದುಕೊಂಡಿದ್ದರು. ಆದರೆ ಸಂಜೀವ್ ಸಹೋದರ ಮಂಜುನಾಥ್ ಬೆಂಗೇರಿ ತನ್ನ ಅಣ್ಣನ ಕೈ ಮೇಲೆ ಶ್ರೀ ರಾಮನ ಹಚ್ಚೆ ಇರುವುದಾಗಿ ಹೇಳಿಕೆ ನೀಡಿದ್ದನು. ಬಳಿಕ ಪೊಲೀಸರು ಶವ ಪರೀಕ್ಷೆ ಮಾಡಿದಾಗ ಕೈ ಮೇಲೆ ಯಾವುದೇ ಹಚ್ಚೆ ಇರಲಿಲ್ಲ. ಅಲ್ಲದೇ ಅದೊಂದು ಮುಸ್ಲಿಂ ವ್ಯಕ್ತಿಯ ಶವ ಎಂಬುದು ಗೊತ್ತಾಗಿದೆ. ಹೀಗಾಗಿ ಇದೊಂದು ಹಣ ಹೊಡೆಯಲು ಆಡಿದ ನಾಟಕ ಎಂಬುದು ಬೆಳಕಿಗೆ ಬಂದಿದೆ.

    ತಕ್ಷಣ ಕಾರ್ಯ ಪ್ರವೃತ್ತರಾದ ಗೋಕುಲ್ ರೋಡ್ ಠಾಣಾ ಪೊಲೀಸರು, ಮಹಾಂತೇಶ ದುಗ್ಗಾಣಿ ಹಾಗೂ ಅಮೀರ್ ಶೇಖ್ ರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಂಜೀವಕುಮಾರ್ ಬೆಂಗೇರಿ ತಲೆ ಮರೆಸಿಕೊಂಡಿದ್ದಾನೆ. ಈ ಘಟನೆ ಇದೇ ಮೊದಲೇ ಅಲ್ಲ ಈ ಹಿಂದೆ ಈ ರೀತಿಯ ಪ್ರಯತ್ನಗಳು ನಡೆದಿತ್ತು ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ಕಲಬುರಗಿ: ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನ ಹಾಗೂ ಮೊಬೈಲ್‍ಗಾಗಿ ಪ್ರಿಯಕರಿಗೆ ಚಾಕು ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ನರೋಣ ಪೊಲೀಸರು ಬಂಧಿಸಿದ್ದಾರೆ.

    ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮನೋಜ್ ಅಲಿಯಾಸ್ ಪ್ರಸಾದ್ ಮಠಪತ್ತಿ ಕೊಲೆಯಾಗಿದ ದುರ್ದೈವಿ. ಕಲಬುರಗಿ ಹೊರವಲಯದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು 23ರಂದು ಘಟನೆ ನಡೆದಿದ್ದು, ಕೃತ್ಯ ಎಸಗಿದ್ದ ಕಡಗಂಚಿ ಗ್ರಾಮದ ಶಾಂತಪ್ಪ ದಂಡಘುಟಿ ಹಾಗೂ ಇನ್ನೋರ್ವ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಗಿದ್ದೇನು?: ಮನೋಜ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ತನ್ನ ಜನ್ಮದಿನ ಇಲ್ಲದಿದ್ದರೂ, ಕೇಂದ್ರಿಯ ವಿಶ್ವವಿದ್ಯಾಲಯದ ಕಟ್ಟಡ ಒಂದರ ಮೇಲೆ ಕೇಕ್ ಕತ್ತರಿಸಿ ಮನೋಜ್ ಸಂಭ್ರಮಿಸಿದ್ದ. ಬಳಿಕ ಕ್ಯಾಂಪಸ್‍ನಲ್ಲಿ ಏಕಾಂತವಾಗಿ ಮನೋಜ್ ತನ್ನ ಪ್ರೇಯಸಿಯ ಜೊತೆಗೆ ಕುಳಿತಿದ್ದ.

    ಕಳ್ಳತನ ಮಾಡಲು ಬಂದಿದ್ದ ಶಾಂತಪ್ಪ ದಂಡಘುಟಿ ಹಾಗೂ ಮತ್ತೋರ್ವ ಯುವಕ ಪ್ರೇಮಿಗಳಿಗೆ ಚಾಕು ತೋರಿಸಿ ಮೊಬೈಲ್ ಹಾಗೂ ಚಿನ್ನದ ಸರ ನೀಡುವಂತೆ ತಿಳಿಸಿದ್ದಾರೆ. ಆದರೆ ಇದಕ್ಕೆ ಹೆದರದ ಮನೋಜ್, ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಶಾಂತಪ್ಪ ಚಾಕು ಬೀಸಿದ ಪರಿಣಾಮ ಮನೋಜ್ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿದೆ. ಮನೋಜ್ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾನೆ ಎಂದು ಮತ್ತೆ ಹೊಟ್ಟೆಗೆ ಚಾಕುನಿಂದ ಇರಿದು ಕೊಲೆ ಮಾಡಿ, ಯುವತಿಯ ಬಳಿ ಇದ್ದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆರೋಪಿಗಳು ಸಿಕ್ಕಿದ್ದು ಹೇಗೆ?:
    ಯುವತಿಯಿಂದ ಕಿತ್ತುಕೊಂಡು ಬಂದಿದ್ದ ಮೊಬೈಲ್ ಅನ್ನು ತಮ್ಮ ಗ್ರಾಮದ ಕಡಗಂಚಿಯ ನಿವಾಸಿ ಲಕ್ಷ್ಮಣ ಎಂಬವರಿಗೆ ಮಾರಾಟ ಮಾಡಿದ್ದಾರೆ. ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಗ್ರಾಮಕ್ಕೆ ಬಂದಿದ್ದ. ಆರೋಪಿಗಳಿಂದ ಕಡಿಮೆ ಬೆಲೆ ಮೊಬೈಲ್ ಪಡೆದಿದ್ದ ಲಕ್ಷ್ಮಣ ಮತ್ತೆ ಪುಣೆಗೆ ಕೆಲಸಕ್ಕೆ ಮರಳಿದ್ದ. ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು, ಮೊಬೈಲ್ ಪುಣೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಲಕ್ಷ್ಮಣನನ್ನು ವಶಕ್ಕೆ ಪಡೆದು, ಕರೆ ತಂದಿದ್ದರು.

    ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನಾವು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ಚಾಕು ತಗುಲಿಸಿದ್ದರಿಂದ ಎಲ್ಲಿ ನಮ್ಮ ಹೆಸರು ಹೇಳುತ್ತಾನೆ ಅಂತಾ ಕೊಲೆ ಮಾಡಿದ್ದೇವೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಈ ಹಿಂದೆ ಕ್ಯಾಂಪಸ್ ನಿರ್ಜನ ಪ್ರದೇಶದಲ್ಲಿ ಸಿಗುತ್ತಿದ್ದ ಪ್ರೇಮಿಗಳನ್ನು ಬೆದರಿಸಿ, ಅವರಿಂದ ಹಣ ದೋಚುತ್ತಿದ್ದೇವು ಅಂತಾ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ವಿಶ್ವವಿದ್ಯಾಲಯದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದಿರುದನ್ನು ಕೆಲ ದುಷ್ಕರ್ಮಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಈ ಹಿಂದೆ ಕ್ಯಾಂಪಸ್‍ನಲ್ಲಿ ಕುರಿ ಮೇಯಿಸುವ ನೇಪದಲ್ಲಿ ಬಂದು, ಕಳ್ಳತನ ಮಾಡುತ್ತಿದ್ದರು. ತರಗತಿಗಳು ಮುಗಿದ ಮೇಲೆ ಕ್ಯಾಂಪಸ್‍ನಲ್ಲಿ ಏಕಾಂಗಿಯಾಗಿ ಸಿಗುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ, ಹಣ ದೋಚುತ್ತಿದ್ದರು ಎನ್ನವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತಾಡ್ತಿದ್ದ ಯುವಕನಿಗೆ ಬಿತ್ತು ಚಪ್ಪಲಿ ಏಟು!

    ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತಾಡ್ತಿದ್ದ ಯುವಕನಿಗೆ ಬಿತ್ತು ಚಪ್ಪಲಿ ಏಟು!

    ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಥಳಿಸಿ, ಚಪ್ಪಲಿಯಿಂದ ಹೊಡೆದ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

    ವಾಜರಹಳ್ಳಿಗೆ ಇಂದು ಬೆಳಗ್ಗೆ ಬಂದ ಯುವಕ, ಮಹಿಳೆಗೆ ಕರೆ ಮಾಡಿ ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಸ್ಥಳೀಯರು ಹಾಗೂ ಸಂಬಂಧಿಕರೊಂದಿಗೆ ಬಂದ ಮಹಿಳೆ ಯುವಕನನ್ನು ಹಿಡಿದು ಥಳಿಸಿದ್ದಾರೆ. ಯುವಕನ ವರ್ತನೆಯಿಂದ ಬೇಸತ್ತಿದ್ದ ಮಹಿಳೆ ಒದ್ದು, ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದಾರೆ.

    ನಿನಗೆ ನಂಬರ್ ಹೇಗೆ ಸಿಕ್ಕಿದೆ? ಅಂತಾ ಕೇಳಿದ್ದಕ್ಕೆ, ಸಾರ್ವಜನಿಕ ಶೌಚಾಲಯದಲ್ಲಿ ಈ ನಂಬರ್ ಬರೆದಿದ್ದರು. ಅದನ್ನು ನಾನು ಪಡೆದು, ಕರೆ ಮಾಡಿದೆ ಎಂದು ಯುವಕ ಹೇಳಿದ್ದಾನೆ. ಕಳೆದ ಒಂದು ವಾರದಿಂದ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದ. ಮಧ್ಯರಾತ್ರಿ ಕೂಡ ಕರೆ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

    ಇತ್ತ ಥಳಿಸಿಕೊಂಡ ಯುವಕ, ಮತ್ತೊಮ್ಮೆ ಇಂತಹ ತಪ್ಪು ಮಾಡಲ್ಲ, ದಯವಿಟ್ಟು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾನೆ. ಸ್ಥಳದಲ್ಲಿ ಸೇರಿದ್ದ ಜನ ಅವನನ್ನು ಕೈ ಬಿಡುತ್ತಿದ್ದಂತೆ ಪರಾರಿಯಾಗಿದ್ದಾನೆ.

    ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯರ ಎಡವಟ್ಟಿಗೆ ಯುವಕ ಬಲಿ

    ವೈದ್ಯರ ಎಡವಟ್ಟಿಗೆ ಯುವಕ ಬಲಿ

    ಹಾವೇರಿ: ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆಗೆ ಎಂದು ಬಂದಿದ್ದ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಶಿಗ್ಗಾಂವಿಯ ಪಟ್ಟಣದಲ್ಲಿ ನಡೆದಿದೆ.

    ಸದ್ದಾಂ ಹರಕುಣಿ(25) ಮೃತ ಯುವಕ. ಮೃತ ಸದ್ದಾಂ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ನಿವಾಸಿ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿದ್ದ ಸದ್ದಾಂಗೆ ಕಾಲಲ್ಲಿ ರಾಡ್ ಹಾಕಲಾಗಿತ್ತು. ಸೋಮವಾರ ಸಂಜೆ ಶಿಗ್ಗಾಂವಿ ಪಟ್ಟಣದ ರಾಣಿ ಆಸ್ಪತ್ರೆಗೆ ಸದ್ದಾಂ ರಾಡ್ ತೆಗೆಸಲು ಬಂದಿದ್ದ ಎನ್ನಲಾಗಿದೆ.

    ರಾಣಿ ಆಸ್ಪತ್ರೆಯಿಂದ ಸದ್ದಾಂನನ್ನ ಪಟ್ಟಣದ ತೋಟಗೇರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಸದ್ದಾಂ ಅಷ್ಟೆರಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೇಳಿದ್ದಾರೆ. ನಂತರ ಅಲ್ಲಿಂದ ಮೃತದೇಹವನ್ನ ತೋಟಗೇರ ಆಸ್ಪತ್ರೆಯಿಂದ ಕಾರಡಗಿ ಗ್ರಾಮಕ್ಕೆ ಅಂಬುಲೆನ್ಸ್ ಮೂಲಕ ಕಳಿಸಲಾಗಿತ್ತು.

    ಇತ್ತ ಸದ್ದಾಂ ಮೃತದೇಹ ಕಂಡ ಸಂಬಂಧಿಕರು ಮರಳಿ ಮೃತದೇಹವನ್ನ ಶಿಗ್ಗಾಂವಿ ಪೊಲೀಸ್ ಠಾಣೆ ಬಳಿ ತಂದು ಘಟನೆಗೆ ರಾಣಿ ಅಥವಾ ತೋಟಗೇರ ಆಸ್ಪತ್ರೆ ವೈದ್ಯರು ಕಾರಣ ಅಂತ ಮೃತನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕ ಸಾವಿಗೆ ಶಿಗ್ಗಾಂವಿಯ ರಾಣಿಯ ಆಸ್ಪತ್ರೆಯ ವೈದ್ಯರು ಕಾರಣ ಎಂದು ತಿಳಿದು ಅವರ ವಿರುದ್ಧ ಮೃತ ಸದ್ದಾಂ ಸಂಬಂಧಿಕರು ದೂರು ದಾಖಲು ಮಾಡಿದ್ದಾರೆ.

    ಈ ಕುರಿತು ಸೂಕ್ತವಾದ ತನಿಖೆ ಮಾಡಿ ತಪ್ಪಿದಸ್ತರಿಗೆ ಶಿಕ್ಷೆಯಾಗಬೇಕು. ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೀಟಿ ಹಣ ತರಲು ಹೋಗಿದ್ದ ಯುವಕ ಶವವಾಗಿ ಪತ್ತೆ!

    ಚೀಟಿ ಹಣ ತರಲು ಹೋಗಿದ್ದ ಯುವಕ ಶವವಾಗಿ ಪತ್ತೆ!

    ಕೋಲಾರ: ಚೀಟಿ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ದೊಡ್ಡ ಕೆರೆಯಲ್ಲಿ ನಡೆದಿದೆ.

    ಮಾಲೂರಿನ ಇಂದಿರಾ ನಗರದ ನಿವಾಸಿ ಪ್ರವೀಣ್ (25) ಕೊಲೆಯಾದ ಯುವಕ. ಮೃತ ಪ್ರವೀಣ್ ಬುಧವಾರ ಕೋಲಾರ ತಾಲೂಕಿನ ಉಮುಲು ಗ್ರಾಮಕ್ಕೆ ಚೀಟಿ ಹಣವನ್ನು ಪಡೆದುಕೊಂಡು ಬರುವುದಾಗಿ ಮನೆಯಿಂದ ಹೊರಟಿದ್ದ, ಆದರೆ ಇಂದು ಬೆಳಗ್ಗೆ ಮಾಲೂರಿನ ದೊಡ್ಡ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ದುಷ್ಕರ್ಮಿಗಳು ಪ್ರವೀಣ್‍ನ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಆತನ ಶವವನ್ನು ಕೆರೆಗೆ ಬಿಸಾಡಿ ಹೋಗಿದ್ದಾರೆ. ಇಂದು ಬೆಳಗ್ಗೆ ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಪ್ರವೀಣ್ ಕಳೆದ 3 ತಿಂಗಳ ಹಿಂದೆಯಷ್ಟೇ ನಳಿನಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಹಣಕಾಸಿನ ವಿಚಾರವಾಗಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲಗಿದ್ದಾಗ ಮನೆಗೆ ನುಗ್ಗಿ ಕತ್ತಿಯಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

    ಮಲಗಿದ್ದಾಗ ಮನೆಗೆ ನುಗ್ಗಿ ಕತ್ತಿಯಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

    ಹಾಸನ: ಮನೆಯಲ್ಲಿ ಮಲಗಿದ್ದ ಯುವಕನೊಬ್ಬನನ್ನು ಹೊರಕ್ಕೆ ಎಳೆದು ತಂದು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಬಂಬೂ ಬಜಾರ್ ಪ್ರದೇಶದಲ್ಲಿ ನಡೆದಿದೆ.

    ಬಂಬೂ ಬಜಾರ್ ನಿವಾಸಿಯಾದ ಕಿರಣ್ (35) ಕೊಲೆಯಾದ ಯುವಕ. ಮಂಗಳವಾರ ಮಧ್ಯಾಹ್ನ ಕ್ಷುಲ್ಲಕ ವಿಚಾರಕ್ಕೆ ಕಿರಣ್ ಸ್ಥಳೀಯರೊಂದಿಗೆ ಜಗಳವಾಡಿಕೊಂಡಿದ್ದನು. ಇದೇ ವಿಚಾರಕ್ಕೆ ಕೋಪಗೊಂಡ ಹಂತಕರು ತಡರಾತ್ರಿ ಮನೆಗೆ ನುಗ್ಗಿ, ಮನೆಯಲ್ಲಿ ಮಲಗಿದ್ದ ಕಿರಣ್ ಮೇಲೆ ಎರಗಿ ಮನಬಂದಂತೆ ಹಲ್ಲೆ ನಡೆಸಿ ಬಳಿಕ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಿರಣ್ ಕ್ಷುಲ್ಲಕ ವಿಚಾರಕ್ಕೆ ಪದೇ ಪದೇ ಜನರಿಗೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಕಿರಣ್ ಕಾಟ ತಾಳಲಾರದೇ ಗೊತ್ತಿರುವವರೇ ಕೊಲೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯರಾದ ಶ್ರೀನಿವಾಸ್, ರವಿ ಹಾಗೂ ನಾಗರಾಜ್ ಸೇರಿದಂತೆ ಹಲವರಿಂದ ಕೃತ್ಯ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣಪನನ್ನು ಕಾಯುತ್ತಿದ್ದ ಯುವಕ ವಿದ್ಯುತ್ ಶಾಕ್‍ಗೆ ಬಲಿ!

    ಗಣಪನನ್ನು ಕಾಯುತ್ತಿದ್ದ ಯುವಕ ವಿದ್ಯುತ್ ಶಾಕ್‍ಗೆ ಬಲಿ!

    ರಾಮನಗರ: ಬೀದಿಯಲ್ಲಿ ಕೂರಿಸಿದ್ದ ಗಣಪನನ್ನು ಕಾಯುತಿದ್ದ ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಧಾರೂಣ ಘಟನೆ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದಿದೆ.

    ಚೇತನ್ ಕುಮಾರ್ (16) ಮೃತ ದುರ್ದೈವಿ. ಜಾಲಮಂಗಲದಲ್ಲಿ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಚೇತನ್ ಸೇರಿದಂತೆ ನಾಲ್ಕು ಮಂದಿ ಕಾವಲು ಕಾಯುತ್ತಿದ್ದರು. ಶನಿವಾರವೂ ಸಹ ಕಾವಲು ಕಾಯುತ್ತಿದ್ದಾಗ, ಮೂತ್ರ ವಿಸರ್ಜನೆಗೆಂದು ಚೇತನ್ ತೆರಳಿದ್ದನು. ಈ ವೇಳೆ ಬೀದಿ ಲೈಟ್‍ಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗಲು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವತಿಯೊಂದಿಗೆ ಬಂದು ಪೊಲೀಸರ ಮೇಲೆಯೇ ಕಾರ್ ಚಲಾಯಿಸಿದ ಪುಂಡ ಯುವಕ

    ಯುವತಿಯೊಂದಿಗೆ ಬಂದು ಪೊಲೀಸರ ಮೇಲೆಯೇ ಕಾರ್ ಚಲಾಯಿಸಿದ ಪುಂಡ ಯುವಕ

    ಮಂಗಳೂರು: ಕೇರಳದ ಯುವಕನೊಬ್ಬ ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಪರಿಣಾಮ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿರುವ ಘಟನೆ ನಗರದ ಪಂಪ್ ವೆಲ್ ಸರ್ಕಲ್ ಬಳಿ ನಡೆದಿದೆ.

    ಮಹಮ್ಮದ್ ಕುಂಞ(18) ಬಂಧಿತ ಆರೋಪಿಯಾಗಿದ್ದು, ಮೂಲತಃ ಕಾಸರಗೋಡು ನಿವಾಸಿ ಎಂಬ ಮಾಹಿತಿ ಲಭಿಸಿದೆ. ಕೇರಳದಿಂದ ಕಾರಿನಲ್ಲಿ ಯುವತಿಯೊಂದಿಗೆ ಆಗಮಿಸಿದ ಮಹಮ್ಮದ್ ಪೊಲೀಸ್ ಚೆಕ್ ಪೋಸ್ಟ್ ಬಳಿ ಪರಿಶೀಲನೆ ನಡೆಸಲು ಮುಂದಾದ ವೇಳೆ ಪೊಲೀಸರ ಮೇಲೆಯೇ ಕಾರು ಚಲಾಯಿಸಿದ್ದಾನೆ.

    ಮಹಮ್ಮದ್ ಕಾರು ಪರಿಶೀಲನೆ ವೇಳೆ ಪರಾರಿಯಾಗಲು ವೇಗವಾಗಿ ಕಾರು ಚಲಾಯಿಸಿದ್ದರಿಂದ ಪೊಲೀಸ್ ಪೇದೆಗಳಾದ ಮಾರಪ್ಪ, ಕೆ.ಬಿ.ಸ ಗಜೇಂದ್ರ ಗಾಯಗೊಂಡಿದ್ದಾರೆ. ಇದರ ನಡುವೆಯೂ ಪೊಲೀಸರು ಮಹಮ್ಮದ್ ಕಾರನ್ನು ತಡೆಯಲು ಯಶಸ್ವಿಯಾಗಿದ್ದು, ಸದ್ಯ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಪೊಲೀಸರು ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಮಂಗಳೂರು ಭಾಗದಲ್ಲಿ ಕೇರಳ ಯುವಕರು ಕಾರಿನಲ್ಲಿ ಯುವತಿರೊಂದಿಗೆ ಆಗಮಿಸಿ ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹೆಚ್ಚಾಗಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು. ಪೊಲೀಸ್ ಇಲಾಖೆಯೂ ಸಹ ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಹೆಚ್ಚಿನ ಕ್ರಮಗೊಂಡಿದ್ದು, ಕೇರಳದಿಂದ ಆಗಮಿಸುವ ವಾಹನ ಮೇಲೆ ನಿಗಾ ವಹಿಸಿದೆ. ಘಟನೆಯ ಕುರಿತು ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂದೆ ನಗ್ತಾ ಇದ್ಳು, ಹಿಂದೆ ಬೆನ್ನಿಗೆ ಚೂರಿ ಹಾಕಿದ್ಳು-ಫೇಸ್ಬುಕ್ ಲೈವ್ ಮಾಡಿ ಯುವಕ ಆತ್ಮಹತ್ಯೆಗೆ ಶರಣು

    ಮುಂದೆ ನಗ್ತಾ ಇದ್ಳು, ಹಿಂದೆ ಬೆನ್ನಿಗೆ ಚೂರಿ ಹಾಕಿದ್ಳು-ಫೇಸ್ಬುಕ್ ಲೈವ್ ಮಾಡಿ ಯುವಕ ಆತ್ಮಹತ್ಯೆಗೆ ಶರಣು

    ತುಮಕೂರು: ಪ್ರೀತಿಸಿದ ಯುವತಿ ದೂರವಾದ ಹಿನ್ನೆಲೆಯಲ್ಲಿ ಯುವಕನೊಬ್ಬ ಫೇಸ್ ಬುಕ್ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುರುವೇಕೆರೆ ತಾಲೂಕಿನ ಹಳ್ಳದ ಹೊಸಹಳ್ಳಿಯಲ್ಲಿ ನಡೆದಿದೆ.

    ಮೋಹನ್ ಗೌಡ(25) ಆತ್ಮಹತ್ಯೆಗೆ ಶರಣಾದ ಪ್ರೇಮಿ. ಮೋಹನ್ ತಿಂಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದರು. ಮದುವೆಯಾದ 15 ದಿನಗಳ ನಂತರ ಯುವತಿ ಪೋಷಕರು ಆಕೆಯನ್ನು ಮನವೊಲಿಸಿ ಕರೆದುಕೊಂಡು ಹೋಗಿದ್ದರು. ಇದರಿಂದ ಮನನೊಂದು ಮೋಹನ್ ಫೇಸ್ ಬುಕ್ ಲೈವ್ ಮಾಡಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.

    ನಾನು ನೋವು ಅನುಭವಿಸಿಕೊಂಡು ನೀನು ಸುಖವಾಗಿರು ಅನ್ನೋ ದೊಡ್ಡ ಮನಸ್ಸು ನನ್ನದಲ್ಲ. ನನ್ನ ನೋವನ್ನೂ ನೀನೂ ಅನುಭವಿಸು, ನನ್ನ ಕಣ್ಣೀರು ನನ್ನ ಅಮ್ಮನ ಕಣ್ಣೀರಿನ ಶಾಪ ನಿಮ್ಮ ಕುಟುಂಬಕ್ಕೆ ತಟ್ಟದೆ ಇರಲ್ಲ. ಮುಂದೆ ನಗುನಗುತ್ತಾ ಇದ್ದೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿದೆ. ದಯವಿಟ್ಟು ಯಾರೂ ಇಂತಹ ಹುಡುಗೀರ್ ಅನ್ನು ನಂಬಬೇಡಿ ನಾನು ಅನುಭವಿಸಿದ ನರಕವನ್ನು ಇವಳು ಅನುಭವಿಸಲಿ ಎಂದು ಹೇಳಿಕೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ತುರುವೇಕರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews