Tag: young man

  • ಮೊಬೈಲ್ ಕದ್ದಿದ್ದಾನೆಂದು ತಿಳಿದು, 19ರ ಯುವಕನನ್ನು ಹೊಡೆದು ಸಾಯಿಸಿದ್ರು

    ಮೊಬೈಲ್ ಕದ್ದಿದ್ದಾನೆಂದು ತಿಳಿದು, 19ರ ಯುವಕನನ್ನು ಹೊಡೆದು ಸಾಯಿಸಿದ್ರು

    ಮುಂಬೈ: ಮೊಬೈಲ್ ಕದ್ದಿದ್ದಾನೆಂದು ಆರೋಪಿಸಿ ಯುವಕನೊಬ್ಬನನ್ನು ನಾಲ್ವರು ಥಳಿಸಿ ಕೊಂದಿರುವ ಘಟನೆ ಮುಂಬೈಯ ವಿಕ್ರೋಲಿ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    19 ವರ್ಷದ ರಾಹುಲ್ ಪಂಚಾಲ್ ಮೃತ ದುರ್ದೈವಿ. ಸೋಮವಾರ ಸಂಜೆ ಮೊಬೈಲ್ ಕದ್ದಿದ್ದಾನೆಂದು ಆರೋಪಿಸಿ ನಾಲ್ವರು ವ್ಯಕ್ತಿಗಳು ರಾಹುಲ್‍ನನ್ನು ಮನಬಂದಂತೆ ಥಳಿಸಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ರಾಹುಲ್ ಮೃತಪಟ್ಟಿದ್ದನು.

    ಘಟನೆ ಸಂಬಂಧ ಪೊಲೀಸರು ಕೊಲೆ ಆರೋಪಿಗಳಾದ ಸುರೇಶ್ ವರ್ಮ, ಸುರೇಂದ್ರ ವರ್ಮ, ಶಿವಕುಮಾರ್ ವರ್ಮಾ ಹಾಗೂ ಮೋನು ಪಾಂಡೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಮೂವರು ಅಣ್ಣ-ತಮ್ಮಂದಿರಾಗಿದ್ದಾರೆ.

    ಈ ಬಗ್ಗೆ ಮೃತ ಯುವಕನ ಪೋಷಕರು ಮಾತನಾಡಿ, ರಾಹುಲ್ ಮೊಬೈಲ್ ಫೋನ್ ಕದ್ದಿರಲಿಲ್ಲ. ಆರೋಪಿಗಳು ಸ್ಥಳೀಯ ಗೂಂಡಾಗಳಾಗಿದ್ದು ಯಾವಾಗಲೂ ರಾಹುಲ್ ಗೆ ತೊಂದರೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ.

    ಏನಿದು ಘಟನೆ?
    ಕಳೆದ ಎರಡು ವಾರಗಳಿಂದ ಆರೋಪಿ ಸುರೇಶ್ ವರ್ಮಾನ ಫೋನ್ ಮನೆಯಿಂದ ಕಳ್ಳತನವಾಗಿತ್ತು. ಮೊಬೈಲನ್ನು ರಾಹುಲ್ ನೇ ಕಳ್ಳತನ ಮಾಡಿದ್ದನೆಂದು ಸುರೇಶ್ ತಿಳಿದಿದ್ದ. ಹೀಗಾಗಿ ಸೋಮವಾರ ಸಂಜೆ ಮನೆಯಿಂದ ಹೊರ ಬಂದಿದ್ದ ರಾಹುಲ್ ನನ್ನು ಸುರೇಶ್ ಸೇರಿದಂತೆ ನಾಲ್ವರು ಮನಬಂದಂತೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಪರಾರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಚಾಕು ಇರಿದು ಯುವಕನ ಕೊಲೆ!

    ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಚಾಕು ಇರಿದು ಯುವಕನ ಕೊಲೆ!

    ಚಿಕ್ಕಮಗಳೂರು: ದಾರಿಯಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ಮಾಡಿ, ಓರ್ವನಿಗೆ ಚಾಕು ಇರಿದು ಕೊಲೆಗೈದ ಘಟನೆ ಚಿಕ್ಕಮಗಳೂರಿನ ಕದ್ರಿಮಿದ್ರಿ ಬಳಿ ನಡೆದಿದೆ.

    ಕದ್ರಿಮಿದ್ರಿ ನಿವಾಸಿ ಪವನ್ (22) ಮೃತ ದುರ್ದೈವಿ ಯುವಕ. ಗವನಹಳ್ಳಿ ನಿವಾಸಿ ಕಿರಣ್ ಕೊಲೆಗೈದ ಆರೋಪಿ. ಘಟನೆಯಲ್ಲಿ ಇನ್ನೋರ್ವ ಪವನ್ (28) ಎಂಬವನಿಗೂ ಕಿರಣ್ ಚಾಕು ಹಾಕಿದ್ದಾನೆ. ಪರಿಣಾಮ ಆತನೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆಯ ವಿವರ: ಕಿರಣ್ ಹಾಗೂ ಆತನ ಕೆಲವು ಸ್ನೇಹಿತು ಮದ್ಯ ಸೇವಸಿ, ಎರಡು ಕಾರಿನಲ್ಲಿ ಕದ್ರಿಮಿದ್ರಿ ಸಮೀಪದ ಹೊರ ವಲಯದಲ್ಲಿ ನಿಂತಿದ್ದರು. ಮದ್ಯದ ಮತ್ತಿನಲ್ಲಿದ್ದ ಯುವಕರು ಕಾರಿನಲ್ಲಿದ್ದ ಸಿಸ್ಟಮ್ ಹಚ್ಚಿ, ಜೋರಾಗಿ ಸೌಂಡ್ ಕೊಟ್ಟುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರು. ಈ ವೇಳೆ ಪವನ್ ತನ್ನ ಸ್ನೇಹಿತ ಅಮಿತ್ ಜೊತೆಗೆ ಕದ್ರಿಮದ್ರಿ ಸಮೀಪದ ಕೆರೆಯೊಂದರ ಬಳಿ ನಾಯಿಯ ಫೋಟೋ ಶೂಟ್‍ಗೆ ತೆರಳಿದ್ದರು.

    ಕಿರಣ್ ಸ್ನೇಹಿತರ ಕಾರ್ ಬಳಿಗೆ ಬಂದ ಪವನ್ ಸ್ನೇಹಿತರಿಗೂ ಅವಾಚ್ಯ ಪದಗಳಿಂದ ಬೈದಿದ್ದಾರೆ. ಇದರಿಂದ ಕೋಪಗೊಂಡ ಪವನ್ ಅವರ ನಡತೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡಿದಿದೆ. ಇದನ್ನು ಮತ್ತೊಂದು ಕಾರಿನಲ್ಲಿ ಕುಳಿತಿದ್ದ ಕಿರಣ್ ನೋಡಿ, ಅಲ್ಲಿಂದ ಬಂದವನೇ ಏಕಾಏಕಿ ಪವನ್‍ಗೆ ಚಾಕು ಹಾಕಿದ್ದಾನೆ. ಪರಿಣಾಮ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಈ ಘಟನೆಯಲ್ಲಿ ಇನ್ನೋರ್ವ ಪವನ್ ಎಂಬವನಿಗೂ ಕಿರಣ್ ಚಾಕು ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಕಿರಣ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಂಗೇಜ್ ಮೆಂಟ್ ಅಲ್ಲ, ರಿಂಗ್ ಧರಿಸಿರುವ ಕೈ ಕೂಡ ಪ್ರೇಮಿದಲ್ಲ – ಫೋಟೋ ವೈರಲ್

    ಎಂಗೇಜ್ ಮೆಂಟ್ ಅಲ್ಲ, ರಿಂಗ್ ಧರಿಸಿರುವ ಕೈ ಕೂಡ ಪ್ರೇಮಿದಲ್ಲ – ಫೋಟೋ ವೈರಲ್

    ಕ್ಯಾನ್ಬೆರಾ: ಇತ್ತೀಚೆಗೆ ವಿಭಿನ್ನವಾದ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರೋದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕಾಗೆಯಂತೇ ಹೋಲುವ ಬೆಕ್ಕಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಅದೇ ರೀತಿ ಇದೀಗ ಜನರನ್ನು ಕನ್‍ಫ್ಯೂಸ್ ಮಾಡುವಂತಹ ಫೋಟೋವೊಂದು ಹರಿದಾಡುತ್ತಿದೆ.

    ಫೋಟೋದಲ್ಲಿ ಯುವಕ- ಯುವತಿ ಒಬ್ಬರನೊಬ್ಬರು ಕಿಸ್ ಮಾಡಿಕೊಳ್ಳುತ್ತಿದ್ದು, ಯುವತಿ ತನಗೆ ನಿಶ್ಚಿತಾರ್ಥವಾಗಿದೆ ಎಂಬಂತೆ ಬೆರಳಿಗೆ ರಿಂಗ್ ಹಾಕಿದ್ದ ಕೈಯನ್ನು ಎತ್ತಿ ತೋರಿಸುವ ಮೂಲಕ ಫೋಟೋಗೆ ಪೋಸ್ ನೀಡಿದಂತೆ ಭಾಸವಾಗುತ್ತದೆ. ಆದ್ರೆ ಈ ಫೋಟೋದ ಅಸಲಿ ಕಹಾನಿಯೇ ಬೇರೆಯದ್ದಾಗಿದೆ.

    ಹಾಗಾದ್ರೆ ರಿಯಲ್ ಸ್ಟೋರಿಯೇನು?
    ಮೆಲ್ಬರ್ನ್ ನ ಯುವತಿಯೊಬ್ಬಳು ಪ್ರೇಮಿಗಳ ಮುಖದ ಬಳಿ ತಾನು ರಿಂಗ್ ಧರಿಸಿದ್ದ ಕೈಯನ್ನು ಅಡ್ಡ ಹಿಡಿದು ಇಬ್ಬರ ಕೆಳಗೆ ಮೊಣಕಾಲು ಊರಿ ಫೋಟೋ ಕ್ಕಿಕ್ಕಿಸಿಕೊಂಡಿದ್ದಾಳೆ. ಜೆನ್ನಾ ಎಂಬ ಯುವತಿ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಬಳಿಕ ಟ್ಟಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಳೆ. ಫೋಟೋ ಜೊತೆಗೆ “ನನ್ನ ಸೋದರ ಸಂಬಂಧಿ ಗೆಳೆಯ ಆತನ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ. ಆದರೆ ಅಲ್ಲಿರುವ ಕೈಬೆರಳು, ಉಂಗುರ ಅವಳದಲ್ಲ” ಎಂದು ಬರೆದು ಕೊಂಡಿದ್ದಾಳೆ.

    ಮೊದಲ ಫೋಟೋವು ಸಾಮಾನ್ಯವಾಗಿ ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ದಂಪತಿ ತಮ್ಮ ಸಂತಸದ ಕ್ಷಣಗಳನ್ನು ಅಪ್ಲೋಡ್ ಮಾಡಿರುವ ರೀತಿ ಭಾಸವಾಗುತ್ತದೆ. ಆದರೆ ಎರಡನೇ ಫೋಟೋ ನೋಡಿದರೆ ಮೊದಲನೇ ಫೋಟೋದಲ್ಲಿರುವ ಹಿಂದಿರುವ ವಾಸ್ತವತೆಯನ್ನು ತಿಳಿಯಬಹುದಾಗಿದೆ.

    https://twitter.com/goodgaljenjen/status/1058600806780329984

    ಜೆನ್ನಾ ತನ್ನ ರಿಂಗ್ ಇರುವ ಕೈಯನ್ನು ಪ್ರೇಮಿಗಳ ಮುಖದ ಬಳಿ ಅಡ್ಡಲಾಗಿ ಹಿಡಿದು ನೆಲದ ಮೇಲೆ ಮಂಡಿಯೂರಿ ಫೋಟೋವನ್ನು ತೆಗೆದಿರುವುದನ್ನು ಎರಡನೇ ಫೋಟೋದಲ್ಲಿ ಕಾಣಬಹುದಾಗಿದೆ. ಜೆನ್ನಾ ಈ ಫೋಟೋವನ್ನು ನವೆಂಬರ್ 3 ರಂದು ಈ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾಳೆ.

    ಈ ಫೋಟೋವನ್ನು ಟ್ಟಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಇದುವರೆಗೂ 2,20,0979 ಮಂದಿ ರೀ ಟ್ವೀಟ್ ಮಾಡಿದ್ದು, 9,11,921 ಲೈಕ್ಸ್ ಕಂಡಿದೆ. ಅನೇಕರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲೇ ಕೈ ಕೊಯ್ದುಕೊಂಡು ರಂಪಾಟ ನಡೆಸಿದ ಪಾಗಲ್ ಪ್ರೇಮಿ

    ನಡುರಸ್ತೆಯಲ್ಲೇ ಕೈ ಕೊಯ್ದುಕೊಂಡು ರಂಪಾಟ ನಡೆಸಿದ ಪಾಗಲ್ ಪ್ರೇಮಿ

    ಮೈಸೂರು: ಪ್ರೀತಿಸಿದ ಯುವತಿ ಮದುವೆಯಾಗಲು ನಿರಾಕರಿಸಿದಕ್ಕೆ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಕೈ ಕೊಯ್ದುಕೊಂಡು ರಂಪಾಟ ನಡೆಸಿರುವ ಘಟನೆ ಮೈಸೂರಿನ ಜೆಪಿ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

    ನಗರದ ಜೆ.ಪಿ ನಗರ ನಿವಾಸಿ ಕಾಂತಾ (28) ಎಂಬಾತನೇ ಕೈ ಕೊಯ್ದುಕೊಂಡ ಪ್ರೇಮಿ. ಕಾಂತಾ ರಮಾಬಾಯಿನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಗುರುವಾರ ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಇದರಿಂದ ಬೇಸತ್ತ ಯುವತಿ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಎಂದು ತಿಳಿಸಿದ್ದಾಳೆ. ಇದರಿಂದ ಮನನೊಂದ ಯುವಕ ಆಕೆಯ ಮುಂದೆಯೇ ಕೈ ಕೊಯ್ದುಕೊಂಡು ತನ್ನ ಹುಚ್ಚಾಟ ಮೆರೆದಿದ್ದಾನೆ.

    ನಡು ರಸ್ತೆಯಲ್ಲಿ ಯುವಕ ರಂಪಾಟ ನಡೆಸುತ್ತಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತಂತೆ ಮಾಹಿತಿ ಪಡೆದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • 100 ವರ್ಷದ ವೃದ್ಧೆ ಮೇಲೆ 20ರ ಯುವಕನಿಂದ ಅತ್ಯಾಚಾರ!

    100 ವರ್ಷದ ವೃದ್ಧೆ ಮೇಲೆ 20ರ ಯುವಕನಿಂದ ಅತ್ಯಾಚಾರ!

    ಕೋಲ್ಕತ್ತಾ: 100 ವರ್ಷದ ವೃದ್ಧೆಯ ಮೇಲೆ 20ರ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆಗ್ರಾ ಬಿಸ್ವಾಸ್ ಅಲಿಯಾಸ್ ಅಭಿಜಿತ್ ಅತ್ಯಾಚಾರ ಎಸಗಿದ ಆರೋಪಿ. ನಾಡಿಯಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು, ಅತ್ಯಾಚಾರದ ಬಳಿಕ ಯುವಕ ಅಲ್ಲಿಂದ ಕಾಲ್ಕಿತ್ತಿದ್ದ. ಈ ಕುರಿತು ಚಕ್ದಾ ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಕುಟುಂಬಸ್ಥರು ಮಂಗಳವಾರ ಪ್ರಕರಣ ದಾಖಲಿಸಿದ್ದರು.

    ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ತಲೆಮರೆಸಿಕೊಂಡಿದ್ದ ಅಭಿಜೀತ್‍ನನ್ನು ಗಂಗಪ್ರಸಾದ್‍ಪುರ್ ಪ್ರದೇಶದಲ್ಲಿ ಸಂತ್ರಸ್ತ ವೃದ್ಧೆಯ ಕುಟುಂಬಸ್ಥರು ಮಂಗಳವಾರ ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಆರೋಪಿ ಯುವಕನನ್ನು ವಿಚಾರಣೆ ಮಾಡಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ವರದಿಯಾಗಿದೆ.

    ಸಂತ್ರಸ್ತ ವೃದ್ಧೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗಿತ್ತದೆ ಎಂದು ಚಕ್ದಾ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ರಾಜಸ್ಥಾನದ ಜೈಪುರ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯ ಗುಪ್ತಾಂಗಕ್ಕೆ ರಾಡ್ ಹಾಕಿ ದುಷ್ಕರ್ಮಿಗಳು ಅಮಾನವೀಯತೆ ಮೆರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಧ ಪೂಜೆಯಂದೇ ವಿಧಿಯಾಟ – ಬೈಕ್ ತೊಳೆಯಲು ತೆರಳಿದ್ದ ಯುವಕರು ನೀರುಪಾಲು

    ಆಯುಧ ಪೂಜೆಯಂದೇ ವಿಧಿಯಾಟ – ಬೈಕ್ ತೊಳೆಯಲು ತೆರಳಿದ್ದ ಯುವಕರು ನೀರುಪಾಲು

    ಚಿಕ್ಕಮಗಳೂರು: ಬೈಕ್ ತೊಳೆಯಲು ಕೆರೆಗೆ ಹೋದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

    ಹೇಮಂತ್ (18), ವಿಜಯ್ (21), ಶಿವರಾಜ್ (14) ಮೃತ ಯುವಕರಾಗಿದ್ದು, ಆಯುಧ ಪೂಜೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಗ್ರಾಮದ ಕಟ್ಟೆ ಕೆರೆಯಲ್ಲಿ ಬೈಕ್ ತೊಳೆಯಲು ಹೋಗಿದ್ದರು. ಈ ವೇಳೆ ಓರ್ವ ಯುವಕ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಮೃತ ಮೂವರು ಯುವಕರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೈಕ್ ಮಾತ್ರ ಕೆರೆ ಬಳಿ ನಿಂತಿರುವುದನ್ನ ಕಂಡ ಗ್ರಾಮಸ್ಥರು ವಿಚಾರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಹಬ್ಬದ ದಿನದಂತೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿರುವ ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣ – ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ!

    ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣ – ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ!

    ಉಡುಪಿ: ಕಲೆ ಸಾಹಿತ್ಯ ಅಂತ ಮೂರು ಹೊತ್ತು ತೊಡಗಿಸಿಕೊಂಡಿದ್ದವ ನೇಣಿಗೆ ಶರಣಾಗಿ ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದ್ದಾನೆ. ತನ್ನ ಸಾವಿಗೆ ಉಗ್ರ ಸಂಘಟನೆಯೇ ಕಾರಣ ಅನ್ನೋ ಡೆತ್ ನೋಟ್ ಮತ್ತಷ್ಟು ಚರ್ಚೆಗೆ ಕಾರಣವಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ.

    ಕುಂದಾಪುರದ 23 ವರ್ಷದ ವಿವೇಕ್ ಯಾವ ಸಂಘಟನೆಗೂ ಸೇರದೆ ದೇಶಭಕ್ತಿ ಬೆಳೆಸಿಕೊಂಡಿದ್ದನು. ಆದರೆ ಏನಾಯ್ತೋ ಏನೋ ಕಳೆದ ರಾತ್ರಿ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಪತ್ರದಲ್ಲಿ ಉಗ್ರ ಸಂಘಟನೆಯ ಬಗ್ಗೆ ಉಲ್ಲೇಖಿಸಿದ್ದು, ಸದ್ಯ ಚರ್ಚೆಯ ವಿಷಯವಾಗಿದೆ. ನೇಣು ಹಾಕಿಕೊಂಡು ಸಾಯಲು ಕಾರಣಗಳೂ ಇರಲಿಲ್ಲ. ಆದರೆ ಕಳೆದ ರಾತ್ರಿ ಮನೆಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದಾನೆ.

    ಡೆತ್ ನೋಟ್‍ನಲ್ಲಿ ಏನಿದೆ?
    ನನ್ನ ಸಾವಿಗೆ ಉಗ್ರ ಸಂಘಟನೆಯೇ ಕಾರಣ. ಮನೆಮಂದಿಗೂ ಅವರಿಂದ ಅಪಾಯವಾಗುವ ಸಾಧ್ಯತೆಯಿದೆ. ಈ ಹಿಂದೆ ಅವರಿಂದ ನನಗೆ ಕೊಲೆ ಬೆದರಿಕೆಯಿತ್ತು. ಎರಡು ವರ್ಷದ ಹಿಂದೆ ಆಕಸ್ಮಿಕವಾಗಿ ಪರಿಚಯವಾದ ಸಂಘಟನೆ ಅದಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅವರ ಅಸ್ತಿತ್ವವಿದೆ. ಮೊಬೈಲ್ ಬಳಸದ ಆ ಸಂಘಟನೆ ಬಗ್ಗೆ ಅನುಮಾನ ಬಂದು ಹಲವು ಮಾಹಿತಿ ಕಲೆ ಹಾಕಿದ್ದು ಅದು ಅವರಿಗೆ ತಿಳಿದು ತನಗೆ ಕೊಲೆ ಬೆದರಿಕೆ ಹಾಕಿದ್ದರು. ಅವರಿಗೆ ರಾಜಕೀಯ ಬೆಂಬಲವೂ ಇದೆ. ನಾನು ಸಂಗ್ರಹಿಸಿದ ದಾಖಲೆಗಳು, ಫೋಟೋಗಳನ್ನು ಪೊಲೀಸರಿಗೆ, ಮಾಧ್ಯಮಕ್ಕೆ ನೀಡುವ ಆಲೋಚನೆಯಲ್ಲಿದ್ದು, ಆಗಸ್ಟ್ ತಿಂಗಳಿನಲ್ಲಿ ಆ ಮೊಬೈಲ್ ಕಳೆದುಹೋಗಿದೆ.

    ಇನ್ನೊಂದು ಮೆಮೊರಿ ಚಿಪ್‍ನಲ್ಲಿ ಒಂದಷ್ಟು ದಾಖಲೆಗಳಿದ್ದು ಆ ಚಿಪ್ ಕೂಡ ಸಿಕ್ಕಿಲ್ಲ. ತನಗೆ ಅವರು ಬಹಳಷ್ಟು ಹಿಂಸೆ ನೀಡಿದ್ದು, ಅವರಿಂದ ತಪ್ಪಿಸಿಕೊಳ್ಳುವಪ್ರಯತ್ನ ಮಾಡಿದರೂ ನನ್ನಿಂದ ಅಸಾಧ್ಯವಾಗಿತ್ತು. ಇವರಿಂದ ನನ್ನ ಮನೆಯವರನ್ನು ಉಳಿಸಿಕೊಳ್ಳಲು ನನ್ನ ಸಾವು ದಾರಿಯೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹವನ್ನು ದಾನ ಮಾಡಿ. ಮನೆಯವರು ಒಪ್ಪದಿದ್ದಲ್ಲಿ ಕಣ್ಣು ದಾನವಾದರೂ ಮಾಡಿ. ದೇಹವನ್ನು ಅಗ್ನಿಸ್ಪರ್ಷ ಮಾಡುವ ಬದಲು ಮನೆಯ ತೋಟದಲ್ಲಿ ಹೂಳಿರಿ ಇದು ನನ್ನ ಕೊನೆಯಾಸೆ. ಜಾತಿ, ಹಣ, ಅಹಂಕಾರ, ರಾಜಕೀಯ, ಸ್ವಾರ್ಥ, ಅಧಿಕಾರ ಬಿಟ್ಟು ಎಲ್ಲರೂ ಮನುಷ್ಯರಾಗಿ ಬದುಕಿ ದೇಶವನ್ನು ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂಬ ವಾಕ್ಯದೊಂದಿಗೆ ಡೆತ್ ನೋಟ್ ಮುಗಿಸಿದ್ದಾನೆ.

    ಮೂರು ಪುಟಗಳ ಡೆತ್‍ನೋಟ್ ನಲ್ಲಿರುವ ವಿಚಾರದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದೇವೆ. ಆತನ ಗೆಳೆಯರು, ಸಂಬಂಧಿಕರು ಮನೆಯವರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇದರ ಜೊತೆ ತಜ್ಞರನ್ನು ಭೇಟಿ ಮಾಡಿದ್ದೇವೆ. ಪತ್ರದ ಬಗ್ಗೆ ಕೂಡ ಕೂಲಂಕುಶ ತನಿಖೆ, ವೈದ್ಯರ ಅಭಿಪ್ರಾಯ ಪಡೆಯಲಾಗುವುದು ಅಂತ ಎಸ್‍ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುಜರಾತ್‍ನಲ್ಲಿ ಮುಂದುವರಿದ ಹಿಂಸಾಚಾರ- ಬಿಹಾರಿ ಯುವಕನ ಕೊಲೆ

    ಗುಜರಾತ್‍ನಲ್ಲಿ ಮುಂದುವರಿದ ಹಿಂಸಾಚಾರ- ಬಿಹಾರಿ ಯುವಕನ ಕೊಲೆ

    ಗಾಂಧಿನಗರ: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಸಂಬಂಧಿಸಿದಂತೆ ಗುಜರಾತ್‍ನಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಈ ಬಾರಿ ಬಿಹಾರಿ ಯುವಕನನ್ನು ದುಷ್ಕರ್ಮಿಗಳ ಗುಂಪೊಂದು ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ.

    ಅಮರ್‍ಜಿತ್ ಕುಮಾರ್ ಕೊಲೆಯಾದ ದುರ್ದೈವಿ. ಗುಜರಾತ್‍ನ ಗಾಯಾ ಕೋಡಿಯಾ ಎಂಬ ಹಳ್ಳಿಯಲ್ಲಿ ಘಟನೆ ನಡೆದಿದೆ. ಅಮರ್‍ಜಿತ್ ಕುಮಾರ್ ಪಾಂಡೇಶ್ವರಿ ನಗರದ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಆತನನ್ನು ತಡೆದ ದುಷ್ಕರ್ಮಿಗಳು ರಾಡ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಅಮರ್‍ಜಿತ್ ತನ್ನ 17ನೇ ವಯಸ್ಸಿನಲ್ಲಿ ಕೆಲಸ ಅರಸಿ ಗುಜರಾತ್‍ಗೆ ಬಂದಿದ್ದ. ಇಲ್ಲಿಯೇ ಒಂದು ಮನೆ ನಿರ್ಮಾಣ ಮಾಡಿಕೊಳ್ಳುವ ಉದ್ದೇಶದಿಂದ ದುಡಿಯುತ್ತಿದ್ದ. ದುಷ್ಕರ್ಮಿಗಳ ಹೇಯ ಕೃತ್ಯದಿಂದ ಆತನ ಪತ್ನಿ ಹಾಗೂ ಮಕ್ಕಳು ಬೀದಿ ಪಾಲಾಗಿದ್ದಾರೆ.

    ಕೇಂದ್ರ ಹಾಗೂ ಗುಜರಾತ್ ಬಿಜೆಪಿ ಸರ್ಕಾರ, ಬಿಹಾರ್ ಆಡಳಿತಾಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಿವೆ. ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಅಂತಾ ಅಮರ್‍ಜಿತ್ ತಂದೆ ರಾಜ್‍ದೇವ್ ಸಿಂಗ್ ಒತ್ತಾಯಿಸಿದ್ದಾರೆ.

    ಈ ಹಿಂದೆ ಆಗಿದ್ದೇನು?:
    ಸಬರ್ಕಾಂತಾ ಜಿಲ್ಲೆಯಲ್ಲಿ ಬಿಹಾರಿ ಯುವಕನೊಬ್ಬ 14 ತಿಂಗಳ ಗುಜರಾತಿ ಕಂದಮ್ಮನ ಮೇಲೆ ಕಳೆದ ಸೆಪ್ಟೆಂಬರ್ 28 ರಂದು ಅತ್ಯಾಚಾರ ಎಸಗಿದ್ದ. ಈ ಸುದ್ದಿ ಹಳ್ಳಿ-ಹಳ್ಳಿಗಳಿಗೆ ತಲುಪಿ, ಗುಜರಾತಿಗರು ಹಾಗೂ ಬಿಹಾರಿಗಳು ಪರಸ್ಪರ ಹಿಂಸಾಕೃತ್ಯಕ್ಕೆ ಮುಂದಾದರು. ಇದರಿಂದ ಭಯಗೊಂಡ 15 ಸಾವಿರ ವಲಸಿಗರು ಗುಜರಾತ್ ತೊರೆದಿದ್ದರು.

    ಗಲಭೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 70 ಜನರರನ್ನು ಬಂಧಿಸಿದ್ದು, ಈವರೆಗೆ ಒಟ್ಟು 600 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲು

    ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲು

    ಹಾವೇರಿ: ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ.

    ಯುವಕನನ್ನ 23 ವರ್ಷದ ರಾಮಣ್ಣ ಪರಶುಗೊಂಡ ಎಂದು ಗುರುತಿಸಲಾಗಿದೆ. ಗುರುವಾರ ದೇವರಗುಡ್ಡ ಗ್ರಾಮದ ಮಾಲತೇಶ ದೇವಸ್ಥಾನಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ರಾಮಣ್ಣ ಪರಶುಗೊಂಡ ಸಂಬಂಧಿಕರೊಬ್ಬರ ಕಾರ್ಯಕ್ರಮದ ನಿಮಿತ್ತ ಮಾಲತೇಶ ದೇವಸ್ಥಾನಕ್ಕೆ ಬಂದಿದ್ದರು. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ರಾಮಣ್ಣ ಕಾಲುಜಾರಿ ಕಾಲುವೆಯಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ರಾಮಣ್ಣ ಪರಶುಗೊಂಡಗಾಗಿ ಶೋಧಕಾರ್ಯ ನಡೆಸಿದ್ದಾರೆ. ಈ ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯತಮೆಗೆ ಐ-ಫೋನ್ ಖರೀದಿಸಲು ಬಾಲಕನ ಅಪಹರಿಸಿ ಹತ್ಯೆಗೈದ ಅಪ್ರಾಪ್ತನ ಬಂಧನ!

    ಪ್ರಿಯತಮೆಗೆ ಐ-ಫೋನ್ ಖರೀದಿಸಲು ಬಾಲಕನ ಅಪಹರಿಸಿ ಹತ್ಯೆಗೈದ ಅಪ್ರಾಪ್ತನ ಬಂಧನ!

    ಲಕ್ನೋ: ತನ್ನ ಪ್ರಿಯತಮೆಗೆ ಐ-ಫೋನ್ ಕೊಡಬೇಕೆಂಬ ಉದ್ದೇಶದಿಂದ 14 ವರ್ಷದ ಬಾಲಕನನ್ನು ಅಪಹರಿಸಿ ಹತೈಗೈದ 17 ವರ್ಷದ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಹೌದು, ಪ್ರಿಯತಮೆಗೆ ಐ-ಫೋನ್ ಕೊಡಿಸಬೇಕೆಂಬ ಉದ್ದೇಶದಿಂದ 17 ವರ್ಷ ಯುವಕನೊಬ್ಬ 14 ವರ್ಷದ ಬಾಲಕನನ್ನು ಅಪಹರಿಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿ, ಸುಟ್ಟುಹಾಕಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    14 ವರ್ಷದ ಅಭಿಷೇಕ್ ಮೃತ ಬಾಲಕ. ಮೃತ ಬಾಲಕನ ತಂದೆ ಸರ್ವೇಶ್ ಯಾದವ್ ಖಾಸಗಿ ಕಂಪನಿಯ ಬಸ್ ಚಾಲಕನಾಗಿದ್ದಾರೆ. ಸರ್ವೇಶ್ ಆರೋಪಿಯ ತಂದೆಯ ಮನೆಯಲ್ಲಿ ಬಾಡಿಗೆಗಿದ್ದರು. ಅಲ್ಲದೇ ಆರೋಪಿಯ ತಂದೆಯೂ ಸಹ ಸರ್ವೇಶ್ ಯಾದವ್ ಕಂಪನಿಯಲ್ಲೇ ಬಸ್ ನಿರ್ವಾಹಕರಾಗಿದ್ದರು.

    ಏನಿದು ಘಟನೆ?
    ಕಳೆದ ಮಂಗಳವಾರ ಸಂಜೆ 8 ನೇ ತರಗತಿ ಓದುತ್ತಿದ್ದ ಅಭಿಷೇಕ್ ಕೋಚಿಂಗ್ ಕ್ಲಾಸ್‍ಗೆ ಹೋಗಿದ್ದವನು ವಾಪಾಸ್ಸು ಬಂದಿರಲಿಲ್ಲ. ಅದೇ ದಿನ ಸಂಜೆ ಅಭಿಷೇಕ್ ತಾಯಿ ಹಾಗೂ ತಂದೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಿದ್ದು, ಬಿಡುಗಡೆ ಮಾಡಲು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಇಟ್ಟಿದ್ದರು. ಕೂಡಲೇ ಎಚ್ಚೆತ್ತ ಪೋಷಕರು ಶಾಲೆ ಹಾಗೂ ಕೋಚಿಂಗ್ ಸೆಂಟರ್ ಬಳಿ ವಿಚಾರಿಸಿದಾಗ ಮಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

    ಕೂಡಲೇ ಆರೋಪಿಗೆ ಕರೆ ಮಾಡಿದ್ದ ಪೋಷಕರು, ಅಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ನಮ್ಮಿಂದ ಸಾಧ್ಯವಿಲ್ಲ. ನಮಗೆ ನಾಳೆ ಬೆಳಗ್ಗೆಯವರೆಗೂ ಸಮಯ ಕೊಡುವಂತೆ ಕೇಳಿಕೊಂಡಿದ್ದರು. ಇದರ ಜೊತೆ ಪೋಷಕರು ಮಣಿಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.

    ಪತ್ತೆಯಾಗಿದ್ದು ಹೇಗೆ?
    ಮಣಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಕರೆ ಬಂದಿದ್ದರ ಕುರಿತು ತನಿಖೆ ನಡೆಸಿದರು. ತನಿಖೆ ವೇಳೆ ಅಭಿಷೇಕ್ ವಾಸವಿದ್ದ ಮನೆಯ ಆಸುಪಾಸಿನಲ್ಲೇ ಕರೆ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ ಕರೆ ಮಾಡಿದ್ದ ಮೊಬೈಲ್ ನಂಬರ್ ಅನ್ನು ಪರೀಕ್ಷಿಸಿದಾಗ ಅದು ನಕಲಿ ದಾಖಲೆಗಳಿಂದ ಖರೀದಿಸಿರುವುದು ಬೆಳಕಿಗೆ ಬಂದಿತ್ತು.

    ಮೊಬೈಲ್ ನೆಟ್‍ವರ್ಕ್ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಮೊಬೈಲ್‍ನಲ್ಲಿ ಮತ್ತೊಂದು ಸಿಮ್ ಸಂಖ್ಯೆ ದಾಖಲಾಗಿರುವುದು ಪತ್ತೆಯಾಗಿತ್ತು. ಅದನ್ನು ಪರೀಕ್ಷಿಸಿದಾಗ ಆ ಮೊಬೈಲ್ ಸಂಖ್ಯೆ ಆರೋಪಿಯ ಸಹೋದರಿಗೆ ಸೇರಿದ ನಂಬರ್ ಎನ್ನುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮನೆ ದಾಳಿ ನಡೆಸಿ ಅಪಹರಣಕಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬಂಧಿತ ಅಪ್ರಾಪ್ತ ಬಾಲಕನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ನನ್ನ ಪ್ರಿಯತಮೆಗಾಗಿ ಐ-ಫೋನ್ ಖರೀದಿಸಲು ಅಭಿಷೇಕ್‍ನನ್ನು ಮಂಗಳವಾರ ಅಪಹರಿಸಿದ್ದೆ. ಆದರೆ ಆತ ಜೋರಾಗಿ ಅಳಲು ಪ್ರಾರಂಭಿಸಲು ಶುರುಮಾಡಿದ. ಇದರಿಂದ ನಾನು ಆತನನ್ನು ಕೊಂದು ಸುಟ್ಟು ಹಾಕಿದೆ ಎಂದು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.

    ಘಟನೆ ಸಂಬಂಧ ಅಭಿಷೇಕ್ ತಂದೆ ದೂರಿನ ಆಧಾರ ಮೇಲೆ ಆರೋಪಿ, ಆತನ ತಂದೆ ಹಾಗೂ ಸಹೋದರರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಮಣಿಪುರ ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 364 ಎ (ಅಪಹರಣ ಹಾಗೂ ಹಲ್ಲೆ) 201 (ಸಾಕ್ಷ್ಯ ನಾಶ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಭಿಷೇಕ್ ತಂದೆ ಸರ್ವೇಶ್ ಯಾದವ್, ಕೇವಲ 17 ವರ್ಷದ ಬಾಲಕನೊಬ್ಬನೇ ಹತ್ಯೆ ಮಾಡಿ, ಆತನನ್ನು ಸುಟ್ಟು ಹಾಕಿ ನಂತರ ಗುಂಡಿ ತೆಗೆದು ಹೂಳಲು ಹೇಗೆ ಸಾಧ್ಯ? ಇದಕ್ಕೆ ಆತನ ಕುಟುಂಬದವರು ಸಹ ಬೆಂಬಲ ನೀಡಿದ್ದಾರೆ. ನನ್ನ ಮಗನ ಹತ್ಯೆ ಪೂರ್ವನಿಯೋಜಿತ ಕೊಲೆ ಎಂದು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv