Tag: young man

  • ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

    ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

    ಗೇನಿದ್ದರೂ ಸೋಶಿಯಲ್‌ ಮೀಡಿಯಾದ್ದೇ ಹವಾ. ರೀಲ್ಸ್‌ಗಾಗಿ ಯುವಕ- ಯುವತಿಯರು ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬ ಕಡಲಬ್ಬರದ ಅಲೆಗಳ ನಡುವೆ ಸ್ಕೂಟರ್‌ ಜೊತೆಗೆ ನೀರಿಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

    ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ. ಆದರೆ ಈ ರೀತಿಯ ಸಾಹಸಕ್ಕೆ ಯಾರೂ ಹಾಕಬೇಡಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ..?: ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಆತ ಹೆಲ್ಮೆಟ್ ಕೂಡ ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಬಳಿಕ ತನ್ನ ಸ್ಕೂಟರ್ ಅನ್ನು ಯಾವುದೇ ರಸ್ತೆಯಲ್ಲಿ ಓಡಿಸದೆ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ. ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ಬರುವ ಅಲೆಗಳನ್ನು ಸಹ ನೋಡಬಹುದು. ಅಲೆಗಳು ಅಪ್ಪಳಿಸಿದ್ರೂ ಯುವಕ ಕಿಂಚಿತ್ತೂ ಅಂಜದೆ ಸ್ಕೂಟರ್‌ ಚಾಲನೆ ಮಾಡಿದ್ದಾನೆ. ಇದನ್ನೂ ಓದಿ: ಹರಿಯಾಣದಲ್ಲಿ ಹಳಿತಪ್ಪಿದ ಗೂಡ್ಸ್‌ರೈಲು – ಕಂಟೈನರ್ ಮಗುಚಿ ರೈಲು ಸಂಚಾರಕ್ಕೆ ಅಡ್ಡಿ

    ಈ ಬೆನ್ನಲ್ಲೇ ಮತ್ತೊಂದು ದೊಡ್ಡದಾದ ಅಲೆ ಬಂದಿದೆ. ಈ ವೇಳೆ ಯುವಕ ತನ್ನ ಸ್ಕೂಟರ್‌ ಅನ್ನು ದಡದತ್ತ ತಿರುಗಿಸಿದ್ದಾನೆ. ಅಲೆಯು ಕೂಡ ಯುವಕನನ್ನು ದಡದತ್ತ ನೂಕಿದೆ. ಒಟ್ಟಿನಲ್ಲಿ ಯುವಕ ಸೇಫ್‌ ಆಗಿ ದಡ ಸೇರಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

    https://twitter.com/TheFigen_/status/1807823991324745951

    ಸದ್ಯ ಈ ವೀಡಿಯೋವನ್ನು @TheFigen_ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೋಗೆ ʼನೀವು ಗೂಗಲ್‌ ಮ್ಯಾಪ್‌ ಅನ್ನೇ ಜಾಸ್ತಿ ಅವಲಂಬಿಸಿದಾಗʼ ಎಂದು ತಮಾಷೆಯಾಗಿ ಬರೆದುಕೊಳ್ಳಲಾಗಿದೆ. ಈ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಬಳಕೆದಾರರು, ಸ್ಕೂಟರ್ ನಿಲ್ಲಲಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಮೂರನೇ ಬಳಕೆದಾರರು ಬರೆದಿದ್ದಾರೆ – ಇದು ತಮಾಷೆ ಮತ್ತು ಗಂಭೀರವಾಗಿದೆ, ಇದು ನಿಜವಾಗಿಯೂ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

  • ಕೋಟಿ ಕುಳವೆಂದು ಯುವಕನ ಅಪಹರಿಸಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಗ್ಯಾಂಗ್!

    ಕೋಟಿ ಕುಳವೆಂದು ಯುವಕನ ಅಪಹರಿಸಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಗ್ಯಾಂಗ್!

    ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಯುವಕನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಲಾಗಿದೆ (Kidnap). ಜೂನ್ 16ರಂದು ಎಂಜಿ ರಸ್ತೆಯಲ್ಲಿ ಆಂಧ್ರ ಮೂಲದ ಗ್ಯಾಂಗ್‍ನಿಂದ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ ವ್ಯವಹಾರ ಮಾಡ್ತಿದ್ದ ರಾಜು ಎಂಬಾತನನ್ನು ಕಿಡ್ನಾಪ್ ಮಾಡಲಾಗಿದೆ.

    ದೊಡ್ಡ ಕುಳ ಎಂದು ಕಿಡ್ನಾಪ್ ಮಾಡಿದ್ದ ಗ್ಯಾಂಗ್, ತೆಲಂಗಾಣ ಫಾರ್ಮ್‍ಹೌಸ್ ವೊಂದರಲ್ಲಿ ಕೂಡಿಟ್ಟು ಹಲ್ಲೆ ನಡೆಸಿದೆ. ಅಲ್ಲದೇ 5 ಕೋಟಿ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ರು. ಕಿಡ್ನಾಪ್ ಬಗ್ಗೆ ಹಲಸೂರು ಠಾಣೆಗೆ ರಾಜು ಸ್ನೇಹಿತ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಹಲಸೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮಧ್ಯೆ ಕಿಡ್ನಾಪ್ ಆಗಿರೋ ರಾಜು ವಿರುದ್ಧ ತೆಲಂಗಾಣದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ರಾಜುವನ್ನ ಸಿಸಿಎಸ್ ಪೊಲೀಸರು ಮುಂಬೈಯಿಂದ ಬಂಧಿಸಿ ಕರೆ ತಂದಿದ್ದರು. ಬಳಿಕ ವಂಚನೆ ಕೇಸ್‍ನಲ್ಲಿ ಜಾಮೀನು ಪಡೆದು ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದ. ಕಿಡ್ನಾಪ್ ಆಗಿರೋ ರಾಜು ಮೂಲತಃ ತೆಲಂಗಾಣದವನಾಗಿದ್ದು, ಮಾಜಿ ಮುಖ್ಯಮಂತ್ರಿ ಜಗನ್ (Jagan Mohan Reddy) ಕುಟುಂಬದ ಹೆಸರು ಬಳಿಸಿಕೊಂಡು, ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ

  • ಪ್ರೀತಿಸಿ ಕೈ ಕೊಟ್ಟ ಯುವತಿ- ಮನನೊಂದು ಯುವಕ ಆತ್ಮಹತ್ಯೆ

    ಪ್ರೀತಿಸಿ ಕೈ ಕೊಟ್ಟ ಯುವತಿ- ಮನನೊಂದು ಯುವಕ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಾಲಾಜಿ (25) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಕಳೆದ ಒಂದು ವರ್ಷದ ಹಿಂದೆ ಬಾಲಾಜಿಗೆ ಇನ್‌ಸ್ಟಾಗ್ರಾಂ (Instagram) ಮೂಲಕ ಮಂಡ್ಯ ಮೂಲದ ಯುವತಿಯ ಪರಿಚಯವಾಗುತ್ತದೆ. ಪರಿಚಯವು ಕ್ರಮೇಣ ಪ್ರೀತಿಗೆ ತಿರುಗಿದೆ. ಹೀಗಾಗಿ ಇಬ್ಬರು ಸಲುಗೆಯಿಂದ ತಿರುಗಾಡಿದ್ದಾರೆ.

    ಆದರೆ ಇದೀಗ ಇದ್ದಕ್ಕಿದ್ದಂತೆ ಯುವತಿ, ತಾನು ಬೇರೊಬ್ಬ ಯುವಕನ ಜೊತೆ ಪ್ರೀತಿಯಲ್ಲಿ ಇರುವುದಾಗಿ ತಿಳಿಸಿದ್ದಾಳಂತೆ. ಇದರಿಂದ ಮನನೊಂದ ಬಾಲಾಜಿ, ಕಾಳು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ದೊಡ್ಡಬಳ್ಳಾಪುರ (Doddaballpur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮೃತ ಯುವಕನ ಶವವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಮೃತನ ಸಂಬಂಧಿಕರ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ವೀಡಿಯೋ: ಕಾಲಿನ ಮೂಲಕ ಮತಚಲಾಯಿಸಿ ಮಾದರಿಯಾದ ಯುವಕ!

    ವೀಡಿಯೋ: ಕಾಲಿನ ಮೂಲಕ ಮತಚಲಾಯಿಸಿ ಮಾದರಿಯಾದ ಯುವಕ!

    ಗಾಂಧಿನಗರ: ಏಳು ಹಂತಗಳ ಲೋಕಸಭಾ ಚುನಾವಣೆಯ (Loksabha Elections 2024) ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಯುವಕನೊಬ್ಬ ಮತದಾನ ಮಾಡಲು ಆಗಮಿಸಿದ ಸ್ಫೂರ್ತಿಯ ಪ್ರಸಂಗವೊಂದು ಎಲ್ಲರ ಗಮನ ಸೆಳೆದಿದೆ.

    ಯುವಕ ಅಂಕಿತ್‌ ಸೋನಿಯವರು (Ankit Soni) ಮಂಗಳವಾರ ನಡೆದ ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಕಾಲುಗಳ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ದೇಶಾದ್ಯಂತ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮತದಾರರು ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

    ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಎಲೆಕ್ಟ್ರಿಕ್‌ ಶಾಕ್‌ ನಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ. ನನ್ನ ಗುರುಗಳು ಮತ್ತು ಶಿಕ್ಷಕರ ಆಶೀರ್ವಾದದಿಂದ ನಾನು ಚಿತ್ರ ಬಿಡಿಸಲು ಪ್ರಾರಂಭಿಸಿದೆ. ನಂತರ ಬರೆಯಲು ಪ್ರಾರಂಭಿಸಿದೆ. ಇದಾದ ಬಳಿಕ ನಾನು ಶಾಲೆಗೆ ಹೋಗಲು ಪ್ರಾರಂಭಿಸಿದೆ. ನಾನು ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ. ಜೊತೆಗೆ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ ಮಾಡಿ MBA ಮಾಡಿದೆ. ಕಳೆದ ಹಲವು ವರ್ಷಗಳಿಂದ ನಾನು ಹೀಗೆಯೇ ಮತ ಚಲಾಯಿಸುತ್ತಿದ್ದೇನೆ. ಜನರು ಹೊರಗೆ ಬಂದು ತಮ್ಮ ಅಮೂಲ್ಯವಾದ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಂತ್ರಸ್ತೆಯನ್ನು ತೋಟದ ಮನೆಯಿಂದ ರಕ್ಷಿಸಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ಮೂರನೇ ಹಂತದ ಲೋಕಸಭೆ ಚುನಾವಣೆಯು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ನಡೆಯುತ್ತಿದೆ.

  • ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

    ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

    ಬೆಂಗಳೂರು: ವ್ಯಕ್ತಿಯೊಬ್ಬ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯ ಕೈ ಬೆರಳನ್ನೇ ಕಚ್ಚಿದ ಪ್ರಸಂಗವೊಂದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಈ ಘಟನೆ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಬಳಿ ಜರುಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಜೊತೆಗೆ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ಇದನ್ನೂ ಓದಿ: ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರ ನಿಂದನೆ – ವಕೀಲ ಅರೆಸ್ಟ್

    ನಡೆದಿದ್ದೇನು..?: 28 ವರ್ಷದ ಸಯ್ಯದ್ ಸಫಿ ಎಂಬಾತ ಹೆಲ್ಮೆಟ್‌ ಇಲ್ಲದೇ ಸ್ಕೂಟಿ ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ಆತನನ್ನು ತಡೆದಿದ್ದಾರೆ. ಬಳಿಕ ಪೇದೆ ಆತನ ಬಳಿಯಿಂದ ಕೀ ಕಿತ್ತುಕೊಂಡಿದ್ದಾರೆ. ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಅವರು ಟ್ರಾಫಿಕ್‌ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಳ್ಳಲು ವೀಡಿಯೋ ಮಾಡಿದ್ದಾರೆ.

    ಕೀ ಕಿತ್ತುಕೊಂಡಿದ್ದಕ್ಕೆ ಸಿಟ್ಟಿಗೆದ್ದ ಯುವಕ, ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ್ದಾನೆ. ಇತ್ತ ಹೆಡ್ ಕಾನ್‌ಸ್ಟೆಬಲ್‌ನ ಫೋನ್ ಕಿತ್ತುಕೊಂಡ ಸಯ್ಯದ್ ಸಫಿ, ತನ್ನ ವೀಡಿಯೋ ಯಾಕೆ ರೆಕಾರ್ಡ್‌ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಅಲ್ಲಿಂದ ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನನ್ನು ಹಿಡಿದು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ವಿಲ್ಸನ್ ಗಾರ್ಡನ್ 10ನೇ ಕ್ರಾಸ್‌ನಲ್ಲಿ ಟ್ರಾಫಿಕ್ ಪೇದೆಯನ್ನು ನಿಂದಿಸಿ, ಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿದ ಮತ್ತು ದೈಹಿಕವಾಗಿ ನೋವುಂಟು ಮಾಡಿದ ಆರೋಪದ ಮೇಲೆ ಶಫಿ ವಿರುದ್ಧ (ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಭಂಗ) ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ

    ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ

    ಮಡಿಕೇರಿ: ಚಾರಣಕ್ಕೆ (Trekking) ತೆರಳಿದ್ದ ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.

    ಮೃತ ದುರ್ದೈವಿಯನ್ನು ಜತಿನ್ ಕುಮಾರ್ (25) ಎಂದು ಗುರುತಿಸಲಾಗಿದ್ದು, ಈತ ಹರಿಯಾಣ (Haryana) ಮೂಲದ ನಿವಾಸಿಯಾಗಿದ್ದಾನೆ. ಕೊಡಗು ಜಿಲ್ಲೆಯ ಮಡಿಕೇರಿ ತಾ. ತಡಿಯಂಡಮೋಳು ಬೆಟ್ಟ ವೀಕ್ಷಣೆ ವೇಳೆ ಈ ಅವಘಡ ಸಂಭವಿಸಿದೆ.

    ಬೆಂಗಳೂರಿನ ಖಾಸಗಿ ಕಂಪನಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಆಗಮಿಸಿದ್ದನು. ಅಂತೆಯೇ ಭಾನುವಾರ ಬೆಟ್ಟದ ಮೇಲೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿದೆ. ಕೆಲಹೊತ್ತಿನಲ್ಲೇ ಎದೆ ನೋವು ಜಾಸ್ತಿ ಆಗಿ ಜತಿನ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಸೇನೆ, ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ – ಮೂವರು ನಕ್ಸಲರ ಹತ್ಯೆ

    ಯುವಕ ಪ್ರಾಣಬಿಟ್ಟ ವಿಚಾರವನ್ನು ಸ್ನೇಹಿತರು ಕೂಡಲೇ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ದೌಡಾಯಿಸಿದರು. ನಂತರ ಬೆಟ್ಟದ ತುದಿಯಿಂದ ಕಚ್ಚಾರಸ್ತೆಯಲ್ಲಿ ಹರಸಾಹಸಪಟ್ಟು ಮೃತದೇಹವನ್ನು ಪೊಲೀಸರು ತಂದಿದ್ದಾರೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರು ಗ್ರಾಮಾಂತರದಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು ಗ್ರಾಮಾಂತರದಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona Virus) ಭೀತಿ ಮತ್ತೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.

    ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಮಗುವಿಗೂ ಕೊರೊನಾ ವಕ್ಕರಿಸಿದೆ. ಸ್ಪರ್ಶ ಮಕ್ಕಳಧಾಮದಲ್ಲಿದ್ದ ಮಗುವಿಗೆ ಕೊರೊನಾ ಪಾಸಿಟಿವ್ (Corona Positive For Baby) ಇರುವುದು ದೃಢವಾಗಿದೆ. ಜ್ವರ, ಕೆಮ್ಮು ಅಂತ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಸದ್ಯ ತೀವ್ರ ಉಸಿರಾಟದ ತೊಂದರೆ (ಸಾರಿ) ಕೇಸ್ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ ಮಗುವನ್ನು ಐಸೋಲೆಷನ್‍ನಲ್ಲಿ ಇರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿ.ಸಿ ಶಿವಶಂಕರ್ ಹೇಳಿದ್ದಾರೆ.

    ಸ್ವರ್ಶ ಮಕ್ಕಳ ಧಾಮದಲ್ಲಿ ಮೊದಲ‌ ಕೊರೊನಾ ಕೇಸ್ ಹಿನ್ನೆಲೆಯಲ್ಲಿ ಮಕ್ಕಳ ಧಾಮದ 21 ಮಂದಿ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಟೆಸ್ಟಿಂಗ್ ಮಾಡಲಾಗಿದೆ. ಗಂಟಲು ದ್ರವ ಸ್ಯಾಂಪಲ್ ಪಡೆದು ಅಧಿಕಾರಿಗಳು ಟೆಸ್ಟಿಂಗ್ ಗೆ ಕಳುಹಿಸಿದ್ದು, ಸಂಜೆ ರಿಪೋರ್ಟ್‌ ಬರಲಿದೆ. ಇದನ್ನೂ ಓದಿ: PublicTV Explainer: ಹೊಸ ವರ್ಷದ ಹೊತ್ತಲ್ಲೇ ದೇಶಕ್ಕೆ ಕಾಲಿಟ್ಟ ಕೊರೊನಾ ಹೊಸ ತಳಿ; ಏನಿದು ಜೆಎನ್‌.1? ಇದು ಅಪಾಯಕಾರಿಯೇ?

    ಪಾಸಿಟಿವ್‌ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಸಿಬ್ಬಂದಿ ಮಕ್ಕಳ ಧಾಮ ಹಾಗೂ ಶಾಲೆಗೆ ಸ್ಯಾನಿಟೈಸ್ ಮಾಡಲಿದ್ದಾರೆ. ಟೆಸ್ಟಿಂಗ್ ರಿಪೋರ್ಟ್ ಬರುವವರೆಗೂ ಎಲ್ಲಾ ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಶಾಲೆ ಹಾಗೂ ಮಕ್ಕಳಧಾಮದಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಇದೆಯಾ ಅನ್ನೋದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಮಕ್ಕಳ‌ ಜೊತೆ ಸಂಪರ್ಕದಲ್ಲಿದ್ದವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಇತ್ತ ಬೆಂಗಳೂರಿನ ಗಾಂಧಿನಗರ ನಿವಾಸಿ 25 ವರ್ಷದ ಯುವಕನಲ್ಲಿಯೂ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟರಿ (Travel History) ಇಲ್ಲದಿದ್ದರೂ ಕೊರೊನಾ ವಕ್ಕರಿಸಿಕೊಂಡಿದೆ. ಸದ್ಯ ಈತನಿಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಜನರನ್ನ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಮೇಲೆ ಟೆಸ್ಟ್ ಗೆ ಒಳಪಡಿಸಲಾಗಿದೆ.

    ಬೆಂಗಳೂರಲ್ಲಿ ಸಕ್ರಿಯ ಕೇಸ್ ಶತಕದತ್ತ ಮುನ್ನುಗುತ್ತಿದೆ. ರಾಜ್ಯದಲ್ಲಿ 105 ಆಕ್ಟೀವ್ ಕೇಸ್ ಇದ್ದರೆ ಬೆಂಗಳೂರಲ್ಲಿ 93 ಕೊರೊನಾ ಪ್ರಕರಣಗಳಿವೆ. ಟ್ರಾವೆಲ್ ಹಿಸ್ಟರಿ ಇಲ್ಲದಿದ್ರು ಕೇಸ್ ಏರಿಕೆ ಆಗುವ ಮೂಲಕ ಆತಂಕ ಹೆಚ್ಚಿಸಿದೆ. ಗುರುವಾರದಿಂದ ಟೆಸ್ಟಿಂಗ್ ಪ್ರಮಾಣ ಕೂಡ ಹೆಚ್ಚಳವಾಗಿದ್ದು, ನಿನ್ನೆಯಿಂದ 1,500 ಮಂದಿಯನ್ನು ಟೆಸ್ಟಿಂಗ್‍ಗೆ ಒಳಪಡಿಸಲಾಗಿದೆ. ಟೆಸ್ಟಿಂಗ್ ಹೆಚ್ಚಳದಿಂದ ಸೋಂಕು ಹೆಚ್ಚಳ ಸಾಧ್ಯತೆ ಇದೆ.

  • ಅನೈತಿಕ ಸಂಬಂಧದ ಆರೋಪ ಹೊರಿಸಿ ಮರಕ್ಕೆ ಕಟ್ಟಿ ಹಲ್ಲೆ- ಯುವಕ ಸೂಸೈಡ್

    ಅನೈತಿಕ ಸಂಬಂಧದ ಆರೋಪ ಹೊರಿಸಿ ಮರಕ್ಕೆ ಕಟ್ಟಿ ಹಲ್ಲೆ- ಯುವಕ ಸೂಸೈಡ್

    ಯಾದಗಿರಿ: ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಆರೋಪ ಹೊತ್ತು ಹಲ್ಲೆಗೆ ಒಳಗಾದ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಯಾದಗಿರಿ (Yadagiri) ಜಿಲ್ಲೆಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಎಸ್. ಹೊಸಳ್ಳಿ ಗ್ರಾಮದ ಚಂದ್ರಶೇಖರ ರೆಡ್ಡಿ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಮೇಲೆ ಈರಣ್ಣ ಮತ್ತು ಕುಟುಂಬದವರು ಮಂಗಳವಾರ ರಾತ್ರಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಹೀಗಾಗಿ ಮರ್ಯಾದೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಮೃತ ಚಂದ್ರಶೇಖರ ರೆಡ್ಡಿ ಅದರಲ್ಲಿ ಈರಣ್ಣ ಮತ್ತು 8 ಮಂದಿಯ ಹೆಸರು ಸೇರಿಸಿದ್ದಾನೆ. ಇವರೇ ನನ್ನ ಸಾವಿಗೆ ಕಾರಣ ಅಂತಾನೂ ಆರೋಪಿಸಿದ್ದಾನೆ.

    ಮೃತ ಚಂದ್ರಶೇಖರ ಅದೇ ಗ್ರಾಮದ ಈರಣ್ಣ ಎಂಬಾತನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪವಿತ್ತು. ಇದೇ ಕಾರಣಕ್ಕಾಗಿ ಈರಣ್ಣ ಮತ್ತು ಆತನ ಕುಟುಂಬಸ್ಥರು ಮರಕ್ಕೆ ಹಗ್ಗದಿಂದ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದರು. ಅಲ್ಲದೇ ಯುವಕನ ಕುಟುಂಬಸ್ಥರ ಮೇಲೆಯೂ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನಿಂದಾಗಿ ಹೀಗೆಲ್ಲ ಆಯಿತು. ಮನೆ ಮಂದಿಯೂ ಹಲ್ಲೆಗೆ ಒಳಗಾದರು ಎಂದು ಮಾನಸಿಕವಾಗಿ ಕುಗ್ಗಿದ್ದ ಚಂದ್ರಶೇಖರ ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ

    ಡೆತ್ ನೋಟ್‍ನಲ್ಲಿ ಎಂಟು ಜನರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಘಟನೆ ಬಳಿಕ ಈರಣ್ಣನ ಕುಟುಂಬಸ್ಥರು ಗ್ರಾಮದಿಂದ ಪರಾರಿಯಾಗಿದ್ದಾರೆ. ಈರಣ್ಣನ ಕುಟುಂಬಸ್ಥರೇ ಯುವಕನನ್ನು ಕೊಲೆ ಮಾಡಿದ್ದಾರೆ ಎಂದ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದುಬಾರಿ ನಾಯಿಯನ್ನು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

    ದುಬಾರಿ ನಾಯಿಯನ್ನು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

    ಹುಬ್ಬಳ್ಳಿ: ದುಬಾರಿ ನಾಯಿ (Dog) ಮೇಲಿನ ಪ್ರೀತಿ ಓರ್ವ ಯುವಕನನ್ನು ಬಲಿಪಡೆದಿದೆ. ತಾನು ಕೇಳಿದ ನಾಯಿಯನ್ನು ಪೋಷಕರು ಕೊಡಿಸಲಿಲ್ಲವೆಂದು ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi)  ನಡೆದಿದೆ.

    ಹುಬ್ಬಳ್ಳಿ ಮಿಷನ್ ಕಾಂಪೌಂಡ್‌ನಲ್ಲಿ ಈ ಘಟನೆ ನಡೆದಿದ್ದು, ಅಲೆನ್ ಭಸ್ಮೆ (24) ಆತ್ಮಹತ್ಯೆಗೆ ಶರಣಾದ ಯುವಕ. ಅಲೆನ್ ನಾಯಿ ಪ್ರೇಮಿಯಾಗಿದ್ದು, 2 ಲಕ್ಷ ರೂ. ಮೌಲ್ಯದ ನಾಯಿಮರಿಯನ್ನು ಕೊಡಿಸುವಂತೆ ತಾಯಿಯ ಬಳಿ ಹಠ ಮಾಡುತ್ತಿದ್ದ. ಇದನ್ನೂ ಓದಿ: ಕಾಂಗ್ರೆಸ್‍ನ ತುಷ್ಠೀಕರಣ ಪರಿಣಾಮ ಮುಸ್ಲಿಮರಿಗೆ ನಮ್ಮದೇ ರಾಜ್ಯ ಎನ್ನುವ ಭ್ರಮೆ: ಮುತಾಲಿಕ್

    ಮಗನ ಕಾಟಕ್ಕೆ ಬೇಸತ್ತು ಅಲೆನ್ ತಾಯಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಮನನೊಂದ ಅಲೆನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ: ಮಧು ಬಂಗಾರಪ್ಪ

  • ಮಂಗಳಮುಖಿಯನ್ನು ಪ್ರೀತಿಸಿ ಯುವಕ ಮದುವೆ- ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ!

    ಮಂಗಳಮುಖಿಯನ್ನು ಪ್ರೀತಿಸಿ ಯುವಕ ಮದುವೆ- ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ!

    ಹೈದರಾಬಾದ್: ಪ್ರೀತಿಗೆ ಕಣ್ಣಿಲ್ಲ… ಪ್ರೀತಿ ಕುರುಡು ಅಂತಾರೆ. ಅಂತೆಯೇ ಇಲ್ಲೊಂದು ಇಂಥದ್ದೇ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಪ್ರೀತಿ ಮಾಡಿ ಮದುವೆಯಾದ ಹೃದಯಸ್ಪರ್ಶಿ ಪ್ರಕರಣವೊಂದು ನಡೆದಿರುವ ಬಗ್ಗೆ ತೆಲಂಗಾಣದಲ್ಲಿ (Telangana) ಬೆಳಕಿಗೆ ಬಂದಿದೆ.

    ಹೌದು. ತೆಲಂಗಾಣ ಮೂಲದ ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ ಮದುವೆಯಾಗಿ  (Love Marriage) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಯುವಕನನ್ನು ಗಣೇಶ್ ಎಂದು ಗುರುತಿಸಲಾಗಿದ್ದು, ತೆಲಂಗಾಣದ ಖಮ್ಮಮ್ ನಿವಾಸಿ. ಈತ ಆಂಧ್ರಪ್ರದೇಶದ ನಂದಿಗಮ ಮೂಲದ ದೀಪು ಎಂಬಾಕೆಯನ್ನು ಮದುವೆಯಾಗಿದ್ದಾನೆ.

    ಹೈದರಾಬಾದ್‍ನಲ್ಲಿ ಇಬ್ಬರ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಅಂತೆಯೇ ಕಳೆದ ಒಂದು ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಅಲಿಗಢ ನಗರದ ಹೆಸರು ಹರಿಗಢವಾಗಿ ಬದಲಾಗುತ್ತಾ?

    ಮದುವೆಯಾದ ಬಳಿಕ ಇವರಿಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಮ್ಮಿಬ್ಬರ ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದೇವೆ. ಹೀಗಾಗಿ ಸದ್ಯ ಮನಗೆ ಜೀವ ಭಯವಿದೆ. ನಮಗೆ ರಕ್ಷಣೆ ಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.