Tag: Young Lady

  • ಮೊದಲ ವಿವಾಹ ಮುಚ್ಚಿಟ್ಟು ಎರಡನೇ ಮದುವೆ – ತಾಳಿಕಟ್ಟೋ ಮುನ್ನವೇ ನಯವಂಚಕನ ಬಣ್ಣ ಕಳಚಿಟ್ಟ ಪತ್ನಿ

    ಮೊದಲ ವಿವಾಹ ಮುಚ್ಚಿಟ್ಟು ಎರಡನೇ ಮದುವೆ – ತಾಳಿಕಟ್ಟೋ ಮುನ್ನವೇ ನಯವಂಚಕನ ಬಣ್ಣ ಕಳಚಿಟ್ಟ ಪತ್ನಿ

    ಹಾಸನ: ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗುತ್ತಿದ್ದ ನಯವಂಚಕನ ಬಣ್ಣವನ್ನು ಮೊದಲೇ ಪತ್ನಿ ಬಯಲು ಮಾಡಿದ್ದು ನಿನ್ನೆ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.

    ಬೆಂಗಳೂರಿನ (Bengaluru) ಮಧುಸೂದನ್ ಎರಡನೇ ಮದುವೆ ಆಗಲು ಬಂದು ಸಿಕ್ಕಿಬಿದ್ದ ಭೂಪ. ತಮ್ಮ ಮಗಳಿಗೆ ಆಗುತ್ತಿದ್ದ ಅನ್ಯಾಯ ತಪ್ಪಿದ್ದು ಯುವತಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಹೆಣ್ಣುಬಾಕನನ್ನು ತಕ್ಕಶಾಸ್ತಿ ಆಗಬೇಕೆಂದು ಮದುವೆಗೆ ಬಂದಿದ್ದವರು ಹಿಡಿಶಾಪ ಹಾಕಿದರು. ಇದನ್ನೂ ಓದಿ: ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

    ಹೌದು, ಬೆಂಗಳೂರು ಚಿಕ್ಕಸಂದ್ರದ (Chikkasandra) ಇಂದ್ರೇಶ್-ಅನಿತ ದಂಪತಿ ಪುತ್ರ ಮಧುಸೂದನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷದ ಹಿಂದೆ ವಸುಧ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಆದರೂ ಮತ್ತೊಂದು ಮದುವೆ ಆಗಲು ಸ್ಕೆಚ್ ಹಾಕಿ ಹಾಸನ (Hassan) ಮೂಲದ ಯುವತಿಯನ್ನು ಬಂದು ನೋಡಿಕೊಂಡು ಹೋಗಿದ್ದ. ಹುಡುಗಿ ಮನೆಯವರಿಗೆ ಇನ್ನಿಲ್ಲದ ಸುಳ್ಳು ಹೇಳಿ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಯುವತಿ ಪೋಷಕರು ಮದುವೆ ಮಾಡಲು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿದ್ದರು. ನಿನ್ನೆ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಟುಕೊಂಡಿದ್ದರು. ಮಧುಸೂದನ್ ಪೋಷಕರು, ಇಬ್ಬರು ಅಕ್ಕಂದಿರು ಹಾಗೂ ಅವರ ಗಂಡಂದಿರು ಮಾತ್ರ ರಿಸಪ್ಷನ್‍ನಲ್ಲಿ ಭಾಗವಹಿಸಿದ್ದರು.

    ಇಂದು ಹಾಸನದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೂ ಕೂಡ ವರನ ಕಡೆಯಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಇನ್ನೇನು ತಾಳಿ ಕಟ್ಟಲು ಕೆಲ ಸಮಯ ಮಾತ್ರ ಉಳಿದಿತ್ತು. ಅಷ್ಟರಲ್ಲಿ ಕಲ್ಯಾಣಮಂಟಪದ ಮಾಲೀಕರಿಗೆ ಮೊದಲನೇ ಪತ್ನಿ ವಸುಧ ಕರೆ ಮಾಡಿ ನಿಜಾಂಶ ತಿಳಿಸಿದ್ದಾರೆ. ಕೂಡಲೇ ಓಡಿ ಬಂದ ಮಾಲೀಕರು ವಧುವಿನ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಮದುವೆಯನ್ನು ನಿಲ್ಲಿಸಿದ್ದಾರೆ. ಇಷ್ಟಾದರೂ ಮಧುಸೂದನ್ ಮಾತ್ರ ತನಗೇನು ಗೊತ್ತಿಲ್ಲದಂತೆ ನಾಟವಾಡಲು ಶುರುಮಾಡಿದ್ದ. ಕೊನೆಗೆ ವಧುವಿನ ಸಂಬಂಧಿಕರು ಆತನನ್ನು ಹಿಡಿದುಕೊಂಡು ಕೇಳಿದಾಗ ನಿಜಾಂಶ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆರಿಸಿ – ಗುಜರಾತ್‍ನಲ್ಲಿ ಕೇಜ್ರಿವಾಲ್ ಅಭಿಯಾನ

    ಮಧುಸೂದನ್ ಎರಡನೇ ಮದುವೆಯಾಗಲು ಮೆಗಾಪ್ಲಾನ್ ಮಾಡಿದ್ದ. ಇಂದು ಬೆಳಿಗ್ಗೆಯಿಂದಲೂ ಬೇಗ ತಾಳಿ ಕಟ್ಟಿಸಿ ಒಂದು ಗಂಟೆಯೊಳಗೆ ಹೋಗಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿದ್ದ. ಅಲ್ಲದೇ ಹನಿಮೂನ್‍ಗೆ ಮಾಲ್ಡೀವ್ಸ್‌ಗೆ ಎರಡು ಟಿಕೆಟ್ ಬುಕ್ ಮಾಡಿದ್ದ. ನಾಳೆ ಬೆಳಗ್ಗೆ ಆರು ಗಂಟೆಗೆ ವಧು-ವರರಿಬ್ಬರು ಮಾಲ್ಡೀವ್ಸ್‌ಗೆ ಹಾರಬೇಕಿತ್ತು. ಅಷ್ಟರಲ್ಲಿ ಮೊದಲನೇ ಪತ್ನಿಯ ಸಮಯಪ್ರಜ್ಞೆಯಿಂದ ಅಮಾಯಕ ಯುವತಿಗೆ ಆಗುತ್ತಿದ್ದ ವಂಚನೆ ತಪ್ಪಿದಂತಾಗಿದೆ.

    ಮಧುಸೂದನ್‍ನನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದು ಮೊದಲನೇ ಪತ್ನಿ ವಸುಧ ಬೆಂಗಳೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇತ್ತ ಸಂಭ್ರಮದಲ್ಲಿದ್ದ ವಧುವಿನ ಮನೆಯವರು ಮಗಳ ಜೀವನ ಹಾಳುಗುತ್ತಿದ್ದು ತಪ್ಪಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ಮುಂದುವರಿಸೋದು ಬೇಡ ಅಂದಿದ್ದಕ್ಕೆ ಪ್ರಿಯಕರನಿಂದಲೇ ಯುವತಿ ಕೊಲೆ

    ಪ್ರೀತಿ ಮುಂದುವರಿಸೋದು ಬೇಡ ಅಂದಿದ್ದಕ್ಕೆ ಪ್ರಿಯಕರನಿಂದಲೇ ಯುವತಿ ಕೊಲೆ

    ಪಣಜಿ: ಪ್ರೀತಿ ಮುಂದುವರಿಸುವುದು ಬೇಡ ಅಂದಿದ್ದಕ್ಕೆ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದಕ್ಷಿಣ ಗೋವಾದ ವೆಲ್ಸಾನ್ ಬೀಚ್‍ನಲ್ಲಿ ನಡೆದಿದೆ.

    ಆರೋಪಿಯನ್ನು 26 ವರ್ಷದ ಕಿಶನ್ ಕಲಂಗುಟ್ಕರ್ ಎಂದು ರುತಿಸಲಾಗಿದ್ದು, ಯುವತಿಯ ಶವ ಸಮುದ್ರ ತೀರದಲ್ಲಿ ಪತ್ತೆಯಾದ ಒಂದು ದಿನದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ್ರ ಆರ್ಯ ಮನೆಯಲ್ಲಿ ಸಂತಸ

    CRIME 2

    ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ, ಬುಧವಾರ ಆಕೆಯೊಂದಿಗೆ ಬೀಚ್‍ಗೆ ತೆರಳಿದ್ದನು. ಈ ವೇಳೆ ಯುವತಿ ಪ್ರೀತಿಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಚಾಕುವಿನಿಂದ ಅನೇಕ ಬಾರಿ ಇರಿದು ಆಕೆಯನ್ನು ಕೊಂದಿದ್ದಾನೆ. ನಂತರ ಆಕೆಯ ಮೃತ ದೇಹವನ್ನು ಕಡಲ ತೀರದಲ್ಲಿರುವ ಪೊದೆಯೊಂದರಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಮೃತದೇಹ ಪತ್ತೆಯಾದ ಬಳಿಕ ತನಿಖೆ ಆರಂಭಿಸಿ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅಭಿಷೇಕ್ ಧನಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು 

  • ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು

    ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು

    ಬೆಂಗಳೂರು: ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ಯುವತಿ ವೇಲ್ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಚಂದ್ರಾಲೇಔಟ್‍ನಲ್ಲಿ ನಡೆದಿದೆ.

    ಬೆಂಗಳೂರಿನ ಚಂದ್ರಾಲೇಔಟ್‍ನಲ್ಲಿ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಯುವತಿ ಶಾಜಿಯಾ ಬಾನು ಕೆಲಸ ಮಾಡುತ್ತಿದ್ದರು. ಈ ವೇಳೆ ಶಾಜಿಯಾ ಬಾನು ಅವರ ವೇಲ್ ಮಷಿನ್‍ಗೆ ಸಿಲುಕಿ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಫ್ಯಾಕ್ಟರಿ ಸಿಬ್ಬಂದಿ ಶಾಜಿಯಾ ಬಾನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ – ಇಬ್ಬರು ಆರೋಪಿಗಳು ಸೆರೆ

    ಶಾಜಿಯಾ ಬಾನು ಸಾವಿನ ಹಿನ್ನೆಲೆ ಫ್ಯಾಕ್ಟರಿ ಮಾಲೀಕನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿಗಳು ಫ್ಯಾಕ್ಟರಿ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!

    ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!

    ಮುಂಬೈ: ಕಳ್ಳತನ ಮಾಡಲು ಪುರುಷರ ಬಟ್ಟೆಗಳನ್ನು ಧರಿಸಿದ್ದ 24 ವರ್ಷದ ಯುವತಿ ಸಿಕ್ಕಿಬಿದ್ದಿದ್ದು, ಸಹರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಚಾಕಲ ನಿವಾಸಿ ಆರೋಪಿ ಪೂಜಾ ಲೋಂಡೆ ಪುರುಷನ ವೇಷಧರಿಸಿ ಸಿಕ್ಕಿಬಿದ್ದಿದ್ದಾಳೆ. ಪೂಜಾ ತನ್ನ ಸಹಾಯಕರೊಂದಿಗೆ ಫುಟ್‍ಪಾತ್‍ನಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದಳು. ಕಳ್ಳತನ ಮಾಡಬೇಕಾದರೆ ಪುರುಷನ ವೇಷಧರಿಸುವುದೇ ಈಕೆಯ ವಿಶೇಷತೆ. ಕಾರಿನಲ್ಲಿ ಮಲಗಿದ್ದ ಚಾಲಕನನ್ನು ಗಮನಿಸಿದ ಪೂಜಾ ತನ್ನ ಗ್ಯಾಂಗ್ ಸಹಾಯದಿಂದ ಕಾರನ್ನು ಕದಿಯಲು ಸಿದ್ಧವಾಗಿದ್ದಾರೆ. ಇದನ್ನೂ ಓದಿ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!

    ಪೂಜಾ ತನಗೆ ತಾನೇ ಹಾನಿ ಮಾಡಿಕೊಳ್ಳುವುದಾಗಿ ಬೆದರಿಸುತ್ತಾ ಬ್ಲೇಡನ್ನು ಹೊರತೆಗೆದು ಅವಳ ಬಾಯಿಗೆ ಇಟ್ಟುಕೊಂಡಿದ್ದಾಳೆ. ಗಾಬರಿಯಾದ ಚಾಲಕ ಪೂಜಾಳನ್ನು ತಡೆಯಲು ಮುಂದಾಗಿದ್ದಾನೆ. ಚಾಲಕ ಹತ್ತಿರ ಬರುತ್ತಿದಂತೆ ಆಕೆ ಅವನ ಬಳಿ ಇದ್ದ ಗಾಡಿ ಕೀಯನ್ನು ಕಸಿದುಕೊಂಡು, ತನ್ನ ಗ್ಯಾಂಗ್ ಸಮೇತ ಪರಾರಿಯಾಗಿದ್ದಾಳೆ.

    ಈ ಕುರಿತು ಚಾಲಕ ಪೊಲೀಸರಿಗೆ ದೂರು ನೀಡಿದ್ದು, ಪುರುಷ ವೇಷ ಧರಿಸಿದ ಮಹಿಳೆಯೊಬ್ಬಳು ತನ್ನ ಗ್ಯಾಂಗ್ ಸಹಾಯದಿಂದ ನನ್ನ ಕಾರನ್ನು ಕದ್ದಿದ್ದಾಳೆ. ಈ ವೇಳೆ ಬಾಯಿಗೆ ಬ್ಲೇಡ್ ಇಟ್ಟು ನನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನಾನು ಗಾಬರಿಯಾಗಿ ಅವರನ್ನು ತಡೆಯಲು ಮುಂದಾದೆ. ಆದರೆ ಅವರೇ ನನ್ನ ಗಾಡಿ ಕೀ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾನೆ. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ

    ಸಹರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ಕೊಟ್ಟಿದ್ದು, ಚಾಲಕ ನೀಡಿದ ವಿವರಣೆಯ ಆಧಾರದ ಮೇಲೆ ನಾವು ನಮ್ಮ ಮೂಲಗಳನ್ನು ಟ್ಯಾಪ್ ಮಾಡಿದ್ದೇವೆ. ಕಳೆದ ವಾರ ಮಹಿಳೆಯನ್ನು ಬಂಧಿಸಿದ್ದೇವೆ. ತನಿಖೆಯ ಸಮಯದಲ್ಲಿ ಆಕೆಯ ವಿರುದ್ಧ 2018 ರಲ್ಲಿ ವಿಲೆ ಪಾರ್ಲೆ ಮತ್ತು ಸಾಂತಾಕ್ರೂಜ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಮತ್ತು ದರೋಡೆ ಪ್ರಕರಣ ದಾಖಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

  • ಪ್ರತಿಷ್ಠಿತ ಕಂಪನಿಯೊಂದರ ಮಹಿಳಾ ಉದ್ಯೋಗಿ ಅನುಮಾನಾಸ್ಪದ ಸಾವು – ಪ್ರಿಯಕರ ಬಂಧನ

    ಪ್ರತಿಷ್ಠಿತ ಕಂಪನಿಯೊಂದರ ಮಹಿಳಾ ಉದ್ಯೋಗಿ ಅನುಮಾನಾಸ್ಪದ ಸಾವು – ಪ್ರಿಯಕರ ಬಂಧನ

    ಕೋಲಾರ: ಇಲ್ಲಿನ ಪ್ರತಿಷ್ಠಿತ ಕಂಪೆನಿಯೊಂದರ ಮಹಿಳಾ ಉದ್ಯೋಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ನೆರ್ನಹಳ್ಳಿ ಗ್ರಾಮದ ನವ್ಯಶ್ರೀ ಕಳೆದ ಒಂದೂವರೆ ವರ್ಷದ ಹಿಂದೆ ಕೋಲಾರ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಊರಿನಿಂದ ಹೋಗಿ ಬರೋದು ಕಷ್ಟ ಎಂದು ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಪ್ರತ್ಯೇಕವಾಗಿ ರೂಮ್ ಮಾಡಿಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಇದ್ದಕ್ಕಿಂದಂತೆ ನವ್ಯಶ್ರೀ ಡಿ.26 ರಂದು ಕಾರಂಜಿಕಟ್ಟೆಯ ರೂಮ್‍ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದನ್ನೂ ಓದಿ: ಮಾಜಿ ಪೊಲೀಸ್ ಅಧಿಕಾರಿ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ

    ಕುಟುಂಬಸ್ಥರು ನವ್ಯಶ್ರೀ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದೊಂದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕೊಲೆಯ ಹಿಂದೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

    ನವ್ಯಶ್ರೀ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಕಡಿಸೀಗೇನಹಳ್ಳಿ ಗ್ರಾಮದ ಪ್ರದೀಪ್ ಯಾದವ್ ಕೆಲಸಮಾಡುತ್ತಿದ್ದ. ಇವರಿಬ್ಬರು ಪ್ರೀತಿಸುತ್ತಿದ್ದರು. ಆಗಾಗ ಪ್ರದೀಪ್, ನವ್ಯಶ್ರೀ ಇದ್ದ ರೂಮಿಗೆ ಬಂದು ಹೋಗುತ್ತಿದ್ದ ಎಂದು ಮನೆಯ ಮಾಲೀಕರು ಹಾಗೂ ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ.

    POLICE JEEP

    ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು, ಒಂದಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಇಬ್ಬರ ಫೋನ್ ಕಾಲ್ ಹಾಗೂ ವಾಟ್ಸಪ್ ಚಾಟಿಂಗ್ ನೋಡಿದಾಗ ಕೊಲೆಯ ಹಿಂದೆ ಪ್ರದೀಪ್ ಕೈವಾಡವಿರುವುದು ಸ್ಪಷ್ಟವಾಗಿದ್ದು, ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲು

    ಕೋಲಾರ ನಗರ ಠಾಣಾ ಪೊಲೀಸರು ಆರೋಪಿ ಪ್ರದೀಪ್ ಯಾದವ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

  • ಗೆಳತಿ ಶವವನ್ನು ನಡು ರಸ್ತೆಯಲ್ಲಿ ಎಸೆದ ಪ್ರಿಯಕರ

    ಗೆಳತಿ ಶವವನ್ನು ನಡು ರಸ್ತೆಯಲ್ಲಿ ಎಸೆದ ಪ್ರಿಯಕರ

    – ಸೆಕ್ಸ್ ವೇಳೆ ಸಾವನ್ನಪ್ಪಿದಳಾ ಯುವತಿ?
    – ಹೋಟೆಲ್ ರೂಂ ಬುಕ್ ಮಾಡಿದ್ದ ಇನಿಯ

    ಭುವನೇಶ್ವರ: ಯುವತಿಯೊಬ್ಬಳ ಶವವನ್ನು ಆಕೆಯ ಪ್ರಿಯಕರ ರಸ್ತೆಬದಿಯಲ್ಲಿ ಎಸೆದು ಹೋಗಿರುವ ಘಟನೆ ಒಡಿಶಾದ ಜಾಬ್‍ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯುವತಿ ಮಯೂರ್‍ಬಂಜ್ ಜಿಲ್ಲೆಯ ನಿವಾಸಿಯಾಗಿದ್ದು, ಜರಾಫುಲಾ ಎಂದು ಗುರುತಿಸಲಾಗಿದೆ. ಅಲ್ಲದೆ ಜರಾಫುಲಾ ಆರ್‍ಡಿ ಮಹಿಳಾ ಯೂನಿವರ್ಸಿಟಿ ವಿದ್ಯಾರ್ಥಿಯಾಗಿದ್ದಾಳೆ.

    ತನಿಖೆ ವೇಳೆ ಜರಾಫುಲಾ ಹಾಗೂ ಪ್ರಿಯಕರ ರಾಕೇಶ್ ಭುವನೇಶ್ವರ್ ಮೂಲದ ಹೋಟೆಲ್‍ವೊಂದರ ರೂಮ್ ನಂ-201ರಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಕುರಿತಂತೆ ಹೋಟೆಲ್ ಸಿಸಿಟಿವಿ ಕ್ಯಾಮೆರಾ ಫೋಟೇಜ್ ಮತ್ತು ನೋಂದಣಿ ಪುಸ್ತಕದ ವಿವರಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.

    ಈ ಕುರಿತಂತೆ ಆರೋಪಿ ರಾಕೇಶ್ ವಿಚಾರಣೆ ವೇಳೆ ಇಬ್ಬರು ಹೋಟೆಲ್‍ನಲ್ಲಿ ದೈಹಿಕ ಸಂಪರ್ಕ ನಡೆಸಿದ್ದೇವು. ಆದರೆ ಮುಂಜಾನೆ ಹೊತ್ತಿಗೆ ಜರಾಫುಲಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಇದನ್ನು ಕಂಡು ಗಾಬರಿಯಿಂದ ನನ್ನ ಸ್ನೇಹಿತ ಶೇಖರ್‍ಗೆ ಕರೆ ಮಾಡಿ ವಿಷಯ ತಿಳಿಸಿದೆ. ಕೂಡಲೇ ಸ್ಥಳಕ್ಕೆ ಬಂದ ಶೇಖರ್ ಜೊತೆ ಜರಾಫುಲಾ ಶವವನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ರಸ್ತೆ ಮಧ್ಯೆ ಎಸೆದು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ.

    ಯುವತಿ ತಂದೆ ರಮಾಕಾಂತ್, ಜನವರಿ 24ರಂದು ಜರಾಫುಲಾ, ಚಕ್ರಧರ್ ಎಂಬ ಟೀಚರ್ ಮಗಳ ಬರ್ತ್‍ಡೇ ಸಮಾರಂಭಕ್ಕೆ ಹೋಗುವುದಾಗಿ ಮನೆಗೆ ತಿಳಿಸಿದ್ದಳು, ಜನವರಿ 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಜನವರಿಗೆ 26 ರಂದು ಬೆಳಗ್ಗೆ 11 ಗಂಟೆಗೆ ಚಕ್ರಧರ್ ಜರಾಫುಲಾಳನ್ನು ಊರಿಗೆ ಮರಳಲು ಜಯದೇವ್ ವಿವಾರ್ ಸ್ಕ್ವೇರ್‍ಗೆ ಡ್ರಾಪ್ ಮಾಡಿದ್ದರು. ಆದರೆ ಹೊಟ್ಟೆನೋವಿದೆ ಆಸ್ಪತ್ರೆಗೆ ಹೋಗಿ, ಫ್ರೆಂಡ್ಸ್ ಮನೆಯಲ್ಲಿ ತಂಗಿದ್ದು ನಾಳೆ ಬರುವುದಾಗಿ ಮಧ್ಯಾಹ್ನ 3 ಗಂಟೆಗೆ ಕರೆ ಮಾಡಿ ತಿಳಿಸದ್ದ ಜಲಾಫುಲಾಗೆ ರಾತ್ರಿ ಎಷ್ಟೇ ಕರೆ ಮಾಡಿದರು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.

    ಅಲ್ಲದೆ ಊರಿನಲ್ಲಿ ಪೈಪ್‍ಲೈನ್ ಕೆಲಸ ಮಾಡುತ್ತಿದ್ದ ರಾಕೇಶ್‍ನನ್ನು ಜರಾಫುಲಾ ಪ್ರೀತಿಸುತ್ತಿದ್ದಳು. ಇಬ್ಬರು ವಾಟ್ಸಪ್ ಹಾಗೂ ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು. ಜೊತೆಗೆ ಜಲಾಫುಲಾ ಹೆಚ್ಚಾಗಿ ರಾಕೇಶ್‍ನೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಳು. ಜರಾಫುಲಾಳನ್ನು ಆತನೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

    ಇದೀಗ ಪ್ರಕರಣ ಕುರಿತಂತೆ ಪೊಲೀಸರು ರಾಕೇಶ್‍ನನ್ನು ಬಂಧಿಸಿದ್ದು, ಆತನ ಸ್ನೇಹಿತ ಶೇಖರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಸಾವಿನ ವಿಚಾರವಾಗಿ ಪೊಲೀಸರಿಗೆ ಯಾವುದೇ ನಿಖರವಾದ ಮಾಹಿತಿ ದೊರೆತಿಲ್ಲ.

  • ಪತಿಯಿಂದ ದೂರವಾದ್ಳು – ಪ್ರೀತಿಸಿದ ಯುವಕ ಕೈ ಕೊಟ್ಟ

    ಪತಿಯಿಂದ ದೂರವಾದ್ಳು – ಪ್ರೀತಿಸಿದ ಯುವಕ ಕೈ ಕೊಟ್ಟ

    – ಕಣ್ಣೀರಿನಲ್ಲಿ ಜೀವನ ನಡೆಸುತ್ತಿರುವ ಮಹಿಳೆ

    ಚಾಮರಾಜನಗರ: ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಸಂಸಾರದ ನೌಕೆ ಹೊತ್ತ ಯುವತಿ, ಮದುವೆಯಾದ 5 ವರ್ಷದಲ್ಲೇ ಗಂಡನಿಂದ ದೂರವಾಗಿ ತವರು ಮನೆ ಸೇರಿ ಹೆಣ್ಣು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದಳು. ಹೀಗಿರುವಾಗಲೇ ಯುವಕನೊಬ್ಬ ಜೀವನ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದು, ಯುವತಿ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾಳೆ.

    ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಅಮಚವಾಡಿ ಗ್ರಾಮದ ಪುಷ್ಪಾ, 14ನೇ ವಯಸ್ಸಿನಲ್ಲಿ ತನ್ನ ತಾಯಿ ಕಳೆದುಕೊಂಡು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಳು. ಅಷ್ಟರಲ್ಲಾಗಲೇ ಪುಷ್ಪಾಳ ತಂದೆ ತಾಯಿ ಇಲ್ಲದವಳನ್ನು ಯಾರೂ ಮದುವೆಯಾಗುವುದಿಲ್ಲವೆಂದು 14ನೇ ವಯಸ್ಸಿಗೇ ನಂಜನಗೂಡಿನ ಬದನಗುಪ್ಪೆ ಗ್ರಾಮದ ಕೃಷ್ಣ ನಾಯಕ ಎಂಬವನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಶಾಲೆ, ಕಾಲೇಜು ಹೀಗೆ ಬಾಲ್ಯದ ದಿನಗಳನ್ನ ಕಳೆಯಬೇಕಿದ್ದ ಪುಷ್ಪಾಳಿಗೆ ಸಂಸಾರ ನಿಭಾಯಿಸುವುದು ಕಷ್ಟವಾಗಿರುತ್ತದೆ. ಅಷ್ಟೊತ್ತಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪುಷ್ಟಾ, ಗಂಡನ ಜೊತೆ ಸಂಸಾರ ಮಾಡಲು ಸಾಧ್ಯವಾಗದೇ ಮದುವೆಯಾದ ಐದೇ ವರ್ಷಕ್ಕೆ ಗಂಡನಿಂದ ದೂರವಾಗಿ ತವರು ಮನೆ ಸೇರಿಕೊಳ್ಳುತ್ತಾಳೆ.

    ಮಗುವನ್ನು ಸಾಕಲು ಚಾಮರಾಜನಗರದ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾಳೆ. ಈ ವೇಳೆ ಮಹೇಶ್ ಪರಿಚಯವಾಗುತ್ತದೆ. ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಪುಷ್ಪಾಳ ಎಲ್ಲ ವಿಚಾರವನ್ನು ಚೆನ್ನಾಗಿ ತಿಳಿದುಕೊಂಡು ಬಾಳು ಕೊಡುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ತನ್ನ ಅಜ್ಜಿಯೊಂದಿಗೆ ತವರು ಮನೆಯಲ್ಲಿ ಜೀವನ ನಡೆಸುತ್ತಿದ್ದ ಪುಷ್ಪಾಳನ್ನ ಚಾಮರಾಜನಗರ ಪಟ್ಟಣಕ್ಕೆ ಕರೆಸಿಕೊಂಡ ಮಹೇಶ್, ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಲೈಂಗಿಕವಾಗಿ ಬಳಸಿಕೊಂಡ ನಂತರ ಮದುವೆಯಾಗುವಂತೆ ಪುಷ್ಪಾ ಪೀಡಿಸಿದಾಗಲೆಲ್ಲ ಇಂದು, ನಾಳೆ ಎಂದು ಕಥೆ ಹೇಳುತ್ತಿದ್ದ.

    ಪುಷ್ಪಾ ನಾಲ್ಕು ತಿಂಗಳ ಗರ್ಭವತಿಯಾದಾಗ ಹೆದರಿ ಮಗು ತೆಗೆಸುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಪುಷ್ಪಾ ಒಪ್ಪುವುದಿಲ್ಲ. ಬಳಿಕ ತಮಿಳುನಾಡಿಗೆ ಪ್ರವಾಸ ಕರೆದುಕೊಂಡು ಹೋದ ಮಹೇಶ್, ಮತ್ತು ಬರುವ ಔಷಧಿ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಅಪರೇಷನ್ ಮಾಡಿಸಿಕೊಂಡು ಮೈಸೂರಿಗೆ ಕರೆದುಕೊಂಡು ಹೋಗುತ್ತಾನೆ. ದಿನನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಮಹೇಶ್ ಬೇರೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಗಿದೆ.

    ತಕ್ಷಣ ನ್ಯಾಯ ಕೊಡಿಸುವಂತೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪುಷ್ಪಾ ದೂರು ದಾಖಲಿಸುತ್ತಾಳೆ. ಪೊಲೀಸರು ಮಹೇಶ್ ನನ್ನ ಕರೆಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ. ಇತ್ತ ಗಂಡನಿಂದ ದೂರವಾದ ಪುಷ್ಪಾ ಸಾಕಷ್ಟು ಕಷ್ಟ ಅನುಭವಿಸಿದ್ದು, ಪ್ರಿಯಕರ ಮಹೇಶ್ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ಕಣ್ಣೀರುಡುತ್ತಿದ್ದಾಳೆ. ಸದ್ಯ ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕುಟುಂಬದ ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆದಿದ್ದಾಳೆ. ಗಂಡನಿಂದ ದೂರವಾಗಿದ್ದ ಪುಷ್ಪಾಳಿಗೆ ಪ್ರಿಯಕರ ಮಹೇಶ್ ಬಾಳು ಕೊಡುವ ಭರವಸೆ ಕೊಟ್ಟು ಗಾಯದ ಮೇಲೆ ಮತ್ತೆ ಬರೆ ಎಳೆದಿದ್ದಾನೆ.

  • ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವಿಜಯಪುರ: ಯುವತಿವೊಬ್ಬಳನ್ನು ಚೂಡಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಅರಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಿಂದಗಿ ತಾಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಶಂಕರ್(43) ಎಂಬಾತ ತಾಂಡಾದಲ್ಲಿರುವ ಯವತಿನ್ನು ಚೂಡಾಯಿಸುತ್ತಿದ್ದ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಶಂಕರ್‍ಗೆ ಲಂಗ ತೊಡಿಸಿ, ಅರ್ಧ ತಲೆ ಬೋಳಿಸಿ ಊರು ತುಂಬ ಮೆರವಣಿಗೆ ಮಾಡಿದ್ದಾರೆ.

    ಈ ಘಟನೆ ಜುಲೈ 11 ರಂದು ನಡೆದಿದದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಶಂಕರ್‍ನನ್ನು ಬಂಧಿಸಿದ್ದು ಪೊಲೀಸರು ತನಿಖೆ ಮಂದುವರೆಸಿದ್ದಾರೆ.

    https://youtu.be/E56QglLzlbM