Tag: Young girls

  • ಚಿತ್ರದುರ್ಗ| ಬುಡಕಟ್ಟು ಸಮುದಾಯದ ವಿಶೇಷ ದೀಪಾವಳಿ – ಯುವತಿಯರು ಮಾತ್ರ ಆಚರಿಸುವ ಗೋದ್ನಾಹಬ್ಬ

    ಚಿತ್ರದುರ್ಗ| ಬುಡಕಟ್ಟು ಸಮುದಾಯದ ವಿಶೇಷ ದೀಪಾವಳಿ – ಯುವತಿಯರು ಮಾತ್ರ ಆಚರಿಸುವ ಗೋದ್ನಾಹಬ್ಬ

    ಚಿತ್ರದುರ್ಗ: ಕೋಟೆನಾಡಿನ ಬಣಜಾರ ತಾಂಡದಲ್ಲಿ ಆಚರಿಸುವ ಗೋದ್ನಹಬ್ಬ (Godna Festival) ಯುವತಿಯರ ಬದುಕಿಗೆ ದಾರಿದೀಪವಾಗಿದೆ. ಮದುವೆಯಾಗದ ಯುವತಿಯರು ಸಾಂಪ್ರದಾಯಿಕವಾಗಿ ಆಚರಿಸುವ ವಿಶೇಷ ಸಂಸ್ಕೃತಿಯೊಂದು ಪೂರ್ವಜರ ಕಾಲದಿಂದಲು ಜೀವಂತವಾಗಿದೆ.

    ತಲೆ ಮೇಲೆ ಬುಟ್ಟಿ ಹೊತ್ತು ಹೂ ತರಲು ಕಾಡಿಗೆ ಹೊರಟ ಯುವತಿಯರು. ರಸ್ತೆಯುದ್ದಕ್ಕೂ ಭರ್ಜರಿ ಸ್ಟೆಪ್ ಹಾಕುತ್ತಿರುವ ವನಿತೆಯರು. ಈ ದೃಶ್ಯಗಳು ಕಂಡುಬಂದಿದ್ದು ಚಿತ್ರದುರ್ಗ (Chitradurga) ತಾಲೂಕಿನ ಮದಕರಿಪುರ (Madakaripura) ತಾಂಡದಲ್ಲಿ. ಹೌದು, ಬಂಜಾರ ಸಮುದಾಯವು ಈ ಸಂಸ್ಕೃತಿಯನ್ನು ಪೂರ್ವಜರ ಕಾಲದಿಂದಲೂ ಆಚರಿಸುತ್ತಿದೆ. ಈ ಸಂಪ್ರದಾಯವನ್ನು ಪ್ರತಿವರ್ಷ ದೀಪಾವಳಿಯಂದು ಆಚರಿಸಲಿದ್ದು, ಮದುವೆ ವಯಸ್ಸಿಗೆ ಬಂದ ಯುವತಿಯರು ತವರು ಮನೆಯಲ್ಲಿ ಗೋದ್ನಹಬ್ಬದಲ್ಲಿ ಭಾಗಿಯಾಗೋದು ಇಲ್ಲಿನ ವಿಶೇಷ. ಅಲ್ಲದೇ ಗೋದ್ನಹಬ್ಬದಲ್ಲಿ ಒಮ್ಮೆ ಭಾಗಿಯಾದ ಯುವತಿ ಮುಂದಿನ ವರ್ಷ ತನ್ನ ಗಂಡನ ಮನೆಯಲ್ಲಿ ದೀಪಾವಳಿ ಆಚರಿಸುತ್ತಾಳೆ. ಗಂಡನ ಮನೆಯ ದೀಪ ಬೆಳಗಿಸಿ ಅವರ ಬದುಕಿಗೆ ಬೆಳಕಾಗುವಂತೆ ಸ್ವರ್ಗಾಸ್ತರಾದ ಹಿರಿಯರು ಆಶೀರ್ವದಿಸುವರೆಂಬ ನಂಬಿಕೆ ಇವರಲ್ಲಿದೆ. ಹೀಗಾಗಿ ಪ್ರತಿವರ್ಷ ದೀಪಾವಳಿಯಂದು ಎರಡು ದಿನಗಳ ಕಾಲ ಗೋದ್ನಾ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ಇನ್ನು ಈ ಹಬ್ಬಕ್ಕೆ ಕಾಡಿನಿಂದ ಬಗೆಬಗೆಯ ಹೂಗಳನ್ನು ತರುತ್ತಾರೆ. ಆ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ದೀಪ ಬೆಳಗಿಸಿ ಪೂಜಿಸುತ್ತಾರೆ. ಅಲ್ಲದೇ ತವರು ಮನೆಯಲ್ಲಿರುವ ಸ್ವತಂತ್ರವು, ಗಂಡನ ಮನೆಯಲ್ಲೇ ಸಿಗದೇ ಇರಬಹುದು. ಹೀಗಾಗಿ ಮದುವೆಗೂ ಮುನ್ನ ತವರಿನಲ್ಲಿ ಆಚರಿಸುವ ಗೋದ್ನಹಬ್ಬ ಜೀವನಪರ್ಯಂತ, ಆ ಯುವತಿಗೆ ಸವಿನೆನಪಾಗಿ ಉಳಿಯಲಿ ಎಂಬ ಉದ್ದೇಶದಿಂದ ದೀಪಾವಳಿ ಹಬ್ಬವನ್ನು ಈ ರೀತಿ ಆಚರಿಸುತ್ತಾರೆ. ಇದನ್ನೂ ಓದಿ: Bengaluru | ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಡೋರ್‌ಲಾಕ್‌ ಓಪನ್‌ – ಐಷಾರಾಮಿ ಕಾರುಗಳ್ಳರ ಬಂಧನ

  • ಮುಂಬೈನಿಂದ ಬಂದಿದ್ದ ಬಾಲಕಿಯರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವು

    ಮುಂಬೈನಿಂದ ಬಂದಿದ್ದ ಬಾಲಕಿಯರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವು

    ಚಿಕ್ಕಬಳ್ಳಾಪುರ: ಈಜಲು (Swimming) ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚೇನಹಳ್ಳಿ (Manchenahalli) ಬಳಿ ಇರುವ ದಂಡಿಗಾನಹಳ್ಳಿ ಡ್ಯಾಮ್‌ನಲ್ಲಿ ನಡೆದಿದೆ.

    ಮಹಾರಾಷ್ಟ್ರದ (Maharashtra) ಮುಂಬೈ (Mumbai) ಮೂಲದ ಆಲಿಯಾ ಪಾಟೀಲ್ (17) ಹಾಗೂ ಜೋಯ ಪಾಟೀಲ್(14) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ಮುಂಬೈ ಮೂಲದ ಬಾಲಕಿಯರು ಗೌರಿಬಿದನೂರು ನಗರದ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಇನ್ನೆರಡು ದಿನಗಳ ನಂತರ ಮುಂಬೈಗೆ ವಾಪಸ್ ಆಗಲಿದ್ದರು. ದಂಡಿಗಾನಹಳ್ಳಿ ಜಲಾಶಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಜಲಾಶಯಕ್ಕೆ ಹೋದವರು ಜಲಾಶಯದ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಪೊಲೀಸ್ ಅಧಿಕಾರಿ ನಿವೃತ್ತಿ ಹಿಂದಿನ ದಿನವೇ ಸಸ್ಪೆಂಡ್

    ಸ್ಥಳೀಯರು ಇಬ್ಬರ ಮೃತದೇಹವನ್ನು ನೀರಿನಿಂದ ಮೇಲೆ ತಂದಿದ್ದಾರೆ. ಮೃತರ ಸಂಬಂಧಿಕರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸದೆ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೊನೆಗೆ ಪೊಲೀಸರು ಮನೆಗೆ ತೆರಳಿ ಸಂಬಂಧಿಕರ ಮನವೊಲಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೆರಡು ದಿನಗಳಲ್ಲಿ ಜೀವಂತವಾಗಿ ಮುಂಬೈಗೆ ತೆರಳಬೇಕಿದ್ದ ಇಬ್ಬರು ಬಾಲಕಿಯರು ಸದ್ಯ ಶವವಾಗಿ ಮುಂಬೈಗೆ ತೆರಳಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ 10 ಸ್ಥಾನ ಗೆಲುವು: ಬಿಜೆಪಿ ವಿಶ್ವಾಸ

  • ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್‍ನಲ್ಲೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್‍ನಲ್ಲೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಕೋಲಾರ: ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್ ನಲ್ಲಿ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದ ಬಳಿ ನಡೆದಿದೆ.

    ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಯುವಕರ ಗುಂಪು ಬಾಬುಗೆ ಮನಬಂದಂತೆ ಥಳಿಸಿದೆ. ಯುವಕರಾದ ಅಭಿ, ನಾಗೇಂದ್ರ, ಗಂಗಾಧರ್, ನರೇಷ್ ಗುಂಪಿಂದ ಹಲ್ಲೆಯಾಗಿದೆ. ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ – ಶೂಟಿಂಗ್‍ನಲ್ಲಿ ಮನೀಷ್‍ಗೆ ಚಿನ್ನ, ಸಿಂಗ್‍ರಾಜ್‍ಗೆ ಬೆಳ್ಳಿ

    ಬಾಬು ಹಾಗೂ ಮತ್ತೊಬ್ಬ ಯುವಕ ತಾಡಿಗೋಳ್ ಗ್ರಾಮದ ಯುವತಿಯರನ್ನು ಚುಡಾಯಿಸುತ್ತಿದ್ದರು. ಚುಡಾಯಿಸಬೇಡ ಎಂದು ಎಚ್ಚರಿಕೆ ನೀಡಿದ್ದರು, ಮತ್ತೊಮ್ಮೆ ಚುಡಾಯಿಸಿದ್ದಕ್ಕೆ ಯುವಕರು ಧರ್ಮದೇಟು ನೀಡಿದ್ದಾರೆ. ಬಾಬು ಹಿಂಬದಿಯ ಸೀಟ್ ನಲ್ಲಿದ್ದ ಓರ್ವ ಯುವತಿ ಹಾಗೂ ಯುವಕನಿಗೂ ಏಟು ಬಿದ್ದಿವೆ. ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಖ್ಯಾತ ಉದ್ಯಮಿಯಿಂದ ಯುವತಿಯರಿಗೆ ಅಶ್ಲೀಲ ಮೆಸೇಜ್‍- ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

    ಖ್ಯಾತ ಉದ್ಯಮಿಯಿಂದ ಯುವತಿಯರಿಗೆ ಅಶ್ಲೀಲ ಮೆಸೇಜ್‍- ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

    ಬೆಂಗಳೂರು: ನಗರದ ಖ್ಯಾತ ಉದ್ಯಮಿಯೊಬ್ಬರು ತನ್ನ ಕೈ ಕೆಳಗೆ ಕೆಲಸ ಮಾಡುವ ಸುಂದರ ಯುವತಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಯುವತಿಯರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ.

    ರಾತ್ರಿ ಆದರೆ ಸಾಕು, ಕೆಟ್ಟ ಪದ ಬಳಕೆ ಮಾಡಿ ಅಶ್ಲೀಲವಾಗಿ ಮೆಸೇಜ್‍ ಮಾಡುತ್ತಿದ್ದರು. ಮಾಲೀಕನೇ ಈ ರೀತಿ ಮೆಸೇಜ್ ಮಾಡುತ್ತಿದ್ದನ್ನು ನೋಡಿ ಯುವತಿಯರು ಕೂಡ ಶಾಕ್ ಆಗಿದ್ದರು. ಯಾವಾಗ ಮೆಸೇಜ್‍ಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಯಿತೋ ಯುವತಿಯರು ಬೇರೆ ದಾರಿ ಇಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದರು. ದೂರು ದಾಖಲಿಸಿಕೊಂಡ ಪೊಲೀಸರು ಉದ್ಯಮಿಯನ್ನು ಠಾಣೆಗೆ ಕರೆದಿದ್ದರು. ಪೊಲೀಸ್ ಠಾಣೆಗೆ ಬಂದ ಉದ್ಯಮಿ ಮಸೇಜ್‍ಗಳ ವಿಚಾರ ತಿಳಿದು, ಅಶ್ಲೀಲ ಮೆಸೇಜ್‍ಗಳ ಹಿಂದಿನ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದರು.

    ಆಗಿದ್ದೇನು?
    ಕಳೆದ 16ರಂದು ಉದ್ಯಮಿ ಹೆಬ್ಬಾಳ ಬಳಿಯ ಕೆಂಪಾಪುರ ಸಿಗ್ನಲ್ ಬಳಿ ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಮತ್ತೊಂದು ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದ್ದರು. ಕೆಳಗಿಳಿದ ಇಂಡಿಕಾ ಕಾರು ಚಾಲಕ ಏಕಾಏಕಿ ಉದ್ಯಮಿ ಬಳಿ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಕೈಯಲ್ಲಿದ್ದ ಮೊಬೈಲ್ ಕಸಿದು ಹೊರಟು ಹೋಗಿದ್ದನು. ಮೊಬೈಲ್ ತಾನೇ ಹೋದರೆ ಮತ್ತೊಂದು ಖರೀದಿಸಬಹುದು ಎಂದು ಉದ್ಯಮಿ ಕೂಡ ಸುಮ್ಮನಾಗಿದ್ದರು.

    ಈ ವಿಚಾರ ತಿಳಿದ ಅಮೃತಹಳ್ಳಿ ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ವಿಚಾರಣೆ ವೇಳೆ ಚಾಲಕ ಮಿಥುನ್ ಮೆಸೇಜ್‍ಗಳ ಹಿಂದಿನ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದನು. ಉದ್ಯಮಿಯಿಂದ ಮೊಬೈಲ್ ಕಸಿದುಕೊಂಡು ಚಾಲಕ ಮನೆಗೆ ಹೋಗಿದ್ದನು. ಈ ವೇಳೆ ಆತ ಉದ್ಯಮಿಯ ಮೊಬೈಲಿನಲ್ಲಿದ್ದ ಸುಂದರ ಯುವತಿಯರ ನಂಬರ್‍ಗಳಿಗೆ ವಾಟ್ಸಪ್ ಹಾಗೂ ಟೆಕ್ಸ್ಟ್ ಮೆಸೇಜ್ ಮಾಡುವುದಕ್ಕೆ ಶುರು ಮಾಡಿದ್ದನು. ಲೈಟ್ ನೈಟ್‍ವರೆಗೂ ಅಶ್ಲೀಲವಾಗಿ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದಾಗಿ ಚಾಲಕ ಮಿಥುನ್ ತಪ್ಪೊಪ್ಪಿಕೊಂಡಿದ್ದಾನೆ.

    ಇತ್ತ ಮಾಡದ ತಪ್ಪಿಗೆ ಉದ್ಯಮಿ ಪೊಲೀಸ್ ಠಾಣಾ ಮೆಟ್ಟಿಲೇರಿದರೆ, ಅತ್ತ ಕಾರು ಚಾಲಕ ಜೈಲು ಸೇರಿದ್ದಾನೆ.

  • ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

    ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

    ವಿಜಯಪುರ: ಜಿಲ್ಲೆಯಲ್ಲಿ ಹೆಣ್ಮಕ್ಕಳ ರಕ್ಷಣೆಗೆ ಪ್ರಾತಿನಿಧ್ಯ ಕೊಡಲಾಗುತ್ತಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಓಬವ್ವ ಪಡೆ ರೋಡ್ ರೋಮಿಯೋಗಳಿಗೆ ಸಿಂಹಸ್ವಪ್ನವಾಗಲಿದೆ. ವಿಜಯಪುರದ ಹೆಣ್ಣು ಮಕ್ಕಳು ನಿಶ್ಚಿಂತೆಯಿಂದ ಯಾವ ಭಯವಿಲ್ಲದೆ ಓಡಾಡಬಹುದಾಗಿದೆ.

    ವೀರ ಒನಕೆ ಓಬವ್ವ ತನ್ನ ರಾಜ್ಯದ ಮೇಲೆ ಕಣ್ಣು ಹಾಕಿದ್ದ ಹೈದರಾಲಿ ಶತ್ರುಪಡೆಯನ್ನು ಬರಿ ಒನಕೆಯಿಂದಲೇ ಮಣ್ಣು ಮುಕ್ಕಿಸಿದ್ದಳು. ಈಗ ಈ ವೀರ ವನಿತೆ ಓಬವ್ವ ಹೆಸರಿನಲ್ಲಿ ಪಡೆಯೊಂದು ರೆಡಿಯಾಗಿದೆ. ಅದು ಹೆಣ್ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗಾಗಿ. ಇಲ್ಲಿಯವರೆಗೂ ಇಂತಹ ಯಾವ ಪಡೆಯೂ ವಿಜಯಪುರದಲ್ಲಿರಲಿಲ್ಲ, ಹೀಗಾಗಿ ಹೆಣ್ಣು ಮಕ್ಕಳ ರಕ್ಷಣೆಗಾಗಿಯೆ ವಿಶೇಷವಾಗಿ ಓಬವ್ವ ಪಡೆ ರೆಡಿಯಾಗುತ್ತಿದೆ.

    ವಿಜಯಪುರ ಜಿಲ್ಲಾ ಪೊಲೀಸ್ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 15 ಜನ ಮಹಿಳಾ ಪೊಲೀಸ್ ಪೇದೆಗಳನ್ನೊಳಗೊಂಡ ಪಡೆ ಇದಾಗಿದೆ. ಇವರಿಗೆ ಜಬರ್ದಸ್ತ್ ತರಬೇತಿ ಕೊಡಲಾಗುತ್ತಿದೆ. ಬೈಕ್ ರೈಡಿಂಗ್, ಕರಾಟೆ, ಸೇರಿದಂತೆ ಇತರೆ ತರಬೇತಿ ನೀಡಲಾಗುತ್ತಿದೆ. ವಿಜಯಪುರ ಎಸ್‍ಪಿ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ಮಹಿಳಾ ಪೇದೆಗಳಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಓಬವ್ವ ಪಡೆ ಬೈಕ್ ಮೇಲೆ ಗಸ್ತು ತಿರುಗುತ್ತಲೇ ಇರುತ್ತದೆ. ಶಾಲಾ- ಕಾಲೇಜುಗಳ ಸುತ್ತಮುತ್ತ, ಮಾರುಕಟ್ಟೆಗಳಲ್ಲಿ ಚಿತ್ರಮಂದಿರದ ಹತ್ತಿರದ ಸ್ಥಳಗಳು ಹೀಗೆ ಎಲ್ಲಡೆ ಗಸ್ತು ತಿರುಗುತ್ತಲೆ ಇರುತ್ತಾರೆ. ಹೆಣ್ಣು ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗೆ ಓಬವ್ವ ಪಡೆ ಒದ್ದು ಬುದ್ಧಿ ಕಲಿಸಲಿದೆ. ಅಲ್ಲದೆ ಹೆಣ್ಣುಮಕ್ಕಳ ತಂಟೆಗೆ ಬರುವವರಿಗೆ ತಕ್ಕ ಶಿಕ್ಷೆಯೂ ನಿಶ್ಚಿತ.

    ಈ ಓಬವ್ವ ಪಡೆ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಲಿದೆ. ಸ್ವಯಂರಕ್ಷಣೆ ಮಾಡಿಕೊಳ್ಳುವುದು ಹೇಗೆ, ಪುಂಡ ಪೋಕರಿಗಳಿಗೆ ಬುದ್ಧಿ ಕಲಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಲಿದೆ. ಸೂಕ್ತ ತರಬೇತಿ ಪಡೆದು ಆದಷ್ಟು ಬೇಗ ಓಬವ್ವ ಪಡೆ ಫೀಲ್ಡ್ ಗೆ ಇಳಿಯಲಿದೆ. ಓಬವ್ವ ಪಡೆ ರೋಡ್ ರೋಮಿಯೋ, ಪುಡಾರಿಗಳು, ಕಾಮುಕರ ಹೆಡೆಮುರಿ ಕಟ್ಟಲಿದೆ.

    ಓಬವ್ವ ಪಡೆಗೆ ಜಿಲ್ಲೆಯಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳ ಆವರಣಗಳ ಮುಂದೆ ಮಹಿಳಾ ವಸತಿ ನಿಲಯಗಳ ಮುಂದೆ ಪಡ್ಡೆ ಹುಡುಗರ ಕಾಟ ಹೇಳತೀರದು. ಹೆಣ್ಣು ಮಕ್ಕಳನ್ನು ಚುಡಾಯಿಸುವವರಿಗೆ ಓಬವ್ವ ಪಡೆ ದೊಡ್ಡ ಭರವಸೆಯ ರಕ್ಷಣಾ ಕವಚವಾಗಿ ಮೂಡಿ ಬರಲೆಂದು ವಿಜಯಪುರದ ಜನ ಆಶಿಸುತ್ತಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಲವ್ – ಮದ್ವೆ ಆಗಲು ಮನೆ ಬಿಟ್ಟು ಹೋದ್ರು ಹುಡುಗಿಯರು

    ಫೇಸ್‍ಬುಕ್‍ನಲ್ಲಿ ಲವ್ – ಮದ್ವೆ ಆಗಲು ಮನೆ ಬಿಟ್ಟು ಹೋದ್ರು ಹುಡುಗಿಯರು

    ಬೆಂಗಳೂರು: ನಗರದಲ್ಲಿ ಮತ್ತೊಂದು ಸಲಿಂಗ ಕಾಮ ಪ್ರಕರಣ ಬೆಳಕಿಗೆ ಬಂದಿದ್ದು ಮದುವೆ ಮಾಡಿಕೊಳ್ಳಲು ಓಡಿ ಹೋಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರು ನಿವಾಸಿಯಾಗಿರುವ ಗೀತಾ (ಹೆಸರು ಬದಲಾಯಿಸಲಾಗಿದೆ) ಗೆ ಮಹಾರಾಷ್ಟ್ರದ ದೀಪಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದಳು. ಫೇಸ್‍ಬುಕ್ ನಲ್ಲಿ ಪರಿಚಯಗೊಂಡ ಇಬ್ರೂ ಸ್ನೇಹಿತರು ಪ್ರತಿನಿತ್ಯ ಚಾಟ್ ಮಾಡುತ್ತಿದ್ದರು. ಹೀಗೆ ಇಬ್ಬರೂ ಸ್ನೇಹಿತೆಯರ ಸ್ನೇಹ ಸಲಿಂಗ ಕಾಮಕ್ಕೆ ತಿರುಗಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ.

    ಇಬ್ಬರೂ ಮದುವೆಯಾಗಲು ನಿರ್ಧರಿಸುತ್ತಿದ್ದಂತೆ ದೀಪಾ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದಿದ್ದಾಳೆ. ಬೆಂಗಳೂರಿಗೆ ದೀಪಾ ಬಂದಾಗ ಗೀತಾ ತಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂದು ತಿಳಿಸಿದ್ದಾಳೆ. ಮಗಳ ಮಾತು ಕೇಳಿದ ಪೋಷಕರು ಶಾಕ್ ಆಗಿದ್ದಾರೆ. ಕೂಡಲೇ ಮನೆಯವರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮದುವೆಗೆ ವಿರೋಧವಾಗುತ್ತಲೇ ಗೀತಾ ಮತ್ತು ದೀಪಾ ಮಹಾರಾಷ್ಟ್ರಕ್ಕೆ ಓಡಿ ಹೋಗಿದ್ದಾರೆ.

    ಸದ್ಯ ಗೀತಾ ಮತ್ತು ದೀಪಾ ಇಬ್ಬರೂ ಒಂದೇ ಕಡೆ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಗೀತಾ ಕಾಣೆಯಾದ ಬಳಿಕ ಪೋಷಕರು ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.