Tag: young girl

  • ಯುವಕನ ಪುಂಡಾಟಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಆಸ್ಪತ್ರೆಯಲ್ಲಿ ಸಾವು

    ಯುವಕನ ಪುಂಡಾಟಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಆಸ್ಪತ್ರೆಯಲ್ಲಿ ಸಾವು

    ಮೈಸೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ರಮ್ಮಹಳ್ಳಿ ನಿವಾಸಿಯಾದ ರಜನಿ ಮೃತ ದುರ್ದೈವಿ. ಸುಮಾರು 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಕಿಡಿಗೇಡಿ ಯುವಕನ ಪುಂಡಾಟಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಳು.

    ಅದೇ ಗ್ರಾಮದ ದೊಡ್ಡಸ್ವಾಮಿ ಎಂಬಾತ ರಜನಿಯನ್ನ ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ. ಯುವಕನ ಪ್ರೀತಿಯನ್ನ ರಜನಿ ತಿರಸ್ಕರಿಸಿದ್ದಳು ಹಾಗೂ ಅಪ್ರಾಪ್ತಳಾದ ಕಾರಣ ಮನೆಯವರೂ ಸಹ ದೊಡ್ಡಸ್ವಾಮಿಯ ಮನವಿಯನ್ನ ತಿರಸ್ಕರಿಸಿದ್ದರು. ಆದರೆ ಪಟ್ಟು ಬಿಡದ ದೊಡ್ಡಸ್ವಾಮಿ ಯುವತಿಯ ಹಿಂದೆ ಬಿದ್ದು ಕಿರುಕುಳ ಕೊಡುತ್ತಿದ್ದ. ಒಂಟಿಯಾಗಿ ಸಿಕ್ಕಾಗ ಫೋಟೋಗಳನ್ನ ತೆಗೆದು ಫೇಸ್ ಬುಕ್ ಗೆ ಹಾಕುವುದಾಗಿ ಬೆದರಿಸಿದ್ದ.

    ಇದರಿಂದ ಮನನೊಂದ ರಜನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದ ರಜನಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

    ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆಯಾಗೋದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸ್ದ- ನೊಂದ ಯುವತಿಯಿಂದ ಪೇದೆ ವಿರುದ್ಧ  ದೂರು

    ಮದ್ವೆಯಾಗೋದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸ್ದ- ನೊಂದ ಯುವತಿಯಿಂದ ಪೇದೆ ವಿರುದ್ಧ ದೂರು

    ದಾವಣಗೆರೆ: ಮದುವೆಯಾಗೋದಾಗಿ ನಂಬಿಸಿ, ವಂಚಿಸಿರುವ ಆರೋಪವೊಂದು ಪೊಲೀಸ್ ಪೇದೆಯೊಬ್ಬರ ವಿರುದ್ಧ ಕೇಳಿಬಂದಿದೆ.

    ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಮಾಡಲಗೇರಿ ಮೂಲದ ಪೇದೆ ಮಂಜುನಾಥ್ ಕಣಿವೆ ಶಿವಮೊಗ್ಗದ ಕುಂಸಿಯಲ್ಲಿ ಪೇದೆಯಾಗಿದ್ದಾನೆ. ಕಳೆದ 6 ತಿಂಗಳ ಹಿಂದೆ ಹರಪ್ಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದ ಮಂಜುಳಾ ಎಂಬ ಯುವತಿ ಪತ್ರಕರ್ತರೊಬ್ಬರಿಗೆ ಫೋನ್ ಮಾಡಲು ಹೋಗಿ ಅದು ಮಿಸ್ಸಾಗಿ ಪೇದೆ ಮಂಜುನಾಥ್‍ ಗೆ ಹೋಗಿದೆ.

    ಆದ್ರೆ ಕೂಡಲೇ ಯುವತಿ ಮಿಸ್ಸಾಗಿ ಬಂದಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಆದರೆ ಪದೇ ಪದೇ ಫೋನ್ ಮಾಡುತ್ತಿದ್ದ ಮಂಜುನಾಥ್ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ನಂತರ ಮದುವೆಯಾಗೋದಾಗಿ ನಂಬಿಸಿ, ಯುವತಿಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ.

    ಆದರೆ ಈಗ ಮಂಜುನಾಥ್ ಜಾತಿಯ ನೆಪವೊಡ್ಡಿ ಯುವತಿಯಿಂದ ದೂರ ಸರಿಯುತ್ತಿದ್ದಾನೆ. ಹೀಗಾಗಿ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮಂಜುಳಾ ಅವರ ಬೆನ್ನಿಗೆ ಸಂಘಟನೆಗಳೂ ನಿಂತಿದ್ದು, ಯುವತಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋದಾಗಿ ಎಚ್ಚರಿಸಿವೆ.

  • ಲವ್ ಜಿಹಾದ್ ಶಂಕಿಸಲಾಗಿದ್ದ ಬೆಳಗಾವಿ ಯುವತಿಯರ ನಾಪತ್ತೆ ಪ್ರಕರಣ ಸುಖಾಂತ್ಯ

    ಲವ್ ಜಿಹಾದ್ ಶಂಕಿಸಲಾಗಿದ್ದ ಬೆಳಗಾವಿ ಯುವತಿಯರ ನಾಪತ್ತೆ ಪ್ರಕರಣ ಸುಖಾಂತ್ಯ

    ಬೆಳಗಾವಿ: ನಗರದ ಯುವತಿಯರಿಬ್ಬರು ಮನೆಯಿಂದ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರನ್ನು ಮುಂಬೈ ಮಹಾನಗರಿಯಲ್ಲಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಡಿಸೆಂಬರ್ 6 ರಂದು ಯುವತಿಯರಿಬ್ಬರು ಮನೆ ಬಿಟ್ಟು ಹೋಗಿದ್ದರು. ಈ ವಿಷಯ ಬಹಿರಂಗಗೊಳ್ಳುತ್ತಿದಂತೆ ಲವ್ ಜಿಹಾದ್ ರೂಪ ಪಡೆದುಕೊಂಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಕೆಲವು ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದವು. ಆದರೆ ಮಾರಿಹಾಳ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವತಿಯರನ್ನು ಈಗ ಪತ್ತೆ ಮಾಡಿದ್ದಾರೆ.

    ಏನಿದು ಘಟನೆ?
    ಇದೇ ತಿಂಗಳ ಡಿಸೆಂಬರ್ 6 ರಂದು ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದ ಇಬ್ಬರು ಯುವತಿಯರು ಯಾರಿಗೂ ಹೇಳದೇ ಮನೆಯಿಂದ ನಾಪತ್ತೆಯಾಗಿದ್ದರು. ಈ ವಿಚಾರ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಇದೊಂದು ಲವ್ ಜಿಹಾದ್ ಕೇಸ್ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಧರಣಿ ಸಹ ಮಾಡಿದ್ದರು. ಆದರೆ ಈಗ ಈ ಪ್ರಕರಣ ಲವ್ ಜಿಹಾದ್ ಅಲ್ಲ ಮನೆಯವರ ಅನುಮಾನಕ್ಕೆ ತೆತ್ತ ಬೆಲೆ ಎಂಬುದು ಗೊತ್ತಾಗಿದೆ.

    ಯುವತಿಯರು ಹೇಳಿದ್ದೇನು?
    ನಾಪತ್ತೆಯಾಗಿದ್ದ ರಾಧಿಕಾ (19), ಪ್ರಿಯಾಂಕ (21) ಈ ಬಗ್ಗೆ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ನಮ್ಮ ಬಗ್ಗೆ ಪೋಷಕರು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದರು. ಜೊತೆಗೆ ಎಲ್ಲಿಯೂ ಓಡಾಡಲು, ಯಾರ ಬಳಿ ಮಾತನಾಡಲು ಸ್ವಾತಂತ್ರ್ಯವಿರಲಿಲ್ಲ. ಇದರಿಂದ ಬೇಸರಗೊಂಡು ನಾವೇ ಬದುಕು ಕಟ್ಟಿಕೊಳ್ಳಲು ಮನೆಯಿಂದ ಮುಂಬೈಗೆ ಓಡಿ ಹೋಗಿದ್ದೇವು ಎಂದು ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?
    ಯುವತಿಯರ ನಾಪತ್ತೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಮಾರಿಹಾಳ ಪೊಲೀಸರು ಸತತ 6 ದಿನಗಳ ಕಾಲ ಹುಡುಕಾಟ ನಡೆಸಿ ಕೊನೆಗೆ ಯುವತಿಯರನ್ನು ಪತ್ತೆಮಾಡಿ ಕರೆ ತಂದಿದ್ದಾರೆ. ಮನೆಬಿಟ್ಟು ಹೋಗಲು ನಿರ್ಧರಿಸಿದ್ದ ಇಬ್ಬರು ಯುವತಿಯರು ಹತ್ತಿರದ ಸಂಬಂಧಿಗಳಾಗಿದ್ದರು. ಯುವತಿಯರ ಪತ್ತೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಮನೆಯಲ್ಲಿ ದೊರೆತ ಡೈರಿಯನ್ನು ಆಧಾರಿಸಿ ಗೋವಾ, ಬೆಂಗಳೂರು ಸೇರಿದಂತೆ ಹಲವು ಕಡೆ ಹುಡುಕಾಟ ನಡೆಸಿ ಕೊನೆಗೆ ಮುಂಬೈನಲ್ಲಿ ಪತ್ತೆ ಮಾಡಿದ್ದಾರೆ.

    ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರು ಮುಂಬೈ ಮಹಾನಗರದ ಮಾಕ್ಸ್ ಕಂಪೆನಿಯಲ್ಲಿ ಕೆಲಸ ಪಡೆದು, ಎರಡು ದಿನ ಕೆಲಸಕ್ಕೆ ಹೋಗಿದ್ದರು. ಆದರೆ ಮಾರಿಹಾಳ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ನೇತೃತ್ವದ ತಂಡ ಇವರನ್ನು ಪತ್ತೆ ಮಾಡಿ ಬೆಳಗಾವಿಗೆ ಕರೆ ತಂದಿದ್ದಾರೆ. ಡಿಸಿಪಿ ಸೀಮಾ ಲಾಟ್ಕರ್ ಇಂದು ಯುವತಿಯರ ವಿಚಾರಣೆ ನಡೆಸಿ ಸತ್ಯಾಂಶವನ್ನು ಬಹಿರಂಗಗೊಳಿಸಿದ್ದಾರೆ.

    ಯುವತಿ ರಾಧಿಕಾ ಪ್ರತಿಕ್ರಿಯಿಸಿದ್ದು, ನಾವೇ ಮನೆಬಿಟ್ಟು ಹೋಗಿದ್ದು, ನಮ್ಮ ಮನೆಯಲ್ಲಿ ಪ್ರತಿದಿನ ಅನುಮಾನ ಪಡುತ್ತಿದ್ದರು. ಇದರಿಂದ ತುಂಬಾ ಬೇಸರವಾಗಿತ್ತು. ಆದ್ದರಿಂದ ನಾವು ಮನೆ ಬಿಟ್ಟು ಹೋದೆವು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ವಾಪಸ್ ಮತ್ತೆ ಮನೆಗೆ ಕರೆದರೆ ಬರುತ್ತೇವೆ. ಇಲ್ಲವಾದರೆ ಮರಳಿ ಮುಂಬೈಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಯುವತಿಯರ ಈ ರೀತಿಯ ವರ್ತನೆಯನ್ನು ಕಂಡು ಪೋಷಕರು ಬೇಸರ ವ್ಯಕ್ತಪಡಿಸಿ ಡಿಸಿಪಿ ಕಚೇರಿಯಲ್ಲಿಯೇ ಯುವತಿಯ ತಂದೆ ಸಿದ್ದಪ್ಪ ಸಾಯಣ್ಣವರ್ ಕಣ್ಣಿರಿಟ್ಟಿದ್ದಾರೆ.

  • ರಸ್ತೆಯಲ್ಲಿ ಯುವತಿ, ಟ್ರಾಫಿಕ್ ಪೊಲೀಸರ ನಡುವೆ ಕಚ್ಚಾಟ: ವಿಡಿಯೋ ವೈರಲ್

    ರಸ್ತೆಯಲ್ಲಿ ಯುವತಿ, ಟ್ರಾಫಿಕ್ ಪೊಲೀಸರ ನಡುವೆ ಕಚ್ಚಾಟ: ವಿಡಿಯೋ ವೈರಲ್

    ಕಲಬುರಗಿ: ನಗರದ ರಸ್ತೆಯಲ್ಲಿ ಯುವತಿ ಮತ್ತು ಮಹಿಳಾ ಸಂಚಾರಿ ಪೊಲೀಸ್ ನಡುವಿನ ಜಗಳವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಯವತಿ ಒಬ್ಬರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಅಷ್ಟರಲ್ಲಿ ಟ್ರಾಫಿಕ್ ಮಹಿಳಾ ಅಧಿಕಾರಿಯಾದ ಭಾರತಿ ಎಂಬುವರು ಸ್ಥಳಕ್ಕೆ ಬಂದು ಯುವತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಹೇ ನಿನ್ನ ಲೈಸೆನ್ಸ್ ಎಲ್ಲಿ? ನಿನ್ನ ಬೈಕ್‍ನ ಎಮಿಷನ್ ಟೆಸ್ಟ್ ರಿಪೋರ್ಟ್ ಎಲ್ಲಿದೆ? ಹೆಲ್ಮೆಟ್ ಎಲ್ಲಿದೆ ಎಂದು ಪ್ರಶ್ನಿಸಿ ಬೈಕ್ ಸಿಜ್ ಮಾಡಲು ಮುಂದಾಗಿದ್ದಾರೆ. ನೀನು 1000 ರೂ. ದಂಡ ಕಟ್ಟು ಆಮೇಲೆ ನಿನ್ನ ಬೈಕ್ ಬಿಡ್ತಿನಿ ಎಂದು ಯುವತಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    https://www.youtube.com/watch?v=VXxP7CRchaI

    ಕೇವಲ ಹೆಲ್ಮೆಟ್ ಇಲ್ಲದಿದ್ದಕ್ಕೆ 1000 ರೂ. ಯಾಕೆ ದಂಡ ಕಟ್ಟಬೇಕು? ಎಂದು ಯವತಿ ಪ್ರಶ್ನಿಸಿದ್ದಾರೆ. ಅದಕ್ಕೆ ಆ ಅಧಿಕಾರಿ ನೀನು ಹಣ ಕಟ್ಟದೇ ಇದ್ದಲ್ಲಿ ನಿನ್ನ ಬೈಕ್ ಸಿಜ್ ಮಾಡ್ತೀನಿ. ಕಚೇರಿಗೆ ಬಂದು ಬೈಕ್ ಬಿಡಿಸಿಕೊಂಡು ಹೋಗು ಎಂದು ಹೇಳಿದ್ದಾರೆ. ಇದರಿಂದ ಕೆಂಡಮಂಡಲವಾದ ಯುವತಿ ಹೋಗಮ್ಮ ಹೋಗು ನನ್ನ ಬೈಕ್ ಎಲ್ಲಾದರು ಒಯಿ, ಏನಾದರು ಮಾಡು. ನಾನ್ಯಾಕೆ 1000 ಕೊಡಲಿ ಎಂದು ಮರುಪ್ರಶ್ನೆ ಹಾಕಿದ್ದಾರೆ.

    ಒಂದು ಗಂಟೆಗೂ ಅಧಿಕ ಇಬ್ಬರ ನಡುವಿನ ಕಚ್ಚಾಟ ನೆರದಿದ್ದವರಿಗೆ ಮನರಂಜನೆ ಒದಗಿಸಿದರೆ, ಆ ಪೊಲೀಸ್ ಅಧಿಕಾರಿ ಮಾತ್ರ ಸ್ವಲ್ಪವೂ ಮಾನವೀಯತೆ ಇಲ್ಲದೇ ವರ್ತಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಟ್ರಾಫಿಕ್ ನಿಯಮಗಳ ಪಾಲನೆ ನೆಪದಲ್ಲಿ ಕಲಬುರಗಿ ಟ್ರಾಫಿಕ್ ಪೊಲೀಸರು ಗುಂಡಾ ವರ್ತನೆ ತೋರುತ್ತಿದ್ದಾರೆ ಮತ್ತು ಮನಬಂದಂತೆ ದಂಡ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

  • ಭೂತ ಹಿಡಿದಿದೆ ಎಂದು ಯುವತಿಯ ಕೈಗೆ ಹಗ್ಗ ಕಟ್ಟಿ ಹಿಂಸೆ

    ಭೂತ ಹಿಡಿದಿದೆ ಎಂದು ಯುವತಿಯ ಕೈಗೆ ಹಗ್ಗ ಕಟ್ಟಿ ಹಿಂಸೆ

    ಬೆಳಗಾವಿ: ಯುವತಿಯ ಕೈಗೆ ಹಗ್ಗ ಕಟ್ಟಿ ಸಂಬಂಧಿಕರೇ ದೈಹಿಕವಾಗಿ ಹಿಂಸೆ ನೀಡಿದ ಅಮಾನವಿಯ ಘಟನೆ ಅಥಣಿಯಲ್ಲಿ ನಡೆದಿದೆ.

    ಮೌಢ್ಯ ಮಸೂದೆ ಅಂಗೀಕಾರ ಮಾಡಿದ್ದರೂ ರಾಜ್ಯದಲ್ಲಿ ವಾಮಾಚಾರ, ಭೂತ ಬಿಡಿಸೋ ಕಾರ್ಯ ನಡಯುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಭೂತ ಹಿಡಿದಿದೆ ಎಂದು ಯುವತಿಯ ಸಂಬಂಧಿಕರೇ ಆಕೆಯ ಕೈಗೆ ಹಗ್ಗ ಕಟ್ಟಿ ಎಳೆದಾಡಿದ್ದಾರೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಂಬಂಧಿಕರು ಭೂತ ಬಿಡಿಸಲು ಹಗ್ಗ ಕಟ್ಟಿ ಮಾಂತ್ರಿಕನ ಬಳಿ ಎಳೆದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.

    ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮಂಗ್ಳೂರಲ್ಲಿ ಲವ್ ಜಿಹಾದ್ ನಿಂದ ಯುವತಿಯನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆ

    ಮಂಗ್ಳೂರಲ್ಲಿ ಲವ್ ಜಿಹಾದ್ ನಿಂದ ಯುವತಿಯನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆ

    ಮಂಗಳೂರು: ಲವ್ ಜಿಹಾದ್‍ ಗೆ ಬಲಿಯಾಗುತ್ತಿದ್ದ ಯುವತಿಯನ್ನು ಹಿಂದೂ ಜಾಗರಣ ವೇದಿಕೆ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಅಮೀರ್ ಎಂಬಾತ ಪ್ರೀತಿಸಿದ್ದ. ಈ ನಡುವೆ ಅಮೀರ್ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ. ಕೂಡಲೇ ಎಚ್ಚತ್ತುಕೊಂಡ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಯುವತಿಯನ್ನು ಸಂಪರ್ಕಿಸಿ ಮನವೊಲಿಸಲು ಯತ್ನಿಸಿದ್ದಾರೆ.

     

    ಯುವತಿ ಮುಸ್ಲಿಂ ಯುವಕನನ್ನು ಬಿಡಲು ಒಪ್ಪಿರಲಿಲ್ಲ. ನಿನ್ನನ್ನು ಪ್ರೀತಿಸುವ ನಾಟಕವಾಡಿ ನಡುದಾರಿಯಲ್ಲಿ ಕೈಬಿಟ್ಟು ಹೋಗುತ್ತಾನೆ ಎಂದು ಕಾರ್ಯಕರ್ತರು ಹೇಳಿದ್ದರೂ ಯುವತಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗೆ ಕಾರ್ಯಕರ್ತರೊಬ್ಬರು ಯುವತಿಯನ್ನ ಫೋನ್ ಮೂಲಕ ಸಂಪರ್ಕಿಸಿ ಮನವೊಲಿಸುವ ಆಡಿಯೋ ಲಭ್ಯವಾಗಿದೆ.

    ಕೊನೆಗೆ ಬಜರಂಗದಳದ ಮಹಿಳಾ ಸಂಘಟನೆ ದುರ್ಗಾ ವಾಹಿನಿ ಸದಸ್ಯರು ಯುವತಿಯ ಮನೆಗೆ ತೆರಳಿ ಮನವೊಲಿಸಿದ್ದಾರೆ. ಗಾಂಜಾ ವ್ಯಸನಿಯನ್ನ ಪ್ರೀತಿಸುವುದು ಬೇಡ ಅಂದಿದ್ದಕ್ಕೆ ಯುವತಿ ಕೊನೆಗೂ ಒಪ್ಪಿದ್ದಾಳೆ. ತನ್ನ ತಪ್ಪಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾಳೆ. ಯುವಕ ಅಮಿರ್ ಸದ್ಯಕ್ಕೆ ಮಂಗಳೂರಿನ ಕದ್ರಿ ಪೊಲೀಸರ ಬಂಧನದಲ್ಲಿದ್ದಾನೆ.

  • ಲೈವ್ ರೇಪ್: ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳ

    ಲೈವ್ ರೇಪ್: ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳ

    ಕೋಲಾರ: ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಸೆರೆ ಹಿಡಿದು ಬೆದರಿಕೆ ನೀಡುತ್ತಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶ್ರೀನಿವಾಸಪುರ ಪಟ್ಟಣದ ನಿವಾಸಿಯಾಗಿರೋ ಯುವತಿಯ ಮೇಲೆ ಅತ್ಯಾಚಾರವೆಸಗಿದ ಯುವಕರು ಬಳಿಕ ಕಿರುಕುಳ ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಯುವತಿಗೆ ಜ್ಯೂಸ್ ನಲ್ಲಿ ಮತ್ತು ಬರುವ ಅಂಶ ಸೇರಿಸಿ ಅತ್ಯಾಚಾರವೆಸಗಿದ್ದರು. ಯುವಕರು ಅತ್ಯಾಚಾರದ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಯುವತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.

    ಯುವಕರು ನಾಲ್ಕು ವರ್ಷಗಳ ಹಿಂದೆಯೇ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ಮಾಡಿ ಸಮಾಧಾನ ಮಾಡಿದ್ದರು. ನಂತರ ಪೋಷಕರು ತನ್ನ ಮಗಳನ್ನು ಮದುವೆ ಮಾಡಿಸಿ ಹೈದರಾಬಾದ್ ಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಕಾಮುಕರು, ಯುವತಿಯ ಮೇಲೆ ಅತ್ಯಾಚಾರವೆಸಗಿದ ವಿಡಿಯೋವನ್ನು ಆಕೆಯ ಗಂಡನಿಗೆ ವಾಟ್ಸಪ್ ನಲ್ಲಿ ಕಳುಹಿಸಿ ಕಿರುಕುಳ ನೀಡುತ್ತಿದ್ದರು. ಈ ವಿಡಿಯೋವನ್ನು ನೋಡಿದ ಯುವತಿ ಗಂಡ ಆಕೆಗೆ ವಿಚ್ಛೇದನ ಕೂಡ ನೀಡಿದ್ದನು.

    ತನ್ನ ಗಂಡ ವಿಚ್ಛೇದನ ನೀಡಿದ್ದರೂ ಯುವಕರು ಬಿಡದೆ ಯುವತಿಗೆ ಹಿಂಸೆ ನೀಡುತ್ತಿದ್ದಾರೆ. ವಿಡಿಯೋ ತೋರಿಸಿ ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿ ಬಿಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ.

     

  • Sorry ಅಪ್ಪು.. ದಯವಿಟ್ಟು ನನ್ನ ಕ್ಷಮಿಸಿಬಿಡಿ- ಲವ್ವರ್ ಗೆ ವಿಡಿಯೋ ಕಳ್ಸಿ ಯುವತಿ ಆತ್ಮಹತ್ಯೆಗೆ ಯತ್ನ

    Sorry ಅಪ್ಪು.. ದಯವಿಟ್ಟು ನನ್ನ ಕ್ಷಮಿಸಿಬಿಡಿ- ಲವ್ವರ್ ಗೆ ವಿಡಿಯೋ ಕಳ್ಸಿ ಯುವತಿ ಆತ್ಮಹತ್ಯೆಗೆ ಯತ್ನ

    ತುಮಕೂರು: ಪ್ರಿಯಕರ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಾ ಮಾತ್ರೆಗಳನ್ನು ನುಂಗುತ್ತಾ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಡಿಯೋದಲ್ಲಿ `ಸಾರಿ ಅಪ್ಪು.. ಐ ಆಮ್ ಸೋ ಸಾರಿ.. ನನ್ನಿಂದ ಯಾರಿಗೂ ನೋವಾಗೋದಕ್ಕೆ ನಾನು ಇಷ್ಟಪಡಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ’ ಅಂತ ಕೈಮುಗಿದು ಬೇಡಿಕೊಂಡು ಬಳಿಕ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ.

    ಈ ವಿಡಿಯೋ ನೋಡಿದ ಪ್ರಿಯಕರ ಕೂಡಲೇ ಯುವತಿಯಿದ್ದ ಹಾಸ್ಟೆಲ್ ಗೆ ಕರೆ ಮಾಡಿ ಯುವತಿಯ ಪ್ರಾಣ ಉಳಿಸಿದ್ದಾರೆ. ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಯುವತಿಯ ಫೋಟೋದ ಮೇಲೆ ಅವಹೇಳನಕಾರಿ ಬರಹ: ಬೇಲೂರು ಪ್ರಿನ್ಸಿಪಾಲ್ ಅರೆಸ್ಟ್

    ಯುವತಿಯ ಫೋಟೋದ ಮೇಲೆ ಅವಹೇಳನಕಾರಿ ಬರಹ: ಬೇಲೂರು ಪ್ರಿನ್ಸಿಪಾಲ್ ಅರೆಸ್ಟ್

    ಹಾಸನ: ಯುವತಿಯೊಬ್ಬಳ ಫೋಟೋದ ಮೇಲೆ ಅವಹೇಳನಕಾರಿ ಬರಹ ಹಾಕಿ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಬೇಲೂರು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.

    ಕಾಲೇಜಿನ ಅಧೀಕ್ಷರಾಗಿರುವ ಕೇಶವ್ ಕಿರಣ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಕಾಲೇಜು ಪ್ರಾಂಶುಪಾಲರಾಗಿರುವ ಜಯಣ್ಣ ಗೌಡ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ತಮ್ಮ ಪುತ್ರಿಯ ಭಾವಚಿತ್ರವಿರುವ ಫೋಟೋದಲ್ಲಿ ಅವಹೇಳನ ಬರಹ ಬರೆದು ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮೇಲೆ ವೈಯುಕ್ತಿಕ ದ್ವೇಷಕ್ಕೆ ನನ್ನ ಕುಟುಂಬದ ಸದಸ್ಯರ ತೇಜೋವಧೆ ಮಾಡಿದ್ದಾರೆ ಎಂದು ಕೇಶವ್ ಆರೋಪಿಸಿ ದೂರು ನೀಡಿದ್ದರು.

    ಸದ್ಯ ಆರೋಪಿ ಜಯಣ್ಣ ಗೌಡನನ್ನು ಬೇಲೂರು ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್‍ ರೇಪ್

    ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್‍ ರೇಪ್

    ಭೋಪಾಲ್: ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ 19 ವರ್ಷದ ಯುವತಿಯನ್ನು ಸೇತುವೆಯ ಕೆಳಗೆ ಎಳೆದುಕೊಂಡು ಹೋಗಿ ಕೈಕಾಲು ಕಟ್ಟಿ ಹಾಕಿ ಆಕೆಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್ ರೇಪ್ ಎಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಸಂಜೆ ಹಬೀಬ್ ಗಂಜ್ ರೈಲ್ವೇ ನಿಲ್ದಾಣ ಬಳಿ ನಡೆದಿದೆ. ಯುವತಿ ಭೋಪಾಲ್ ನಿಂದ 1 ಕಿ.ಮೀ ದೂರ ವಾಸಿಸುತ್ತಿದ್ದು, ಕೋಚಿಂಗ್ ಕ್ಲಾಸ್ ಮುಗಿದ ನಂತರ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಾಗಲು ದಿನನಿತ್ಯ ರೈಲಿನಲ್ಲಿ ಸಂಚರಿಸುತ್ತಿದ್ದಳು.

    ಸಂಜೆ ಸುಮಾರು 7 ಗಂಟೆ ಆಗುತ್ತಿದಂತೆ ಆರೋಪಿ ಗೋಲು ಬಿಹಾರಿ ಎಂಬಾತ ನನ್ನನ್ನು ಎಳೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ನಾನು ಹೊಡೆದು ತಪ್ಪಿಸಿಕೊಂಡು ಹೋಗುವಾಗ ಗೋಲು ತನ್ನ ಭಾವ ಅಮರ್ ಗುಂಟುನನ್ನು ಕರೆದಿದ್ದಾನೆ. ಅವರಿಬ್ಬರು ಜೊತೆಯಾಗಿ ಸೇರಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ನನ್ನ ಮೇಲೆ ಕೃತ್ಯ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ಅವರಿಬ್ಬರ ಜೊತೆ ಜಗಳವಾಡುತ್ತಾ, ಹೊಡೆಯುತ್ತಾ ಹಾಗೂ ಕಿರುಚುತ್ತಿದ್ದಾಗ ಅಲ್ಲಿದ್ದ ಒಬ್ಬ ಆರೋಪಿ ಆಕೆಯ ತಲೆಯ ಮೇಲೆ ಕಲ್ಲಿನಿಂದ ಹೊಡೆದಿದ್ದಾನೆ. ನಂತರ ನನ್ನನ್ನು ಕಟ್ಟಿ ಹಾಕಿ ಅತ್ಯಾಚಾರ ಎಸೆಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    ಯುವತಿಯ ಬಟ್ಟೆ ಹರಿದಿದ್ದರಿಂದ ಗೋಲು ಹಾಗೂ ಅವನ ಇಬ್ಬರ ಸ್ನೇಹಿತರ ಜೊತೆ ಸ್ಲಂನಲ್ಲಿರುವ ತನ್ನ ಮನೆಗೆ ಹೋಗಿ ಬಟ್ಟೆಯನ್ನು ತಂದು ಅದನ್ನು ಧರಿಸಲು ಹೇಳಿದ್ದನು. ರಾತ್ರಿ 10 ಗಂಟೆವರೆಗೂ 4 ಜನ ಆರೋಪಿಗಳು ಒಬ್ಬೊಬ್ಬರಾಗಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದರು. ನಂತರ ಯುವತಿಗೆ ಬಟ್ಟೆ ಧರಿಸಲು ಹೇಳಿ ಆಕೆಯ ಹತ್ತಿರವಿದ್ದ ಕಿವಿ ಓಲೆ, ವಾಚ್ ಮತ್ತು ಮೊಬೈಲ್ ನನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವತಿ ಹಬೀಬ್ ಗಂಜ್ ರೈಲ್ವೇ ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ತನ್ನ ಪೋಷಕರನ್ನು ಕರೆ ಮಾಡಿ ತಿಳಿಸಿದ್ದಾಳೆ. ಮರುದಿನ ಯುವತಿಯ ತಂದೆ ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾಗ, ಸಬ್ ಇನ್ಸ್ ಪೆಕ್ಟರ್ ಒಬ್ಬರು ಇದು ಸಿನಿಮಾ ಕಥೆಯೆಂದು ಹೇಳಿ ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. 11 ಗಂಟೆಯ ಬಳಿಕ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.

    ಯುವತಿ ಹಬೀಬ್ ಗಂಜ್ ಪೊಲೀಸ್ ಠಾಣೆಯಿಂದ ತನ್ನ ಪೋಷಕರ ಜೊತೆ ಹಿಂತಿರುಗುವಾಗ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಇಬ್ಬರು ಆರೋಪಿಗಳನ್ನು ಗುರುತಿಸಿದ್ದಳು. ನಂತರ ಆಕೆಯ ಕುಟುಂಬದವರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಪ್ರಕರಣದಲ್ಲಿ ಆರೋಪಿಯಾಗಿರುವ ಗೋಲು ತನ್ನ ಮಗಳನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ.