Tag: young girl

  • ರೂಮಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಪರಾರಿ!

    ರೂಮಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಪರಾರಿ!

    ತುಮಕೂರು: ಮನೆಯ ರೂಮಿಗೆ ನುಗ್ಗಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣವೊಂದು ತುಮಕೂರು (Tumakuru) ನಗರದ ವಿದ್ಯಾನಗರದಲ್ಲಿ ಬೆಳಕಿಗೆ ಬಂದಿದೆ.

    ವೀಣಾ (23) ಮೃತ ದುರ್ದೈವಿ. ಈಕೆ ಪ್ರಿಯಕರ (Lover) ನಿಂದಲೇ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಯುವತಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಮೂಲತಃ ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ನಿವಾಸಿಯಾಗಿರುವ ಈಕೆ ತುಮಕೂರಿನ ವಿದ್ಯಾನಗರದಲ್ಲಿ ಸ್ನೇಹಿತೆಯರೊಂದಿಗೆ ವಾಸವಿದ್ದಳು. ಇನ್ ಕ್ಯಾಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಈಕೆಯ ವಾಸವಿದ್ದ ರೂಮಿಗೆ ನುಗ್ಗಿ ಕತ್ತು ಕೊಯ್ದು ದುಷ್ಕರ್ಮಿ ಪರಾರಿಯಾಗಿದ್ದಾನೆ.

    ಈ ಸಂಬಂಧ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಹೈದರಾಬಾದ್: ವಿವಾಹೇತರ ಸಂಬಂಧ ಹೊಂದಿದ್ದ ಅರ್ಚಕ (Priest) ರೊಬ್ಬರು ತನ್ನ ಪ್ರೇಯಸಿಯನ್ನು ಕೊಂದು ಮ್ಯಾನ್‌ಹೋಲ್ (Manhole) ಗೆ ಎಸೆದಿರುವ ಘಟನೆ ಹೈದರಾಬಾದ್‌ ಬಳಿಯ ಸರೂರ್‌ನಗರದಲ್ಲಿ ನಡೆದಿದೆ‌. ಆರೋಪಿಯನ್ನುಆರೋಪಿಯನ್ನು ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

    ಮೃತಳನ್ನು ಕುರುಗಂಟಿ ಅಪ್ಸರಾ (Kuruganti Apsara) ಎಂದು ಗುರುತಿಸಲಾಗಿದೆ. ಅಪ್ಸರಾ ಜೊತೆಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ (Ayyagari Saikrishna) ವಿವಾಹೇತರ ಸಂಬಂಧ ಹೊಂದಿದ್ದರು. ಯುವತಿ ಮದುವೆಯಾಗುವಂತೆ ಒತ್ತಡ ಹಾಕಿದ ಹಿನ್ನೆಲೆ  ತಾನು ಆಕೆಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

    ಹತ್ಯೆ ಮಾಡಿ ಪೊಲೀಸರಿಗೆ ದೂರು: ಅಪ್ಸರಾಳನ್ನ ಹತ್ಯೆ ಮಾಡಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಪೊಲೀಸರಿಗೆ ದೂರು ನೀಡಿದ್ದ, ತನ್ನ ಸೋದರ ಸೊಸೆ ಅಪ್ಸರಾ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಸಾಯಿಕೃಷ್ಣ ಮೇಲೆಯೇ ಅನುಮಾನ ಬಂದಿದೆ.

    ಸಾಯಿಕೃಷ್ಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದಾಗಿ ತಪ್ಲೊಪ್ಪಿಕೊಂಡಿದ್ದಾನೆ. ಆರೋಪಿ ಸಾಯಿಕೃಷ್ಣ ಶಂಶಾಬಾದ್‌ನಲ್ಲಿ ಅಪ್ಸರಾಳನ್ನು ಕೊಂದು, ಸರೂರ್‌ ನಗರಕ್ಕೆ ಸಾಗಿಸುವ ಮೊದಲು ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ್ದನು. ಬಳಿಕ ತಾನು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವಸ್ಥಾನದ ಸಮೀಪವಿರುವ ಎಂಆರ್‌ಒ ಕಚೇರಿಯ ಹಿಂಭಾಗದ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಸಾಯಿಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮದ್ವೆ ಖುಷಿಯಲ್ಲಿ ಊರಿಗೆ ಬರ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ದುರ್ಮರಣ

      

  • ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟ ಹಣ್ಣು ತಿಂದು ಯುವತಿ ಸಾವು!

    ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟ ಹಣ್ಣು ತಿಂದು ಯುವತಿ ಸಾವು!

    ದಾವಣಗೆರೆ: ಇಲಿ (Rat) ಸಾಯಿಸಲು ಇಟ್ಟ ಹಣ್ಣು (Poisoned Fruit) ತಿಂದು ಯುವತಿಯೊಬ್ಬಳು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ನಿವಾಸಿ ಐಶ್ವರ್ಯಾ (21) (Aishwarya) ಸಾವನ್ನಪ್ಪಿದ ಯುವತಿ. ಈಕೆ ನ್ಯಾಮತಿಯ ಸರ್ಕಾರಿ ಕಾಲೇಜ್ ನಲ್ಲಿ ಬಿಎ ಓದುತ್ತಿದ್ದಳು.

    ಮನೆಯಲ್ಲಿ ಓಡಾಡಿ ಉಪಟಳ ಕೊಡುವ ಇಲಿಯನ್ನು ಸಾಯಿಸಲೆಂದು ಕುಟುಂಬಸ್ಥರು ಹಣ್ಣಿಗೆ ವಿಷ ಸವರಿ ಇಟ್ಟಿದ್ದರು. ಆದರೆ ಇದನ್ನು ಗಮನಿಸದೇ ಯುವತಿ ಕಾಲೇಜು ಮುಗಿಸಿ ಮನೆಗೆ ಬಂದಾಗ ನೆಲದ ಮೇಲೆ ಬಿದ್ದಿದ್ದ ಹಣ್ಣನ್ನು ತಿಂದಿದ್ದಳು. ಇದನ್ನೂ ಓದಿ: ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

    ಹಣ್ಣು ತಿಂದ ಯುವತಿಯ ಆರೋಗ್ಯದಲಲಿ ಏರುಪೇರಾಗುತ್ತಿದ್ದಂತೆಯೇ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾದರೆ ಯುವತಿ ಸಾವನ್ನಪ್ಪಿದ್ದಾಳೆ.

    ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಬಿಟ್ಟು ಬಂದಿದ್ದ ಯುವತಿಗೆ ಆಶ್ರಯ ನೀಡೋದಾಗಿ ಕರೆದೊಯ್ದು ಅತ್ಯಾಚಾರ!

    ಮನೆಬಿಟ್ಟು ಬಂದಿದ್ದ ಯುವತಿಗೆ ಆಶ್ರಯ ನೀಡೋದಾಗಿ ಕರೆದೊಯ್ದು ಅತ್ಯಾಚಾರ!

    ರಾಮನಗರ: ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರವೆಸಗಿ ನಂತರ ಬಲವಂತವಾಗಿ ಮದುವೆ (Forcefully Marriage) ಮಾಡಿಕೊಂಡಿರುವ ಆರೋಪವೊಂದು ರಾಮನಗರದಿಂದ ಕೇಳಿಬಂದಿದೆ.

    ರಾಮನಗರ (Ramanagar) ದ ಕೆಂಪೇಗೌಡ ವೃತ್ತದ ಬಳಿ ಘಟನೆ ನಡೆದಿದೆ. ಈ ಸಂಬಂಧ ಪ್ರೀತಿ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಏನಿದು ಪ್ರಕರಣ..?: 19 ವರ್ಷದ ಯುವತಿ ಮನೆಯವರ ಜೊತೆಗೆ ಜಗಳವಾಡಿಕೊಂಡು ಬಂದಿದ್ದಳು. ಹೀಗೆ ಬಸ್ ನಿಲ್ದಾಣದ ಬಳಿ ಕೂತಿದ್ದ ಯುವತಿಯನ್ನ ಪ್ರೀತಿ ಎಂಬಾಕೆ ಪುಸಲಾಯಿಸಿ ತನ್ನ ವೃದ್ಧಾಶ್ರಮಕ್ಕೆ ಕರೆತಂದಿದ್ದಳು. ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ ಸಾವು

    ಬಳಿಕ ಯುವತಿಯನ್ನು ಗೃಹಬಂಧನದಲ್ಲಿಟ್ಟಿದ್ದು, ಪ್ರೀತಿ ಸಹೋದರ ಯೋಗೇಶ್ ನಿರಂತರ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ್ದರಿಂದ ಯುವತಿ ಗರ್ಭಿಣಿಯಾಗಿದ್ದು, ಬಳಿಕ ಪ್ರೀತಿಯೇ ಯುವತಿಗೆ ಗರ್ಭಪಾತ ಮಾಡಿಸಿದ್ದಳು.

    POLICE JEEP

    ಅಲ್ಲದೆ ಘಟನೆ ಬಗ್ಗೆ ಹೊರಗಡೆ ಹೇಳಿದ್ರೆ ಯುವತಿಯ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ನೊಂದ ಯುವತಿ ರಾಮನಗರ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಳ ಮೇಲೆ ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ- ಹಿಂದೂ ಯುವಕನ ಜೊತೆಗಿದ್ದ ಅನ್ಯಧರ್ಮದ ಯುವತಿ ಮೇಲೆ ಹಲ್ಲೆ

    ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ- ಹಿಂದೂ ಯುವಕನ ಜೊತೆಗಿದ್ದ ಅನ್ಯಧರ್ಮದ ಯುವತಿ ಮೇಲೆ ಹಲ್ಲೆ

    ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ (Doddaballapur) ದಲ್ಲಿ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣವೊಂದು ನಡೆದಿದೆ. ಈ ಘಟನೆ ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇಸ್ಲಾಂಪುರ ನಿವಾಸಿ ಹುಜೂರು ಹಾಗೂ ತಂಡ ಈ ಕಿರಿಕ್ ಮಾಡಿದೆ. ಬೈಕ್‍ನಲ್ಲಿ ತೆರಳುತ್ತಿದ್ದ ಯುವಕ-ಯುವತಿಯನ್ನ ತಡೆದು ಹಲ್ಲೆ ನಡೆಸಲಾಗಿದೆ. ಮನೆಯವರ ಫೋನ್ ನಂಬರ್ ಕೊಡು ಅಂತ ಯುವತಿ ಮೇಲೆ ದಬ್ಬಾಳಿಕೆ ನಡೆಸಲಾಗಿದೆ. ಫೋನ್ ನಂಬರ್ ಯಾಕೆ ಕೊಡಬೇಕು ಅಂತ ಪ್ರಶ್ನಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ.

    ಸದ್ಯ ದಾಂಧಲೆ ದೃಶ್ಯ ಮೊಬೈಲ್‍ (Mobile) ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೂರಿನ ಹಿನ್ನೆಲೆಯಲ್ಲಿ ಅಕ್ಬರ್ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಹುಜೇರ್ ನಾಪತ್ತೆಯಾಗಿದ್ದಾನೆ.

    ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ ಐಎಎಸ್ ಅಧಿಕಾರಿ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್‍ನಿಂದ ಬಿದ್ದು ನರಳಾಡಿದ ಯುವತಿ!

    ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್‍ನಿಂದ ಬಿದ್ದು ನರಳಾಡಿದ ಯುವತಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಪ್ರಾಬ್ಲಂ ಒಂದು ಬಗೆಹರಿಯದ ಸಮಸ್ಯೆಯಾಗಿದೆ. ರಸ್ತೆಗುಂಡಿಗಳು ನಿರಂತರವಾಗಿ ಸವಾರರ ಜೀವ ಹಿಂಡುತ್ತಿದ್ದು, ಮುಖ್ಯ ರಸ್ತೆಯಲ್ಲೇ ರಸ್ತೆಗುಂಡಿಗಳಿಂದ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಇದೀಗ ಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬಳು ಸ್ಕಿಡ್ ಆಗಿ ಬಿದ್ದ ಪ್ರಸಂಗ ನಡೆದಿದೆ.

    ಕಸ್ತೂರಿ ನಗರದ ಫ್ಲೈಓವರ್ ಮೇಲೆ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸ್ವಲ್ಪ ಯಾಮಾರಿದ್ರೂ ಹಿಂದಿನ ಗಾಡಿಯಿಂದ ಅಪಘಾತವಾಗುತ್ತಿತ್ತು. ಬೈಕ್ ಹಿಂದೆ ಬರುತ್ತಿದ್ದ ಕಾರು ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಬಚಾವಾಗಿದ್ದಾರೆ. ಮಹಿಳೆ ಸ್ಕಿಡ್ ಆಗಿ ಬೀಳ್ತಿರೋದನ್ನ ಕಾರು ಚಾಲಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಚಿತ್ರಕ್ಕೆ ಹೈದರಾಬಾದ್ ನಲ್ಲಿ ನಡೀತು ಭರ್ಜರಿ ಫೈಟ್

    ಬೆಂಗಳೂರಿನಲ್ಲಿ ಗುಂಡಿ ಲೆಕ್ಕಾಚಾರ: 4 ತಿಂಗಳಲ್ಲಿ ಗುಂಡಿ ಮುಚ್ಚಲು 8 ಕೋಟಿ ವೆಚ್ಚವಾಗಿದ್ದು, 2.5 ಅಡಿ ವಿಸ್ತೀರ್ಣದ ಗುಂಡಿಗೆ 800 ರೂ. ಖರ್ಚು ಮಾಡಲಾಗಿದೆ. ಇದುವರೆಗೆ 16,000 ಗುಂಡಿ ಮುಚ್ಚಲಾಗಿದೆ. 1,000 ಗುಂಡಿ ಇನ್ನೂ ಮುಚ್ಚಲು ಬಾಕಿ ಇದೆ. ಈ ವರ್ಷ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ 656 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳಪೆ ರಸ್ತೆ, ಗುಂಡಿಗೆ ಶೇ.17ರಷ್ಟು ಮಂದಿ ಮೃತಪಟ್ಟಿದ್ದಾರೆ. ವರ್ಷಕ್ಕೆ ಗುಂಡಿಯಿಂದಲೇ 30 ಮಂದಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಿರಂತರವಾಗಿ ಮಳೆಯಿಂದಾಗಿ ಗುಂಡಿಮುಚ್ಚೋಕೆ ಹಿನ್ನಡೆಯಾಗ್ತಿದೆ. ಮೇ ತಿಂಗಳಿನಿಂದ ಈವರೆಗೆ 20 ಸಾವಿರ ಗುಂಡಿಯನ್ನ ಮುಚ್ಚಲಾಗಿದೆ. ಈಗಲೂ ಪ್ರತಿನಿತ್ಯ ಗುಂಡಿ ಗುರುತಿಸಿ ಮುಚ್ಚೋ ಕೆಲಸ ಮಾಡಲಾಗುತ್ತಿದೆ. ಬ್ಯಾಚ್ ಮಿಕ್ಸ್ ಪ್ಲಾಂಟ್‍ನಲ್ಲಿ ಮಳೆಯಿಂದಾಗಿ ತೊಂದರೆ ಆಗುತ್ತಿದೆ. ಬದಲಾಗಿ ಕೋಲ್ಡ್ ಮಿಕ್ಸ್ ಅಳವಡಿಕೆಗೆ ಮುಂದಾಗುತ್ತಿದ್ದೀವಿ. ಇಂದು ನಾಳೆ 40 ಲೋಡ್ ಡಾಂಬರ್ ಮಿಕ್ಸ್ ವ್ಯವಸ್ಥೆ ಆಗುತ್ತಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವು- ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆರೋಪ

    ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವು- ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆರೋಪ

    ಬೆಂಗಳೂರು: ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವನ್ನಪ್ಪಿದ್ದು, ಇದೀಗ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ಯುವತಿಯನ್ನು ತೇಜಸ್ವಿನಿ(20) ಎಂದು ಗುರುತಿಸಲಾಗಿದೆ. ತೇಜಸ್ವಿನಿ ಕೈಗೆ ಗಾಯವಾಗಿತ್ತು. ಹೀಗಾಗಿ ಆಕೆಯನ್ನು ಇಂದು ಬೆಳಗ್ಗೆ ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಯುವತಿ ಸಾವನ್ನಪ್ಪಿದ್ದು, ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ತೇಜಸ್ವಿನಿ ಅಂತಿಮ ವರ್ಷದ ಬಿಇ ಓದುತ್ತಿದ್ದಾಳೆ. ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ತೇಜಸ್ವಿನಿಗೆ ಆಪರೇಷನ್ ಮಾಡಬೇಕೇಂದು ಆಸ್ಪತ್ರೆ ಸಿಬ್ಬಂದಿ ಅನಾಸ್ತೇಶಿಯಾ ನೀಡಿದ್ದಾರೆ. ಎರಡು ಗಂಟೆ ಬಳಿಕ ನಿಮ್ಮ ಮಗಳು ಬದುಕಿಲ್ಲ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಾಂದರ್ಭಿಕ ಚಿತ್ರ

    ಮಾರತಹಳ್ಳಿ ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಆಸ್ಪತ್ರೆ ಬಳಿ ಪೊಲೀಸರು ಮತ್ತು ಪೋಷಕರ ನಡುವೆ ಜಟಾಪಟಿ ನಡೆದಿದೆ. ನಮಗೆ ವಿಷ ಕೊಡಿ ಇಲ್ಲ ನ್ಯಾಯ ಕೊಡಿಸಿ ಎಂದು ತೇಜಸ್ವಿನಿ ಪೋಷಕರು ಆಸ್ಪತ್ರೆ ಒಳಗೆ ಪ್ರತಿಭಟನೆಗೆ ಕುಳಿತಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    ದೇಹ ತುಂಬಾ ಇಂಜೆಕ್ಷನ್ ಮಾಕ್ರ್ಸ್ ಗಳಿದೆ. ಹೈ ಡೋಸ್ ಕೊಟ್ಟೇ ನಮ್ಮ ಮಗಳು ಸತ್ತಿರೋದು. ಬೆಳಗ್ಗೆ 4 ಗಂಟೆಗೆ ಆಸ್ಪತ್ರೆಗೆ ಸೇರಿಸಿದ್ವಿ. 11.40ಕ್ಕೆ ನಿಮ್ಮ ಮಗಳಿಗೆ ಸೀರಿಯಸ್ ಆಗಿದೆ ಅಂತ ಫೋನ್ ಬಂತು. ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡ್ತೇವೆ ಅಂತಾ ಹೇಳಿದ್ರು. ನಾವು ಸರಿ ಅಂತಾ ಹೇಳಿದ್ವಿ. ಅದಾದ ಬಳಿಕ ಒಂದು ಫೋನ್ ಬರಲಿಲ್ಲ. ಬಂದು ವಿಚಾರಿಸಿದಾಗ ನಿಮ್ಮ ಮಗಳು ಇಲ್ಲ ಅಂತಾ ಹೇಳಿದ್ರು. ಮ್ಯಾಸೀವ್ ಹಾರ್ಟ್ ಅಟ್ಯಾಕ್ ಆಗಿದೆ ಅಂದ ಹೇಳಿದ್ರು. ಅನಾಸ್ತೇಷಿಯ ಕೊಟ್ಟ ಬಳಿಕ ಎದೆ ನೋವು ಅಂತಾ ಹೇಳಿದ್ರು. ಆಮೇಲೆ ಸತ್ತಿದ್ದಾರೆ ಅಂತಾ ಆಸ್ಪತ್ರೆಯವರು ಹೇಳುತ್ತಿದ್ದಾರೆ. ಇದು ಆಸ್ಪತ್ರೆ ನಿರ್ಲಕ್ಷದಿಂದಲೇ ಆಗಿರೋದು ಎಂದು ಯುವತಿ ಚಿಕ್ಕಪ್ಪ ಲಕ್ಷ್ಮಣ್ ಕಿಡಿಕಾರಿದ್ದಾರೆ.

    police (1)

    ಆಸ್ಪತ್ರೆಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಭೇಟಿ ನೀಡಿ ನ್ಯಾಯ ಕೊಡಿಸುವ ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಪೋಷಕರ ಮನವೊಲಿಸಿದ್ದಾರೆ. ಈಗಾಗಲೇ ಆಸ್ಪತ್ರೆ ವೈದ್ಯರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಠಾಣೆಯಲ್ಲಿ ಬಂಧಿಯಾಗಿರೋ ವೈದ್ಯರ ಫೋಟೋ ತೋರಿಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ವೀಡಿಯೋ ಕಾಲ್ ಮಾಡಿ ಬಂಧಿತ ವೈದ್ಯರನ್ನ ಪೊಲೀಸತು ತೇಜಸ್ವಿನಿ ಪೋಷಕರಿಗೆ ತೋರಿಸಿದ್ದಾರೆ.

  • ಯುವತಿಯನ್ನು ಪ್ರೀತಿಸಿ, ಮದುವೆ ನೋಂದಣಿಗೆ ಹೋಗ್ತಿದ್ದಾಗ ದಾರಿ ಮಧ್ಯೆ ಯುವಕ ಎಸ್ಕೇಪ್!

    ಯುವತಿಯನ್ನು ಪ್ರೀತಿಸಿ, ಮದುವೆ ನೋಂದಣಿಗೆ ಹೋಗ್ತಿದ್ದಾಗ ದಾರಿ ಮಧ್ಯೆ ಯುವಕ ಎಸ್ಕೇಪ್!

    ಚಾಮರಾಜನಗರ: ಅದು ಎರಡು ವರ್ಷಗಳ ಹಿಂದೆ ಗ್ರಾಮದ ಜಾತ್ರೆಯಲ್ಲಿ ಆಗಿದ್ದ ಭೇಟಿ. ಆ ಒಂದು ಭೇಟಿಯೇ ಪ್ರೀತಿ ಮೊಳಕೆಯೊಡಲು ಕಾರಣವಾಯ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದ ಆ ಪ್ರೇಮಿಗಳು ಸ್ವರ್ಗಕ್ಕೆ ಹತ್ತಿರ ಎಂಬಂತೆ ಓಡಾಡಿದರು. ಆದರೆ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದೆ ತಡ ಹುಡುಗ ಎಸ್ಕೇಪ್ ಆಗಿದ್ದಾನೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಕೋಣನಕೆರೆ ಗ್ರಾಮದ ಈಕೆಯ ಹೆಸರು ದಿವ್ಯ(ಹೆಸರು ಬದಲಿಸಲಾಗಿದೆ). ಬುಡಕಟ್ಟು ಸೋಲಿಗ ಸಮುದಾಯಕ್ಕೆ ಸೇರಿದ ಈ ಯುವತಿ ಎರಡು ವರ್ಷಗಳ ಹಿಂದೆ ಪಕ್ಕದ ಊರು ಪೊನ್ನಾಚಿಯ ಪರಂಜ್ಯೋತಿ (25) ಎಂಬಾತನ ಪ್ರೇಮಪಾಶಕ್ಕೆ ಬಿದ್ದು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    ನಿನ್ನನ್ನೆ ಮದುವೆ ಆಗ್ತಿನಿ, ನನ್ನದು ಪವಿತ್ರ ಪ್ರೇಮ ಎಂದೆಲ್ಲ ರೀಲು ಬಿಟ್ಟಿದ್ದ ಪರಂಜ್ಯೋತಿಯ ಮಾತಿಗೆ ಮರುಳಾಗಿದ್ದ ಯುವತಿ ಇದೀಗ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ. ಹೇಗಿದ್ದರೂ ಮದುವೆ ಆಗೋ ಹುಡುಗ ಅಂತ ಆತನೊಂದಿಗೆ ಎಲ್ಲಾ ಕಡೆ ಸುತ್ತಾಡಿದ್ದಾಳೆ. ಆದರೆ ಈಗ ಪ್ರಿಯಕರ ಮದುವೆಗೆ ನಿರಾಕರಿಸಿದ್ದಾನೆ. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ಬೆಂಗಳೂರಿನಲ್ಲಿ ಕಾರು ಡ್ರೈವರ್ ಆಗಿರುವ ಪರಂ ಜ್ಯೋತಿಗೆ ಆತನ ಮನೆಯವರು ಬೇರೆ ಹುಡುಗಿ ನೋಡಿದ್ದು, ನಿಶ್ಚಿತಾರ್ಥ ಸಹ ಆಗಿದೆ ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿ ಮನೆಯವರು ಯುವಕನ ಮನೆಗೆ ತೆರಳಿ ಮನವೊಲಿಸಿದ್ದಾರೆ. ನ್ಯಾಯ ಪಂಚಾಯಿತಿ ಮೂಲಕ ಮದುವೆಗೆ ಸಹ ಒಪ್ಪಿಸಿದ್ದಾರೆ. ಹಿರಿಯರ ಮಾತಿಗೆ ಒಪ್ಪಿದ್ದ ಆತನನ್ನು ವಿವಾಹ ನೋಂದಣಿ ಕಚೇರಿಗೆ ಕರುತ್ತಿದ್ದಾಗ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಒಟ್ಟಿನಲ್ಲಿ ತನಗೆ ನ್ಯಾಯ ದೊರೆಯಬೇಕು ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.

    MARRIAGE

    ಪ್ರೀತಿ ಕುರುಡು ಅಂತಾರಲ್ಲ ಹಾಗೆಯೇ ಆಗಿದೆ ಚಾಮರಾಜನಗರ ಜಿಲ್ಲೆಯಲ್ಲಿ. ಮದುವೆಯಾಗುತ್ತೇನೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿನಿ ಎಂದವನ ಮಾತಿಗೆ ಮರುಳಾದ ಯುವತಿ ಬಾಳು ಈಗ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರೀತಿ, ಪ್ರೇಮದ ಅಮಲಿನಲ್ಲಿ ಬೀಳುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

  • ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!

    ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!

    ಕೊಪ್ಪಳ: ಅದು ಹೂ ವ್ಯಾಪಾರ ಮಾಡೋ ದೊಡ್ಡ ಕುಟುಂಬ. ಅದೇ ಹೂ ವ್ಯಾಪಾರ ಮಾಡಿ ಓದಿ ಇದೀಗ ಆ ದೊಡ್ಡ ಕುಟುಂಬದ ಕುಡಿಯೊಂದು PSI ಹುದ್ದೇಗರಿದೆ. ಹೂ ಮಾರುತ್ತಲೇ ಓದಿ ಪಿಎಸ್‍ಐ ಆದ ಆ ಯುವತಿ ಇದೀಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

    ಒಂದೆಡೆ ಹೂ ಕಟ್ಟಿ ಜೀವನ ಸಾಗಿಸುವ ಕುಟುಂಬ, ಮತ್ತೊಂದ್ಕಡೆ ಸಣ್ಣದಾದ ಹೂವಿನ ಅಂಗಡಿ. ಇದೇ ಹೂವಿನ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವತಿ ಇದೀಗ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ 17ನೇ ರ್ಯಾಂಕ್ ಪಡೆದ ಕೊಪ್ಪಳ ಜಿಲ್ಲೆಯ ಕುಕನೂರಿನ ಫರಿದಾ ಬೇಗಂ ಈಗ ಪಿಎಸ್‍ಐ ಹುದ್ದೆ ಅಲಂಕರಿಸಿದ್ದಾರೆ. ಫರಿದಾ ಬೇಗಂರದ್ದು ದೊಡ್ಡ ಕುಟುಂಬ. ತಂದೆ ಮೌಲಾ ಹುಸೇನ್ ಪಟೇಲ್‍ಗೆ ಒಟ್ಟು 12 ಜನ ಮಕ್ಕಳು ಫರಿದಾ ಬೇಗಂ 9ನೇ ಮಗಳು. 40 ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಲೇ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದ ತಂದೆ ಮಗಳ ಕನಸನ್ನು ನನಸು ಮಾಡಿದ್ದಾರೆ.

    ತಂದೆ ದಿವಂಗತರಾದ ಬಳಿಕ ಮಕ್ಕಳು ಹೂವಿನ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಣ್ಣದೊಂದು ಹೂವಿನ ಅಂಗಡಿಯಲ್ಲಿ ಫರೀದಾ ಕೂಡ ವ್ಯಾಪಾರ ಮಾಡಿದ್ದಾರೆ. ಶಾಲಾ ಕಾಲೇಜು ಓದುವ ಸಮಯದಲ್ಲಿ ಹಳ್ಳಿಹಳ್ಳಿಗೆ ಹೋಗಿ ಹೂ ಮಾರಾಟ ಮಾಡಿದ್ರು. ಬಿಬಿಎ ಪದವಿ ಮುಗಿದ ಬಳಿಕ ಸರ್ಕಾರಿ ಹುದ್ದೆ ಪಡೆಯಬೇಕೆಂಬ ಫರೀದಾ ಹಂಬಲ ಇದೀಗ ನೆರವೇರಿದೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ಒಟ್ಟಾರೆ ಫರಿದಾ ಛಲಕ್ಕೆ ಯಾವುದೇ ಬಡತನ ಅಡ್ಡಿ ಬಂದಿಲ್ಲ. ದಾರ ಹಿಡಿದು ಹೂ ಕಟ್ಟೋ ಕೈಗೆ ಇನ್ನು ಮುಂದೆ ಲಾಠಿ ಬರಲಿದೆ. ಮನಸ್ಸಿದ್ರೆ ಮಾರ್ಗ ಅನ್ನೋದಕ್ಕೆ ಫರಿದಾ ಬೇಗಂ ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ.

  • ಅತ್ತಿಗೆ ಕತ್ತು ಹಿಸುಕಿ ಕೊಂದ ಮೈದುನ ಅರೆಸ್ಟ್

    ಅತ್ತಿಗೆ ಕತ್ತು ಹಿಸುಕಿ ಕೊಂದ ಮೈದುನ ಅರೆಸ್ಟ್

    ಚೆನ್ನೈ: ಅತ್ತಿಗೆಯನ್ನು ಮೈದುನ ಮತ್ತು ಅವನ ಸ್ನೇಹಿತರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪೋರೂರಿನ ಕಾಮರಾಜರ್ ನಗರದಲ್ಲಿ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸಂತ್ರಸ್ತೆ ಶಾಹಿನ್ಶಾ (26) ಕೊಲೆಗಿಡಾದ ಮಹಿಳೆ. ಕಾರ್ತಿಕ್ (19) ಬಂಧನಕ್ಕೆ ಒಳಗಾದ ಆರೋಪಿ. ಶಾಹಿನ್ಶಾ ತನ್ನ ಅಣ್ಣನ್ನು ಕೊಂದಿದ್ದಾಳೆ ಎಂಬ ಶಂಕೆಯಿಂದ ಆರೋಪಿಯು ಈ ಕೊಲೆಗೈದಿದ್ದಾನೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮೃತಳು ಭಾನುವಾರ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಕಾರ್ತಿಕ್ ಮತ್ತು ಆತನ ಸ್ನೇಹಿತರು ಕುಡಿದ ಅಮಲಿನಲ್ಲಿದ್ದ ಸಂದರ್ಭದಲ್ಲಿ ಟವೆಲ್‍ನಿಂದ ಅವರ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯನ್ನು ಕಂಡ ಶಾಹಿನ್ಶಾಳ ತಾಯಿಯು ಕೆಲಬಕ್ಕಂ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಮೃತಳು ಕಾರ್ತಿಕ್ ಅಣ್ಣನಾದ ವಿಜಯ್ ಅವರನ್ನು ಮದುವೆ ಆಗಿದ್ದಳು. ಆದರೆ ದುರದೃಷ್ಟವಶಾತ್, ಮದುವೆಯಾದ 2 ವರ್ಷಗಳ ನಂತರ ಅವರು ನಿಧನರಾದರು. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯವರಿಗೆ ಶಾಹಿನ್ಶಾ ತಿಳಿಸಿದ್ದಳು. ಆದರೆ ಈ ಹಿನ್ನೆಲೆ ವಿಜಯ ಅವರ ಸಹೋದರ ಕಾರ್ತಿಕ್ ಮೃತಳ ವಿರುದ್ಧ ಶಂಕಿಸಿ ಅಣ್ಣನದು ಆತ್ಮಹತೈಯೋ ಅಥವಾ ಅತ್ತಿಗೆ ಕುತಂತ್ರವೋ ಅಂತಾ ರಹಸ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದ.

    POLICE JEEP

    ಈ ವೇಳೆ ಶಾಹಿನ್ಶಾ ಮೈದುನನಿಗೆ ನನ್ನನ್ನು ಪೀಡಿಸಿದರೆ ನಿನ್ನ ಸಹೋದರನಿಗಾದ ಗತಿ ನಿನಗೂ ಬರುತ್ತದೆ ಎಂದು ಬೆದರಿಸಿದ್ದಳು. ಈ ಕಾರಣಕ್ಕೆ ಆರೋಪಿಗಳು ಶಾಹಿನ್ಶಾಳನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.