Tag: young boy

  • ಹಳಿಯಲ್ಲಿ ಸೆಲ್ಫೀ ಹುಚ್ಚಿಗೆ ಯುವಕ ಬಲಿ

    ಹಳಿಯಲ್ಲಿ ಸೆಲ್ಫೀ ಹುಚ್ಚಿಗೆ ಯುವಕ ಬಲಿ

    ನವದೆಹಲಿ: ಹಳಿಯಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ರೈಲು ಡಿಕ್ಕಿ ಹೊಡೆದು 18 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನವದೆಹಲಿಯ ವೆಲ್‍ಕಮ್ ರೈಲ್ವೇ ಸ್ಟೇಷನ್ ಹತ್ತಿರ ನಡೆದಿದೆ.

    ಅರ್ಬಾಜ್ ಖಾನ್(18) ಸಾವನ್ನಪ್ಪಿದ ಯುವಕ. ಸೀಲಮ್‍ಪುರ್ ನಿವಾಸಿಯಾದ ಅರ್ಬಾಜ್ ಘಟನೆ ನಡೆಯುವಾಗ ರೈಲ್ವೇ ಟ್ರ್ಯಾಕ್ ದಾಟುತ್ತಿದ್ದ. ರೈಲ್ವೇ ಟ್ರ್ಯಾಕ್ ದಾಟುವಾಗ ಮೊಬೈಲ್‍ನಲ್ಲಿ ಹಾಡನ್ನು ಕೇಳುತ್ತಿದ್ದನೋ, ಇಲ್ಲವೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಸೆಲ್ಫಿಗೆ ಹುಚ್ಚಿಗೆ ರೈಲು ಹಳಿ ಮೇಲೆ ಬಿತ್ತು ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಹೆಣ

    ಅಪಘಾತ ನಡೆಯುವಾಗ ಸೆಲ್ಫೀ ತೆಗೆದುಕೊಳ್ಳುತ್ತಿದ್ದನೋ ಇಲ್ಲವೂ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಒಂದು ಅಪಘಾತ. ಇದರ ಬಗ್ಗೆ ಎಲ್ಲಾ ಕಡೆಯಿಂದ ತನಿಖೆ ನಡೆಯುತ್ತದೆ. ಈ ಘಟನೆಯ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಯುವಕನಿಂದ ಹಲ್ಲೆ

    ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಯುವಕನಿಂದ ಹಲ್ಲೆ

    ಬೆಳಗಾವಿ: ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಚಿಕ್ಕೋಡಿಯಿಂದ ಇಚಲಕರಂಜಿಗೆ ತೆರಳುತ್ತಿದ್ದ ಬಸ್‍ನಲ್ಲಿ ನಿರ್ವಾಹಕ ಹಾಗೂ ಯುವಕನ ನಡುವೆ ಗಲಾಟೆ ನಡೆದಿದೆ. ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದು ಹೇಳಿದರೂ ಕೇಳದೆ ಇದ್ದಿದ್ದಕ್ಕೆ ನಿರ್ವಾಹಕ ಮತ್ತು ಯುವಕನ ನಡುವೆ ವಾಗ್ವಾದ ನಡೆದಿದೆ.

    ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಮೊಹಮ್ಮದ ಶೇಖ್ 18 ಎಂಬ ಯುವಕ ನಿರ್ವಾಹಕ ಪ್ರಕಾಶ ಮಾಯಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಹಿನ್ನೆಲೆಯಲ್ಲಿ ಬಸ್ ಅನ್ನು ಚಿಕ್ಕೋಡಿ ಪೊಲೀಸ್ ಠಾಣೆಗೆ ತಂದು ಯುವಕನ ವಿರುದ್ಧ ನಿರ್ವಾಹಕ ದೂರು ದಾಖಲಿಸಿದ್ದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತುಮಕೂರಿನಲ್ಲಿ ವ್ಯಕ್ತಿ ಮೇಲೆ 2 ಕರಡಿಗಳು ದಾಳಿ: ಗಂಭೀರ ಗಾಯ

    ತುಮಕೂರಿನಲ್ಲಿ ವ್ಯಕ್ತಿ ಮೇಲೆ 2 ಕರಡಿಗಳು ದಾಳಿ: ಗಂಭೀರ ಗಾಯ

    ತುಮಕೂರು: ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ಮೇಲೆ ಏಕಾಏಕಿ 2 ಕರಡಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಜಿಲ್ಲೆ ಪಾವಗಡ ತಾಲೂಕಿನ ದೇವಲಕೆರೆ ಬಳಿ ನಡೆದಿದೆ.

    ರಾಜ್ ಕುಮಾರ್ ಕರಡಿಗಳ ದಾಳಿಗೊಳಗಾದ ವ್ಯಕ್ತಿ. ಕರಡಿಗಳ ದಾಳಿಯಿಂದ ರಾಜ್ ಕುಮಾರ್ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಇವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.