Tag: young boy

  • ‌ತಾಯಿ ಜೊತೆ ಕಾಲ್‌ನಲ್ಲಿದ್ದಾಗಲೇ ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

    ‌ತಾಯಿ ಜೊತೆ ಕಾಲ್‌ನಲ್ಲಿದ್ದಾಗಲೇ ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

    ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ (Canada’s British Columbia) ಪ್ರಾಂತ್ಯದಲ್ಲಿ ಭಾರತೀಯ ಮೂಲದ 28 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಯುವಕನನ್ನು ಯುವರಾಜ್‌ ಗೋಯಲ್‌ ಎಂದು ಗುರುತಿಸಲಾಗಿದ್ದು, ಇವರು ಪಂಜಾಬ್‌ ಮೂದವರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸರ್ರೆಯ ಮನ್ವಿರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಜುಟ್ಟಿ (23 ) ಮತ್ತು ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ ( 20 ) ಎಂದು ಗುರುತಿಸಲಾಗಿದೆ.

    ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯ ಸಂಬಂಧ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವರಾಜ್ ಗೋಯಲ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

    ಸಹೋದರಿ ಚಾರು ಸಿಂಘ್ಲಾ ಅವರು ಸರ್ರೆಯಲ್ಲಿನ ಕಾರ್ ಡೀಲರ್‌ಶಿಪ್‌ನಲ್ಲಿ ಗೋಯಲ್ ಕೆಲಸ ಮಾಡುತ್ತಿದ್ದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಸಹೋದರನನ್ನು ಯಾಕೆ ಕೊಲೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅವನು ಅಂತಹ ಯಾವುದೇ ಕೆಲಸಗಳಲ್ಲಿ ಭಾಗಿಯಾಗುವವನಲ್ಲ ಎಂದಿದ್ದಾರೆ.

    ಗೋಯಲ್ ಅವರ ಸೋದರ ಮಾವ ಬವಾನ್‌ದೀಪ್, ಯುವರಾಜ್‌ ಭಾರತದಲ್ಲಿ ವಾಸವಾಗಿರುವ ತನ್ನ ತಾಯಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು. ಅವನು ಎಂದಿನಂತೆ ಜಿಮ್‌ ಮುಗಿಸಿ, ಫೋನ್‌ನಲ್ಲಿ ಅಮ್ಮನ ಜೊತೆ ಮಾತಾಡಿಕೊಂಡು ಬಂದು ಮನೆ ಹತ್ತಿರ ಕಾರು ನಿಲ್ಲಿಸಿ ಇಳಿಯುತ್ತಿದ್ದಂತೆಯೇ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ತಿಳಿಸಿದ್ದಾರೆ.

    ಈ ಕೊಲೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆಗೆ ಇಳಿದಿದ್ದಾರೆ. ಅಲ್ಲದೇ ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

  • ಲವ್‌ ಮಾಡಿ ಯುವತಿಯನ್ನು ಕರೆದೊಯ್ದನೆಂದು ಯುವಕನ ತಾಯಿಯನ್ನೇ ಕಂಬಕ್ಕೆ ಕಟ್ಟಿ ಥಳಿತ!

    ಲವ್‌ ಮಾಡಿ ಯುವತಿಯನ್ನು ಕರೆದೊಯ್ದನೆಂದು ಯುವಕನ ತಾಯಿಯನ್ನೇ ಕಂಬಕ್ಕೆ ಕಟ್ಟಿ ಥಳಿತ!

    ಹಾವೇರಿ: ಕೆಲವೊಮ್ಮೆ ಮಕ್ಕಳು ಮಾಡುವ ತಪ್ಪಿಗೆ ಹೆತ್ತವರು ಶಿಕ್ಷೆ ಅನುಭವಿಸುತ್ತಾರೆ. ಅಂತೆಯೇ ಹಾವೇರಿ (Haveri) ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.

    ಪ್ರೀತಿಸಿ ಬಳಿಕ ಯುವತಿಯನ್ನು ಕರೆದುಕೊಂಡು ಹೋದನೆಂದು ಸಿಟ್ಟಿಗೆದ್ದ ಯುವತಿ ಕಡೆಯವರು ಯುವಕನ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    50 ವರ್ಷದ ಹನುಮವ್ವ ಮೆಡ್ಲೇರಿ ಹಲ್ಲೆಗೊಳಗಾದ ಮಹಿಳೆ. ಆರೋಪಿಗಳನ್ನು ಚಂದ್ರಪ್ಪ , ಗಂಗಪ್ಪ ಹಾಗೂ ಗುತ್ತೆವ್ವ ಎಂದು ಗುರುತಿಸಲಾಗಿದೆ. ಹನುಮವ್ವಳ ಮಗ ಯುವತಿಯನ್ನ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮಗ ಮಾಡಿದ ತಪ್ಪಿಗೆ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

    ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

    ಬೆಂಗಳೂರು: ಯುವಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಜಯನಗರದ 4 ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಯುವಕ ಆಯತಪ್ಪಿ ಕಬ್ಬಿಣದ ಸರಳುಗಳ ಮೇಲೆ ಯುವಕ ಬಿದ್ದಿದ್ದಾನೆ. ಈ ವೇಳೆ ಎರಡು ಕಬ್ಬಿಣದ ಕಂಬಿಗಳು ಹೊಟ್ಟೆಯ ಭಾಗದಿಂದ ತೂರಿ ಬೆನ್ನಿನ ಭಾಗದಿಂದ ಹೊರಕ್ಕೆ ಬಂದಿದೆ. ಅದೇ ಸ್ಥಿತಿಯಲ್ಲಿ ಯುವಕ ಕಬ್ಬಿಣದ ಸರಳುಗಳ ಮೇಲೆ ಸಿಲುಕಿ ಒದ್ದಾಡಿದ್ದಾನೆ.

    ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ದೇಹದಲ್ಲಿದ್ದ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್‌ ಮಾಡಿ ಹತ್ಯೆ

    ಸದ್ಯ ಖಾಸಗಿ ಆಸ್ಪತ್ರೆಗೆ ಯುವಕನನ್ನು ದಾಖಲು ಮಾಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾರಿಗೆ ಬಸ್ ಗಾಲಿಗೆ ಸಿಲುಕಿ ಬೈಕ್ ಸವಾರ ಸಾವು

    ಸಾರಿಗೆ ಬಸ್ ಗಾಲಿಗೆ ಸಿಲುಕಿ ಬೈಕ್ ಸವಾರ ಸಾವು

    ರಾಯಚೂರು: ಜಿಲ್ಲೆಯ ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿ ಬೈಕ್ ಸವಾರ ಬಸ್ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಉದಯ್(25) ಮೃತ ಬೈಕ್ ಸವಾರ. ಎರಡು ಬೈಕ್‍ಗಳ ನಡುವೆ ಡಿಕ್ಕಿಯಾಗಿ, ಮುಂದೆ ಬಂದ ಬಸ್ ಗಾಲಿಗೆ ಯುವಕ ಸಿಲುಕಿ ಸಾವನ್ನಪ್ಪಿದ್ದಾನೆ. ಇನ್ನೋರ್ವ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುಮಾಸ್ತನಾಗಿದ್ದ ಉದಯ್ ಏಳು ತಿಂಗಳ ಕೆಳಗೆ ಮದುವೆಯಾಗಿದ್ದ. ಪತ್ನಿ ತವರುಮನೆ ಕೊಪ್ಪಳ ಜಿಲ್ಲೆಯ ಕಾರಟಗಿಗೆ ಬೈಕ್‍ನಲ್ಲಿ ಹೊರಟಿದ್ದ ವೇಳೆ ಅಪಘಾತ ನಡೆದಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿ: ಅರ್ಧ ಮನೆಯೇ ಧ್ವಂಸ

    Raichuru

    ಅಪಘಾತದ ದೃಶ್ಯ ಹತ್ತಿರದ ಪೆಟ್ರೋಲ್ ಬಂಕ್‍ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ತಾಲೂಕು ಆಸ್ಪತ್ರೆ ಶವಾಗಾರದಲ್ಲಿ ಮೃತದೇಹವನ್ನ ಇರಿಸಲಾಗಿದೆ. ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ ಎಸಗಿದ್ದವನ್ನನ್ನು ತುಂಡು, ತುಂಡಾಗಿ ಕತ್ತರಿಸಿದ ತಂದೆ

  • ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

    ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

    ಬೀದರ್: ಮೊಬೈಲ್‍ನಲ್ಲಿ ವೀಡಿಯೋ ಮಾಡಿಟ್ಟುಕೊಂಡು ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನೌಬಾದ್ ಬಳಿ ನಡೆದಿದೆ.

    ನಗರದ ಅಬ್ದುಲ್ ಫೈಜಾ ದರ್ಗಾ ನಿವಾಸಿಯಾಗಿರುವ ಸೈಯದ್ ಅಮೀರ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೈಯದ್ ವೀಡಿಯೋ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಯಾವುದೇ ಒತ್ತಡ ಇಲ್ಲ, ನಾನು ನನ್ನ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ಯುವಕನು ವೀಡಿಯೋದಲ್ಲಿ ಹೇಳಿದ್ದಾನೆ. ಇದನ್ನೂ ಓದಿ:  ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

    ಎನ್‍ಜಿಓ ಸದಸ್ಯರು ಹಾಗೂ ಸ್ಥಳೀಯರ ಹಗ್ಗದ ಸಹಾಯದಿಂದ ಬಾವಿಯಿಂದ ಮೃತದೇಹವನ್ನು ಮೇಲೆ ತೆಗೆಯುತ್ತಿರುವ ದೃಶ್ಯವು ನೋಡಲು ಭಯಾನಕವಾಗಿದೆ. ಸದ್ಯ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಮಹಾಭಾರತ ಸೀರಿಯಲ್‍ನ ಭೀಮ್ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಇನ್ನಿಲ್ಲ

  • ಪುಟ್ಟ ಬಾಲಕನ ಬ್ಯಾಟಿಂಗ್‍ಗೆ ಮನಸೋತ ಕ್ರಿಕೆಟ್ ಪ್ರಿಯರು

    ಪುಟ್ಟ ಬಾಲಕನ ಬ್ಯಾಟಿಂಗ್‍ಗೆ ಮನಸೋತ ಕ್ರಿಕೆಟ್ ಪ್ರಿಯರು

    ಪುಟ್ಟ ಬಾಲಕನೋರ್ವ ನುರಿತ ಕ್ರಿಕೆಟ್ ಬ್ಯಾಟ್ಸ್ ಮ್ಯಾನ್ ನಂತೆ ಕ್ರಿಕೆಟ್‍ನ ಎಲ್ಲಾ ವಿಧದ ಶಾಟ್‍ಗಳನ್ನು ಬ್ಯಾಟ್ ಇಲ್ಲದೆ ವಿಕೆಟ್‍ನಲ್ಲಿ ಹೊಡೆಯುವ ಮೂಲಕ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾನೆ.

    ಬಾಲಕ ನೆಟ್ಸ್ ನಲ್ಲಿ ಬ್ಯಾಟ್ ಬಳಸದೆ ಒಂದು ವಿಕೆಟ್ ಹಿಡಿದುಕೊಂಡು ಕ್ರಿಕೆಟ್‍ನ ವಿವಿಧ ಮಾದರಿಯ ಶಾಟ್‍ಗಳನ್ನು ಸಖತ್ ಸಲಿಸಾಗಿ ಹೊಡೆಯುವ ವೀಡೀಯೊ ಒಂದನ್ನು ಟ್ವಿಟ್ಟರ್‍ ನಲ್ಲಿ ಗ್ರೇಡ್ ಕ್ರಿಕೆಟರ್ ಎಂಬ ಹೆಸರಿನ ಖಾತೆಯೊಂದು ಹಾಕಿಕೊಂಡಿದೆ. ಇದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಈ ಪುಟ್ಟ ಬಾಲಕನ ಪತ್ರಿಭೆಯನ್ನು ಕಂಡು ಬೆರಗಾಗಿದ್ದಾರೆ.

    https://twitter.com/gradecricketer/status/1390831420663160832

    ವೀಡೀಯೊದಲ್ಲಿ ಬಾಲಕ ಕ್ರಿಕೆಟ್‍ನಲ್ಲಿ ಕಂಡು ಬರುವ ಸ್ವೀಪ್ ಶಾಟ್, ಡ್ರೈವ್, ಕವರ್ ಡ್ರೈವ್, ರಿವರ್ಸ್ ಸ್ವೀಪ್, ಕಟ್ ಶಾಟ್ ಮತ್ತು ಫ್ಲಿಕ್ ಶಾಟ್‍ಗಳನ್ನು ಬ್ಯಾಟ್ ಇಲ್ಲದೆ ವಿಕೆಟ್ ಮೂಲಕ ಬಾರಿಸುತ್ತಿದ್ದಾನೆ. ಬಾಲಕ ಸಿಮೆಂಟ್ ನೆಲದ ಮೇಲೆ ತಾಲೀಮು ಮಾಡುತ್ತಿದ್ದು ಹೆಲ್ಮೆಟ್, ಗ್ಲಾವ್ಸ್, ಪ್ಯಾಡ್ ಕಟ್ಟಿಕೊಂಡು ತನ್ನ ಅದ್ಭುತ ಪಾದ ಚಲನೆಯ ಮೂಲಕ ಉತ್ತಮವಾದ ಹೊಡೆತಗಳನ್ನು ಹೊಡೆಯುವ ಮೂಲಕ ತಾನೊಬ್ಬ ಭವಿಷ್ಯದ ಕ್ರಿಕೆಟ್ ಆಟಗಾರ ಎಂಬುದನ್ನು ಸಾಬೀತು ಪಡಿಸುತ್ತಿದ್ದಾನೆ.

  • ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17ರ ಹುಡುಗನ ಸಜೀವ ದಹನ

    ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17ರ ಹುಡುಗನ ಸಜೀವ ದಹನ

    – ಸುಟ್ಟ ದೇಹವನ್ನ ತೊಗರಿ ಹೊಲದಲ್ಲಿ ಎಸೆದ್ರು

    ಬೀದರ್: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17 ವರ್ಷದ ಹುಡುಗನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ಕಮಲನಗರ ತಾಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ನಡೆದಿದೆ.

    17 ವರ್ಷದ ಶಿವಕುಮಾರ್ ಹಾವಪ್ಪ ಕೊಲೆಯಾದ ಹುಡುಗ. ಔರಾದ್ ತಾಲೂಕಿನ ನಾಗಮಾರಪಳ್ಳಿ ನಿವಾಸಿಯಾಗಿದ್ದ ಶಿವಕುಮಾರ್ ನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಕೊಂದು ಶವವನ್ನ ರಸ್ತೆಬದಿಯ ತೊಗರಿ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ. ಶಿವಕುಮಾರ್ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ಪಟ್ಟಣದಲ್ಲಿರುವ ಸೋದರಿ ಮನೆಯಿಂದ ಬೈಕ್ ನಲ್ಲಿ ನಾಗಮಾರಪಳ್ಳಿಗೆ ಹಿಂದಿರುಗುತ್ತಿದ್ದನು. ಮಾರ್ಗ ಮಧ್ಯೆಯೇ ಈ ಕೊಲೆ ನಡೆದಿದೆ.

    ಸಂಜೆಯಾದರೂ ಶಿವಕುಮಾರ್ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊದಲು ಕೋಟಗ್ಯಾಳ ಗ್ರಾಮದ ಹೊರ ವಲಯದಲ್ಲಿ ಶಿವಕುಮಾರ್ ಬೈಕ್ ಪತ್ತೆಯಾಗಿದೆ. ನಂತರ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ತೊಗರಿ ಬೆಳೆ ಮಧ್ಯೆ ಶಿವಕುಮಾರ್ ಮೃತದೇಹ ಪತ್ತೆಯಾಗಿದೆ.

    ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ್, ಡಿವೈಎಸ್‍ಪಿ ಡಾ.ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರು ಮತ್ತು ಆತನ ಆಪ್ತರ ಹೇಳಿಕೆಗಳನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪ್ರೀತಿಸಿದನಿಂದಲೇ ಸಮಾಜದಲ್ಲಿ ಅವಮಾನ – ಬೆಂಕಿ ಹಚ್ಚಿಕೊಂಡ ಯುವತಿ

    ಪ್ರೀತಿಸಿದನಿಂದಲೇ ಸಮಾಜದಲ್ಲಿ ಅವಮಾನ – ಬೆಂಕಿ ಹಚ್ಚಿಕೊಂಡ ಯುವತಿ

    – ಮನೆಗೆ ಬಂದು ಹಲ್ಲೆಗೈದು, ಅವಾಚ್ಯ ಪದಗಳಿಂದ ನಿಂದಿಸಿದ
    – ಪ್ರಿಯಕರನ ಮನೆ ಮುಂದೆ ಬೆಂಕಿಗೆ ಹಚ್ಚಿಕೊಂಡ ಯುವತಿ
    – ಶೇ.70ರಷ್ಟು ದೇಹ ಬೆಂಕಿಗಾಹುತಿ

    ರಾಯ್ಪುರ: ಪ್ರೀತಿಸಿದವನಿಂದ ಸಮಾಜದಲ್ಲಿ ಅವಮಾನಿತಳಾದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಗಢನಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿರುವ ಯವತಿಯ ದೇಹದ ಶೇ.70 ರಷ್ಟು ಭಾಗ ಬೆಂಕಿಗೆ ಆಹುತಿಯಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾಳೆ.

    ಪುಷ್ಪಾ ಬೆಹ್ರಾ ಆತ್ಮಹತ್ಯಗೆ ಯತ್ನಿಸಿರುವ ಯುವತಿ. ತನ್ನ ಈ ನಿರ್ಧಾರಕ್ಕೆ ಪ್ರಿಯಕರ ಮೋಹನ್ ಪಟೇಲ್ ಕಾರಣ ಎಂದು ಪುಷ್ಪಾ ಆರೋಪಿಸಿದ್ದಾಳೆ. ಮೊದಲಿಗೆ ಲಾಕ್‍ಡೌನ್ ವೇಳೆ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಇರೋದರಿಂದ ಪುಷ್ಪಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಆತ್ಮಹತ್ಯೆಗೆ ಮುನ್ನ ಪುಷ್ಪಾ ಮಾಡಿದ್ದ ಸೆಲ್ಫಿ ವೀಡಿಯೋ ವೈರಲ್ ಬಳಿಕ ಮೋಹನ್ ಹೆಸರು ಬಹಿರಂಗವಾಗಿದೆ.

    ಮೋಹನ್ ನೀಡಿದ್ದ ಸೀರೆ ಧರಿಸಿ ವೀಡಿಯೋ: ಆತ್ಮಹತ್ಯೆಗೆ ಮುನ್ನ ಪುಷ್ಪಾ, ಕೋಣೆಯಲ್ಲಿ ಪ್ರಿಯಕರ ಮೋಹನ್ ನೀಡಿದ ಸೀರೆ ಉಟ್ಟು ಆತ ಕಟ್ಟಿದ್ದ ತಾಳಿ ಹಾಕಿಕೊಂಡು ವೀಡಿಯೋ ಮಾಡಿದ್ದಾಳೆ. ವೀಡಿಯೋದಲ್ಲಿ ಮೋಹನ್ ತನಗೆ ಮಾಡಿದ ಅವಮಾನದ ಬಗ್ಗೆ ಪ್ರಷ್ಪಾ ಹೇಳಿಕೊಂಡಿದ್ದಾಳೆ.

    ಅವಮಾನದಿಂದ ಬದುಕಲಾರೆ: ನಾನು ಪ್ರೀತಿಸುತ್ತಿದ್ದ ಯುವಕ ಮೋಹನ್ ಪಟೇಲ್ ಕೆಲ ಜನರೊಂದಿಗೆ ನನ್ನ ಮನೆಗೆ ಬಂದಿದ್ದನು. ಮನೆಯ ಸಾಮಾನುಗಳನ್ನ ಚೆಲ್ಲಾಪಿಲ್ಲಿಯಾಗಿಸಿ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿದನು. ನಾನು ಎಷ್ಟೇ ಹೇಳಿದರೂ ನನ್ನ ಮಾತುಗಳನ್ನ ಮೋಹನ್ ಕೇಳಲಿಲ್ಲ. ನಾನು ಅವನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ಆತ ನನ್ನೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡನು.

    ಕೊನೆಗೆ ನನ್ನ ವೇಶ್ಯಾವಾಟಿಕೆ ಮಹಿಳೆ ಎಂದು ಹೇಳಿ ಅವಮಾನಿಸಿದನು. ಹತ್ತಾರು ಗೂಂಡಾಗಳು ಮನೆಯನ್ನ ಧ್ವಂಸಗೊಳಿಸಿದರು. ನಿಂದನೆ ಬಳಿಕ ಮೋಹನ್ ನನ್ನ ಮೇಲೆ ಹಲ್ಲೆ ನಡೆಸಿ ಹೋದನು. ಈಗ ತೊಟ್ಟಿರುವ ಸೀರೆ ಸಹ ಅವನೇ ನೀಡಿದ್ದು. ಕಷ್ಟ ನೋವುಗಳನ್ನ ಏನೇ ಇದ್ದರೂ ನಾನು ಬದುಕಬಲ್ಲೆ. ಆದರೆ ಅವಮಾನದಿಂದ ಜೀವನ ನಡೆಸಲಾರೆ. ಹಾಗಾಗಿ ಇಂದು ನಾನು ಸಾಯುತ್ತಿದ್ದೇನೆ. ಅವನ ಮನೆಯ ಮುಂದೇ ಹೋಗಿ ಬೆಂಕಿ ಹಚ್ಚಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಪುಷ್ಪಾ ಸೆಲ್ಫಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

    ಕುಟುಂಬಸ್ಥರ ಹೇಳಿಕೆ: ಮೋಹನ್ ಪಟೇಲ್ ಮನೆಗೆ ಬಂದು ಪೀಠೋಪಕರಣ ಧ್ವಂಸಗೊಳಿಸಿರುವ ಬಗ್ಗೆ ಪುಷ್ಪಾ ನನ್ನ ಬಳಿ ಹೇಳಿಕೊಂಡಿದ್ದಳು. ಸದ್ಯ ಪುಷ್ಪಾಳಿಗೆ ಹೇಳಿಕೆ ಬದಲಾಯಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಪುಷ್ಪಾಳ ಭಾವ ಅರುಣ್ ಸಾಹೂ ಆರೋಪಿಸಿದ್ದಾರೆ.

    ಪ್ರಕರಣ ಗಂಭೀರವಾಗಿದ್ದು, ತನಿಖೆ ನಡೆಸಲಾಗುತ್ತಿದೆ. ವೈರಲ್ ಆಗಿರುವ ವೀಡಿಯೋದಲ್ಲಿನ ಮಾಹಿತಿ ಕೆಲ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಶುಕ್ಲಾ ಹೇಳಿದ್ದಾರೆ.

  • ಟ್ಯೂಷನ್ ತರಗತಿ ಬಗ್ಗೆ ಕೇಳುವ ನೆಪದಲ್ಲಿ ಕರೆದು ಯುವಕನನ್ನ ಥಳಿಸಿ ಕೊಂದ್ರು

    ಟ್ಯೂಷನ್ ತರಗತಿ ಬಗ್ಗೆ ಕೇಳುವ ನೆಪದಲ್ಲಿ ಕರೆದು ಯುವಕನನ್ನ ಥಳಿಸಿ ಕೊಂದ್ರು

    – ಯುವತಿಯ ಜೊತೆ ಸಂಬಂಧ ಹೊಂದಿದ್ದಕ್ಕೆ ಸೋದರ ಕೋಪ
    – ಸ್ಥಳೀಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ಹೇಳಿಕೊಡ್ತಿದ್ದ

    ನವದೆಹಲಿ: ಬೇರೆ ಸಮುದಾಯಕ್ಕೆ ಸೇರಿದ ಯುವತಿಯ ಜೊತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ 18 ವರ್ಷದ ಟ್ಯೂಷನ್ ಶಿಕ್ಷಕನನ್ನು ಗುಂಪೊಂದು ಥಳಿಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ವಾಯುವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ನಡೆದಿದೆ. ಮೃತನನ್ನು ರಾಹುಲ್ ರಜಪೂತ್ ಎಂದು ಗುರುತಿಸಲಾಗಿದೆ. ಈತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ನಡೆಸುತ್ತಿದ್ದನು. ಈತ ಬೇರೆ ಸಮುದಾಯಕ್ಕೆ ಸೇರಿದ ಯುವತಿಯ ಜೊತೆ ಸ್ನೇಹ ಬೆಳೆಸಿದ್ದನು. ಹುಡುಗಿಯ ಕುಟುಂಬವು ಇಬ್ಬರ ನಡುವಿನ ಸಂಬಂಧಕ್ಕೆ ವಿರುದ್ಧ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

    ರಾಹುಲ್ ರಜಪೂತ್‍ನಿಗೆ ಇಂಗ್ಲಿಷ್ ಟ್ಯೂಷನ್ ತರಗತಿಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಫೋನ್ ಮಾಡಿದ್ದಾರೆ. ಈ ವೇಳೆ ರಜಪೂತ್ ಮನೆಯ ಸಮೀಪದಲ್ಲೇ ಭೇಟಿಯಾಗಲು ತಿಳಿಸಿದ್ದಾರೆ. ಅಲ್ಲಿಗೆ ಹೋದ ರಜಪೂತ್ ಮೇಲೆ 7-8 ಹುಡುಗರೊಂದಿಗೆ ಯುವತಿಯ ಸಹೋದರ ಕೋಲು ಮತ್ತು ದೊಣ್ಣೆಯಿಂದ ಹೊಡೆದಿದ್ದಾನೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಜಪೂತ್‍ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಜಪೂತ್ ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

    ಸುಮಾರು ಒಂದು ತಿಂಗಳ ಹಿಂದೆ ಹುಡುಗಿ ರಾಹುಲ್‍ಗೆ ಫೋನ್ ಮಾಡಿದ್ದಳು. ಆದರೆ ಆಕೆಯ ತಾಯಿ ಮತ್ತೆ ಕರೆ ಮಾಡದಂತೆ ಮಗಳಿಗೆ ಎಚ್ಚರಿಸಿದ್ದರು. ಇಬ್ಬರು ಈ ಹಿಂದೆ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತರಾಗಿದ್ದರು. ಆದರೆ ಇಬ್ಬರು ಒಟ್ಟಿಗೆ ಮಾತನಾಡುವುದು ನೋಡಿದ ಆಕೆಯ ಸಹೋದರ ಕೋಪಕೊಂಡು ಈ ರೀತಿ ಮಾಡಿದ್ದಾನೆ. ಟ್ಯೂಷನ್ ತರಗತಿಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಕರೆದು ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ರಾಹುಲ್ ತಂದೆ ಸಂಜಯ್ ರಜಪೂತ್ ಕಣ್ಣೀರು ಹಾಕಿದರು.

    ಯುವಕರ ಸಾವಿನ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಹುಡುಗನ ಚಿಕ್ಕಪ್ಪ ನೀಡಿದ ದೂರಿನ ನಂತರ ನಾವು ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ ಯುವತಿಯ ಸಹೋದರ ಮೊಹಮ್ಮದ್ ರಾಜ್, ಆಕೆಯ ಸಂಬಂಧಿ ಮನ್ವರ್ ಹುಸೇನ್ ಮತ್ತು ಇತರ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಾನವೀಯತೆ ಮೆರೆದ ಪೊಲೀಸರು – ಕಳ್ಕೊಂಡಿದ್ದ 30,000 ಹಣ, ಎಟಿಎಂ ಕಾರ್ಡ್ ಯುವಕನಿಗೆ ವಾಪಸ್

    ಮಾನವೀಯತೆ ಮೆರೆದ ಪೊಲೀಸರು – ಕಳ್ಕೊಂಡಿದ್ದ 30,000 ಹಣ, ಎಟಿಎಂ ಕಾರ್ಡ್ ಯುವಕನಿಗೆ ವಾಪಸ್

    ಬೆಂಗಳೂರು: ದಾರಿಯಲ್ಲಿ ಕಳೆದುಕೊಂಡಿದ್ದ ಎಟಿಎಂ ಕಾರ್ಡ್ ಮತ್ತು ಹಣವನ್ನು ಯುವಕನಿಗೆ ಹಿಂದಿರುಗಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ತುಮಕೂರಿನ ಕೋಡಿಹಳ್ಳಿ ನಿವಾಸಿ ರಾಕೇಶ್ ಪರ್ಸ್ ಕಳೆದುಕೊಂಡಿದ್ದ. ಈತನ ಪರ್ಸ್ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಾಚನಹಳ್ಳಿ ಕಾಲೋನಿಯ ಬಳಿ ಸಿಕ್ಕಿತ್ತು. ಈ ಪರ್ಸ್‌ನಲ್ಲಿ ಎಟಿಎಂ ಕಾರ್ಡ್, ಡಿಎಲ್ ಮತ್ತು 30 ಸಾವಿರ ಹಣ ಇತ್ತು. ಇದನ್ನ ನೋಡಿದ ಡಾಬಸ್ ಪೇಟೆ ಪೊಲೀಸರು ಯುವಕನನ್ನ ಪತ್ತೆ ಮಾಡಿ ಮತ್ತೆ ಆತನಿಗೆ ಹಿಂದುರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಡಾಬಸ್ ಪೇಟೆ ಪಿಎಸ್‍ಐ ಮಂಜುನಾಥ್ ಡಿ.ಆರ್. ನೇತೃತ್ವದಲ್ಲಿ ಹಣ ವಾಪಸ್ ಮಾಡಲಾಗಿದೆ. ತಮ್ಮ ವಸ್ತುಗಳು ಮತ್ತೆ ಸಿಕ್ಕಿದ್ದಕ್ಕೆ ರಾಕೇಶ್ ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಪೊಲೀಸರ ಕಾರ್ಯಕ್ಕೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾಬಸ್ ಪೇಟೆ ಹೆಡ್ ಕಾನ್‍ಸ್ಟೇಬಲ್ ನಾಗೇಶ್ ಹಾಗೂ ಪೊಲೀಸ್ ಕಾನ್‍ಸ್ಟೇಬಲ್ ಗಂಗೇಶ್‍ಗೆ ಪಿಎಸ್‍ಐ ಮಂಜುನಾಥ್ ಅಭಿನಂದಿಸಿದ್ದಾರೆ.