ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯೂಟ್ಯೂಬ್‌ನಲ್ಲಿ (YouTube) ವಿಶ್ವದಾಖಲೆ (World Record) ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ 2 ಕೋಟಿ ಚಂದದಾರರನ್ನು ಹೊಂದಿದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.
ಪ್ರಧಾನಿ ಮೋದಿ ಖಾತೆಯಿಂದ ಇಲ್ಲಿಯವರೆಗೆ ಒಟ್ಟು 23 ಸಾವಿರ ವಿಡಿಯೋಗಳು ಅಪ್ಲೋಡ್ ಆಗಿವೆ. 2023ರ ಡಿಸೆಂಬರ್ ತಿಂಗಳಿನಲ್ಲೇ 2.24 ಶತಕೋಟಿ ವೀಕ್ಷಣೆ ಕಂಡಿವೆ.
ಯೂಟ್ಯೂಬ್‌ನಲ್ಲಿ ಎರಡನೇ ಅತಿ ಹೆಚ್ಚು ಚಂದದಾರರು ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸೋನಾ ಅವರಿಗಿದ್ದು 64 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು 11 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ್ದರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಖಾತೆಯನ್ನು 7.94 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಮೋದಿ ಅವರನ್ನು 9.4 ಕೋಟಿ ಮಂದಿ ಫಾಲೋ ಮಾಡಿದ್ದರೆ, ಫೇಸ್‌ಬುಕ್‌ನಲ್ಲಿ ಮೋದಿ ಅವರ ಪೇಜನ್ನು 4.8 ಕೋಟಿ ಮಂದಿ ಲೈಕ್ ಮಾಡಿದ್ದಾರೆ. ಇನ್‌ಸ್ಟಾದಲ್ಲಿ ಮೋದಿ ಅವರನ್ನು 8.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಮೋದಿ ಅವರನ್ನು ವಾಟ್ಸಪ್‌ನಲ್ಲಿ 12 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.
ಲಾಸ್ ಏಂಜಲೀಸ್: ಯೂಟ್ಯೂಬ್‌ನಲ್ಲಿ (You Tube) ಹೆಚ್ಚು ವ್ಯೂ ಗಳಿಸುವ ಸಲುವಾಗಿ ವಿಮಾನ ಪತನ ಮಾಡಿ ಹುಚ್ಚಾಟ ಮಾಡಿದ ಪೈಲೆಟ್ (Pilot) ಯೂಟ್ಯೂಬರ್‌ಗೆ ಫೆಡರಲ್ ಜೈಲ್ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಲೊಂಪೋಕ್‌ನ (Lompoc) ಟ್ರೆವರ್ ಡೇನಿಯಲ್ ಜಾಕೋಬ್ (29) ತಪ್ಪೊಪ್ಪಿಕೊಂಡ ಯೂಟ್ಯೂಬರ್ ಪೈಲೆಟ್. ಜಾಕೋಬ್ ಮನವಿ ಒಪ್ಪಂದದ ಪ್ರಕಾರ, ತಾನೊಬ್ಬ ಅನುಭವಿ ಪೈಲಟ್ ಮತ್ತು ಸ್ಕೈಡ್ರೈವರ್ ಆಗಿದ್ದು, ವಾಲೆಟ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಯಿಂದ ಪ್ರಾಯೋಜಕತ್ವವನ್ನು ಪಡೆದುಕೊಂಡಿದ್ದಾನೆ. ಪ್ರಾಯೋಜಕತ್ವದ ಒಪ್ಪಂದದ ಪ್ರಕಾರ ಜಾಕೋಬ್ ಪೋಸ್ಟ್ ಮಾಡುವ ಯೂಟ್ಯೂಬ್ ವಿಡಿಯೋದಲ್ಲಿ ಕಂಪನಿಯ ವಾಲೆಟ್ ಅನ್ನು ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!
ನವಂಬರ್ 24, 2021ರಂದು ಜಾಕೋಬ್ (Trevor Daniel Jacob) ತನ್ನ ವಿಮಾನದಲ್ಲಿ ಲೊಂಪೋಕ್ ಸಿಟಿ ವಿಮಾನ ನಿಲ್ದಾಣದಿಂದ ಮ್ಯಾಮತ್ ಲೇಕ್ಸ್‌ಗೆ ಹೊರಟಿದ್ದ. ಈ ವೇಳೆ ತಾನು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹಾರಿದ್ದು, ವಿಮಾನ ಅಪಘಾತಕ್ಕೀಡಾಗಿದೆ ಎಂದು ಮನವಿ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದಾನೆ. ವಿಮಾನ ಹಾರಾಟ ನಡೆಸುವ ಮೊದಲು ವಿಮಾನದ ವಿವಿಧ ಭಾಗಗಳಲ್ಲಿ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಿ ಬಳಿಕ ಪ್ಯಾರಾಚೂಟ್ ಸಹಾಯದಿಂದ ಹಾರಿ ಸೆಲ್ಫಿ ಸ್ಟಿಕ್‌ನಲ್ಲಿ ಅಳವಡಿಸಲಾಗಿದ್ದ ವಿಡಿಯೋ ಕ್ಯಾಮರಾ ಮೂಲಕ ವಿಮಾನ ಅಪಘಾತಕ್ಕೀಡಾಗುವ ವಿಡಿಯೋವನ್ನು ಮಾಡಲಾಗಿದೆ. ಆತನ ಹಾರಾಟದ ವಿಡಿಯೋ ರೆಕಾರ್ಡ್‌ಗಳು ಮತ್ತು ವಿಮಾನ ಪತನದ ಡೇಟಾವನ್ನು ಪಡೆದು ತನಿಖೆ ನಡೆಸಲಾಗಿತ್ತು. ಇದನ್ನೂ ಓದಿ: 1,000 ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ – 1 ಗಂಟೆ ಡೇಟ್‍ಗೆ ಈಕೆಗೆ ಕೊಡ್ಬೇಕು 5 ಸಾವಿರ!
ನವಂಬರ್ 26ರಂದು ಜಾಕೋಬ್ ವಿಮಾನ ಪತನದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ಮಾಹಿತಿಯನ್ನು ನೀಡಿದ್ದಾನೆ. ವಿಮಾನ ಪತನದ ಬಗ್ಗೆ ಎನ್‌ಟಿಎಸ್‌ಬಿ ತನಿಖೆ ಆರಂಭಿಸಿದೆ. ಅಲ್ಲದೇ ಜಾಕೋಬ್‌ಗೆ ವಿಮಾನ ಪತನದ ಅವಶೇಷಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿತ್ತು. ವಿಮಾನ ಪತನದ ವಿಡಿಯೋಗಳು ಹಾಗೂ ಅಪಘಾತದ ಸ್ಥಳವನ್ನು ತೋರಿಸಲು ಜಾಕೋಬ್ ಒಪ್ಪಿಕೊಂಡಿದ್ದ. ಇದಾದ ಮೂರು ದಿನಗಳ ನಂತರ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ವಿಮಾನ ಪತನದ ಬಗ್ಗೆ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿತು. ಇದನ್ನೂ ಓದಿ: ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು
ಮನವಿ ಒಪ್ಪಂದದ ಪ್ರಕಾರ, ಅವಶೇಷಗಳ ಸ್ಥಳವು ತನಗೆ ತಿಳಿದಿಲ್ಲ ಎಂದು ಜಾಕೋಬ್ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ. ಆದರೆ ವಾಸ್ತವವಾಗಿ ಜಾಕೋಬ್ ತನ್ನ ಸ್ನೇಹಿತನೊಂದಿಗೆ ಹೆಲಿಕಾಪ್ಟರ್ ಮೂಲಕ ವಿಮಾನ ಪತನವಾದ ಸ್ಥಳಕ್ಕೆ ಹೋಗಿ ಅಲ್ಲಿದ್ದ ಅವಶೇಷಗಳನ್ನು ಟ್ರಕ್‌ನ ಟ್ರೈಲರ್‌ಗೆ ಲೋಡ್ ಮಾಡಿ ಅಲ್ಲಿಂದ ಲ್ಯಾಂಪೋಕ್ ಸಿಟಿ ವಿಮಾನನಿಲ್ದಾಣದ ಹ್ಯಾಂಗರ್‌ನಲ್ಲಿ ಇಳಿಸಿದ್ದಾನೆ. ಬಳಿಕ ಅದರ ಅವಶೇಷಗಳನ್ನು ವಿಮಾನ ನಿಲ್ದಾಣದ ಕಸದ ತೊಟ್ಟಿ ಸೇರಿದಂತೆ ಹಲವೆಡೆ ಹಾಕಿ ನಾಶಪಡಿಸಲಾಗಿದೆ. ಇದು ಫೆಡರಲ್ ಅಧಿಕಾರಿಗಳ ತನಿಖೆಯನ್ನು ಅಡ್ಡಿಪಡಿಸುವ ಸಲುವಾಗಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದ.ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್
ಅದೇ ವರ್ಷ ಡಿಸೆಂಬರ್ 23ರಂದು ಜಾಕೋಬ್ ತನ್ನ ಯೂಟ್ಯೂಬ್‌ನಲ್ಲಿ ‘ಐ ಕ್ರ್ಯಾಶ್ಡ್ ಮೈ ಏರೋಪ್ಲೇನ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಆ ವಿಡಿಯೋ ವಾಲೆಟ್ ಪ್ರಚಾರವನ್ನು ಒಳಗೊಂಡಿದ್ದು, ವಿಮಾನದಿಂದ ಪ್ಯಾರಾಚೂಟ್ ಮೂಲಕ ಹಾರುವುದು ಮತ್ತು ವಿಮಾನ ಪತನವಾಗುವ ದೃಶ್ಯವನ್ನು ಒಳಗೊಂಡಿದೆ. ವಿಡಿಯೋ ಮೂಲಕ ಹಣ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡಿರುವುದಾಗಿ ಜಾಕೋಬ್ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪಾಕ್‌ನಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ – ಶೆಹಬಾಜ್ ಷರೀಫ್ ಆಪ್ತ
ಬೆಂಗಳೂರು: ‘ದಿ ವಿಲನ್’ ಸಿನಿಮಾ ಚಿತ್ರತಂಡ ಸೋಮವಾರ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆ ಮಾಡಿದ್ದು, ಇದೀಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋವಾಗಿದೆ. ಟೀಸರ್ ಬಿಡುಗಡೆ ಸುದ್ದಿಗೋಷ್ಟಿಯಲ್ಲಿ `ಸಿನಿಮಾವನ್ನು ಸಿನಿಮಾದಂತೆ ನೋಡಿ’ ಎಂದು ಹೇಳುವ ಮೂಲಕ ಶಿವಣ್ಣ ಅವರು ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ದಿ ವಿಲನ್ ಸಿನಿಮಾದ ಬಿಡುಗಡೆಗೆ ದಿನಗಣನೇ ಶುರುವಾಗಿದ್ದು, ರಿಲೀಸ್ ಮುನ್ನ ಚಿತ್ರತಂಡ ಸಿನಿಮಾದ ನಾಲ್ಕು ಟೀಸರ್‌ಗಳನ್ನು ನಿದೇರ್ಶಕ ಪ್ರೇಮ್ ಅವರು ಬಿಡುಗಡೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಯೂಟ್ಯೂಬ್ ನಲ್ಲಿ ಸಖತ್ ಮಿಂಚುತ್ತಿದೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ-ವಿಲನ್ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದಂತೆ 8 ಲಕ್ಷದ 50 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಶಿವಣ್ಣ ಅವರ ಡೈಲಾಗ್‍ಗಳಿಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ದಿ ವಿಲನ್ ಸಿನಿಮಾದಲ್ಲಿ ಶಿವಣ್ಣ ಅವರ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸುದೀಪ್ ಅವರು ದಿ ವಿಲನ್ ಅಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಅಕ್ಟೋಬರ್ 18 ರಂದು ದಿ ವಿಲನ್ ಸಿನಿಮಾ ತೆರೆ ಮೇಲೆ ಮಿಂಚಲು ಸಜ್ಜಾಗಿದೆ.
ಶಿವಣ್ಣ ವಾರ್ನಿಂಗ್:
ಸೋಮವಾರ ನಡೆದ ದಿ ವಿಲನ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಅಭಿಮಾನಿಗಳಿಗೆ ಶಿವಣ್ಣ ಅವರು ವಾರ್ನಿಂಗ್ ಮಾಡಿದ್ದು, ಈ ತಿಂಗಳು 18 ಕ್ಕೆ ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಸಿನಿಮಾವನ್ನ ಸಿನಿಮಾ ಥರ ನೋಡಿ. ನಾವು ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ನಾನು ಸುದೀಪ್ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದೇವೆ. ನಾವು ಹೆಚ್ಚು ಅವರು ಕಮ್ಮಿ ಅಂತ ಜಗಳ ತೆಗೆಯಬೇಡಿ. ಅಭಿಮಾನಿಗಳಿಗೆ ಹೇಳುತ್ತಿದ್ದೇನೆ, ಯಾವುದೇ ಕಾರಣಕ್ಕೂ ಗಲಾಟೆಗೆ ಅವಕಾಶ ಕೊಡಬೇಡಿ. ನಾವು ಆ ಗಲಾಟೆ ಈ ಗಲಾಟೆ ಅಂತ ಸುದ್ದಿಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೇವೆ. ಥಿಯೇಟರ್‌ಗೆ ಹೋಗಿ ನಿಮ್ಮ ಜೊತೆ ನಾನೇ ಬರುತ್ತೇನೆ ಸಿನಿಮಾವನ್ನ ಸಿನಿಮಾ ರೀತಿ ನೋಡಿ ಎಂದು ಖಡಕ್ ಸೂಚನೆ ನೀಡಿದರು.
ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ದಿ ವಿಲನ್ ಸಿನಿಮಾವನ್ನು ಮಾಡಿದ್ದು, ಜನರಲ್ಲಿ ಕುತೂಹಲದ ಮಳೆಯನ್ನೇ ಸುರಿಸುತ್ತಿತ್ತು. ದಿ ವಿಲನ್ ಸಿನಿಮಾಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.