Tag: Yogurt

  • ರುಚಿಕರವಾದ ದಹಿ ವಡಾ ಮಾಡುವುದು ಹೇಗೆ ಗೊತ್ತಾ?

    ರುಚಿಕರವಾದ ದಹಿ ವಡಾ ಮಾಡುವುದು ಹೇಗೆ ಗೊತ್ತಾ?

    ಹಿ ವಡಾ (Dahi Vada) ಭಾರತದಾದ್ಯಂತ ಜನಪ್ರಿಯವಾದ ಸಿಹಿ ತಿಂಡಿ. ಇದು ಉತ್ತರ ಭಾರತದಲ್ಲಿ ವಿಭಿನ್ನ ಪಾಕವಿಧಾನವನ್ನು ಹೊಂದಿದೆ. ಇದು ಚಾಟ್ ಅಥವಾ ಸ್ಟ್ರೀಟ್ ಫುಡ್ ಸ್ನ್ಯಾಕ್ಸ್ ರೆಸಿಪಿಯಾಗಿದೆ. ಸಾಮಾನ್ಯವಾಗಿ ಇದನ್ನು ಬೆಳಗಿನ ಉಪಾಹಾರಕ್ಕೆ ತಯಾರಿಸಲಾಗುತ್ತದೆ. ಆದರೆ ಈಗ ಇದನ್ನು ಸ್ನ್ಯಾಕ್ಸ್ ಆಗಿಯೂ ಸವಿಯಬಹುದು. ನೀವು ಕೂಡಾ ದಹಿ ವಡಾವನ್ನು ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ವಡೆ ತಯಾರಿಸಲು:
    * ಉದ್ದಿನ ಬೇಳೆ – 1 ಕಪ್
    * ಕತ್ತರಿಸಿದ ಮೆಣಸಿನಕಾಯಿ – 1
    * ಜಜ್ಜಿದ ಶುಂಠಿ – 1 ಟೀಸ್ಪೂನ್
    * ಕರಿಬೇವಿನ ಎಲೆ – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಕರಿಮೆಣಸು – 1 ಟೀಸ್ಪೂನ್
    * ಒಣ ತೆಂಗಿನಕಾಯಿ ತುರಿ – 2 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಕರಿಯಲು
    * ಕಾರಾ ಬೂಂದಿ – 1 ಕಪ್

    ಮೊಸರು ಮಿಶ್ರಣಕ್ಕೆ:
    * ಮೊಸರು- 3 ಕಪ್
    * ನೀರು – ಅರ್ಧ ಕಪ್
    * ಸಕ್ಕರೆ – 2 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 1
    * ಕರಿಬೇವಿನ ಎಲೆಗಳು – ಸ್ವಲ್ಪ
    * ಕತ್ತರಿಸಿದ ಮೆಣಸಿನಕಾಯಿ – 2

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆ ಹಾಕಿ ನೀರಿನಲ್ಲಿ ನೆನೆಸಿಡಿ. 2 ಗಂಟೆಗಳ ನಂತರ ನೀರನ್ನು ತೆಗೆದು ಮತ್ತು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
    * ಉದ್ದಿನ ಬೇಳೆ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿ. 2 ನಿಮಿಷಗಳ ಕಾಲ ಹಿಟ್ಟನ್ನು ಹಾಗೆ ಇಟ್ಟು ಅದಕ್ಕೆ ಮೆಣಸಿನಕಾಯಿ, ಶುಂಠಿ, ಕೆಲವು ಕರಿಬೇವಿನ ಎಲೆಗಳು, ಕೊತ್ತಂಬರಿ, ಮೆಣಸು, ಒಣ ತೆಂಗಿನಕಾಯಿ ತುರಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಫಿಕ್ಸ್ ಮಾಡಿ. ಒಂದು ನಿಮಿಷ ಹಾಗೆ ಬಿಡಿ.
    * ಖಾಲಿ ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ವಡ್ಡೆ ಮಿಶ್ರಣವನ್ನು ಹಾಕಿ. ಎರಡುಕಡೆ ಕಂದು ಬಣ್ಣ ಮತ್ತು ಗರಿಗರಿಯಾಗುವವರೆಗೆ ವಡಾವನ್ನು ಫ್ರೈ ಮಾಡಿ.
    * ಎಣ್ಣೆಯನ್ನು ಹೀರಿಕೊಳ್ಳಲು ವಡಾವನ್ನು ಪೇಪರ್ ಅಥವಾ ಟವೆಲ್ ಮೇಲೆ ಹಾಕಿ.
    * ದೊಡ್ಡ ಬಟ್ಟಲಿನಲ್ಲಿ ವಡಾವನ್ನು ಹಾಕಿ 4 ಕಪ್ ಬಿಸಿ ನೀರನ್ನು ಸುರಿಯಿರಿ. ನೀರಿನಲ್ಲಿ ಅದ್ದಿ ಮತ್ತು 5-10 ನಿಮಿಷಗಳ ಕಾಲ ಹಾಗೆ ಇಡಿ. ಇದು ವಡಾವನ್ನು ಮೃದು ಮತ್ತು ರಸಭರಿತವಾಗಿಸಲು ಸಹಾಯ ಮಾಡುತ್ತದೆ.
    * ವಡಾವನ್ನು ಚೆನ್ನಾಗಿ ನೆನೆಸಿದ ನಂತರ, ನಿಧಾನವಾಗಿ ನೀರನ್ನು ಪೂರ್ತಿಯಾಗಿ ಸೋಸಿ.

    ಮೊಸರು ಮಿಶ್ರಣ ತಯಾರಿಸಲು:
    * ದೊಡ್ಡ ಬಟ್ಟಲಿನಲ್ಲಿ ಮೊಸರು ಮತ್ತು ನೀರು ಹಾಕಿ. ಅದಕ್ಕೆ ಸಕ್ಕರೆ ಮತ್ತು ಉಪ್ಪು ಹಾಕಿ ಕಲಕಿ. ಅಗತ್ಯವಿದ್ದರೆ ಹೆಚ್ಚಿನ ನೀರು ಸೇರಿಸಿ.
    * ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ನಂತರ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಹಿಂಗ್, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ.
    * ಈ ಒಗ್ಗರಣೆಯನ್ನು ಮೊಸರು ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ.
    * ಈ ಮಸಾಲಾ ಮೊಸರಿಗೆ ವಡಾ ಹಾಕಿ 2 ಗಂಟೆಗಳ ಕಾಲ ಮೊಸರು ಚೆನ್ನಾಗಿ ಹೀರಿಕೊಳ್ಳುವವರೆಗೆ ಮುಚ್ಚಿ.

    – ನಂತರ ಸಣ್ಣ ತಟ್ಟೆಯಲ್ಲಿ ದಹಿ ವಡಾ ಇರಿಸಿ ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು 2 ಟೀಸ್ಪೂನ್ ಬೂಂಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವನಿಗೆ ಇಷ್ಟವಾದ ‘ರಾಗಿ ಅಂಬಲಿ’ ಮಾಡಿ ಸವಿಯಿರಿ

    ಶಿವನಿಗೆ ಇಷ್ಟವಾದ ‘ರಾಗಿ ಅಂಬಲಿ’ ಮಾಡಿ ಸವಿಯಿರಿ

    ರಾಗಿ ಅಂಬಲಿ ದೇಹಕ್ಕೆ ತಂಪು ಮತ್ತು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಅಂಬಲಿ ಸಖತ್ ಟೇಸ್ಟಿಯಾಗಿದ್ದು, ಎಲ್ಲರಿಗೂ ಇಷ್ಟವಾಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ದಿನನಿತ್ಯ ಕಾಫಿ, ಟೀ ಬದಲು ‘ರಾಗಿ ಅಂಬಲಿ’ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯಕರ ಮತ್ತು ಟೇಸ್ಟಿ ಇರುವ ರಾಗಿ ಅಂಬಲಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ನೀರು – 2 ದೊಡ್ಡ ಲೋಟ
    * ಹಸಿಶುಂಠಿ – 1 ಇಂಚು
    * ಹಸಿ ಮೆಣಸಿನಕಾಯಿ – 1
    * ಉಪ್ಪು – ಅರ್ಧ ಚಮಚ


    * ರಾಗಿ ಹಿಟ್ಟು – ಎರಡೂವರೆ ಕಪ್
    * ನೀರು – ಅರ್ಧ ಕಪ್
    * ಮಜ್ಜಿಗೆ – ಮುಕ್ಕಾಲು ಲೋಟ
    * ಕಟ್‌ ಮಾಡಿದ ಕೊತ್ತಂಬರಿ ಸೊಪ್ಪು – 1/2 ಕಪ್‌
    * ಕಟ್‌ ಮಾಡಿದ ಈರುಳ್ಳಿ – 1 ಕಪ್‌

    ಮಾಡುವ ವಿಧಾನ:
    * ಮೊದಲು ಒಂದು ಪಾತ್ರೆಯಲ್ಲಿ 2 ದೊಡ್ಡ ಲೋಟ ನೀರನ್ನು ಕುದಿಯಲು ಇಡಿ. ಒಂದು ಕುಟ್ಟಾಣಿಯಲ್ಲಿ 1 ಇಂಚು ಹಸಿಶುಂಠಿ ಮತ್ತು 1 ಹಸಿ ಮೆಣಸಿನಕಾಯಿ ಹಾಕಿ ಕುಟ್ಟಿ.
    * ಒಂದು ಬಟ್ಟಲಿಗೆ ಎರಡೂವರೆ ಕಪ್ ರಾಗಿ ಹಿಟ್ಟು ಹಾಕಿ ಅದಕ್ಕೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಲಕಿ.
    * ಕುದಿಯುತ್ತಿರುವ ನೀರಿಗೆ, ಕುಟ್ಟಿರುವ ಹಸಿ ಶುಂಠಿ ಮತ್ತು ಹಸಿ ಮೆಣಸಿನಕಾಯಿ ಹಾಕಿ. ನಂತರ ಇದಕ್ಕೆ ಅರ್ಧ ಚಮಚ ಉಪ್ಪು ಮತ್ತು ಕಲಸಿದ ರಾಗಿ ಹಿಟ್ಟನ್ನು ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ.


    * ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ.
    * ನಂತರ ಅದಕ್ಕೆ ಮುಕ್ಕಾಲು ಲೋಟ ಮಜ್ಜಿಗೆ ಹಾಕಿ ಕಲಕಿ.
    * ಒಂದು ಲೋಟಕ್ಕೆ ಅಂಬಲಿ ಹಾಕಿ ಅದಕ್ಕೆ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ.
    * ಈ ರೀತಿಯಾಗಿ ರಾಗಿ ಅಂಬಲಿಯನ್ನು ಮಾಡಿ ಮನೆಯವರಿಗೆ ನೀಡಿ.

  • ರುಚಿಯಾದ ‘ಮ್ಯಾಂಗೋ ಲಸ್ಸಿ’ ಟ್ರೈ ಮಾಡಿ

    ರುಚಿಯಾದ ‘ಮ್ಯಾಂಗೋ ಲಸ್ಸಿ’ ಟ್ರೈ ಮಾಡಿ

    ದು ಹಣ್ಣುಗಳ ರಾಜ ಮಾವಿನಹಣ್ಣಿನ ಕಾಲ. ಕಿರಿಯರಿಂದ ಹಿರಿಯರವರೆಗೂ ಮಾವು ಕಂಡರೆ ಎಲ್ಲರಿಗೂ ಇಷ್ಟ. ಮಾವಿನಿಂದ ಮಾಡುವ ಎಲ್ಲ ತಿಂಡಿ, ಜ್ಯೂಸ್‍ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ. ಅದಕ್ಕೆ ಇಂದು ಸಿಂಪಲ್ ಮತ್ತು ರುಚಿಯಾದ ‘ಮ್ಯಾಂಗೋ ಲಸ್ಸಿ’ ಮಾಡುವ ವಿಧಾನ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ಮ್ಯಾಂಗೋ – 4
    * ಮೊಸರು – 2 ಕಪ್
    * ಸಕ್ಕರೆ – 5 ಟೀಸ್ಪೂನ್


    * ಏಲಕ್ಕಿ ಪುಡಿ – 1/4 ಟೀಸ್ಪೂನ್
    * ಪುದೀನ ಎಲೆಗಳು – 3-4

    ಮಾಡುವ ವಿಧಾನ:
    * ಮೊದಲು ಮಾವಿನ ಹಣ್ಣಗಳ ಸಿಪ್ಪೆ ಸುಲಿದು ತಿರುಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
    * ತಿರುಳು ಮತ್ತು ಮೊಸರನ್ನು ಮಿಕ್ಸಿಗೆ ಹಾಕಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಚೆನ್ನಾಗಿ ಗ್ರೈಡ್ ಮಾಡಿ. ಮೂರು ಅಥವಾ ನಾಲ್ಕು ಬಾರಿ ಗ್ರೈಡ್ ಮಾಡಿ.
    * ನಂತರ ಮಿಕ್ಸಿಯಿಂದ ಲಸ್ಸಿ ತೆಗೆದು ಅದನ್ನು ಸರ್ವಿಂಗ್ ಬೌಲ್‍ಗೆ ಮ್ಯಾಂಗೋ ಲಸ್ಸಿ ಹಾಕಿ ಅದಕ್ಕೆ ಒಂದೆರೆಡು ಐಸ್‍ಕ್ಯೂಬ್ ಹಾಕಿ. ಪುದೀನ ಎಲೆಗಳಿಂದ ಅಲಂಕರಿಸಿ.

  • ಮೊಸರಿಗಾಗಿ ಪತ್ನಿಗೆ ಚಾಕು ಇರಿದ ಗಂಡನಿಗೆ 8 ವರ್ಷ ಜೈಲು

    ಮೊಸರಿಗಾಗಿ ಪತ್ನಿಗೆ ಚಾಕು ಇರಿದ ಗಂಡನಿಗೆ 8 ವರ್ಷ ಜೈಲು

    ಮುಂಬೈ: ಮನೆಗೆ ತಂದ ಮೊಸರನ್ನ ತಿಂದಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿಗೆ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ.

    ಸಚಿನ್ ಮಾಲೊರೆ (39) ಆಂಟಾಪ್ ಹಿಲ್ ನಿವಾಸಿಯಾಗಿದ್ದಾನೆ. ಈತನಿಂದ ಹಲ್ಲೆಗೊಳಗಾದ ಪತ್ನಿ ರಂಜನಾ ಆಗಿದ್ದಾಳೆ. ದಂಪತಿ ಜಗಳ ಕೋರ್ಟ್ ಮೆಟ್ಟಲೇರಿತ್ತು. ಇದೀಗ ಆರೋಪಿಗೆ 8 ವರ್ಷ ಜೈಲು ಶಿಕ್ಷೆಯಾಗಿದೆ.

    ಪ್ರಕರಣ ಹಿನ್ನೆಲೆ:
    ಸಚಿನ್ ಮನೆಗೆ ತಂದಿದ್ದ ಮೊಸರನ್ನ ಪತಿಗೆ ನೀಡದೇ ರಂಜನಾ ತಿಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗಿದೆ. ಪತಿ ಆಕೆಗೆ ಬೆಕ್ಕು ನೀನು ಎಂದು ಕರೆದಿದ್ದಾನೆ. ಇದು ಅವರಿಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಕೋಪಗೊಂಡ ಪತಿ, ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಅಗ ನೆರೆಹೊರೆಯವರು ಬಂದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ರಂಜನಾ ಪತಿ ವಿರುದ್ಧ ದೂರನ್ನು ದಾಖಲಿಸಿದ್ದಳು. 2 ವರ್ಷಗಳ ಹಿಂದೆ ನಡೆದಿರುವ ಈ ಪ್ರಕರಣಕ್ಕೆ ಸೆಷನ್ಸ್ ನ್ಯಾಯಾಲಯವು ಅಪರಾಧಿ ಪತಿರಾಯನಿಗೆ 8 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

    2017ರಲ್ಲಿ ಬಂಧನಕ್ಕೊಳಗಾದ ಸಚಿನ್ ನನ್ನು ಜೈಲಿನಲ್ಲಿ ಇಡಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಸೆಷನ್ಸ್ ನ್ಯಾಯಾಲಯವು ಪತ್ನಿ ರಂಜನಾ ಆಕಸ್ಮಿಕವಾಗಿ ಉಕ್ಕಿನ ಪಾತ್ರೆ ಮೇಲೆ ಬಿದ್ದು ಗಾಯಗೊಂಡಿದ್ದಾಳೆ ಎಂದು ಆರೋಪಿ ಅಪವಾದವನ್ನು ತಳ್ಳಿ ಹಾಕಿದ್ದನು.

    ಸಚಿನ್ ನಿರುದ್ಯೋಗಿ ಆಗಿದ್ದನು. ಕುಡಿದು ಮನೆಗೆ ಬರುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು ಎಂದು ರಂಜನಾ ತಾಯಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. ದೂರುದಾರ ರಂಜನಾ ಸಾಕ್ಷ್ಯವನ್ನು ಹಾಗೂ ವೈದ್ಯಕೀಯ ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳು ಆರೋಪಿ ಸಚಿನ್ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಸಾಕ್ಷಿ ಆಧಾರಗಳನ್ನು ಪರಿಶೀಲನೆ ಮಾಡಿ ನ್ಯಾಯಾಲಯವಯ ತೀರ್ಪು ನೀಡಿದೆ.

  • ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ

    ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ

    ನೀರು ಬಿಟ್ಟರೆ ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ಮೊಸರು. ಮೊಸರಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ದೇಹಕ್ಕೆ ಒಳ್ಳೆದು. ಇದು ಆಹಾರವನ್ನು ಜೀರ್ಣಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಮೊಸರು ಒಂದು ಆರೋಗ್ಯಕರ ಆಹಾರವಾಗಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

    ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ವೈದ್ಯರು ಕೂಡ ಹೆಚ್ಚಾಗಿ ಮೊಸರನ್ನೇ ತಿನ್ನಲು ಸೂಚಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಮೊಸರಿಗೆ ವಿಶೇಷ ಸ್ಥಾನವಿದ್ದು, ಊಟದಲ್ಲಿ ಮೊಸರು ಇಲ್ಲವೆಂದರೆ ಊಟ ಪರಿಪೂರ್ಣವಾಗಲ್ಲ. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುತ್ತದೆ. ಆದ್ದರಿಂದಲೇ ಹಿರಿಯರು, ವೈದ್ಯರು ಆರೋಗ್ಯವಾಗಿರಲು ಮೊಸರು ತಿನ್ನಿ ಎನ್ನುತ್ತಾರೆ. ಜೊತೆಗೆ ರಾತ್ರಿ ಹೊತ್ತು ಮೊಸರು ಸೇವಿಸುವುದು ಅಷ್ಟು ಸೂಕ್ತವಲ್ಲ ಎಂಬ ಮಾತುಗಳು ಕೂಡ ಇದೆ.

    ಮೊಸರಿನ ಆರೋಗ್ಯಕರ ಲಾಭವೇನು?

    ನಿಶ್ಯಕ್ತಿಯಿಂದ ಬಳಲುವವರು ಮೊಸರು ತಿನ್ನಿ:
    ನಿಶ್ಯಕ್ತಿಯಿಂದ ಬಳಲುವವರು ಮಿತವಾಗಿ ಮೊಸರನ್ನು ಸೇವಿಸಿದರೆ ದೇಹದಲ್ಲಿ ನಿಶ್ಯಕ್ತಿಯಾಗದಂತೆ ತಡೆಯುತ್ತದೆ. ಮೊಸರು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದಕ್ಕೆ ನಿಶ್ಯಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.

    ನಿದ್ರಾಹೀನತೆಗೆ:
    ನಿದ್ರಾಹೀನತೆಯಿಂದ ಬಳಲುವವರು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು. ಇದು ನಿದ್ರಾಹೀನತೆಯನ್ನು ದೂರಮಾಡಿ, ಆರೋಗ್ಯವನ್ನು ವೃದ್ಧಿಸುತ್ತದೆ.

    ಬಾಯಿ ಹುಣ್ಣಿಗೆ:
    ಬಾಯಿ ಹುಣ್ಣಿನ ಸಮಸ್ಯೆ ಇದ್ದವರು ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಳ್ಳಬೇಕು. ಇದರಿಂದ ಶೀಘ್ರವೇ ಬಾಯಿ ಹುಣ್ಣಿನ ಸಮಸ್ಯೆ ಗುಣವಾಗುತ್ತದೆ.

    ಕರುಳು ಹಾಗೂ ಜಠರದ ತೊಂದರೆಗಳಿಗೆ:
    ದಿನವು ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಉಂಟಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನುಭವವಾದರೆ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸುವು ಒಳ್ಳೆದು.

    ಮೂಲವ್ಯಾಧಿಯ ಸಮಸ್ಯೆಗೆ:
    ಮೂಲವ್ಯಾಧಿಯಿಂದ ಬಳಲುವವರು ಮೊಸರಿಗೆ ಸ್ವಲ್ಪ ನೀರು ಬೆರೆಸಿ, ಇದರಲ್ಲಿ ಕೆಲವು ಪಿಸ್ತಾಗಳನ್ನು ನೆನೆಸಿಟ್ಟು, ಅದನ್ನು ಅರೆದು ಕುಡಿದರೆ ಮೂಲವ್ಯಾಧಿ ನೋವಿನಿಂದ ಮುಕ್ತಿ ದೊರಕುತ್ತದೆ.

    ಮೂಳೆಗಳ ಆರೋಗ್ಯಕ್ಕೆ ಬೆಸ್ಟ್:
    ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಬೆಸ್ಟ್. ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಆದ್ದರಿಂದ ಹಾಲಿಗೆ ಜೇನು ತುಪ್ಪ ಸೇರಿಸಬೇಕಾಗುತ್ತದೆ. ಆದ್ರೆ ಮೊಸರಿನ ವಿಷಯದಲ್ಲಿ ಹಾಗಿಲ್ಲ. ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನು ತುಪ್ಪದ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳುತ್ತದೆ. ಹೀಗಾಗಿ ಮೂಳೆಗಳ ಆರೋಗ್ಯಕ್ಕೆ ಇದು ಒಳ್ಳೆದು ಎನ್ನಲಾಗುತ್ತೆ.

    ಹೃದಯದ ಕಾಯಿಲೆ, ರಕ್ತದೊತ್ತಡಕ್ಕೆ:
    ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕಲು ಮೊಸರನ್ನು ಸೇವಿಸಿ. ಮೊಸರು ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸಲು ಸಹಕಾರಿಯಾಗಿದೆ.