Tag: Yogi Adityanath to be CM again

  • ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಲಕ್ನೋ: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆದುಕೊಳ್ಳಲಿದೆ ಮತ್ತು ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

    ಎಕ್ಸಿಟ್ ಪೋಲ್‍ನಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದೆ ಎಂದು ತಿಳಿಸಲಾಗಿತ್ತು. ಇದೀಗ ಜ್ಯೋತಿಷಿಗಳು ಕೂಡ ಈ ಮಾತನ್ನು ಪುನರಾವರ್ತಿಸಿದ್ದು, ಈ ವರ್ಷದ ಅಧಿಪತಿ ಮಂಗಳ ಆಗಿರುವುದು ಮತ್ತು ಮಂಗಳ ಕ್ಷತ್ರಿಯ ಸಮುದಾಯದ ಅಧಿಪತಿಯೂ ಆಗಿರುವುದರಿಂದ ಯೋಗಿ ಆದಿತ್ಯನಾಥ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ

    ಅಲ್ಲದೇ ಬಿಜೆಪಿ ಉತ್ತರ ಪ್ರದೇಶದಲ್ಲಿ 240 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷ 138-157 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಜ್ಯೋತಿಷಿ ಅಶ್ವಿನಿ ಪಾಂಡೆ ಭವಿಷ್ಯ ನುಡಿದಿದ್ದಾರೆ.

    ಮಥುರಾದಲ್ಲಿ ಅಲೋಕ್ ಗುಪ್ತಾ ಗೆಲ್ಲುತ್ತಾರೆ. ಬಿಜೆಪಿ ಕೂಡ ಗೆಲ್ಲುತ್ತದೆ ಎಂದು ಮೇರಟ್‍ನ ಖ್ಯಾತ ಜ್ಯೋತಿಷಿ ವಿನೋದ್ ತ್ಯಾಗಿ ಭವಿಷ್ಯ ನುಡಿದಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಯೋಗಿ, ಅಖಿಲೇಶ್‌ ಮುನ್ನಡೆ- ಗೋವಾ, ಪಂಜಾಬ್‌ ಸಿಎಂ ಹಿನ್ನಡೆ

    ಉತ್ತರ ಪ್ರದೇಶದಲ್ಲಿ ಒಟ್ಟು 403 ಕ್ಷೇತ್ರಗಳಿದ್ದು ಬಹುಮತಕ್ಕೆ 202 ಸ್ಥಾನಗಳು ಬೇಕು. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್‍ಪಿ 19, ಎಸ್‍ಪಿ+ಕಾಂಗ್ರೆಸ್ 54, ಇತರರು 18 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು.