Tag: yogi adithyanath

  • ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಲಕ್ನೋ: ಮುಸ್ಲಿಂ ಸಮುದಾಯದವರು ಬಿಜೆಪಿ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಅವರನ್ನು ಪ್ರೀತಿಸುತ್ತಾರೆ ಎಂದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಸಚಿವ ದ್ಯಾನಿಶ್‌ ಅಜಾದ್‌ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

    ಆ ಅಭಿಪ್ರಾಯ (ಸುನ್ನಿ ಮುಸ್ಲಿಮರ) ಬದಲಾಗಿದೆ. ಯೋಗಿ ಸರ್ಕಾರವು ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳ ಅಭಿವೃದ್ಧಿಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಪಡಿತರ, ಮನೆ, ಆಯುಷ್ಮಾನ್ ಕಾರ್ಡ್ ಯೋಜನೆಗಳಿಂದ ಎಲ್ಲ ವರ್ಗದವರಿಗೂ ಲಾಭವಾಗಿದೆ. ಮುಸ್ಲಿಮರೂ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ಬಿಜೆಪಿ, ಯೋಗಿ ಮತ್ತು ಮೋದಿಯನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಹಬೂಬಾ ಮುಫ್ತಿ ಏನೇ ಹೇಳುತ್ತಿದ್ದರೂ ಅದಕ್ಕೆಲ್ಲಾ ಬಿಜೆಪಿಯೇ ಹೊಣೆ: ಸಂಜಯ್ ರಾವತ್

    ಈಚೆಗೆ ನಡೆದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 10 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯು ಬಿಜೆಪಿಗೆ ಮತ ಹಾಕಿದೆ ಎಂದು ಅನ್ಸಾರಿ ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದ ಸಾಮಾನ್ಯರು ನನ್ನನ್ನು ವಿರೋಧಿಸುವುದಿಲ್ಲ. ಬೇರೆ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿರುವವರು, ಎಸ್‌ಪಿ ಮತ್ತು ಬಿಎಸ್‌ಪಿ ಮನಸ್ಥಿತಿ ಹೊಂದಿರುವವರು ಮಾತ್ರ ನನ್ನನ್ನು ವಿರೋಧಿಸುತ್ತಾರೆ. ಸಾಮಾನ್ಯ ಮುಸ್ಲಿಮರು ಬಿಜೆಪಿಯ ಕೆಲಸವನ್ನು ಇಷ್ಟಪಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಸಚಿವ ದ್ಯಾನಿಶ್ ಆಜಾದ್ ಅನ್ಸಾರಿ.

    ಬಲ್ಲಿಯಾ ಕ್ಷೇತ್ರದವರಾದ ಅನ್ಸಾರಿ ಅವರು ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಸದನಗಳ ಸದಸ್ಯರಲ್ಲ. ಆದರೆ ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ 52 ಸಚಿವರಲ್ಲಿ ಅವರೂ ಸೇರಿದ್ದಾರೆ.

  • ಅಯೋಧ್ಯೆಯಲ್ಲಿ ಶ್ರೀರಾಮ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭ

    ಅಯೋಧ್ಯೆಯಲ್ಲಿ ಶ್ರೀರಾಮ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭ

    ಲಕ್ನೋ: ಅಯೋಧ್ಯೆಯಲ್ಲಿ ಮರ್ಯಾದಾ ಪುರಷೋತ್ತಮ ಶ್ರೀರಾಮ ವಿಮಾನ ನಿಲ್ದಾಣದ ನಿರ್ಮಾಣ ಕೆಲಸವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಆರಂಭಿಸಿದೆ.

    ರನ್‍ವೇ ಕಟ್ಟಡಕ್ಕಾಗಿ ಬಿಡ್ ಗೆದ್ದಿರುವ ಬೆಂಗಳೂರಿನಲ್ಲಿರುವ ವಿಶಾಲ್ ಇನ್‍ಫ್ರಾಸ್ಟ್ರಕ್ಚರ್ ಎಎಐ ಮೇಲ್ವಿಚಾರಣೆಯಲ್ಲಿ ಕೆಲಸ ಆರಂಭಿಸಲಿದೆ.

    ಯೋಜನೆಯ ಉಸ್ತುವಾರಿ ರಾಜೀವ್ ಕುಲಶ್ರೇಷ್ಠ ಮತ್ತು ಇತರ ಮೂವರು ಅಧಿಕಾರಿಗಳನ್ನು ಎಎಐ ನೇಮಿಸಿದ್ದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣದ ನಿರ್ದೇಶಕರನ್ನಾಗಿ ಲಾಲ್ಜಿ ಮತ್ತು ಎಎಐನ ಇಬ್ಬರು ಸಹಾಯಕ ಪ್ರಧಾನ ವ್ಯವಸ್ಥಾಪಕರನ್ನು ಈಗಾಗಲೇ ನೇಮಿಸಲಾಗಿದೆ.

    ಎಎಐ ಅಧಿಕಾರಿಗಳ ಪ್ರಕಾರ, ಯೋಜನೆಯ ಮೊದಲ ಹಂತವು ಸುಮಾರು ಒಂದೂವರೆ ಅಥವಾ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ 150 ಕೋಟಿ ರೂ. ಯೋಜನೆಯ ಮೊದಲ ಹಂತದಲ್ಲಿ, ಎಟಿಆರ್-72 ವಿಮಾನಗಳ ಲ್ಯಾಂಡಿಂಗ್‍ಗಾಗಿ 2,250 ಮೀಟರ್ ರನ್‍ವೇ ನಿರ್ಮಿಸಬೇಕಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜನವರಿ 8ರಂದು ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ.

    ಅಧಿಕಾರಿಗಳ ಪ್ರಕಾರ ಅಯೋಧ್ಯೆ ವಿಮಾನ ನಿಲ್ದಾಣವನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಸುಮಾರು 550 ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಏರ್‍ಸ್ಟ್ರಿಪ್ ಮತ್ತು ಟರ್ಮಿನಲ್ ಈಗಾಗಲೇ 182 ಎಕರೆಗಳನ್ನು ಹೊಂದಿದೆ.

    ಅಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರವು 250 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ ಭೂಮಿಯನ್ನು ಖರೀದಿಸಲು 321 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ.

    ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 555.66 ಎಕರೆ ಹೆಚ್ಚುವರಿ ಭೂಮಿಯನ್ನು ಖರೀದಿಸಲು ಒಟ್ಟು 1,001.77 ಕೋಟಿ ರೂ. ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಬಜೆಟ್‍ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ನವೆಂಬರ್ 2018 ರಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎ320 ಮತ್ತು ಬಿ737 ನಂತಹ ದೊಡ್ಡ ವಿಮಾನಗಳಿಗಾಗಿ ಅಯೋಧ್ಯೆಯಲ್ಲಿ ಏರ್‍ಸ್ಟ್ರಿಪ್‍ನ ಅಭಿವೃದ್ಧಿ ಮತ್ತು ಸೂಕ್ತವಾದ ರನ್‍ವೇ ಮತ್ತು ಟರ್ಮಿನಲ್ ಕಟ್ಟಡದ ನಿರ್ಮಾಣವನ್ನು ಘೋಷಿಸಿದ್ದರು.

    ವಿಮಾನ ನಿಲ್ದಾಣ ಯೋಜನೆಯನ್ನು ರಾಜ್ಯ ಸರ್ಕಾರವು ತ್ವರಿತವಾಗಿ ಟ್ರ್ಯಾಕ್ ಮಾಡಿತ್ತು. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯವು ತನ್ನ 23 ಎಕರೆ ಭೂಮಿಯನ್ನು ಕಳೆದ ಅಕ್ಟೋಬರ್‍ನಲ್ಲಿ ಹಸ್ತಾಂತರಿಸುವ ಪ್ರಸ್ತಾಪವನ್ನು ಸಹ ಅನುಮೋದಿಸಿತ್ತು.

    ಉಪಕುಲಪತಿಗಳ ಅಧಿಕೃತ ನಿವಾಸ ಸೇರಿದಂತೆ ಈ ಭೂಮಿಯಲ್ಲಿರುವ ಸುಮಾರು 30 ಕಟ್ಟಡಗಳನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ.

    ಅಯೋಧ್ಯೆ ವಿಮಾನ ನಿಲ್ದಾಣವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಲ್ಲಿ ಒಂದಾಗಿದೆ. ಇದನ್ನು ದೇವಾಲಯಕ್ಕೆ ಬರುವ ಭಕ್ತರಿಗಾಗಿ ಅನುಮೋದಿಸಲಾಗಿದೆ.

  • ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು: ಯೋಗಿ ಆದಿತ್ಯನಾಥ್

    ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು: ಯೋಗಿ ಆದಿತ್ಯನಾಥ್

    ಲಕ್ನೋ: ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳದಂತೆ ಆಗಬಹುದು. ಆದ್ದರಿಂದ ಪ್ರತಿಯೊಬ್ಬರು ಯೋಚಿಸಿ ಮತದಾನ ಮಾಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದರು.

    ಈ ಬಗ್ಗೆ ವೀಡಿಯೋ ಟ್ವೀಟ್ ಮಾಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಭಯ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಳೆದ ಐದು ವರ್ಷಗಳ ನನ್ನ ಶ್ರಮಕ್ಕೆ ನಿಮ್ಮ ಮತವೇ ವರದಾನವಾಗಿದೆ. ನಿಮ್ಮ ಮತವೂ ನಿಮ್ಮ ಭಯಮುಕ್ತ ಬದುಕಿಗೆ ಎಂಬುದನ್ನು ನೀವೇ ಖಚಿತ ಪಡಿಸಿಕೊಳ್ಳಿ. ದೊಡ್ಡ ನಿರ್ಧಾರದ ಸಮಯ ಬಂದಿದೆ ಎಂದರು.

    ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಪರ ಕೆಲಸಗಳು ನಡೆದಿವೆ. ಮತದಾರರು ಎಚ್ಚರ ತಪ್ಪಿದರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕ್ಷಣ ಮಾತ್ರದಲ್ಲಿ ಉತ್ತರಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲಿದೆ ಎಂದು ವೀಡಿಯೋದಲ್ಲಿ ಹೇಳಿದರು.

    ಕಳೆದ ಐದು ವರ್ಷಗಳಲ್ಲಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಸಮರ್ಪಣಾ ಮತ್ತು ಬದ್ಧತೆಯಿಂದ ಎಲ್ಲವನ್ನೂ ಮಾಡಿದೆ. ನೀವು ಎಲ್ಲವನ್ನೂ ನೋಡಿದ್ದೀರಿ ಮತ್ತು ಎಲ್ಲವನ್ನೂ ವಿವರವಾಗಿ ಕೇಳಿದ್ದೀರಿ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

    ಉತ್ತರ ಪ್ರದೇಶ ಚುನಾವಣೆ ಇಂದಿನಿಂದ ಮೊದಲನೇ ಹಂತದ ಮತದಾನ ಪ್ರಾರಂಭವಾಗಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಅಧಿಕಾರವನ್ನು ಮುಂದುವರೆಸಲು ಪ್ರಯತ್ನ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಅವರಿಗೆ ಪ್ರಬಲ ಎದುರಾಳಿ ಪಕ್ಷವಾಗಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

  • ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ – ಯುಪಿ ಸಚಿವ

    ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ – ಯುಪಿ ಸಚಿವ

    ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ, ಆಲ್‌ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಂದೂಗಳ ಜನಿವಾರವನ್ನು ಧರಿಸುತ್ತಾರೆ ಎಂದು ಯುಪಿಯ ಪಂಚಾಯತ್‌ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.

    ಚೌಧರಿ ಅವರು ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥನ್ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ ಮತ್ತು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾರೆ ಎಂದಿದ್ದಾರೆ.

    ಬಿಜೆಪಿಯ ಸಿದ್ಧಾಂತವನ್ನು ಬಲಪಡಿಸುವ ಮಧ್ಯೆ, ರಾಹುಲ್ ಗಾಂಧಿ ಅವರು ಜನಿವಾರವನ್ನು ಧರಿಸಿದ್ದು, ಅಖಿಲೇಶ್ ಯಾದವ್ ಹನುಮಾನ್ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಾಯಕರ ಪಟ್ಟಿಯಲ್ಲಿ ಈ ಹೇಳಿಕೆ ಸೇರುತ್ತದೆ ಎಂದು ಚೌಧರಿ ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ – ರಾತ್ರಿ ಅನಗತ್ಯ ಓಡಾಡಿದ್ರೆ ಬೀಳುತ್ತೆ ಕೇಸ್

    ಸಚಿವ ಭೂಪೇಂದ್ರ ಸಿಂಗ್ ನನ್ನ ಬಗ್ಗೆ ಏನು ಬೇಕಾದರು ಹೇಳಲಿ. ನಾನು ಅಂತಹ ಹುಚ್ಚು ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 100 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಓವೈಸಿ ಘೋಷಿಸಿದ್ದಾರೆ. ಇದನ್ನೂ ಓದಿ: ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ – ಹೆಚ್‍ಡಿಕೆ

     

  • ಕಬ್ರಿಸ್ತಾನ್‌ಗಲ್ಲ.. ಜನರ ಹಣವನ್ನು ದೇಗುಲಗಳ ನಿರ್ಮಾಣಕ್ಕೆ ಬಿಜೆಪಿ ಬಳಸುತ್ತಿದೆ: ಯೋಗಿ ಆದಿತ್ಯನಾಥ್‌

    ಕಬ್ರಿಸ್ತಾನ್‌ಗಲ್ಲ.. ಜನರ ಹಣವನ್ನು ದೇಗುಲಗಳ ನಿರ್ಮಾಣಕ್ಕೆ ಬಿಜೆಪಿ ಬಳಸುತ್ತಿದೆ: ಯೋಗಿ ಆದಿತ್ಯನಾಥ್‌

    ಲಕ್ನೋ: ರಾಜ್ಯದಲ್ಲಿ ಹಿಂದಿನ ಸರ್ಕಾರಗಳು ಸಾರ್ವಜನಿಕ ಹಣವನ್ನು ಕಬ್ರಿಸ್ತಾನ್‌ಗೆ ವಿನಿಯೋಗಿಸುತ್ತಿದ್ದವು. ಆದರೆ ನಮ್ಮ ಬಿಜೆಪಿ ಸರ್ಕಾರ ಹಣವನ್ನು ದೇವಾಲಯಗಳ ನಿರ್ಮಾಣಕ್ಕೆ ಬಳಸುತ್ತಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ದೀಪೋತ್ಸವ ಆಚರಣೆ ಹಿನ್ನೆಲೆಯಲ್ಲಿ ರಾಮ ಕಥಾ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿರುವ 500 ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳ ನವೀಕರಣಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೋ ಪಟಾಕಿ ಎಂದವ್ರು 3 ದಿನ ಕಾರ್ ಬಳಸಬೇಡಿ, ನಡೆದುಕೊಂಡು ಹೋಗಿ: ಕಂಗನಾ ರಣಾವತ್

    ಕಬ್ರಿಸ್ತಾನ್‌ ಮೇಲೆ ಪ್ರೀತಿ ಇರುವವರು ಸಾರ್ವಜನಿಕ ಹಣವನ್ನು ಅಲ್ಲಿ ಖರ್ಚು ಮಾಡುತ್ತಾರೆ. ಆದರೆ ಧರ್ಮ ಮತ್ತು ಸಂಸ್ಕೃತಿ ಮೇಲೆ ಪ್ರೀತಿ ಇರುವವರು ಜನರ ಹಣವನ್ನು ಅವರಿಗಾಗಿಯೇ ಖರ್ಚು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    30 ವರ್ಷಗಳ ಹಿಂದೆ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರೆ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಆಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಈಗಿನ ವಿರೋಧ ಪಕ್ಷಗಳು ತಮಗೆ ಬೇಕಾದವರಿಗೆ ಗನ್‌ ತರಬೇತಿ ನೀಡಿದ್ದರು ಎಂದು ಆರೋಪಿಸಿದ್ದಾರೆ.

    2023ರ ಹೊತ್ತಿಗೆ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

    ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಕುರಿತು ಮಾತನಾಡಿ, ರಾಜ್ಯದಲ್ಲಿ ಈ ಯೋಜನೆಯನ್ನು ಮುಂದುವರಿಸಲಾಗುವುದು. ಈ ಯೋಜನೆಯಿಂದ ರಾಜ್ಯದ ಬಡ ಜನರು ಮುಂದಿನ ವರ್ಷದ ಹೋಳಿ ಹಬ್ಬದವರೆಗೂ ಉಚಿತವಾಗಿ ಪಡಿತರ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಬಡ ಜನರಿಗೆ ಸಹಕಾರಿಯಾಗುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ನವೆಂಬರ್‌ಗೆ ಉಚಿತ ಪಡಿತರ ವಿತರಣೆ ಕೊನೆಗೊಳ್ಳಬೇಕಿತ್ತು. ಆದರೆ ಸಾಂಕ್ರಾಮಿಕ ಇನ್ನೂ ಕೊನೆಯಾಗಿಲ್ಲ. ಹೀಗಾಗಿ ನಮ್ಮ ಸರ್ಕಾರ ಮುಂದಿನ ವರ್ಷದ ಮಾರ್ಚ್‌ವರೆಗೂ ಉಚಿತವಾಗಿ ಪಡಿತರ ವಿತರಿಸಲಿದೆ ಎಂದು ಹೇಳಿದ್ದಾರೆ.

    ಈ ಯೋಜನೆ ವಿಸ್ತರಣೆಯಿಂದ ರಾಜ್ಯದ 15 ಕೋಟಿ ಬಡಜನರಿಗೆ ಅನುಕೂಲವಾಗಲಿದೆ. ಪಡಿತರದೊಂದಿಗೆ ಉಪ್ಪು, ಸಕ್ಕರೆ, ಬೇಳೆ ಮತ್ತು ಅಡುಗೆ ಎಣ್ಣೆಯನ್ನೂ ಜನರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.

    ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, 661 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ

    ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ

    ಲಕ್ನೋ: ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಅದಕ್ಕೆ ಲಾಯಕ್ಕು ಎಂದು ಹೇಳಿದ್ದಾರೆ.

    ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanaka Gandhi) ಅವರು ಸೀತಾಪುರ(Seethapura) ಅತಿಥಿ ಗೃಹದಲ್ಲಿ ಕಸ ಗುಡಿಸುತ್ತಿರುವ ದೃಶ್ಯ ವೈರಲ್ ಆಗಿತ್ತು, ಜನ್‍ತಾ ಉನ್ ಕೋ ಉಸೀ ಲಾಯಕ್ ಬನಾನ ಚಾಹ್‍ತೀ ಹೈ (ಜನರು ಅವರನ್ನು ಅದಕ್ಕೆ ಲಾಯಕ್ಕಾಗಿಸಲು ಬಯಸುತ್ತಾರೆ)ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Uttar Pradesh CM Yogi Adithyanath) ಹೇಳಿದ್ದಾರೆ. ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

    ಲಖಿಂಪುರ್ ಖೇರಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು7. ಅಲ್ಲಿಗೆ ಭೇಟಿ ನೀಡಲು ಪ್ರಿಯಾಂಕಾ ಹೋಗುತ್ತಿದ್ದ ವೇಳೆ ಪೊಲೀಸರು ತಡೆದಿದ್ದರು. ನಂತರ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಪ್ರಿಯಾಂಕಾ ಅವರು ಸೀತಾಪುರ ಅತಿಥಿಗೃಹದಲ್ಲಿ ನೆಲವನ್ನು ಗುಡಿಸಿದ್ದರು. ದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ಪ್ರಿಯಾಂಕಾ ಗಾಂಧಿಯ ಈ ನಡೆಯನ್ನು ಹೊಗಳುತ್ತಾ, ಕಾಂಗ್ರೆಸ್ 42 ಸೆಕೆಂಡುಗಳ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ, ಪೋಸ್ಟ್ ಮಾಡಿದ್ದು, ಬ್ರೀಟಿಷರು ಆಡಳಿತದ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅಹಿಂಸಾ ಸತ್ಯಾಗ್ರಹ ನಡೆಸಿದಾಗ ತೋರಿಸಿಕೊಟ್ಟ ದಾರಿಯಲ್ಲಿ ತಮ್ಮ ನಾಯಕಿ ನಡೆಯುತ್ತಿದ್ದಾರೆ ಎಂದು ಹೇಳಿ ವೀಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಈ ವಿಚಾರವಾಗಿ ಉತ್ತರಪ್ರದೇಶ ಮುಖ್ಯಂತ್ರಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ

  • ನಿಮ್ಮನ್ನು ಕೊಲೆ ಮಾಡ್ತೇವೆ – ಯೋಗಿ ಆದಿತ್ಯನಾಥ್, ಅಮಿತ್ ಶಾಗೆ ಬೆದರಿಕೆ

    ನಿಮ್ಮನ್ನು ಕೊಲೆ ಮಾಡ್ತೇವೆ – ಯೋಗಿ ಆದಿತ್ಯನಾಥ್, ಅಮಿತ್ ಶಾಗೆ ಬೆದರಿಕೆ

    ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆಯೊಂದು ಬಂದೆ.

    ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರಿಗೆ ಕೊಲೆ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಸದ್ಯ ಇ-ಮೇಲ್ ನನ್ನು ಕೂಡಲೇ ಮುಂಬೈನ ಕೇಂದ್ರ ಮೀಸಲು ಪೊಲಿಸ್ ಪಡೆ(ಸಿಆರ್‌ಪಿಎಫ್)ಗೆ ಕಳುಹಿಸಲಾಗಿದೆ. ಇಮೇಲ್ ನಲ್ಲಿ ಪೂಜಾ ಸ್ಥಳಗಳು ಹಾಗೂ ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿಯೂ ತಿಳಿಸಲಾಗಿದೆ.

    ಆತ್ಮಹತ್ಯಾ ದಾಳಿಯ ಮೂಲಕ ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ ಅವರನ್ನು ಇಲ್ಲವಾಗಿಸುತ್ತೇವೆ. ಅಲ್ಲದೆ ನಮ್ಮಲ್ಲಿ 11 ಆತ್ಮಹತ್ಯಾ ಬಾಂಬರ್ ಗಳಿದ್ದಾರೆ. ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರನ್ನು ಕೊಲೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ.

  • ಯೋಗಿ ಆದಿತ್ಯನಾಥ್‍ಗೆ ಚುನಾವಣಾ ಆಯೋಗ ಎಚ್ಚರಿಕೆ

    ಯೋಗಿ ಆದಿತ್ಯನಾಥ್‍ಗೆ ಚುನಾವಣಾ ಆಯೋಗ ಎಚ್ಚರಿಕೆ

    ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಚುನಾವಣಾ ಆಯೋಗ ಶುಕ್ರವಾರ ಎಚ್ಚರಿಕೆಯೊಂದನ್ನು ನೀಡಿದೆ.

    ಹೌದು. ಭಾರತೀಯ ಸೇನೆಯನ್ನು ಮೋದಿಜೀ ಸೇನೆ ಎಂದು ಹೇಳಿಕೆ ನೀಡಿರುವ ಕುರಿತಂತೆ ಎಚ್ಚರಿಕೆಯಿಂದಿರಿ ಎಂದು ಆಯೋಗ ಯುಪಿ ಸಿಎಂಗೆ ತಾಕೀತು ಮಾಡಿದೆ.

    ನೀವು ಒಬ್ಬ ಹಿರಿಯ ನಾಯಕರಾಗಿದ್ದು, ಸಾರ್ವಜನಿಕವಾಗಿ ನಿಮ್ಮಿಂದ ಜವಾಬ್ದಾರಿಯುತ ಹೇಳಿಕೆಗಳನ್ನು ನಿರೀಕ್ಷಿಸುತ್ತೇವೆ. ಹೀಗಾಗಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು, ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ರಕ್ಷಣಾ ಪಡೆಗಳ ವಿಚಾರವಾಗಿ ಏನೂ ಪ್ರಸ್ತಾಪಿಸಬೇಡಿ ಎಂದು ಚುನಾವಣಾ ಆಯೋಗ ಯೋಗಿ ಆದಿತ್ಯನಾಥ್‍ಗೆ ಸಲಹೆ ನೀಡಿದೆ.

    ಯೋಗಿ ಏನ್ ಹೇಳಿದ್ದರು?:
    ಏಪ್ರಿಲ್ 1ರಂದು ಗಾಜಿಯಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ, ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ನೀಡಿ ಸತ್ಕರಿಸಿದರೆ, ಮೋದಿ ಸೇನೆ ಉಗ್ರರಿಗೆ ಗುಂಡು ಹೊಡೆದು ತಿರುಗೇಟು ನೀಡಿದೆ ಎಂದಿದ್ದರು. ಈ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಟಿಎಂಸಿ ಖಂಡಿಸಿದ್ದವು.

  • ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

    ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

    ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಗರಗಳ ಹೆಸರನ್ನು ಬದಲಾಯಿಸುತ್ತಿರುವುದಕ್ಕೆ ಖ್ಯಾತ ಇತಿಹಾಸಕಾರ ಹಾಗೂ ಆಲೀಗಢ ಮುಸ್ಲಿಂ ವಿವಿಯ ಗೌರವ ಪ್ರೊಫೆಸರ್ ಇರ್ಫಾನ್ ಹಬೀಬ್ ವ್ಯಂಗ್ಯವಾಡಿದ್ದಾರೆ.

    ಆಗ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಹೆಸರಿನಲ್ಲಿರುವ ಶಾ ಎನ್ನುವ ಅಕ್ಷರ ಪರ್ಶಿಯನ್ ಮೂಲದ್ದು, ಅದು ಗುಜರಾತಿಗೆ ಸೇರಿದ್ದಲ್ಲ. ಹೀಗಾಗಿ ಅವರ ಹೆಸರನ್ನು ಮೊದಲು ಬದಲಾಯಿಸುವ ಕುರಿತು ಬಿಜೆಪಿ ಚಿಂತಿಸಲಿ. ಅಲ್ಲದೇ ಗುಜರಾತ್ ಹೆಸರು ಕೂಡ ಪರ್ಶಿಯನ್ ಮೂಲದ್ದು, ಇದನ್ನು ಗುಜರಾತ್ರ ಎಂದು ಕರೆಯಲಾಗುತ್ತಿತ್ತು. ಇದನ್ನೂ ಬಿಜೆಪಿಯವರು ಬದಲಿಸಬೇಕೆಂದು ಲೇವಡಿ ಮಾಡಿದ್ರು.

    ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಹಾನಗರಗಳ ಹೆಸರುಗಳನ್ನು ಬದಲಾವಣೆಯ ಮಾಡುವ ಹುಚ್ಚನ್ನು ಬೆಳೆಸಿಕೊಂಡಿದ್ದಾರೆ. ಇದು ಆರ್‍ಎಸ್‍ಎಸ್‍ನ ಹಿಂದುತ್ವ ನೀತಿಗೆ ಅನುಗುಣವಾಗಿದೆ. ಅಲ್ಲದೇ ನೆರೆಯ ಪಾಕಿಸ್ತಾನದಲ್ಲಿ ಇಸ್ಲಾಮಿಕ್‍ಗೆ ಸೇರಿಲ್ಲದವನ್ನೆಲ್ಲಾ ತೆಗೆದು ಹಾಕಿದ್ದರು. ಇಲ್ಲಿಯೂ ಸಹ ಅದೇರೀತಿ ಬಿಜೆಪಿ ಹಾಗೂ ಬಲಪಂಥೀಯ ಬೆಂಬಲಿಗರು ಹಿಂದೂಯೇತರ ಹೆಸರುಗಳನ್ನು, ಅದರಲ್ಲು ಪ್ರಮುಖವಾಗಿ ಇಸ್ಲಾಮಿಕ್ ಮೂಲದ ಹೆಸರುಗಳನ್ನು ಬದಲಿಸುತ್ತಿದ್ದಾರೆ ಎಂದು ಟೀಕಿಸಿದರು.

    ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಇರುವ ಆಗ್ರಾ ನಗರವನ್ನು ಅಗ್ರವನ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಆಗ್ರಹಿಸಿದ್ದರು. ಇದಲ್ಲದೇ ಯೋಗಿ ಆದಿತ್ಯನಾಥ್ ರಾಜ್ಯದ ಮಹಾನಗರಗಳ ಹೆಸರನ್ನು ಬದಲಾವಣೆ ಮಾಡಿದ್ದರು. ಹೀಗಾಗಿ ಹಬೀಬ್ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews