Tag: Yogesh

  • ‘ಪರಿಮಳ ಲಾಡ್ಜ್’ ನಲ್ಲಿ ಮತ್ತೆ ಕಾಣಿಸಿಕೊಂಡ ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್

    ‘ಪರಿಮಳ ಲಾಡ್ಜ್’ ನಲ್ಲಿ ಮತ್ತೆ ಕಾಣಿಸಿಕೊಂಡ ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್

    ತೋತಾಪುರಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾದ ನಂತರ ಮತ್ತೆ ತಮ್ಮ ಪರಿಮಳ ಲಾಡ್ಜ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ವಿಜಯ್ ಪ್ರಸಾದ್. 2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಇವರು, ಆನಂತರ ಈ ಪ್ರಾಜೆಕ್ಟ್ ಹಿಂದಕ್ಕಿಟ್ಟು ‘ಪೆಟ್ರೊಮ್ಯಾಕ್ಸ್’ ಸಿನಿಮಾ ಮಾಡಿದರು. ಇದೀಗ ಅವರ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಮತ್ತೆ ಅವರು ಪರಿಮಳ ಲಾಡ್ಜ್ ನತ್ತ ಮುಖ ಮಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ವಿಜಯ್ ಪ್ರಸಾದ್, ‘ತೋತಾಪುರಿ, ಪೆಟ್ರೋಮ್ಯಾಕ್ಸ್ ಆಯ್ತು, ಸದ್ಯದಲ್ಲೇ ಪರಿಮಳ ಲಾಡ್ಜ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!

    2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಸಖತ್ ಡಬಲ್ ಮೀನಿಂಗ್ ಸಂಭಾಷಣೆಯಿಂದಾಗಿ ಸದ್ದು ಮಾಡಿತ್ತು. ಈ ಟೀಸರ್ ನಲ್ಲಿ ತಮ್ಮ ತಂಡವನ್ನು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿಯೇ ಪರಿಚಯ ಮಾಡಿಸಿದ್ದರು. ಲಾಡ್ಜ್ ಓನರ್ ಸ್ಕಂದ್ ಎಂಟರ್ ಟೇನ್ಮೆಂಟ್ (ಬ್ಯಾನರ್), ಲಾಡ್ಜ್ ನಲ್ಲಿ ಸಲಿಂಗಕಾಮಿಗಳು (ನಾಯಕ) ಲೂಸ್ ಮಾದ ಯೋಗಿ, ಲಾಡ್ಜನಲ್ಲಿ ಆಳ ನೋಡಿ, ಲಾಳ ಹೊಡ್ದವ್ರು (ತಾರಾಗಣ) ದತ್ತಣ್ಣ,  ಸುಮನ್ ರಂಗನಾಥ್, ಹೇಮಾ ದತ್ತ್, ಲಾಡ್ಜನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಗುನ್ನ ತಿಂದವ್ರು (ಸಿನಿಮಾಟೋಗ್ರಫಿ) ನಿರಂಜನ್ ಬಾಬು, ಲಾಡ್ಜನಲ್ಲಿ ಲಾಡಿ ಜೊತೆ ರಾಗಾನೂ ಎಳ್ದೆವ್ರು (ಸಂಗೀತ ನಿರ್ದೇಶನ) ಅನೂಪ್ ಸೀಳಿನ್, ಲಾಡ್ಜನಲ್ಲಿ ಕಾಸ್ ಬದ್ಲು ಕಾಂಡೋಮ್ ಇಟ್ಕೊಂಡವ್ರು (ನಿರ್ಮಾಪಕ) ಪ್ರಸನ್ನ, ಲಾಡ್ಜನಲ್ಲಿ ಕಾಚ ತೋರ್ಸಿ ಕಥೆ ಮಾಡ್ದವ್ರು (ನಿರ್ದೇಶಕ) ವಿಜಯ ಪ್ರಸಾದ್ ಹೀಗೆಯೇ ಪದಗಳನ್ನು ಬಳಸಿ ವಿಚಿತ್ರವಾದ ಮನರಂಜನೆ ಕೊಟ್ಟಿದ್ದರು. ಈಗ ಅದೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕರು.

    ಸದ್ಯ ಬಿಡುಗಡೆ ಆಗಬೇಕಿರುವ ವಿಜಯ್ ಪ್ರಸಾದ್ ಅವರ ತೋತಾಪುರಿ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿದ್ದರೆ, ಮತ್ತೊಂದು ಮಹತ್ವದ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬಂದಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಪೆಟ್ರೋಮ್ಯಾಕ್ಸ್ ಕೂಡ ಅತೀ ನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿದೆ. ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಕಾಂಬಿನೇಷನ್ ಮೊದಲ ಸಿನಿಮಾವಿದು. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು, ಸಖತ್ ಮನರಂಜನೆ ನೀಡುವಂತಹ ಅಂಶಗಳನ್ನು ಇದು ಒಳಗೊಂಡಿದೆ.

  • ನಟಸಾರ್ವಭೌಮ ಡಾ.ರಾಜ್‍ಕುಮಾರ್ ಪುತ್ಥಳಿ ಕದ್ದ ಕಳ್ಳರು!

    ನಟಸಾರ್ವಭೌಮ ಡಾ.ರಾಜ್‍ಕುಮಾರ್ ಪುತ್ಥಳಿ ಕದ್ದ ಕಳ್ಳರು!

    ಬೆಂಗಳೂರು: ನಗರದ ಲುಂಬಿನಿ ಗಾರ್ಡನ್‍ನಲ್ಲಿ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಪುತ್ಥಳಿ ಕದ್ದ ಘಟನೆ ನಡೆದಿದೆ.

    ಡಾ. ರಾಜ್ ಪುತ್ಥಳಿಯು ಲುಂಬಿನಿ ಗಾರ್ಡನ್‍ನಲ್ಲಿತ್ತು. ಕಳ್ಳರು 2 ದಿನಗಳ ಹಿಂದೆಯೇ ರಾಜ್‍ಕುಮಾರ್ ಕಂಚಿನ ಪ್ರತಿಮೆ ಕದ್ದುಕೊಂಡು ಹೋಗಿದ್ದರು. ಕೃತ್ಯದ ಬಗ್ಗೆ ಅರಣ್ಯಾಧಿಕಾರಿ ಯೋಗೇಶ್ ಎಂಬುವರಿಂದ ದೂರು ದಾಖಲಾಗಿದೆ. ಇದನ್ನೂ ಓದಿ: ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

    ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ್ದ ಪುತ್ಥಳಿಯನ್ನು ಕಳ್ಳರು ಗುಜರಿ ಅಂಗಡಿಗೆ ಹಾಕಿದ್ದರು.

  • ಲಂಕೆ ದಹನಕ್ಕೆ ರಾಮನಾಗಿ ಯೋಗಿ ಮಾಸ್ ಕಂಬ್ಯಾಕ್

    ಲಂಕೆ ದಹನಕ್ಕೆ ರಾಮನಾಗಿ ಯೋಗಿ ಮಾಸ್ ಕಂಬ್ಯಾಕ್

    ಚಿತ್ರ: ಲಂಕೆ
    ನಿರ್ದೇಶನ : ರಾಮ್ ಪ್ರಸಾದ್
    ನಿರ್ಮಾಪಕ : ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್
    ಸಂಗೀತ : ಕಾರ್ತಿಕ್ ಶರ್ಮಾ
    ಛಾಯಾಗ್ರಹಣ : ರಮೇಶ್ ಬಾಬು
    ತಾರಾಗಣ: ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಎಸ್ಟರ್ ನರೋನಾ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಇತರರು,

    ಲೂಸ್ ಮಾದ ಯೋಗಿ ಅಭಿನಯದ ಬಹು‌ ನಿರೀಕ್ಷಿತ ಅದ್ಧೂರಿ ಕಮರ್ಶಿಯಲ್ ಸಿನಿಮಾ ಲಂಕೆ ಇಂದು‌ ಬಿಡುಗಡೆಯಾಗಿದೆ. ಎರಡು ವರ್ಷದ ನಂತರ ‌ಲೂಸ್ ಮಾದ ಯೋಗಿಯನ್ನು ತೆರೆ ಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಚಿತ್ರ ನೋಡಿ‌ ದಿಲ್ ಖುಷ್ ಆಗಿದ್ದು. ಎಲ್ಲೆಡೆ ಭರ್ಜರಿ ಒಪನಿಂಗ್ ಪಡೆದುಕೊಂಡಿದೆ.

    ವೆಶ್ಯವಾಟಿಕೆಯಿಂದ ತುಳಿತಕೊಳಗಾದವರ ಕಥೆ ಚಿತ್ರದಲ್ಲಿದೆ. ಜೊತೆಗೆ ಒಂದೊಳ್ಳೆ ಸಂದೇಶವೂ ಇದೆ. ಚಿತ್ರದ‌ ಕಥಾನಾಯಕ ರಾಮ್. ಜೈಲಿನಿಂದ ಬಿಡುಗಡೆಯಾದ ರಾಮ್ ಜಾಕಿ ಎಂಬಾತನ ಮೂಲಕ ರೌಡಿಸಂ ಹಿನ್ನೆಲೆಯುಳ್ಳ ಕಂಟ್ರ್ಯಾಕ್ಟರ್ ನಾಯ್ಡುಗೆ ಪರಿಚಿತನಾಗುತ್ತಾನೆ‌. ಎದುರಾಳಿ ಕೃಷ್ಣಪ್ಪನ ದಾಳಿಯಿಂದ ನಾಯ್ಡುನನ್ನು ಕಾಪಾಡಿ ರಾಮ್ ಕಂಟ್ರ್ಯಾಕ್ಟರ್ ನಾಯ್ಡು ನಂಬಿಕಸ್ಥ ಶಿಷ್ಯನಾಗುತ್ತಾನೆ. ಹೀಗಿರುವಾಗ ರಾಮ್ ಗೆ ವೃದ್ಧಾಶ್ರಮ ನಡೆಸಿಕೊಂಡು ಹೋಗುತ್ತಿದ್ದ ಪಾವನಿ ಪರಿಚಯವಾಗುತ್ತಾಳೆ. ಇಬ್ಬರ ಕ್ಯೂಟ್ ಲವ್ ಸ್ಟೋರಿ ಒಂದು‌ ಕಡೆ ಸಾಗುತ್ತಿರುತ್ತೆ. ಇನ್ನೊಂದು ಕಡೆ ರಾಜಕೀಯದಲ್ಲಿ ಮಿಂಚಬೇಕೆಂದು ಕನಸು ಕಾಣುತ್ತಿದ್ದ ಮಂದಾರ ಮಾಂಸದ ಅಡ್ಡೆ‌ ನಡೆಸುತ್ತಿರುತ್ತಾಳೆ. ಪೊಲೀಸ್ ಅಧಿಕಾರಿ, ಮಿನಿಸ್ಟರ್ ಜೊತೆ ಸೇರಿ‌ ಮಂದಾರ ಆಟ ಎಗ್ಗಿಲ್ಲದೆ ನಡೆಯುತ್ತಿರುತ್ತೆ. ಒಂದಿಷ್ಟು ಟ್ವಿಸ್ಟ್ ಟರ್ನ್ ನಡುವೆ ರಾಮ್, ಪಾವನಿ, ಮಂದಾರ ಒಟ್ಟಿಗೆ‌ ಸೇರುತ್ತಾರೆ. ಇದರ‌ ನಡುವೆ ನಾಯಕ ರಾಮ್ ಇಂಟ್ರಸ್ಟಿಂಗ್ ಫ್ಲ್ಯಾಶ್‌‌‌ ಬ್ಯಾಕ್ ಚಿತ್ರಕ್ಕೆ‌ ಮತ್ತೊಂದು ಹೊಸ ತಿರುವು‌ ನೀಡುತ್ತೆ. ಫ್ಲ್ಯಾಶ್‌‌‌ ಬ್ಯಾಕ್ ಸ್ಟೋರಿ ಏನು, ಲಂಕೆಯಲ್ಲಿ ಮುಂದೇನಾಗುತ್ತೆ ಎನ್ನೊದಕ್ಕೆ ನೀವು ಸಿನಿಮಾ ನೋಡ್ಲೇಬೇಕು. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಲಂಕೆ ನೈಜ ಘಟನೆ ಆಧಾರಿತ ಚಿತ್ರ, ನೈಜ ಘಟನೆಯನ್ನು ಸಿನಿಮ್ಯಾಟಿಕ್ ಆಗಿ ತೋರಿಸುವಲ್ಲಿ ನಿರ್ದೇಶಕ ರಾಮ್ ಪ್ರಸಾದ್ ಯಶಸ್ವಿಯಾಗಿದ್ದಾರೆ. ಕಮರ್ಶಿಯಲ್ ಸಿನಿಮಾಗೆ ತಕ್ಕಂತೆ ಹೆಣೆದ ಸ್ಕ್ರೀನ್ ಪ್ಲೇ ಚಿತ್ರದ ಹೈಲೈಟ್. ರಾಮ್ ಪ್ರಸಾದ್ ಹಾಗೂ ತಂಡದ ಪರಿಶ್ರಮ ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿದ್ದು. ಬಹಳ ದಿನಗಳ ನಂತರ ಮಾಸ್ ಪ್ರಿಯರ‌ ಮನತಣಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಬಿಡುಗಡೆಯಾದ ಎಲ್ಲ‌ ಕಡೆಗಳಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕಲರ್ ಫುಲ್ ಹಾಡು, ಫೈಟ್ ಸೀನ್ ಗಳು ಫುಲ್ ಮಾರ್ಕ್ಸ್ ಪಡೆದುಕೊಂಡಿವೆ.

    ಎಂದಿನಂತೆ ಯೋಗಿ ಆಕ್ಟಿಂಗ್, ಡಾನ್ಸ್, ಫೈಟಿಂಗ್, ಎಲ್ಲದರಲ್ಲೂ ಲೀಲಾಜಾಲವಾಗಿ ನಟಿಸಿ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ಯಾನಿ ಕುಟ್ಟಪ್ಪ, ಶರತ್ ಲೋಹಿತಾಶ್ವ ಸುಚೇಂದ್ರ ಪ್ರಸಾದ್ ಅದ್ಭುತ ನಟನೆ ಮೂಲಕ ಮಿಂಚಿದ್ದಾರೆ. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಎಸ್ಟರ್ ನರೋನ್ಹಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಲವು ವರ್ಷದ ನಂತರ ಕನ್ನಡ ಸಿನಿಮಾದಲ್ಲಿ ನಟಿಸಿರುವ ಗಾಯಿತ್ರ ಜೈರಾಮ್ ಮಿಂಚಿದ್ದಾರೆ. ಸಂಚಾರಿ ವಿಜಯ್ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿ ಗಮನ ಸೆಳೆದಿದ್ದಾರೆ. ಕಾರ್ತಿಕ್ ಶರ್ಮಾ ಹಿನ್ನೆಲೆ ಸಂಗೀತ ಹಾಗೂ ಸಂಗೀತ ಚಿತ್ರದ ಮೆರುಗು ಹೆಚ್ಚಿಸಿದ್ದು, ಭರವಸೆ ಮೂಡಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಾಹಣ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಸಾಹಸ ದೃಶ್ಯಗಳು ಕಿಕ್ ಕೊಡುತ್ತವೆ. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಮಾಸ್ ಕಮರ್ಶಿಯಲ್ ಚಿತ್ರಕ್ಕೆ ಬೇಕಾದ ಅದ್ದೂರಿತನ, ದೊಡ್ಡದಾದ ಸ್ಟಾರ್ ಕಾಸ್ಟ್, ಹಾಡು, ಫೈಟ್ ಸೀನ್ ಗಳು ಚಿತ್ರಕ್ಕೆ ಮೆರುಗು ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ‌ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದರೂ ಕೂಡ ಚಿತ್ರ‌ ಬಿಡುಗಡೆ ಮಾಡಲು ಧೈರ್ಯ ‌ಮಾಡಿ ಸೈ ಎನಿಸಿಕೊಂಡಿದೆ ಚಿತ್ರತಂಡ. ಮೊದಲ ದಿನ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.

    ಪಬ್ಲಿಕ್ ರೇಟಿಂಗ್ : 3.5/5

  • ಲೂಸ್ ಮಾದನಿಗೆ ಹುಟ್ಟುಹಬ್ಬದ ಸಂಭ್ರಮ- ಗಿಫ್ಟ್ ಆಗಿ ಲಂಕೆ ಟೀಸರ್ ರಿಲೀಸ್

    ಲೂಸ್ ಮಾದನಿಗೆ ಹುಟ್ಟುಹಬ್ಬದ ಸಂಭ್ರಮ- ಗಿಫ್ಟ್ ಆಗಿ ಲಂಕೆ ಟೀಸರ್ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಲೂಸ್ ಮಾದ ಯೋಗಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರವಾಗಿದೆ.

    ಹೌದು, ಯೋಗಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಣನಕುಂಟೆಯ ತಮ್ಮ ನಿವಾಸದಲ್ಲಿ ಸೆಲೆಬ್ರೇಟ್ ಮಾಡಲಾಗಿದೆ. ಸಿಂಪಲ್ ಆಗಿ ಕೇಕ್ ಕಟ್ ಮಾಡಿ ಯೋಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಇತ್ತ ಚಿತ್ರತಂಡ ಲಂಕೆ ಚಿತ್ರದ ಮೋಶನ್ ಪೋಸ್ಟರ್ ಅನ್ನು ಉಡುಗೊರೆಯಾಗಿ ನೀಡಿದೆ. ಸದ್ಯ ಯೋಗಿ ನಾಯಕನಾಗಿ ನಟಿಸಿರುವ ಲಂಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಯೋಗಿ ಬರ್ತ್‍ಡೇ ಪ್ರಯುಕ್ತ ಇಂದು ಬೆಳಗ್ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಲಂಕೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಲಂಕೆ ಚಿತ್ರದಲ್ಲಿ ನಾಯಕ ಯೋಗಿ ಜೊತೆಗೆ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

    ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಾಹಸ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವು “ದಿ ಗ್ರೇಟ್ ಎಂಟರ್‍ಟೈನರ್” ಬ್ಯಾನರ್‍ನಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ. ಇದನ್ನೂ ಓದಿ: ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

  • ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಹೆದರಿಕೊಳ್ಳುವ ಅಗತ್ಯವಿಲ್ಲ- ಲೂಸ್ ಮಾದ ಯೋಗಿ ತಾಯಿ

    ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಹೆದರಿಕೊಳ್ಳುವ ಅಗತ್ಯವಿಲ್ಲ- ಲೂಸ್ ಮಾದ ಯೋಗಿ ತಾಯಿ

    – ಸಿನಿಮಾ ಸೋಲಿನಿಂದ ಯೋಗಿ ವಿಚಲಿತನಾಗಿದ್ದ ಅಷ್ಟೇ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ಕೇಸ್ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ನಟ ಲೂಸ್ ಮಾದ ಯೋಗಿಗೆ ಆಂತರಿಕ ಭದ್ರತಾ ವಿಭಾಗದ ಪೊಲೀಸರು ನೋಟಿಸ್ ನೀಡಿದ್ದು, ಶನಿವಾರ ಸಂಜೆಯೇ ನೋಟಿಸ್ ಲಭಿಸಿತ್ತು ಎಂದು ಲೂಸ್ ಮಾದ ಯೋಗಿ ತಂದೆ ಸಿದ್ಧರಾಜು ಅವರು ತಿಳಿಸಿದ್ದಾರೆ.

    ಪೊಲೀಸರ ನೋಟಿಸ್ ಹಾಗೂ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡಿದ ಯೋಗಿ ತಂದೆ ಸಿದ್ಧರಾಜು ಅವರು, ಶನಿವಾರ ಸಂಜೆ ವೇಳೆಗೆ ಪುತ್ರ ಯೋಗಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ನನ್ನ ಮಗ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಆದ್ದರಿಂದ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಯೋಗಿ ತನ್ನ ಜೀವನದಲ್ಲಿ ವಿಚಲಿತನಾಗಲು ನಾನೇ ಕಾರಣ ಎನ್ನಿಸುತ್ತಿದೆ. ಏಕೆಂದರೆ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳಲು ಬಲವಂತ ಮಾಡುತ್ತಿದೆ. ಸಾಲು ಸಾಲು ಸೋಲುಗಳು ಯೋಗಿಯನ್ನು ನೋವಿಗೆ ದೂಡಿತ್ತು ಅಷ್ಟೇ ಎಂದು ಹೇಳಿದ್ದಾರೆ.

    ಸದ್ಯ ಪೊಲೀಸರು ಯಾವ ಮಾಹಿತಿ ಆಧಾರದ ಮೇಲೆ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ. ಈಗಾಗಲೇ ವಿಚಾರಣೆಗೆ ಎದುರಿಸಿದ್ದು, ಮತ್ತೆ ವಿಚಾರಣೆಗೆ ಕರೆದಿಲ್ಲ. ಆದರೆ ಬೇರೆಯಾರ ಬಗ್ಗೆಯಾದರೂ ಮಾಹಿತಿ ಇದ್ದರೇ ತಿಳಿಸಿ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ ಎಂದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯೋಗಿ ತಾಯಿ ಅಂಬುಜಾ ಅವರು, ನನ್ನ ಮಗನಿಗೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ನನ್ನ ಮಗನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಯೋಗಿ ಹೆಚ್ಚು ಸೈಲೆಂಟ್ ಆಗಿರುತ್ತಾನೆ ಅಷ್ಟೇ. ಈಗ ವಿಚಾರಣೆ ಹೋಗಿ ಬಂದ ನಂತರವೂ ಅವರು ಆರಾಮಾಗಿದ್ದಾರೆ. ಈ ಬಗ್ಗೆ ಕೆಲ ತಪ್ಪು ಮಾಹಿತಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

    ಯೋಗಿಗೆ ಬೇರೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ಖುಷಿಯಾದ ಸಂದರ್ಭದಲ್ಲಿ ಡ್ರಿಂಗ್ಸ್ ಮಾಡ್ತಾನೆ, ಸಿಗರೇಟ್ ಸೇದುತ್ತಾನೆ ಅಷ್ಟೇ. ಪೊಲೀಸರು ಸಂಶಯ ಪಡುವ ರೀತಿಯಲ್ಲಿ ಯಾವುದೇ ಘಟನೆ ನಡೆದಿಲ್ಲ. ವಿಚಾರಣೆಯನ್ನು ಯಶಸ್ವಿಯಾಗಿ ಎದುರಿಸಿದ್ದು, ಈಗ ಬಂಧನವಾಗಿರುವ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ವಿಚಾರಣೆ ವೇಳೆ ಆತ ಎಲ್ಲಿ ಶೂಟಿಂಗ್ ಮಾಡಿದ್ದರು. ಯಾವ ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಪಡೆದುಕೊಂಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಯೋಗಿ ಡಿಪ್ರೆಶನ್‍ಗೆ ಹೋಗಿದ್ದೆ ಎಂದು ಹೇಳಲು ಆತನ ಸಿನಿಮಾ ಸೋಲುಗಳೇ ಕಾರಣ. ಏಕೆಂದರೆ ಆತನ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಹಲವು ಸಮಸ್ಯೆ ಎದುರಾಗಿದ್ದವು. ಆ ಬಳಿಕ ಕೆಲ ಸಮಯ ವಿರಾಮ ಪಡೆದಿದ್ದ ಕಾರಣ ಹಾಗೇ ಹೇಳಿರಬಹುದು. ಹಲವು ಸಿನಿಮಾಗಳಲ್ಲಿ ಶೂಟಿಂಗ್ ಮಾಡಿದ್ದರೂ ಹಣ ನೀಡಿರಲಿಲ್ಲ. ಇದು ಯೋಗಿಗೆ ಹೆಚ್ಚು ಬೇಸರ ಮಾಡಿತ್ತು. ಈಗ ಆತ ಉತ್ತಮ ಕಥೆ ಆಯ್ಕೆ ಮಾಡಿಕೊಂಡು ಮತ್ತೆ ಕನ್ನಡದ ಅಭಿಮಾನಿಗಳ ಮುಂದೇ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ನಾನು: ದ್ವಾರಕೀಶ್ ಕಣ್ಣೀರು

    ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ನಾನು: ದ್ವಾರಕೀಶ್ ಕಣ್ಣೀರು

    – ಮನೆ ಮಾರಲು ಸಿದ್ಧ
    – ಮನೆ ಬಳಿ ಬಂದು ಗಲಾಟೆ ಮಾಡಿದ್ದು ಸರಿಯಲ್ಲ
    – 80 ಕೋಟಿಯಷ್ಟು ಮನೆ ಮಾರಿದ್ದೇನೆ

    ಬೆಂಗಳೂರು: ಮನೆ ಮಾರಿಯಾದರೂ ನಾನು ಹಣ ಕೊಡುತ್ತೀನಿ. ಸಿನಿಮಾ ಬಿಟ್ಟು ಬೇರೆ ಏನೂ ಮಾಡಿಲ್ಲ. ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ಎಂದು ನೋವಿನಿಂದ ಹಿರಿಯ ನಟ ದ್ವಾರಕೀಶ್ ಮಾತನಾಡಿದರು. ಇದನ್ನೂ ಓದಿ: ಫೈನಾನ್ಶಿಯರ್‌ನಿಂದ ಹಿರಿಯ ನಟ ದ್ವಾರಕೀಶ್ ಮೇಲೆ ದರ್ಪ

    ಫೈನಾಶಿಯರ್ ರಮೇಶ್ ಬಂದು ದ್ವಾರಕೀಶ್ ಮನೆಯಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಾರಕೀಶ್ ಹಾಗೂ ಪುತ್ರ ಯೋಗೇಶ್ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ದ್ವಾರಕೀಶ್, ಗಲಾಟೆ ನಡೆದ ದಿನ ನನ್ನ ಮಗ ಮನೆಯಲ್ಲಿ ಇರಲಿಲ್ಲ. ನಾನು ಮತ್ತು ನನ್ನ ಹೆಂಡತಿ ಮಾತ್ರ ಮನೆಯಲ್ಲಿದ್ವಿ. ನನಗೆ 78 ವರ್ಷ, ನನ್ನ ಹೆಂಡತಿಗೂ 78 ವರ್ಷ. ಮನೆಯಲ್ಲಿ ಇಬ್ಬರೇ ಇದ್ವಿ. ಮಧ್ಯಾಹ್ನ ಮನೆ ಬಳಿ ಬಂದವರು ಜೋರಾಗಿ ಬಾಗಿಲು ಬಡಿಯುತ್ತಿದ್ದರು. ನಾನು ಹೋಗಿ ಬಾಗಿಲು ತೆಗೆದೆ. ಏಕಾಏಕಿ ಮನೆಯೊಳಗೆ ನಾಲ್ಕು ಜನ ಬಂದರು. ಅವರಲ್ಲಿ ಜಯಣ್ಣ, ರಮೇಶ್ ಸೇರಿ ನಾಲ್ಕು ಜನ ಇದ್ದರು.

    ಬಂದ ತಕ್ಷಣ ನಿಮ್ಮ ಮಗ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ ಎಂದು ಜೋರಾಗಿ ಮಾತನಾಡಿದರು. ನನಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಅದರಲ್ಲಿ ರಮೇಶ್ ಅವರು ತುಂಬಾ ಜೋರಾಗಿ ಮಾತನಾಡಿದರು. ನಿಮ್ಮನ್ನ ಊಡೀಸ್ ಮಾಡುತ್ತೀವಿ ಎಂದು ಧಮ್ಕಿ ಹಾಕಿದರು. ಎಲ್ಲದಕ್ಕೂ ಕಾನೂನು ಅಂತ ಇದೆ. ಯಾವುದೇ ಕೆಲಸ ಆಗಲಿ ಕಾನೂನು ಪ್ರಕಾರ ಮಾಡಬೇಕು. ನಾನು ಹಣ ಕೊಡುವುದಿಲ್ಲ ಎಂದು ಹೇಳಿಲ್ಲ. ಆದರೆ ಅವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ ಎಂದರು.

    ಕಾನೂನಿಗೋಸ್ಕರ ನಾನು ಪೊಲೀಸ್ ಠಾಣೆಗೆ ಹೋಗಿದ್ದೆ. ಅವರು ಪೊಲೀಸ್, ಕೋರ್ಟ್ ಎಂದು ಹೋಗಲಿ. ಕೋರ್ಟ್ ಏನಾದರೂ ಮನೆಯ ಮಾರಿ ಎಂದರೆ ಅದಕ್ಕೂ ರೆಡಿ ಇದ್ದೀನಿ. ದ್ವಾರಕೀಶ್ ಸುಮಾರು 80 ಕೋಟಿಯಷ್ಟು ಮನೆ ಮಾರಿದ್ದಾನೆ. ಮನೆ ಮಾರಿಯಾದರೂ ನಾನು ಹಣ ಕೊಡುತ್ತೀನಿ. ಸಿನಿಮಾ ಬಿಟ್ಟು ಬೇರೆ ಏನೂ ಮಾಡಿಲ್ಲ. ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ನಾನು. ಏಕಾಏಕಿ ಬಂದು ಗಲಾಟೆ ಮಾಡೋದು ಎಷ್ಟು ಸರಿ? ಎಂದು ಕಣ್ಣೀರು ಹಾಕಿದರು.

    ಇದೇ ವೇಳೆ ಪುತ್ರ ಯೋಗೇಶ್ ಮಾತನಾಡಿ, ಜಯಣ್ಣ ಬೇರೆಯವರಲ್ಲ, ನನಗೆ ಶತ್ರುವಲ್ಲ. ಅವರು ನನಗೆ ಕ್ಲೋಸ್ ಫ್ರೇಂಡ್. ದೊಡ್ಡ ಸಿನಿಮಾ ಅಲ್ವಾ ತುಂಬಾ ಜನರು ಬಂದಿದ್ದರು. ಕೆ. ಮಂಜು ಅವರೇ 9 ಕೋಟಿ ಆಫರ್ ಕೊಟ್ಟಿದ್ದರು. ಆದರೆ ಜಯಣ್ಣ ನಾನೇ ಮಾಡುತ್ತೀವಿ ಎಂದರು. ಆದರೆ ಸಿನಿಮಾ ಸೋತಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಸಿನಿಮಾ ಗೆದ್ದಾಗ ನಾವೆಲ್ಲರೂ ಬೇಕು, ಸೋತಾಗ ನಾವೊಬ್ಬರೇ ಅನುಭವಿಸಬೇಕಾ. ನಾವು ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ. ಒಂದು ಸಿನಿಮಾ ಸೋತರೆ ಮುಂದಿನ ಸಿನಿಮಾದಲ್ಲಿ ಕ್ಲೀಯರ್ ಮಾಡುತ್ತೀವಿ ಎಂದರು.

    ಹಣ ವಾಪಸ್ ಕೇಳೋಕು ಒಂದು ರೀತಿ ಇದೆ. ಆದರೆ ಈ ರೀತಿ ಧಮ್ಕಿ ಹಾಕೋದಲ್ಲ. ಒಂದು ವರ್ಷ ಸಮಯ ಕೊಡಿ ಎಂದು ಕೇಳಿದ್ದೆ. ನಮಗೆ ಕನ್ನಡ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ನಮ್ಮ ತಂದೆ 50 ವರ್ಷದಿಂದ ಇದ್ದಾರೆ, ನಾನು 30 ವರ್ಷದಿಂದ ಇದ್ದೇನೆ. ಆದರೆ ಮನೆಯ ಬಳಿ ಬಂದು ಗಲಾಟೆ ಮಾಡೋದು ತಪ್ಪು. ನಮಗೂ ತುಂಬಾ ಜನರು ಹಣ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನ್ಯಾಯ, ಕಾನೂನು ಇದೆ. ನನಗೆ ಯಾರ ಮೇಲೂ ಕೋಪ ಇಲ್ಲ. ಜಯಣ್ಣ ಕೇಳುವುದರಲ್ಲಿ ನ್ಯಾಯ ಇದೆ. ಅವರು ಹಣ ಕೊಟ್ಟಿದ್ದಾರೆ. ಅದಕ್ಕೆ ವಾಪಸ್ ಕೇಳಿದ್ದಾರೆ. ನಾವು ಕಾನೂನು ಪ್ರಕಾರ ವಾಪಸ್ ಕೊಡುತ್ತೀವಿ. ಕಚೇರಿ ಇದೆ ಬಂದು ಕುಳಿತುಕೊಂಡು ಮಾತನಾಡಲಿ. ಅದು ಬಿಟ್ಟು ಮನೆಗೆ ಬರುವುದು ಸರಿಯಲ್ಲ. ರಮೇಶ್ ಅವರಿಗೆ ನಮಗೂ ಏನೂ ಸಂಬಂಧ ಇಲ್ಲ. ಆದರೆ ಅವರು ಅಪ್ಪನ ಬಳಿ ಬಂದು ಮಾತನಾಡಿದ್ದು ತಪ್ಪು. ನಮಗೆ ಸಮಯ ಬೇಕು, ಸಿನಿಮಾ ಮಾಡಿ ಹಣ ವಾಪಸ್ ಕೊಡುತ್ತೀವಿ. ನಾವು ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ. ಲೆಕ್ಕಾಚಾರ ಮಾಡಿ ಹಣ ವಾಪಸ್ ಕೊಡುತ್ತೀನಿ ಎಂದು ತಿಳಿಸಿದರು.

  • ತಂದೆಯಾದ ಲೂಸ್ ಮಾದ ಯೋಗಿ

    ತಂದೆಯಾದ ಲೂಸ್ ಮಾದ ಯೋಗಿ

    ಬೆಂಗಳೂರು: ಲೂಸ್ ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗಿ ಪತ್ನಿ ಸಾಹಿತ್ಯ ಅವರು ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಅವರಿಗೆ ಹೆಣ್ಣು ಮಗು ಜನಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

    ನಟ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ತಂದೆಯಾದ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಖುಷಿ ಪಟ್ಟಿದ್ದಾರೆ.

    ನಟ ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ಕುಟುಂಬದ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು. ಸಾಹಿತ್ಯ ಅವರು ಐಟಿ ಉದ್ಯೋಗಿಯಾಗಿದ್ದು, ಯೋಗಿ ಅವರು ಬಾಲ್ಯದ ಗೆಳತಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.

  • ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ಬೆಂಗಳೂರು: ಡಾ. ರಾಜ್ ಕುಮಾರ್ ಬಗ್ಗೆ ಮಾತಾನಾಡಿದ್ದಕ್ಕೆ ತಮಿಳು ಚಿತ್ರರಂಗದಿಂದ ಕನ್ನಡ ನಟನನ್ನು ಬಹಿಷ್ಕಾರ ಮಾಡಿದನ್ನು ಖಂಡಿಸಿ ಕರ್ನಾಟಕ ಸಂಘಟನೆ ಒಕ್ಕೂಟಗಳು ವಾಣಿಜ್ಯ ಮಂಡಳಿಗೆ ದೂರು ನೀಡಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ನಟ ಯೋಗೇಶ್ ತಮಿಳಿನ ‘ಪಾರ್ತಿಬನ್ ಕಾದಲ್’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಯೋಗೇಶ್ ವರನಟ ಡಾ. ರಾಜ್ ಕುಮಾರ್ ಮತ್ತು ಕಾವೇರಿ ನದಿ ಬಗ್ಗೆ ಮಾತಾನಾಡಿದ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ಯೋಗೇಶ್‍ನನ್ನು ಹೊರದಬ್ಬಿದೆ.

    ಇದನ್ನು ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದಿಂದ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಇದು ವರನಟ ರಾಜ್ ಕುಮಾರ್ ಅವರಿಗೆ ಆಗಿರುವ ಅವಮಾನ. ಇನ್ನೂ ಮುಂದೆ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ಏನಿದು ವಿವಾದ?
    ಕನ್ನಡ ನಟ ಯೋಗಿ ತಮಿಳಿನ ಪಾರ್ತಿಬನ್ ಕಾದಲ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈಯಲೇ ಬಿಡುಗಡೆಯಾಗಿತ್ತು. ಆದೆ ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಸಿನಿಮಾ ತಂಡವನ್ನು ಪ್ರಶ್ನೆ ಮಾಡಲು ಶುರು ಮಾಡಿದ್ದರು. ಸಿನಿಮಾದ ಬಗ್ಗೆ ಪ್ರಶ್ನೆ ಮುಗಿದ ಬಳಿಕ ಕಾವೇರಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಸಾರ್ ನಮ್ಗೆ ನೀರಿಲ್ಲ ನಿಮಗೆ ಬೇಕು ಅಂದ್ರೆ ಹೇಗೆ, ಮಂಡ್ಯ ಅಂತಾ ಊರಿದೆ ಅಲ್ಲಿ ಎಷ್ಟು ಕಷ್ಟಪಡ್ತಾರೆ ಜನ ಅಂತಾ ನೀವೇ ನೋಡಿ ಅಂತಾ ಯೋಗಿ ಉತ್ತರಿಸಿದ್ದರು. ಅಷ್ಟಕ್ಕೆ ಮುಗಿಸದೇ ಪ್ರರ್ತಕರ್ತರು ನಿಮಗೆ ರಾಜ್‍ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಅನ್ನೋ ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದರು.

    ಯೋಗಿ ಅವರ ಈ ಮಾತುಗಳನ್ನು ಹಿಡಿದುಕೊಂಡು ಕನ್ನಡ ನಟನ ಅಭಿಪ್ರಾಯ ಬೇರೆ ಮಾಡಲು ಅಲ್ಲಿನ ಮಾಧ್ಯಮ ಪ್ರಯತ್ನಿಸಿತ್ತು. ಇದರ ಪರಿಣಾಮವಾಗಿ ಪಾರ್ತಿಬನ್ ಕಾದಲ್ ಸಿನಿಮಾದಿಂದ ಯೋಗಿ ಅವರನ್ನು ಗೇಟ್‍ಪಾಸ್ ನೀಡಿದ್ದರು. ಅಷ್ಟೇ ಅಲ್ಲದೇ ಈ ರೀತಿ ಮಾತಾನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ಧಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಬೆಂಗಳೂರು: ಲೂಸ್ ಮಾದ ಅಂತಲೇ ಖ್ಯಾತಿಗಳಿಸಿರುವ ನಟ ಯೊಗೀಶ್ ಇಂದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಲೂಸ್ ಮಾದ ಭಾಗವಹಿಸಿ ಪ್ರಚಾರ ನಡೆಸಿದರು.

    ಇದೇ ವೇಳೆ ಮಾತನಾಡಿದ ಯೋಗಿ, ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ನವರಿಗೆ ಟಾಂಗ್ ನೀಡಿದ್ದಾರೆ.

    ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ

    ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ. ನನ್ನ ಸ್ವಂತ ಅನುಭವ ಇದು. ಹೀಗಾಗಿ ನಾನು ನೋಡಿರೋ ವಿಚಾರವನ್ನು ನಿಮಗೆ ಹೇಳಬೇಕು. ಅವರು ಯಾವ ಕೆಲಸನೂ ಮಾಡಲ್ಲ. ಜೈಲಿನಲ್ಲಿದ್ದವರನ್ನು ಇಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಕಳ್ಳರಿಗೆಲ್ಲ ನೀವು ಮತ ಹಾಕಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್

    ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರ ಮನ್ ಕೀ ಬಾತ್ ಈ ಬಾರಿ ವಾಂಗಿ ಬಾತ್ ಆಗಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಕರೆ ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಸಿಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು. ರೋಡ್ ಶೋನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು.

  • ಸ್ಯಾಂಡಲ್‍ವುಡ್ ಮಾದನ ಬಾಳಲ್ಲಿ ಮದುವೆಯ ಸಾಹಿತ್ಯ-ದಂಪತಿಯಾದ ಬಾಲ್ಯದ ಸ್ನೇಹಿತರು

    ಸ್ಯಾಂಡಲ್‍ವುಡ್ ಮಾದನ ಬಾಳಲ್ಲಿ ಮದುವೆಯ ಸಾಹಿತ್ಯ-ದಂಪತಿಯಾದ ಬಾಲ್ಯದ ಸ್ನೇಹಿತರು

    ಬೆಂಗಳೂರು: ಸ್ಯಾಂಡಲ್‍ವುಡ್ ನ ಯಂಗ್ ಸ್ಟಾರ್ ಯೋಗಿ ಮದುವೆ ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಶ್ರೀ ಕನ್ವೆಂಷನ್ ಹಾಲ್‍ನಲ್ಲಿ ಅದ್ಧೂರಿಯಾಗಿ ನೆರವೇರಿತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳತಿ ಸಾಹಿತ್ಯ ಜೊತೆ ಯೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಬೆಳಗ್ಗೆ 6 ಗಂಟೆಯೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಯೋಗಿ, ಬಾಲ್ಯದ ಗೆಳತಿ ಸಾಹಿತ್ಯಗೆ ತಾಳಿ ಕಟ್ಟಿದರು. ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯಗಳ ಪ್ರಕಾರ ಈ ಕಲ್ಯಾಣ ಕಾರ್ಯ ನೆರವೇರಿತು. ಮಧುಮಗ ಯೋಗಿ ಬಿಳಿ ಧಿರಿಸಿನಲ್ಲಿ, ವಧು ಸಾಹಿತ್ಯ ಜರತಾರಿ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ವಧುವರನ ಬಂಧು ಬಳಗ, ಯೋಗಿಯ ಆಪ್ತರಷ್ಟೇ ಪಾಲ್ಗೊಂಡಿದ್ದಾರೆ.

    ಇಂದು ಸಂಜೆ 7 ಗಂಟೆಯಿಂದ ಇದೇ ಕನ್ವೆನ್ಷನ್ ಹಾಲ್‍ನಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆ ನಡೆಯಲಿದೆ. ಆರತಕ್ಷತೆ ಸಮಾರಂಭದಲ್ಲಿ ಸಿನಿಮಾ ಲೋಕದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸುವ ನಿರೀಕ್ಷೆ ಇದೆ.

    ಬೆಂಗಳೂರಿನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಸಾಹಿತ್ಯ ಮತ್ತು ಯೋಗಿ ಸಹಪಾಠಿಗಳಾಗಿದ್ದರು. ನಂತರ ಯೋಗಿ ಸಿನಿಮಾ ರಂಗಕ್ಕೆ ಕಾಲಿಟ್ಟಮೇಲೂ ಸಾಹಿತ್ಯರೊಂದಿಗೆ ಸ್ನೇಹವಿತ್ತು. ಕೆಲವು ವರ್ಷಗಳ ಹಿಂದೆ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಸತಿಪತಿಯಾಗಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಈ ಮದುವೆ ನೆರವೇರಿದೆ.