Tag: Yogasana

  • ಬೆನ್ನುನೋವೆ? – ನಿತ್ಯ ಈ 5 ಯೋಗಾಸನ ಮಾಡಿ ಪರಿಹಾರ ಕಂಡುಕೊಳ್ಳಿ..

    ಬೆನ್ನುನೋವೆ? – ನಿತ್ಯ ಈ 5 ಯೋಗಾಸನ ಮಾಡಿ ಪರಿಹಾರ ಕಂಡುಕೊಳ್ಳಿ..

    ಧುನಿಕ ಜೀವನಶೈಲಿಯಲ್ಲಿ ಬಹುತೇಕ ಮಂದಿಗೆ ಬೆನ್ನುನೋವು (Back Pain) ಕಾಣಿಸಿಕೊಳ್ಳುವುದು ಸಹಜ. ಹೆಚ್ಚಿನ ಸಮಯ ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವುದು, ದೈಹಿಕ ವ್ಯಾಯಾಮ ಇಲ್ಲದಿರುವುದು, ಸರಿಯಾದ ಭಂಗಿಯಲ್ಲಿ ಕೂರದೇ ಇರುವುದು ಬೆನ್ನುನೋವಿಗೆ ಕಾರಣವಾಗುತ್ತದೆ. ಈ ರೀತಿಯ ಹವ್ಯಾಸಗಳಿಂದ ಬೆನ್ನುಮೂಳೆ ಸಂಕುಚಿತಗೊಳ್ಳುತ್ತದೆ. ಬೆನ್ನಿನ ಮೇಲೆ ಒತ್ತಡ ಹೆಚ್ಚಾಗಿ, ಬೆನ್ನಿನ ಸ್ನಾಯುಗಳು ದುರ್ಬಲವಾಗುತ್ತವೆ. ಐಟಿ ಕಂಪನಿಗಳ ಉದ್ಯೋಗಿಗಳಲ್ಲಿ ಬೆನ್ನುನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಏಕೆಂದರೆ, ಅವರು ಹೆಚ್ಚಿನ ಸಮಯ ಕಂಪ್ಯೂಟರ್‌ ಮುಂದೆಯೇ ಕಳೆಯುತ್ತಾರೆ.

    ಬೆನ್ನುನೋವು ಉಪಶಮನಕ್ಕೆ ಹಲವಾರು ಪರಿಹಾರಗಳಿವೆ. ನೈಸರ್ಗಿಕವಾಗಿ ಪರಿಹಾರ ಬೇಕೆನ್ನುವವರು ಕೆಲವು ಯೋಗಾಸನಗಳನ್ನು ಮಾಡುವುದು ಒಳಿತು. ಇಲ್ಲಿ ತಿಳಿಸುವ ಐದು ಯೋಗಾಸನಗಳನ್ನು (Yogasana) ಪ್ರತಿ ನಿತ್ಯ ಅಭ್ಯಾಸ ಮಾಡಿದರೆ, ಬೆನ್ನುನೋವಿಗೆ ಪರಿಹಾರ ಸಿಗಲಿದೆ. ಇದನ್ನೂ ಓದಿ: ದೋಹಾ ಡೈಮಂಡ್ ಲೀಗ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ

    1. ಸುಪ್ತ ಪಾದಂಗುಷ್ಠಾಸನ
    ಒಂದು ಕಾಲನ್ನು ಚಾಚಿ ಇನ್ನೊಂದು ಕಾಲನ್ನು ಆಧಾರವಾಗಿಟ್ಟುಕೊಂಡಾಗ, ನರಮಂಡಲವು ಶಾಂತವಾಗುತ್ತದೆ. ಬೆನ್ನುಮೂಳೆಯು ಸ್ವಲ್ಪಮಟ್ಟಿಗೆ ಕುಗ್ಗುತ್ತದೆ. ಸ್ಯಾಕ್ರಮ್ ನಿಧಾನವಾಗಿ ಮತ್ತೆ ಜೋಡಿಸಲ್ಪಡುತ್ತದೆ. ಎತ್ತಿದ ಕಾಲಿಗೆ ಆಧಾರವಾಗಿ ಯೋಗ ಪಟ್ಟಿಯನ್ನು ಬಳಸುವುದರಿಂದ ಬೆನ್ನಿನ ಮೇಲಿನ ಯಾವುದೇ ಒತ್ತಡ ಇದ್ದರೂ ಕಡಿಮೆಯಾಗುತ್ತದೆ.

    2.ವಿಪರೀತ ಕರಣಿ
    ಈ ಭಂಗಿಯು ಸೊಂಟದ ಪ್ರದೇಶದಲ್ಲಿ ಸೂಕ್ಷ್ಮವಾದ ಎಳೆತವನ್ನು ಸೃಷ್ಟಿಸುತ್ತದೆ. ಊದಿಕೊಂಡ ಅಂಗಾಂಶಗಳಿಂದ ರಕ್ತ ಚಲನೆಯಾಗುತ್ತದೆ. ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ ಸೊಂಟವು ಮೃದುವಾಗುತ್ತದೆ. ಸೊಂಟದ ಕೆಳಗೆ ಮಡಿಸಿದ ಕಂಬಳಿ ಚಿಕಿತ್ಸಕ ಲಿಫ್ಟ್ ಅನ್ನು ನೀಡಬಹುದು. ಇದನ್ನೂ ಓದಿ: 40,000 ಫ್ಯಾನ್ಸ್‌ಗಳಿಂದ ವೈಟ್ ಜೆರ್ಸಿಯಲ್ಲಿ `ಕಿಂಗ್ ಕೊಹ್ಲಿ’ಗೆ ಗೌರವ

    3.ಸಾಲಂಬ ಭುಜಂಗಾಸನ
    ದಿಂಬನ್ನು ಬಳಸಿ ಈ ಆಸನ ಮಾಡುವುದರಿಂದ ದೇಹವು ಬೆಂಬಲಿತ ಲಿಫ್ಟ್ ಅನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಇದು ಎದೆಗೂಡಿನ ಬೆನ್ನುಮೂಳೆಯನ್ನು ಜಾಗೃತಗೊಳಿಸುತ್ತದೆ. ಆಗಾಗ್ಗೆ ಬಾಗುವಿಕೆಯಿಂದ ಗಟ್ಟಿಯಾಗುತ್ತದೆ. ನೋವನ್ನು ಉಂಟುಮಾಡದೇ ಕೆಳ ಬೆನ್ನನ್ನು ಬಲಪಡಿಸುತ್ತದೆ.

    4.ಅರ್ಧ ಜಠರ ಪರಿವರ್ತನಾಸನ
    ಈ ಭಂಗಿಯಲ್ಲಿ, ಎದೆಯು ಮೇಲ್ಮುಖವಾಗಿ ಇರುವಾಗ ಮೊಣಕಾಲುಗಳು ಒಂದು ಬದಿಗೆ ಬೀಳುತ್ತವೆ. ಚಲನೆ ಕಡಿಮೆ, ಆದರೆ ಪರಿಣಾಮವು ಅಗಾಧವಾಗಿರುತ್ತದೆ. ಬೆನ್ನುಮೂಳೆಯ ಸ್ನಾಯುಗಳು ಮೃದುವಾಗುವಂತೆ ಮಾಡುತ್ತದೆ. ತಂತುಕೋಶವು ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್‌ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!

    5.ಆನಂದ ಬಾಲಾಸನ
    ಈ ಭಂಗಿಯಲ್ಲಿ ನಿಧಾನವಾಗಿ ಆಕಡೆ ಈಕಡೆ ತೂಗಾಡುವಾಗ ಬೆನ್ನು ನೆಲಕ್ಕೆ ಮಸಾಜ್ ಮಾಡಿಕೊಳ್ಳುತ್ತದೆ. ಸ್ಯಾಕ್ರೊಲಿಯಾಕ್ ಕೀಲುಗಳನ್ನು ನಿರ್ಲಕ್ಷಿಸಿ, ಅವುಗಳಿಗೆ ಬೇಕಾದ ಸ್ಥಳಾವಕಾಶ ಸಿಗುತ್ತದೆ. ಮಲಗುವಾಗ ಮಕ್ಕಳು ಸಹಜವಾಗಿ ಹಿಗ್ಗುತ್ತವೆ. ಅದೇ ರೀತಿಯ ಅನುಭವವನ್ನು ಈ ಆಸನ ನೀಡುತ್ತದೆ.

  • ಮೋದಿ ಯೋಗಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ- ಇಲ್ಲಿದೆ ಕಾರ್ಯಕ್ರಮದ ವಿವರ

    ಮೋದಿ ಯೋಗಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ- ಇಲ್ಲಿದೆ ಕಾರ್ಯಕ್ರಮದ ವಿವರ

    ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿದ್ಧತೆಗಳು ಬಿರುಸು ಪಡೆದು ಕೊಂಡಿವೆ. ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದ ಮೊದಲ ಹಂತದ ರೂಪು ರೇಷೆಗಳು ಸಿದ್ಧವಾಗಿವೆ. ಈ ಮಧ್ಯೆ ಕಾರ್ಯದಲ್ಲಿ ಪಾಲ್ಗೊಳ್ಳುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

    ಹೌದು. ಮೈಸೂರು ಅರಮನೆ ಮುಂಭಾಗ ಜೂನ್ 21 ರಂದು ಪ್ರಧಾನ ಮಂತ್ರಿಗಳು ಯೋಗ ಮಾಡಲಿದ್ದಾರೆ. ಪ್ರಧಾನಿಗಳ ಜೊತೆ 15 ಸಾವಿರ ಜನ ಯೋಗ ಮಾಡಲಿದ್ದು ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ಅಂದು ಬೆಳಗ್ಗೆ 6.30 ಕ್ಕೆ ಯೋಗ ಆರಂಭವಾಗಲಿದೆ. ಒಟ್ಟು ಮುಕ್ಕಾಲು ಗಂಟೆ 21 ಯೋಗದ ಆಸನಗಳನ್ನು ಮಾಡಲಾಗುತ್ತದೆ.

    ಪ್ರಧಾನಿಗಳು ಯೋಗ ಆರಂಭಿಸುವ ಒಂದು ಗಂಟೆ ಮುನ್ನ ಅಂದರೆ ಬೆಳಗ್ಗೆ 5.30 ರ ಒಳಗೆ ನೋಂದಣಿ ಮಾಡಿ ಕೊಂಡಿರುವ ಯೋಗಪಟುಗಳು ಅರಮನೆ ಒಳಗೆ ಬರಬೇಕು. ಸರಿಯಾಗಿ 5.30 ಕ್ಕೆ ಅರಮನೆಯ ಎಲ್ಲಾ ದ್ವಾರಗಳು ಬಂದ್ ಆಗುತ್ತವೆ. ನೋಂದಣಿಯಾದ ಪ್ರತಿಯೊಬ್ಬ ಯೋಗಪಟುವಿಗೂ ಯೋಗ ಮ್ಯಾಟ್, ಶೂ ಇಡುವ ಬಾಕ್ಸ್, ಮೊಬೈಲ್ ಇಟ್ಟುಕೊಳ್ಳಲು ಪ್ರತ್ಯೇಕ ಕವರ್ ಅನ್ನು ಕೇಂದ್ರದ ಆಯುಷ್ ಇಲಾಖೆಯೆ ನೀಡಲಿದೆ. ಅಲ್ಲದೆ ಅರಮನೆ ಆವರಣದಲ್ಲಿ ಯೋಗ ಮಾಡಲು ನೋಂದಣಿ ಮಾಡುವವರು ಕೊರೊನಾ ಎರಡನೇ ಡೋಸ್ ಕಡ್ಡಾಯವಾಗಿ ಪಡೆದಿರಬೇಕು. ಯೋಗ ದಿನಕ್ಕೂ 72 ಗಂಟೆ ಮುಂಚಿನ ಕರೋನಾ ನೆಗಟಿವ್ ರೀಪೋರ್ಟ್ ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ಒಟ್ಟು 15 ಸಾವಿರ ಜನರಲ್ಲಿ 12 ಸಾವಿರ ಸ್ಥಳೀಯರು, 1 ಸಾವಿರ ವಿವಿಧ ರಾಜ್ಯಗಳ ಪ್ರತಿನಿಧಿಗಳು, ಒಂದು ಸಾವಿರ ಆಯುಷ್ ಇಲಾಖೆ ಹಾಗೂ ಕೇಂದ್ರದ ವಿವಿಧ ಇಲಾಖೆ ಅಧಿಕಾರಿಗಳು, ಒಂದು ಸಾವಿರ ಕೇಂದ್ರ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. 12 ಸಾವಿರ ಸ್ಥಳೀಯರ ಆಯ್ಕೆ ಪ್ರಕ್ರಿಯೆ ಕೂಡ ಮುಗಿದಿದೆ. ಇದರಲ್ಲಿ ಪೌರಕಾರ್ಮಿಕರು, ಆಟೋ ಚಾಲಕರು, ತೃತೀಯ ಲಿಂಗಿಗಳು, ಯೋಗ ಒಕ್ಕೂಟಗಳಲ್ಲಿನ ಯೋಗ ಪಟುಗಳು, ರಾಜ್ಯ ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಪೊಲೀಸ್ ಇಲಾಖೆ ಹೀಗೆ ಎಲ್ಲಾ ಕಾರ್ಮಿಕ ವರ್ಗ, ಎಲ್ಲಾ ಸ್ಥರದ ಜನರನ್ನು ಸೇರಿಸಿ ಕೊಳ್ಳಲಾಗಿದೆ. ಅವರ ಕೋವಿಡ್ ಲಸಿಕಾ ವರದಿಗಳನ್ನು ಪಡೆಯಲಾಗಿದೆ. ಅವರ ಪಾಸ್ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ.

    ಅರಮನೆ ಒಳಗೆ ಒಟ್ಟು 17 ಬ್ಲಾಕ್ ಮಾಡಲಾಗುತ್ತದೆ. ಪ್ರತಿ ಬ್ಲಾಕ್ ನಲ್ಲೂ 100 ಜನ ಯೋಗ ಮಾಡಲಿದ್ದಾರೆ. ಪಾಸ್ ಗಳಲ್ಲೆ ಯಾವ ಬ್ಲಾಕ್ ಗೆ ಹೋಗಬೇಕು ಎಂಬ ಸೂಚನೆ ಇರಲಿದೆ. ಒಟ್ಟು 120 ಮೊಬೈಲ್ ಶೌಚಾಲಯದ ವ್ಯವಸ್ಥೆ ಆಗಲಿದೆ. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಕೇಂದ್ರದ ಆಯುಷ್ ಇಲಾಖೆಯೆ ಮಾಡಲಿದೆ. ಆಹ್ವಾನ ಪತ್ರಿಕೆ ಮತ್ತು ವೇದಿಕೆ ನಿರ್ಮಾಣದ ಜವಾಬ್ದಾರಿ ಮಾತ್ರ ರಾಜ್ಯ ಸರಕಾರ ನಿರ್ವಹಿಸಲಿದೆ. ಇದನ್ನೂ ಓದಿ: ಕೋವಿಡ್‌ನಿಂದ ಹಳೆಯದೆಲ್ಲಾ ಮರೆತುಹೋಗಿದೆ ಎಂದ ದಿಲ್ಲಿ ಆರೋಗ್ಯ ಸಚಿವ – ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್‌

    ಕೇಂದ್ರ ಸರಕಾರ ಕ್ವಾಲಿಟಿ ಮುಖ್ಯ ಹೊರತು ಕ್ವಾಂಟಿಟಿ ಮುಖ್ಯವಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸಿದೆ. ಹೀಗಾಗಿ ಬೇಕಾಬಿಟ್ಟಿ ಜನರನ್ನು ಸೇರಿಸದೆ ಯೋಗವನ್ನು ಕ್ರಮ ಬದ್ದವಾಗಿ ಮಾಡುವವರನ್ನೆ ಗುರುತಿಸಿ ಯೋಗ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

  • ಹಲವು ಭಂಗಿಗಳಲ್ಲಿ ಮಾಜಿ ಪ್ರಧಾನಿ ಎಚ್‍ಡಿಡಿಯಿಂದ ಯೋಗಾಸನ

    ಹಲವು ಭಂಗಿಗಳಲ್ಲಿ ಮಾಜಿ ಪ್ರಧಾನಿ ಎಚ್‍ಡಿಡಿಯಿಂದ ಯೋಗಾಸನ

    – ಮಧ್ಯಂತರ ಚುನಾವಣೆ ಬಗ್ಗೆ ಹೊಸ ಬಾಂಬ್
    – ಕಾಂಗ್ರೆಸ್ ವಿರುದ್ಧ ಎಚ್‍ಡಿಡಿ ಅಸಮಾಧಾನ

    ಬೆಂಗಳೂರು: ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಯೋಗಾಸನ ಮಾಡಿದ್ದಾರೆ. ಪದ್ಮನಾಭ ನಗರದ ನಿವಾಸದಲ್ಲಿ ಯೋಗ ಅಭ್ಯಾಸ ಮಾಡಿದ್ದು, ಯಾರ ಸಹಾಯವೂ ಇಲ್ಲದೇ ಈ ವಯಸ್ಸಿನಲ್ಲಿಯೂ ಹಲವು ಭಂಗಿಗಳಲ್ಲಿ ಯೋಗಾಸನ ಮಾಡಿದ್ದಾರೆ.

    ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ, ಯೋಗವನ್ನು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಮಾಡುತ್ತಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದಾಗ ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಅದು ಆರೋಗ್ಯಕ್ಕೆ ಒಳ್ಳೆಯದು, ಮಹಾತ್ಮ ಗಾಂಧೀಜಿಯವರು ಯೋಗದ ಮಹತ್ವ ಸಾರಿದ್ದರು. ನರೇಂದ್ರ ಮೋದಿಯವರು ಹೆಚ್ಚು ಯೋಗಕ್ಕೆ ದೇಶವಿದೇಶಗಳಲ್ಲಿ ಹೆಚ್ಚು ಪ್ರಚಾರ ಮಾಡಿದ್ದರು. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಜಕಾರಣದಲ್ಲಿ ಅನೇಕ ಏಳು ಬೀಳು ಇರುತ್ತೆ. ನನ್ನ ಜೊತೆಯಲ್ಲೇ ಇದ್ದು ಬೆಳೆದವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಆದರೆ ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ. ಮೈತ್ರಿ ಸರ್ಕಾರ ಮಾಡಲೇಬೇಕು ಅಂತ ನಂಗೇನು ಇರಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ್ದರು. ಆದರೆ ಈಗ ಸಾರ್ವತ್ರಿಕ ಚುನಾವಣೆ ನಂತರ ಹೈಕಮಾಂಡ್ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಅದು ಕಾಂಗ್ರೆಸ್ ಮುಖಂಡರ ಕೈಯಲ್ಲಿ ಇದೆ. ಜೆಡಿಎಸ್ ಜೊತೆ ಹೊರಟರೆ ಕಾಂಗ್ರೆಸ್ ಪಕ್ಷ ಹೋಗುತ್ತೆ ಅನ್ನೋ ಸಂಕಟ ಇದೆ. ಹೀಗಾಗಿ ನಮ್ಮ ಮಂತ್ರಿ ಸ್ಥಾನವನ್ನೂ ತೆಗೆದುಕೊಂಡಿದ್ದಾರೆ. ಎಲ್ಲ ಸಹಿಸಿಕೊಂಡು ಹೋಗುತ್ತಿದ್ದೇನೆ ಎಂದು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇನ್ನೂ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸಂಶಯವಿಲ್ಲ ಎಂದು ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಎಸ್‍ವೈ ಸಿಎಂ ಆಗಬಾರದು ಎಂದು ಕಾಂಗ್ರೆಸ್ ನವರು ಬಂದು ಚರ್ಚೆ ಮಾಡದೇ ಸರ್ಕಾರ ರಚನೆಗೆ ಮುಂದಾಗಿದ್ದರು. ಎಚ್‍ಡಿಕೆ ಅವರನ್ನೇ ಸಿಎಂ ಮಾಡಿ ಎಂದರು. ಈಗ ನಮ್ಮ ಒಂದು ಮಂತ್ರಿ ಸ್ಥಾನವನ್ನೂ ಕಾಂಗ್ರೆಸ್ಸಿಗೆ ಸರೆಂಡರ್ ಮಾಡಿದ್ದೀವಿ. ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ. ನಾನೇನಾದರೂ ಮಾತಾಡಿದ್ನಾ ಎಂದು ಪ್ರಶ್ನೆ ಮಾಡಿದರು.

    ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಆದರೂ ಆ ಕ್ಷೇತ್ರವನ್ನೇ ಕೊಟ್ಟಿದ್ದರು. ನಾವು ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದು ಕೇಳಿದ್ವಿ. ಆದರೆ ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ ಕೊಟ್ಟರು ಎಂದು ಕಾಂಗ್ರೆಸ್ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆಕಾಶದಲ್ಲಿ ಯೋಗ ಪ್ರದರ್ಶಿಸಿದ ವಾಯುಪಡೆಯ ಸಿಬ್ಬಂದಿ

    ಆಕಾಶದಲ್ಲಿ ಯೋಗ ಪ್ರದರ್ಶಿಸಿದ ವಾಯುಪಡೆಯ ಸಿಬ್ಬಂದಿ

    ನವದೆಹಲಿ: ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣದಲ್ಲಿಯೇ ಯೋಗಾಸಗಳನ್ನು ಮಾಡುವ ಮೂಲಕ ಜಗತ್ತಿನ ಜನರ ಗಮನ ಸೆಳೆದಿದ್ದಾರೆ.

    ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶಸದಲ್ಲಿ ಯೋಗಾಸ ಪ್ರದರ್ಶಿಸಿದ್ರು. ಅವರ ಫೋಟೋ ಕೆಳಗೆ “ಇದು ಉತ್ತಮ ಆರೋಗ್ಯ, ಸಂತೋಷ, ಸಾಮರಸ್ಯ ಮತ್ತು ಐಎಎಫ್ ಏರ್ ವಾರಿಯರ್ ಶಾಂತಿಯ ಸಂದೇಶ. ಆಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರು” ಎಂದು ಬರೆದು ಐಎಎಫ್ ಟ್ವೀಟ್ ಮಾಡಿದೆ.

    ವಿಶಾಖಪಟ್ಟಣದ ಬಂಗಾಳ ಕೊಲ್ಲಿಯಲ್ಲಿ ಪೂರ್ವ ನೌಕಾದಳದ ಕಮಾಂಡರ್ ಸಿಬ್ಬಂದಿ ಹಾಗೂ ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ (ಸಬ್ ಮೆರಿನ್) ಸಿಬ್ಬಂದಿ ಕೂಡ ವಿಶ್ವ ಯೋಗ ಭಾಗವಹಿಸಿದರು. ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ ಸಿಬ್ಬಂದಿ ಸಬ್‍ಮೆರಿನ್ ನಲ್ಲಿಯೇ ಯೋಗಾಸನ ಮಾಡಿದರು.