Tag: yoga

  • ಒಡತಿಯೊಂದಿಗೆ ಯೋಗ ಮಾಡಿದ ಕ್ಯೂಟ್ ಶ್ವಾನ – ವೀಡಿಯೋ ವೈರಲ್

    ಒಡತಿಯೊಂದಿಗೆ ಯೋಗ ಮಾಡಿದ ಕ್ಯೂಟ್ ಶ್ವಾನ – ವೀಡಿಯೋ ವೈರಲ್

    ಶ್ವಾನವೊಂದು ತನ್ನ ಒಡತಿಯೊಂದಿಗೆ ಯೋಗಾಭ್ಯಾಸ ಮಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನಗೆಲ್ಲುತ್ತಿದೆ.

    ವೀಡಿಯೋದಲ್ಲಿ ಶ್ವಾನವು ತನ್ನ ಒಡತಿ ಜೊತೆ ಯೋಗಾಸನದ ಮ್ಯಾಟ್ ಹಾಸಿಕೊಂಡು ಅವರ ಪಕ್ಕದಲ್ಲಿ ನಿಂತು ಯೋಗ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಮೇರಿ ಹಾಗೂ ಸೀಕ್ರೆಟ್ ಎಂಬವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಸರಳ ಬೆಳಗಿನ ಡೊಗಾ. ಸೀಕ್ರೆಟ್(ಶ್ವಾನ) ಕೊನೆಯದಾಗಿ ಪೋಸ್ ನೀಡಿದೆ. ಮೊದಲಿಗೆ ಒಂದು ಬದಿಯಲ್ಲಿ ಇನ್ನೊಂದಕ್ಕೆ ಸುತ್ತಿಕೊಳ್ಳದೆ ತನ್ನ ಪಂಜಗಳನ್ನು ಹಿಡಿದಿಡಲು ಕಷ್ಟಪಟ್ಟಿತು. ಆದರೆ ಸಮತೋಲನವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಇದೀಗ ಶ್ವಾನ ಕಲಿತುಕೊಂಡಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Mary & Secret (@my_aussie_gal)

    ವೀಡಿಯೋದಲ್ಲಿ 6 ವರ್ಷದ ಸೀಕ್ರೆಟ್, ಮಕ್ಕಳಂತೆ ಯೋಗಾಸನದ ಭಂಗಿಗಳನ್ನು ತೋರಿಸಿದೆ. ಕೋಬ್ರಾ ಪೋಸ್, ಡೌನ್‍ವಾರ್ಡ್ ಡಾಗ್, ಮೂರು ಕಾಲಿನಲ್ಲಿ ನಿಂತುಕೊಂಡು ಯೋಗ ಮಾಡಿದೆ. ಅಲ್ಲದೆ ಮೆಲೋಡಿ ಪಿಯಾನೋ ಮ್ಯೂಸಿಕ್‍ನನ್ನು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವುದವುದನ್ನು ಕೇಳಬಹುದಾಗಿದೆ.

    ಅಮೆರಿಕದ ಮಾಜಿ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್‍ರವರು ಕೂಡ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಯವರೆಗೂ ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ 4 ಮಿಲಿಯನ್ ವ್ಯೂಸ್ ಬಂದಿದೆ.

  • ಒಂದೇ ಶ್ವಾಸಕೋಶ ಹೊಂದಿದ್ದರೂ ಯೋಗ, ಪ್ರಾಣಾಯಾಮದಿಂದ 14 ದಿನಗಳಲ್ಲಿ ಕೊರೊನಾ ಗೆದ್ದ ನರ್ಸ್

    ಒಂದೇ ಶ್ವಾಸಕೋಶ ಹೊಂದಿದ್ದರೂ ಯೋಗ, ಪ್ರಾಣಾಯಾಮದಿಂದ 14 ದಿನಗಳಲ್ಲಿ ಕೊರೊನಾ ಗೆದ್ದ ನರ್ಸ್

    ಭೋಪಾಲ್: ಒಂದೇ ಲಂಗ್ಸ್ ಹೊಂದಿದ್ದರೂ ಕೇವಲ ಯೋಗಾಸನ ಹಾಗೂ ಉಸಿರಾಟ ಸಂಬಂಧಿ ಆಸನಗಳಿಂದ 14 ದಿನಗಳಲ್ಲಿ ಕೊರೊನಾ ಮಣಿಸಿ, ನರ್ಸ್ ಜಯಶಾಲಿಯಾಗಿದ್ದಾರೆ.

    ಮಧ್ಯಪ್ರದೇಶದ ಟಿಕಮ್‍ಘರ್ ಸಾರ್ವಜನಿಕ ಆಸ್ಪತ್ರೆಯಲ್ಲಿ 39 ವರ್ಷದ ನರ್ಸ್ ಪ್ರಫುಲ್ಲಿಟ್ ಪೀಟರ್ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಕೇವಲ ಯೋಗ ಹಾಗೂ ಉಸಿರಾಟದ ಆಸನಗಳ ಮೂಲವೇ 14 ದಿನಗಳಲ್ಲಿ ಗುಣಮುಖರಾಗಿದ್ದಾರೆ.

    ಪ್ರಫುಲ್ಲಿಟ್ ಅವರು ಟಿಕಮ್‍ಘರ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ತಕ್ಷಣ ಅವರ ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅವರ ಕೊರೊನಾ ಹೋರಾಟ ತುಂಬಾ ಕಷ್ಟವಾಗಿದೆ ಎಂದೆಲ್ಲ ಹೇಳಿದ್ದರು.

    ಗುಣಮುಖರಾದ ನಂತರ ಈ ಕುರಿತು ಮಾತನಾಡಿದ ಪೀಟರ್, ನಾನು ಹೋಮ್ ಐಸೋಲೇಶನ್‍ನಲ್ಲಿದ್ದಾಗ ಧೈರ್ಯ ಕಳೆದುಕೊಳ್ಳಲಿಲ್ಲ. ಆದರೆ ನಿಯಮಿತವಾಗಿ ಯೋಗ, ಪ್ರಾಣಾಯಾಮ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಆಸನಗಳನ್ನು ಮಾಡುತ್ತಿದ್ದೆ. ಅಲ್ಲದೆ ಬಲೂನುಗಳನ್ನು ಊದುತ್ತಿದ್ದೆ ಎಂದು ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.

    ನರ್ಸ್ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಹೀಗಾಗಿ ಅವರಿಗೆ ಗುಣಮುಖವಾಗುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ಕೇವಲ 14 ದಿನಗಳಲ್ಲಿ ಅವರು ಗುಣಮುಖರಾಗಿರುವುದು ಅಚ್ಚರಿ ಮೂಡಿಸಿದೆ.

    ನರ್ಸ್ ಚಿಕ್ಕವರಿದ್ದಾಗಲೇ ತಮ್ಮ ಒಂದು ಶ್ವಾಸಕೋಶವನ್ನು ಕಳೆದುಕೊಂಡಿದ್ದರು. ಅಪಘಾತದಿಂದಾಗಿ ಚಿಕ್ಕವರಿದ್ದಾಗಲೇ ಅವರ ಒಂದು ಲಂಗ್ಸ್ ನ್ನು ಹೊರಗೆ ತೆಗೆಯಲಾಗಿತ್ತು. 2014ರಲ್ಲಿ ಚೆಸ್ಟ್ ಎಕ್ಸ್ ರೇ ಮಾಡಿಸಿದಾಗ ಇದು ಅವರಿಗೆ ತಿಳಿದಿತ್ತು.

  • ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

    ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

    -ನಿಮಿಷಕ್ಕೆ 55 ಬಾರಿ ಆಸನ ಪೂರೈಸಿದ ಪಬ್ಲಿಕ್ ಹೀರೋ

    ಉಡುಪಿ: ಒಂದು ರಾಷ್ಟ್ರ ದಾಖಲೆ ಮಾಡೋದಕ್ಕೆ ಜೀವಮಾನದ ಸಾಧನೆ ಬೇಕಾಗುತ್ತೆ. ಉಡುಪಿಯ ತನುಶ್ರೀಗೆ ದಾಖಲೆಗಳನ್ನು ಮಾಡುವುದು ಎಂದರೆ ನೀರು ಕುಡಿದಷ್ಟೇ ಸುಲಭ. ವಯಸ್ಸು 11 ದಾಟುವ ಮೊದಲೇ ನಮ್ಮ ಪಬ್ಲಿಕ್ ಹೀರೋ ಬರೋಬ್ಬರಿ 6 ವಿಶ್ವದಾಖಲೆ ಮುಡಿಗೇರಿಸಿಕೊಂಡು ಮಿಂಚಿದ್ದಾಳೆ.

    ಉಡುಪಿಯ ಸೈಂಟ್ ಸಿಸಲೀಸ್ ಹೈಸ್ಕೂಲಿನ ಆರನೇ ತರಗತಿಯ ತನುಶ್ರೀ, ಇದೀಗ ಆರನೇ ವಿಶ್ವ ದಾಖಲೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 55 ಬಾರಿ ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡಿ ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ. ಸೈಂಟ್ ಸಿಸಲೀಸ್ ಸಭಾಂಗಣದಲ್ಲಿ ನೂರಾರು ಜನರು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರರ ನಡುವೆ ತನುಶ್ರೀ ಪಿತ್ರೋಡಿ ಸಲೀಸಾಗಿಯೇ ಈ ರೆಕಾರ್ಡ್ ಮಾಡಿದ್ದಾಳೆ.

    ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಡಾ. ಮನೀಶ್ ಬಿಷ್ಶೋಯ್ ಮಾತನಾಡಿ, ಈವರೆಗೆ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ರೆಕಾರ್ಡ್ ಅಟೆಮ್ಟ್ ಮಾಡಿಲ್ಲ. ದುಬೈ ಯುವತಿ ಫ್ರಂಟ್ ಬಾಡಿ ಸ್ಕಿಪ್ ಮಾಡಿದ್ದಳು. ಈ ಆಸನ ಬಹಳ ಕಷ್ಟಕರ. ತನುಶ್ರೀ ದೇಹದಲ್ಲಿ ಮೂಳೆ ಇಲ್ಲವೇನೋ ಎಂಬ ರೀತಿಯಲ್ಲಿ ಒಂದು ನಿಮಿಷಗಳಲ್ಲಿ 55 ಬಾರಿ ಆಸನ ಪೂರೈಸಿದ್ದಾಳೆ ಎಂದರು.

    ಆರು ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ
    ನಮ್ಮ ಪಬ್ಲಿಕ್ ಹೀರೋ ಆಗಿರುವ ತನುಶ್ರೀ, 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನ, 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೋಸಿಶನ್ ಭಂಗಿ, 2019ರಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಪೋಸ್ಚರ್ ಹಾಗೂ 2020 ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀಟರ್ ಅಂತರವನ್ನು 1.14 ಸೆಕುಂಡಿನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಳು. ಹೊಸ ದಾಖಲೆಗೆ ಕೊರೊನಾ ರಜೆಯನ್ನು ಬಳಸಿಕೊಂಡು ತನುಶ್ರೀ ಪ್ರ್ಯಾಕ್ಟೀಸ್ ಮಾಡಿದ್ದಳು.

    ತನುಶ್ರೀ ಪಿತ್ರೋಡಿ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಪ್ರ್ಯಾಕ್ಟಿಸ್ ಮಾಡಿದೆ. 50, 51 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡುತ್ತಿದ್ದೆ. ಜನರು ಹುರುದುಂಬಿಸುತ್ತಿರುವಾಗ ಜೋಷ್ ಬಂತು. ನನ್ನ ತಂದೆ ತಾಯಿಗೆ, ಶಿಕ್ಷಣ ಸಂಸ್ಥೆಗೆ ತುಂಬಾ ಥ್ಯಾಂಕ್ಸ್ ಅಂತ ಹೇಳಿದರು. ತನುಶ್ರೀ ತಂದೆ ಉದಯ್ ಮಾತನಾಡಿ, ತನುಶ್ರೀಗೆ ಯಾವೆಲ್ಲಾ ವಿಭಾಗದಲ್ಲಿ ಸಾಧನೆ ಮಾಡಬೇಕೋ ಮಾಡಲಿ. ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

    ಯೋಗ, ದಾಖಲೆಗಳ ಜೊತೆ ತನುಶ್ರೀ ಭರತನಾಟ್ಯದ ಪ್ರವೀಣೆ, ಯಕ್ಷಗಾನ ಕಲಾವಿದೆ. ಮುಂದೆ ಒಂದು ನಿಮಿಷದಲ್ಲಿ ಅತೀ ಹೆಚ್ಚು ಯೋಗ ಭಂಗಿಗಳನ್ನು ಮಾಡಿ ದಾಖಲೆ ಮಾಡುವ ಕನಸು ಇಟ್ಟುಕೊಂಡಿದ್ದಾಳೆ ತನುಶ್ರೀ.

  • ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

    ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

    ಉಡುಪಿ: ಯೋಗ ಸಾಧಕಿ, ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ, ಡ್ರಾಮ ಜೂನಿಯರ್ ಕಲಾವಿದೆ ಶ್ರಾವ್ಯ ಮರವಂತೆ ಸೇರಿದಂತೆ 36 ಸಾಧಕರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

    ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ನಾಲ್ಕು ಸಂಘಸಂಸ್ಥೆ ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ ಇಲ್ಲಿದೆ.

    ದೈವಾರಾಧನೆ: ಶ್ರೀರಂಗ ಪಾಣಾ, ಮೋಂಟು ಪಾಣರ, ಮಂಜುನಾಥ ಶೇರಿಗಾರ.
    ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್, ವಸಂತ ಪೂಜಾರಿ ಮುನಿಯಾಲು, ದಿನಕರ ಭಂಡಾರಿ ಕಣಜಾರು
    ಸಾಹಿತ್ಯ: ನವೀನ್ ಸುವರ್ಣ ಪಡ್ರೆ
    ಯಕ್ಷಗಾನ: ಸುದರ್ಶನ ಉರಾಳ, ಶಶಿಕಲಾ ಪ್ರಭು, ನಾಗೇಶ್ ಗಾಣಿಗ
    ಪತ್ರಿಕೋದ್ಯಮ: ಉದಯ ಶಂಕರ ಪಡಿಯಾರ್, ಆರ್ ಶ್ರೀಪತಿ ಹೆಗಡೆ ಹಕ್ಲಾಡಿ
    ಶೈಕ್ಷಣಿಕ: ಡಾ ಕೆ ಗೋಪಾಲಕೃಷ್ಣ ಭಟ್, ಡಾ ಸುಧಾಕರ ಶೆಟ್ಟಿ, ಡಾ ಸುಧೀರ್ ರಾಜ್ ಕೆ
    ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಹರಿಪ್ರಸಾದ್ ರೈ
    ಯೋಗ : ಶೇಖರ ಕಡ್ತಲ
    ಕಲೆ (ಕರಕುಶಲ): ಬಾಬು ಕೊರಗ
    ಕಲೆ ಕಾಷ್ಟ ಶಿಲ್ಪ: ಶ್ರೀಪತಿ ಆಚಾರ್ಯ


    ಕಲೆ, ಪೆನ್ಸಿಲ್ ಲೆಡ್ ಕಲೆ : ಸುರೇಂದ್ರ
    ಕಲೆ (ಶಿಲ್ಪಕಲೆ): ರಾಧಾ ಮಾಧವ ಶೆಣೈ
    ವೈದ್ಯಕೀಯ : ಡಾ ಎಂ ರವಿರಾಜ್ ಶೆಟ್ಟಿ
    ಸಂಗೀತ: ಪ್ರಕಾಶ್ ದೇವಾಡಿಗ, ಮಾಯಾ ಕಾಮತ್
    ನೃತ್ಯ: ವಿಧೂಷಿ ಯಶ ರಾಮಕೃಷ್ಣ, ಕಿಶೋರ್ ದೇವಾಡಿಗ
    ಸಮಾಜಸೇವೆ: ಇಮ್ತಿಯಾಝ್, ಕೂಸ ಕುಂದರ್, ಜಯಂತ್ ರಾವ್, ನಾರಾಯಣ ಮೂರ್ತಿ
    ಕ್ರೀಡೆ: ಶರತ್ ಶೆಟ್ಟಿ, ನಾಗಶ್ರೀ ಗಣೇಶ್ ಶೇರುಗಾರ
    ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ, ಕು. ಶ್ರಾವ್ಯ ಮರವಂತೆ
    ಸಂಘ ಸಂಸ್ಥೆ: ಸ್ವಚ್ಚ್ ಭಾರತ್ ಫ್ರೆಂಡ್ಸ್ ಉಡುಪಿ, ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ, ಉಡುಪಿ, ದುರ್ಗಾಪರಮೇಶ್ವರಿ ಫ್ರೇಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ವೆಂಕಟರಮಣ ಸ್ಪೋಟ್ರ್ಸ್ & ಕಲ್ಚರಲ್ಸ್ ಪಿತ್ರೋಡಿ ಉದ್ಯಾವರ.

  • ಯೋಗ ಮಾಡ್ತಿದ್ದಾಗ ಆನೆ ಮೇಲಿಂದ ಬಿದ್ದ ಬಾಬಾ ರಾಮ್‍ದೇವ್ ವೀಡಿಯೋ ವೈರಲ್

    ಯೋಗ ಮಾಡ್ತಿದ್ದಾಗ ಆನೆ ಮೇಲಿಂದ ಬಿದ್ದ ಬಾಬಾ ರಾಮ್‍ದೇವ್ ವೀಡಿಯೋ ವೈರಲ್

    ಲಕ್ನೋ: ಯೋಗ ಮಾಡುತ್ತಿರುವಾಗ ಯೋಗ ಗುರು ಬಾಬಾ ರಾಮ್‍ದೇವ್ ಆನೆಯ ಮೇಲಿಂದ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ. 22 ಸೆಕೆಂಡ್‍ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆನೆಯ ಮೇಲೆ ಬಾಬಾ ರಾಮ್‍ದೇವ್ ಯೋಗಾಸನ ಮಾಡುತ್ತಿದ್ದು, ಕೆಲವೇ ಸೆಕೆಂಡ್‍ಗಳ ಬಳಿಕ ಆನೆ ಅತ್ತಿತ್ತ ವಾಲುತ್ತದೆ. ಈ ವೇಳೆ ರಾಮ್‍ದೇವ್ ಅವರ ಬ್ಯಾಲೆನ್ಸ್ ತಪ್ಪಿದ್ದು, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆದ್ದು ಮುಂದೆ ಹೋಗಿದ್ದಾರೆ.

    ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ನೆಟ್ಟಿಗರು ಈ ಕುರಿತು ಕಮೆಂಟ್ ಮಾಡುತ್ತಿದ್ದಾರೆ. ಆನೆಗೆ ಯೋಗವನ್ನು ಸರಿಯಾಗಿ ಕಲಿಸಲಾಗಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಬೀಳುತ್ತಿದ್ದಂತೆ ಕ್ಷಣಮಾತ್ರದಲ್ಲೇ ಮೇಲೆಳಲು ಬಾಬಾ ರಾಮ್‍ದೇವ್ ರಿಂದ ಮಾತ್ರ ಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ವಾಹ್ ನಾವು ಚಿಕ್ಕವರಿದ್ದಾಗಿನ ಉತ್ಸಾಹವನ್ನು ಬಾಬಾ ರಾಮ್‍ದೇವ್ ಇನ್ನೂ ಹೊಂದಿದ್ದಾರೆ ಇನ್ನೊಬ್ಬರು ತಿಳಿಸಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಎದ್ದು ನಿಂತು ನಕ್ಕಿರುವುದು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಅಲ್ಲದೆ ಅವರು ಬಿದ್ದಿಲ್ಲ ಬದಲಿಗೆ ಜಂಪ್ ಮಾಡಿದ್ದಾರೆ ಅಂತ ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.

    ಈ ಹಿಂದೆ ಬಾಬಾ ರಾಮ್‍ದೇವ್, ಸೈಕಲ್ ಮೇಲಿಂದ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ವೇಳೆ ಸಹ ಸಾಕಷ್ಟು ಜನ ಅವರನ್ನು ಟ್ರೋಲ್ ಮಾಡಿದ್ದರು. ಬಾಬಾ ರಾಮ್‍ದೇವ್ ಅವರು ಯೋಗಾಸನ ಹಾಗೂ ಯೋಗದ ವಿವಿಧ ಭಂಗಿಗಳ ಮೂಲಕವೇ ಪ್ರಸಿದ್ಧಿ ಪಡೆದಿದ್ದು, 2002ರಿಂದ ಅವರು ದೊಡ್ಡ ಪ್ರಮಾಣದ ಯೋಗ ಕ್ಯಾಂಪ್‍ಗಳನ್ನು ಆಯೋಜಿಸುತ್ತಿದ್ದಾರೆ. ಅಲ್ಲದೆ ಟಿವಿ ವೀಕ್ಷಕರಿಗಾಗಿ ಸಹ ಯೋಗವನ್ನು ರೆಕಾರ್ಡ್ ಮಾಡುತ್ತಾರೆ.

     

  • ಸೋಂಕಿತರ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಕ್ಲಾಸ್: ಸಿಂಧನೂರಿನಲ್ಲಿ ಹೊಸ ಪ್ರಯತ್ನ

    ಸೋಂಕಿತರ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಕ್ಲಾಸ್: ಸಿಂಧನೂರಿನಲ್ಲಿ ಹೊಸ ಪ್ರಯತ್ನ

    ರಾಯಚೂರು: ಕೋವಿಡ್ ಕೇರ್ ಸೆಂಟರ್ ಅಂದ್ರೆ ಅವ್ಯವಸ್ಥೆಗಳ ಆಗರ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಆದರೆ ರಾಯಚೂರಿನ ಸಿಂಧನೂರು ನಗರದ ಕೋವಿಡ್ ಕೇರ್ ಸೆಂಟರ್ ಇದಕ್ಕೆ ಅಪವಾದ ಎಂಬಂತೆ ಉತ್ತಮ ಸೇವೆ ನೀಡುತ್ತಿದೆ. ಕೇಂದ್ರದಲ್ಲಿರುವ ಸೋಂಕಿತರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢತೆಗಾಗಿ ಪ್ರತೀ ದಿನ ಯೋಗ ತರಬೇತಿ ನೀಡಲಾಗುತ್ತಿದೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ತರಬೇತಿಗಳನ್ನ ನೀಡಿರುವ ಸಿಂಧನೂರು ಮೂಲದ ಯೋಗಗುರು ಮಲ್ಲಣ್ಣ ಸೋಂಕಿತರಿಗೆ ಯೋಗ ಕಲಿಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 72 ಜನರಿದ್ದು ಎಲ್ಲಿರಗೂ ಬೆಳಗ್ಗೆ 6:30ಕ್ಕೆ ಯೋಗ ಹೇಳಿ ಕೊಡಲಾಗುತ್ತಿದೆ.

    ತರಬೇತಿ ಜೊತೆ ಊಟ, ಸ್ವಚ್ಛತೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿರುವವರ ಮನೋರಂಜನೆಗೂ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿ ದಾಖಲಾಗಿರುವ ಸೋಂಕಿತರು ಯಾವುದೇ ಭೀತಿಯಿಲ್ಲದೆ ತಮ್ಮ ಕ್ವಾರಂಟೈನ್ ಅವಧಿ ಕಳೆಯುತ್ತಿದ್ದಾರೆ.

  • ಬೆಂಗ್ಳೂರಿಗೆ ತಲೆನೋವಾದ ಸೋಂಕಿತರ ರಿಕವರಿ ರೇಟ್ – ಯೋಗದ ಮೊರೆ ಹೋದ ಆರೋಗ್ಯ ಇಲಾಖೆ

    ಬೆಂಗ್ಳೂರಿಗೆ ತಲೆನೋವಾದ ಸೋಂಕಿತರ ರಿಕವರಿ ರೇಟ್ – ಯೋಗದ ಮೊರೆ ಹೋದ ಆರೋಗ್ಯ ಇಲಾಖೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ರಿಕವರಿ ರೇಟ್ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಗದ ಮೊರೆ ಹೋಗಿದೆ.

    ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ದಿನಕ್ಕೆ ಎರಡು ಸಾವಿರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ಸೋಂಕಿತರಿಗೆ ಬೆಡ್ ಒದಗಿಸಲು ಕಷ್ಟಪಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ನಡುವೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆನೋವಾಗಿದೆ.

    ಹೀಗಾಗಿ ಆರೋಗ್ಯ ಇಲಾಖೆ ಸೋಂಕಿತರ ರಿಕವರಿ ರೇಟ್ ಹೆಚ್ಚಿಸಲು ಹೊಸ ಪ್ಲಾನ್ ಮಾಡಿದ್ದು, ಯೋಗ ಮಂತ್ರದ ಮೊರೆ ಹೋಗಿದೆ. ಹೀಗಾಗಿ ಕೊರೊನಾ ವೈರಸ್‍ಗೆ ರಾಮಭಾಣವಾಗಿರುವ ಪ್ರಾಣಾಯಾಮವನ್ನು ಕೋವಿಡ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಮಾಡಿಸುತ್ತಿದೆ. ಈ ಮೂಲಕ ಯೋಗ ಥೆರಪಿ ಬಳಸಿ ಕೊರೊನಾ ಸೋಂಕಿತರು ಬೇಗ ಗುಣಮುಖರಾಗುವಂತೆ ಮಾಡಿ ಡಿಸ್ಚಾರ್ಜ್ ಮಾಡುವ ಹೊಸ ಐಡಿಯಾವನ್ನು ಆರೋಗ್ಯ ಇಲಾಖೆ ಮಾಡಿದೆ.

    ಈಗ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಕಡ್ಡಾಯ ಯೋಗಭ್ಯಾಸ ಮಾಡಿಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಹೀಗಾಗಿ ರವಿಶಂಕರ್ ಗುರೂಜಿ ಆಶ್ರಮದ ಕೋವಿಡ್ ಕೇರ್ ಸೆಂಟರ್ ಮತ್ತು ಆಶ್ರಮ ಸಿಸಿಸಿಯಲ್ಲೂ ಪ್ರತಿಯೊಬ್ಬ ರೋಗಿಗೂ ಕಡ್ಡಾಯ ಯೋಗಭ್ಯಾಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕೊರೊನಾ ರೋಗಿಗಳ ಒತ್ತಡ ನಿವಾರಿಸಲು ಇಲಾಖೆ ಈ ಹೊಸ ಪ್ರಯತ್ನ ಮಾಡುತ್ತಿದೆ. ಅದರಂತೆ ಸತತ ಒಂದು ಗಂಟೆಗಳ ಕಾಲ ಸೋಂಕಿತರಿಗೆ ಸಿಬ್ಬಂದಿ ಯೋಗಭ್ಯಾಸ ಮಾಡಿಸುತ್ತಿದ್ದಾರೆ.

  • ಪೊಲೀಸರಿಗೆ ಕೊರೊನಾ ಆತಂಕ- ಸಿಬ್ಬಂದಿಗೆ ಅಲೋಕ್ ಕುಮಾರ್ ಯೋಗ ಪಾಠ

    ಪೊಲೀಸರಿಗೆ ಕೊರೊನಾ ಆತಂಕ- ಸಿಬ್ಬಂದಿಗೆ ಅಲೋಕ್ ಕುಮಾರ್ ಯೋಗ ಪಾಠ

    ಬೆಂಗಳೂರು: ಮಹಾಮಾರಿ ಕೊರೊನಾ ಪೊಲೀಸರಿಗೂ ಹೆಚ್ಚು ವ್ಯಾಪಿಸುತ್ತಿದ್ದು, ಆತಂಕದಿಂದಲೇ ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಮಹಾಮಾರಿ ವಿರುದ್ಧ ಹೋರಾಡಲು ಸಹಾಯವಾಗುವಂತೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಯೋಗ, ಪ್ರಾಣಯಾಮದ ಬಗ್ಗೆ ಪಾಠ ಮಾಡಿದ್ದಾರೆ.

    ನಾಲ್ಕು ಬೆಟಾಲಿಯನ್ ಕ್ವಾರಂಟೈನ್ ಸೆಂಟರ್ ನಲ್ಲಿ ಅಲೋಕ್ ಕುಮಾರ್ ಯೋಗ ಹೇಳಿಕೊಟ್ಟಿದ್ದು, ಕಪಾಲಬಾತಿ, ಭಸ್ತ್ರಿಕ ಪ್ರಾಣಾಯಾಮ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಸ್ವತಃ ತಾವೇ ಯೋಗ, ಪ್ರಾಣಾಯಾಮ ಮಾಡಿ ತೋರಿಸುವ ಮೂಲಕ ಸಿಬ್ಬಂದಿ ಕುರಿತು ಕಾಳಜಿ ತೋರಿದ್ದಾರೆ.

    ಕ್ವಾರಂಟೈನ್ ಸೆಂಟರ್ ನಲ್ಲಿ ಇರುವವರು ಯಾರೂ ಭಯಪಡಬಾರದು, ಧೈರ್ಯವಾಗಿ ಕೊರಿನಾ ಎದುರಿಸಬೇಕು. ಯಾರೂ ಹೆದರುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದೇ ರೀತಿ ಕ್ವಾರಂಟೈನ್ ಸೆಂಟರ್‍ನಲ್ಲಿರುವ ಎಲ್ಲ ಬೆಟಾಲಿಯನ್ ಸಿಬ್ಬಂದಿ ಯೋಗ ಹಾಗೂ ಪ್ರಾಣಾಯಾಮ ಮಾಡುವಂತೆ ಸಲಹೆ ನೀಡಿದ್ದಾರೆ.

  • ಯಲವಾಳ ತೋಟದಲ್ಲಿ ಸಹಕಾರಿ, ಕೃಷಿ ಸಚಿವರಿಂದ ಯೋಗ

    ಯಲವಾಳ ತೋಟದಲ್ಲಿ ಸಹಕಾರಿ, ಕೃಷಿ ಸಚಿವರಿಂದ ಯೋಗ

    ಹಾವೇರಿ: ಕೃಷಿ ಸಚಿವರಾದ ಬಿ.ಸಿ ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸ್ವಗ್ರಾಮ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ದಿನಾಚರಣೆಯಲ್ಲಿ ಅಚರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು. ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು.

    ಯೋಗಕ್ಕೆ ತನ್ನದೇ ಆದ ಇತಿಹಾಸದ ಜೊತೆಗೂ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಯೋಗವನ್ನು ಗುರುಗಳಿಂದ ಯೋಗ ಶಾಲೆಯಲ್ಲಿ ಕಲಿಯಬಹುದು. ಕೈಬೆರಳಲ್ಲಿರುವ ಮೊಬೈಲ್‍ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‍ಗಳು ಆ್ಯಪ್‍ಗಳು ಸಹ ಲಭ್ಯ. ನಮ್ಮ ನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ ಪಡೆದೇ ಯೋಗವನ್ನು ಅನುಸರಿಸುವುದು ಉತ್ತಮ ಎಂದು ಸಚಿವರು ಸಲಹೆಯಿತ್ತರು.

  • ವಿದೇಶಿಯರಿಗೆ ನೆಲಮಂಗಲ ಆಶ್ರಮದಲ್ಲಿ ನಿತ್ಯ ಜೀವನ  – ಯೋಗ, ಭಾರತೀಯ ಸಂಸ್ಕೃತಿಯ ಪಾಠ

    ವಿದೇಶಿಯರಿಗೆ ನೆಲಮಂಗಲ ಆಶ್ರಮದಲ್ಲಿ ನಿತ್ಯ ಜೀವನ – ಯೋಗ, ಭಾರತೀಯ ಸಂಸ್ಕೃತಿಯ ಪಾಠ

    –  ಸೋಹಂ ಗುರೂಜಿಯಿಂದ ಯೋಗ ಪಾಠ

    ನೆಲಮಂಗಲ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಬೇಕಾದ ಪ್ರಜೆಗಳು ಕುದೂರು ಹೋಬಳಿಯ ಆಲದಕಟ್ಟೆ ಬಳಿ ಇರುವ ಸೋಹಂ ಆರ್ಯುಯೋಗ ಆಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ.

    ಕಳೆದ ಕೆಲವು ತಿಂಗಳಿನಿಂದ ಆಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ವಿದೇಶಿಯರು ತಮ್ಮ ದೇಶಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಈ ಮಧ್ಯೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಮಾಡಿದ ಕಾರಣ ಆಶ್ರಮದಲ್ಲೇ ಉಳಿದುಕೊಂಡಿದ್ದಾರೆ.

    ಈ ಆಶ್ರಮದಲ್ಲಿದ್ದ ವಿದೇಶಿಗರು ರಾಮನಗರ ಜಿಲ್ಲಾಡಳಿತದ ಅನುಮತಿ ಪಡೆದು ಇಲ್ಲೇ ತಂಗಿದ್ದು, ಆಶ್ರಮದ ಗುರು ಶ್ರೀ ಸೋಹಂ ಗುರೂಜಿ ಯೋಗ ಪಾಠ ಮಾಡುತ್ತಿದ್ದಾರೆ. ಮಾಗಡಿ ತಾಲೂಕಿನ ವೈದ್ಯಾಧಿಕಾರಿಗಳು ಇಲ್ಲಿಗೆ ಆಗಮಿಸಿದ ಚಿಕಿತ್ಸೆ ಹಾಗೂ ವಿದೇಶಿಗರನ್ನು ಗಮನಿಸುತ್ತಿದ್ದಾರೆ.

    ಮಂಗೋಲಿಯ, ತೈವಾನ್, ಈಜಿಪ್ಟ್, ಗ್ರೀಸ್, ಫ್ರಾನ್ಸ್, ಬ್ರೆಜಿಲ್, ಅಮೆರಿಕದಿಂದ ಆಗಮಿಸಿದ ಪ್ರವಾಸಿಗರು ಇಲ್ಲಿ ಉಳಿದು ಕೊಂಡಿದ್ದಾರೆ. ಭಾರತೀಯ ಪುರಾತನ ಆಯುರ್ವೇದ ಯೋಗ ಥೆರಪಿ ಮೂಲಕ ಚಿಕಿತ್ಸೆ ನೀಡಿ, ವಿದೇಶಿಯರೆಲ್ಲ ತಮ್ಮ ದೈನಂದಿನ ಜೀವನ ಯೋಗದ ಮೂಲಕ ಕಳೆಯುತ್ತಿದ್ದಾರೆ. ಈ ವಿದೇಶಿಗರು ಯಾವುದೇ ಸಮಸ್ಯೆ ಹಾಗೂ ರೋಗವಿಲ್ಲದೆ ಗುಣಮುಖರಾಗಿ ತೆರಳುತ್ತಿದ್ದಾರೆ.

    ಸೋಹಮ್ ಗುರೂಜಿ ಪ್ರತಿಕ್ರಿಯಿಸಿ, ಫೆಬ್ರವರಿಯಲ್ಲಿ ಹಲವು ದೇಶಗಳಿಂದ ಯೋಗ ಚಿಕಿತ್ಸೆಗೆ ಬಂದಿದ್ದರು. ಇವರು ಮರಳಿ ತಮ್ಮ ದೇಶಕ್ಕೆ ತೆರಳಬೇಕಾದಾಗ ವಿಮಾನ ಸೇವೆ ರದ್ದಾಯಿತು. ಹೀಗಾಗಿ ವಿದೇಶಕ್ಕೆ ತೆರಳದವರು ಇಲ್ಲೇ ಇರಬೇಕು. ಯಾವ ಕಡೆ ತೆರಳುವಂತಿಲ್ಲ ಎಂದು ಹೇಳಿ ಇಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಕೆಲ ದೇಶಗಳ ರಾಯಭಾರ ಕಚೇರಿಗಳು ವಿಶೇಷ ವಿಮಾನದ ಮೂಲಕ ಪ್ರಜೆಗಳನ್ನು ಕರೆಸಿಕೊಂಡಿದೆ. ಇನ್ನು ಕೆಲವರು ಇಲ್ಲೇ ಇದ್ದು ಯೋಗ ಕಲಿಯುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪಾಠವನ್ನು ಕಲಿಸಲಾಗುತ್ತಿದೆ ಎಂದು ತಿಳಿಸಿದರು.