Tag: yoga teacher

  • ಕೊಪ್ಪಳ | ಹೃದಯಾಘಾತಕ್ಕೆ ಯೋಗ ಶಿಕ್ಷಕ ಬಲಿ – ಎರಡೇ ದಿನದಲ್ಲಿ ಮೂರು ಸಾವು

    ಕೊಪ್ಪಳ | ಹೃದಯಾಘಾತಕ್ಕೆ ಯೋಗ ಶಿಕ್ಷಕ ಬಲಿ – ಎರಡೇ ದಿನದಲ್ಲಿ ಮೂರು ಸಾವು

    ಕೊಪ್ಪಳ: ಏಕಾಏಕಿ ಎದೆನೋವು ಕಾಣಿಸಿಕೊಂಡು ಯೋಗ ಶಿಕ್ಷಕರೊಬ್ಬರು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ಜಿಲ್ಲೆ ಗಂಗಾವತಿ (Gangavathi) ತಾಲೂಕಿನ ಹಿರೇಬೆನಕಲ್‌ನಲ್ಲಿ ನಡೆದಿದೆ.ಇದನ್ನೂ ಓದಿ: ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ

    ಮೃತರನ್ನು ಬಹದ್ದೂರ ಬಂಡಿ ಗ್ರಾಮದ ಶಾಂತವೀರ ಸ್ವಾಮಿ ಗಂಗಾಧರ ಮಠ (57) ಎನ್ನಲಾಗಿದ್ದು, ಹಿರೇಬೆನಕಲ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯ ಹಾಗೂ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಶುಕ್ರವಾರ ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಹುಬ್ಬಳ್ಳಿ (Hubballi) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಹೃದಯಾಘಾತದಿಂದ ಐದು ಜನ ಸಾವನ್ನಪ್ಪಿದ್ದು, ಎರಡೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

  • ನೀರಿನಲ್ಲಿ ಯೋಗ ಮಾಡುತ್ತಲೇ ಪ್ರಾಣಬಿಟ್ಟ ಯೋಗಪಟು

    ನೀರಿನಲ್ಲಿ ಯೋಗ ಮಾಡುತ್ತಲೇ ಪ್ರಾಣಬಿಟ್ಟ ಯೋಗಪಟು

    ಚಾಮರಾಜನಗರ: ಯೋಗಪಟುವೊಬ್ಬರು ನೀರಿನಲ್ಲಿ ಯೋಗ ಮಾಡುತ್ತಲೇ ಪ್ರಾಣಬಿಟ್ಟಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ನಡೆದಿದೆ.

    ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿನಾರಾಯಣ ದೇವಸ್ಥಾನ ಬಡಾವಣೆಯ ನಾಗರಾಜು (78) ಮೃತ ವ್ಯಕ್ತಿ.

    ನಾಗರಾಜು ತೀರ್ಥ ಸ್ನಾನ ಮಾಡಲೆಂದು ನದಿಗೆ ಇಳಿದಿದ್ದರು. ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ತೇಲುವ ಸ್ಥಿತಿಯಲ್ಲೇ ಇದ್ದರು. ಜೊತೆಗೆ ಬಂದಿದ್ದವರು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ.

    ಯೋಗ ಮಾಡುತ್ತಲೇ ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

  • ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್‌ | ಮರ್ಡರ್‌ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ

    ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್‌ | ಮರ್ಡರ್‌ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ

    ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಕಿಡ್ನ್ಯಾಪ್‌ (Yoga Teacher Kidnap) ಮತ್ತು ಕೊಲೆಯತ್ನ ಜೀವಂತ ಸಮಾಧಿ ಪ್ರಕರಣದಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನ ಬಂಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರು (Chikkaballapura Police) ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ. ವಿಚಾರಣೆ ವೇಳೆ 4 ಲಕ್ಷ ರೂಪಾಯಿಗೆ ಪ್ರಿಯಕರನ ಪತ್ನಿ ಬಿಂದು ಸುಪಾರಿ ನೀಡಿರೋದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

    ಸುಪಾರಿಯಂತೆ ಮೊದಲು 1 ಲಕ್ಷ ರೂ. ಫೋನ್‌ಪೇ (Phone Pay) ಮೂಲಕ ಅಡ್ವಾನ್ಸ್‌ ಆಗಿ ಪಡೆದುಕೊಂಡಿದ್ದಾರೆ. 1 ಲಕ್ಷದಲ್ಲೇ ಇಷ್ಟೆಲ್ಲಾ ಕೃತ್ಯ ನಡೆಸಿದ್ದು, ಇನ್ನೂ ಯೋಗಶಿಕ್ಷಕಿಯ ಮಾಂಗಲ್ಯ ಸರ ಚಿನ್ನಾಭರಣಗಳನ್ನ ಸಹ ಆರೋಪಿಗಳು ದೋಚಿದ್ರು. ಆದ್ರೆ ಅವುಗಳನ್ನ ಸಹ ಪೊಲೀಸರು ರಿಕವರಿ ಮಾಡಿದ್ದಾರೆ. ಮಂತ್ರಾಲಯದಲ್ಲಿದ್ದ ಆರೋಪಿಗಳನ್ನ ಎಡೆಮುರಿ ಕಟ್ಟಿ ತಂದಿದ್ರು. ಇದನ್ನೂ ಓದಿ: ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

    ಆರೋಪಿಗಳಿಗೆ ಖಾಕಿ ಪುಲ್ ಡ್ರಿಲ್:
    ಬೆಂಗಳೂರಿನ (Bengaluru) ಯೋಗ ಶಿಕ್ಷಕಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣದ 4 ಮಂದಿ ಆರೋಪಿಗಳಿಗೆ ಚಿಕ್ಕಬಳ್ಳಾಪುರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಯೋಗ ಶಿಕ್ಷಕಿ ಕಿಡ್ನಾಪ್‌ಗೆ ಸುಪಾರಿ ನೀಡಿದ್ದ ಬಿಂದು ಈಗಾಗಲೇ ಜೈಲು ಸೇರಿದ್ದಾಳೆ. ಇನ್ನೂ ಕಿಡ್ನ್ಯಾಪ್‌ ಮಾಡಿದ್ದ ಪ್ರಮುಖ ಆರೋಪಿಗಳಾದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ನಾಲ್ಕು ಮಂದಿಯನ್ನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಚಿಕ್ಕಬಳ್ಳಾಪುರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಕಿಡ್‌ನ್ಯಾಪ್‌ಗೆ 3 ತಿಂಗಳ ಹಿಂದೆಯೇ ಪ್ಲ್ಯಾನ್‌:
    5 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು ಶುಕ್ರವಾರ ಮತ್ತು ಶನಿವಾರವಾದ ಇಂದು ಆರೋಪಿಗಳ ಸ್ಥಳ ಮಹಜರು ನಡೆಸಿ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಇನ್ನೂ ವಿಚಾರಣೆ ವೇಳೆ ರೋಚಕ ಅಂಶಗಳು ಬೆಳಕಿಗೆ ಬಂದಿವೆ. ಆರೋಪಿಗಳು ಯೋಗ ಶಿಕ್ಷಕಿಯ ಕಿಡ್ನಾಪ್ ಗೆ ಮೂರು ತಿಂಗಳಿಂದಲೇ ಪ್ಲ್ಯಾನ್‌ ಮಾಡಿರೋದಾಗಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಯೋಗ ಶಿಕ್ಷಕಿ ಕಿಡ್ನ್ಯಾಪ್‌ ಕೇಸ್: ಘಟನೆ ಬಳಿಕ ಟೆಂಪಲ್ ರನ್ ನಡೆಸಿದ್ದ ಆರೋಪಿಗಳು ಅರೆಸ್ಟ್

    ಬಿಂದು ನೀಡಿದ ಸುಪಾರಿ ಮೇರೆಗೆ ಕಿಡ್ನಾಪರ್ ಸತೀಶ್ ರೆಡ್ಡಿ ತಾನು ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಕಾಲಿಗೆ ಗಾಯವಾಗಿದೆ. ಹಾಗಾಗಿ ನನಗೆ ಯೋಗ ಕಲಿತು ಕಾಲು ನೋವು ಸರಿ ಮಾಡಿಕೊಳ್ಳಬೇಕಿದೆ ಅಂತ ಸುಳ್ಳು ಹೇಳಿ ಯೋಗ ಶಿಕ್ಷಕಿಯ ಸಂಪರ್ಕ ಸಾಧಿಸಿದ್ದನಂತೆ, ದಿನೇ ದಿನೇ ಸಲುಗೆ ಹೆಚ್ಚಾಗಿ ಆಕೆಗೆ ಜಮೀನು ತೋರಿಸ್ತೀನಿ, ಗನ್ ಶೂಟಿಂಗ್ ಟ್ರೈನಿಂಗ ಕೊಡುವುದಾಗಿ ಹೇಳಿಕೊಂಡಿದ್ದನಂತೆ..ಆದೇ ರೀತಿ ಆಕೆಯನ್ನ ಪುಸಲಾಯಿಸಿ ಕಿಡ್ನಾಪ್ ಮಾಡಿದೀವಿ ಅಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇನ್ನೂ ಆರೋಪಿಗಳ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಲಿದ್ದು ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಈ ಸರ್ಕಾರ ತೆಗೆಯೋವರೆಗೆ ಮನೆಯಲ್ಲಿ ಮಲಗಲ್ಲ – ಗುಡುಗಿದ ಗೌಡರು

    ಬಿಂದು ಪತಿ ಸಂತೋಷ್ ವಿಚಾರಣೆ:
    ಯೋಗ ಶಿಕ್ಷಕಿ ಕಿಡ್ನಾಪ್‌ಗೆ ಸುಪಾರಿ ನೀಡಿದ್ದ ಬಿಂದು ಪತಿ ಸಂತೋಷ್ ಕುಮಾರ್ ನನ್ನ ಚಿಕ್ಕಬಳ್ಳಾಪುರ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಅಂದಹಾಗೆ ಯೋಗ ಶಿಕ್ಷಕಿಯ ಜೊತೆ ಸಂತೋಷ್ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದಾರೆ ಅಂತ ಬಿಂದು 4 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಸುಪಾರಿ ಮೇರೆಗೆ ಸತೀಶ್‌ ರೆಡ್ಡಿ ಆಕೆಯನ್ನ ಕಿಡ್ನಾಪ್ ಮಾಡಿದ್ದ. ಈ ಪ್ರಕರಣದಲ್ಲಿ ಸಂತೋಷ್ ಕುಮಾರ್ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಸಂತೋಷ್ ಕುಮಾರ್, ಯೋಗಿ ಶಿಕ್ಷಕಿಯ ಪತಿ ವಿಶ್ವನಾಥ್ ನಾನು ಒಂದೇ ಕಡೆ ಕೆಲಸ ಮಾಡುತ್ತಿದ್ದು ಸ್ನೇಹಿತರಾಗಿದ್ದೇವು. ವಿಶ್ವನಾಥ್‌ಗೆ ಅಪಘಾತವಾದ ಸಂದರ್ಭದಲ್ಲಿ ಆತನ ಬ್ಯಾಂಕ್ ಖಾತೆ ಪ್ರೀಝ್ ಆಗಿದ್ದ ಕಾರಣ ಆತನ ವಿಮೆ ಹಣ ನನ್ನ ಖಾತೆಗೆ ವರ್ಗಾಯಿಸಿದ್ರು.

    ಈ ಹಣ ಕೊಟ್ಟು ತೆಗೆದುಕೊಳ್ಳುವ ವಿಚಾರದಲ್ಲಿ ವಿಶ್ವನಾಥ್ ಪತ್ನಿ ಯೋಗ ಶಿಕ್ಷಕಿ ಪರಿಚಯವಾಯಿತು. ಸಲುಗೆಯಿಂದ ಇದ್ದೇವು, ಅಂತ ತಿಳಿಸಿದ್ದಾನೆ. ಆದ್ರೆ ತನ್ನ ಹೆಂಡತಿ ಹೀಗೆ ಮಾಡುತ್ತಾಳೆಂದು ಅಂದುಕೊಂಡರಲಿಲ್ಲ ಅಂತ ಪೊಲೀಸರ ಬಳಿ ಅವಲತ್ತುಕೊಂಡಿದ್ದಾನೆ.

  • ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

    ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

    ಚಿಕ್ಕಬಳ್ಳಾಪುರ: ಬೆಂಗಳೂರಿನ ಯೋಗ ಶಿಕ್ಷಕಿಯನ್ನ (Yoga Teacher) ಕಿಡ್ನ್ಯಾಪ್‌ ಮಾಡಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ ಎನ್ನುವಂತಿದೆ.

    ಹೌದು. ಬೆಂಗಳೂರಿನ (Bengaluru) ಯೋಗ ಶಿಕ್ಷಕಿಯನ್ನ ಸಂತೋಷ್ ಕುಮಾರ್ ಪತ್ನಿ ಬಿಂದು ಕೊಟ್ಟ ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಅಂಡ್ ಕಿಡ್ನಾಪರ್ಸ್ ಗ್ಯಾಂಗ್ ಆಕ್ಟೋಬರ್ 23 ರಂದು ಅಪಾರ್ಟ್ಮೆಂಟ್‌ನಿಂದ (Apartment) ಕಾರಿನಲ್ಲಿ ಕರೆದುಕೊಂಡು ಬಂದಿದ್ರು. ಪ್ರೀ ಪ್ಲಾನ್‌ನಂತೆ ಆಕೆಯನ್ನ ಕಾರಲ್ಲಿ ಇಡೀ ದಿನ ಬೆಂಗಳೂರಿನ ನಾನಾ ಕಡೆ ಸುತ್ತಾಡಿಸಿ ಕೊನೆಗೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿನ ಗೌಡನಹಳ್ಳಿ ಧನಮಿಟ್ಟೇನಹಳ್ಳಿ ಬಳಿ ಮಾರ್ಗ ಮಧ್ಯೆ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕಾರಿಂದ ಕೆಳಗೆ ಇಳಿಸಿ ಹಲ್ಲೆ ನಡೆಸಿದ್ದರು. ಆಕೆಯ ಮೈಮೇಲೆ ಇದ್ದ ಚಿನ್ನಾಭರಣ ಕಸಿದು, ಲೈಂಗಿಕ ದೌರ್ಜನ್ಯ ಮಾಡಿದ್ದರು. ಅರೆಬೆತ್ತಲೆಯಾಗಿದ್ದ ಆಕೆಯ ಕುತ್ತಿಗೆಗೆ ಚಾರ್ಜರ್ ವೈರ್‌ನಿಂದ ಬಲವಾಗಿ ಬಿಗಿದು ಉಸಿರುಗಟ್ಟಿಸಿದ್ದರು.. ಇನ್ನೇನು ಆಕೆ ಸತ್ತಳು ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆದ್ರೆ ಯೋಗ ಶಿಕ್ಷಕಿಯಾಗಿದ್ದ ಅರ್ಚನಾ ಪ್ರಾಣಾಯಾಮದ ಟೆಕ್ನಿಕ್‌ಗಳ ಮೂಲಕ ಸತ್ತವಳಂತೆ ನಾಟಕ ಮಾಡಿದ್ರು, ಕಿಡ್ನಾಪರ್ಸ್ ಎಸ್ಕೇಪ್ ಆದ ನಂತರ ಮೆಲ್ಲಗೆ ಎದ್ದು ಅಲ್ಲಿಂದ ಊರಿನತ್ತ ಬಂದಿದ್ದಾರೆ.

    ಮೊದಲೇ ಅರಬೆತ್ತಲೆಯಾಗಿದ್ದ ಆಕೆ ಮೈ ಮುಚ್ಚಿಕೊಳ್ಳಲು ಅಲ್ಲೇ ಎಲ್ಲೋ ಬಿದ್ದಿದ್ದ ಹಳೆಯ ಶರ್ಟ್ ಧರಿಸಿಕೊಂಡಿದ್ದಾಳೆ. ಇನ್ನೂ ಸೊಂಟದ ಕೆಳಭಾಗಕ್ಕೆ ಕಾಡು ಮನುಷ್ಯರಂತೆ ಸೊಪ್ಪು ಸುತ್ತಿಕೊಂಡು ದಾರಿಯುದ್ದಕ್ಕೂ ನಡೆದುಕೊಂಡೇ ಬಂದಿದ್ದು. ಕೋಳಿ ಕೂಗುವ ಶಬ್ದ ಕೇಳಿ ವೆಂಕಟೇಶ್ ಎಂಬುವವರ ಮನೆಯತ್ತ ಧಾವಿಸಿದ್ದಾರೆ. ಮುಂಜಾನೆ 5 ಗಂಟೆ ಸುಮಾರಿಗೆ ಇದ್ಯಾರಪ್ಪ ಅಂತ ಎದ್ದವರು ಶಾಕ್ ಆಗಿ ನೋಡಿ ಈಕೆಗೆ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

    ಇನ್ನೂ ಯೋಗ ಶಿಕ್ಷಕಿಯನ್ನ ಕೊಲೆ ಮಾಡಿದ್ದ ಜಾಗ ನಿರ್ಜನ ಅರಣ್ಯ ಪ್ರದೇಶವಾಗಿದ್ದು, ಕುರಚಲು ಗಿಡಗಳು ಬೆಳೆದುಕೊಂಡಿವೆ. ಎತ್ತ ನೊಡಿದರೂ ಮಳೆಯ ನೀರು ಹರಿದಿರೋ ದೊಡ್ಡ ಗುಂಡಿಗಳಿವೆ. ಆದೇ ಗುಂಡಿಯೊಳಗೆ ಈಕೆಯನ್ನ ಮುಚ್ಚಿ ಹಾಕಿದ್ದ ಕಿಡ್ನಾಪರ್ಸ್ ಆ ಗುಂಡಿ ಮೇಲೆ ಕುರಚಲು ಗಿಡಗಳ ಸೊಪ್ಪು ಸೆದೆ ಹಾಕಿ ಮುಚ್ಚಿ ಹಾಕಿದ್ದಾರೆ. ಆದ್ರೆ ಪ್ರಾಣಾಯಾಮದ ಟೆಕ್ನಿಕ್ ಮೂಲಕ ಬದುಕಿ ಬಂದಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಕೃತ್ಯಕ್ಕೂ ಮುನ್ನ ಆಕೆಯನ್ನ ಹತ್ತಿಸಿಕೊಂಡಿದ್ದ ಅಪಾರ್ಟ್ಮೆಂಟ್, ಹಾಗೂ ಕಿಡ್ನಾಪರ್ ಸತೀಶ್ ರೆಡ್ಡಿ ಆಫೀಸ್, ಸೇರಿದಂತೆ ಪ್ಲಾನ್ ಮಾಡಲು ಸೇರಿದ್ದ ಸ್ಥಳವೊಂದರಲ್ಲಿ ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ

    ಈ ಯೋಗ ಟೀಚರ್ ಅರ್ಚನಾಗೆ ಗುಂಡಿ ತೋಡಿಸಿದ್ದೇ ಈ ಬಿಂದು. ಈ ಬಿಂದುಗೆ ಅರ್ಚನಾ ತನ್ನ ಗಂಡನ ಜೊತೆ ಸಲುಗೆಯಿಂದ ಇರೋದು ಇಷ್ಟವಿರಲಿಲ್ಲ. ಗಂಡನೊಂದಿಗೆ ಈಕೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಸಿಟ್ಟಿತ್ತು. ತನ್ನ ಗಂಡನನ್ನ ತನ್ನತ್ತಲೇ ಉಳಿಸಿಕೊಳ್ಳಬೇಕು ಅಂತ ಬಿಂದು ಯೋಚನೆ ಮಾಡಿದಳು, ಅದಕ್ಕೆ ದಾರಿ ಹುಡುಕೋಕೆ ಶುರು ಮಾಡಿದ್ಳು. ಈಗಂತೂ ಯಾರಿಗೆ ಯಾವ ಡೌಟ್ ಬಂದ್ರೂ ಹುಡುಕೋದೇ ಗೂಗಲ್‌ನಲ್ಲಿ. ಅದೇ ರೀತಿ ಬಿಂದು ಕೂಡ ಈ ಅರ್ಚನಾಗೆ ಒಂದು ಗತಿ ಕಾಣಿಸಬೇಕು ಅಂದ್ರೆ ಏನ್ ಮಾಡೋದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಹೀಗೆ ಸರ್ಚ್ ಮಾಡಿದವಳಿಗೆ ಸಿಕ್ಕಿದ್ದು ಡಿಟೆಕ್ಟಿವ್ ಏಜೆನ್ಸಿ.. ಈ ಡಿಟೆಕ್ಟಿವ್ ಏಜೆನ್ಸಿಗೆ ಕಾಲ್ ಮಾಡ್ತಿದ್ದವಳಿಗೆ ಇಲ್ಲಿದ್ದಾನಲ್ಲ ಈ ಸತೀಶ್ ರೆಡ್ಡಿಯ ಕಾಂಟ್ಯಾಕ್ಟ್ ಸಿಕ್ಕಿಬಿಟ್ಟಿತ್ತು. ಡಿಟೆಕ್ಟಿವ್ ಏಜೆನ್ಸಿ ನಡೆಸುತ್ತಿದ್ದ ಸತೀಶ್ ರೆಡ್ಡಿಗೆ 4 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ.

    ಒಟ್ನಲ್ಲಿ ಕಿಡ್ನ್ಯಾಪ್‌ ಆಗಿ ಕೊಲೆಯಾಗಬೇಕಿದ್ದ ಯೋಗ ಶಿಕ್ಷಕಿ ಬದುಕಿದ್ದೇ ರೋಚಕವಾಗಿದೆ. ಸದ್ಯ ಕಿಡ್ನಾಪರ್ಸ್ ಹಾಗೂ ಸುಪಾರಿ ಕೊಟ್ಟಿದ್ದ ಕಿಲಾಡಿ ಲೇಡಿ ಜೈಲು ಸೇರಿದ್ದು, ಕಿಡ್ನಾಪ್‌ಗಾಗಿ ಕಾರು ಕಳವು ಮಾಡಿದ ತಂದಿದ್ದ ಅಪ್ರಾಪ್ತ ಬಾಲಕ ಸಹ ಕಾನೂನು ಪ್ರಕ್ರಿಯೆಗೆ ಒಳಗಾಗಿದ್ದಾನೆ. ಇದನ್ನೂ ಓದಿ: Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!

  • ಯೋಗದಿಂದ ಪರಿವರ್ತನೆ – ಅಂದು ಖೈದಿಯಾಗಿದ್ದಾತ ಈಗ ಯೋಗ ಗುರು

    ಯೋಗದಿಂದ ಪರಿವರ್ತನೆ – ಅಂದು ಖೈದಿಯಾಗಿದ್ದಾತ ಈಗ ಯೋಗ ಗುರು

    ದಾವಣಗೆರೆ: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬರು ಕಾರಾಗೃಹದಲ್ಲೇ ಯೋಗ (Yoga) ಕಲಿತು, ಈಗ ಇತರರಿಗೆ ಯೋಗ ಕಲಿಸುವಷ್ಟರ ಮಟ್ಟಕ್ಕೆ ಬೆಳೆದು ನಿಂತಿರುವ ಸ್ಪೂರ್ತಿದಾಯಕ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

    ವಿಚಾರಣಾಧೀನ ಖೈದಿಯಾಗಿದ್ದ (Prisoner) ವೇಳೆ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಎಂ ಚಂದ್ರಶೇಖರ್ ಯೋಗದಿಂದ ಪರಿವರ್ತಿತರಾಗಿದ್ದಾರೆ. ಜೈಲಿನಲ್ಲಿ 6 ವರ್ಷಗಳ ಕಾಲ ಯೋಗ ಸಾಧನೆ ಮೂಲಕ ಈಗ ಯೋಗ ಶಿಕ್ಷಕರಾಗಿ (Yoga Teacher) ಬದಲಾಗಿದ್ದಾರೆ.

    ದಾವಣಗೆರೆಯ ಬಂಬೂಬಜಾರ್ ನಿವಾಸಿ ಚಂದ್ರಶೇಖರ್ 2017ರಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದರು. ದಾವಣಗೆರೆ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾಗ ದಾವಣಗೆರೆ ಜಿಲ್ಲಾ ಒಕ್ಕೂಟದಿಂದ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಯೋಗಕ್ಕೆ ಆಕರ್ಷಿತರಾಗಿದ್ದರು. ಆ ಬಳಿಕ ಬಳ್ಳಾರಿ ಜೈಲಿನಲ್ಲೂ ಯೋಗವನ್ನು ಕಲಿತಿದ್ದಾರೆ. 6 ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಎಫೆಕ್ಟ್: ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾದ ಚಾಲಕ

    2018ರಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾಗ ಬೆಳಗ್ಗೆ 7:30 ರಿಂದ 10:30 ರವರೆಗೆ ಯೋಗ ಹಾಗೂ ಧ್ಯಾನ ಮಾಡುತ್ತಿದ್ದೆ. ಬಳ್ಳಾರಿಯ ಪಿರಮಿಡ್ ಸ್ಪಿರಿಚುವಲ್ ಸೈನ್ಸ್ ಅಕಾಡೆಮಿಯ ಪುಸ್ತಕಗಳನ್ನು ನೋಡಿ ಯೋಗವನ್ನು ಕಲಿತು ಯೋಗ ತನ್ನ ವ್ಯಕ್ತಿತ್ವವನ್ನು ರೂಪಿಸಲು ಕಾರಣವಾಯಿತು. ನಾನು ಕಲಿತಿದ್ದನ್ನು ಜಗತ್ತಿಗೆ ಕಲಿಸಬೇಕು ಎಂದು ಚಂದ್ರಶೇಖರ್ ಈಗ ಆಶಯ ವ್ಯಕ್ತಪಡಿಸಿದ್ದಾರೆ.

    ಯೋಗ ಒಬ್ಬ ಕೈದಿಯನ್ನು ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಯೋಗ ಧ್ಯಾನದಲ್ಲಿ ಪ್ರಾವಿಣ್ಯತೆ ಹೊಂದಿರುವ ಚಂದ್ರಶೇಖರ್ ನೂರಾರು ಜನರಿಗೆ ಯೋಗ ಹಾಗೂ ಧ್ಯಾನವನ್ನು ಕಲಿಸುವ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ನಗರದಲ್ಲಿ ಎನ್‌ಜಿಒಗಳು ನಡೆಸುವ ಯೋಗ ಶಿಬಿರಗಳಲ್ಲಿ ಚಂದ್ರಶೇಖರ್ ಜನರಿಗೆ ಯೋಗ ಕಲಿಸುತ್ತಾರೆ. ಇದನ್ನೂ ಓದಿ: ಉಳ್ಳಾಲ ನಿವಾಸಿಗೆ ಬರೋಬ್ಬರಿ 7,71,000 ರೂ. ವಿದ್ಯುತ್ ಬಿಲ್ – ನಿಜವಾಗಿ ನಡೆದಿದ್ದು ಏನು?

  • ಯೋಗ ಟೀಚರ್ ಈಗ ಕನ್ನಡದ ಬ್ಯುಸಿಯೆಸ್ಟ್ ನಟಿ.. ಇದು ಐಶ್ವರ್ಯ ರಾವ್ ಸಿನಿಮಾ ಜರ್ನಿಯ ನೋಟ..

    ಯೋಗ ಟೀಚರ್ ಈಗ ಕನ್ನಡದ ಬ್ಯುಸಿಯೆಸ್ಟ್ ನಟಿ.. ಇದು ಐಶ್ವರ್ಯ ರಾವ್ ಸಿನಿಮಾ ಜರ್ನಿಯ ನೋಟ..

    ಚಂದನವನದ ಅಂಗಳಕ್ಕೆ ದಿನ ಕಳೆದಂತೆ ಚೆಂದದ ನಟಿಯರು ಎಂಟ್ರಿಯಾಗುತ್ತಲೇ ಇದ್ದಾರೆ. ಕಪ್ಪು ಬಿಳಿ ಕಣ್ಣಲ್ಲಿ ಕಲರ್ ಫುಲ್ ಕನಸುಗಳನ್ನು ಹೊತ್ತು ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಾರೆ. ಇಲ್ಲಿ ಗ್ಲಾಮರ್ ಜೊತೆಗೆ ಪ್ರತಿಭೆ ಹಾಗೂ ಅದೃಷ್ಟ ಇದ್ದವರು ಮಾತ್ರ ಗಟ್ಟಿಯಾಗಿ ನೆಲೆಯೂರುತ್ತಾರೆ. ಕೊಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಗೆಲುವಿನ ಹಾದಿ ತುಳಿಯುತ್ತಾರೆ. ಇಂತಹ ನಟಿಯರ ಪೈಕಿ ಸದ್ಯ ಸ್ಯಾಂಡಲ್‍ವುಡ್ ನಲ್ಲಿ ಸಖತ್ ಸದ್ದು-ಸುದ್ದಿ ಮಾಡುತ್ತಿರುವ ನಟಿ ಐಶ್ವರ್ಯ ರಾವ್.

    ಐಶ್ವರ್ಯ ರಾವ್ ಅಪ್ಪಟ ಕನ್ನಡದ ಹುಡುಗಿ, ಮೂಲತಃ ಉಡುಪಿಯವರಾದರು ಹುಟ್ಟಿ ಬೆಳೆದಿದ್ದೆಲ್ಲವೂ ಅರಮನೆ ನಗರಿ ಮೈಸೂರಿನಲ್ಲಿ. ಅಂತರಾಷ್ಟ್ರೀಯ ನೃತ್ಯಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಐಶ್ವರ್ಯ ಡ್ಯಾನ್ಸ್ ನೋಡಿದವರು ಸಿನಿಮಾ ಒಂದಕ್ಕೆ ಅವಕಾಶ ನೀಡಿದರು. ಮೈಮ್ ರಮೇಶ್ ಬಳಿಕ ನಟನೆ ಕಲಿಯುತ್ತಿದ್ದ ಐಶ್ವರ್ಯ, ಸಿಕ್ಕ ಅವಕಾಶ ಕೈ ಚೆಲ್ಲದೆ ಬಣ್ಣ ಹಚ್ಚಲು ಒಪ್ಪಿಕೊಂಡರು. ಅಲ್ಲಿಂದ ಶುರುವಾದ ಐಶ್ವರ್ಯ ಬಣ್ಣದ ಬದುಕು ಇಂದು ಸಖತ್ ಕಲರ್ ಫುಲ್ ಆಗಿದೆ. ಒಂದರ ಹಿಂದೊಂದೆ ಅವಕಾಶಗಳು ಇವರನ್ನು ಹರಸಿ ಬರುತ್ತಿವೆ.

    ಪವನ್ ಪ್ರಸಾದ್ ನಿರ್ದೇಶನ ಬಡ್ಡಿ ಮಗನ್ ಲೈಫು ಸಿನಿಮಾದ ಮೂಲಕ ಐಶ್ವರ್ಯ ರಾವ್ ನಟಿಯಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದರು. ಮೊದಲ ನಟನೆಯಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಐಶ್ವರ್ಯಗೆ ನಟ ಬಲರಾಜ್ ವಾಡಿ ಅವರಿಂದ ಮತ್ತೊಂದು ಸಿನಿಮಾದ ಅವಕಾಶ ಒದಗಿ ಬಂತು. ಮಧುಚಂದ್ರ ನಿರ್ದೇಶನದ ಭೂಗತ ಲೋಕ ಹಂದರ ಹೊಂದಿರುವ ಸಿನಿಮಾ ರವಿ ಹಿಸ್ಟರಿಯಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದರು. ಆ ಬಳಿಕ ಹಳ್ಳಿಸೊಗಡಿನ ಕಥೆಹೊಂದಿರುವ ರಣಹೇಡಿ ಸಿನಿಮಾದಲ್ಲಿ ಕರ್ಣ ಕುಮಾರ್ ಗೆ ಜೋಡಿಯಾಗಿ ಮಿಂಚಿದರು.

    ಆ ಬಳಿಕ ಧನಂಜಯ್ ರಂಜನ್ ನಿರ್ದೇಶನ ಮೈಸೂರ್ ಡೈರೀಸ್ ಸಿನಿಮಾದಲ್ಲಿ ನಟಿಸಿದರು. ಸದ್ಯ ಮಂಜೇಶ್ ಬಾಗಾವತ್ ನಿರ್ದೇಶನದ ಕ್ರೀಡಾ ಆಧಾರಿತ ಸಹರ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ. ಇದರ ಜೊತೆಗೆ ಶಿವ ಪ್ರಭು ನಿರ್ದೇಶನದ ನಿಮ್ಮ ಕರೆ ನಿರೀಕ್ಷಣೆಯಲ್ಲಿದೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

    ಸದ್ಯ ಐಶ್ವರ್ಯ ನಟನೆಯ ಎರಡು ಮೂರು ಸಿನಿಮಾಗಳು ರಿಲೀಸ್‍ಗೆ ರೆಡಿಯಾಗಿವೆ. ಈ ನಡುವೆ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಲಿರುವ ಇಲಾಖೆ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರಂತೆ ಐಶ್ವರ್ಯ.

    ಐಶ್ವರ್ಯ ನಟನೆ ಒಂದು ಕಡೆಯಾದರೆ ಅವರು ಯೋಗ ಶಿಕ್ಷಕಿ. ಮೈಸೂರಿಗೆ ಬರುವ ವಿದೇಶಿ ಪ್ರವಾಸಿಗರಿಗೆ ಉಚಿತವಾಗಿ ಅಷ್ಟಾಂಗ ವಿನ್ಯಾಸ ಎಂಬ ಯೋಗ ಹೇಳಿಕೊಡುತ್ತಾರೆ. ಅದೇನೆ ಇರಲಿ ಇಂದು ಐಶ್ವರ್ಯ ರಾವ್ ಕನ್ನಡದ ಸಿನಿಮಾ ಲೋಕದಲ್ಲಿ ಭರವಸೆ ನಟಿಯಾಗಿ ಮಿಂಚುತ್ತಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೇ ಪಾತ್ರ ಕೊಟ್ಟರು ನಟಿಸುತ್ತೇನೆ ಎನ್ನುವ ಐಶ್ವರ್ಯ ಸ್ಟಾರ್ ಹೀರೋಗಳ ಜೊತೆ ಮಿಂಚಬೇಕು ಎಂಬ ಹಂಬಲವಿದೆ. ಪ್ರತಿಭಾನ್ವಿತೆಯಾಗಿರುವ ಐಶ್ವರ್ಯ ರಾವ್‍ಗೆ ಕಮರ್ಷಿಯಲ್ ಸಿನಿಮಾ ಸೇರಿದಂತೆ ಒಳ್ಳೊಳ್ಳೆ ಸಿನಿಮಾಗಳು ಅವರನ್ನು ಹರಸಿ ಬರಲಿ.

  • ವಿಡಿಯೋ: ತೆಂಗಿನ ಮರ ಬಿದ್ದು ದೂರದರ್ಶನದ ಮಾಜಿ ನಿರೂಪಕಿ ದುರ್ಮರಣ

    ವಿಡಿಯೋ: ತೆಂಗಿನ ಮರ ಬಿದ್ದು ದೂರದರ್ಶನದ ಮಾಜಿ ನಿರೂಪಕಿ ದುರ್ಮರಣ

    ಮುಂಬೈ: ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ತಲೆ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ದೂರದರ್ಶನದ ಮಾಜಿ ನಿರೂಪಕಿ ಹಾಗೂ ಯೋಗ ಶಿಕ್ಷಕಿ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಮುಂಬೈನ ಚೆಂಬೂರ್‍ನಲ್ಲಿ ನಡೆದಿದೆ.

    58 ವರ್ಷದ ಕಂಚನ್ ನಾಥ್ ಮೃತ ದುರ್ದೈವಿ ಮಹಿಳೆ. ಈ ಘಟನೆ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. ಕಂಚನ್ ಎಂದಿನಂತೆ ಗುರುವಾರ ಬೆಳಗ್ಗೆ ಮನೆಯ ಬಳಿ ವಾಕಿಂಗ್ ಹೋಗಿದ್ದರು. ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಲೆಯ ಮೇಲೆ ಹಠಾತ್ತನೆ ತೆಂಗಿನ ಮರವೊಂದು ಬಿದ್ದಿದೆ. ಪರಿಣಾಮ ಕಂಚನ್ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಅವರ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಕಂಚನ್ ಅವರನ್ನು ತೆಂಗಿನ ಮರದಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಹತ್ತಿರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಮುಂಬೈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಈ ಮರ ಯಾವ ಸಮಯದಲ್ಲಾದ್ರೂ ಬೀಳಬಹುದು ಎಂದು ತಿಳಿಸಿದ್ದರೂ ಕೂಡ ಮರವನ್ನು ಕಡಿಯಲು ಸೊಸೈಟಿಗೆ ಅವಕಾಶ ನೀಡಿರಲಿಲ್ಲ ಅಂತ ಕಂಚನ್ ಅವರ ಪತಿ ರಜತ್‍ನಾಥ್ ಹೇಳಿಕೆ ನೀಡಿದ್ದಾರೆ.

    ಆದ್ರೆ ಮರ ಒಳ್ಳೆಯ ಸ್ಥಿತಿಯಲ್ಲೇ ಇದ್ದಿದ್ದರಿಂದ ಅದನ್ನು ಕಡಿಯಲು ಅನುಮತಿ ನಿರಾಕರಿಸಲಾಗಿತ್ತು ಎಂದು ಸ್ಥಳೀಯ ಕಾರ್ಪೊರೇಟರ್ ಆಶಾ ಮರಾಠೆ ಹೇಳಿದ್ದಾರೆ.