Tag: Yoga Guru Ramdev

  • ಸುಪ್ರೀಂ ಚಾಟಿ ಬೆನ್ನಲ್ಲೇ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ ಕೋರಿದ ಪತಂಜಲಿ

    ಸುಪ್ರೀಂ ಚಾಟಿ ಬೆನ್ನಲ್ಲೇ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ ಕೋರಿದ ಪತಂಜಲಿ

    ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ತರಾಟೆ ಬೆನ್ನಲ್ಲೇ ಪತಂಜಲಿ (Patanjali) ಸಂಸ್ಥೆ ಪತ್ರಿಕೆಗಳಲ್ಲಿ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ (Apology) ಕೇಳಿದೆ.

    ಯೋಗ ಗುರು ಬಾಬಾ ರಾಮದೇವ್‌ (Yoga Guru Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ಅವರು, ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಮುಂದೆ ಅಂತಹ ದೋಷಗಳು ಪುನರಾವರ್ತನೆಯಾಗುವುದಿಲ್ಲ. ಇದು ನೀಡುತ್ತಿರುವ ಹೃದಯಪೂರ್ವಕ ಬದ್ಧತೆ ಎಂದು ಪ್ರಕಟಿಸಿ ಕ್ಷಮೆ ಕೋರಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಸಾವಿನ ನಂತರವೂ ಆಸ್ತಿ ಕಿತ್ತುಕೊಳ್ಳುವ ಮೂಲಕ ಕಾಂಗ್ರೆಸ್‌ ಲೂಟಿಗೆ ಇಳಿದಿದೆ: ನರೇಂದ್ರ ಮೋದಿ

    ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಹಿಂದೆ ಪತ್ರಿಕೆಗಳಲ್ಲಿ ಕ್ಷಮೆ ಕೇಳಬೇಕೆಂದು ಸೂಚಿಸಿತ್ತು. ಆದರೆ ಪತಂಜಲಿ ಸಂಸ್ಥೆ ಸಣ್ಣ ಗಾತ್ರದ ಜಾಹೀರಾತು ನೀಡಿ ಕ್ಷಮೆ ಕೇಳಿತ್ತು. ಇದಕ್ಕೆ ಸಿಟ್ಟಾದ ಕೋರ್ಟ್‌ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೋ ಅದೇ ಗಾತ್ರದಲ್ಲಿ ಕ್ಷಮೆ ಕೇಳುವಂತೆ ಆದೇಶಿಸಿತ್ತು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಪ್ರಜ್ಞೆ ತಪ್ಪಿದ ನಿತಿನ್ ಗಡ್ಕರಿ

    ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯುತ್ತಿದ್ದು ಮುಂದಿನ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದೆ. ಅಂದು ನ್ಯಾಯಾಲಯಕ್ಕೆ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾಗಬೇಕೆಂದು ಸೂಚಿಸಿದೆ.

     

  • ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ: ಪತಂಜಲಿಯ ಸುಳ್ಳು ಜಾಹೀರಾತಿಗೆ ಸುಪ್ರೀಂ ಕಿಡಿ

    ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ: ಪತಂಜಲಿಯ ಸುಳ್ಳು ಜಾಹೀರಾತಿಗೆ ಸುಪ್ರೀಂ ಕಿಡಿ

    ನವದೆಹಲಿ: ಯೋಗ ಗುರು ರಾಮ್‌ದೇವ್ (Yoga Guru Ramdev) ಅವರ ಸಹ-ಮಾಲೀಕತ್ವದ ಪತಂಜಲಿ (Patanjali) ಆಯುರ್ವೇದ ಕಂಪನಿಯ ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ಜಾಹೀರಾತುಗಳ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಜಾಹೀರಾತಿನ ಮೂಲಕ ಇಡೀ ದೇಶವನ್ನು ದಾರಿ ತಪ್ಪಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ. ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: 58ನೇ ವಯಸ್ಸಿಗೆ ಸಿಧು ಮೂಸೆವಾಲಾ ತಾಯಿ ಗರ್ಭಿಣಿ

    ತಕ್ಷಣವೇ ಜಾರಿಗೆ ಬರುವಂತೆ ತಪ್ಪು ಮಾಹಿತಿ ನೀಡುವ ತನ್ನ ಔಷಧಿಗಳ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಜಾಹೀರಾತುಗಳನ್ನು ನಿಲ್ಲಿಸುವಂತೆ ಪೀಠವು ಕಂಪನಿಗೆ ನಿರ್ದೇಶನ ನೀಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಪತಂಜಲಿ ಆಯುರ್ವೇದ ಕಂಪನಿ ತನ್ನ ಔಷಧಗಳ ಬಗ್ಗೆ ಜಾಹೀರಾತುಗಳ ವಿಚಾರವಾಗಿ ಎಚ್ಚರಿಕೆ ನೀಡಿತ್ತು.

    ಈ ಗುರು ಸ್ವಾಮಿ ರಾಮದೇವ್ ಬಾಬಾಗೆ ಏನಾಯಿತು? ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ಆದರೆ, ಅವರು ಇತರ ವ್ಯವಸ್ಥೆಯನ್ನು ಟೀಕಿಸಬಾರದು. ಎಲ್ಲಾ ವೈದ್ಯರ ಮೇಲೆ ಆರೋಪ ಮಾಡುವ ರೀತಿಯ ಜಾಹೀರಾತುಗಳನ್ನು ನೀವು ನೋಡುತ್ತೀರಿ ಎಂದು ಹಿಂದಿನ ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠ ಹೇಳಿತ್ತು. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

    ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರನ್ನು ದಾರಿತಪ್ಪಿಸಲು ಅವಹೇಳನಕಾರಿ ಹೇಳಿಕೆಗಳನ್ನು ನೀಡಿವೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗಂಭೀರ ಆರೋಪ ಮಾಡಿತ್ತು.