Tag: yoga centre

  • ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ – ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್

    ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ – ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್

    ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಯೋಗ ಗುರು ನಿರಂಜನಾ ಮೂರ್ತಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು (RajaRajeshwari Police) ಬಂಧಿಸಿದ್ದಾರೆ.

    ಬಂಧಿತ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರವೊಂದನ್ನು (Yoga Centre) ನಡೆಸುತ್ತಿದ್ದ. ಈ ಯೋಗ ಸೆಂಟರ್‌ಗೆ ಓರ್ವ ಅಪ್ರಾಪ್ತ ಬಾಲಕಿ ಬರುತ್ತಿದ್ದಳು. ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು, ನಿನ್ನ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರ್ಕಾರಿ ಕೆಲಸವೂ ಸಿಗಬಹುದು ಎಂದು ನಂಬಿಸಿ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ; ಕಾಂಗ್ರೆಸ್‌ ಶಾಸಕ ರಾಜೇಗೌಡ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

    ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರಿಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಯೋಗ ತರಬೇತಿ ವೇಳೆ ಕೈ, ಕಾಲುಗಳನ್ನು ತಿರುಚಿ ಕೇರಳದಲ್ಲಿ ಬೆಂಗ್ಳೂರು ಯುವತಿ ಮೇಲೆ ಹಲ್ಲೆ!

    ಯೋಗ ತರಬೇತಿ ವೇಳೆ ಕೈ, ಕಾಲುಗಳನ್ನು ತಿರುಚಿ ಕೇರಳದಲ್ಲಿ ಬೆಂಗ್ಳೂರು ಯುವತಿ ಮೇಲೆ ಹಲ್ಲೆ!

    ಬೆಂಗಳೂರು: ಕೇರಳದ ಎರ್ನಾಕುಲಂನಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬರಿಗೆ ಹಲ್ಲೆ ಮಾಡಿ ಧಮ್ಕಿ ಹಾಕಿರೋ ಘಟನೆ ನಡೆದಿದೆ.

    ಕೇರಳದ ಶಿವಶಕ್ತಿ ಯೋಗ ವಿದ್ಯಾಕೇಂದ್ರದಲ್ಲಿ ಬೆಂಗಳೂರು ಮೂಲದ ವಂದನಾ ಎಂಬ ಯುವತಿ ಮೇಲೆ ಈ ಹಲ್ಲೆ ನಡೆದಿದೆ.

    ಯೋಗ ತರಬೇತಿ ವೇಳೆ ಆಕೆಯ ಕೈ ಕಾಲುಗಳನ್ನು ತಿರುಚಿ ಹಿಂಸೆ ಮಾಡಿ, ಹಲ್ಲೆ ಮಾಡಲಾಗಿದೆ. ನೀನು ಪ್ರೀತಿ ಮಾಡೋ ಕ್ರಿಶ್ಚಿಯನ್ ಹುಡುಗನನ್ನು ಮರೆಯಬೇಕು. ಆತನನ್ನು ಮದುವೆ ಆಗಬಾರದು. ಬದಲಾಗಿ ಹಿಂದೂ ಹುಡುಗನನ್ನು ಮದುವೆ ಆಗಬೇಕು. ಇಲ್ಲದಿದ್ರೆ ಪರಿಣಾಮ ನೆಟ್ಟಗಿಲ್ಲ ಅಂತಾ ಧಮ್ಕಿ ಹಾಕಿ ಬೆದರಿಸಿದ್ದಾರೆ.

    ಕಳೆದ ಒಂದು ತಿಂಗಳ ಹಿಂದಯಷ್ಟೇ ಇಬ್ಬರು ಮಹಿಳೆಯರು ಇದೇ ಯೋಗ ಕೇಂದ್ರದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ದೂರು ನೀಡಿದ್ರು. ಇದೀಗ ಮತ್ತೆ ಇಂಥದ್ದೇ ಘಟನೆ ಮರುಕಳಿಸಿದ್ದು, ವಂದನಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಈ ಕುರಿತು ಮನೆಯವರಿಗೂ ವಿಷಯ ತಿಳಿಸಿದ್ದಾರೆ.