Tag: yiwu

  • ಸಿಗರೇಟ್‍ನಿಂದಾಗಿ ನೋಡ ನೋಡುತ್ತಲೇ ಸುಟ್ಟು ಹೋಯ್ತು ಕಾರು- ವಿಡಿಯೋ ನೋಡಿ

    ಸಿಗರೇಟ್‍ನಿಂದಾಗಿ ನೋಡ ನೋಡುತ್ತಲೇ ಸುಟ್ಟು ಹೋಯ್ತು ಕಾರು- ವಿಡಿಯೋ ನೋಡಿ

    ಬೀಜಿಂಗ್: ಟ್ರಾಫಿಕ್ ಸಿಗ್ನಲ್‍ನಿಂದಾಗಿ ನಿಂತಿದ್ದ ಕಾರು ಸಿಗರೇಟ್‍ನಿಂದಾಗಿ ಸುಟ್ಟುಹೋದ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಯೆಝೆಯಾಂಗ್ ಪ್ರಾಂತ್ಯದ ಯೆವಿಯ ವೃತ್ತ ಒಂದರಲ್ಲಿ ನಿಂತಿದ್ದ ಕೆಂಪು ಕಾರಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಸೇವನೆ ಮಾಡಿದ್ದ ಪರಿಣಾಮ ಕಾರಿಗೆ ಬೆಂಕಿ ತಗುಲಿದೆ. ಪ್ರಾರಂಭದಲ್ಲಿ ಪ್ರಯಾಣಿಕರು ಕುಳಿತ ಜಾಗದಿಂದ ಕಾಣಿಸಿಕೊಂಡ ಹೊಗೆ ನಂತರ ಇಡಿ ಕಾರನ್ನು ದಟ್ಟವಾಗಿ ಆವರಿಸಿಕೊಂಡಿದೆ.

    ಈ ವೇಳೆ ಜಾಗೃತರಾದ ಹಿಂಬದಿ ಪ್ರಯಾಣಿಕರು ಹೊರಬಂದು ಬೆಂಕಿ ಎಲ್ಲಿ ಹತ್ತಿದೆ ಎಂದು ಪರಿಶೀಲಿಸಲು ಮುಂದಾಗಿದ್ದಾರೆ. ಅವರಲ್ಲಿ ಒಬ್ಬ ಡಿಕ್ಕಿ ತೆರೆಯುತ್ತಿದ್ದಂತೆ ಅಲ್ಲಿದ್ದ ಪಟಾಕಿಗಳು ಸಿಡಿಯುತ್ತ ಹೊರ ಬಂದವು. ಕಾರಿನಲ್ಲಿ ಮತ್ತಷ್ಟು ದಟ್ಟವಾಗಿ ಹೊಗೆ ಆವರಿಕೊಂಡಿದ್ದರಿಂದ ಮುಂಬದಿ ಪ್ರಯಾಣಿಕ ಹಾಗೂ ಚಾಲಕ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳು ಸಂಭವಿಸಿಲ್ಲ.

    ಕಾರಿನಲ್ಲಿ ಸಿಗರೇಟ್ ಸೇವನೆ ಮಾಡಿದ್ದರಿಂದಲೇ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ. ಕಾರಿನ ಹಿಂಬದಿಯಲ್ಲಿದ್ದ ವಸ್ತುಗಳು ಹಾಗೂ ಆಸನಗಳು ಸುಟ್ಟಿರುವುದನ್ನು ಕಾಣಬಹುದಾಗಿದೆ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಾರು ನಡು ರಸ್ತೆಯಲ್ಲಿ ಉರಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

  • ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

    ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

    – 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು

    ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು ಸಾಗಣೆ ರೈಲು ಇಂದು ನಿರ್ಗಮಿಸಲಿದೆ. ಇಂಗ್ಲೆಂಡಿನ ಎಸ್ಸೆಕ್ಸ್‍ನಿಂದ 7500 ಮೈಲಿ(ಸುಮಾರು 12070 ಕಿ.ಮೀ) ಪ್ರಯಾಣವನ್ನು ಆರಂಭಿಸಲಿದೆ.

    ಇಂಗ್ಲೆಂಡಿನ ಸ್ಟ್ಯಾನ್‍ಫರ್ಡ್ ಲಿ ಹೋಪ್‍ನ ಡಿಪಿ ವರ್ಲ್ಡ್ ಲಂಡನ್ ಗೇಟ್‍ವೇ ರೈಲ್ ಟಮಿರ್ನಲ್‍ನಿಂದ ರೈಲು ಹೊರಡಲಿದೆ. ರೈಲಿನಲ್ಲಿರುವ 30 ಕಂಟೇನರ್‍ಗಳು ವಿಸ್ಕಿ, ತಂಪು ಪಾನೀಯ, ವಿಟಮಿನ್ಸ್ ಹಾಗೂ ಔಷಧಿ ಸೇರಿದಂತೆ ಬ್ರಿಟಿಷ್ ಸರಕುಗಳನ್ನ ಹೊತ್ತು ಸಾಗಲಿದೆ.

    ಚೀನಾದ ಝೀಜಿಯಾಂಗ್‍ನ ಪೂರ್ವ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಹೋಲ್‍ಸೇಲ್ ಮಾರುಕಟ್ಟೆಯಾದ ಯಿವು ತಲುಪಲು ಈ ರೈಲು ಸುಮಾರು 12070 ಕಿ.ಮೀ ಪ್ರಯಾಣ ಮಾಡಲಿದ್ದು, 17 ದಿನಗಳ ಬಳಿಕ ಅಲ್ಲಿಗೆ ತಲುಪಲಿದೆ.

    ಈ ರೈಲು 7 ದೇಶಗಳಾದ ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲ್ಯಾಂಡ್, ಬೆಲಾರಸ್, ರಷ್ಯಾ ಹಾಗೂ ಕಜಕಿಸ್ತಾನವನ್ನು ದಾಟಿ ಸಾಗಲಿದ್ದು, ಏಪ್ರಿಲ್ 27 ರಂದು ಚೀನಾ ತಲುಪಲಿದೆ. ಇನ್ನು ವಿರುದ್ಧ ದಿಕ್ಕಿನಿಂದ ಮೊದಲ ಸರಕು ಸಾಗಣೆ ರೈಲು ಚೀನಾದಿಂದ ಇಂಗ್ಲೆಂಡಿಗೆ 3 ತಿಂಗಳ ಹಿಂದೆ ಬಂದಿತ್ತು.

    ವಿಮಾನಕ್ಕೆ ಹೋಲಿಸಿದ್ರೆ ರೈಲಿನ ಮೂಲಕ ಸರಕು ಸಾಗಣೆಗೆ ಕಡಿಮೆ ವೆಚ್ಛ ತಗುಲುತ್ತದೆ. ಹಾಗೆ ಸಮುದ್ರ ಮಾರ್ಗಕ್ಕಿಂತ ಕಡಿಮೆ ಸಮಯದಲ್ಲಿ ರೈಲಿನಲ್ಲಿ ಸರಕು ಸಾಗಣೆ ಮಾಡಬಹುದು ಎಂದು ರೈಲಿನ ನಿರ್ವಾಹಕರು ಹೇಳಿದ್ದಾರೆ.