Tag: Yeshwanthapur

  • ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

    ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

    – ನಿರ್ವಾಹಕನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅನಾಹುತ

    ಬೆಂಗಳೂರು: ಬಿಎಂಟಿಸಿ (BMTC) ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಶವಂತಪುರ (Yeshwanthapur)ಬಳಿ ನಡೆದಿದೆ.

    ಮೃತ ಚಾಲಕನನ್ನು ಕಿರಣ್ (29) ಎಂದು ಗುರತಿಸಲಾಗಿದ್ದು, ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇದನ್ನೂ ಓದಿ: Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ

    ನೆಲಮಂಗಲದಿಂದ ಯಶವಂತಪುರ ಕಡೆಗೆ ಬರುತ್ತಿದ್ದ ಬಸ್‌ನ್ನು ಕಿರಣ್ ಚಲಾಯಿಸುತ್ತಿದ್ದರು. ಚಲಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ಅಡ್ಡಾದಿಡ್ಡಿ ನುಗುತ್ತಾ ಎದುರಾಗಿದ್ದ ಇನ್ನೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

    ಎದೆ ನೋವಿನಿಂದಾಗಿ ಚಾಲಕ ಕುಸಿದು ಬೀಳುತ್ತಿದ್ದಂತೆ, ಕಂಡಕ್ಟರ್ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದು, ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

  • ಪೊಲೀಸ್ ಠಾಣೆಗೆ ಹೋದ್ರೂ ಪ್ರಯೋಜನವಿಲ್ಲ- ಆಸ್ಪತ್ರೆಗೆ ಕರೆದೊಯ್ದರೂ ಬೆಡ್ ಇಲ್ಲ

    ಪೊಲೀಸ್ ಠಾಣೆಗೆ ಹೋದ್ರೂ ಪ್ರಯೋಜನವಿಲ್ಲ- ಆಸ್ಪತ್ರೆಗೆ ಕರೆದೊಯ್ದರೂ ಬೆಡ್ ಇಲ್ಲ

    – ಸೋಂಕಿತನ ಶೋಚನೀಯ ಸ್ಥಿತಿ

    ಬೆಂಗಳೂರು: ಬಿಬಿಎಂಪಿಯವರು ಕೊರೊನಾ ಸೋಂಕಿತನಿಗೆ ಬಿಯು ನಂಬರ್ ನೀಡಿ ಸೂಕ್ತ ಆಸ್ಪತ್ರೆ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ್ದು, ಸೋಂಕಿತ ಅಂಬುಲೆನ್ಸ್ ಇಲ್ಲದೆ ಕಾರಿನಲ್ಲೇ ಓಡಾಡಿ ಸುಸ್ತಾಗಿದ್ದಾನೆ.

    ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಸೋಂಕಿತ ವ್ಯಕ್ತಿ ಸುಸ್ತಾಗಿದ್ದು, ನಂತರ ತಮ್ಮ ಕಾರಿನಲ್ಲೇ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಬೆಡ್ ಇಲ್ಲದೆ ಸೋಂಕಿತ ಪರದಾಡಿದ್ದಾನೆ. ಬಿಯು ನಂಬರ್ ಹೇಳಿ ಬೆಡ್ ವ್ಯವಸ್ಥೆ ಮಾಡುತ್ತೇವೆ. ಬಿಯು ನಂಬರ್ ಇಲ್ಲದೆ ಬೆಡ್ ಕೊಡಲು ಆಗುವುದಿಲ್ಲ ಎಂದು ಯಶವಂತಪುರದ ಸೋಂಕಿತನಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ.

    ಪಾಸಿಟಿವ್ ಇದೆ ಎಂದು ಬಿಬಿಎಂಪಿಗೆ ಕರೆ ಮಾಡಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿಲ್ಲ. ವಿಧಿಯಿಲ್ಲದೇ ತಮ್ಮ ಕಾರ್‍ನಲ್ಲೇ ಯಶವಂತಪುರ ಪೊಲೀಸ್ ಠಾಣೆಗೆ ವ್ಯಕ್ತಿ ಹೋಗಿದ್ದ. ಆಸ್ಪತ್ರೆಗೆ ಹೋಗಿ ಅಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಪೊಲೀಸರು ಹೇಳಿ ಕಳುಹಿಸಿದ್ದಾರೆ.

    ಇತ್ತ ಆಸ್ಪತ್ರೆಯಲ್ಲಿ ಬಿಯು ನಂಬರ್ ಇಲ್ಲದೇ ಆಡ್ಮಿಟ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಸೋಂಕಿತ ಕೊನೆಗೆ ಮನೆಗೆ ವಾಪಸ್ ಹೋಗಿದ್ದಾರೆ. ಬಿಬಿಎಂಪಿಗೆ ಕರೆ ಮಾಡಿ ಬಿಯು ನಂಬರ್ ಕೇಳಿ ಸಾಕಾಗಿದೆ. ಯಾರೂ ಬಿಯು ನಂಬರ್ ನೀಡಿಲ್ಲ. ಈಗ ಪಾಸಿಟಿವ್ ಇದೇಯೋ ಇಲ್ಲವೋ ಗೊತ್ತಿಲ್ಲ ಎಂದು ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ.

    ಸೋಂಕಿತ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇದ್ದು, ಈಗ ಮನೆಯಲ್ಲೇ ಇದ್ದಾರೆ. ಹೇಗಾದರೂ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿ ಎಂದು ಅವರ ಪತ್ನಿ ಬೇಡಿಕೊಳ್ಳುತ್ತಿದ್ದಾರೆ.