Tag: yeshwant sinha

  • ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ

    ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ

    ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯಶವಂತ್ ಸಿನ್ಹಾ ಅವರಿಗೆ ಕೇಂದ್ರ ಸರ್ಕಾರ ಝೆಡ್ (Z+) ಶ್ರೇಣಿಯ ಭದ್ರತೆ ಒದಗಿಸಿದೆ.

    ಝೆಡ್ ಶ್ರೇಣಿಯ ಭದ್ರತೆ ದೇಶದಲ್ಲಿ ಹೆಚ್ಚಿನ ಅಪಾಯದ ವ್ಯಕ್ತಿಗಳಿಗೆ ನೀಡಲಾದ ಎರಡನೇ ಅತಿ ಹೆಚ್ಚು ಭದ್ರತಾ ರಕ್ಷಣೆಯಾಗಿದೆ. 84 ವರ್ಷದ ನಾಯಕ ದೇಶಾದ್ಯಂತ ಪ್ರಯಾಣಿಸಿದಾಗ ಅವರನ್ನು ಸುಮಾರು 8-10 ಪಾಳಿಯಲ್ಲಿ ಕೆಲಸ ಮಾಡುವ ಕಮಾಂಡೋಗಳು ಬೆಂಗಾವಲು ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಮಾಜಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಕಳೆದ ವರ್ಷ ಮಾರ್ಚ್ ನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು. ಇದೀಗ ರಾಷ್ಟ್ರಪತಿ ಚುನಾವಣೆಗೆ ಆಯ್ಕೆಯಾಗಿರುವ ಸಿನ್ಹಾ ಅವರು ಜೂನ್ 27ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

    ಇತ್ತ ಎನ್‍ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮುರ್ಮು ಅವರಿಗೆ ಕೂಡ ಕೇಂದ್ರ ಸರ್ಕಾರ ಈಗಾಗಲೇ ಝೆಡ್ ಶ್ರೇಣಿಯ ಭದ್ರತೆ ಒದಗಿಸಿದೆ.

    Live Tv