Tag: Yemen

  • ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ವಾಷಿಂಗ್ಟನ್‌: ಕೆಂಪು ಸಮುದ್ರದಲ್ಲಿ (Red Sea) ಯೆಮೆನ್‌ನ ಹೌತಿ ಬಂಡುಕೋರರು (Yemen’s Houthi rebels) ಭಾರತದ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್‌ (Indian-Flagged Oil Tanker) ಮೇಲೆ ಡ್ರೋನ್‌ ದಾಳಿ (Drone Attack) ನಡೆಸಿದ್ದಾರೆ ಎಂದು ಅಮೆರಿಕ (USA) ತಿಳಿಸಿದೆ.

    ಎಂ/ವಿ ಸಾಯಿಬಾಬಾ ಹೆಸರಿನ ಗ್ಯಾಬನ್‌ ಒಡೆತನದ ಹಡಗಿನ (Ship) ಮೇಲೆ ದಾಳಿ ನಡೆಸಿದ್ದು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದೆ. ಭಾರತೀಯ ಕಾಲಮಾನ ರಾತ್ರಿ 10:30ರ ವೇಳೆಗೆ ಈ ದಾಳಿ ಸಂಭವಿಸಿದೆ. ಭಾರತೀಯ ಹಡಗಿನ ಮೇಲೆ ದಾಳಿ ನಡೆದ ಬಳಿಕ ಮತ್ತೊಂದು ಹಡಗಿನ ಮೇಲೆ ಈ ದಾಳಿ ನಡೆದಿದೆ.

    ಶನಿವಾರ ಎರಡು ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿದೆ. ನಾರ್ವೇ ಧ್ವಜದ ಹೊಂದಿದ್ದ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಆದರೆ ಈ ಹಡಗು ಸ್ವಲ್ಪದರಲ್ಲೇ ಪಾರಾಗಿದೆ ಎಂದು ಅಮೆರಿಕ ತಿಳಿಸಿದೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋನ್‌  ದಾಳಿ

    ಹೌತಿ ಬಂಡುಕೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಹಮಾಸ್‌ ವಿರುದ್ಧ ಇಸ್ರೇಲ್‌ ಯುದ್ಧ ಸಾರಿದ್ದನ್ನು ಖಂಡಿಸಿ ಹೌತಿ ಬಂಡುಕೋರರು ಈಗ ಕೆಂಪು ಸಮುದ್ರದ ಮೂಲಕ ಹೋಗುವ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ.

    ಕೆಂಪು ಸಮುದ್ರದಲ್ಲಿ ಪದೇ ಪದೇ ದಾಳಿಯಾಗುತ್ತಿರುವ ಕಾರಣ ಪ್ರಮುಖ ಹಡಗು ಕಂಪನಿಗಳು ಮಾರ್ಗವನ್ನು ಬದಲಾಯಿಸಿದ್ದು ದಕ್ಷಿಣ ಆಫ್ರಿಕಾ ಮೂಲಕವಾಗಿ ಈಗ ಹಡಗುಗಳು ಸಂಚರಿಸುತ್ತಿವೆ.

     

  • ಹೆಲಿಕಾಪ್ಟರ್‌ನಿಂದ ಇಳಿದು ಗುಂಡು ಹಾರಿಸಿ ಫಿಲ್ಮಿ ಸ್ಟೈಲ್‌ ಹೈಜಾಕ್‌ – ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣದ ವಿಡಿಯೋ ರಿಲೀಸ್‌

    ಹೆಲಿಕಾಪ್ಟರ್‌ನಿಂದ ಇಳಿದು ಗುಂಡು ಹಾರಿಸಿ ಫಿಲ್ಮಿ ಸ್ಟೈಲ್‌ ಹೈಜಾಕ್‌ – ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣದ ವಿಡಿಯೋ ರಿಲೀಸ್‌

    – ಯೆಮೆನ್‌ ಬಂಡುಕೋರರಿಂದ ಸರಕು ಸಾಗಾಣೆ ಹಡಗು ಅಪಹರಣ
    – ಇಸ್ರೇಲ್‌ ದಾಳಿಗೆ ಪ್ರತೀಕಾರವಾಗಿ ಹೈಜಾಕ್‌

    ಸನಾ: ಹಡಗಿನ ಮೇಲೆ ಇಳಿದ ಹೆಲಿಕಾಪ್ಟರ್‌. ರೈಫಲ್‌ ಹಿಡಿದು ಘೋಷಣೆ ಕೂಗುತ್ತಾ ಇಳಿದ ಬಂಡುಕೋರರು. ಹಡಗಿನ ಕ್ಯಾಬಿನ್‌ ನುಗ್ಗಿ ಬೆದರಿಕೆ. ಶರಣಾದ ಹಡಗಿನ ಸಿಬ್ಬಂದಿ. ಇದು ಯಾವುದೋ ಸಿನಿಮಾದ ಕಥೆಯಲ್ಲ. ಯೆಮೆನ್‌ (Yemen) ಬಂಡುಕೋರರು ಹಡಗನ್ನುಅಪಹರಿಸಿ ಪರಿ ಇದು.

    ಭಾರತಕ್ಕೆ (India) ಬರುತ್ತಿದ್ದ ಸರಕು ಹಡಗು ಗ್ಯಾಲಕ್ಸಿ ಲೀಡರ್‌ (Galaxy Leader) ಅಪಹರಣ ಕೊನೆಯ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಬಿಡುಗಡೆ ಮಾಡಿದ್ದಾರೆ. ಟರ್ಕಿಯಿಂದ (Turkey) ಭಾರತಕ್ಕೆ ಬರುತ್ತಿದ್ದ ಹಡಗನ್ನು ಭಾನುವಾರ ಅಪಹರಣ ಮಾಡಲಾಗಿತ್ತು. ಈಗ ಹೌತಿ ಬಂಡುಕೋರರು ಎರಡು ನಿಮಿಷಗಳ ಹಡಗನ್ನು ಹೈಜಾಕ್ (Hijack) ಮಾಡುವ ಭಯಾನಕ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ಹೆಲಿಕಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ದಾಳಿ ಮಾಡಿ ಹೈಜಾಕ್‌ ಮಾಡಿದ್ದಾರೆ. ಹಡಗಿನ ಡೆಕ್‌ನಲ್ಲಿ ಲ್ಯಾಂಡ್‌ ಆದ ಹೆಲಿಕಾಪ್ಟರ್‌ನಿಂದ 10ಕ್ಕೂ ಹೆಚ್ಚು ಬಂಡುಕೋರರು ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸುತ್ತಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದಾರೆ. ಬಂಡುಕೋರರನ್ನು ನೋಡಿದ ಸಿಬ್ಬಂದಿ ಶಾಕ್‌ ಆಗಿ ಕೈಯನ್ನು ಮೇಲಕ್ಕೆ ಎತ್ತಿ ಶರಣಾಗಿದ್ದಾರೆ.  ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡುತ್ತೇವೆ ಎಂದು ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದಾರೆ.

    ಹಡಗಿನ ಹೈಜಾಕ್ ಬಳಿಕ ಇದು ಆರಂಭ ಮಾತ್ರ ಎಂದು ಎಂದು ಹೌತಿ ತಿಳಿಸಿದ್ದು, ಕೆಂಪು ಸಮುದ್ರ ಮಾರ್ಗದಲ್ಲಿ ಬರುವ ಎಲ್ಲಾ ಇಸ್ರೇಲಿ ಹಡಗುಗಳನ್ನೂ ಅಪಹರಿಸುವುದಾಗಿ ಬೆದರಿಕೆ ಹಾಕಿದೆ. ಗಾಜಾ ಮೇಲಿನ ದಾಳಿ ನಿಲ್ಲಿಸುವವರೆಗೂ ಮತ್ತಷ್ಟು ಕಡಲ ದಾಳಿಗಳನ್ನು ನಡೆಸುವುದಾಗಿ ಹೌತಿ ಬಂಡುಕೋರರು ಘೋಷಣೆ ಮಾಡಿದ್ದಾರೆ.

    ಹಡಗು ಇಸ್ರೇಲಿಗೆ ಸೇರಿದ್ದು ಎಂದು ಹೌತಿ ಹೇಳಿದೆ. ಆದರೆ ಈ ಹೇಳಿಕೆಯನ್ನು ಇಸ್ರೇಲ್‌ ನಿರಾಕರಿಸಿದೆ. ಇದರಲ್ಲಿ ಇಸ್ರೇಲ್‌ ಪ್ರಜೆಗಳು ಯಾರು ಇರಲಿಲ್ಲ. ಅಪಹರಣಕ್ಕೊಳಗಾದ ಹಡಗು ತನ್ನದ್ದಲ್ಲ ಎಂದು ಇಸ್ರೇಲ್‌  ತಿಳಿಸಿದೆ.

    ಅಪಹರಣಕ್ಕೊಳಗಾದ ಹಡಗಿನ ಮೇಲೆ ಬಹಾಮಾಸ್ ಧ್ವಜವಿತ್ತು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಇದು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಇಸ್ರೇಲಿ ಉದ್ಯಮಿ ಅಬ್ರಹಾಂ “ರಾಮಿ” ಉಂಗಾರ್ ಅವರೂ ಕೂಡ ಈ ಹಡಗಿನ ಸಹ ಮಾಲೀಕರು ಎಂದು ಹೇಳಲಾಗಿದೆ. ಅಪಹರಣದ ಸಮಯದಲ್ಲಿ ಹಡಗನ್ನು ಜಪಾನಿನ ನಿಪ್ಪನ್‌ ಯೂಸೆನ್‌ ಕಂಪನಿಗೆ ಗುತ್ತಿಗೆಗೆ ನೀಡಲಾಗಿತ್ತು. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಮೇಲೆ ಹೌತಿ ಬಂಡುಕೋರರದಿಂದ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ಸದ್ಯ ಹಡಗು ಎಲ್ಲಿದೆ?
    ಹಡಗಿನ ಜೊತೆ ಸಂವಹನ ಸಂಪೂರ್ಣ ಕಡಿತಗೊಂಡಿದೆ. ಸದ್ಯ ಇದು ಯೆಮೆನ್‌ನಲ್ಲಿರುವ ಹುದೈದಾ ಬಂದರಿನಲ್ಲಿದೆ ಎಂದು ಗ್ಯಾಲಕ್ಸಿ ಲೀಡರ್‌ ನಿರ್ವಹಣೆ ಮಾಡುತ್ತಿರುವ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

     

  • ಕೇರಳದ ನರ್ಸ್‍ಗೆ ಮರಣದಂಡನೆ- ಮೇಲ್ಮನವಿ ವಜಾಗೊಳಿಸಿದ ಯೆಮೆನ್ ಕೋರ್ಟ್

    ಕೇರಳದ ನರ್ಸ್‍ಗೆ ಮರಣದಂಡನೆ- ಮೇಲ್ಮನವಿ ವಜಾಗೊಳಿಸಿದ ಯೆಮೆನ್ ಕೋರ್ಟ್

    ನವದೆಹಲಿ: ಯೆಮೆನ್ (Yemen) ಪ್ರಜೆಯ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿರುವ ಕೇರಳ (Kerala) ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಅಲ್ಲಿನ ಸುಪ್ರೀಂಕೋರ್ಟ್‍ನಿಂದ ರಿಲೀಫ್ ಸಿಕ್ಕಿಲ್ಲ.

    ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನವೆಂಬರ್ 14ರಂದು ಯೆಮೆನ್ ಸುಪ್ರೀಂಕೋರ್ಟ್ ವಜಾ ಮಾಡಿದೆ. ಹೀಗಾಗಿ ನಿಮಿಷಾ ಪ್ರಿಯಾಗೆ (Nimisha Priya) ಗಲ್ಲುಶಿಕ್ಷೆ ಆಗೋದು ಖಚಿತವಾಗಿದೆ.

    ಇತ್ತ ತಮ್ಮ ಮಗಳನ್ನು ರಕ್ಷಿಸಿಕೊಳ್ಳಲು ಯೆಮೆನ್‍ಗೆ ತೆರಳಲು ಅನುಮತಿಸುವಂತೆ ಪ್ರಿಯಾ ತಾಯಿ ದೆಹಲಿ ಹೈಕೋರ್ಟ್ (Delhi Court) ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಬಗ್ಗೆ ವಾರದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಜೀತೇಗ ಇಂಡಿಯಾ ಜೀತೇಗ – ವಿಶ್ವ ಮಹಾಸಮರಕ್ಕೆ ಮೋದಿ ಅಂಗಳ ಸಜ್ಜು, ಕೋಟ್ಯಂತರ ಅಭಿಮಾನಿಗಳ ಕಾತರ!

    2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೊ ಮಹ್ದಿ ಎಂಬ ವ್ಯಕ್ತಿಯನ್ನು ಹತ್ಯೆಗೈದು, ಆತನ ದೇಹವನ್ನು ಛಿದ್ರಗೊಳಿಸಿ, ಮೃತ ದೇಹದ ಅವಶೇಷಗಳನ್ನು ತನ್ನ ಯೆಮನ್ ನಲ್ಲಿನ ನಿವಾಸದ ನೀರಿನ ಕೊಳದಲ್ಲಿ ವಿಸರ್ಜಿಸಿದ ಆರೋಪದಲ್ಲಿ ನಿಮಿಷಾ ಪ್ರಿಯಾಳನ್ನು ಅಪರಾಧಿ ಎಂದು ಘೋಷಿಸಲಾಗಿತ್ತು.

    2015ರಿಂದ ತಲಾಲ್ ರೊಂದಿಗೆ ಯೆಮನ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಾನು, ಆತನಿಂದ ಎರಡು ವರ್ಷಗಳ ಕಾಲ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ನಿಮಿಷಾ ಪ್ರಿಯಾ ಪ್ರತಿಪಾದಿಸಿದ್ದರು. ಆತ ನನ್ನ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡು ನಾನು ಮನೆಗೆ ಮರಳಲು ಸಾಧ್ಯವಾಗದಂತೆ ಮಾಡಿದ್ದ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆಕೆ ವಾದಿಸಿದ್ದಳು. ಆತನಿಗೆ ಇಂಜೆಕ್ಷನ್ ನೀಡಿ, ಆತನನ್ನು ಪ್ರಜ್ಞಾಹೀನನ್ನಾಗಿಸಿದ ನಂತರ ಆತನಿಂದ ನನ್ನ ಪಾಸ್ ಪೋರ್ಟ್ ಅನ್ನು ವಶಪಡಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಆದರೆ ಆತ ಕುಸಿದು ಬಿದ್ದು ಮೃತಪಟ್ಟ ಎಂದೂ ಆಕೆ ವಾದಿಸಿದ್ದಳು.

  • ಕಾಲ್ತುಳಿತಕ್ಕೆ ಮಹಿಳೆ, ಮಕ್ಕಳು ಸೇರಿದಂತೆ 85 ಮಂದಿ ಸಾವು

    ಕಾಲ್ತುಳಿತಕ್ಕೆ ಮಹಿಳೆ, ಮಕ್ಕಳು ಸೇರಿದಂತೆ 85 ಮಂದಿ ಸಾವು

    ಸನಾ: ನೆರವು ನೀಡುವ ಸಮಾರಂಭದಲ್ಲಿ ನಡೆದ ಕಾಲ್ತುಳಿತದಲ್ಲಿ (Stampede) 85 ಮಂದಿ ಸಾವನ್ನಪ್ಪಿದ ಘಟನೆ ಯೆಮೆನ್‍ನಲ್ಲಿ (Yemen) ನಡೆದಿದೆ.

    ಯೆಮೆನ್ ರಾಜಧಾನಿ ಸನಾದ ಬಾಬ್ ಅಲ್-ಯೆಮೆನ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ರಂಜಾನ್ (Ramadan) ನಿಮಿತ್ತ ಶಾಲೆಯಲ್ಲಿ ಬಡಜನರಿಗೆ ನೆರವು ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಬ್ಬರಿಗೆ 5,000 ಯೆಮೆನಿ ರಿತಾಲ್ಸ್ (1,600 ರೂ), ಬಟ್ಟೆ, ಆಹಾರ ಸೇರಿ ಇನ್ನಿತರೆ ನೆರವನ್ನು ನೀಡುತ್ತಿದ್ದರು.

    ಕಾರ್ಯಕ್ರಮದಲ್ಲಿ ನೀಡಲಾದ ಸೌಲಭ್ಯವನ್ನು ಪಡೆಯಲು ಹಲವಾರು ಜನರು ಭಾಗಿಯಾಗಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತದದಲ್ಲಿ ಕನಿಷ್ಠ 85 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 322 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಜಸ್ಟ್‌ ಒಂದು ಕರೆಯಿಂದ ಟಿಕೆಟ್‌ ಕಳೆದುಕೊಂಡ ಮೊಯಿದ್ದಿನ್ ಬಾವಾ!

    ಮೃತರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. ಇನ್ನೂ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳೀಯ ಆಡಳಿತದ ಸಹಾಯವಿಲ್ಲದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ವಿತಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾನ ಮಾಡಲು ಅವಕಾಶ ನೀಡಿ – ಅನಿವಾಸಿ ಕನ್ನಡಿಗರಿಂದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ

  • ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕರೆಗೆ ಸ್ಪಂದಿಸಿದ ಸೌದಿ ದೊರೆ, 2015 ರಲ್ಲಿ ಯೆಮನ್ ಮೇಲಿನ ಬಾಂಬ್ ದಾಳಿ ನಿಲ್ಲಿಸಿದ್ದರು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಹೇಳಿದ್ದಾರೆ.

    ಆಸಿಯಾನ್ ಪ್ರವಾಸಿ ಭಾರತೀಯರ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಈ ಕುರಿತು ಮಾಹಿತಿ ನೀಡಿದರು. ಯೆಮನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಕೈಗೊಂಡಿದ್ದ ಆಪರೇಷನ್ `ರಹಾತ್’ ಗೆ ಸೌದಿ ದೊರೆ ಸಹಕಾರ ನೀಡಿದ್ದರು ಎಂದು ತಿಳಿಸಿದ್ದಾರೆ.

    ಯೆಮನ್ ನಲ್ಲಿದ್ದ 4000ಕ್ಕೂ ಹೆಚ್ಚು ಭಾರತೀಯರು ಸಂಕಷ್ಟದಲ್ಲಿ ಸಿಕ್ಕಿದ್ದರು. 2015 ಏಪ್ರಿಲ್ 1 ರಂದು ಆಪರೇಷನ್ ರಹಾತ್ ಎಂಬ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿತ್ತು.

    ಈ ವೇಳೆ ಸೌದಿ ಯೆಮನ್ ನಲ್ಲಿ ಉಗ್ರರ ವಿರುದ್ಧ ಬಾಂಬ್ ದಾಳಿ ನಡೆಸುತ್ತಿತ್ತು. ಸುಷ್ಮಾ ಅವರ ಸಲಹೆಯಂತೆ ಮೋದಿ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಅನುವಾಗುವಂತೆ ಬಾಂಬ್ ದಾಳಿ ಸ್ಥಗಿತಕ್ಕೆ ಸೌದಿ ದೊರೆಯನ್ನು ಕೋರಿದ್ದರು.

    ಈ ಮನವಿಗೆ ಪ್ರತಿಕ್ರಿಯಿಸಿದ್ದ ಸೌದಿ ದೊರೆ, ಪ್ರಧಾನಿ ಮೋದಿಯವರೊಂದಿಗಿನ ಸ್ನೇಹಕ್ಕೆ ಅವರ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಬಾಂಬ್ ದಾಳಿಯನ್ನೂ ಪೂರ್ಣ ನಿಲ್ಲಿಸಲಾಗದು. ಭಾರತೀಯರ ಸುರಕ್ಷಿತ ತೆರವಿಗಾಗಿ ಪ್ರತಿನಿತ್ಯ ಎರಡು ಘಂಟೆಗಳ ಕಾಲ ಬೆಳಗ್ಗೆ 9 ರಿಂದ 11 ರ ವರೆಗೆ ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಸುಷ್ಮಾ ಸ್ವರಾಜ್ ಘಟನೆಯನ್ನು ವಿವರಿಸಿದರು.

    ಸೌದಿ ದೊರೆಯ ಭರಸೆಯಂತೆ ಭಾರತೀಯ ಸೇನೆ 2015ರ ಏ.1ರಿಂದ 11 ದಿನಗಳ ಕಾಲ ಸೇನಾ ವಿಮಾನ ನಿಲ್ದಾಣದಿಂದ 4,800ಕ್ಕೂ ಹೆಚ್ಚು ಭಾರತೀಯರು ಮತ್ತು 1,972 ನೆರೆಹೊರೆಯ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ರಕ್ಷಿಸಿ ತವರಿಗೆ ಕರೆತಂದಿತ್ತು. ಈ ಕಾರ್ಯಾಚರಣೆಯನ್ನು ಭಾರತ ವಿದೇಶಾಂಗ ಸಲಹೆಗಾರ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಮುಂದಾಳತ್ವದಲ್ಲಿ ನಡೆಯಿತು ಎಂದು ಸುಷ್ಮಾ ಸ್ವರಾಜ್ ಹೇಳಿದರು.

  • ಐಸಿಸ್ ಉಗ್ರರಿಂದ ಕಿಡ್ನಾಪ್ ಆಗಿದ್ದ ಬೆಂಗಳೂರಿನ ಪಾದ್ರಿ 18 ತಿಂಗಳ ಬಳಿಕ ಬಿಡುಗಡೆ

    ಐಸಿಸ್ ಉಗ್ರರಿಂದ ಕಿಡ್ನಾಪ್ ಆಗಿದ್ದ ಬೆಂಗಳೂರಿನ ಪಾದ್ರಿ 18 ತಿಂಗಳ ಬಳಿಕ ಬಿಡುಗಡೆ

    ನವದೆಹಲಿ: ಯೆಮನ್ ನಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೆ ಒಳಗಾಗಾಗಿದ್ದ ಬೆಂಗಳೂರಿನ ಫಾದರ್ ಟಾಮ್ ಉಳುನ್ನಲಿಲ್ ಅವರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

    18 ತಿಂಗಳ ನಂತರ ಫಾದರ್ ಟಾಮ್ ಬಿಡುಗಡೆಯಾಗಿದ್ದು, ಸುಷ್ಮಾ ಸ್ವರಾಜ್ ಅವರು ಡಾನ್ ಬಾಸ್ಕೋ ಸಂಸ್ಥೆಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ. ಟಾಮ್ ಅವರು ಬಿಡುಗಡೆಯಾಗುತ್ತಿರುವ ವಿಚಾರ ತಿಳಿದು ಡಾನ್ ಬಾಸ್ಕೋದ ಸದಸ್ಯ ಫಾದರ್ ಅನಿಲ್ ಡೆಸ್ಸಾ ಹರ್ಷ ವ್ಯಕ್ತಪಡಿಸಿದ್ದಾರೆ.

    ಏನಿದು ಕಿಡ್ನಾಪ್ ಕೇಸ್?
    ಯೆಮನ್ ನಲ್ಲಿ ಇರುವ ಮದರ್ ತೆರೆಸಾ ಮಿಷನರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಟಾಮ್ ಅವರನ್ನು 2014 ಮಾರ್ಚ್ ತಿಂಗಳಿನಲ್ಲಿ ಐಸಿಸ್ ಉಗ್ರರು ಕಿಡ್ನಾಪ್ ಮಾಡಿದ್ದರು. ಮಾರ್ಚ್ 4ರಂದು ವೃದ್ಧಾಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 16 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ನಾಲ್ವರು ಬಂದೂಕುದಾರಿಗಳು ಅಪಹರಿಸಿದ್ದರು.