Tag: Yellow Python

  • ಬಾಲಕಿ ಹಣೆಗೆ ಮುತ್ತಿಟ್ಟ ಹೆಬ್ಬಾವು- ವಿಡಿಯೋ ವೈರಲ್

    ಬಾಲಕಿ ಹಣೆಗೆ ಮುತ್ತಿಟ್ಟ ಹೆಬ್ಬಾವು- ವಿಡಿಯೋ ವೈರಲ್

    ನವದೆಹಲಿ: ಹಳದಿ ಹೆಬ್ಬಾವೊಂದು ಬಾಲಕಿಯ ಹಣೆಗೆ ಮುತ್ತಿಟ್ಟು, ಮುದ್ದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಈ ಹೆಬ್ಬಾವು ಬಾಲಕಿಯನ್ನು ಮುದ್ದಾಡುವ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಹೆಬ್ಬಾವು ಮಾತ್ರವಲ್ಲ, ಯಾವುದೇ ಹಾವನ್ನು ಕಂಡ ತಕ್ಷಣ ಜನ ಹೌಹಾರೋದು ಸಾಮಾನ್ಯ. ನಮ್ಮ ಸುತ್ತಮುತ್ತ ಹಾವನ್ನು ನೋಡಿದ ತಕ್ಷಣ ಭಯವಾಗುತ್ತೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಹಾವು ಬಾಲಕಿಯೊಂದಿಗೆ ಆಟವಾಡುತ್ತ, ಮುದ್ದಾಡಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ.

    ಈ ಅಪರೂಪದ ಮುದ್ದಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, 12 ಮಿಲಿಯನ್(1.2 ಕೋಟಿ) ಬಾರಿ ವಿಡಿಯೋ ವೀಕ್ಷಣೆಯಾಗಿದ್ದು, 29 ಸಾವಿರ ಮಂದಿ ಲೈಕ್ ಕೊಟ್ಟಿದ್ದಾರೆ. 8 ಸಾವಿರ ಮಂದಿ ರಿಟ್ವೀಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಜುಲೈನಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಹೆಬ್ಬಾವುಗಳೊಂದಿಗೆ ಆಟವಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆಕೆ ಆರಾಮಾಗಿ ಹಾವುಗಳ ಮಧ್ಯೆ ಕೂತು ಮೊಬೈಲ್ ಬಳಸುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. 6 ದೊಡ್ಡ ಗಾತ್ರದ ಹೆಬ್ಬಾವುಗಳು ಬಾಲಕಿ ಸುತ್ತ ಸುತ್ತುಕೊಂಡಿದ್ದರು ಅವಳು ಮಾತ್ರ ಕ್ಯಾರೆ ಎನ್ನದೆ ಕೂತಿದ್ದ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದರು.