Tag: Yellow Metro

  • ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯೂಸ್ – ಇದೇ 15ಕ್ಕೆ ಟ್ರ್ಯಾಕಿಗಿಳಿಯಲಿದೆ ನಾಲ್ಕನೇ ರೈಲು

    ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯೂಸ್ – ಇದೇ 15ಕ್ಕೆ ಟ್ರ್ಯಾಕಿಗಿಳಿಯಲಿದೆ ನಾಲ್ಕನೇ ರೈಲು

    – ಇದೇ ತಿಂಗಳಾಂತ್ಯಕ್ಕೆ ಮತ್ತೊಂದು ರೈಲು ಕೂಡ ಆಗಮನ ಸಾಧ್ಯತೆ

    ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದ್ದು, ಇದೇ ಸೆ.15ಕ್ಕೆ ನಾಲ್ಕನೇ ಮೆಟ್ರೋ ಟ್ರ್ಯಾಕಿಗಿಳಿಯಲಿದೆ. ಈ ಮೂಲಕ ಪ್ರಯಾಣಿಕರು ಕಾಯುವ ಸಮಸ್ಯೆ ಕಡಿಮೆಯಾಗಲಿದೆ.

    ಯೆಲ್ಲೋ ಲೈನ್ (Yellow Line) ಮೆಟ್ರೋ ಆರಂಭವಾದರೂ ಕೂಡ ಈ ಭಾಗದ ಪ್ರಯಾಣಿಕರಿಗೆ ಸಮಸ್ಯೆ ತಪ್ಪಿರಲಿಲ್ಲ. ಕಡಿಮೆ ಸಂಖ್ಯೆಯ ಟ್ರೈನ್‌ಗಳ ಓಡಾಟದಿಂದಾಗಿ ಪ್ರಯಾಣಿಕರು ಕಾಯುವಂತಾಗಿತ್ತು. ಕಳೆದೊಂದು ತಿಂಗಳಿನಿಂದ ಕಷ್ಟನೋ, ಸುಖನೋ ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಓಡಾಟ ಮಾಡುತ್ತಿದ್ದವರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಇದನ್ನೂ ಓದಿ: ಇಂದಿನಿಂದ ಏಷ್ಯಾಕಪ್‌| ಭಾರತ – ಪಾಕ್‌ ಮೂರು ಬಾರಿ ಮುಖಾಮುಖಿ?

    ಹೌದು. ಕಳೆದ ತಿಂಗಳು ಆ.10ರಂದು ಮಾರ್ಗ ಓಪನ್ ಆದರೂ, ಈ ಭಾಗದ ಪ್ರಯಾಣಿಕರು ಉಳಿದ ಮಾರ್ಗದ ಪ್ರಯಾಣಿಕರಂತೆ ಪೂರ್ಣಪ್ರಮಾಣದಲ್ಲಿ ಸಂಚಾರ ಮಾಡೋಕೆ ಸಾಧ್ಯ ಆಗಿರಲಿಲ್ಲ. ಒಂದು ಟ್ರೈನ್‌ನಿಂದ ಮತ್ತೊಂದು ಟ್ರೈನ್ ಓಡಾಟ ನಡುವಿನ ಸಮಯ 25 ನಿಮಿಷಗಳ ಗ್ಯಾಪ್ ಇತ್ತು. ಇದರಿಂದಾಗಿ ಪ್ರಯಾಣಿಕರು ಹೆಚ್ಚು ಕಾಯಬೇಕಿತ್ತು. ಜೊತೆಗೆ ಜನಸಂದಣಿ ಕೂಡ ಉಂಟು ಮಾಡಿತ್ತು. ಸದ್ಯ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊನೆಗೂ ನಾಲ್ಕನೇ ರೈಲು ಇದೇ 15ರಿಂದ ಟ್ರ‍್ಯಾಕ್‌ಗೆ ಇಳಿಯಲಿದೆ.

    ಈ ಬಗ್ಗೆ ಖುದ್ದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಈ ಸಂಬಂಧ ಎಲ್ಲಾ ಸಿದ್ಧತೆಗಳು ಕೂಡ ಆರಂಭವಾಗಿದೆ. ಸದ್ಯ ಈ ಟ್ರೈನ್ ಓಡಾಟ ಆರಂಭವಾದರೆ ಸದ್ಯ 25 ನಿಮಿಷ ಇರುವ ಟ್ರೈನ್‌ಗಳ ನಡುವಿನ ಓಡಾಟದ ಸಮಯ 15 ನಿಮಿಷಕ್ಕೆ ಇಳಿಕೆ ಸಾಧ್ಯತೆ ಇದೆ.

    ಇನ್ನೂ ನಾಲ್ಕನೇ ಟ್ರೈನ್ ಗುಡ್ ನ್ಯೂಸ್ ಜೊತೆಗೆ, ಇದೇ ತಿಂಗಳ ಅಂತ್ಯಕ್ಕೆ ಮತ್ತೊಂದು ಟ್ರೈನ್ ಸೆಟ್ ಕೂಡ ಬೆಂಗಳೂರು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಟ್ರೈನ್ ಪೂರೈಕೆ ಮಾಡುತ್ತಿರುವ ರೈಲು ತಯಾರಿಕಾ ಸಂಸ್ಥೆ ಟಿಟಿಗರ್ ಕೂಡ ಸಪ್ಲೈ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಒಂದೊಮ್ಮೆ ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ಎರಡು ಅಥವಾ ಮೂರನೇ ವಾರಕ್ಕೆ ಐದನೇ ಟ್ರೈನ್ ಕೂಡ ಟ್ರ‍್ಯಾಕ್‌ಗೆ ಇಳಿದು ಸಂಚಾರ ಆರಂಭಿಸುವ ಸಾಧ್ಯತೆ ಇದೆ.ಇದನ್ನೂ ಓದಿ:  ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

  • ಯೆಲ್ಲೋ ಮೆಟ್ರೋ ಸವಾರರಿಗೆ ಗುಡ್‌ನ್ಯೂಸ್ – ಶೀಘ್ರವೇ 15 ನಿಮಿಷಕ್ಕೊಂದು ರೈಲು ಸಂಚಾರ

    ಯೆಲ್ಲೋ ಮೆಟ್ರೋ ಸವಾರರಿಗೆ ಗುಡ್‌ನ್ಯೂಸ್ – ಶೀಘ್ರವೇ 15 ನಿಮಿಷಕ್ಕೊಂದು ರೈಲು ಸಂಚಾರ

    -ಇದೇ ವಾರದಿಂದ ಹೊಸ ರೈಲು ಟೆಸ್ಟಿಂಗ್ ಆರಂಭ ಸಾಧ್ಯತೆ

    ಬೆಂಗಳೂರು: ಯೆಲ್ಲೋ ಮಾರ್ಗ ಮೆಟ್ರೋ (Yellow Metro) ಓಪನ್ ಆಗಿ ಒಂದು ವಾರ ಕಳೆದಿದೆ. ಆದರೆ ಅರ್ಧಗಂಟೆಗೊಂದು ರೈಲು ಸಂಚಾರವಿರುವ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಶೀಘ್ರವೇ ಈ ಸಮಸ್ಯೆಗೆ ಮುಕ್ತಿ ಸಿಗಲಿದ್ದು, 15 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.

    ಕಳೆದೊಂದು ವಾರದ ಹಿಂದಷ್ಟೇ ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಓಪನ್ ಆಗಿದೆ. ಮಾರ್ಗ ಓಪನ್ ಆದರೂ ಪೂರ್ಣ ಪ್ರಮಾಣದ ರೈಲುಗಳು ಬರದಿರುವ ಕಾರಣ ಅರ್ಧ ಗಂಟೆಗೊಮ್ಮೆ ಸಿಗುವ ರೈಲಿನಲ್ಲೇ ಸವಾರರು ಹೈರಾಣಾಗಿ ಓಡಾಟ ಮಾಡುತ್ತಿದ್ದಾರೆ. ಹೀಗಾಗಿ ಈ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಹೆಚ್ಚುವರಿ ರೈಲಿನ ಟೆಸ್ಟಿಂಗ್ ಆರಂಭಿಸಲಿದೆ.ಇದನ್ನೂ ಓದಿ: ಥಮಾ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ

    ಹೌದು. ಸದ್ಯ ಈ ಮಾರ್ಗದಲ್ಲಿ ಮೂರು ಸೆಟ್ ರೈಲು ಮಾತ್ರ ಓಡಾಟ ಮಾಡುತ್ತಿರುವ ಕಾರಣ ಪ್ರತಿ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಇದರಿಂದಲೇ ಈ ಮಾರ್ಗದಲ್ಲಿ ಅತಿ ಹೆಚ್ಚು ಜನಸಂದಣಿ ಉಂಟಾಗುತ್ತಿದೆ. ಸದ್ಯ ನಾಲ್ಕನೇ ರೈಲಿನ ಆರು ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪಿವೆ. ರೈಲನ್ನು ಸ್ಥಿರ ಪರೀಕ್ಷೆಗಳಿಗಾಗಿ ಇನ್ಸ್ಪೆಕ್ಷನ್ ಬೇಲೈನ್‌ಗೆ ಕೊಂಡೊಯ್ಯಲಾಗಿದೆ. ಇದೇ ವಾರ ಡೈನಾಮಿಕ್ ಪರೀಕ್ಷೆಗಾಗಿ ಇದನ್ನು ಹಳದಿ ಮಾರ್ಗದ ಹಳಿಗಳಲ್ಲಿ ಓಡಿಸುವ ಸಾಧ್ಯತೆ ಇದೆ. ಕನಿಷ್ಠ ಎರಡು ವಾರಗಳ ಕಾಲ ಹೊಸ ರೈಲಿನ ಪರೀಕ್ಷೆಗೆ ಸಮಯ ಬೇಕಿದೆ. ಟ್ರ‍್ಯಾಕ್ ಪರೀಕ್ಷೆ ಸಂಪೂರ್ಣವಾಗಿ ಯಶಸ್ಸು ಕಂಡರೆ ಮುಂದಿನ ವಾರಂತ್ಯಕ್ಕೆ ಹೊಸ ರೈಲು ಕೂಡ ಮಾರ್ಗಕ್ಕೆ ಇಳಿಯುವ ಸಾಧ್ಯತೆ ಇದೆ.

    ಈ ಮೂಲಕ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ರೈಲಿಗೆ ಕಾಯುವ ಪ್ರಯಾಣಿಕರ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಸಮಯ ಕಡಿತವಾದರೆ ಪ್ರಯಾಣಿಕರ ಸಂಖ್ಯೆ ಕೂಡ ಏರಿಕೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಮತ್ತಿಬ್ಬರ ಬಂಧನ, ಒಟ್ಟು 9 ಯುವಕರು ಅರೆಸ್ಟ್

  • ಸಾಲು ಸಾಲು ರಜೆ – ಸೋಮವಾರ ಬೆಳಿಗ್ಗೆ 5ರಿಂದ್ಲೇ ಯೆಲ್ಲೋ ಮೆಟ್ರೋ ಆರಂಭ

    ಸಾಲು ಸಾಲು ರಜೆ – ಸೋಮವಾರ ಬೆಳಿಗ್ಗೆ 5ರಿಂದ್ಲೇ ಯೆಲ್ಲೋ ಮೆಟ್ರೋ ಆರಂಭ

    ಬೆಂಗಳೂರು: ಸಾಲು ಸಾಲು ರಜೆಯಿದ್ದ ಹಿನ್ನೆಲೆ ಜನದಟ್ಟಣೆ ಜಾಸ್ತಿಯಾಗುವ ಸಾಧ್ಯತೆಯಿದ್ದು, ಹಳದಿ ಮಾರ್ಗದ ಮೆಟ್ರೋ (Yellow Metro) ಸೋಮವಾರ (ಆ.18) ಬೆಳಿಗ್ಗೆ 5 ಗಂಟೆಯಿಂದಲೇ ಕಾರ್ಯಾರಂಭಿಸಲಿದೆ.ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

    ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಸಾಲು ಸಾಲು ರಜೆಯಿದ್ದ ಹಿನ್ನೆಲೆ ಹೆಚ್ಚಿನವರು ಊರಿಗೆ ತೆರಳಿರುತ್ತಾರೆ. ಈ ಹಿನ್ನೆಲೆ ಸೋಮವಾರ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 6:30ಕ್ಕೆ ಪ್ರಾರಂಭವಾಗುವ ಯೆಲ್ಲೋ ಮೆಟ್ರೋ ಸೋಮವಾರ ಬೆಳಿಗ್ಗೆ 5 ಗಂಟೆಯಿಂದಲೇ ಪ್ರಾರಂಭವಾಗಲಿದೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ.

    ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಈ ಬೆಳಗಿನ ಸೇವೆಯ ಲಾಭವನ್ನು ಪಡೆದುಕೊಳ್ಳಬೇಕು. ಇನ್ನೂ ಈ ಹಿಂದೆ ಘೋಷಿಸಿದಂತೆ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಿಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ. ಹಳದಿ ಮಾರ್ಗದ ಮೆಟ್ರೋ ಮಂಗಳವಾರ (ಆ.19) ಎಂದಿನಂತೆ ಬೆಳಿಗ್ಗೆ 6:30ಕ್ಕೆ ಕಾರ್ಯರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

  • Namma Metro: ಹಳದಿ ಮಾರ್ಗಕ್ಕೆ 3ನೇ ರೈಲು – ಜೂನ್‌ನಲ್ಲಿ ಸಂಚಾರ ಆರಂಭ ಸಾಧ್ಯತೆ

    Namma Metro: ಹಳದಿ ಮಾರ್ಗಕ್ಕೆ 3ನೇ ರೈಲು – ಜೂನ್‌ನಲ್ಲಿ ಸಂಚಾರ ಆರಂಭ ಸಾಧ್ಯತೆ

    – ಪ.ಬಂಗಾಳದ ಟಿಟಾಗಢದಿಂದ ಬೆಂಗಳೂರಿಗೆ ಆಗಮಿಸಿದ ಒಂದು ಸೆಟ್‌ ಬೋಗಿ ರೈಲು

    ಬೆಂಗಳೂರು: ಹಳದಿ ಮಾರ್ಗಕ್ಕೆ (Yellow Metro) 3ನೇ ರೈಲು ಸಿದ್ಧಗೊಂಡಿದ್ದು, ಇದೇ ಜೂನ್‌ನಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ಅಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದ ಟಿಟಾಗಢದಿಂದ ಒಂದು ಸೆಟ್‌ ರೈಲು ಬೋಗಿಗಳು ಬೆಂಗಳೂರಿಗೆ (Bengaluru) ಆಗಮಿಸಿವೆ.

    ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಅಂತಿಮ ಪರೀಕ್ಷೆ ಪೂರ್ಣಗೊಳಿಸಿ ಇನ್ನೊಂದು ತಿಂಗಳಲ್ಲಿ ಮೆಟ್ರೊ ಸಂಚಾರ ಆರಂಭಿಸಲು ಯೋಜಿಸಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮಂಗಳೂರು ಭೇಟಿ ‘ಬಂದ ಪುಟ್ಟ ಹೋದ ಪುಟ್ಟ’ ಆಗದಿರಲಿ: ಕ್ಯಾ.ಬ್ರಿಜೇಶ್ ಚೌಟ

    ಹೆಬ್ಬಗೋಡಿಯಲ್ಲಿರುವ ನಮ್ಮ ಮೆಟ್ರೊ ಡಿಪೊಗೆ ಎಲ್ಲ ಆರು ಕೋಚ್‌ಗಳು ತಲುಪಿವೆ. ಬೃಹತ್‌ ಲಾರಿಯಿಂದ ಇಳಿಸಿ ಜೋಡಣೆ ಮಾಡಲಾಗಿದೆ. ಬೊಮ್ಮಸಂದ್ರ–ಆರ್‌.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಮಾರ್ಗ ಇದಾಗಿದೆ.

    ರೈಲು ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅವಶ್ಯಕತೆ ಇತ್ತು. ಚಾಲಕರಹಿತ ಎಂಜಿನ್‌ ಹೊಂದಿರುವ ಪ್ರೊಟೊಟೈಪ್‌ ಎರಡು ರೈಲುಗಳು ಪೂರೈಕೆಯಾಗಿ, ಮೂರನೇ ರೈಲಿಗಾಗಿ ಕಾಯಲಾಗಿತ್ತು. ಇದೀಗ ಮೂರೂ ರೈಲುಗಳು ಪೂರೈಕೆಯಾಗಿವೆ. ಇದನ್ನೂ ಓದಿ: 327 ಕೋಟಿ ವೆಚ್ಚದ ನವಲಗುಂದ ಬೈಪಾಸ್ ರಸ್ತೆ ಕಾಮಗಾರಿಗೆ ಕೇಂದ್ರ ಅಸ್ತು

    ಪರೀಕ್ಷೆಗಳು ನಡೆದ ಬಳಿಕ ಪ್ರತಿ 30 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ರೈಲುಗಳ ಸಂಖ್ಯೆ ಹೆಚ್ಚಳವಾದಂತೆ ಟ್ರಿಪ್‌ಗಳ ನಡುವಿನ ಅವಧಿ ಕಡಿಮೆಯಾಗಲಿದೆ. ಈ ಮಾರ್ಗಕ್ಕೆ ಒಟ್ಟು 14 ರೈಲುಗಳ ಅಗತ್ಯವಿದೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲು 8 ರೈಲುಗಳು ಇರಬೇಕಿದೆ.