Tag: Yellow Line Metro

  • ಈಚೆಗಷ್ಟೇ ಆರಂಭವಾದ ಯೆಲ್ಲೋ ಲೈನ್‌ ಮೆಟ್ರೋ – ರೈಲು ಮಿಸ್‌ ಮಾಡಿಕೊಂಡ ಪ್ರಯಾಣಿಕನಿಗೆ ಬಿತ್ತು ದಂಡ!

    ಈಚೆಗಷ್ಟೇ ಆರಂಭವಾದ ಯೆಲ್ಲೋ ಲೈನ್‌ ಮೆಟ್ರೋ – ರೈಲು ಮಿಸ್‌ ಮಾಡಿಕೊಂಡ ಪ್ರಯಾಣಿಕನಿಗೆ ಬಿತ್ತು ದಂಡ!

    – ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇರುವಂತಿಲ್ಲ

    ಬೆಂಗಳೂರು: ಆ.10 ರಿಂದ ಆರಂಭವಾಗಿರುವ ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಕ್ಕೆ ಬಂದವನಿಗೆ ದಂಡದ ಅನುಭವವಾಗಿದೆ. ಒಂದು ರೈಲು ಮಿಸ್ ಮಾಡಿಕೊಂಡಿದ್ದಕ್ಕೆ 50 ರೂ. ದಂಡ ಕಟ್ಟಿದ ಘಟನೆ ಸಿಲ್ಕ್ ಬೋರ್ಡ್‌ನಲ್ಲಿ ನಡೆದಿದೆ.

    ಒಂದು ಮೆಟ್ರೋ ಸ್ಟೇಷನ್‌ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾಯುವಂತಿಲ್ಲ. ಈ ನಿಯಮ ಯೆಲ್ಲೋ ಲೈನ್‌ಗೂ ಅನ್ವಯಿಸಿರುವುದು ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಿದೆ. ಯೆಲ್ಲೋ ಲೈನ್‌ ಸಿಲ್ಕ್ ಬೋರ್ಡ್ ಸ್ಟೇಷನ್‌ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿರಿ ಅಂತಾ ಪ್ರಯಾಣಿಕನೊಬ್ಬನಿಗೆ 50 ರೂ. ದಂಡ ಹಾಕಲಾಗಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಶಾಸಕ ಬೈರತಿ ಬಸವರಾಜ್‌ಗೆ ಬಿಗ್‌ ರಿಲೀಫ್‌

    ಸಿಲ್ಕ್ ಬೋರ್ಡ್ ಟು ಆರ್‌ವಿ ರಸ್ತೆಗೆ ಹೋಗುವ ಪ್ಲ್ಯಾನ್‌ನಲ್ಲಿದ್ದ ಪ್ರಯಾಣಿಕ, ಟಿಕೆಟ್ ಪಡೆದು ಒಳಗೆ ಹೋಗಿದ್ದಾನೆ. ರೈಲು ಬರುವವರೆಗೂ ಕಾದಿದ್ದಾನೆ. ಆದರೆ, ಜನ ಹೆಚ್ಚು ಇದ್ದಿದ್ದರಿಂದ ಬಂದ ರೈಲು ಹತ್ತಲು ಸಾಧ್ಯವಾಗಿಲ್ಲ. ಬಳಿಕ ಮುಂದಿನ ರೈಲಿಗೆ ಇಪ್ಪತೈದು ನಿಮಿಷ ಕಾಯಲು ಆಗಲ್ಲ ಅಂತ ವಾಪಸ್ ಬರಲು ತೀರ್ಮಾನಿಸಿದ್ದ. ಆದರೆ, ಹೊರಗೆ ಬರುವಾಗ 20 ನಿಮಿಷಕ್ಕಿಂತ ಹೆಚ್ಚು ಸ್ಟೇಷನ್‌ನಲ್ಲಿದ್ರಿ ಅಂತ 50 ರೂ. ದಂಡ ವಿಧಿಸಲಾಗಿದೆ.

    ಒಂದು ಟ್ರೈನ್ ಮಿಸ್ ಆದರೆ ಇನ್ನು ಇಪ್ಪತೈದು ನಿಮಿಷ ಕಾಯಬೇಕು. ಇಲ್ಲ ಹೊರಗೆ ಹೋಗ್ತೀವಿ ಅಂದ್ರೆ 50 ರೂ. ದಂಡ ಪಾವತಿಸಬೇಕು. ಕೊನೆಗೂ ದಂಡ ಪಾವತಿಸಿ ಪ್ರಯಾಣಿಕ ಹೊರಗೆ ಬಂದಿದ್ದಾನೆ. ಇದನ್ನೂ ಓದಿ: 2047ಕ್ಕೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಹೆಚ್‌ಡಿಕೆ

  • ಭಾನುವಾರ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ – ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ

    ಭಾನುವಾರ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ – ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ

    ಬೆಂಗಳೂರು: ಭಾನುವಾರ ಹಳದಿ ಮೆಟ್ರೋ ಮಾರ್ಗ (Yellow Line Metro) ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ (Narendra Modi) ಸೇರಿದಂತೆ ಗಣ್ಯ ವ್ಯಕ್ತಿಗಳು ಹಾಗೂ ಸಾವಿರಾರು ಜನ ಸೇರುವ ಹಿನ್ನೆಲೆ ಬೆಂಗಳೂರಿನ (Bengaluru) ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

    ಬಹಳ ದಿನಗಳ ಕನಸು, ಬೆಂಗಳೂರಿನ ಯೆಲ್ಲೋ ಮೆಟ್ರೋ ಲೈನ್ ಅನ್ನು ನಾಳೆ (ಆ. 10) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿಯವರನ್ನು ಬೆಂಗಳೂರಿನ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್‌ಎಂಡ್ ಸರ್ಕಲ್, ರಾಗಿಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‌ಗಳ ಬಳಿ ಮತ್ತು ಮೆಟ್ರೋ ಹಳದಿ ಮಾರ್ಗದ ಎಲ್ಲಾ ಮೆಟ್ರೋ ಸ್ಟೇಷನ್‌ಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಹಾಗೂ ಕಾರ್ಯಕರ್ತರು ಸೇರುವ ಹಿನ್ನೆಲೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

    ಬೆಳಗ್ಗೆ 8:30 ರಿಂದ 12ರವರೆಗೆ ಸಂಚಾರ ನಿರ್ಬಂಧ ಮಾರ್ಗಗಳು:
    * ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮೀ ಜಂಕ್ಷನ್‌ನಿಂದ ಮಾರೇನಹಳ್ಳಿ 18ನೇ ಮುಖ್ಯ ರಸ್ತೆಯವರೆಗೆ.
    * ಮಾರೇನಹಳ್ಳಿ ಈಸ್ಟ್ ಎಂಡ್ ಮುಖ್ಯ ರಸ್ತೆ ಜಂಕ್ಷನ್‌ನಿಂದ ಅರವಿಂದ ಜಂಕ್ಷನ್‌ವರೆಗೆ.

    ಬೆಳಗ್ಗೆ 9:30ರಿಂದ ಮಧ್ಯಾಹ್ನ 2:30ರವರೆಗೆ ನಿರ್ಬಂಧಿತ ರಸ್ತೆಗಳು:
    * ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮತ್ತು ಹೊಸೂರು ರಸ್ತೆಯ ಮೂಲಕ ಹೊಸೂರು ಕಡೆಗೆ.
    * ಹೊಸೂರು ಕಡೆಯಿಂದ ಬೆಂಗಳೂರು ನಗರದ ಕಡೆಗೆ.
    * ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಇನ್‌ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆ, ಹೆಚ್.ಪಿ. ಅವೆನ್ಯೂ ರಸ್ತೆಗಳಲ್ಲಿ ನಿರ್ಬಂಧ.

    ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:
    ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮಿ ಜಂಕ್ಷನ್‌ನಿಂದ ಮಾರೇನಹಳ್ಳಿ 18ನೇ ಮುಖ್ಯ ರಸ್ತೆಯ ಮಾರ್ಗವಾಗಿ ಜಯದೇವ ಕಡೆಗೆ ಸಂಚರಿಸುವ ವಾಹನ ಸವಾರರು ಬನಶಂಕರಿ ಬಸ್ ನಿಲ್ದಾಣದ ಕಡೆಯಿಂದ ಸಾರಕ್ಕಿ ಮಾರ್ಕೆಟ್ ರಸ್ತೆ/9ನೇ ಕ್ರಾಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಐ.ಜಿ ಸರ್ಕಲ್, ಆರ್.ವಿ. ಡೆಂಟಲ್ ಜಂಕ್ಷನ್ ಮಾರ್ಗವಾಗಿ 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಮೂಲಕ ಜಯದೇವ ಕಡೆಗೆ ಸಂಚರಿಸಬಹುದಾಗಿರುತ್ತದೆ ಹಾಗೂ ಸಾರಕ್ಕಿ ಜಂಕ್ಷನ್ ಔಟರ್ ರಿಂಗ್ ರಸ್ತೆಯ ಮೂಲಕ ಸಹ ಬನ್ನೇರುಘಟ್ಟ ರಸ್ತೆ ಕಡೆಗೆ ಚಲಿಸಬಹುದು.

    ನಾಲ್ಕನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಕಡೆಗೆ ಸಂಚರಿಸುವ ವಾಹನ ಸವಾರರು ರಾಜಲಕ್ಷ್ಮೀ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಾರಕ್ಕಿ ಮುಖ್ಯರಸ್ತೆಯಲ್ಲಿ ಎಡ ತಿರುವು ಪಡೆದುಕೊಂಡು ಐ.ಜಿ ಸರ್ಕಲ್ ಆರ್.ವಿ. ಡೆಂಟಲ್ ಮಾರ್ಗವಾಗಿ 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಮೂಲಕ ಜಯದೇವ ಕಡೆಗೆ/ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸಬಹುದು.

    ಈಸ್ಟ್ ಎಂಡ್ ಸರ್ಕಲ್ ಕಡೆಯಿಂದ ಬನಶಂಕರಿ ಕಡೆಗೆ ಸಂಚರಿಸುವ ವಾಹನ ಸವಾರರು 29ನೇ ಮುಖ್ಯ ರಸ್ತೆಯಲ್ಲಿ 28ನೇ ಮುಖ್ಯ ರಸ್ತೆಯಲ್ಲಿ ಎಡ ತಿರುವು ಪಡೆದು 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ಜಂಕ್ಷನ್ ಮೂಲಕ ಡಾಲಿಯಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕನಕಪುರ ರಸ್ತೆ ಹಾಗೂ ಬನಶಂಕರಿ ಕಡೆಗೆ ಚಲಿಸಬಹುದು.

    ಹೊಸೂರು ರಸ್ತೆಯಿಂದ ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಹೊಸೂರು ರಸ್ತೆ ಬೊಮ್ಮಸಂದ್ರ ಜಂಕ್ಷನ್‌ನಿಂದ ಜಿಗಣಿ ರಸ್ತೆ ಮುಖಾಂತರ ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್ ರಸ್ತೆಯನ್ನು ತಲುಪಿ ಸಂಚರಿಸುವುದು.

    ನೈಸ್ ರಸ್ತೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಬನ್ನೇರುಘಟ್ಟ ಜಂಕ್ಷನ್‌ನಲ್ಲಿ ಇಳಿದು ಜಿಗಣಿ ರಸ್ತೆ ಮುಖಾಂತರ ಬೊಮ್ಮಸಂದ್ರ ಜಂಕ್ಷನ್ ಹೊಸೂರು ರಸ್ತೆಯನ್ನು ತಲುಪಿ ಸಂಚರಿಸುವುದು.

    ಹೊಸೂರು ರಸ್ತೆಯಿಂದ ಸರ್ಜಾಪುರ ರಸ್ತೆ, ವರ್ತೂರು, ವೈಟ್ ಫೀಲ್ಡ್ ಹೊಸಕೋಟೆ ಕಡೆಗೆ ಸಂಚರಿಸುವ ವಾಹನಗಳು ಚಂದಾಪುರ ಜಂಕ್ಷನ್‌ನಿಂದ ದೊಮ್ಮಸಂದ್ರ ರಸ್ತೆ ಮುಖಾಂತರ ಸರ್ಜಾಪುರ ರಸ್ತೆಯನ್ನು ತಲುಪಿ ಸಂಚರಿಸುವುದು.

    ಹೆಚ್.ಎಸ್.ಆರ್.ಲೇಔಟ್, ಕೋರಮಂಗಲ, ಬೆಳ್ಳಂದೂರು, ವೈಟ್ ಫೀಲ್ಡ್ ಹಾಗೂ ನಗರದ ಕಡೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಸರ್ಜಾಪುರ ರಸ್ತೆ ಮೂಲಕ ಚಂದಾಪುರ ತಲುಪಿ ಹೊಸೂರು ಕಡೆ ಸಂಚರಿಸುವುದು.

    ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದಲ್ಲಿ ಸಂಚರಿಸುವ ವಾಹನಗಳು 2ನೇ ಕ್ರಾಸ್ ರಸ್ತೆ, ಶಿಕಾರಿಪಾಳ್ಯರಸ್ತೆ, ಹುಲಿಮಂಗಲ ರಸ್ತೆ, ಗೊಲ್ಲಹಳ್ಳಿ ರಸ್ತೆಗಳಲ್ಲಿ ಸಂಚರಿಸುವುದು.

  • ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

    ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

    – ಮೆಟ್ರೋ ಸೇವೆ ಕೊಡಲು ಬಿಜೆಪಿಗೆ ಇರುವ ಅರ್ಜೆಂಟ್ ಕಾಂಗ್ರೆಸ್‌ಗೆ ಇಲ್ಲ – ಸಂಸದ

    ಬೆಂಗಳೂರು: ಬೆಂಗಳೂರಿನ ಮೆಟ್ರೋ (Bengaluru Metro) ಕನೆಕ್ಟಿವಿಟಿ ಸುಮಾರು 100 ಕಿ.ಮೀ ತಲುಪಲು ಅದಕ್ಕೆ ನರೇಂದ್ರ ಮೋದಿಯವರ (Narendra Modi) ಸರ್ಕಾರ ಮತ್ತು ಪ್ರಧಾನಿಯವರು ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಕೊಟ್ಟ ಆದ್ಯತೆಯೇ ಕಾರಣ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಮೋದಿಯವರು ಪ್ರಧಾನಿ ಆಗುವುದಕ್ಕೆ ಮೊದಲು ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಇದ್ದದ್ದು ಸುಮಾರು 7.5 ಕಿ.ಮೀ. ಆ.10ರಂದು ಯೆಲ್ಲೋ ಲೈನ್ ಉದ್ಘಾಟನೆಯ ನಂತರ ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಸುಮಾರು 100 ಕಿ.ಮೀ ತಲುಪಲಿದೆ. ದೆಹಲಿ ನಂತರ ಅತಿ ಹೆಚ್ಚು ಕನೆಕ್ಟಿವಿಟಿ ಇರುವ, ವಿಸ್ತರಣೆ ಆಗುತ್ತಿರುವ ಮೆಟ್ರೊ ಇದು ಎಂದು ವಿವರ ನೀಡಿದರು. ಇದನ್ನೂ ಓದಿ: ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ

    ಪ್ರಧಾನಿಯವರನ್ನು ಯಾರು ಕರೆಸಿದರು ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಬೆಂಗಳೂರಿನ ಮೆಟ್ರೋ ಆದಷ್ಟು ಬೇಗ ಉದ್ಘಾಟನೆ ಆಗಬೇಕು, ವಿಳಂಬ ಸಲ್ಲದೆಂದು ಪ್ರಧಾನಿಯವರು ದಿನಾಂಕ ನಿಗದಿಪಡಿಸಿ ಬರುತ್ತಿದ್ದಾರೆ. ಅವರು ಕರ್ನಾಟಕ, ದೆಹಲಿ ಮಾತ್ರವಲ್ಲ ಭಾರತದ ಪ್ರಧಾನಿ. ಅವರ ಆಗಮಿಸುವಿಕೆಯನ್ನು ರಾಜ್ಯ ಸರ್ಕಾರ, ಬಿಜೆಪಿ, ಇಲ್ಲಿನ ಜನತೆ ಉತ್ಸಾಹ, ಹಬ್ಬದಂತೆ ಸ್ವಾಗತಿಸಲು ಸಜ್ಜಾಗಬೇಕಿದೆ. ಅಂತೆಯೇ ಅವರ ಸ್ವಾಗತ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯಿಂದ ಯೆಲ್ಲೋ ಮೆಟ್ರೋ ಲೈನ್ ಲೋಕಾರ್ಪಣೆ; ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ

    ಯೆಲ್ಲೋ ಲೈನಿನ ಮೆಟ್ರೊ ಬಗ್ಗೆ ಸಿಎಂ, ಡಿಸಿಎಂ ತಲೆ ಕೆಡಿಸಿಕೊಂಡಿಲ್ಲ.
    ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಉಪಮುಖ್ಯಮಂತ್ರಿಗಳು ಬುಧವಾರ ಯೆಲ್ಲೋ ಲೈನಿನ ಮೆಟ್ರೋದಲ್ಲಿ ಓಡಾಡಿದರು. ಇದು ಶೇ 50-50ರ ಯೋಜನೆ. ನಮ್ಮದೂ ದೊಡ್ಡ ಕೊಡುಗೆ ಇದೆ ಎಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಯೆಲ್ಲೋ ಲೈನಿನ ಮೆಟ್ರೋ ಬಗ್ಗೆ ಒಂದು ದಿನವೂ ತಲೆ ಕೆಡಿಸಿಕೊಂಡಿಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು. ಆ.10ರಂದು ಪ್ರಧಾನಿಯವರು ಉದ್ಘಾಟಿಸಲು ಆಗಮಿಸುತ್ತಾರೆ ಎಂದ ತಕ್ಷಣ, ಬುಧವಾರ ಪ್ರಚಾರ ಗಿಟ್ಟಿಸಿಕೊಳ್ಳಲು ಟೂರ್ ಹೊಡೆಯಲು ಶುರು ಮಾಡಿದ್ದಾರೆ. ಈ ಮೆಟ್ರೋ ಲೈನಿನ ಕೆಲಸ 2018ರಲ್ಲಿ ಆರಂಭವಾಗಿತ್ತು. 2021ಕ್ಕೆ ಇದು ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದ ಕೆಲವು ಸಮಸ್ಯೆಗಳಾದವು. ಭೂಮಿ ಸ್ವಾಧೀನದಲ್ಲೂ ಕೆಲವು ಸಮಸ್ಯೆಗಳಾದವು. ಆಗ ಕಾಂಗ್ರೆಸ್ಸಿನವರು, ಇನ್ನೊಬ್ಬರಾಗಲಿ ಸಹಾಯಕ್ಕೆ ಬರಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾರವಾರ| ಧಾರಾಕಾರ ಮಳೆಗೆ ಕುಸಿದ 2 ಮನೆಗಳು

    ಪೂರ್ಣಾವಧಿ ಎಂ.ಡಿ ನೇಮಕ ಮಾಡಿರಲಿಲ್ಲ:
    ಕೋವಿಡ್ ಅವಧಿಯಲ್ಲಿ ಯಡಿಯೂರಪ್ಪ ಅವರ ಸರ್ಕಾರವಿತ್ತು. ಕೋವಿಡ್ ಮಧ್ಯದಲ್ಲೂ ಸಿವಿಲ್ ಕೆಲಸಗಳು ನಮ್ಮ ಸರ್ಕಾರದ ಅವಧಿಯಲ್ಲಿ ನಡೆಯಿತು. ಕಾರ್ಮಿಕರನ್ನು ಕರೆಸಲು ಸಮಸ್ಯೆ ಆಗಿದ್ದು, ನಾವು ಆಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದರು. ಹೆಚ್ಚು ಕೆಲಸವೂ ಆಗಿತ್ತು. ಬಳಿಕ ಬೊಮ್ಮಾಯಿಯವರ ಅವಧಿಯಲ್ಲಿ 95% ಸಿವಿಲ್ ಕಾಮಗಾರಿ ನಾವೇ ಪೂರ್ಣಗೊಳಿಸಿದ್ದೆವು. ಇವರ ಸರ್ಕಾರವೇ ಇರಲಿಲ್ಲ; ಇವರ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಒಬ್ಬ ಪೂರ್ಣಾವಧಿ ಎಂ.ಡಿ ನೇಮಕಕ್ಕೆ ಮುಂದಾಗಲಿಲ್ಲ ಎಂದು ದೂರಿದರು. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

    ಕಳೆದ ವರ್ಷ ಜನವರಿಯಲ್ಲಿ 3 ತಿಂಗಳ ಹೋರಾಟದ ಬಳಿಕ ರಾಜ್ಯ ಸರ್ಕಾರವು ಮೊದಲ ಬಾರಿ ಪೂರ್ಣಾವಧಿ ಎಂ.ಡಿಯನ್ನು ಬೆಂಗಳೂರು ಮೆಟ್ರೋಗೆ ನೇಮಕ ಮಾಡಿತು. ಕೋಚ್ ಉತ್ಪಾದನಾ ಪ್ರದೇಶಕ್ಕೆ ನಾನು 3 ಬಾರಿ ಹೋಗಿ ಬಂದಿದ್ದೇನೆ. ಪೂರ್ಣಾವಧಿ ಎಂ.ಡಿ ಇಲ್ಲದ ಕಾರಣ ಎಂ.ಡಿ ಬಂದಿರಲಿಲ್ಲ. ರಾಜ್ಯ ಸರ್ಕಾರ ಬುಧವಾರ ಸಬರ್ಬನ್ ರೈಲಿಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಿಸಿದೆ. ಅವರಿಗೆ ಇನ್ನೊಂದು ಇಲಾಖೆಯ ಪ್ರಭಾರ ಹುದ್ದೆ ಕೊಟ್ಟಿದೆ. ಸಬರ್ಬನ್ ರೈಲಿನ 4 ಕಾರಿಡಾರ್ ಕೆಲಸ ಇವತ್ತು ನಿಂತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ವೀಸಾ ಸಮಸ್ಯೆ ಬಗ್ಗೆಯೂ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮಾತನಾಡಿಲ್ಲ, ಟ್ವೀಟ್ ಮಾಡಿಲ್ಲ. ಕೇಂದ್ರದ ಸಚಿವರ ಜೊತೆಗೆ ಮಾತನಾಡಿಲ್ಲ. ಆರ್‌ಸಿಬಿ ಕ್ರಿಕೆಟ್ ಮ್ಯಾಚ್ ಗೆದ್ದಾಗ ಇವರೇ ಏನೋ ಸಿಕ್ಸರ್, ಫೋರ್ ಹೊಡೆದ ರೀತಿ ರಾಜ್ಯ ಸರ್ಕಾರ ಪೋಸ್ ಕೊಟ್ಟಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

    6 ಬಾರಿ ಕಾಗೆ ಹಾರಿಸಿದರು:
    ಕ್ರಿಕೆಟ್ ಪಂದ್ಯದ ಅಷ್ಟೊಂದು ಕ್ರೆಡಿಟ್ ತೆಗೆದುಕೊಳ್ಳಲು ನಿಂತವರು ಇನ್ನು ಮೆಟ್ರೋದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬರದೇ ಇರುತ್ತಾರಾ ಎಂದು ಕೇಳಿದರು. ಭೂಸ್ವಾಧೀನ, ವೀಸಾ ಸಮಸ್ಯೆಗಳು ಇದ್ದಾಗ ನೀವೆಲ್ಲಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಉದ್ಘಾಟನೆಗೆ ಇನ್ನು 15 ದಿನ, ಇನ್ನು ಒಂದು ತಿಂಗಳು ಎಂದು 6 ಬಾರಿ ಕಾಗೆ ಹಾರಿಸಿದ್ದಾರೆ. ಮೊನ್ನೆ ನಾವೆಲ್ಲರೂ ಯೆಲ್ಲೋ ಲೈನಿನ ಪ್ರದೇಶದ 7 ಶಾಸಕರು, ಇಬ್ಬರು ಸಂಸದರು, ನಮ್ಮ ಜಿಲ್ಲಾಧ್ಯಕ್ಷರು, ನೂರಾರು ಜನ ಸಾರ್ವಜನಿಕರು ಸೇರಿ ಪ್ರಯತ್ನ ಮಾಡಿ ಹೋರಾಟ ಮಾಡಿ ಗಲಾಟೆ ಮಾಡಿದಾಗ ಆಗಸ್ಟ್ 15ರೊಳಗೆ ಮಾಡುತ್ತೇವೆ ಎಂದಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

  • ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL

    ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL

    ಬೆಂಗಳೂರು: ಬಹುನೀರಿಕ್ಷಿತ ಯಲ್ಲೋ ಲೈನ್ ಮೆಟ್ರೋ (Yellow Line Metro) ಸಂಚಾರಕ್ಕೆ ಇದೀಗ ಮತ್ತೆ ಅಡ್ಡಿ ಉಂಟಾಗಿದ್ದು, ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಿಂದಾಗಿ ಉದ್ಘಾಟನೆ ಸದ್ಯಕ್ಕಿಲ್ಲ ಎಂದು ಬಿಎಂಆರ್‌ಸಿಎಲ್ (BMRCL) ಸ್ಪಷ್ಟಪಡಿಸಿದೆ.

    ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ಯಲ್ಲೋ ಮಾರ್ಗದ ಮೆಟ್ರೋ ಇದೇ ಜೂನ್‌ಗೆ ಓಪನ್ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ಇದೀಗ ಮತ್ತೆ ನಿರಾಸೆಯುಂಟಾಗಿದೆ. ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಿಂದಾಗಿ ಇದನ್ನು ಸರಿಪಡಿಸಲು ತಿಂಗಳು ಬೇಕು. ಹೀಗಾಗಿ ಮಾರ್ಗ ಸದ್ಯಕ್ಕೆ ಓಪನ್ ಆಗಲ್ಲ ಎಂದಿದೆ.ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್‌ ಆತಂಕ, ಪಾಕ್‌ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?

    ಹೌದು, ಅನೇಕ ವಿಳಂಬಗಳ ಬಳಿಕ ಹಳದಿ ಮಾರ್ಗದ ಮೆಟ್ರೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲೋಕಾರ್ಪಣೆ ಮಾಡಲು ತಯಾರಿ ನಡೆಸಿತ್ತು. ಮೂರನೇ ರೈಲಿನ ತಪಾಸಣೆ ಕೂಡ ಈಗಾಗಲೇ ಪೂರ್ಣಗೊಂಡಿದೆ. ಮೆಟ್ರೋ ರೋಲಿಂಗ್ ಸ್ಟಾಕ್‌ಗೂ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಅಂತಿಮ ಹಂತದ ಪರಿಶೀಲನೆಗಾಗಿ ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಕೂಡ ಬರಬೇಕಿತ್ತು. ಈ ಮಧ್ಯೆ ಉಂಟಾಗಿರುವ ಸಿಗ್ನಲಿಂಗ್ ಸಮಸ್ಯೆಯಿಂದ ಈ ಬಾರಿ ಮತ್ತೆ ಮಾರ್ಗ ಉದ್ಘಾಟನೆ ಮುಂದೂಡಿಕೆಯಾಗಿದೆ.

    ಹಳದಿ ಮಾರ್ಗದ ಸಿಗ್ನಲಿಂಗ್ ಕಾರ್ಯದ ಗುತ್ತಿಗೆಯನ್ನು ವಹಿಸಿಕೊಂಡಿರುವ ಸೀಮೆನ್ಸ್ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ಸಿಗ್ನಲಿಂಗ್ ವ್ಯವಸ್ಥೆಯ ಪರಿಶೀಲನೆ ನಡೆಸಿತ್ತು. ಆ ಸಂದರ್ಭದಲ್ಲಿ, ಸಾಫ್ಟ್ವೇರ್ ಡೇಟಾಸೆಟ್‌ಗಳಲ್ಲಿ ದೋಷ ಕಂಡುಬಂದಿತ್ತು. ಇದೇ ಕಾರಣದಿಂದ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿಲ್ಲ. ಹಳದಿ ಮಾರ್ಗದ ಮೆಟ್ರೋ ರೈಲು ಚಲನೆಯನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಿಂದ ನಿಯಂತ್ರಿಸಲಾಗುತ್ತದೆ. ಸಣ್ಣ ದೋಷ ಇದ್ದರೂ ವ್ಯವಸ್ಥೆಯ ಸುರಕ್ಷತೆಗೆ ಧಕ್ಕೆಯಾಗುತ್ತದೆ.

    ಈ ಸಮಸ್ಯೆ ಬಗೆಹರಿಸಲು ಸುಮಾರು ಒಂದು ತಿಂಗಳಾದರೂ ಸಮಯ ಬೇಕಾಗಬಹುದು. ಒಂದು ತಿಂಗಳ ಸಮಯಾವಾಕಾಶದ ಬಳಿಕ ಎಲ್ಲವು ಸರಿಯಾದರಷ್ಟೇ ಕೇಂದ್ರ ರೈಲ್ವೆ ಸುರಕ್ಷತಾ ಸಮಿತಿ ಪರಿಶೀಲನೆಗೆ ಆಗಮಿಸಲಿದೆ. ಸಮಿತಿ ಬಂದು ಪರಿಶೀಲಿಸಿ ಎಲ್ಲದಕ್ಕೂ ಒಪ್ಪಿಗೆ ನೀಡಿ, ಮಾರ್ಗ ಉದ್ಘಾಟನೆಗೆ ಸುಮಾರು ಎರಡು ತಿಂಗಳು ಅವಕಾಶ ಬೇಕಾಗಬಹದು. ಹಾಗಾಗಿ ಜುಲೈ ಅಂತ್ಯದ ವೇಳೆ ಮಾರ್ಗ ಮುಕ್ತವಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಯೋಧರಿಂದಲೇ `ಆಪರೇಷನ್ ಸಿಂಧೂರ’ ಲೋಗೋ ವಿನ್ಯಾಸ

  • ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಜುಲೈಯೊಳಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

    ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಜುಲೈಯೊಳಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

    ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋಗಾಗಿ (Yellow Line Metro) ಕಾಯುತ್ತಿರುವವರಿಗಾಗಿ ಇದೀಗ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದ್ದು, ಇದೇ ಜುಲೈಯೊಳಗೆ ಹಳದಿ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ತಿಳಿಸಿದೆ.

    ಯಾವಾಗ ಯೆಲ್ಲೋ ಲೈನ್ ಮೆಟ್ರೋ ಓಪನ್ ಆಗುತ್ತೆ ಎನ್ನುತ್ತಿದ್ದವರಿಗೆ ಇದೀಗ ಬಿಗ್ ಅಪ್ಡೇಟ್ ನೀಡಿದ್ದು, ಕೊನೆಗೂ ಮಾರ್ಗ ಸಂಚಾರ ಮುಕ್ತ ಆಗುವ ಕುರಿತು ಮಾಹಿತಿ ನೀಡಿದೆ.

    ಈಗಾಗಲೇ ಹಲವು ಬಾರಿ ಯೆಲ್ಲೋ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ಹೇಳಿದ್ದ ದಿನಾಂಕದಿಂದ ಮುಂದೂಡಿಕೆಯಾಗಿದ್ದು, ಜನ ರೋಸಿ ಹೋಗಿದ್ದರು. ಈ ಮಧ್ಯೆ ಆದಷ್ಟು ಬೇಗ ಮಾರ್ಗ ಓಪನ್ ಮಾಡಬೇಕು ಎಂದು ಬಿಎಂಆರ್‌ಸಿಎಲ್ ತೀವ್ರಗತಿಯಲ್ಲಿ ಕೆಲಸ ಆರಂಭಿಸಿದೆ. ಈ ಮಾರ್ಗದಲ್ಲಿ ಡ್ರೈವರ್‌ ಲೈಸ್ ಮೆಟ್ರೋಗಳು (Driverless Metro) ಓಡಾಡಲಿದ್ದು. ಟ್ರೈನ್‌ಗಳ ಬರುವಿಕೆ ತಡವಾಗಿದ್ದ ಕಾರಣದಿಂದಲೇ ಪ್ರಯಾಣ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗಲೂ ಕೂಡ ಪೂರ್ಣ ಪ್ರಮಾಣದ ರೈಲುಗಳು ಬಿಎಂಆರ್ಸಿಎಲ್ ಕೈ ಸೇರಿಲ್ಲ. ಸದ್ಯ ತಮ್ಮ ಬಳಿ ಇರುವ ಎರಡು ರೈಲುಗಳಿಗೆ, ಶೀಘ್ರದಲ್ಲೇ ಇನ್ನೆರೆಡು ರೈಲು ಸೇರಿಸಿ ಮಾರ್ಗವನ್ನು ಸಂಚಾರ ಮುಕ್ತ ಮಾಡಲು ತಯಾರಿ ಶುರು ಮಾಡಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಈಗ ಬೇಕಿದೆ ಹನುಮನ ಶ್ರೀರಕ್ಷೆ – ನಿತ್ಯ ಹನುಮಾನ್ ಚಾಲಿಸ ಪಠಿಸುತ್ತಿರೋ ಪ್ರಜ್ವಲ್ ರೇವಣ್ಣ

    ಇದೇ ತಿಂಗಳ ಅಂತ್ಯಕ್ಕೆ ಒಂದು ರೈಲು ಬಿಎಂಆರ್‌ಸಿಎಲ್ ಕೈ ಸೇರಲಿದೆ. ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಸಿಗಲಿದೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ಸಿಗಲಿದೆ. ಬಳಿಕ ಸಂಪೂರ್ಣ ಮಾರ್ಗ ಪರಿಶೀಲನೆ ಮಾಡಿ, ಜುಲೈ ಮೊದಲ ವಾರದಲ್ಲಿ ಈ ನಾಲ್ಕು ರೈಲುಗಳ ಮೂಲಕವೇ ಮಾರ್ಗ ಸಂಚಾರ ಮುಕ್ತ ಮಾಡುವುದು ಬಹುತೇಕ ಖಚಿತವಾಗಿದೆ. ಪ್ರತಿ 30 ನಿಮಿಷಕ್ಕೊಂದು ರೈಲಿನಂತೆ, ಸಂಚಾರ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಒಟ್ಟು ನಿಲ್ದಾಣಗಳ ಪೈಕಿ 3 ಅಥವಾ 5 ನಿಲ್ದಾಣಕ್ಕೊಂದು ಸ್ಟಾಪ್‌ನಂತೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಚರಣೆ ಮಾಡಲು ಪ್ಲ್ಯಾನ್ ಕೂಡ ಮಾಡಲಾಗಿದೆ.

    ಇನ್ನೂ ಮಾರ್ಗ ಓಪನ್ ಸಂಬಂಧ 4ನೇ ಟ್ರೈನ್ ಬರುತ್ತಿದ್ದಂತೆ ಮತ್ತೊಮ್ಮೆ ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳನ್ನ ಮತ್ತೊಮ್ಮೆ ಮಾರ್ಗ ಪರಿಶೀಲನೆಗೆ ಬಿಎಂಆರ್‌ಸಿಎಲ್ ಆಹ್ವಾನಿಸಲಿದೆ. ಅದರಂತೆ ಅಧಿಕಾರಿಗಳು ಭೇಟಿ ನೀಡಿ, ಮತ್ತೆ ಸಿಗ್ನಲಿಂಗ್ ಪರೀಕ್ಷೆ ನಡೆಸಿ ಮಾರ್ಗ ಓಪನ್‌ಗೆ ಗ್ರೀನ್ ಸಿಗ್ನಲ್ ನೀಡಲಿದೆ. ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆದು ಜುಲೈ ಅಂತ್ಯದೊಳಗೆ ಮಾರ್ಗ ಓಪನ್ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ: ವಿನಯ್‌ ಸೋಮಯ್ಯ ಯಾರು ಅನ್ನೋದೆ ಗೊತ್ತಿಲ್ಲ: ಶಾಸಕ ಪೊನ್ನಣ್ಣ