Tag: yellow

  • ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಧರಿಸಬೇಕು!

    ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಧರಿಸಬೇಕು!

    ಬೆಂಗಳೂರು: ಸರ್ಕಾರಿ ನೌಕರರು (Karnataka Government Employees) ಇನ್ನು ಮುಂದೆ ಕೆಂಪು-ಹಳದಿ (Red-Yelow) ಬಣ್ಣದ ಐಡಿ ಕಾರ್ಡ್ ಟ್ಯಾಗ್ ಹಾಕುವಂತೆ ಸರ್ಕಾರ ಆದೇಶಿಸಿದೆ.

    ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಟ್ಯಾಗ್ ಹಾಕಿಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗದ ಅಧೀನ ಕಾರ್ಯದರ್ಶಿ ಸಂದೀಪ್‌ ಬಿ.ಕೆ ಆದೇಶಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿಗಳ ಪರಿಷ್ಕರಣೆ ಆಗಲ್ಲ: ಬಸವರಾಜ ರಾಯರೆಡ್ಡಿ

    GOVT EMPLOYEES
    ಸಾಂದರ್ಭಿಕ ಚಿತ್ರ

    ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಇಟ್ಟು 50 ವರ್ಷಗಳಾದ ಹಿನ್ನಲೆಯಲ್ಲಿ ಸರ್ಕಾರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕರ್ನಾಟಕ ಅಭಿಯಾನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಐಡಿ ಕಾರ್ಡ್ ಟ್ಯಾಗ್ ಅನ್ನು ಕೆಂಪು-ಹಳದಿ ಟ್ಯಾಗ್ ಬಳಸುವಂತೆ ಆದೇಶ ಹೊರಡಿಸಲಾಗಿದೆ.

    ಸರ್ಕಾರದ ಎಲ್ಲಾ ನೌಕರರು, ನಿಗಮ,ಮಂಡಳಿಗಳ, ನಿರ್ದೇಶಾನಲಯ, ಅರೆ ಸರ್ಕಾರಿ ನೌಕರರು ತಮ್ಮ ಇಲಾಖೆ ಐಡಿ ಕಾರ್ಡ್‌ಗೆ ಹೊಂದುವಂತೆ ಟ್ಯಾಗ್ ನೀಡಲು ಸಂಬಂಧಿಸಿದ ಇಲಾಖೆಗಳು ಕ್ರಮವಹಿಸುವಂತೆ ಸೂಚಿಸಲಾಗಿದೆ.

     

  • ಹಳದಿ ಸಮಾರಂಭದಲ್ಲಿ ನಟಿ ಕೃತಿ ಬಳಸಿದ್ದು ಹಳದಿಯಲ್ಲ

    ಹಳದಿ ಸಮಾರಂಭದಲ್ಲಿ ನಟಿ ಕೃತಿ ಬಳಸಿದ್ದು ಹಳದಿಯಲ್ಲ

    ನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಕೃತಿ ಕರಬಂಧ ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡ್ಮೂರು ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ಹಸೆಮಣೆ ಏರಿದ್ದಾರೆ. ಅದರಲ್ಲೂ ಅವರು ಹಳದಿ ಶಾಸ್ತ್ರದಲ್ಲಿ ಹಳದಿಯನ್ನೇ ಬಳಸಿಲ್ಲ ಎನ್ನುವುದು ವಿಶೇಷ.

    ಸಾಮಾನ್ಯವಾಗಿ ಹಳದಿ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ವ ನೀಡಲಾಗುತ್ತದೆ. ಆದರೆ, ಕೃತಿ ಹಳದಿ (Haladi) ಬದಲು ಮಿಲ್ತಾನಿ ಮಿಟ್ಟಿ ಮಣ್ಣು ಬಳಕೆ ಮಾಡಿ, ಶಾಸ್ತ್ರದಂತೆ ಕೊಂಚ ಅರಿಶಿನ ಮಾತ್ರ ಬೆರೆಸಿದ್ದಾರಂತೆ. ಅದಕ್ಕೆ ಅವರದ್ದೇ ಆದ ಕಾರಣವನ್ನೂ ನೀಡಿದ್ದಾರೆ. ಮಿಲ್ತಾನಿ ಮಿಟ್ಟಿಗೆ ಹೊಳಪಿನ ಗುಣವಿದೆ ಎಂದಿದ್ದಾರೆ.

    ಕೃತಿ ಕರಬಂಧ (Kriri Kharbanda) ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ (Pulkit Samrat)  ಜೊತೆ ಮಾರ್ಚ್ 15ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆಯಷ್ಟೇ ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು.

    ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಕೃತಿ ಕಂಗೊಳಿಸಿದ್ರೆ, ಉಸಿರು ಬಣ್ಣದ ಉಡುಗೆಯಲ್ಲಿ ಪುಲ್ಕಿತ್ ಹೈಲೆಟ್ ಆಗಿದ್ದರು. ನವಜೋಡಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಕೋರಿದ್ದರು.

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. mನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿತ್ತು.

     

    ಗ್ರ್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿತ್ತು.

  • ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    – ಇವತ್ತಿನ ಬಣ್ಣ ಹಳದಿ

    ಇವತ್ತಿನಿಂದ ನವರಾತ್ರಿ ಪ್ರಾರಂಭವಾಗುತ್ತಿದೆ. ಈ 9 ದಿನಗಳಲ್ಲಿ ದುರ್ಗಾದೇವಿಯ ವಿವಿಧ ಅವತಾರಗಳನ್ನು ಆಚರಿಸಲಾಗುತ್ತದೆ. ಮೊದಲ ದಿನ ಅಕ್ಟೋಬರ್ 7, ಇಂದು ದುರ್ಗಿಯ ಶೈಲಪುತ್ರಿ ಅವತಾರದ ಪೂಜೆಯಿಂದ ಆರಂಭವಾಗುತ್ತೆ.

    ಶೈಲಪುತ್ರಿ ಅವತಾರ ಏಕೆ ಆಯಿತು?
    ಹಿಂದೂ ಪುರಾಣದ ಪ್ರಕಾರ, ಸತಿ ದೇವಿಯು ಸ್ವಯಂ-ಅಗ್ನಿಕುಂಡಕ್ಕೆ ಅಹುತಿಯಾದ ನಂತರ ಶೈಲಪುತ್ರಿಯಾಗಿ ಜನಿಸಿದಳು. ಶೈಲಪುತ್ರಿಯನ್ನು ಪಾರ್ವತಿ ಎಂದೂ ಕರೆಯುತ್ತಾರೆ. ಹಿಮಾಲಯದ ಮಗಳು. ಶೈಲಪುತ್ರಿ ಎಂದರೆ ಪರ್ವತನ ಮಗಳು. ಶೈಲ್ ಎಂದರೆ ಪರ್ವತ ಮತ್ತು ಪುತ್ರಿ ಎಂದರೆ ಮಗಳು. ಶೈಲಪುತ್ರಿ ದೇವಿಯನ್ನು ಮೊದಲ ದಿನ ಪೂಜಿಸಲಾಗುತ್ತದೆ. ಡ್ರಿಕ್ ಪಂಚಾಂಗದ ಪ್ರಕಾರ, ಶೈಲಪುತ್ರಿ ದೇವಿಯು ಚಂದ್ರನನ್ನು ನಿಯಂತ್ರಿಸುತ್ತಾಳೆ. ಅವಳು ಎಲ್ಲಾ ಅದೃಷ್ಟಗಳನ್ನು ಒದಗಿಸುತ್ತಾಳೆ ಎಂದು ಹೇಳಲಾಗುತ್ತೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

    ಶೈಲಪುತ್ರಿಯು ಒಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುತ್ತಾಳೆ. ಅವಳನ್ನು ಹೇಮಾವತಿ ಎಂದೂ ಕರೆಯುತ್ತಾರೆ. ಶೈಲಪುತ್ರಿ ದುರ್ಗಾದೇವಿಯ ಪ್ರಮುಖ ಅವತಾರವಾದ್ದರಿಂದ ಮೊದಲ ದಿನದಂದು ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಯು ಸತಿ ದೇವಿಯಂತೆ ಶಿವನನ್ನು ಮದುವೆಯಾಗಿದ್ದಾಳೆ.

    ಇಂದು ಪೂಜೆ ಮಾಡಬೇಕಾದರೆ ಹಳದಿ ಬಣ್ಣವನ್ನು ತೊಟ್ಟರೆ ಶ್ರೇಷ್ಠ.

  • ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

    ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

    ಕಲಬುರಗಿ: ಬೇಸಿಗೆ ಕಾಲ ಬಂದ್ರೆ ಸಾಕು ನಾವು ನೀವೆಲ್ಲ ಕೆಂಪ್ಪು ಬಣ್ಣದ ಕಲ್ಲಂಗಡಿಯ ಮೊರೆ ಹೋಗುತ್ತೇವೆ. ಆದರೆ ಕಲಬುರಗಿಯ ಓರ್ವ ಯುವಕ ವಿದೇಶಿ ತಳಿಯ ಹಳದಿ ಕಲ್ಲಂಗಡಿ ಬೆಳೆದು ಸೈ ಎನ್ನಿಸಿಕೊಂಡಿದ್ದಾನೆ.

    ಹೌದು. ಬೇಸಿಗೆ ಕಾವು ಹೆಚ್ಚಾಗ್ತಿದೆ. ಬೆಳಗ್ಗಿನಿಂದಲೇ ಸೂರ್ಯ ಶಿಕಾರಿ ಶುರುವಾಗುತ್ತೆ. ಬೇಸಿಗೆಯಲ್ಲಿ ದಾಹ ನೀಗಿಸೋದ್ರಲ್ಲಿ ಕಲ್ಲಂಗಡಿ ಹಣ್ಣಿಗೆ ಮೊದಲ ಸ್ಥಾನ. ಕಲ್ಲಂಗಡಿ ಅಂದ್ರೆ ಹಸಿರು- ಕೆಂಪು ಇರತ್ತೆ. ಆದರೆ ಹಳದಿ ಬಣ್ಣದ ಕಲ್ಲಂಗಡಿ ಅಂದ್ರೆ ನಂಬಲೇಬೇಕು. ಕಲಬುರಗಿಯ ಯುವಕ ಬೆಳೆದಿರೋ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಫುಲ್ ಫೇಮಸ್ ಆಗಿದೆ.

    ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ನಿವಾಸಿ ಬಸವರಾಜ್ ಪಾಟೀಲ್ ಬಿ.ಕಾಂ ಪದವೀಧರ. ಆದರೂ ಕೃಷಿಯಲ್ಲಿ ಹೆಚ್ಚು ಉತ್ಸಾಹ ಇರೋದ್ರಿಂದ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದಕ್ಕೀಗ ಮಾರ್ಕೆಟ್‍ನಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಹಳದಿ ಕಲ್ಲಂಗಡಿ ಹಣ್ಣು ತುಂಬಾ ರುಚಿಕರವಾಗಿದೆ. ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೋಲ್‍ಸೆಲ್ ಪ್ರತಿ ಕೆ.ಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದ್ರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಕೆಜಿಗೇ 15 ರೂಪಾಯಿಗೆ ಮಾರಾಟವಾಗುತ್ತಿದೆ.

    ಸದ್ಯ ಕಲಬುರಗಿಯ ಈ ವಾಟರ್‍ಮೆಲನ್ ಹೈದಾರಾಬಾದ್, ಮುಂಬೈಯ ಮಾಲ್‍ಗಳಿಗೆ ಮಾರಾಟವಾಗುತ್ತಿದೆ. ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಹೇಗೆ ಸಂಪಾದಿಸಬಹುದು ಎಂಬುದನ್ನ ಬಸವರಾಜ್ ತೋರಿಸಿಕೊಟ್ಟಿದ್ದಾರೆ.

  • ಧಾರಾಕಾರವಾಗಿ ಸುರಿಯಲಿದೆ ಜೇಷ್ಠಮಳೆ- ಉಡುಪಿಯಲ್ಲಿ 4 ದಿನ ಯೆಲ್ಲೋ-ಆರೆಂಜ್ ಅಲರ್ಟ್

    ಧಾರಾಕಾರವಾಗಿ ಸುರಿಯಲಿದೆ ಜೇಷ್ಠಮಳೆ- ಉಡುಪಿಯಲ್ಲಿ 4 ದಿನ ಯೆಲ್ಲೋ-ಆರೆಂಜ್ ಅಲರ್ಟ್

    ಉಡುಪಿ: ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

    ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುತ್ತದೆ ಎಂದು ಮುನ್ಸೂಚನೆ ಕೊಟ್ಟಿತ್ತು. ಎರಡು ದಿನ ಸುಮಾರು ಎಪ್ಪತ್ತು ಮಿಲಿಮೀಟರ್ ಮತ್ತು ಎರಡು ದಿನ 120 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಎರಡು ದಿನವನ್ನು ಯೆಲ್ಲೋ ಎಂದು ಮತ್ತೆರಡು ದಿನವನ್ನು ಆರೆಂಜ್ ಅಲರ್ಟ್ ಎಂದು ಹವಾಮಾನ ಇಲಾಖೆ ಗೊತ್ತು ಮಾಡಿದೆ. ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.

    ಕಡಲ ತೀರ ಪ್ರದೇಶದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ. ಉಡುಪಿಯಲ್ಲಿ ನಾಲ್ಕು ದಿನಗಳ ಕಾಲ ಸುಮಾರು 400 ಮಿಲಿಮೀಟರ್ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ. ನದಿಗಳಲ್ಲಿ ನಾಡದೋಣಿ ಮೀನುಗಾರಿಕೆ ಮಾಡುವವರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಉಲ್ಲೇಖಿಸಲಾಗಿದೆ.

    ಜಿಲ್ಲೆಯ ಎಲ್ಲ ಬಂದರುಗಳಿಗೆ ಮೀನುಗಾರಿಕಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ ಆಗಲಿದ್ದು, ನದಿ ತೀರದ ಜನ ಎಚ್ಚರಿಕೆಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಮುದ್ರ ತೀರಕ್ಕೆ ಹೋಗಬಾರದು. ನದಿ ತೀರಕ್ಕೆ ಸಾರ್ವಜನಿಕರು, ಮಕ್ಕಳು ತೆರಳಬಾರದು ಎಂದು ಖಡಕ್ ಸೂಚನೆ ಕೊಡಲಾಗಿದೆ.

  • ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ – ಕನ್ನಡ ಧ್ವಜ ರೂಪುಗೊಂಡ ಕಥೆ ಓದಿ

    ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ – ಕನ್ನಡ ಧ್ವಜ ರೂಪುಗೊಂಡ ಕಥೆ ಓದಿ

    ಸಂಸ್ಥಾನಗಳು ವಿಲೀನಗೊಂಡ ಬಳಿಕ ಮೈಸೂರು ರಾಜ್ಯವು 1956ರ ನವೆಂಬರ್ 1ರಂದು ಕರ್ನಾಟಕ ರಾಜ್ಯವಾಗಿ ಉದಯವಾದ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರು ಬಂದ ಮೇಲೆ ತನ್ನದೇ ಆದ ಬಾವುಟದ ಅವಶ್ಯಕತೆ ಇದೆ ಎಂದು ಮನಗಂಡು ಕನ್ನಡದ ಹೋರಾಟಗಾರರಾದ ಎಂ.ರಾಮಮೂರ್ತಿ ಅವರು 1965 ರಲ್ಲಿ ಹಳದಿ ಹಾಗೂ ಕೆಂಪು ಬಣ್ಣ ಬಳಸಿ ಬಾವುಟವನ್ನು ಸಿದ್ಧಪಡಿಸಿದ್ದರು.

    ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಶಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ. ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.

    ಅಷ್ಟೇ ಅಲ್ಲದೇ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ, ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ಕೂಡ ನೀಡುತ್ತದೆ. ಕರ್ನಾಟಕದ ಬಾವುಟ ಸಿದ್ಧಗೊಂಡಾಗ ಬಾವುಟದ ಮಧ್ಯೆ ಕರ್ನಾಟಕದ ಭೂಪಟ ಮತ್ತು ಅದರ ನಡುವೆ ಏಳು ಕವಲುಗಳುಳ್ಳ ತೆನೆಯ ಚಿತ್ರವಿತ್ತು. ಇದರಿಂದ ಮುದ್ರಿಸಲು ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಹಳದಿ ಮತ್ತು ಕೆಂಪು ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

    ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿ ಸರ್ವಧರ್ಮದವರು ಆಚರಿಸುತ್ತಾರೆ. ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟದೊಂದಿಗೆ ಅಲಂಕರಿಸಲಾಗಿರುತ್ತವೆ. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ

    ಕರ್ನಾಟಕ ಬಾವುಟ ವಿವಾದ:
    ಮಾಜಿ ಸಿಎಂ ಸಿದ್ದರಾಮಯ್ಯನವರು ಚುನಾವಣೆಯ ಸಮಯದಲ್ಲಿ ಪ್ರತ್ಯೇಕ ರಾಜ್ಯಧ್ವಜ ರೂಪಿಸುವ ಸಂಬಂಧ 2017ರ ಜುಲೈನಲ್ಲಿ 9 ಮಂದಿಯ ಸಮಿತಿಯನ್ನು ರಚಿಸಿದ್ದರು. ಈ ಸಮಿತಿ ರಚಿಸಿದ ಬೆನ್ನಲ್ಲೇ ರಾಜಕೀಯ ಆರೋಪ, ಪ್ರತ್ಯಾರೋಪ ನಡೆದಿತ್ತು. ಕನ್ನಡ ಸಂಘಟನೆಗಳು ಈಗ ನಾವು ಬಳಸುವ ಧ್ವಜವನ್ನೇ ರಾಜ್ಯಧ್ವಜವನ್ನಾಗಿ ಅಂಗೀಕರಿಸಿ ಎಂದು ಬೇಡಿಕೆಯನ್ನು ಇಟ್ಟಿತ್ತು.

    ಕಾನೂನು ಏನು ಹೇಳುತ್ತೆ?
    ಪ್ರಸ್ತುತ ಭಾರತದಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜವಿಲ್ಲ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2012ರಲ್ಲಿ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸಂಸ್ಥೆಗಳ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಬಜೆಟ್ ಮಂಡಿಸುವ ವೇಳೆ ಸುತ್ತೋಲೆ ಹೊರಡಿಸಿದ್ದರು. ಈ ಮಧ್ಯೆ ವಕೀಲ ಪ್ರಕಾಶ್ ಶೆಟ್ಟಿ ಎಂಬುವರು ಕನ್ನಡ ಧ್ವಜವನ್ನು ದುರ್ಬಳಕೆ ಆಗುತ್ತಿರುವ ಬಗ್ಗೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಕನ್ನಡ ನಾಡಿಗೆ ಅಧಿಕೃತವಾದ ಧ್ವಜ ಇಲ್ಲ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿತ್ತು. ಅಷ್ಟೇ ಅಲ್ಲದೇ ಕನ್ನಡ ನಾಡಿಗೆಂದು ಅಧಿಕೃತ ಧ್ವಜ ಇಲ್ಲ. ಖಾಸಗಿಯವರು ಭಾವನಾತ್ಮಕವಾಗಿ ಧ್ವಜವನ್ನು ಹಾರಿಸುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದರು.

    ಕಾನೂನು ಪಂಡಿತರು ಏನು ಹೇಳ್ತಾರೆ?
    ರಾಜ್ಯಕ್ಕೆಂದೇ ಪ್ರತ್ಯೇಕ ಧ್ವಜವನ್ನು ರೂಪಿಸುವ ಬಗ್ಗೆ ಸಂವಿಧಾನದಲ್ಲಿ ವಿಶೇಷವಾಗಿ ಉಲ್ಲೇಖವಾಗಿಲ್ಲ. ಆದರೆ ರಾಷ್ಟ್ರಧ್ವಜಕ್ಕಿಂತ ಕಡಿಮೆ ಎತ್ತರದಲ್ಲಿ ರಾಜ್ಯಧ್ವಜ ಹಾರಿಸಬೇಕಾಗುತ್ತದೆ. ರಾಜ್ಯಧ್ವಜ ಕಡಿಮೆ ಎತ್ತರದಲ್ಲಿ ಹಾರಿಸಿದರೆ ರಾಷ್ಟ್ರಧ್ವಜಕ್ಕೆ ಅವಮಾನ ಆಗುವುದಿಲ್ಲ ಎಂದು ಹೇಳಿದ್ದಾರೆ.

    ಸಿಎಂ ಎಚ್‍ಡಿಕೆ ಹೇಳಿದ್ದು ಏನು?
    ದೇಶದ ಸಂವಿಧಾನದಲ್ಲಿ ಪ್ರತ್ಯೇಕ ರಾಜ್ಯಧ್ವಜ ತಯಾರಿಸಲು ಅವಕಾಶವಿಲ್ಲ. ರಾಷ್ಟ್ರಧ್ವಜವನ್ನು ನಾವು ಬಳಸುತ್ತಿರುವಾಗ ರಾಜ್ಯ ಧ್ವಜದ ಅಗತ್ಯ ಏನಿದೆ? ಸುಮ್ಮನೆ ಸರ್ಕಾರ ಗೊಂದಲ ಸೃಷ್ಟಿಸಲು ಈ ನಡೆ ಕೈಗೊಂಡಿದೆ ಎಂದು ಅಂದು ಕುಮಾರಸ್ವಾಮಿ ಟೀಕಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv